By admin on February 2, 2016
ಊರುಕೇರಿ

‘ಹೆಣ್ಮಗ್ಳಾಗಿ ನಾನು ಮನಿನಾಗ ಕೆಲ್ಸ ಮಾಡ್ಬೇಕು. ಹೊರಗೂ ಕೆಲ್ಸ ಮಾಡ್ಬೇಕು. ಈ ಕೆಲ್ಸ ಮಾಡೋಕ ಮೊದ್ಲು ಬೇಲ್ದಾರಿ ಕೆಲ್ಸಕ ಹೋತಿದ್ದೆ. ನಾನು ಈ ಕೆಲ್ಸಕ ಬಂದು ಎಂಟು ವರ್ಷ ಆತು. ಮುನ್ನೂರು ರೂಪಾಯಿನಿಂದ ಶುರು ಮಾಡೀನಿ. ಮನಿನಾಗ ಕಷ್ಟ ಇತ್ತು ಏನೋ ಪರ್ಮನೆಂಟ್ ಆಗ್ಬಹುದು ಅಂತ ಆಸೆ ಇತ್ತು. ಮನಿ ಕೆಲ್ಸ ಮಾಡಿದ್ರೆ, ಬೇಲ್ದಾರಿ ಕೆಲ್ಸ ಮಾಡಿದ್ರೆ ಯಾವಾಗಾದ್ರೂ ತೆಗಿಬೋದು ಅಂದ್ಕೊಂಡು ಈ ಕೆಲ್ಸ ಪರ್ಮನೆಂಟ್ ಆದ್ರೆ, ರಿಟೈಡ್ ಆದ್ರೂ ರೊಕ್ಕ ಬರ್ತೈತಿ. ನಮ್ಗಿಲ್ಲ ಅಂದ್ರೆ ಮಕ್ಳಿಗಿ […]
By admin on January 22, 2016
Uncategorized, ಊರುಕೇರಿ

ಸಮಾಜದಲ್ಲಿ ಅತ್ಯಂತ ನಿಕ್ರುಷ್ಟ ಜೀವನ ನಡೆಸುವವರು ಸ್ವಚ್ಚತಾ ಕಾರ್ಮಿಕರು. ಅವರ ಬಗೆಗೆ ಕಾಳಜಿ ತೋರಿಸದ ಸಮಾಜ ಅವರ ದುಡಿಮೆಯನ್ನು ಮಾತ್ರ ದೋಚುತ್ತಿದೆ. ದುಡಿದು ದುಡಿದು ಬದುಕನ್ನೇ ಕೊನೆಗಾಣಿಸಿಕೊಳ್ಳುವ ಕತೆಯನ್ನು ಅವರದೇ ಮಾತುಗಳಲ್ಲಿ ನಿರೂಪಿಸಿದ್ದಾರೆ ಸಂಶೋಧಕಿಯಾದ ನೇತ್ರಾವತಿ ಕೋಲಾರ ಅವರು. ಇದು ಕೆಲವು ಕಂತುಗಳಲ್ಲಿ ಇಲ್ಲಿ ಪ್ರಕಟವಾಗಲಿದೆ. ನಡೆ 1 : ‘ನನ್ನ ಹೆಸ್ರು ಎಮುನೂರಮ್ಮ. ನಾವು ಚಲುವಾದಿಗಳು. ನನಗಿ ಮೂರು ಜನ ಹೆಣ್ಣು ಮಕ್ಳು ಅದಾರ. ಒಬ್ಳಿಗಿ ಮದಿವಿ ಮಾಡಿಕೊಟ್ಟೀನಿ. ಒಬ್ಳು ಸತ್ತೋಗ್ಯಾಳ, ಒಬ್ಳು ಮನಿನಾಗ ಕೆಲ್ಸ ಮಾಡ್ತಾಳ. […]
By admin on January 1, 2016
atrocity on dalits
ಊರುಕೇರಿ

ದಲಿತರು ಊರು, ಕೇರಿ, ಸರ್ಕಲ್ಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಫಲಕ, ಪ್ರತಿಮೆಗಳನ್ನು ಅಳವಡಿಸಿ ಸ್ವಾಭಿಮಾನ ಸಂಕೇತವೆಂಬತೆ ತಲೆ ಎತ್ತಿ ಬದುಕುತ್ತಿದ್ದಾರೆ. ಎಲ್ಲೆಲ್ಲಿ ಅಂಬೇಡ್ಕರ್ ಪ್ರತಿಮೆ, ನಾಮಫಲಕಗಳಿಗೆ ಧಕ್ಕೆಆಗಿದೆಯೋ ಆಗ ದಲಿತರ ಸ್ವಾಭಿಮಾನಕ್ಕೂಧಕ್ಕೆಉಂಟಾಗಿದೆ.ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ದಲಿತರ ಮೇಲೆ ನಿರಂತರ ದಮನಗಳ ಸರಣಿ ಮುಂದುವರೆದಿದೆ. ಅಂದು ಡಿಸೆಂಬರ್ 23, 2015. ಗ್ರಾಮದಲ್ಲಿ ವಾರದ ಸಂತೆ. ಮಾರುಕಟ್ಟೆ ಕೊನೆಯ ಭಾಗ, ಕೇರಿಯ ಆರಂಭದಲ್ಲಿ ಕಳೆದ ಆರು ವರ್ಷಗಳ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಫಲಕ ಅಳವಡಿಸಲಾಗಿದೆ. […]
By admin on December 1, 2015
kaadugollaru
ಊರುಕೇರಿ

