jenukuruba

ಮೊತ್ತಹಾಡಿಯಲ್ಲಿ ಜನರಾಜ್ಯೋತ್ಸವ : ಜೇನುಕುರುಬರ ಸೋಮಣ್ಣನಿಗೆ ಜನರ ಪುರಸ್ಕಾರ.

ಮೊತ್ತಹಾಡಿಯಲ್ಲಿ ಜನರಾಜ್ಯೋತ್ಸವ : ಜೇನುಕುರುಬರ ಸೋಮಣ್ಣನಿಗೆ ಜನರ ಪುರಸ್ಕಾರ.

ನಾವು ವಾಸ ಮಾಡೋ ಕಡೆ ಒಂದ್ ಜಮ್ಮ ಇರ್ತಿತ್ತು, ಸತ್ತ ಹಿರಿಯರ ಆತ್ಮಗಳು ಅಲ್ಲಿರ್ತಿತ್ತು. ಕಾಡಲ್ಲಿ ಏನೇ ಸಂಗ್ರಹ ಮಾಡಾಕ ಹೋದರ ಸತ್ತವರು ಇಲ್ಲಿ ಇನ್ನು ವಾಸ ಮಾಡತಾರ ಅಂತಾ ನಂಬಿಕಿಯಿಂದ, ಅವ್ರನ್ನ ಪೂಜಿ ಮಾಡತಿದ್ವಿ, ಜತಿಗೆ ಗಂಧದ ಮರನ ಪೂಜಿಸಿ `ದೊಡ್ಡ ದೊಡ್ಡ ಮರ ಹತ್ತತೀವಿ ಅಪ್ಪಿತಪ್ಪಿ ಏನಾದ್ರೂ ಆದ್ರ ಅದೆಲ್ಲಾ ನೀವಾ ನೋಡ್ ಕಾ ಬೇಕು, ಆನೆಗಳ ಬತ್ತಾವ, ಹುಲಿಗಳು ಬತ್ತಾವ ಅವೇನು ಮಾಡದಂಗ ನೀವು ನಮ್ಮನ್ನ ಕಾಯಬೇಕು’ ಅಂತ ಹಿರೇರ ಆತ್ಮಗಳಿಗೆ ಕೇಳಿಕೊಳ್ತಿದ್ವಿ. […]

ಬುಡಕಟ್ಟು ಮೀಮಾಂಸೆ-5 : ಆದಿವಾಸಿಗಳ ವರ್ತಮಾನ ಮತ್ತು ಕಾಡುವ ಪ್ರಶ್ನೆಗಳು

ಬುಡಕಟ್ಟು ಮೀಮಾಂಸೆ-5 : ಆದಿವಾಸಿಗಳ ವರ್ತಮಾನ ಮತ್ತು ಕಾಡುವ ಪ್ರಶ್ನೆಗಳು

ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ ಬುಡಕಟ್ಟುಗಳ ಒಟ್ಟು ಜನಸಂಖ್ಯೆ 42,48,987. ಇದರಲ್ಲಿ ಆದಿಮ ಬುಡಕಟ್ಟುಗಳೆಂದು ಪರಿಗಣಿತವಾದ ಜೇನುಕುರುಬ ಮತ್ತು ಕೊರಗರ ಜನಸಂಖ್ಯೆ 50,870. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಬುಡಕಟ್ಟುಗಳ ಜನಸಂಖ್ಯೆ 6.95ರಷ್ಟಿದೆ. (2001ರ ಜನಸಂಖ್ಯೆಯಲ್ಲಿ ಒಟ್ಟು ರಾಜ್ಯದ ಜನಸಂಖ್ಯೆಯಲ್ಲಿ 6.6% ಬುಡಕಟ್ಟುಗಳ ಜನಸಂಖ್ಯೆ ದಾಖಲಾಗಿತ್ತು) ಕಳೆದ ಗಣತಿಗೆ ಹೋಲಿಸಿದರೆ ಆದಿವಾಸಿಗಳ ಜನಸಂಖ್ಯೆಯಲ್ಲಿ ಬೆಳವಣಿಗಿಯಾದೆ. ರಾಯಚೂರಿನಲ್ಲಿ ಬುಡಕಟ್ಟುಗಳ ಶೇ 19.03% ಗರಿಷ್ಟ ಜನಸಂಖ್ಯೆ ದಾಖಲಾದರೆ, ಮಂಡ್ಯದಲ್ಲಿ ಅತ್ಯಂತ ಕನಿಷ್ಠ 1.24%ರಷ್ಟು ಬುಡಕಟ್ಟು ಜನಸಂಖ್ಯೆ ದಾಖಲಾಗಿದೆ. ಬುಡಕಟ್ಟುಗಳ ಜನಸಂಖ್ಯೆಯಲ್ಲಿ 1000 […]