By admin on November 22, 2015
baarakaman, bijapur, golgumbus, vijayapura
ಪ್ರವಾಸ

ಈ ಹಿಂದಿನ ವಿಜಾಪುರ ಈಗ ವಿಜಯಪುರ. ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಇದೂ ಒಂದಾಗಿದೆ. ಅದರಲ್ಲೂ ಇಲ್ಲಿನ ಗೋಳಗುಮ್ಮಟ ಜಗತ್ ಪ್ರಸಿದ್ಧ. ವಿಜಯಪುರವೆಂದರೆ ಗೋಳಗುಮ್ಮಟ, ಗೋಳಗುಮ್ಮಟವೆಂದರೆ ವಿಜಯಪುರ ಎಂಬಷ್ಟು ಇದು ಪ್ರಸಿದ್ಧಿ ಪಡೆದಿರುವುದು ಹೆಚ್ಚುಗಾರಿಕೆಯೇನಲ್ಲ. ವಿಶ್ವದ ಎರಡನೇ ಅತಿದೊಡ್ಡ ಗುಮ್ಮಟ ಎಂಬ ಪ್ರಸಿದ್ಧಿಯೂ ಇದಕ್ಕಿದೆ. ವಿಶೇಷವೆಂದರೆ 124 ಅಡಿ ವ್ಯಾಸವನ್ನು ಹೊಂದಿರುವ ಈ ಗುಮ್ಮಟಕ್ಕೆ ಯಾವುದೇ ಆಧಾರವಿಲ್ಲದಿರುವುದು ಇಂದಿನ ವಿಸ್ಮಯಗಳಲ್ಲೊಂದು. ಇಲ್ಲಿನ ಮತ್ತೊಂದು ವಿಶೇಷವೆಂದರೆ ಒಮ್ಮೆ ಸದ್ದು ಮಾಡಿದರೆ ಅದು 7 ಸಲ ಪ್ರತಿಧ್ವನಿಸುವ ವಿಶೇಷತೆ. ಇಲ್ಲಿನ […]
By admin on October 2, 2015
ಪ್ರವಾಸ

ಯಾರದೀ ಅಮೆರಿಕ ? ಎಂಬ ಪ್ರಶ್ನೆ ಯಾರಿಗಾದರೂ ಬೆರಗು ಹುಟ್ಟಿಸಬಹುದು. ಯಾಕೆಂದರೆ ಅಮೆರಿಕ ಯಾರದ್ದೆಂದರೆ ಅಮೆರಿಕನ್ನರದು ಅಲ್ಲವೆ? ಭಾರತ ಭಾರತೀಯರದು; ಚೀನ ಚೀನಿಯರದು ಅಂದಂತೆ. ಆದರೂ ಅಮೆರಿಕ ಯಾರದ್ದೆಂಬ ಪ್ರಶ್ನೆ ಯಾಕೆ ಬಂತು? ನನ್ನ ಪ್ರಶ್ನೆಗೆ ಕಾರಣ ಇದೆ. ಪ್ರಸ್ತುತ ವಿಶ್ವದಲ್ಲೇ ಅತ್ಯಂತ ಶ್ರೀಮಂತವೂ ಪ್ರಭಾವಯುತವೂ ಆದ ಅಮೆರಿಕ (ಅಮೆರಿಕ ಸಂಯುಕ್ತ ಸಂಸ್ಥಾನ ಉತ್ತರಕ್ಕೆ ಕೆನಡ, ದಕ್ಷಿಣಕ್ಕೆ ಮೆಕ್ಸಿಕೊ ನಡುವೆ ಇರುವ 2500 x 2500 ಮೈಲಿ ವಿಸ್ತೀರ್ಣದ ಭೂಭಾಗ)ದ ಇತಿಹಾಸ ರೋಚಕವಾದುದು. ಅದು ಹದಿನೆಂಟನೆಯ […]
By admin on August 31, 2015
ಪ್ರವಾಸ

