ಆಟೋಟ

ಆಟೋಟ

ಒಲಿಂಪಿಕ್ ಎಂಬ ಕ್ರೀಡಾ ಉತ್ಸವ.

ಒಲಿಂಪಿಕ್ ಎಂಬ ಕ್ರೀಡಾ ಉತ್ಸವ.

ಒಲಿಂಪಿಕ್ ಕ್ರೀಡಾಕೂಟ ಒಂದು ಅಂತರರಾಷ್ಟ್ರೀಯ ಕ್ರೀಡಾಕೂಟ. ಇದು ಅನೇಕ ಕ್ರೀಡೆಗಳನ್ನು ಒಳಗೊಂಡಿದೆ. ಈ ಕ್ರೀಡಾಕೂಟವನ್ನು ಬೇಸಗೆಯ ಕ್ರೀಡಾಕೂಟ ಹಾಗೂ ಚಳಿಗಾಲದ ಕ್ರೀಡಾಕೂಟಗಳೆಂದು ವರ್ಗೀಕರಿಸಲಾಗಿದೆ. ಎರಡೂ ಕೂಟಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವುದು. ೧೯೯೨ರವರೆಗೆ ಎರಡೂ ಕ್ರೀಡಾಕೂಟಗಳನ್ನು ಒಂದೇ ವರ್ಷದಲ್ಲಿ ನಡೆಸಲಾಗುತ್ತಿತ್ತು. ನಂತರ ಇವುಗಳ ಮಧ್ಯೆ ಎರಡು ವರ್ಷಗಳ ಅಂತರವಿರಿಸಲಾಗಿದೆ. ಕ್ರಿ.ಪೂ. ೭೭೬ರಲ್ಲಿ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮೂಲ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ನಂತರ ಕ್ರಿ.ಶ. ೩೯೩ರವರೆಗೆ ಇದು ಮುಂದುವರೆಯಿತು. ಕಾರಣಾಂತರಗಳಿಂದ ನಿಂತುಹೋದ ಈ ಕ್ರೀಡಾಕೂಟವನ್ನು ಮತ್ತೆ ಪುನರಾರಂಭಿಸುವುದರಲ್ಲಿ […]

ಪುರುಷ ಪ್ರಧಾನ ಅಧಿಪತ್ಯಕ್ಕೆ ಕ್ರೌರ್ಯ ಅನಿವಾರ್ಯ

ಪುರುಷ ಪ್ರಧಾನ ಅಧಿಪತ್ಯಕ್ಕೆ ಕ್ರೌರ್ಯ ಅನಿವಾರ್ಯ

ಹಿಂಸಾತ್ಮಕ ಪ್ರವೃತ್ತಿಯನ್ನು ಮುಕ್ತವಾಗಿ ಪ್ರದರ್ಶಿಸುವ ಯಾವುದೇ ಸಾಂಸ್ಕøತಿಕ ವಿದ್ಯಮಾನವನ್ನು ಆಧುನಿಕ ನಾಗರೀಕ ಸಮಾಜ ಒಪ್ಪಲಾಗುವುದಿಲ್ಲ. ಹಿಂಸೆ ದೈಹಿಕವಾಗಿಯೇ ಇರಬೇಕಿಲ್ಲ. ಅಥವಾ ಬೌದ್ಧಿಕ ಕಸರತ್ತುಗಳಿಗೆ ಸೀಮಿತವಾಗಬೇಕಿಲ್ಲ. ಮಾನವ ಇತಿಹಾಸದ ಅಭ್ಯುದಯದ ಮಾರ್ಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚರಿತ್ರೆಯ ಪ್ರತಿಯೊಂದು ಹಂತದಲ್ಲೂ ಜನಸಂಸ್ಕøತಿಯನ್ನು ನಿಯಂತ್ರಿಸುವ ಶಕ್ತಿಗಳು ಹಿಂಸೆಯ ಭೂಮಿಕೆಯ ಮೇಲೆ ನಿರ್ಮಾಣವಾಗಿರುವುದನ್ನು ಕಾಣಬಹುದು. ಸಮಾಜದ ಕೆಳಸ್ತರದ ಜನಸಮುದಾಯಗಳ ಮೇಲೆ ನಿಯಂತ್ರಣ ಸಾಧಿಸಲು ಮೇಲ್ವರ್ಗಗಳು ಸೃಷ್ಟಿಸಿದ ಸಾಮಾಜಿಕ ಪರಿಸರದಲ್ಲಿ ದೈವೀಕ, ಪೈಶಾಚಿಕ ಶಕ್ತಿಗಳು ಸಾಂಸ್ಕøತಿಕ ಸ್ವರೂಪ ಪಡೆದಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಮಾನವ […]

