Uncategorized

ಕರ್ನಾಟಕ ಹೆಸರಾಯಿತು ಕನ್ನಡ ಉಸಿರಾಗಲಿಲ್ಲ !

ಕರ್ನಾಟಕ ಹೆಸರಾಯಿತು ಕನ್ನಡ ಉಸಿರಾಗಲಿಲ್ಲ !

ಹುಯಿಲುಗೋಳು ನಾರಾಯಣರಾಯರ “ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ” ಒಂದು ಇಡೀ ಜನಸಮುದಾಯದ ಸುಪ್ತ ಪ್ರಜ್ಞೆಯನ್ನು ಬಡಿದೆಬ್ಬಿಸಿತ್ತು. ಆಲೂರು ವೆಂಕಟರಾಯರ “ ಅಖಂಡ ಕರ್ನಾಟಕ ”ದ ಕಲ್ಪನೆ ನಾಡಿನ ಜನತೆಯ ಐಕಮತ್ಯದ ಭೂಮಿಕೆಯಾಗಿ ಪರಿಣಮಿಸಿತ್ತು. ಅನಕೃ ಅವರ ಕನ್ನಡಕ್ಕಾಗಿ ಕೈ ಎತ್ತುವ ಛಲ, ಬಾರಿಸು ಕನ್ನಡ ಡಿಂಢಿಮವ ಎಂಬ ಕುವೆಂಪು ಅವರ ದಿವ್ಯವಾಣಿ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ದಿವ್ಯನುಡಿಗಳು, “ ಕಟ್ಟುವೆವು ನಾವು ಹೊಸ ನಾಡೊಂದನು ” ಎಂಬ ಅಡಿಗರ ವಾಣಿ […]

ವಿಜಯಪುರದ ದಣಿವರಿಯದ ಹೋರಾಟಗಾರ ಭೀಮಶಿ ಕಲಾದಗಿ

ವಿಜಯಪುರದ ದಣಿವರಿಯದ ಹೋರಾಟಗಾರ ಭೀಮಶಿ ಕಲಾದಗಿ

ವಿಜಯಪುರದ ಕೆಎಸ್‍ಆರ್‍ಟಿಸಿ ಬಸ್‍ಸ್ಟಾಂಡಿನ ಬುಕ್‍ಸ್ಟಾಲ್ ಒಂದರಲ್ಲಿ ಕುತೂಹಲಕ್ಕೆ ಅಲ್ಲಿ ಪ್ರದರ್ಶನಕ್ಕಿಟ್ಟ ಪುಸ್ತಕಗಳನ್ನು ನೋಡುತ್ತಿದ್ದೆ. ಸ್ಥಳೀಯ ಎನ್ನುವ ಚಹರೆಯ ಪುಸ್ತಕಗಳು ಅಷ್ಟಾಗಿ ಕಾಣಲಿಲ್ಲ. ಇದರ ಮಧ್ಯೆ ದೂಳು ಮೆತ್ತಿಕೊಂಡ ಪುಸ್ತಕವೊಂದು ಗಮನ ಸೆಳೆಯಿತು. ಆ ಪುಸ್ತಕವನ್ನು ಎತ್ತಿಕೊಂಡೆ. ಅದು ಅಣ್ಣಾರಾಯ ಈಳಗೇರ ಸಂಪಾದಿಸಿದ `ಜನಮುಖಿ ಭೀಮಶಿ ಕಲಾದಗಿ’ ಎನ್ನುವ ಪುಸ್ತಕವಾಗಿತ್ತು. ಪುಸ್ತಕದಂಗಡಿಯವರಿಗೆ ಈ ಪುಸ್ತಕದ ಪ್ರತಿಯೊಂದನ್ನು ಕೇಳಿದಾಗ ಆತ ಅಂಗಡಿ ಒಳಗಿದ್ದ ಹೊಸ ಪ್ರತಿಯೊಂದನ್ನು ನೀಡಿದರು. ನಂತರ ಕುತೂಹಲದಿಂದ ಈ ಕೃತಿಯನ್ನು ಓದಿದಾಗ ಭೀಮಶಿ ಕಲಾದಗಿಯವರ ಹೋರಾಟಧ ಕಥನದ […]

ಕಾಲಕೆಳಗಿನ ಕುನ್ನಿಗಳಾಗುವುದು ಸಹಜ!

