ಯುವ-ವಿದ್ಯಾರ್ಥಿ ಚಿಂತನ

ಯುವ-ವಿದ್ಯಾರ್ಥಿ ಚಿಂತನ

ಪುಸ್ತಕ ಪರಿಚಯ: ಜೀವಪಲ್ಲಟಗಳ ಆತ್ಮಕಥನ

ಪುಸ್ತಕ ಪರಿಚಯ: ಜೀವಪಲ್ಲಟಗಳ ಆತ್ಮಕಥನ

ಸಮಾಜ ಹಾಗು ಪರಿಸರದ ಕುರಿತಾಗಿ ಅನೇಕ ವಾದ-ವಿವಾದಗಳ ಇಂದಿನ ಸಂದರ್ಬದಲ್ಲಿ ಟಿ. ಎಸ್. ವಿವೇಕಾನಂದರವರು ಮಂಡಿಸುವ ಹಾಗು ವಿಶ್ಲೇಶಿಸುವ ವಿಧಾನ ತುಂಬಾ ವಾಸ್ತವವಾದದ್ದು. ಬಹುತೇಕರ ಬರವಣಿಗೆಗಳಲ್ಲಿ ಕಾಣುವ ತುಡಿತ ಹಂಬಲಗಳು ಇವರಲ್ಲಿ ಅನುಭವದ ಮೂಲಕ ಬಂದಿರುವುದು ಮತ್ತು ಅದನ್ನು ನೋಡುವ ಕ್ರಮದಲ್ಲಿ ಇವರಿಗಿರುವ ಒಳನೋಟ ಈ ಬರಹಗಳಲ್ಲಿರುವುದನ್ನು ಕಾಣಬಹುದು. ತೀರಾ ಸರಳಗೊಂಡಿರುವ ಹಲವಾರು ಪ್ರಶ್ನೆಗಳು ಹಾಗು ಸಾಮಾನ್ಯೀಕರಣಗೊಂಡಿರುವ ಹಲವಾರು ಪರಿಕಲ್ಪನೆಗಳು ಉದಾಹರಣೆಗೆ-ಪರಿಸರವಾದ, ಚಳುವಳಿ, ನಿರುದ್ಯೋಗ, ಪರಿಸರಮಾಲಿನ್ಯ ಇತ್ಯಾದಿಗಳು ಇಂದಿನ ವ್ಯವಸ್ಥೆ ಎಷ್ಟು ಅಶಕ್ತಗೊಂಡಿದೆಯೋ…. ಇದಕ್ಕೆ ಕಾರಣ ಅದರ […]

ನಮ್ಮ ಹಳ್ಳಿಯನ್ನು ಉಳಿಸಿಕೊಡಿ

ನಮ್ಮ ಹಳ್ಳಿಯನ್ನು ಉಳಿಸಿಕೊಡಿ

ಗಣಿಗಾರಿಕೆ ಕೈಗಾರಿಕೆಗೆ ಬದಲಾಗಿ ದೊಡ್ಡ ಅಕ್ರಮ ದಂಧೆಯಾಗಿದೆ. ಇಂತಹ ಗಣಿಕಾರಿಕೆಯು ವಿವಿಧ ರೀತಿಯ ಉತ್ಪನ್ನಗಳನ್ನು ನಿಕ್ಷೇಪಗಳಿಂದ ಹೊರತೆಗೆಯಲಾಗುತ್ತದೆ. ಅದರಲ್ಲಿ ಮರಳು,  ಕಲ್ಲಿದ್ದಲು ಮುಂತಾದವುಗಳನ್ನು ಗುರ್ತಿಸಬಹುದು. ಇದರಲ್ಲಿ ಕಲ್ಲಿನ ಗಣಿಕಾರಿಕೆಯು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಪ್ರತಿಯೊಂದು ಹಳ್ಳಿಗಳಲ್ಲಿಯೂ ಸಾಮಾನ್ಯವಾಗಿ ಹಲವು ನಿಕ್ಷೇಪಗಳು ಇರುತ್ತವೆ. ಆದರೆ ಹಲವು ಹಳ್ಳಿಗಳಲ್ಲಿ ಈ ಕಲ್ಲಿನ ಗಣಿಗಾರಿಕೆಯೇ ಹೆಚ್ಚು. ಅಂತಹ ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವ ಆನೇಕಲ್ ನಿಂದ 7 ಕಿ. ಮೀ. ದೂರ ಇರುವ ತಮ್ಮನಾಯಕನ ಹಳ್ಳಿ ಸಹ ಒಂದು. ಇಲ್ಲಿ ಹಲವು […]

ಕನಸುಗಳ ಮಾರಾಟಗಾರ ಪಂಪಾಪತಿ

ಕನಸುಗಳ ಮಾರಾಟಗಾರ ಪಂಪಾಪತಿ

ಹಳ್ಳಿಯಲ್ಲಿರುವ ಮನೆಗೆ ಹೋಗಲು ಬಸ್ಸಿನ ಸೌಲಭ್ಯವಿಲ್ಲ. ಅಡ್ಡರೋಡಿನಿಂದ ಸುಮಾರು 4 ಮೈಲು ನಡೆದುಕೊಂಡೇ ಹೋಗಬೇಕು, ತಲೆ ಮೇಲೆ ಸೂರ್ಯನ ಅಧಿಕ ಶಕ್ತಿ, ಏನು ಮಾಡುವುದು? ಯಾವುದಾದರು ವಾಹನ ಬಂದರೆ ಸಹಾಯ ಮಾಡಬಹುದೆಂಬ ಯೋಚನೆಯಿಂದ ಹೆಣ ಭಾರದ ಬ್ಯಾಗನ್ನು ನೇತುಹಾಕಿಕೊಂಡು ಮುನ್ನಡೆದೆ. ಸುಸ್ತಾಗಿ ನೀರು ಕುಡಿಯಲು ನಾಗಪ್ಪನ ಕಟ್ಟೆಯ ಬಳಿ ಬಂದಾಗ ಅಲ್ಲೊಬ್ಬ ವ್ಯಕ್ತಿ ಕುವೆಂಪುರವರ ಕಾನೂರು ಹೆಗ್ಗಿಡಿತಿ ಕಾದಂಬರಿಯನ್ನು ಓದುತ್ತಾ ಮಲಗಿದ್ದ. ಆಶ್ಚರ್ಯವಾಯಿತು. ಒಬ್ಬ ಬಯಲು ಸೀಮೆಯ ವ್ಯಕ್ತಿ ಜನಸಂಚಾರವಿಲ್ಲದ ಸ್ಥಳದಲ್ಲಿ ಹರಕು ಬಟ್ಟೆ ಹಾಕಿಕೊಂಡು ಕಾನೂರು […]