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ಥಾನ

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ಥಾನ

2016ರ ರಿಯೋ ಒಲಂಪಿಕ್ಸ್‍ನಲ್ಲಿ ಇಬ್ಬರು ಹೆಣ್ಣು ಮಕ್ಕಳು ಭಾರತದ ಧ್ವಜವನ್ನು ಎತ್ತಿ ಹಿಡಿದರು. ಭಾರತಕ್ಕೆ ಕೀರ್ತಿಯನ್ನು ತಂದುಕೊಟ್ಟ ಸಿಂಧು, ಸಾಕ್ಷಿ ಮಲ್ಲಿಕ್ ಹಾಗೂ ದೀಪಾ ಕರಮಾಕರ್ ಬಗ್ಗೆ ಜನರು, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಖ್ಯಾನ ಮಾಡುವುದು, ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಸಾಮಾನ್ಯವಾಯಿತು. ಈ ಸಂದರ್ಭದಲ್ಲಿ ಟಿ.ವಿ. ಚ್ಯಾನಲ್ ಒಂದರಲ್ಲಿ ಮಾಜಿ ಬ್ಯಾಡಮಿಂಟನ್ ಆಟಗಾರ್ತಿ ಅಪರ್ಣಾ ಪೋಪಟ್ ಅವರ ಸಂದರ್ಶನ ಅರ್ಥಗರ್ಭಿತವಾಗಿತ್ತು. ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಹೆಚ್ಚುವರಿ ಭಾರತದ ಮಹಿಳೆಯರು ಛಾಪು ಮೂಡಿಸಲು ಏಕೆ ವಿಫಲರಾಗುತ್ತಾರೆ ಎಂಬ ಪ್ರಶ್ನೆಗೆ […]

ಜೇಟ್ಲಿ ಕ್ಲೀನ್ ಬೋಲ್ಡ್ – ಬಟ್ ನಾಟೌಟ್!!

ಜೇಟ್ಲಿ ಕ್ಲೀನ್ ಬೋಲ್ಡ್ – ಬಟ್ ನಾಟೌಟ್!!

ಅರುಣ್ ಜೈಟ್ಲಿಯವರು ಸದಾಕಾಲ ತಾವು ಮಹಾ ಚಾರಿತ್ರ್ಯವಂತರು ಎಂಬ ಹಮ್ಮಿನಿಂದಲೇ ವ್ಯವಹರಿಸುತ್ತಿದ್ದರು. ಈ ಹಿಂದೆ ಯಾವುದೇ ಹಗರಣಗಳಲ್ಲಿ ಜೈಟ್ಲಿ ಹೆಸರು ಕೇಳಿಬರದಿದ್ದುದು (ಭಾಗಿಯಾಗಿಲ್ಲ ಎಂದರ್ಥವಲ್ಲ; ಸಿಕ್ಕಿಹಾಕಿಕೊಂಡಿರಲಿಲ್ಲ ಎಂದರ್ಥದಲ್ಲಿ) ಇವರ ದಾಷ್ಟ್ರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಜೊತೆಗೆ ಮಾಧ್ಯಮ ನಿರ್ವಹಣೆಯ ಕಲೆ ಚನ್ನಾಗಿ ಕರಗತವಾಗಿದ್ದುದರಿಂದ ಇವರು ಒಂದು ದಶಕಕ್ಕೂ ಹೆಚ್ಚು ಕಾಲ ಮಾಧ್ಯಮಗಳಲ್ಲಿ ಮಿಂಚಿದ್ದೇ ಮಿಂಚಿದ್ದು. ಹೀಗಿದ್ದ ಜೈಟ್ಲಿ ಕೊರಳಿಗೆ ಹಗರಣವೊಂದು ಸುತ್ತಿಕೊಂಡಿದೆ. ಸಾಕ್ಷಾತ್ ಪ್ರಧಾನಿ ಮೋದಿ ಮತ್ತು ಇಡೀ ಕೇಂದ್ರ ಸರ್ಕಾರ ಜೈಟ್ಲಿ ಬೆನ್ನ ಹಿಂದೆ ನಿಂತಿದ್ದರೂ ಕೂಡ […]

