kola

ಬಿಪಿಎಲ್ ಮಂದಿಗೂ ಕೈಗೆಟುಕುವಂತಹ ಬೂತಗಳು

ಬಿಪಿಎಲ್ ಮಂದಿಗೂ ಕೈಗೆಟುಕುವಂತಹ ಬೂತಗಳು

ನಾನು  ಮಟ್ಟುವಿಗೆ ಕಾಲಿಟ್ಟ ದಿನದಿಂದ ನಮ್ಮೂರ ದೈವಗಳಾದ ಕೊರ್ದಬ್ಬು-ತನಿಮಾನಿಗಾ ಮತ್ತು ಜುಮಾದಿ.-ಬಂಟರ ಜತೆ ನನಗೆ ಸಂಬಂಧ ಇದೆ. ಅವರನ್ನು ದೈವಗಳಿಗಿಂತ ಹೆಚ್ಚಾಗಿ ಮನೆ ಹಿರಿಯರಂತೆ ಗೌರವಿಸುತ್ತಾ  ಬಂದವನು ನಾನು. ತಮ್ಮ ಕಷ್ಟಗಳನ್ನು ಹೇಳಿಕೊಂಡು ಬಂದವರ ಪಾಲಿಗೆ ಈ ಭೂತಗಳು ವೈದ್ಯರಾಗುತ್ತಾರೆ, ನ್ಯಾಯಾಧೀಶರಾಗುತ್ತಾರೆ, ತಂದೆ-ತಾಯಿ,ಅಣ್ಣ-ಅಕ್ಕ ಆಗುತ್ತಾರೆ. ಅದು ನೀಡುವ ಒಂದೆಲೆ ಕರಿಗಂಧದಿಂದ ಎಲ್ಲವೂ ಪರಿಹಾರ. ಸಣ್ಣವನಿದ್ದಾಗ ಈ ಭೂತಗಳು ನೀಡುವ ಭರವಸೆಗಳನ್ನು ನೋಟ್ ಬುಕ್ ನಲ್ಲಿ ಬರೆದಿಡುತ್ತಿದ್ದೆ. ಅವುಗಳಲ್ಲಿ ೯೦ ಭಾಗ ನಿಜವಾಗುತ್ತಿತ್ತು. ಊರು ಬಿಟ್ಟು ಹೋದ ಮಗ ವಾಪಾಸು […]