ಪ್ರವಾಸ

ಪ್ರವಾಸ

ಅಧರಕ್ಕೂ ಸಿಹಿ ಉದರಕ್ಕೂ ಸಿಹಿ ಕವಳಿಹಣ್ಣು

ಅಧರಕ್ಕೂ ಸಿಹಿ ಉದರಕ್ಕೂ ಸಿಹಿ ಕವಳಿಹಣ್ಣು

ಹಣ್ಣುಗಳ ಸೀಸನ್ ನಲ್ಲಿ ನಾನು ಕಾಡಿನಲ್ಲಿ ತಿರುಗುವುದು ಹೆಚ್ಚು. ಯಾಕೆಂದರೆ ಅಪ್ಪಟ ಗ್ರಾಮೀಣ ಭಾಗದ ಹಣ್ಣುಗಳು ಈ ಕಾಡಿನಲ್ಲಿ ಸಿಗುತ್ತವೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಭಾಗದ ಅರಣ್ಯ ಪ್ರದೇಶದಲ್ಲಿ ಸೀತಾಫಲ, ಬಿಕ್ಕೆ, ಕಾರಿ, ಕವಳೆಹಣ್ಣುಗಳು ಹೇರಳವಾಗಿ ದೊರೆಯುತ್ತವೆ. ನಿನ್ನೆ ಕೊಟ್ಟೂರು ಭಾಗದ ಅರಣ್ಯ ಪ್ರದೇಶದಲ್ಲಿ ಹೋದಾಗ ಎತ್ತ ನೋಡಿದರೂ ಕವಳೆಹಣ್ಣುಗಳೇ. ಕಪ್ಪು ದ್ರಾಕ್ಷಿ ಗೊಂಚಲು ಬಿಟ್ಟಂತೆ ಕವಳೆ ಹಣ್ಣುಗಳು ಮುಳ್ಳಿನ ಗಿಡದಲ್ಲಿ ಹೇರಳವಾಗಿ ಬಿಟ್ಟಿದ್ದವು. ಅಲ್ಲಲ್ಲಿ ಕಾಯಿಗಳಿದ್ದರೂ ಹಣ್ಣುಗಳೇ ಹೆಚ್ಚು ಕಂಡವು. ಆರೋಗ್ಯಕ್ಕೂ ಹಿತಕರವಾದ ಕವಳೆಹಣ್ಣು ಸಿಹಿಯಾಗಿರುತ್ತದೆ. […]

” ಊರು ಸುಟ್ಟರೂ ಹನುಮಪ್ಪ ಹೊರಗೆ “

” ಊರು ಸುಟ್ಟರೂ ಹನುಮಪ್ಪ ಹೊರಗೆ “

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿರುವಂತೆಯೇ, ಅಚ್ಚರಿಯ ತಾಣಗಳೂ ಇವೆ. ಅವುಗಳಲ್ಲೊಂದು ಚೌಡಾಪುರದಲ್ಲಿರುವ ದೇವಸ್ಥಾನ. ಇದು ಬಹು ಜನರಿಗೆ ತಿಳಿಯದ  ತಾಣವಾಗಿದೆ. ಮೊನ್ನೆ ಭಾನುವಾರ ನಾನು ನನ್ನ ಕೆಮರಾ ಹೆಗಲಿಗೇರಿಸಿಕೊಂಡು ಹೊರಟಾಗ ಬಹುದಿನಗಳ ನಂತರ ಚೌಡಾಪುರ ಕೆರೆಯ ಸ್ಥಿತಿ ಹೇಗಿದೆಯೆಂದು ನೋಡೋಣವೆಂದೇ ಹೋಗಿದ್ದೆ. ಆದರೆ ಚೌಡಾಪುರ ಕೆರೆಯೆಲ್ಲ ಬತ್ತಿ ಬರಿದಾಗಿ ಕ್ರಿಕೆಟ್ ಮೈದಾನದಂತಾಗಿರುವುದು ಬರದ ಭೀಕರತೆಯನ್ನು ತೋರಿಸಿತು. ಅದೇ ಕೆರೆಯ ಬಲಭಾಗದಲ್ಲಿ ಚೌಡಾಪುರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿಯೇ ಪುಟ್ಟ ಹಳೆಯ ದೇವಸ್ಥಾನವೊಂದಿದೆ. ಈ ದೇವಸ್ಥಾನದ […]

ಅಜಂತಾ – ಈ ಚಿತ್ರಪಟಗಳಿನ್ನೂ ಹಾಡುತ್ತಿವೆ..