ಕಾಡುಗೊಲ್ಲ ಸಮುದಾಯವು ಪಶುಪಾಲನೆ ಮತ್ತು ಕೃಷಿ ಪ್ರಧಾನ ಬುಡಕಟ್ಟು ಸಮುದಾಯವಾಗಿದೆ. ಮೂಲಭೂತವಾಗಿ ಗೊಲ್ಲ ಎಂಬ ಹೆಸರೇ ಪಶುಪಾಲನಾ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿರುವುದನ್ನು ಸೂಚಿಸುತ್ತದೆ, ಗೊಲ್ಲ/ಗೊವಾಳಿಗ ಅಂದರೆ ಗೋವುಗಳನ್ನು ಕಾಯುವವರು ಎನ್ನುವುದನ್ನು ವಾಚ್ಯವಾಗಿ ದ್ವನಿಸುತ್ತದೆ. ನಮ್ಮ ಜನರು ವೃತ್ತಿಯನ್ನೇ ಆಚರಣೆಯಲ್ಲಿ ತಂದಂಥಹವರು . ಇಲ್ಲಿ ಇರುವ ಗೂಡಿನ ಸುತ್ತಾ ಮುತ್ತಾ ಎಂಬ ಪರಿಭಾಷೆಯು ನಮ್ಮ ಜೀವನ ಧರ್ಮ ಮತ್ತು ಸಂಸ್ಕøತಿಯನ್ನು ಸೂಚಿಸುತ್ತದೆ. ಗೂಡು ಎಂದರೆ ನಮ್ಮ ಜನರಲ್ಲಿ ಮೂರು ಅರ್ಥಗಳಿವೆ. ಒಂದು ನಾವು ವಾಸಿಸುವ ‘ಸೂರು’. ಇದು ಸಾಮಾನ್ಯವಾಗಿ ಇತರರಿಂದ […]
By admin on November 16, 2015
migration
ಊರುಕೇರಿ

ರಾಜ್ಯದ ಉದ್ಯೋಗ ಖಾತ್ರಿಯೋಜನೆ ಬಡವರ ಪಾಲಿಗಿಲ್ಲ ಎನ್ನುವುದಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ನವಲಿ ತಾಂಡದ ಜನ ಗುಳೆ ಹೋಗಿದ್ದೆ ಇದಕ್ಕೆ ಸಾಕ್ಷಿ. ಈ ಊರಿಗೆ ಭೇಟಿ ನೀಡಿದಾಗ ಗುಳೆ ಹೋದ ಕುಟುಂಬಗಳಲ್ಲಿ ಉಳಿದ ವಯೋವೃದ್ಧರು, ಮಕ್ಕಳ ಆತಂಕಗಳು ಇನ್ನೊಂದು ಕರಾಳ ಮುಖವನ್ನು ತೋರಿಸಿವೆ. `ಕೆಲ್ಸ ಮಾಡಿದ್ದು ಖಾತ್ರಿಯಾದ್ರೂ ಕೂಲಿ ಸಿಗ್ಲಿಲ್ಲ, ಇನ್ನ ಈ ವರ್ಷ ಮಳಿ, ಬೆಳಿ ಅಷ್ಟಕ್ಕಷ್ಟ. ಕಾಂಕ್ರೀಟ್ ಹಾಕಿ ಎಷ್ಟು ದಿನ ಅಂತಾ ಬದುಕೋಕಾಗುತ್ತ, ನಮ್ಗ ದುಡಿದ್ರ ಹೊಟ್ಟಿಗಿ ಹಿಟ್ಟು ಸಿಗ್ತೈತಿ, ಇಲ್ಲಂದ್ರ […]
By admin on October 1, 2015
ಊರುಕೇರಿ

