classicalmusic

ನಾದಲೀಲೆ-8: ರಾಗದಾಚೆಗಿನ ಭಾವಯಾನಿ ಕಿಶೋರಿ ಅಮೋನಕರ್

ನಾದಲೀಲೆ-8: ರಾಗದಾಚೆಗಿನ ಭಾವಯಾನಿ ಕಿಶೋರಿ ಅಮೋನಕರ್

ಹಿಂದೂಸ್ಥಾನಿ ಸಂಗೀತದ ಭಾವಸೌಂದರ್ಯ ದರ್ಶನಕ್ಕಿರುವ ಇನ್ನೊಂದು ಹೆಸರೇ ಗಾನ ಸರಸ್ವತಿ ಕಿಶೋರಿ ಅಮೋನಕರ್. ಇವರು ಭಾರತೀಯ ಅಭಿಜಾತ ಸಂಗೀತಕ್ಕೆ ಒಂದು ಹೊಸ ವಿಶ್ವದ ದರ್ಶನ ಮಾಡಿಸಿದವರು, ಸಂಗೀತವನ್ನು ಆನಂದದ ಯಾತ್ರೆಯನ್ನಾಗಿಸಿದವರು. ಕಿಶೋರಿ ಅಮೋನಕರ್ ಅವರ ಬಗ್ಗೆ ಮಾತಾಡದೆ, ಯಾವ ಸಂಗೀತದ ಚರ್ಚೆಯೂ ಪೂರ್ಣವಾಗಲು ಸಾಧ್ಯವಿಲ್ಲ. ಅವರು ಸ್ವಾತಂತ್ರ್ಯೋತ್ತರ ಆಧುನಿಕ ಕಾಲದ ಚಿಂತನ ಶೀಲ, ಸಂಶೋಧನಾ ಶೀಲರಾದ ಅಪ್ರತಿಮ ಗಾಯಕಿ. ಇವರು ನವ ಯುಗದ ಭಾವ ಸೌಂದರ್ಯವಾದವನ್ನು (romanticism)ಸಂಗೀತದಲ್ಲಿ ಬೆಳೆಸಿದವರು. ಪಂ.ಓಂಕಾರನಾಥ ಠಾಕೂರರು ಈ ವಿಚಾರವನ್ನು ಹೊಂದಿದ್ದರೂ ಅದನ್ನು […]