basavanna

ತೆಲುಗು ಸಾಹಿತ್ಯದಲ್ಲಿ ಬಸವಣ್ಣ

ತೆಲುಗು ಸಾಹಿತ್ಯದಲ್ಲಿ ಬಸವಣ್ಣ

ಭರತಖಂಡದಲ್ಲಿ ಶೈವವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವ್ಯಾಪಿಸಿದೆ. ಅದರಲ್ಲಿಯೂ ಆಂಧ್ರಪ್ರದೇಶವು ಶೈವಧರ್ಮದ ನೆಲೆವೀಡಾಗಿದೆ. ಆಂಧ್ರಪ್ರದೇಶವನ್ನು ‘ತ್ರಿಲಿಂಗದೇಶ’ ಎಂಬ ಅಭಿದಾನದಿಂದ ಕರೆಯಲಾಗುತ್ತದೆ. “ತ್ರಿಲಿಂಗ ಎಂಬ ಶಬ್ದದಿಂದಲೇ ‘ತೆಲುಗು’ ಪದ ಬಂದಿದೆ ಎಂಬುದು ನಿಸ್ಸಂಶಯ”1 ಎಂದು ಆಚಾರ್ಯ ಶ್ರೀ ಗಂಟಿ ಸೋಮಯಾಜುಲು ಅಭಿಪ್ರಾಯಪಟ್ಟಿದ್ದಾರೆ. ದ್ರಾಕ್ಷಾರಾಮ, ಶ್ರೀಶೈಲ ಮತ್ತು ಶ್ರೀ ಕಾಳಹಸ್ತಿ ಈ ಮೂರು ಶೈವಕ್ಷೇತ್ರಗಳ ನಡುವಿನ ಪ್ರದೇಶವೇ ತ್ರಿಲಿಂಗದೇಶ ಎಂದು ಅಪ್ಪಕವಿಯೂ ಹೇಳಿದ್ದಾನೆ. ಅಪ್ಪಕವಿಗಿಂತ ಮುಂಚೆ ವಿದ್ಯಾನಾಥನೆಂಬವನು ಅದೇ ಅಂಶವನ್ನು ತನ್ನ ‘ಪ್ರತಾಪರುದ್ರೀಯ’ದಲ್ಲಿ ಸೂಚಿಸಿದ್ದಾನೆ. ಇದರ ಸತ್ಯಾಸತ್ಯತೆಯೇನಿದ್ದರೂ ಈ ಆಂಧ್ರಪ್ರದೇಶವು ತ್ರಿಲಿಂಗ […]