ustad amir khan

ನಾದಲೀಲೆ-7: ಸಂಗೀತಕ್ಕೊಬ್ಬನೇ ಅಮೀರ್ ಖಾನ್

ನಾದಲೀಲೆ-7: ಸಂಗೀತಕ್ಕೊಬ್ಬನೇ ಅಮೀರ್ ಖಾನ್

ಉಸ್ತಾದ್ ಅಮೀರ್ ಖಾನ್‍ರು ಮಧುರ ಕಂಠದ ಗಾಯಕ ಮಾತ್ರವಲ್ಲ, ಸಂಶೋಧಕ, ವಾಗ್ಗೇಯಕಾರ ಹಾಗೂ ರಾಗಧಾರಿ ಸಂಗೀತವನ್ನು ಜನಪ್ರಿಯಗೊಳಿಸಿದ ‘ಟ್ರೆಂಡ್ ಸೆಟ್ಟರ್’. ಅಮೀರ್ ಖಾನ್‍ರು 1912 ಆಗಸ್ಟ್ 15ರಂದು ಇಂದೋರ್ ನ ಸಂಗೀತ ಪರಿವಾರದಲ್ಲಿ ಜನಿಸಿದರು. ಅವರ ತಂದೆ ಶಾಹ್ಮೀರ್ ಖಾನ್, ಬೆಂಡಿಬಜಾರ್ ಘರಾಣೆಯ ನುರಿತ ಸಾರಂಗಿ ಹಾಗೂ ಬೀನ್ ವಾದಕರಾಗಿದ್ದರು. ಹಾಗೂ ಇಂದೋರ್ ನ ಹೋಳ್ಕರರ ಆಸ್ಥಾನದ ಕಲಾವಿದರಾಗಿದ್ದರು. ದುರ್ದೈವವಶಾತ್ 9 ವರ್ಷದವರಿದ್ದಾಗಲೇ ತಮ್ಮ ತಾಯಿಯನ್ನು ಕಳೆದುಕೊಂಡ ಅಮೀರ್ ಖಾನರ ಸಂಗೀತಾಭ್ಯಾಸ ಸಾರಂಗಿ ಜೊತೆಗೆ ಆರಂಭವಾಯಿತು. ಆದರೆ ಗಾಯನದಲ್ಲಿನ […]