ಅಜಂತಾ – ಈ ಚಿತ್ರಪಟಗಳಿನ್ನೂ ಹಾಡುತ್ತಿವೆ..

ಕಿಚಕಿಚ ಎನ್ನುತ್ತ ಸರಸರ ಹತ್ತಿಳಿವ ಅಳಿಲುಗಳು, ಅಸಂಖ್ಯ ಕರಿ ಪಿಕಳಾರ ಹಕ್ಕಿಗಳು, ಸಂಗಾತಿಯ ಬೆನ್ನಿನ ಹೇನು ಹೆಕ್ಕುವುದರಲ್ಲಿ ಮಗ್ನವಾಗಿ ದೇಶಕಾಲ ಮರೆತ ಕಪಿ ದಂಪತಿಗಳು, ಹರಿವ ಪಾತ್ರ ಕಾಣುವಂತೆ, ಸವೆದ ಕಲ್ಲು ಬಂಡೆ ಕಾಣುವಂತೆ ಡಿಸೆಂಬರಿಗೇ ಒಣಗಿದ ವಾಘೋರಾ ನದಿಯ ತಿರುವು, ಮಧ್ಯಭಾರತದ ಸಹ್ಯಾದ್ರಿ ಬೆಟ್ಟಸಾಲುಗಳ ಗುಹೆಗಳಲ್ಲಿ ಎಂದೋ ಸಹಸ್ರಮಾನಗಳ ಹಿಂದೆ ವಿಸ್ಮಯಗೊಳಿಸುವಷ್ಟು ಕೌಶಲದಿಂದ ರೂಪಿಸಿದ ಚಿತ್ರ-ಶಿಲ್ಪಗಳು, ಪದಭಾವಭಂಗಿಗಳಲಿ ಆಡುತ್ತಿರುವಂತೆ ಹಾಡುತ್ತಿರುವಂತೆ ಕಾಣುವ ಚಿತ್ರಗಳಿರುವ, ತನ್ನ ಕಾಲದೊಳಗೆ ನಮ್ಮನ್ನು ಲೀನಗೊಳಿಸಲು ಶಕ್ತವಾಗಿರುವ ಕತ್ತಲುಬೆಳಕಿನ ಗುಹೆಗಳು… ಇದು ಅಜಂತಾ. […]

ನಂದಿ ಬೆಟ್ಟದಲ್ಲಿ ಸಿಕ್ಕ ತಾಯಂದಿರು

ನಂದಿ ಬೆಟ್ಟದಲ್ಲಿ ಸಿಕ್ಕ ತಾಯಂದಿರು

ತಾಯ್ತನ ಎನ್ನುವುದು ಮನುಷ್ಯರಿಗೆ ಮಾತ್ರ ಸೀಮಿತವಾದ ಮೌಲ್ಯವಲ್ಲ. ಅದು ಎಲ್ಲ ಜೀವಗಳಲ್ಲಿಯೂ ಅಡಗಿರುವ ಜೀವಸತ್ವ. ಕುಚೆಸ್ಟೆಗೆ ಹೆಸರಾದ ಕೋತಿಗಳಲ್ಲಿಯೂ ಅದು ದಟ್ಟವಾಗಿದೆ. ಅದರ ಅನುಭವ ನೀಡುವ ಕೆಲವು ಚಿತ್ರಗಳು ಇಲ್ಲಿವೆ ನಿಮಗಾಗಿ.     

