ಊರುಕೇರಿ

ಊರುಕೇರಿ

ಸ್ಲಂ ವಾಸ್ತವ್ಯ ಶ್ರೇಷ್ಠತೆಯ ವ್ಯಸನ ಮತ್ತು ಸ್ವಚ್ಚ ಭಾರತ

ಸ್ಲಂ ವಾಸ್ತವ್ಯ ಶ್ರೇಷ್ಠತೆಯ ವ್ಯಸನ ಮತ್ತು ಸ್ವಚ್ಚ ಭಾರತ

ಹಿಮಾಲಯದ ಶಿಖರ ಏರುವುದು , ಚಂದ್ರಗ್ರಹದ ಮೇಲೆ ಮಾನವ ಕಾಲಿರಿಸುವುದು , ಮಂಗಳ ಗ್ರಹ ಯಾನ ನಡೆಸುವುದು ಇವೆಲ್ಲವೂ ಸುದ್ದಿಗೆ ಗ್ರಾಸವಾದರೆ ಅದು ಸಹಜ ಎನಿಸುತ್ತದೆ. ಏಕೆಂದರೆ ಇದು ಸಾಮಾನ್ಯ ಮಾನವರಿಂದ ಸಾಧ್ಯವಾಗದಂತಹ ಸಾಧನೆಗಳು. ಆದರೆ ರಾಜಕಾರಣಿಗಳ ಸ್ಲಂ ವಾಸ್ತವ್ಯ ಏಕೆ ಬಿಸಿಬಿಸಿ ಸುದ್ದಿ, ಬ್ರೇಕಿಂಗ್ ನ್ಯೂಸ್ ಆಗುತ್ತವೆ ? ಬಹುಶಃ ಈ ಪ್ರಶ್ನೆ ಪ್ರಜ್ಞಾವಂತ ಸಮಾಜವನ್ನು ಕಾಡದೆ ಹೋದರೆ ಇನ್ನು ಎರಡು ಮೂರು ಪೀಳಿಗೆಗಳ ನಂತರ ಈ ರೀತಿಯ ಒಂದು ಕಥೆ ಪಠ್ಯಗಳಲ್ಲೋ ಚಂದಮಾಮಾದಲ್ಲೋ ಬರಬಹುದು […]

ದುಬಾರಿಯಾಗುತ್ತಿರುವ ನಿರ್ಲಕ್ಷ್ಯ

ದುಬಾರಿಯಾಗುತ್ತಿರುವ ನಿರ್ಲಕ್ಷ್ಯ

  ಅವಘಡಗಳು ಸಂಭವಿಸಿದಾಗ ಮಾತ್ರ ಕಂಡುಬರುವ ಅಧಿಕಾರಿಗಳ ಪೂರ್ವಾಲೋಚನೆಯಿಲ್ಲದೆ ಪ್ರತಿಕ್ರಿಯೆಗಳನ್ನು ಸಾರ್ವಜನಿಕ ಒತ್ತಡಗಳನ್ನು ಸೃಷ್ಟಿಸುವುದರ ಮೂಲಕ ಸರಿದಾರಿಗೆ ತರಬೇಕಿದೆ. ಭಾರತದ ನಗರ ಪ್ರದೇಶಗಳಲ್ಲಿ ಪದೇಪದೇ ಸಂಭವಿಸುತ್ತಿರುವ ಕಟ್ಟಡ ಕುಸಿತ, ಅಗ್ನಿ ಅವಘಡಗಳು ಮತ್ತು ಅಪಘಾತಗಳ ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆಗಳು ಸದಾ ಒಂದು ನಿರ್ದಿಷ್ಟ ಮಾದರಿಯನ್ನು ಅನುಸರಿಸುತ್ತವೆ. ತತ್‌ಕ್ಷಣದ ಆತಂಕ, ಆಕ್ರೋಶ. ಜೊತೆಗೆ ಈಗಾಗಲೇ ಇಂಥವನ್ನು ನೋಡಿಯಾಗಿರುವ ಭಾವ ಮತ್ತು ಬಹುಪಾಲು ನಾಗರಿಕರ ನಿರ್ಲಕ್ಷ್ಯ. ಹಾಗೂ ನಿರ್ದಿಷ್ಟ ಅಪಘಾತದಲ್ಲಿ ಕಂಡುಬಂದಿರುವ ಕಾನೂನು ಮತ್ತು ನಿಯಮಗಳ ಉಲ್ಲಂಘನೆ, ಅದಕ್ಕೆ ಅಧಿಕಾರಿಗಳ […]

ಗಂಟಿಚೋರರ ತುಡುಗು ಕಥನಗಳು

ಗಂಟಿಚೋರರ ತುಡುಗು ಕಥನಗಳು

ಹಿಂದೊಮ್ಮೆ ಜನಕಥನದಲ್ಲಿ ಗಂಟಿಚೋರ್ ಸಮುದಾಯದ ಹೋರಾಟಗಾರ್ತಿ ಗೋದಾವರಿ ಬಗ್ಗೆ ಬರೆದಿದ್ದೆ. ಆಗ ಈ ಸಮುದಾಯದ ಅಧ್ಯಯನ ನಿರತನಾಗಿದ್ದೆ. ಹಾಗಾಗಿ ಗಂಟಿಚೋರರ ಕೆಲವು ಪ್ರಾಥಮಿಕ ಸಂಗತಿಗಳನ್ನು ನಿಮ್ಮ ಜತೆ ಹಂಚಿಕೊಂಡಿದ್ದೆ. ಇದೀಗ ಗಂಟಿಚೋರ್ ಸಮುದಾಯದ ಸಂಶೋಧನ ಕೃತಿ ಪ್ರಕಟವಾಗಿ ಒಂದು ವರ್ಷ ಕಳೆಯಿತು. ಸಂಶೋಧನೆ ಕುರಿತು ಕೆಲವರು ಒಳ್ಳೆಯ ಅಭಿಪ್ರಾಯ ಕೊಟ್ಟಿದ್ದಾರೆ. ಒಂದು ಸಮುದಾಯದ ಜೀವಂತಿಕೆಯ ಎಲ್ಲಾ ಆಯಾಮಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಒಂದು ಸಂಕಥನವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿರುವೆ. ಇದೀಗ ನನ್ನ ಸಂಶೋಧನೆಯ ಫಲಿತಗಳನ್ನು ನಿಮ್ಮ ಮುಂದೆ ಮಂಡಿಸುವುದಿಲ್ಲ. […]

ಬರ ಮತ್ತು ವಲಸೆಯ ಬಹುರೂಪಿ ಚಿತ್ರಗಳು

ಬರ ಮತ್ತು ವಲಸೆಯ ಬಹುರೂಪಿ ಚಿತ್ರಗಳು

ರೈತರ ಪಾಲಿಗೆ ಬರ ಎನ್ನುವುದು ವಿಶೇಷ ಅತಿಥಿಯಾಗಿ ಉಳಿದಿಲ್ಲ. ಅವರ ಬೆನ್ನಿಗಂಟಿದ ಹುಣ್ಣಾಗಿ ಸದಾ ನೋಯಿಸುತ್ತಲೇ, ಅದಕ್ಕವರು ಚಿಕಿತ್ಸೆ ಪಡೆಯುತ್ತಿರುವ ವಿದ್ಯಮಾನ ಸಹಜವಾಗಿದೆ. ಕನಿಷ್ಠ ಎರಡು ದಶಕಗಳ ಬರದ ಛಾಯೆ ಚೂರು ಅದಲುಬದಲಾಗಿದ್ದು ಬಿಟ್ಟರೆ ಒಂದು ಏಕರೂಪ ಇದೀಗ ಸ್ಥಿರವಾಗಿದೆ. ಹಾಗಾಗಿ ರೈತರು ಭೂಮಿಯ ಜತೆಗಿನ ನಂಬಿಕೆಯನ್ನು ಅತಂತ್ರಗೊಳಿಸಿಕೊಂಡಿದ್ದಾರೆ. ಮುಖ್ಯವಾಗಿ ಬರಪರಿಹಾರದಂತಹ ಸರಳ ಪರ್ಯಾಯವನ್ನು ಸರಕಾರ ಯೋಜಿಸುತ್ತಿದೆ. ಆದರೆ ಇಂತಹ ಏಕರೂಪದ ಬರ ಪರಿಹಾರ ರೈತ ಸಮುದಾಯದ ಕಷ್ಟಗಳನ್ನು ನೀಗಿಸಲಾರದು. ಹಾಗಾಗಿ ಬರ ಹಲವು ಬಗೆಯ ಅನಪೇಕ್ಷಿತ […]

ದಲಿತನ ಮನೆಯ ಕೂಳು ಧನಿಕರ ಮನೆಯ ಕಾಳು

ದಲಿತನ ಮನೆಯ ಕೂಳು ಧನಿಕರ ಮನೆಯ ಕಾಳು

ಆಹಾರ ಪದ್ಧತಿ ಮಾನವ ಸಮಾಜದ ಒಂದು ವಿಶಿಷ್ಟ ಅಂಗ. ಮಾನವನ ಉಗಮವಾದ ದಿನದಿಂದಲೂ ಆಹಾರ ಪದ್ಧತಿ ತನ್ನದೇ ಆದ ವಿಭಿನ್ನ ಆಯಾಮಗಳನ್ನು, ವಿಶಿಷ್ಟ ಸ್ವರೂಪಗಳನ್ನು ಪಡೆದುಕೊಳ್ಳುತ್ತಲೇ ಬಂದಿದೆ. ಮಾನವನ ಅಭ್ಯುದಯದ ಹಾದಿಯಲ್ಲಿ ಕಾಣಲಾಗುವ ಮನ್ವಂತರಗಳನ್ನು, ಬದಲಾವಣೆಗಳನ್ನು, ಪರಿವರ್ತನೆಗಳನ್ನು ಸಮಾಜದ ಆಹಾರ ಪದ್ಧತಿಗಳಲ್ಲೂ ಕಾಣಬಹುದು. ಆಹಾರ ಸಾಮುದಾಯಿಕ ಪ್ರಜ್ಞೆಯಿಂದ ರೂಪುಗೊಳ್ಳುವುದಿಲ್ಲ. ವ್ಯಕ್ತಿಗತ ನೆಲೆಯಲ್ಲಿ ರೂಪುಗೊಂಡು ಸಾಮುದಾಯಿಕ ಸ್ವರೂಪ ಪಡೆಯುತ್ತದೆ. ಮತ್ತೊಂದೆಡೆ ಯಾವುದೇ ಕಾಲಘಟ್ಟದ, ಯಾವುದೇ ಪ್ರದೇಶದ ಆಹಾರ ಪದ್ಧತಿಯನ್ನು ಸಾರ್ವತ್ರೀಕರಿಸಲೂ ಸಾಧ್ಯವಿಲ್ಲ. ಗಡ್ಡೆ ಗೆಣಸುಗಳನ್ನು ತಿನ್ನುವ ಹಂತದಿಂದ ಮಾನವ […]

ವಿದ್ರೋಹ ಸಾಹಿತ್ಯದ ಒಡಲಲ್ಲೇ ಇದೆ

ವಿದ್ರೋಹ ಸಾಹಿತ್ಯದ ಒಡಲಲ್ಲೇ ಇದೆ

 “ನಮ್ಮ ನಾಡು-ನುಡಿಗಳು ಇಂದು ಒಂದು ನಿರ್ಧಾರಾತ್ಮಕ ಕ್ಷಣದಲ್ಲಿ ನಿಂತಿವೆ. ಜಾಗತೀಕರಣ, ತೀವ್ರ ಬಂಡವಾಳಶಾಹಿ, ಮುಂದುವರಿದ ದೇಶಗಳ ಆರ್ಥಿಕ ಶೋಷಣೆ ಮತ್ತು ಸಾಂಸ್ಕøತಿಕ ರಾಜಕಾರಣಗಳ ಕವಲು ಹಾದಿಯಲ್ಲಿ ನಿಂತಿರುವ ನಾವು ಈ ತನಕ ನಿರೂಪಿಸಿಕೊಂಡು ಬಂದಿರುವ ರಾಷ್ಟ್ರ ಮತ್ತು ಆಧುನಿಕತೆಗಳ ಕಲ್ಪನೆಗಳನ್ನು ವಿಶ್ಲೇಷಿಸಿಕೊಂಡು ನಮಗೆ ಬೇಕಾದ ಆಧುನಿಕತೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಆ ಆಧುನಿಕತೆಯು ಜನಪರ, ಪರಿಸರ ಸ್ನೇಹಿ, ಯುದ್ಧ ವಿರೋಧಿ, ವರ್ಗ, ಜಾತಿ, ಲಿಂಗ ತಾರತಮ್ಯ ವಿರೋಧಿ, ವಿವಿಧ ಜನ, ಜನಾಂಗ, ಗುಂಪು, ಪಂಗಡಗಳ ಸಾಮಾಜಿಕ ಅಸ್ಮಿತೆಯನ್ನೂ ಸಾಂಸ್ಕøತಿಕ ಅನನ್ಯತೆಯನ್ನೂ […]

ಜೋಗಿ ಬಳಗ ಕಾಗಿ ಬಳಗ

ಜೋಗಿ ಬಳಗ ಕಾಗಿ ಬಳಗ

 ಮರಿಯಮ್ಮನಹಳ್ಳಿಯಲ್ಲಿ ನೆಲೆಸಿದ ಮಂಜಮ್ಮ ಜೋಗತಿಯು ರಾಜ್ಯೋತ್ಸವ ಪ್ರಶಸ್ತಿ ಪಡೆದ ಜೋಗತಿ ಪರಂಪರೆಯ ಕಲಾವಿದೆ. ಇದೀಗ ರಾಜ್ಯವ್ಯಾಪಿ ಯಲ್ಲಮ್ಮನ ಜೋಗತಿ ಸಂಪ್ರದಾಯವನ್ನು ವಿಸ್ತರಿಸುತ್ತಿರುವ ಮುಖ್ಯ ಕಲಾತಂಡವೇ ಮಂಜಮ್ಮನದು. ಇಂತಹ ಮಂಜಮ್ಮನ ಜೀವನದ ಕಥೆ ನೋವಿನಲ್ಲಿ ಅದ್ದಿತೆಗೆದಂತಿದೆ. ಗಂಡು ಹೆಣ್ಣಾಗಿ ರೂಪಾಂತರ ಹೊಂದಿದಾಗ ಪುರುಷಪ್ರಧಾನ ಜಗತ್ತು ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದರ ಗ್ರಾಮಜಗತ್ತಿನ ನೋಟಕ್ರಮ ಇಲ್ಲಿದೆ. ಈ ಕಥನದಲ್ಲಿ ನಮ್ಮದೇ ಸಮಾಜದ ಮತ್ತೊಂದು ಮುಖವನ್ನು ನೋಡಿ ಬೆಚ್ಚಿ ಬೀಳುವ ಅನುಭವವಾಗುತ್ತದೆ. ನನ್ನದೇ ನಿರೂಪಣೆಯ ಮಂಜಮ್ಮ ಜೋಗತಿಯ ಆತ್ಮಕತೆ ಪಲ್ಲವ ಪ್ರಕಾಶನದ ಮೂಲಕ […]

ಗೋಪಾಲನ ಜ್ಞಾನೋದಯ

ಗೋಪಾಲನ ಜ್ಞಾನೋದಯ

ಅಣ್ಣಾ ನಾನು ಓದಿದ್ದರೆ ಏನೇನೋ ಆಗಿರಬಹುದಿತ್ತಪ್ಪಾ! ಹಣೆಲಿ ಬರೆದಿರಬೇಕಲ್ಲಾ! ಅಂದ ಗೋಪಾಲ ನಾನು : ಯಾಕೋ ಅಂತಾದೇನಾಗಿತ್ತು ಯಾರು ಬ್ಯಾಡ ಅಂದಿದ್ದರಪ್ಪಾ ಅವನು : ಯಾರು ಬ್ಯಾಂಡಂತಾರೆ ಅವಳು ಅಕ್ಷರಮ್ಮ ಹಣೆಲಿ ಬರೆದಿರಬೇಕಲ್ಲಾ! ಅಂದ. ನಾನು : ಯಾಕಪ್ಪಾ ವೊತ್ತಾರ್ನಾಗ ಎದ್ದು ಬೈಗಾತಲೆ ಕುಂತು ಓದಬೇಕಾಗಿತ್ತು. ಅವನು : ವೊತ್ತಾರ್ನಾಗೆ ಓದ್ತಾ ಕುತ್ಕಂಡಿದ್ರೆ ನಮ್ಮಪ್ಪ ಅವ್ವ ಸುಮ್ಮನಿರೋರೋ ಏನೋ; ಏಹ್ ನಡೀ ಹಸಾ ಇಬ್ಬನಿ ಬಾಯಾಡಿಸ್ಕೊಂಡು ಬಾ ಅಂತಾ ಕಳುಸೋರು! ಆಹಾ ಹಿವಾ! ನುರುಜು ಕಲ್ಲು ಮೇಲೆ […]

ದಲಿತ ಪದಕಥನ -8 : ಸಕಲ ಜೀವಿಗಳಿಗೂ ಸಂಬಂಧಿಸಿದ್ದು ಈ ಭೂಮಿ

ದಲಿತ ಪದಕಥನ -8 : ಸಕಲ ಜೀವಿಗಳಿಗೂ ಸಂಬಂಧಿಸಿದ್ದು ಈ ಭೂಮಿ

ಭೂಮಿ ನಮ್ಮ ಪಾಲಿಗೆ ಭೂಮಿಯು ಒಂದು ಕನಸು. ತುಂಡು ಭೂಮಿಗಾಗಿ ನಮ್ಮಲ್ಲಿ ಅನೇಕರು ಹತ್ತಾರು ವರ್ಷಗಳ ಕಾಲ ಭೂಮಾಲೀಕರ ಹೊಲಗದ್ದೆಗಳಲ್ಲಿ ಜೀತ ಮಾಡಿ ಕೊನೆಗೂ ಒಡೆಯರು ಭೂಮಿ ಕೊಡದೆ ಸತ್ತಿದ್ದಕ್ಕೆ ಜೀವಂತ ದಾಖಲೆಗಳಿವೆ. ಚೋಮನ ದುಡಿ ಕಾದಂಬರಿಯಲ್ಲಿ ಬರುವ ಚೋಮನ ಬಗ್ಗೆ ಶಿವರಾಮ ಕಾರಂತರು ಆದ್ರ್ರವಾಗಿ ಚಿತ್ರಿಸುವ ಬಗೆಯು ದಲಿತರ ಭೂಮಿಯ ