ಯುವ-ವಿದ್ಯಾರ್ಥಿ ಚಿಂತನ

ಯುವ-ವಿದ್ಯಾರ್ಥಿ ಚಿಂತನ

ಬಂಧನ

ಬಂಧನ

-ಶ್ವೇತಾ ಎನ್, ಕನ್ನಡ ಎಂ. ಎ . ವಿದ್ಯಾರ್ಥಿ , ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ ರಾಮಚಂದ್ರರಾಯರು ಮತ್ತು ವಿಶಾಲಕ್ಷಮ್ಮನವರ ಒಬ್ಬಳೇ ಮಗಳಾದ ಶಾಂತಿಯ ಮದುವೆ ಪಕ್ಕದೂರಿನ ಜಾನಕಮ್ಮನವರ ಮಗನಾದ ವಿಷ್ಣುವಿನೊಂದಿಗೆ ಅದ್ದೂರಿಯಾಗಿ ಏರ್ಪಾಟಾಗಿದ್ದು, ಮದುವೆಯ ಸಂಭ್ರಮದಲ್ಲಿ ಇಡೀ ಮನೆಯೇ ತುಂಬಿ ತುಳುಕುತ್ತಿತ್ತು. ಒಂದೆಡೆ ವಿಷಾದದ ಛಾಯೆಯೂ ಮೂಡಿತ್ತು. ‘ಏ ಶಾಂತಿ ಇನ್ಮುಂದೆ ನೀನು ಮೊದಲಿನ ಹಾಗೆ ಇರೋಕಾಗಲ್ವೆ’ ‘ಹೌದು ಕಣೆ ನಾನು ಸುಧಾ ರಮೇಶ ಶಶಿ ಜಗ್ಗು ಸಂಜಯ್ ಎಲ್ರೂ ನಿನ್ನ ತುಂಬಾ ಮಿಸ್ […]

ಕತೆ : ಹೆಣ್ಣಾಗಬಾರದಿತ್ತು…

ಕತೆ : ಹೆಣ್ಣಾಗಬಾರದಿತ್ತು…

ಚಾಂದ್ ಪಾಷ ಎನ್. ಎಸ್, ಕನ್ನಡ ಎಂ. ಎ . ವಿದ್ಯಾರ್ಥಿ , ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ ‘ಮುಂಗಾರು’ ಕತಾಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕತೆ  ನಾ ಹೆಣ್ಣಾಗಬಾರದಿತ್ತು! ನಾ ಹೆಣ್ಣಾಗಬಾರದಿತ್ತು! ಎಂದು ನನ್ನಕ್ಕ ಆಕ್ರಂದನದ ಆವೇಶದಲ್ಲಿ ಪದೇ ಪದೇ ಇದನ್ನೇ ಹೇಳುತ್ತಿದ್ದಳು. ಈ ಮಾತಿಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ಎಲ್ಲರ ಕಣ್ಣುಗಳು ಯಾವುದೇ ಮುಲಾಜಿಲ್ಲದೆ ಕಣ್ಣೀರ ಸುರಿಸುತ್ತಿದ್ದವು. ಕಣ್ಣೀರು ಜಾರಿ ಹೋಗಿದ್ದಕ್ಕಾಗಿ ಇಡೀ ಮನೆಯೇ ಸೂತಕ ಆಚರಿಸುತ್ತಿತ್ತು. ಹೃದಯದ ಗೋಡೆಗಳೆಲ್ಲವೂ ಬಿಗಿಯಾದ ಬಿಗುಮಾನ ಕಳಚಿಕೊಂಡು […]

ಅದಾವ  ಸಂಗತಿ

ಅದಾವ  ಸಂಗತಿ

ಕಣ್ಮುಚ್ಚಿದಂತೊಮ್ಮೆ ತೋರಿ ಕಣ್ತೆರೆವುದೇಕೆ ಕಣ್ಣ ಕಂಬಣಿಧಾರೆ ಒರೆಸೊ ಕೈ ಇರುವಾಗ ಒದ್ದೆಯಲಿ ಮಿಂದೆದ್ದ ಕಣ್ಣ ರೆಪ್ಪೆಯೆ ಸಾಕು ತೋರಲು ನಿನ್ನ ಅಂತರಗಂಗೆಗೆ ಬಿದ್ದ ಜ್ವಾಲಾಮುಖಿಯ ಪ್ರಖರತೆಯ ಅದಾವ ಸಂಗತಿ ನಿನ್ನ ಅಷ್ಟಾಗಿ ಕಾಡಿದ್ದು ಬೆನ್ನು ಬಿಡದೆ ನಿನ್ನ ಹೊಕ್ಕು ಹೃದಯ ಕಲಕಿದ್ದು ತಿಳಿಯಾದ ನಿನ್ನ ಸ್ವಚ್ಛಂದ ಮನಸಲ್ಲಿ ತನ್ನಿಚ್ಛೆ ಬಂದಂತೆ ರಾಡಿ ಎರಚಿದ್ದು ಅದಾವ ವಿಷಯ ನಿನ್ನ ಇಷ್ಟಾಗಿ ಕೊರಗಿಸಿದ್ದು ಹೃದಯ ಕೊರೆದು ಘಾಸಿಗೊಳಿಸಿದ್ದು ನಿಶ್ಚಲ ವೇಗದಲಿ ಹರಿಯುತ್ತಿದ್ದ ನಿನ್ನ ದಾರಿ ತಪ್ಪಿಸಿ ಸುನಾಮಿ ಎಬ್ಬಿಸಿದ್ದು ಅದಾವ […]