ಸಿಕ್ಕಿಂ : ನಾಥುಲಾ ಪಾಸ್ ಬದುಕುಳಿದ ಪ್ರವಾಸ

ಸಿಕ್ಕಿಂ : ನಾಥುಲಾ ಪಾಸ್ ಬದುಕುಳಿದ ಪ್ರವಾಸ

ನೇಪಾಲ-ಭೂತಾನ್-ಸಿಕ್ಕಿಂ ಹಿಮಾಲಯದ ಬುದ್ಧನ ತತ್ವಗಳನ್ನು ಅರಗಿಸಿಕೊಂಡಿರುವ ಭೂಸಾರಗಳು. ಚೈನಾ ಕಬಳಿಸಿದ ಟಿಬೆಟ್ ಕೂಡ ಇದೇ ಮಾದರಿಯದು.ಮೊದಲಿನೆರಡು ಸ್ವತಂತ್ರ ದೇಶಗಳು.ಭಾರತದ ಹಿಮಾಲಯ ತಪ್ಪಲು ಬೇರೆಯಲ್ಲ ಅವು ಬೇರೆಯಲ್ಲ ಎಂಬ ಸಾಂಗತ್ಯದವು.ನೇಪಾಲ ಅತಿ ಜನ ಸಂಖ್ಯಾ ಭಾರದಿಂದ ಹಾಗೂ ಭಾರತೀಯ ಸನಾತನ ಪ್ರಭುತ್ವ ಸೌಮ್ಯತೆಯನ್ನು ಹೊಂದಿದ ದೇಶ. ಆದರೆ ಭೂತಾನ್-ಸಿಕ್ಕಿಂ ಹಾಗಲ್ಲ. ಪರಿಸರವು ದೈವವೆಂಬ ತಿಳಿವಳಿಕೆಯವು.ಭೂತಾನ್ ದೇಶವಂತೂ ಸಂಸ್ಕøತಿಯಲ್ಲಿ ನಡಾವಳಿಯಲ್ಲಿ ಪರಿಸರ ರಕ್ಷಣೆಯಲ್ಲಿ ಜಗತ್ತಿಗೊಂದು ಮಾದರಿ.ಈ ಮಾದರಿಯನ್ನು ಅನುಸರಿಸುತ್ತಾ ಹೊರಟಿರುವ ಸಿಕ್ಕಿಂ ರಾಜ್ಯವು ನಮ್ಮ ಭಾರತ ದೇಶದಲ್ಲಿದ್ದು ಒಂದು ಮಾದರಿ […]

ಚಂಡೀಘಡ್ ನ ರಾಕ್‍ಗಾರ್ಡನ್

ಚಂಡೀಘಡ್ ನ ರಾಕ್‍ಗಾರ್ಡನ್

ನಗರಗಳು ಯಾಂತ್ರಿಕವಾಗಿ ಬೆಳೆಯುತ್ತಾ ಹೋದಂತೆ ಅನೇಕ ಸಮಸ್ಯೆಗಳ ಆಗರಗಳಾಗಿ ಬಿಡುತ್ತಿರುವುದು ವಾಸ್ತವ ಸಂಗತಿಯಾಗಿದೆ. ಹುಚ್ಚಾಪಟ್ಟೆ ಬೆಳೆಯುತ್ತಿರುವ ನಗರಗಳನ್ನು ನೋಡುವಾಗ ಇವುಗಳ ನಿಯಂತ್ರಣವಾಗಬಾರದೇ ಎನಿಸುತ್ತದೆ. ಆದರೂ ಇದೆಲ್ಲದರ ನಡುವೆ ನಗರಗಳಿಗೊಂದು ಪೂರ್ವಯೋಜಿತ ಕ್ರಮವಿದ್ದು ಅದರಂತೆ ರೂಪುಗೊಂಡರೆ ನಗರಗಳು ಸಹ್ಯವಾಗಲೂ ಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಪಂಜಾಬ್‍ನ ಚಂಡೀಘಡ್. ಚಂದೀಘಡ್ ಒಂದು ಸುಂದರವಾದ ನಗರ. ಪೂರ್ವಯೋಜನೆಯೊಡನೆ ಕಟ್ಟಲ್ಪಟ್ಟಿರುವುದು. ಒಟ್ಟು ನಗರವೇ ವಿಶಾಲವಾದ ರಸ್ತೆಗಳಿಂದ, ಸುಸಜ್ಜಿತವಾದ ಕಟ್ಟಡಗಳಿಂದ, ಕೂಡಿದ್ದು ‘ಟ್ರ್ಯಾಫಿಕ್ ಜಾಮ್’ ಗಳಿಂದ ಮುಕ್ತವಾಗಿದೆ. ಬೆಂಗಳೂರಿನ ಜನದಟ್ಟಣೆಯ, ತಲೆ ಚಿಟ್ಟುಹಿಡಿಸುವ […]