ಕಾಲಕೆಳಗಿನ ಕುನ್ನಿಗಳಾಗುವುದು ಸಹಜ!

ಬರುವುದಿಲ್ಲ ಯಾರೂ! ಕೂಗಿದೆ ಜನಗಳ ಬೆಂಕಿ ಆರಿಸುವುದಿದೆ, ಬನ್ನಿ ನರಪಿಳ್ಳೆ ಹಣಕಲಿಲ್ಲ ಕರೆದೆ ಜನಗಳ ಬೆಂಕಿ ಹಾಕುವುದಿದೆ, ಬನ್ನಿ ಜನಸಾಗರವೇ ಸೇರಿತು!   ಕೂಗಿದೆ ಕುಸಿಯುತಿದೆ ಮನೆ ದುರಸ್ತಿ ಮಾಡೋಣ, ಬನ್ನಿ ಒಂದು ನೊಣವೂ ಸುಲಿಯಲಿಲ್ಲ ಕರೆದೆ  ಕೆಡವುವ ಕೆಲಸವುಂಟು ಮನೆಗಳ,ಬನ್ನಿ ಜನಜಾತ್ರೆಯೇ ನೆರೆದಿತು!   ಕೂಗಿದೆ ಸೋರುತಿಹುದು ಛಾವಣಿ ಹೆಂಚು ಹೊದಿಸೋಣ,ಬನ್ನಿ ಒಬ್ಬನೂ ತಲೆ ಹಾಕಲಿಲ್ಲ ಕರೆದೆ  ಉರಿಯುತಿದೆ ಮನೆಗಳ ಗಳ  ಇರಿಯೋಣ,ಬನ್ನಿ ಜನತೆ ಮುಗಿಬಿದ್ದಿತು!    ಸಹಜ! ಉನ್ಮಾದಗೊಂಡ ಜನಸಮೂಹದಲ್ಲಿ ಯುದ್ದದ ಮಾತು ಸಹಜ! […]

ಕಾವ್ಯದ ಹೊಸ ಅಲೆ-3 : ರಾಗಬದ್ಧವಾಗೇ ಇರಬೇಕಿಲ್ಲ ಎದೆಯ ಹಾಡು..

ಕಾವ್ಯದ ಹೊಸ ಅಲೆ-3 : ರಾಗಬದ್ಧವಾಗೇ ಇರಬೇಕಿಲ್ಲ ಎದೆಯ ಹಾಡು..

” ಹಾಡಿಕೊಳ್ಳಲು ಬಿಟ್ಟುಬಿಡಿ ನನ್ನ ಪಾಲಿನ ಹಾಡುಗಳ.. ಶೃತಿ, ಲಯ, ಸಾಹಿತ್ಯದೊಳಗೆ ಕೂರಿಸಿ ವಿಮರ್ಶಿಸಬೇಡಿ.. ರಾಗಬದ್ಧವಾಗೇ ಇರಬೇಕಿಲ್ಲ ಎದೆಯ ಹಾಡು.. ಹರಿದ ಸೀರೆಯ ಜೋಳಿಗೆಯಲ್ಲಿ ತೂಗುವಾಗಲೆಲ್ಲಾ ನನ್ನವ್ವ ಹಾಡಿದ್ದು ಹಾಗೆ.. ” ಎಂದು ಬರೆಯುವ ಮಂಜುಳಾ ಹುಲಿಕುಂಟೆ ಅವರು ನಮ್ಮೊಳಗನ್ನು ಕಲಕುವ ಹಾಗೆ ಕವಿತೆ ಕಟ್ಟುತ್ತಾರೆ. ಅವರ ರಚನೆಗಳನ್ನು ಓದುತ್ತಿದ್ದರೆ, ಕಟು ಸತ್ಯಗಳನ್ನು ನಿಷ್ಠುರ ಪ್ರಶ್ನೆಗಳನ್ನಾಗಿಸುವ ರೂಪಾಂತರ ಅವರ ಕವಿತೆ ಅನ್ನಿಸುತ್ತದೆ. ಸ್ವಗತದ ಸಂವಾದ ಮಾದರಿಯ ಕವಿತೆಗಳು ಕಾಲದ ಬಿಕ್ಕಟ್ಟುಗಳ ಮೆಲುದನಿಯ ನುಡಿಕಟ್ಟುಗಳಂತಿವೆ. ಮಂಜುಳಾ ಅವರು ಬೆಂಗಳೂರು […]