ಉರಿವ ಒಡಲುಗಳಿಗೆಲ್ಲಾ ಪ್ರಿಯ ಮಗುವಾದೆ

ಉರಿವ ಒಡಲುಗಳಿಗೆಲ್ಲಾ   ಪ್ರಿಯ ಮಗುವಾದೆ

1. ಬುದ್ಧ ಅರೆ ಮುಚ್ಚಿದ ಕಂಗಳು ಮುಚ್ಚಿದಂತೆಯೇ ಮುಗುಳ್ನಗೆಯಲಿ ಕೆಂದುಟಿ ಕರಗಿಸುತ್ತಿದೆ ಹಿಂದೆಲ್ಲದರ ನೋವಾ ಆಸೆ ಇಂಗಿದವನು ನೀನು ಹೆಸರಾದೆ ಇತಿಹಾಸದಲಿ ಸಂಜೆ ಗಾಳಿಯ ತೆರಗೆಲೆಯ ಸದ್ದು ನಿನ್ನ ಹೆಜ್ಜೆಯ ನಡಿಗೆ. ಗೌತಮಿಗೆ ಗುರುವಾಗಿ ; ಆನಂದ ನಿಗೆ ಬ್ರಹ್ಮನಾದೆ ವಿಚಾರದಿ. ಸಂಬಂಧದ ಬಳ್ಳಿಗೆ ಹೂವಾಗದೆ ಹೋದೆ ಮಡದಿ ಹಡೆದ ಕಂದನಿಗೆ ನೀಲಿ ಮುಗಿಲಾದೆ . ಇರುಳಿನ ಮೋರೆಗೆ ಚಂದ್ರ ಬೆಳಕಾದೆ ನೀ ನಿತ್ಯ . ಅರಿವಿನ ಸೊಡರಾದೆ . ಧ್ಯಾನಕ್ಕೆ ಶರಣಾದೆ ಏಕಾಂತದ ಕಾಡಲ್ಲಿ ಉರಿವ […]

ಆಲದ ಮರ

ಆಲದ ಮರ

ಪುಟ್ಟ ಊರಿನಲ್ಲೊಂದು ದೊಡ್ಡ ಆಲದ ಮರ ಊರಿನ ಪಿಸುಮಾತುಗಳಿಗೆಲ್ಲಾ  ಸಾಕ್ಷಿ. ಒಳಿತಿಗೂ, ಕೆಡಕಿಗೂ ಈ ಮರವೆ ಆಶ್ರಯ , ಊರಿನ ಜನರ ಅಳಲು ಕೇಳುವ ಏಕೈಕ ಮರ. ಬಾಯಿಲ್ಲದ ಈ ಮರಕ್ಕೆ ಕಿವಿಗಳಂಟು, ಕೇಳುವ ತಾಳ್ಮೆನು ಉಂಟು. ಈ ಹೆಮ್ಮರದ ಹಿರಿತಲೆಗೆ ಹಿರಿದಾದ ಮನಸ್ಸು, ಸಮಾನತೆಗೆ ಇದಕೆ ಇನ್ನೊಂದು ಹೆಸರು, ಜಾತಿಯ ಹಂಗು ಇದಕ್ಕಿಲ್ಲ ಧರ್ಮಕ್ಕೆ ಬಲಿಯಂತು ಆಗೋದೆಯಿಲ್ಲ. ಮುನಿದವರಿಗೂ, ಕೆರಳಿದವರಿಗೂ ಕೊಲೆಗಡುಕರಿಗೂ, ಸೌಮ್ಯರಿಗೂ ಹಿರಿಯರಿಗೂ, ಕಿರಿಯರಿಗೂ ಗಂಡಸರಿಗೂ, ಹೆಂಗಸರಿಗೂ ಎಲ್ಲರಿಗೂ ಇರುವುದು ಇದು ಒಂದೆ ಮರ. […]