ಚಲ ಬಲ ಇರುವವರಿಗೆ ಮಾತ್ರ ಮ್ಯಾರಥಾನ್ 

ಚಲ ಬಲ ಇರುವವರಿಗೆ ಮಾತ್ರ ಮ್ಯಾರಥಾನ್ 

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು, ಓ ನನ್ನ ಚೇತನ ಆಗು ನೀ ಅನಿಕೇತನ- ಈ ವಚನಗಳು ಮ್ಯಾರಥಾನ್ ರಾಷ್ಟ್ರಗೀತೆಗಳು. ಇದೊಂದು ಓಡುವ ಆಟ. ಆರೋಗ್ಯಪಾಠ. ನೂರಕ್ಕೆ ನೂರು ನಮ್ಮ ದೇಹ ಕ್ರಿಯಾಶೀಲವಾಗಿರಬೇಕು ಎಂದರೆ ಇರುವ ಒಂದೇ ಒಂದು ಮಾರ್ಗ ವ್ಯಾಯಾಮ. ಅರ್ಥಾತ್ ಓಟ. ಮ್ಯಾರಥಾನ್ ಆಟದ ಹುಟ್ಟು, ಬೆಳವಣಿಗೆ, ಕ್ರಮಾಗತ ಇತಿಹಾಸದ ಜತೆಯಲ್ಲಿ ಈ ಆಟದಲ್ಲಿ ಪ್ರಭುತ್ವ ಸ್ಥಾಪಿಸಿದ ಕೀನ್ಯಾ, ಇಥಿಯೋಪಿಯಾ ದೇಶಗಳ ಆಟಗಾರರು  ಯಾಕಾಗಿ ದೂರದ ಓಟದಲ್ಲಿ ಮಿಂಚುತ್ತಾರೆ ಎಂಬುದರ ಕುರಿತು ಕುತೂಹಲಕಾರಿ […]

ದೂರ ಓಟದಲ್ಲಿ ಕೀನ್ಯಾ ಕಿಂಗ್ ಏಕೆ?

ದೂರ ಓಟದಲ್ಲಿ ಚಾಂಪಿಯನ್‍ಗಳಾಗಲು ಏನು ಮಾಡಬೇಕು? ಎಷ್ಟು ಓಡಿದರೂ ದಣಿಯದೇ ಇರುವ ಶಕ್ತಿಯ ಗುಟ್ಟು ಆಹಾರದಲ್ಲಿ ಅಡಗಿದೆಯೇ? ಇಲ್ಲವೇ ಓಟಗಾರ ವಾಸಿಸುವ ಪ್ರದೇಶದಲ್ಲಿದೆಯೇ? ಊಟದಲ್ಲಿದೆಯೇ? ಕೀನ್ಯಾದವರೇಕೆ ಮ್ಯಾರಥಾನ್‍ನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ?  ಓಟ ಎಂಬುದು ಶಕ್ತಿಯ ಪ್ರಶ್ನೆ ಅಲ್ಲ; ಅದೊಂದು ಮಾನಸಿಕ ಸಾಮಥ್ರ್ಯದ ಪ್ರಶ್ನೆ ಎಂಬ ವಾದದಲ್ಲಿ ಏನಾದರೂ ತಿರುಳು ಇದೆಯಾ? ಆ ದೇಶದ ಜನಸಂಖ್ಯೆ ಕೇವಲ ನಾಲ್ಕು ಕೋಟಿ ಹತ್ತು ಲಕ್ಷ. ಈ ವಿಷಯದಲ್ಲಿ  ಇಡೀ ವಿಶ್ವಕ್ಕೆ ಹೋಲಿಸಿದರೆ 0.06ನಷ್ಟೂ ಇಲ್ಲ. ಆದರೆ ದೂರ ಓಟದಲ್ಲಿ ಈ […]

