ಊರುಕೇರಿ

ಊರುಕೇರಿ

ದಲಿತ ಪದಕಥನ -6 : ‘ಅವನಿಗೆ ಯಮಲೋಕ ಕಾಣಿಸ್ದೆ ಬಿಡುದಿಲ್ಲಾ’

ದಲಿತ ಪದಕಥನ -6 : ‘ಅವನಿಗೆ ಯಮಲೋಕ ಕಾಣಿಸ್ದೆ ಬಿಡುದಿಲ್ಲಾ’

ಯಮಲೋಕ ‘ಅವನಿಗೆ ಯಮಲೋಕ ಕಾಣಿಸ್ದೆ ಬಿಡುದಿಲ್ಲಾ’ ಎಂದು ನಮ್ಮಪ್ಪ ನನ್ನನ್ನು ಬಹಳಷ್ಟು ಸಲ ಹೊಡೆದು ಬಡಿದು ಸತಾಯಿಸುತ್ತಿದ್ದ. ಅಪ್ಪನ ಹಿಂಸೆಯೇ ದೊಡ್ಡ ಯಮಲೋಕವಾಗಿತ್ತು. ‘ಮನೆನೇ ಯಮಲೋಕ ಮಾಡಿದ್ದೀಯಲ್ಲೊ’ ಎಂದು ತಾತ ನನ್ನ ತಂದೆಯ ಜೊತೆ ಯಾವತ್ತೂ ತಗಾದೆ ತೆಗೆಯುತ್ತಿದ್ದ. ‘ಸಂಸಾರನೇ ಯಮಲೋಕವಾದ ಮ್ಯಾಲೆ ಮತ್ತಿನ್ಯಾವ ಯಮಲೋಕ ಇದ್ದಾದೂ’ ಎಂದು ನನ್ನ ತಾಯಿ ಹತಾಶೆಯಲ್ಲಿ ನುಡಿಯುತ್ತಿದ್ದಳು. ‘ವಲ್ಗೇರಿನೇ ಒಂದೆಮಲೋಕ’ ಎಂದು ಹೊರಗಿನವರು ವಿಷಾದದಲ್ಲಿ ಹೇಳುವುದಿತ್ತು. ಪಾಪಿಗಳ ಲೋಕ ಯಮಲೋಕ ಎಂದು ಹೇಳುತ್ತಲೇ ಇದ್ದಿದ್ದರಿಂದ ನಮ್ಮ ಕೇರಿಯೇ ಒಂದು ಯಮಲೋಕವಾಗಿರುವಂತೆ […]

ದಲಿತ ಪದಕಥನ -5 :ರಾತ್ರಿ ಎಂದರೆ ನಮ್ಮ ಪಾಲಿಗೆ ಒಂದು ಕನಸು

ದಲಿತ ಪದಕಥನ -5 :ರಾತ್ರಿ ಎಂದರೆ ನಮ್ಮ ಪಾಲಿಗೆ ಒಂದು ಕನಸು

ರಾತ್ರಿ ರಾತ್ರಿ ಎಂದರೆ ನಮ್ಮ ಪಾಲಿಗೆ ಒಂದು ಕನಸು, ಒಂದು ನಿರಾಳ ನಿದ್ದೆ, ಅಂಗಳದ ಪರಸಂಗದ ಬೆಳದಿಂಗಳು. ಸುಖ-ದುಃಖದ ಹಾಡುಪಾಡು ಆಗಿತ್ತು. ಹಗಲು ನಮಗೆ ಅಷ್ಟೇನು ಆಪ್ತವಾಗಿರಲಿಲ್ಲ. ಹೊತ್ತು ಮುಳುಗಿದಾಗಲೇ ಕೇರಿಯಲ್ಲಿ ರಾತ್ರಿಯು ಸಡಗರವಾಗಿ ಇಳಿದುಬರುತ್ತಿದ್ದುದು. ಕೂಲಿ ಮಾಡಿ ಬಂದು ಲಗು ಬಗೆಯಲ್ಲಿ ಸಾಧ್ಯವಾದದ್ದನ್ನು ಬೇಯಿಸಿ ಉಂಡು ಮಲಗುವಾಗ ರಾತ್ರಿಯ ತಾರೆಗಳ ಆಕಾಶವು ನಮ್ಮ ಪಾಲಿಗೆ ರಮ್ಯ ಮಾಂತ್ರಿಕ ಸ್ವರ್ಗವಾಗಿ ಕಾಣುತ್ತಿತ್ತು. ಇಡೀ ಕೇರಿ ದಣಿದು ಬಂದು ರಾತ್ರಿಯ ತೆರೆಯನ್ನು ಹೊದ್ದುಕೊಂಡು ಮಲಗಿ ಬಿಡುತ್ತಿತ್ತು. ಕೆಲವೊಮ್ಮೆ ಅದೇ […]