ದಲಿತ ಪದಕಥನ -8 : ಜಾತಿ ಶ್ರೇಣಿಯ ಅರ್ಥಗಳು

ದಲಿತ ಪದಕಥನ -8 : ಜಾತಿ ಶ್ರೇಣಿಯ ಅರ್ಥಗಳು

ಅಂತರಂಗದ ಭಾಷೆಯು ನಮ್ಮ ಅಭಿವ್ಯಕ್ತಿಗೆ ಸಮುದಾಯದ ಬದ್ಧತೆಯನ್ನು ತಂದುಕೊಡುತ್ತದೆ. ಯಾವುದೇ ಒಂದು ಪದವನ್ನು ನಾವು ಬಿಡಿಯಾಗಿ ಆಲಿಸಿರುವುದಿಲ್ಲ. ಪ್ರತಿಬಾರಿಯೂ ನಮ್ಮನ್ನು ಸೂಚಿಸುವ ನುಡಿಗಟ್ಟಿನಲ್ಲಿ ನೀವು ‘ಇಂತವರು’ ಎಂದು ನಿರ್ದೇಶಿಸಿ ನಿಯಂತ್ರಿಸುವ ಭಾಷಿಕ ಸಂವಿಧಾನ ಇರುವುದರಿಂದ ಯಾವುದೇ ನಿರ್ದೇಶಿತ ಪದ ನಮಗೆ ಬಹುರೂಪಿಯಾಗಿಯೇ ಕೇಳಿಸುವುದು. ಇಡೀ ಒಂದು ಜಾತಿಯನ್ನು ಒಂದು ಗುಂಪು ಎಂದು ಭಾಷೆಯೂ ನಿರ್ಧರಿಸಿಬಿಟ್ಟಿದೆ. ಜಾತಿ ನಿಂದನೆಯ ಪದಗಳನ್ನು ಗಮನಿಸಿ, ಆ ಬಗೆಯ ಪದಗಳು ಇಡಿಯಾಗಿ ಸಂಭೋದಿಸಿ ನಿರ್ಣಯ ಕೈಗೊಂಡಿರುತ್ತವೆ. ‘ಅವನ ಜಾತಿ ಅಂತಾದ್ದು’ ಎಂದು ಸೌಮ್ಯವಾಗಿ […]

ಬಯಸಿದ್ದೊಂದು ಎಸೆದಿದ್ದೊಂದು ಕಸಿದಿದ್ದೊಂದು

ಬಯಸಿದ್ದೊಂದು ಎಸೆದಿದ್ದೊಂದು ಕಸಿದಿದ್ದೊಂದು

ನನಗೆ ಏನೆಲ್ಲಾ ದಯಪಾಲಿಸಿದರು ನಾನೇನೂ ಕೇಳಲೇ ಇಲ್ಲ ಆದರೂ ನಿಮಿಷಕ್ಕೊಂದು ತುಣುಕು ಎಸೆಯುತ್ತಲೇ ಇದ್ದರು ; ಪಾದದಡಿಯೊಂದು ಜೇಬಿನಲ್ಲೊಂದು ತಲೆಯ ಮೇಲೊಂದು ಬಗಲಲ್ಲಿ ಒಂದು ಹೆಗಲ ಮೇಲೊಂದು ; ಹಿತ್ತಲಿನಲ್ಲೊಂದು ಅಂಗಳದಲ್ಲೊಂದು ಉಪ್ಪರಿಗೆಯ ಮೇಲೊಂದು ಶೌಚಾಲಯದಲೂ ಒಂದು ಅಬ್ಬಬ್ಬಾ ಹೇಗೆ ನಿಭಾಯಿಸಲಿ ? ಭಾಗ್ಯಗಳ ಭರಪೂರ ತುಂಬಿ ತುಳುಕಿದೆ ಕಣಜ ಉಕ್ಕಿ ಹರಿದಿದೆ ಖನಿಜ ಎತ್ತ ನೋಡಿದರೂ ವರಪ್ರಸಾದಗಳ ಮೆರವಣಿಗೆ ಸುತ್ತ ಆವರಿಸಿದೆ ಋಣಭಾರದ ಅವರತಣಿಕೆ ; ಎಲ್ಲವೂ ಉಚಿತ ಔಚಿತ್ಯವೇ ಇಲ್ಲದ ಅಪಾತ್ರದಾನದ ನಡುವೆ ದಾನವೀರರ […]

ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ

ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ

ಇಂದು ಪರ್ಯಾಯ ಸಂಸ್ಕøತಿ/ಸಾಹಿತ್ಯ ಎನ್ನುವುದರ ಕುರಿತಾಗಿ ಮಾತನಾಡುವಾಗ ಈ ಮೊದಲು ಭಾರತೀಯ ಸಂಸ್ಕøತಿಯನ್ನು ಕುರಿತಾಗಿ ಕೊಂಚ ಚರ್ಚೆ ನಡೆಸುವುದು ಒಳ್ಳೆಯದೇನೋ. ಹಾಗಿದ್ದಲ್ಲಿ ಸಂಸ್ಕøತಿ ಎಂದರೇನು ಎನ್ನವುದನ್ನು ಡಿಫೈನ್ ಮಾಡಬೇಕೆಂದರೆ ಅದು ಅತ್ಯಂತ ವ್ಯಾಪಕವಾದ, ಕಿಕ್ಕಿರಿದು ತುಂಬಿದ, ಪರಸ್ಪರ ಡಿಕ್ಕಿ ಹೊಡೆಯುವ ವಿಚಾರಗಳನ್ನು,ವಿಸ್ಮಯಗಳನ್ನು ತಲೆಮಾರುಗಳಿಂದ ತಲೆಮಾರಿಗೆ ದಾಟಿಸುವ ಒಂದು ಬದುಕು ಎಂದು ಸಂಗ್ರಹವಾಗಿ ಹೇಳಬಹುದೇನೋ. ಇಲ್ಲಿ ಸ್ಥೂಲವಾಗಿ ನಮ್ಮ ಆಚರಣೆ, ಆಹಾರ, ಭಾಷೆ, ಕಲೆಗಳು ಈ ಸಂಸ್ಕøತಿಯನ್ನು ಪ್ರತಿನಿಧಿಸುತ್ತವೆ. ಇಲ್ಲಿ ಧಾರ್ಮಿಕತೆ ಈ ಸಂಸ್ಕøತಿಯ ವ್ಯಾಪ್ತಿಯೊಳಗೆ ಬರುವುದಿಲ್ಲ. ಅನೇಕ […]

ಕಳಸಾ-ಬಂಡೂರಿ ನಾಲಾ ಯೋಜನೆ-2: ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.’

ಕಳಸಾ-ಬಂಡೂರಿ ನಾಲಾ ಯೋಜನೆ-2: ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.’

ನಿಚ್ಚಳವಾಗಿ ಕಾಣುವ ವಾಸ್ತವ: ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.’ ಮಹಾದಾಯಿಗೆ ಕರ್ನಾಟಕದ ಜಲಾನಯನ ಪ್ರದೇಶದಿಂದ ಸೇರ್ಪಡೆಯಾಗುವ ನೀರಿನಲ್ಲಿ ತನ್ನ ಪಾಲಿನ ಒಂದು ಭಾಗವನ್ನು ಮಾತ್ರ ಬಳಸಿಕೊಳ್ಳುವುದಕ್ಕೂ ಬಿಡದೆ, ಪರಿಸರ ಹಾನಿಯ ಪ್ರಶ್ನೆಯನ್ನೆತ್ತಿ ಕಳೆದ 25 ವರ್ಷಗಳಿಂದಲೂ ಅಡ್ಡಿ ಮಾಡುತ್ತಾ ಬರುತ್ತಿರುವ ಗೋವಾ ಸರ್ಕಾರ ತನ್ನ ಪ್ರದೇಶದಲ್ಲೇ ಈ ನದಿಯ ಪರಿಸರವನ್ನೇನೂ ಸ್ವಚ್ಛವಾಗಿ ಇಟ್ಟುಕೊಂಡಿಲ್ಲ ಎಂದು ವರದಿಗಳು ಹೇಳುತ್ತವೆ. ನದಿಯ ಜಲಾನಯನ ಪ್ರದೇಶದಲ್ಲೇ ಗಣಿಗಾರಿಕೆಗೆ ಅವಕಾಶ ಕೊಟ್ಟಿದೆ. ಮ್ಯಾಂಗನೀಸ್ ಅದಿರನ್ನು ಸಂಸ್ಕರಿಸಿದ ಅಪಾರ ಮಣ್ಣಿನ ರಾಶಿಯನ್ನು ನದಿಯ ಮುಖಜಭೂಮಿಯಲ್ಲಿ […]

ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ

ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ

ನಾವಿರುವ ಜಗತ್ತೇ ಅಂಥಹದು ಒಂದು ಪುಟ್ಟ ಗುಡಿಸಿಲಿನಲ್ಲಿ ಜೀವಿಸಿದಂತೆ ಭಾಸವಾಗುತ್ತದೆ. ಈ ಮಾತನ್ನೇ ಪಾರಿಭಾಷಿಕವಾಗಿ ಕರೆದುಕೊಳ್ಳುವುದಾದರೆ ನಾವಿರುವ ಜಗತ್ತು ಒಂದು ‘ಗ್ಲೋಬಲ್ ವಿಲೇಜ್’. ಯಾಕೆಂದರೆ ಜಗತ್ತಿನಾದ್ಯಂತ ನಡೆಯುವ ಯಾವುದೇ ಸಂಗತಿಗಳು ಚಣಾರ್ಧದಲ್ಲಿ ನಮಗೆ ಮಾಹಿತಿ ರೂಪದಲ್ಲಿ ಸಿಗುತ್ತದೆ. ಹೀಗಾಗಿ ಜಗತ್ತು ತುಂಬಾ ಕಿರಿದಾಗಿ ಕಾಣಬರುವುದು. ಪತ್ರಿಕಾ ಮಾಧ್ಯಮ, ಸಮೂಹ ಮಾಧ್ಯಮ, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು ಹೀಗೆ ಅನೇಕ ಆಧಾರಗಳಿಂದ ಮಾಹಿತಿಯನ್ನು ಹೆಕ್ಕಿತೆಗೆದು ಪಡೆಯುವಂತಹ, ಪಡೆದ ಮಾಹಿತಿಯನ್ನು ಹಂಚಿಕೊಳ್ಳವ ಅವಕಾಶವು ಇದೆ. ಈ ದತ್ತವಾದ ಮಾಹಿತಿಗಳನ್ನು ಜಗತ್ತಿನ ಭಿನ್ನ […]

ವಿಮೋಚನಾ ಹೋರಾಟದ ಹಣತೆ : ಪ್ರೊ.ಬಿ. ಕೃಷ್ಣಪ್ಪ

ವಿಮೋಚನಾ ಹೋರಾಟದ ಹಣತೆ : ಪ್ರೊ.ಬಿ. ಕೃಷ್ಣಪ್ಪ

ನವಿಲುಗಳ ದಂಗೆ : ನಾನು ಹದಿನೈದು ಹದಿನಾರನೇ ವರ್ಷದ ಚಿಕ್ಕ ಹುಡುಗನಾಗಿದ್ದಾಗಲೇ, ನನ್ನ ಹೈಸ್ಕೂಲು ವಿದ್ಯಾಭ್ಯಾಸದ (1980…) ದಿನಗಳಿಂದಲೂ ದಲಿತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತನಾಗಿ ದಲಿತ ಚಳುವಳಿಗಳೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡ ಕಾರಣದಿಂದಾಗಿಯೂ ದಲಿತ ಹೋರಾಟದ ಭಾಗವಾಗಿ ಇತರೆ ಪ್ರಗತಿಪರ ಮತ್ತು ಜಾತ್ಯತೀತ ಚಳುವಳಿಗಳೊಂದಿಗೂ ಮೈತ್ರಿ ಸಂಬಂಧ ಏರ್ಪಡಿಸಿಕೊಂಡಿದ್ದ ಕಾರಣದಿಂದಾಗಿಯೂ ಚಳುವಳಿಗಳು ನನ್ನ ಬದುಕಿನ ಅನುಭವದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದವು. ನನ್ನ ವಿದ್ಯಾರ್ಥಿ ಜೀವನದ ಬಹುಪಾಲು ವೇಳೆಯನ್ನು ಜನಪರ ಕಾಳಜಿಗಳಗೋಸ್ಕರ ಬಳಸುತ್ತಿದ್ದ ನನ್ನಂತೆಯೇ ನನ್ನ ಅನೇಕ ಸಹಪಾಠಿ […]

1 2 3