ಅವತ್ತು ನಮ್ಮೂರಲ್ಲಿ ಪ್ರಶಾಂತ ಆಡೂರ್ ಅಭಿಮಾನಿ ಸಂಘದ ವಾರ್ಷಿಕೋತ್ಸವ. ಅದರ ಆಜೀವ ಅಧ್ಯಕ್ಷನಾದ ನಾನು, ಕಾರ್ಯದರ್ಶಿ ವಸೂ, ಖಜಾಂಚಿ ರಷೀದು, ಕಾನೂನು ಸಲಹೆಗಾರ ಇಸ್ಮಾಯಿಲ್ ಮುಂತಾದವರೆಲ್ಲ ಹೊಸ ಬಟ್ಟೆ ತೊಟ್ಟು ನಗು ನಗುತ್ತಾ ಓಡಾಡಿಕೊಂಡಿದ್ದೆವು. `ಒಂದರಾಗ ಒಂದು ಮುಗದು ಹೋಗಲಿ’ ಅಂತ ಆಡೂರ್ ಅವರು ತಮ್ಮ ಮಗನ ಮುಂಜಿ, ಮಗಳ ಬರ್ಥಡೇ ಹಾಗೂ ಅವರ ತಾತನ ಶತ ಸಹಸ್ರ ಚಂದ್ರ ದರ್ಶನ, ಎಲ್ಲಾ ಕೂಡಿಯೇ ಇಟ್ಟುಕೊಂಡಿದ್ದರು. ಇಷ್ಟೆಲ್ಲಾ ಮಾಡಿದಾಗ ಸತ್ಯನಾರಾಯಣ ಪೂಜೆ ಮಾಡದೇ ಇದ್ದರೆ ಹೇಗೆ […]
By admin on October 1, 2015
ಊರುಕೇರಿ

ಗಂಡನ ಮನೆಯಿಂದ ತಾಯಿಯ ಮನೆಗೆ ಹೋದಳು ಗಂಡ ಹೆಂಡತಿಯ ಮದ್ಯೆ ಯಾವ ತಕರಾರು ಇತ್ತೆಂಬುದು ಯಾರಿಗೂ ಗೊತ್ತಿಲ್ಲ ಮತ್ತು ಅದನ್ನು ಅವಳು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಆದರೆ ಹಾಲುಗೆನ್ನೆಯ ಹಸುಗೂಸುಗಳಿಬ್ಬರನ್ನು ಗಂಡನ ಮನೆಯಲ್ಲಿ ಬಿಟ್ಟು ತವರು ಮನೆಗೆ ಹೋಗುತ್ತಿರುವುದನ್ನು ನೋಡಿ ಗಂಡ ಮತ್ತು ಹೆಂಡತಿಯ ಮದ್ಯೆ ಯಾವುದೋ ತಕರಾರು ಇರಬಹುದೆಂದು ಅಕ್ಕ-ಪಕ್ಕದವರು ಭಾವಿಸಿದ್ದರು. ಚಿತ್ರದುರ್ಗ ತಾಲ್ಲೂಕಿನ ಚಿಕ್ಕೇನಹಳ್ಳಿಯೇ ಅವಳ ಗಂಡನ ಗ್ರಾಮ, ಈ ಗ್ರಾಮ ಚಿತ್ರದುರ್ಗದಿಂದ ಪಶ್ಚಿಮಕ್ಕೆ 30 ಕಿ.ಮೀ. ದೂರದಲ್ಲಿದೆ. ಅವಳ ಹುಟ್ಟೂರು ವಿಜಾಪುರ ಇದು ಚಿಕ್ಕೇನಹಳ್ಳಿಯಿಂದ […]
By admin on August 21, 2015
ಊರುಕೇರಿ

ಚಿಕ್ಕಮಗಳೂರು ಜಿಲ್ಲೆ ವಡ್ಡರಹಳ್ಳಿ: ದಲಿತರ ಮೇಲಿನ ಸಾಮಾಜಿಕ ಬಹಿಷ್ಕಾರ – ಸತ್ಯಶೋಧನಾ ಸಮಿತಿಯ ಚುಟುಕು ವರದಿ ಕರ್ನಾಟಕದಲ್ಲಿ ದಲಿತ ಸಮುದಾಯದ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ಬಹಿಷ್ಕಾರಗಳು ಮುಂದುವರೆಯುತ್ತಲೇ ಇವೆ, ಇತ್ತೀಚೆಗಷ್ಟೆ ಚಿಕ್ಕಮಗಳೂರು ಜಿಲ್ಲೆ ವಡ್ಡರಹಳ್ಳಿಯಲ್ಲಿನ ಮಾದಿಗ ಸಮುದಾಯದ ಎರಡು ಕುಟುಂಬಗಳ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ಮಾದ್ಯಮಗಳಲ್ಲಿ ಪ್ರಸಾರವಾಗಿತ್ತು. ಸ್ವಾಭಿಮಾನಿ ದಲಿತ ಶಕ್ತಿ, ಜಾತಿ ವಿನಾಶ ವೇದಿಕೆ ಮತ್ತು ಚಿಕ್ಕಮಗಳೂರಿನ ಪ್ರಗತಿಪರ ಚಿಂತಕರ ವೇದಿಕೆಗಳ ಸದಸ್ಯರು, ಮಾಧÀ್ಯಮದ ಪ್ರತಿನಿಧಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ನಿಜಸಂಗತಿಗಳನ್ನು ಶೋಧಿಸಲಾಯಿತು. […]