ಕನಕ ನಡೆ ಮತ್ತು ಪುರೋಹಿತಶಾಹಿಗಳ ಬುದ್ಧಿಮಾಲಿನ್ಯ

ಕನಕ ನಡೆ ಮತ್ತು ಪುರೋಹಿತಶಾಹಿಗಳ ಬುದ್ಧಿಮಾಲಿನ್ಯ

ವಿಶ್ವದ ಯಾವುದೇ ಭಾಗದಲ್ಲಿ ಸಾಮಾನ್ಯವಾಗಿ ಮಾಲಿನ್ಯ ಎಂದರೆ ಪರಿಸರ ಮಾಲಿನ್ಯ, ವಾಯು, ಜಲ, ಶಬ್ದ ಮಾಲಿನ್ಯ ಇಷ್ಟು ಮಾತ್ರವೇ ಚರ್ಚೆಗೊಳಗಾಗುತ್ತವೆ. ನಿಘಂಟಿನಲ್ಲೂ ಸಹ ಈ ಪದಗಳನ್ನು ಮೀರಿದ ವ್ಯಾಖ್ಯಾನವನ್ನು ಕಾಣಲಾಗುವುದಿಲ್ಲ. ಆದರೆ ಭಾರತದಲ್ಲಿ ಮಾತ್ರ ಬೌದ್ಧಿಕ ಮಾಲಿನ್ಯ ಮತ್ತು ಸ್ಪರ್ಶ ಮಾಲಿನ್ಯ ಎಂಬ ಎರಡು ವಿದ್ಯಮಾನಗಳು ಕಂಡುಬರುತ್ತವೆ. ಮಾಲಿನ್ಯ ಮತ್ತು ಶುದ್ಧೀಕರಣ ಒಂದು ಸಾರ್ವತ್ರಿಕ ವಿದ್ಯಮಾನವಾಗಿರುತ್ತದೆ. ಮಲಿನಗೊಳಿಸುವುದು ಹೇಗೆ ಸಕಲ ಜನರ ವರ್ತನೆಯಾಗಿರುತ್ತದೋ ಹಾಗೆಯೇ ಶುದ್ಧೀಕರಣವೂ ಸಹ ಎಲ್ಲರ ಕರ್ತವ್ಯವಾಗಿರುತ್ತದೆ. “ ನಾನು ಕಸ ಬಿಸಾಡುತ್ತೇನೆ ನೀನು […]

ಹಳ್ಳಿಗಳು ಜಾತಿ ಪೋಷಣೆ – ಶೋಷಣೆಯ ಕೇಂದ್ರಗಳು

ಹಳ್ಳಿಗಳು ಜಾತಿ ಪೋಷಣೆ – ಶೋಷಣೆಯ ಕೇಂದ್ರಗಳು

ಜಾತಿ ಎನ್ನುವುದು ಇಂಡಿಯಾದ ಮಟ್ಟಿಗೆ ಒಂದು ಕ್ರೂರ ವಾಸ್ತವ!ವೇದಕಾಲದ ವರ್ಣಾಶ್ರಮ ವ್ಯವಸ್ಥೆಯೇ ಇದರ ಮೂಲವಾಗಿದೆ. ಈ ವರ್ಣ ವ್ಯವಸ್ಥೆಯಲ್ಲಿ ನಾಲ್ಕು ವರ್ಣಗಳನ್ನು. ಬ್ರಾಹ್ಮಣ, ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎಂದು ಗುರುತಿಸಲಾಗಿದೆ. ಹೀಗೆ ಅನಾದಿಕಾಲದಿಂದಲೂ ಭಾರತೀಯ ಸಮಾಜವನ್ನು ವರ್ಣಗಳ ಹೆಸರಲ್ಲಿ ಒಡೆದ ಮಹನೀಯರುಗಳಿಗೆ ಐದನೆಯದಾದ ದಲಿತ ಎನ್ನುವ ಸಮುದಾಯ ಸಹ ಮನುಷ್ಯರನ್ನೊಳಗೊಂಡಿದೆ ಎಂದು ಅನಿಸದೇ ಹೋದದ್ದೇ ಈ ನೆಲದ ದುರಂತ.    ಇಲ್ಲಿ ಜಾತಿಯೆನ್ನುವುದು ವ್ಯಕ್ತಿಯ ಹುಟ್ಟಿನ ಮೂಲವನ್ನು, ಅವನ ಕುಲಕಸುಬನ್ನೂ ಅವಲಂಬಿಸಿ ಗುರುತಿಸಲಾಗುತ್ತಿದೆ. ಇವತ್ತಿಗೂ ಇಂಡಿಯಾದ ಹಳ್ಳಿಗಳಲ್ಲಿ […]