ಚೀನಾ ಪ್ರವಾಸ-3: ಈಕೆಯ ಹೆಸರು ‘ಏಪ್ರಿಲ್’

ಚೀನಾ ಪ್ರವಾಸ-3: ಈಕೆಯ ಹೆಸರು ‘ಏಪ್ರಿಲ್’

ಯಾಂಥಾಯ್ ಊರಲ್ಲಿ ಕಾಗೆಗಳು ಕಾಣಲಿಲ್ಲ, ಗುಬ್ಬಿಗಳು ಯಥೇಚ್ಛವಾಗಿ ಕಂಡವು. ಗುಲಾಬಿ ಗಿಡಗಳು ಎತ್ತರವಾಗಿ ಪೊದೆ ಪೊದೆಯಾಗಿ ಬೆಳೆದಿದ್ದು, ಬಹುದೊಡ್ಡ ಗಾತ್ರದ ಹೂಗಳು ಬಿಟ್ಟಿದ್ದವು. ದಾಳಿಂಬೆ ಗಿಡಗಳೂ ಹೂಗಳಿಂದ ತುಂಬಿದ್ದು, ಒಂದೊಂದು ಹೂ ದೊಡ್ಡ ಗುಲಾಬಿಯ ಹೂವಿನಂತಿದ್ದು, ಹೂವಿನ ಆಕಾರವೇ ಮುಂದೆ ಹಣ್ಣಿನ ಸೈಜನ್ನು ಹೇಳುವಂತಿತ್ತು. ದೇಶದ ಉತ್ತರ ಭಾಗದಲ್ಲಿರುವ ಈ ಪ್ರದೇಶ ಭಾರತಕ್ಕೆ ಕಾಶ್ಮೀರವಿದ್ದಂತೆಯಿದೆ. ಚಳಿಗಾಲದಲ್ಲಿ ವಿಪರೀತ ಹಿಮ ಬೀಳುತ್ತದೆ. ನಾವು ಈಗ ನೋಡಿದ ಈ ಗಿಡಗಳ್ಯಾವುವೂ ಚಳಿಗಾಲದಲ್ಲಿರುವುದಿಲ್ಲ ಎಂದು ನನ್ನ ಮಗಳು ಹೇಳಿದಳು. ನನ್ನ ಮಗಳ […]

ಬಳ್ಳಾರಿ ಜಿಲ್ಲೆಯ ಪಕ್ಷಿಧಾಮ ಅಂಕಸಮುದ್ರ

ಬಳ್ಳಾರಿ ಜಿಲ್ಲೆಯ ಪಕ್ಷಿಧಾಮ ಅಂಕಸಮುದ್ರ

ಬಳ್ಳಾರಿ ಜಿಲ್ಲೆ ಬಿರುಬೇಸಿಗೆಗೆ ಹೆಸರುವಾಸಿ. ಅಂತೆಯೇ ಗಣಿನಾಡು ಎಂಬ ಹೆಸರೂ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇವುಗಳ ಮರೆಯಲ್ಲಿಯೇ ವಿದೇಶಿ ಪಕ್ಷಿಧಾಮವಾಗಿ ಹೊಸದಾಗಿ ರೂಪುಗೊಳ್ಳುತಿರುವ ಹಗರಿಬೊಮ್ಮನಹಳ್ಳಿಯ ಅಂಕಸಮುದ್ರದ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಪುಟ್ಟ ಗ್ರಾಮ. ಗ್ರಾಮಕ್ಕೆ ಹೊಂದಿಕೊಂಡಂತೆಯೇ ಇರುವ ಕೆರೆ ವಿವಿಧ ಪಕ್ಷಿಗಳ ಆಶ್ರಯತಾಣವಾಗಿ ಇತ್ತೀಚೆಗೆ ನಿಧಾನವಾಗಿ ರೂಪುಗೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಕೆರೆಯಲ್ಲಿರುವ ಹಲವಾರು ಜಾಲಿಮರಗಳು. ಮರಗಳಲ್ಲಿ ಸುರಕ್ಷಿತವಾಗಿ ಗೂಡು ಕಟ್ಟಲು ಅವಕಾಶವಿರುವುದರಿಂದ ಹಾಗೂ ಕೆರೆಯಲ್ಲಿ ಹೇರಳವಾಗಿ […]

