burkha

ಬುರ್ಖಾ, ಕುಂಕುಮ, ಮಾಂಗಲ್ಯ ಮತ್ತು ಸ್ತ್ರೀ ಸಂವೇದನೆ

ಬುರ್ಖಾ, ಕುಂಕುಮ, ಮಾಂಗಲ್ಯ ಮತ್ತು ಸ್ತ್ರೀ ಸಂವೇದನೆ

  ಭಾರತದ ಸಾಮಾಜಿಕ ಸಂಕಥನದಲ್ಲಿ ಧರ್ಮ ಮತ್ತು ಸಂಸ್ಕøತಿ ಎರಡೂ ವಿದ್ಯಮಾನಗಳು ಪರಸ್ಪರ ಪೂರಕವಾಗಿಯೇ ಬೆಳೆದುಬಂದಿದೆ. ಭಾರತೀಯ ಸಂಸ್ಕøತಿ ಎಂದ ಕೂಡಲೇ ಸನಾತನ ಹಿಂದೂ ಧರ್ಮದ ನೆರಳು ಆವರಿಸುತ್ತದೆ. ಜನಪದ ಸಂಸ್ಕøತಿ ಎಂದ ಕೂಡಲೇ ಪ್ರಾಚೀನ ಭಾರತದ ಸಾಂಸ್ಕøತಿಕ ಮತ್ತು ಧಾರ್ಮಿಕ ಪರಂಪರೆ ಮುಖಾಮುಖಿಯಾಗುತ್ತದೆ. ಹಾಗಾಗಿ ಸಂಸ್ಕøತಿಯ ಸಂಕಥನಗಳೆಲ್ಲವೂ ಬಹುಪಾಲು ಧರ್ಮದ ಚೌಕಟ್ಟಿನಲ್ಲೇ ನಡೆಯುತ್ತಿರುವುದನ್ನು ಕಾಣಬಹುದು. ಒಂದು ಜನಸಮುದಾಯದ ಅಥವಾ ಒಂದು ಭೂಪ್ರದೇಶದಲ್ಲಿ ವಾಸಿಸುವ ಜನಸಾಮಾನ್ಯರ ಜೀವನ ಶೈಲಿಯನ್ನು ಬಿಂಬಿಸುವ ಸಾಂಸ್ಕøತಿಕ ನೆಲೆಗಳಿಗೂ, ಈ ಜನಸಮುದಾಯಗಳನ್ನು ಹಲವು […]