ದಲಿತ ಪದಕಥನ -2 : ಜಾತಿ ಹೀನನ ಮನೆಯ ಜೋತಿ ತಾ ಹೀನವೇ

ದಲಿತ ಪದಕಥನ -2 : ಜಾತಿ ಹೀನನ ಮನೆಯ ಜೋತಿ ತಾ ಹೀನವೇ

ಸೊಡರು ದೀಪ ಎಂದು ಜೋತಿಗೆ ಪರ್ಯಾಯವಾಗಿ ಬಳಸುವುದಿತ್ತಾದರೂ ಜೋತಿ ಪದವು ಜನಪದ ಸಾಹಿತ್ಯದ ವೇಳೆ, ಆಚರಣೆಗಳ ಸಂದರ್ಭದಲ್ಲಿ ವಿಶೇಷವಾಗಿ ಬಳಕೆಯಾಗುತ್ತಿತ್ತು. ದೀಪ ಮತ್ತು ಜೋತಿಗೆ ಪರ್ಯಾಯವಾಗಿ ಮತ್ತೂ ಎರಡು ಪದಗಳು ನಮ್ಮಲ್ಲಿದ್ದವು ‘ಸೊಡ್ಲು’ ಎನ್ನುವ ಈ ಪದ ಸೊಡರು ಮೂಲದಿಂದ ಬಂದಿರಬೇಕು. ಸೊಡ್ಲು ಗೂಡು ಎಂಬ ನುಡಿಗಟ್ಟು ದೀಪ ಇರಿಸುವ ಗೂಡಿಗೆ ಸಮಾನಾಂತರವಾಗಿತ್ತು. ‘ಸೊಡ್ಲಸ್ಸು’ ಎಂದರೆ ದೀಪ ಹಚ್ಚು ಎಂಬ ಸೂಚನೆ. ‘ಸೊಡ್ಲಸ್ಸು ವೊತ್ತಾಯ್ತು’ ಎಂದರೆ ‘ಮೊಕ್ಕತ್ಲಾಯ್ತು’ ಎಂದರ್ಥ. ಮೊಕ್ಕತ್ಲು ಎಂದರೆ ಮುಖ ಅಸ್ಪಷ್ಟವಾಗಿ ಕಾಣುವಷ್ಟು ಮಾತ್ರ […]

ಇದ್ದಲಿನಲಿ ಅನ್ನ ಕೆದಕೋರು

ಇದ್ದಲಿನಲಿ ಅನ್ನ ಕೆದಕೋರು

ಬಯಲುಸೀಮೆಯಲ್ಲೂ ಚಿರತೆ ಕಾಟ ಪ್ರಾರಂಭವಾಗಿತ್ತು.   ನಾನು ಹೋಗುವ ದಾರಿ ತುಂಬಾ ಸೀಮೇಜಾಲಿ ಕಾಡು ಬೇರೆ, ಅದೊಂದು ದಿನ ಆ ಜಾಲಿ ನಡುವಿನಿಂದ ಟೆಂಟುಗಳು ಕಾಣಿಸಿಸಿದವು.  . ಇದ್ದಲು ಮಾಡುವ ಅಲೆಮಾರಿ ಬುಡಕಟ್ಟುಗಳು,  ಸಂಜೆ ಅವರಲ್ಲಿಗೆ ಹೋದೆ ಮೊದಲ ದಿನ ಮೌನ! ದಿನ ಕಳೆದಂತೆ ಪಂವಾರ್,  ಮೋರೆ,  ಇರವ ಪರಿಚಯವಾದರು.  . ಆದಿವಾಸಿಗಳೆಂದೇ ಗುರುತಿಸಿಕೊಳ್ಳುವ ಇವರ ಪೂರ್ವಾಪರ ಹುಡುಕುತ್ತಾ ಹೊರಟರೆ ತಲೆಕೆಟ್ಟು ಹೋಗಿತ್ತು.  . ಪಂವಾರ್ ಬಗ್ಗೆ.  . ಆರ್.ಇ. ಎಂಥೋವನ್ ಈಗಾಗಲೇ ದಾಖಲಿಸಿದ್ದಾರೆ.  . ಭಿಲ್ ಬುಟಕಟ್ಟಿನ […]