ರಾಜ್ಯದ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆಯನ್ನು ನೋಡಿ ಬಲ್ಲ ನಮಗೆ ಜಗತ್ತಿನ ಬಹುಹೆಚ್ಚಿನ ಮಳೆ ಬೀಳುವ “ಭೂಮಂಡಲದ ಅತೀ ಒದ್ದೆ ಪ್ರದೇಶ” ಎಂದು ಹೆಸರಾಗಿರುವ ಚಿರಾಪುಂಜಿ ಹೇಗಿರಬಹುದು? ಎಂಬ ಕುತೂಹಲ ಸ್ವಾಭಾವಿಕವಿರುತ್ತದೆಯಲ್ಲವೆ! 1200 ಮಿಮಿ ವಾರ್ಷಿಕ ಮಳೆಯೆಂದರೆ ಆಗುಂಬೆಗಿಂತ ಬಹುತೇಕ ಎರಡು ಪಟ್ಟು. ಗೌಹಾಟಿಯಿಂದ ಹೊರಟಾಗ ಎದುರಾಗಿದ್ದು ‘ಬ್ರಹ್ಮಪುತ್ರ’ ಜಗತ್ತಿನ ಬಹುದೊಡ್ಡ ನದಿಗಳಲ್ಲೊಂದು. ಹಿಮಾಲಯವೇ ಮೈಕೊಡವಿದಂತೆ ಹಿಮಾಲಯ ನೀರನ್ನೆಲ್ಲ ನದಿಯೊಂದು ಹಿಂಡಿತರುವಂತೆ ಹರಿಯುತ್ತಿತ್ತು. ಆಚೆ ದಡದಲ್ಲಿ ಕಾಮಾಕ್ಯದೇವಿ ಪ್ರಕೃತಿಯಮ್ಮ ನೆಲಮುಗಿಲ ಆರ್ಭಟಕ್ಕೆ ಸಾಂತ್ವನ ಹೇಳುವ ತಾಯಿಯಾಗಿ […]
By admin on August 31, 2015
ಪ್ರವಾಸ

ಯೂರೋಪೆಂಬ ಮಾಯಾಂಗನೆ ಭೂಗೋಳದ ನಟ್ಟ ನಡುವಲಿ ಕುಳಿತು ಗ್ರೀಸ್ ರೋಂ ಸಂಸ್ಕøತಿಯನ್ನು ಅತ್ತ ಪಶ್ಚಿಮಕ್ಕೆ ಇತ್ತ ಪೂರ್ವದಿಕ್ಕಿಗೆ ಎಟುಕಿಸಿ ಮೂಡಲ ಪಡುವಲಗಳೆರಡನ್ನು ತೆಕ್ಕೆಗೆಳೆದು ಅರಳಿ ನಿಂತಿರುವ ಪ್ರಬುದ್ಧ ಕಲಾವಿದೆಯೆಂದು ಅಲ್ಲಿ ಕಣ್ಣಾಡಿಸಿದಾಗ ಮಾತ್ರ ಅರಿವಾಗುತ್ತದೆ. ಹಿಂದಿನ ಅಕ್ಟೋಬರ್ನಲ್ಲಿ ಹಿ. ಶಿ. ರಾಮಚಂದ್ರೇಗೌಡ ದಂಪತಿಗಳು ಒಂದು ತಂಡ ಕಟ್ಟಿ ಪ್ರವಾಸಕ್ಕೆ ಥಾಮಸ್ ಕುಕ್ ಮೂಲಕ ನಮ್ಮನ್ನು ಹೊರಡಿಸಿದರು. ಅಗ್ನಿ ಪರ್ವತಗಳು ಕುದಿಯುತ್ತಿವೆಯೆಂದು ಪ್ರವಾಸ ರದ್ದಾಗಿ ಅಂತೂ ಪುನಃ ಹೊರಟೆವು. ಅನ್ನ ಬೆಂದಿದೆಯೇ ಎಂಬುದಕ್ಕೆ ಒಂದಗಳು ಹಿಸುಕಿ ನೋಡಿದರೆ ಸಾಕಲ್ಲವೆ […]
By admin on August 29, 2015
ಪ್ರವಾಸ

ಏಷ್ಯಾದ ದೇಶಗಳಲ್ಲಿ ಚೀನಾ ಅತ್ಯಂತ ಪ್ರಗತಿ ಪಥದಲ್ಲಿ ಸಾಗುತ್ತಿರುವ ದೇಶ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗೆಯೇ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶ ವಿಶ್ವದ ಗಮನವನ್ನು ತನ್ನತ್ತ ಸೆಳೆಯುತ್ತಿರುವ ಈ ದೇಶವನ್ನು ನೋಡುವ ಆಸೆ ಎಲ್ಲರಂತೆ ನನಗೂ ಇತ್ತು. ನನ್ನ ಕಿರಿಯ ಮಗಳು ನಂದನ ಅವಳ ಪತಿ ಶಿವಕುಮಾರ್ ಉತ್ತರ ಚೀನಾದ ಯಾಂಥಾಯ್ ಎನ್ನುವ ಊರಿನಲ್ಲಿರುವುದರಿಂದ ನನಗೆ ಚೀನಾಕ್ಕೆ ಹೋಗುವ ಸದವಕಾಶ ಕಲ್ಪಿತವಾಯಿತು. ಯಾಂಥಾಯ್ ಚೀನಾದ ಉತ್ತರ ಭಾಗದಲ್ಲಿರುವ ಒಂದು ಪಟ್ಟಣ. ಬೀಜಿಂಗ್ ನಿಂದ ವಿಮಾನದಲ್ಲಿ ಒಂದು […]