ಅಪ್ಪ ಕಾಲಿಲ್ಲದ ಹಡಗು

ಅಪ್ಪ ಕಾಲಿಲ್ಲದ ಹಡಗು

ಅಪ್ಪನ ಒರಟು ಕೈಗಳಿಂದ ಬಿತ್ತಿದ್ದ ಬೀಜಗಳು ಮೊಳಕೆಯೊಡೆದಿವೆ ಈಗ. ಅಪ್ಪ ಬಿಸಿಲಲ್ಲಿ ನಿಂತಿದ್ದಾನೆ ನೆರಳಾಗಬೇಕು ನಾನು. ಕತ್ತಲೆಯ ಕೌದಿಯೊಳಗಡೆಯೇ ಮಕ್ಕಳ ಭವಿಷ್ಯತ್ತಿನ ಕನಸ ಕಾಣುತ್ತಾ ಸದಾ ಸಂತನಂತೆ ಚಿಂತೆಯಲ್ಲಿರುತ್ತಾನೆ ತನ್ನ ಸುಖದ ಕಲ್ಪನೆಯ ದಿನಗಳ ನೆನೆದು ಅಪ್ಪ ಮೌನವಾಗಿದ್ದಾನೆ ಬದುಕ ಬಳಲಿಕೆ- ಬೇಸರಿಕೆಯಿಂದ ತೀರಾ ಬೇಸತ್ತು ; ಬಾಯಾರಿದ್ದಾನೆ. ಭುವಿಯ ಮೇಲೆ ಕೋಟಿ ನಕ್ಷತ್ರಗಳ ನೆರಳ ಹುಡುಕುತ್ತಿದ್ದಾನೆ. ಮಡದಿ ತೊರೆದ ವಿರಹಿಯಂತೆ ದಿನಕಳೆವ ಲಕ್ಷ, ಸಾವಿರ ಹಗಲು                           ರಾತ್ರಿ ಗಳ ಆಕ್ರಮಣಗಳಿಗೆಲ್ಲಾ ಸಾಕ್ಷಿಯಾಗಿ . ಮಾತು ಬಾರದ […]

ನನ್ನವರು

ನನ್ನವರು

ಮೂರು ಕಾಸಿನ ದುಡಿಮೆ ಜೀವನ ಪೂರಾ ಜೆಜ್ಜಿದರು ರೆಂಟೆ ಹೊಡೆದ ಕೈ ಕಾಲು ಬುರುಡೆಗಳ ಬಾರದ ಲೋಕದ ಪಯಣಿಗರಿವರು ನಾವು ಜೀವಿಸುವ ಕಾಲದಲ್ಲಿ ಸೊಲ್ಲು ಎತ್ತದ ಜನರು ನನ್ನವರು   ನನ್ನವರ ನೋವ ಕೇಳುವರಾರು ಅವರ ನೋವ ಸ್ಪಂದನೆ ಏನು ದಹ ದಹಿಸಿಹರು ಹಸಿವಿನ ಜ್ವಾಲೆಯಲಿ ಸುಟ್ಟು ಹೋದರು ಕರಕಲಾದರು ಪುರಾವೆಗಳಿಲ್ಲ ಹೊರಟು ಹೋದರು ನನ್ನವರು ನನ್ನಜನರು   ಅದೂ ಹೇಗೋ…? ಇದೂ ಹೇಗೋ…? ಬಹುಷಃಗಳಲ್ಲಿ ಬಂದ್ದಿಯಾದರು ಕರಗಿ ಹೋದರು ಕತ್ತಲ ಲೋಕದಿ ಹರಿದ ಬಟ್ಟೆಯ ಬದುಕು […]

ಬಹುಬಣ್ಣದ ಥಿಯರಿ

ಬಹುಬಣ್ಣದ ಥಿಯರಿ

ಮಳೆ ಬರುವ ಹೊತ್ತಿಗೆ ಬಂದು ಬಿಡುತ್ತಿದ್ದಳು ಹನಿಯೊಂದಿಗೆ ನೆನಪಾಗಿ. ಅವಳ ಪ್ರೇಮ ಪರವಶತೆಗೆ ; ಮಯೊಡ್ಡಿ ಕವಿಯಾದ ರೂಮಿಯಂತೆ. ಗತಕಾಲದ ಮಾನವ ಪ್ರೇಮದಲ್ಲೂ ನೀನು , ರಾತ್ರಿಯ ತೆರೆಯ ಸರಿಸಿ ಬಂದ ಪುನರುತ್ಥಾನದ ಹಗಲಾಗಿ ಕಂಡೆ. ಅನಿಸಿಬಿಡುತ್ತಿತ್ತು ನೀ ಜೊತೆಗಿರುವಾಗಲೆಲ್ಲಾ ; ಲೋಕವ ಮರೆತು ಏಕಾಂತದ ಜೀವವಾಗಬೇಕೆಂದು ; ಈ ವ್ಯಾಖ್ಯಾನಗೊಂಡ ಪ್ರೀತಿಯ ನೀ ಯಾವಾಗಲೋ ! ಲೌಕಿಕದ ಬಿಸಿಲಿಗೆ ಒಡ್ಡಿ ನಿಂತು ; ಅಮೂರ್ತತೆಯ ರೂಪ ಕೊಟ್ಟಿದ್ದೆ. ನನ್ನ ಸುಖವ ಜೀರ್ಣಿಸಿದ ನಿನಗೆ ಬರೆಯಬೇಕೆಂದು ಹೊಸ […]