ಸರ್ಕಾರಿ ಶಾಲೆಗಳು: ಅಪಕಲ್ಪನೆ ಮತ್ತು ನಿಜನೋಟ

ಸರ್ಕಾರಿ ಶಾಲೆಗಳು: ಅಪಕಲ್ಪನೆ ಮತ್ತು ನಿಜನೋಟ

ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಕುರಿತಾಗಿ ಇಂದು ಸಮಾಜದಲ್ಲಿ ಹಲವಾರು ಅಭಿಪ್ರಾಯಗಳಿವೆ. ಶಿಕ್ಷಣ ತಜ್ಞರ ಅಭಿಪ್ರಾಯಗಳು ಸರ್ಕಾರಿ ಶಾಲೆಗಳ ಪರವಾಗಿದ್ದರೆ, ಪೋಷಕರ ಅಭಿಪ್ರಾಯ ಖಾಸಗಿ ಶಾಲೆಗಳ ಪರವಾಗಿದೆ. ಖಾಸಗಿ ಶಾಲೆಗಳು ದಿನೇ ದಿನೇ ಹೆಚ್ಚುತ್ತಿವೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ನೀಡುತ್ತಿರುವ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ನಡುವಿನ ವ್ಯತ್ಯಾಸವನ್ನು ಗಮನಿಸಬೇಕು. ಅಂಕಗಳಿಸುವುದನ್ನೇ ಮುಖ್ಯವೆಂದು ಹೇಳಿಕೊಡುವ ಖಾಸಗಿ ಶಾಲೆಗಳು ಹಾಗೂ ಕಡಿಮೆ ಫಲಿತಾಂಶ ಕೊಡುತ್ತಿರುವ ಸರ್ಕಾರಿ ಶಾಲೆಗಳ ವ್ಯವಸ್ಥೆಯ ಬಗೆಗೆ ಗಮನಹರಿಸಬೇಕು. ಇದನ್ನು ಗಮನಿಸಿದರೆ […]

ಸ್ಮಾರ್ಟ್‍ಫೋನ್‍ಗಳ ಜಗತ್ತು

ಸ್ಮಾರ್ಟ್‍ಫೋನ್‍ಗಳ ಜಗತ್ತು

ಕೆಲವು ತಿಂಗಳ ಹಿಂದೆ ಭಾರತದಲ್ಲಿನ ಒಟ್ಟು ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ 97 ಕೋಟಿ ದಾಟಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರೆಟಿ ಆಫ್ ಇಂಡಿಯಾ ತನ್ನ ವಾರ್ಷಿಕ ವರದಿಯಲ್ಲಿ ಪ್ರಕಟಿಸಿತು. ಇದರ ಜೊತೆಗೆ ಕಳೆದ ವರ್ಷ 28 ಕೋಟಿ ಇದ್ದ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಈ ವರ್ಷದ ಅಂತ್ಯಕ್ಕೆ ಸುಮಾರು 35 ಕೋಟಿ ತಲುಪಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆ 50 ಕೋಟಿಗೂ ಅಧಿಕವಾಗಲಿದೆ ಎಂದು ಕೆಲವು ಖಾಸಗೀ ವಲಯದ ಸಂಶೋಧನಾ ವರದಿಗಳು ತಿಳಿಸಿವೆ. ಇಷ್ಟು […]

ಹೊಸ ದಾರಿ ಹೊಸ ನಡೆ

ಸ್ವಾತಂತ್ರ್ಯ ಬಂದು 68 ವರ್ಷಗಳು ಕಳೆದಿವೆ. ಸಾವಿರ ದಿನಗಳ ಒಡೆಯರು ಆಗಿದ್ದೇವೆ. ನಾವು ಅತ್ಯಾಧುನಿಕ ನಾಗರಿಕ ಲೋಕದಲ್ಲಿ ಜೀವಿಸುತ್ತಿದ್ದೇವೆ. ನಮಗೀಗ ಮುಖ್ಯವಾಗಿ ಬೇಕಾದುದು ನಮ್ಮ ವೈಯಕ್ತಿಕ ಸಂತಸ. ವರ್ತಮಾನ ಬದುಕನ್ನ ಆಲೋಚನೆಗೀಡು ಮಾಡದೆ ಮುಪ್ಪಾಗಿಸುವತ್ತ ಕೊಂಡೊಯ್ದರೆ , ಭವಿಷ್ಯತ್ತಿನ ನೋಟ ಕನಸುಗಳಾಗಿ ಕಾಡುತ್ತವೆ. ಕೆಲವೊಮ್ಮೆ ಗುರಿಗಳು ಬದಲಾಗಿ ಹೋಗುತ್ತವೆ ,ಆದರೆ ಆಸೆಗಳು ಬದಲಾಗಲು ಸಾಧ್ಯವಿಲ್ಲ . ಅದು ಇಂದಿಗೆ ರಕ್ತದಲ್ಲಿ ಬೆರೆತಂತಾಗಿದೆ. ನಾವಿಂದು ನಗರೀಕರಣ, ಔದ್ಯೋಗಿಕರಣದಿಂದಾಗಿ ನಮ್ಮ ಸ್ವವಿವೇಚನೆ, ವಿವೇಕವನ್ನು ಕಳೆದುಕೊಂಡಿದ್ದೇವೆ ಎನ್ನಿಸುತ್ತದೆ. ಹಗಲು ರಾತ್ರಿಗಳನ್ನು ಸಲೀಸಾಗಿ […]