ಕ್ರಿಕೆಟ್ ಮತ್ತು ಕ್ರಾಂತಿ

ಈ ಶೀರ್ಷಿಕೆ ಓದಿ ನಿಮಗೆ ಆಶ್ಚರ್ಯವಾಗಬಹುದು. ಕ್ರಿಕೆಟ್‍ಗೂ ಕ್ರಾಂತಿಗೂ ಏನು ಸಂಬಂಧ ಎಂದು ಇಮಾಂ ಸಾಹೇಬರಿಗೂ ಗೋಕುಲಾಷ್ಟಮಿಗೂ ಪ್ರಯಾಸದಿಂದ ಸಂಬಂಧ ಕಲ್ಪಿಸಿದರೂ ಕಲ್ಪಸಬಹುದು, ಆದರೆ  ಕ್ರಿಕೆಟ್‍ಗೂ ಕ್ರಾಂತಿಗೂ ಯಾವ ನಂಟು ಎಂದು ಸೋಜಿಗಪಡುವುದು ಸಹಜವೇ.  ಕ್ರಿಕೆಟ್ ಇಂಗ್ಲೆಂಡ್ ದೇಶದಲ್ಲಿ ಸುಮಾರು ಐದಾರು ಶತಮಾನಗಳ ಹಿಂದೆ ಹುಟ್ಟಿತು. ಆಗ ಅದರ ಸ್ವರೂಪ ಈಗಿನದಕ್ಕಿಂತ ತೀರಾ ಭಿನ್ನವಾಗಿತ್ತು ಎಂದು ಹೇಳಬೇಕಾದ ಆವಶ್ಯಕತೆಯೇ ಇಲ್ಲ. ಅಗಿನ ಕ್ರಿಕೆಟ್‍ಗೆ ವಿಕೆಟ್‍ಗಳೇ ಇರಲಿಲ್ಲ. ಈ ಆಟ ಕುರಿಕಾಯುವವರ ಗಮನ ಸೆಳೆದ ಮೇಲೆ ಕೆಲವು ಮಾರ್ಪಾಟುಗಳಾದುವು. […]

ಯುಗಾದಿಗೆ ರಂಗೇರುವ ಆಟಗಳು

ಯುಗಾದಿಗೆ ರಂಗೇರುವ ಆಟಗಳು

ಗ್ರಾಮೀಣ ಭಾಗದ ಯುಗಾದಿಯನ್ನು ನೆನಪಿಸಿಕೊಂಡಾಗ ಅದರ ಮೈಗೆ ಕೆಲವಾದರೂ ಜನಪದ ಆಟಗಳು ಅಂಟಿಕೊಳ್ಳುತ್ತವೆ. ಹಾಗೆ ಅಂಟಿಕೊಂಡ ಆಟಗಳನ್ನು ಬಿಡಿಸಿ ನೋಡತೊಡಗಿದರೆ ಆ ಆಟಗಳ ಝಲಕ್ಕು ರೋಮಾಂಚನಗೊಳಿಸುತ್ತದೆ. ಈಗಲೂ ಗ್ರಾಮೀಣ ಭಾಗದ ಯುಗಾದಿಗೆ ಅಂತಹ ಆಟಗಳು ರಂಗೇರುತ್ತವೆ. ದಶಕದ ಹಿಂದೆ ಸರಿದರೆ ಈ ಅಬ್ಬರ ಕೆಲ ಪ್ರದೇಶಗಳಲ್ಲಿ ಮಂಕಾದರೂ, ಮತ್ತೆ ಕೆಲವು ಪ್ರದೇಶಗಳಲ್ಲಿ ಹೊಸ ಚಲನೆ ಪಡೆದಿವೆ. ಅಂತಹ ಆಟಗಳ ಮೈದಡವಿ ಮಾತನಾಡಿಸಿದರೆ, ಅವುಗಳು ತಮ್ಮ ಇರುವಿಕೆಯನ್ನು ಪಿಸುಮಾತಲ್ಲಿ ಹೇಳಬಲ್ಲವು. ನಾವು ಕಿವಿತೆರೆದು ಕೇಳಬೇಕಷ್ಟೆ. ಪ್ರತಿ ಹಬ್ಬಗಳಲ್ಲಿ ಮೈದಳೆವ […]