ಕಬ್ಬಿಣದ ಅಹಂ

ಕಬ್ಬಿಣದ ಅಹಂ

1. ಕಬ್ಬಿಣದ ಅಹಂ  ಕಾದ ಕಬ್ಬಿಣ್ಣವೂ ಬಿಸಿ ಉಸಿರುಬಿಟ್ಟಾಗ ಕಂಬಾರನ ಕೆಂಗಣ್ಣನಿಗೆ ಗುರಿಯಾಗಿ ಸುತ್ತಿಗೆಯ ಹೊಡೆತಗಳಿಗೆ ಕೆಂಡದಂತಿರುವ ಕಣ್ಣುಗಳು ಬೆಂಕಿಯ  ಕಿಡಿ ಕಾರಿದವು.   ಕಂಬಾರನಿಗೆ ಪಿತ್ತ ನೆತ್ತಿಗೇರಿ ಪೆಟ್ಟು ಮೇಲೆ ಪೆಟ್ಟು ನೀಡಿ ಕಬ್ಬಿಣದ ಅಹಂ ನೀರಿಳಿಸಿ ನೀರಲ್ಲಿ ಅದ್ದಿ ತೆಗೆದ ಕಬ್ಬಿಣವು ಹದವಾಗಿ ಮೃದುತ್ವದ ಆಕಾರ ಪಡೆದು ಕಂಬಾರನಿಗೆ ಕೃತಜ್ಞತೆಯ ಕಣ್ಣೀರು ಹಾಕಿತು.   ಆಕಾರವಿಲ್ಲದೆ ವಿಕಾರವಾಗಿದ್ದ  ಕಬ್ಬಿಣಕ್ಕೆ ರೂಪಕೊಟ್ಟು ಗುಣಗಳು ನೀಡಿ ನೋಡುಗರರಿಗೆ ಅಕ್ಕರೆಯ ಕರೆಯೊಲೊಂದಿಗೆ ಕರೆದೊಯ್ಯುವ ಈ ಜನ ಕಂಬಾರನ ಆಸರೆಯಲ್ಲಿ ಪಳಗಿದ […]

ಮಾಸಲು ಗೋಡೆ

ಮಾಸಲು ಗೋಡೆ

1. ಮಾಸಲು ಗೋಡೆ ಮಾಸಲು ಗೋಡೆಯ ಮೇಲೆ ಅಕ್ಷರಗಳು ಅಸ್ಪಷ್ಟ ಸಾಹಸಿಗಳು ಮಾತ್ರ ಓದ ಬಲ್ಲರು ಇದು ಬಿಜಿಎಸ್ ಸೌಂಡಿನಂತಲ್ಲ ಮಾಸಿದ ಮನಸಿನ ಮಾತು ಕೇಳುವುದು ಕೇವಲ ಕೀರಲ ದನಿಯಷ್ಟೆ ಕೇಳುಗ ವೈದ್ಯ ದುರ್ಬೀನು ಹಾಕಿ ಹೃದಯ ಬಡಿತ ಕೇಳುವಂತೆ ಸೂಕ್ಷ್ಮವಾಗಿ ಕೇಳಬೇಕು ಕಾಂತಿ ಹೀನ ಕಣ್ಗಳು ಮಾತಾಡುತ್ತವೆ ಮಾತು ಗೌಣ ನಿಜ ಮೌನವಲ್ಲ ಮೌನದ ಪ್ರತಿ ಕ್ಷಣ ನೂರ ಸಾವಿರ ಸಂದೇಶಗಳು ರವಾನಿಸಲಾಗುವುದು ಬಿತ್ತರಿಪವು ಕಾಡ್ಗಿಚ್ಚಿನಂತೆ ಸುಟ್ಟು ಕರಕಲಾಗುವ ತನಕ ಪ್ರೀತಿಸಿದ್ದೆಲ್ಲವೂ ನಿಜವೇ ಮಾತುಗಳೆಲ್ಲ ಪೂರ್ಣವೆ […]