ದೇವರ ಅಂತ್ಯ ಸಂಸ್ಕಾರ

ಕಳೆದ ಆಗಸ್ಟ್ ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವ ಕ್ಯಾಂಪೇನ್ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಆಗ ಒಂದು ಘಟನೆ ನಡೆಯಿತು. ಅದರ ಬಗೆಗೆ ಇಲ್ಲಿ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುವೆ. ನಮ್ಮ ತಂಡ ಕ್ಯಾಂಪೇನ್ ಗೆ ಹೊರಟಿದ್ದು ಮಂಡ್ಯ ಜಿಲ್ಲೆಯ ಕೀಲಾರದಲ್ಲಿ ಗ್ರಾಮದಲ್ಲಿ ನಡೆದ `ದೇವರ ಅಂತ್ಯ ಸಂಸ್ಕಾರಕ್ಕೆ’ ಹೊರಟಂತೆ ಇತ್ತು ನಮ್ಮ ಸವಾರಿ. ದೇವರ ಚಿತೆಯ ಮೇಲೆ ಚಿಂತೆಯಿಲ್ಲದೆ ಮಲಗಿರಲು ಕರುಣಾಕ್ರಂದನ ಮುಗಿಲು ಮುಟ್ಟಿತ್ತು. ನೆರೆದ ನೂರಾರು ದುಃಖ ತಪ್ಪರಲ್ಲಿ ನಾನು ಕೇವಲ ಪ್ರೇಕ್ಷಕನಾಗಿದ್ದೆ. “ಅಯ್ಯಾ ಹಸಿವು, […]

ಚಿಕ್ಕಕತೆ : ಅಂತಸ್ತಿನ ಮಡಿಲಲ್ಲಿ ಅರಳಿದ ಹೂವು

ವಾಚ್‍ಮನ್ ರಂಗಣ್ಣ. ಹದಿನಾರು ಅಂತಸ್ತಿನ ಎತ್ತರದ ಬಂಗಲೆ. ಅದರ ಹಿಂದೆ ಒಂದು ಚಿಕ್ಕ ಜೋಪಡಿ. ಅದೇ ಅವನ ಮನೆ. ಸುತ್ತಲು ಚೈನಾದ `ದಿ ಗ್ರೇಟ್ ವಾಲ್’ ಅನ್ನು ನಾಚಿಸುವಂತೆ ನಿಂತಿರುವ ಗೋಡೆಗಳು. ಇವನ ಹೆಂಡತಿ ರಂಗಮ್ಮ. ಇವರಿಬ್ಬರು ಹೆತ್ತು ಸಾಕಿದ ಮಗನೊಬ್ಬನೆ. ಅವನೇ ರಾಜು. ರಂಗಣ್ಣ ಈ ಬಿಲ್ಡಿಂಗ್ ಕಟ್ಟುವಾಗ ಅಲ್ಲೇ ಗಾರೇ ಕೆಲಸಕ್ಕೆ ಇದ್ದ. ಇವನು ನಂತರ ಬಿಲ್ಡಿಂಗ್ ವಾರಸುದಾರರ ಬಳಿ ವಾಮನ್ ಆಗಿ ಕೆಲಸ ಗಿಟ್ಟಿಸಿದ. ತಾನು ತನ್ನ ಊರಿನಿಂದ ಬರುವಾಗ ಪ್ರೀತಿಸಿ ಮದುವೆಯಾದ […]