ನಯನ ಮನೋಹರ ಬೆಲಂ ಗುಹೆಗಳು

ನಯನ ಮನೋಹರ ಬೆಲಂ ಗುಹೆಗಳು

ಸ್ನೇಹಿತ ಕೆ. ಎಂ. ವೀರೇಶ್ ‘ಸರ್ ನೋಡುವಂತಿದ್ದರೆ ನಿಸರ್ಗ ನಿರ್ಮಿತ ಬೆಲಂ ಗುಹೆಗಳನ್ನು ನೋಡಿ, ಅದ್ಭುತವಾದ ರಚನಾ ವಿನ್ಯಾಸಗಳನ್ನು ಕಾಣುವಿರಿ’ ಎಂದಾಗ, ಅವೆಂತಹ ಗುಹೆಗಳು ನೋಡೋಣವೆಂದು ಹೊರಟೆ. ಬೆಂಗಳೂರಿನಿಂದ ಸುಮಾರು 330 ಕಿ.ಮೀ ದೂರವಿರುವ ಬೆಲಂ ಗುಹೆಗಳು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿನ ಬೆಲಂ ಎಂಬ ಗ್ರಾಮದ ಬಳಿ ಇವೆ. ಈ ಗುಹೆಗಳನ್ನು ಭಾರತದ ಉಪ-ಖಂಡದಲ್ಲಿನ ಎರಡನೇ ಅತಿದೊಡ್ಡ ಸುಣ್ಣಶಿಲೆಯಿಂದ ನಿರ್ಮಿತವಾದ ನಿಸರ್ಗನಿರ್ಮಿತ ಗುಹೆಗಳೆಂದು ಪರಿಗಣಿಸಲಾಗಿದೆ.  ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿರುವ ಬೆಲಂ ಗುಹೆಗಳು ಪ್ರವೇಶದ್ವಾರದ ಬಲಗಡೆಯೇ ಬುದ್ಧನ ಬೃಹತ್ […]

ಚೀನಾ ಪ್ರವಾಸ-2: ಇಂಗ್ಲಿಷ್ ಬಾರದ ಚೀನಿಯರು

ಚೀನಾ ಪ್ರವಾಸ-2: ಇಂಗ್ಲಿಷ್ ಬಾರದ ಚೀನಿಯರು

ಯಾಂಥಾಯ್ ಒಂದು ಕಡಲತೀರದ ಊರು. ಎರಡು ಸಮುದ್ರ ತೀರಗಳಿವೆ. ಒಂದು ಊರಿನ ನಡುಗಡ್ಡೆಯಲ್ಲಿ ಮತ್ತೊಂದು ಊರಿನ ಒಂದು ಕಡೆಯ ಭಾಗದಲ್ಲಿ ಮೊದಲನೆಯದು ಹಳೆಯ ಮಾದರಿಯ  ಸುಂದರ ತಂಗುದಾಣಗಳನ್ನು ಹೊಂದಿದೆ. ಬ್ರಿಟಿಷ್ ಮಾದರಿಯ ಹೋಟೆಲ್ ಗಳು ಮತ್ತು ಒಂದು ಹಳೆಯ ಲಂಡನ್ ಸ್ಟ್ರೀಟ್ ನ್ನು ಹೋಲುವಂಥ ಉದ್ದನೆಯ ರಸ್ತೆಯಿದೆ. ತೀರ ಪ್ರದೇಶದಲ್ಲಿ ಮಕ್ಕಳಿಗೆ ಸುಂದರವಾದ ಉದ್ಯಾನ, ಆಟದ ವಿವಿಧ ಆಧುನಿಕ   ಪರಿಕರಗಳು ಓಡಾಡಲು ಅಚ್ಚುಕಟ್ಟಾದ ರಸ್ತೆಗಳು ಇವೆ. ಮತ್ತೊಂದು ವಿಶೇಷವೆಂದರೆ ಕಡಲ ಅಂಚಿನ ಸಿಮೆಂಟ್ ಅಂಗಳದಲ್ಲಿ ಪ್ರತಿದಿನ ಸಂಜೆ […]