rewari girls protest

ಹರ್ಯಾಣದ ಹುಡುಗಿಯರು ಓದು ಮುಂದುವರೆಸಲು ಬಯಸುತ್ತಾರೆ

ಹರ್ಯಾಣದ ಹುಡುಗಿಯರು ಓದು ಮುಂದುವರೆಸಲು ಬಯಸುತ್ತಾರೆ

ಶಿಕ್ಷಣವು ಮೂಲಭೂತ ಸೌಕರ್ಯಗಳಿಗಿಂತ ಪ್ರಮುಖವಾದದ್ದೆಂಬುದನ್ನು ಹರ್ಯಾಣದ ಶಾಲಾ ಬಾಲಕಿಯರು ಮನವರಿಕೆ ಮಾಡಿಕೊಡುತ್ತಿದ್ದಾರೆ. ಹರ್ಯಾಣದ ರೆವಾರಿ ಜಿಲ್ಲೆಯ ಗೋತ್ರತಪ್ಪ ದಹೀನಾ ಗ್ರಾಮದ ಸ್ವಾಭಿಮಾನಿ ಶಾಲಾ ಬಾಲಕಿಯರು ಪ್ರಾಂಭಿಸಿದ ಹೋರಾಟ ಇಂದು ಒಂದು ಸಾಂಕ್ರಾಮಿಕದಂತೆ ಇಡೀ ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಹಬ್ಬುತ್ತಿದೆ. ಕಳೆದ ಮೇ ೧೦ರಂದು ಆ ಗ್ರಾಮದ ಸರ್ಕಾರಿ ಶಾಲೆಯ ೮೦ ಹುಡುಗಿಯರು ಅನಿರ್ದಿಷ್ಟ ಮುಷ್ಕರವನ್ನು ಪ್ರಾರಂಭಿಸಿದರು. ತಮ್ಮ ಶಾಲೆಯನ್ನು ಉನ್ನತ ಪ್ರೌಢಶಾಲೆಯನ್ನಾಗಿಸಬೇಕೆಂಬುದೇ ಅವರ ಏಕಮಾತ್ರ ಬೇಡಿಕೆಯಾಗಿತ್ತು. ಏಕೆಂದರೆ ಆ ಗ್ರಾಮದಿಂದ ಮೂರು ಕಿಲೋಮೀಟರ್‌ಗಿಂತ ಹತ್ತಿರದಲ್ಲಿ ಯಾವ್ […]