ಅಪರಾಧಿ ಗುರುತಿನ ಪೊರೆ ಕಳಚುತ್ತಿರುವ ಗಂಟಿಚೋರರು.

ಅಪರಾಧಿ ಗುರುತಿನ ಪೊರೆ ಕಳಚುತ್ತಿರುವ ಗಂಟಿಚೋರರು.

ಸ್ವತಂತ್ರ್ಯ ಬಂದು 69 ವರ್ಷವಾದರೂ ಕೆಲವು ಚಿಕ್ಕಪುಟ್ಟ ಸಮುದಾಯಗಳ ಸಮಗ್ರ ಮಾಹಿತಿ ಅಲಭ್ಯವಾಗಿದೆ. ಹೀಗೆ ಸಮುದಾಯಗಳ ಸರಿಯಾದ ಮಾಹಿತಿಗಳೇ ಅಲಭ್ಯವಾದಾಗ ಸರಕಾರ ಅಥವಾ ಪ್ರಭುತ್ವಗಳು ಕೈಗೊಳ್ಳುವ ಜನಕಲ್ಯಾಣದ ಯೋಜನೆಗಳು ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಇಂದು ಬದಲಾದ ಕಾಲಘಟ್ಟದ ಸೆಳೆತಕ್ಕೆ ಸಿಕ್ಕಿ ಅಲ್ಪಸಂಖ್ಯಾತ ಸಮುದಾಯಗಳು ತಬ್ಬಲಿತನವನ್ನು ಅನುಭವಿಸುತ್ತಾ ಅನಾಥ ಪ್ರಜ್ಞೆಯಲ್ಲಿ ಬದುಕುತ್ತಿವೆ. ಇಂತಹ ಸಂದರ್ಭದಲ್ಲಿ ಸಮುದಾಯಗಳು ಪ್ರಜಾಪ್ರಭುತ್ವದ ಬಗೆಗೆ ಭರವಸೆ ಇಲ್ಲದೆ ತಮ್ಮ ಪಾಡಿನ ಬದುಕೇ ನಿಜವೇನೋ ಎನ್ನುವ ಸ್ಥಿತಿಗೂ ಬಂದಿವೆ. ಹಾಗಾಗಿ ಸಮುದಾಯಗಳ ಅಧ್ಯಯನ ಪರೋಕ್ಷವಾಗಿ […]

ಸ್ಮಾರಕಗಳಲ್ಲಿ ಅಂಬೇಡ್ಕರ್ ಮತ್ತು ದಲಿತ ಬುದ್ಧಿಜೀವಿಗಳು

ಸ್ಮಾರಕಗಳಲ್ಲಿ ಅಂಬೇಡ್ಕರ್  ಮತ್ತು  ದಲಿತ ಬುದ್ಧಿಜೀವಿಗಳು

(ಅಂಬೇಡ್ಕರ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ಗೆ ಭೇಟಿ ನೀಡಿದ ಸಂದರ್ಭದ ಸ್ಮರಣಾರ್ಥ ಜೂನ್ 16, 2016ರಂದು ನೀಡಿದ ಉಪನ್ಯಾಸ- ಅಂಬೇಡ್ಕರ್ ಅವರ ಪ್ರಸ್ತುತತೆ ಇಂದು ಮತ್ತು ನಾಳೆ) ಡಾ ಬಿ ಆರ್ ಅಂಬೇಡ್ಕರ್ ಇತಿಹಾಸ ಎಂದಿಗೂ ತಮ್ಮನ್ನು ಮರೆಯಲು ಬಿಡುವುದಿಲ್ಲ ಎಂದು ಗಾಂಧೀಜಿ ಒಮ್ಮೆ ಹೇಳಿದ್ದರು. ಅಂಬೇಡ್ಕರ್ ಸಾವಿನ ನಂತರದ ಒಂದು ದಶಕದಲ್ಲಿ ಇತಿಹಾಸ ಅವರನ್ನು ಕಡೆಗಣಿಸಲು ಯತ್ನಿಸಿದ್ದು ವಾಸ್ತವ. ಅಂಬೇಡ್ಕರರ ಮಗ ಯಶವಂತರಾವ್ ಅಂಬೇಡ್ಕರ್ ಮಾವ್‍ನಿಂದ ಮುಂಬಯಿಯವರೆಗೆ ಪಾದಯಾತ್ರೆ ನಡೆಸಿ, ಹಾದಿಯಲ್ಲಿನ ಬಡ ದಲಿತರಿಂದ ಅಲ್ಪಸ್ವಲ್ಪ […]

ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜವೈಭವದ ಮೆರವಣಿಗೆಯೇಕೆ?

ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜವೈಭವದ ಮೆರವಣಿಗೆಯೇಕೆ?

ಭಾರತದ ರಾಜಕಾರಣದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗುವ ವಿಚಾರಗಳೆಂದರೆ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ. ಈ ಎರಡರಲ್ಲಿ ಅನೈತಿಕ ರಾಜಕಾರಣಕ್ಕೆ ಮೂಲ ಯಾವುದು ಎಂಬ ಪ್ರಶ್ನೆ ಉದ್ಭವಿಸಿದಾಗ ಆಯ್ಕೆ ಮಾಡುವುದು ಕಷ್ಟವಾಗುತ್ತದೆ. ಏಕೆಂದರೆ ಎರಡೂ ವಿದ್ಯಮಾನಗಳು ಪರಂಪರಾನುಗತವಾಗಿ ಬಂದಿವೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಬೇರೂರಿವೆ ಮತ್ತು ಪಕ್ಷಾತೀತವಾಗಿ ತನ್ನ ನೆಲೆ ಕಂಡುಕೊಂಡಿವೆ. ಈ ಎರಡೂ ವಿದ್ಯಮಾನಗಳು ದೇಶದ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡಿರುವುದೇ ಅಲ್ಲದೆ ಪ್ರಜಾತಂತ್ರ ಮೌಲ್ಯಗಳನ್ನು ನಾಶಪಡಿಸಿವೆ. ಅಷ್ಟೇ ಅಲ್ಲದೆ ಪರಸ್ಪರ ಪೂರಕವೂ ಆಗಿವೆ. ಬಂಡವಾಳ ವ್ಯವಸ್ಥೆಗೆ […]

ಗೌರವ ಯಾರದು ? ಹತ್ಯೆ ಯಾರದು ?

ಗೌರವ ಯಾರದು ? ಹತ್ಯೆ ಯಾರದು ?

{ ಗೌರವ ಹತ್ಯೆ ಅಥವಾ ಮರ್ಯಾದಾ ಹತ್ಯೆ ಎಂಬ ವಿದ್ಯಮಾನ ಉತ್ತರ ಭಾರತಕ್ಕೆ ಸೀಮಿತವಾಗಿದ್ದುದು ಈಗ ಮಂಡ್ಯ ಜಿಲ್ಲೆಗೂ ಒತ್ತರಿಸಿಕೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಈ ವ್ಯಾಖ್ಯಾನ } ಭಾರತೀಯ ಸಮಾಜದ ವೈಚಿತ್ರ್ಯವೆಂದರೆ ಒಂದೆಡೆ ಸಾಮಾನ್ಯ ಜನಸಮುದಾಯಗಳು ತಮ್ಮ ಘನತೆ, ಗೌರವ ಮತ್ತು ಸಾಮಾಜಿಕ ಮರ್ಯಾದೆಯನ್ನು ರಕ್ಷಿಸಿಕೊಳ್ಳಲು ನಿರಂತರವಾದ ಹೋರಾಟದಲ್ಲಿ ತೊಡಗಿದ್ದರೆ ಮತ್ತೊಂದೆಡೆ ಕೆಲವೇ ಪ್ರಬಲ ವರ್ಗಗಳು ತಮ್ಮ ಜನ್ಮ ಶ್ರೇಷ್ಠತೆಯ ಭ್ರಮೆಯಲ್ಲಿ, ಸಾಂಸ್ಕøತಿಕ ಪರಿಶುದ್ಧತೆಯ ಭ್ರಮೆಯಲ್ಲಿ ಸಾಮುದಾಯಿಕ ಗೌರವದ ರಕ್ಷಣೆಯ ಹೆಸರಿನಲ್ಲಿ […]