V D Paluskar

ನಾದಲೀಲೆ-9: ಮರೆಯಬಾರದ ಮಹನೀಯರು

ನಾದಲೀಲೆ-9: ಮರೆಯಬಾರದ ಮಹನೀಯರು

ಮೌಖಿಕ ಪರಂಪರೆಯಲ್ಲಿ ನೆಲೆಯಾಗಿದ್ದ ಹಿಂದೂಸ್ಥಾನಿ ಸಂಗೀತಕ್ಕೆ ಶಾಸ್ತ್ರೀಯವಾದ ಸ್ಥಾನಮಾನ ತಂದುಕೊಟ್ಟ ಕೀರ್ತಿ ಭಾತ್ಕಾಂಡೆ ಹಾಗೂ ಪಲುಸ್ಕರ್ ಅವರಿಗೆ ಸಲ್ಲುತ್ತದೆ. ಬಾಯಲ್ಲೇ ಇದ್ದ ಸಂಗೀತವನ್ನು ಬರಹ ರೂಪಕ್ಕಿಳಿಸಲು ಬೇಕಾದ ಸ್ವರಲಿಪಿ(notation) ಪದ್ಧತಿಯನ್ನು ನೀಡುವುದರ ಜೊತೆಗೆ ಸಂಗೀತಕ್ಕೆ ಒಂದು ಕ್ರಮಬದ್ಧವಾದ ಅಭ್ಯಾಸ ಕ್ರಮವನ್ನು, ವ್ಯವಸ್ಥಿತವಾದ ಚೌಕಟ್ಟನ್ನು ಹಾಕಿಕೊಟ್ಟರು. ಈ ಇಬ್ಬರಲ್ಲೂ ಅನೇಕ ಭಿನ್ನಭಿಪ್ರಾಯಗಳು ಇದ್ದರೂ ಇಬ್ಬರ ಉದ್ದೇಶವೂ ಸಂಗೀತವನ್ನು, ಉಸಿರುಗಟ್ಟಿಸುವ ರಾಜಾಶ್ರಯದಿಂದ ಸಮಾಜದ ಮಧ್ಯಕ್ಕೆ ತರುವುದು ಹಾಗೂ ಸಂಗೀತದ ರಾಷ್ಟ್ರೀಕರಣ ಹಾಗೂ ಸಾಂಸ್ಥೀಕರಣವೇ ಆಗಿತ್ತು. ಭಾತ್ಕಾಂಡೆಯವರು ಸಂಗೀತವನ್ನು ಹೆಚ್ಚು ತರ್ಕಾಧಾರಿತವಾಗಿ ಹಾಗೂ […]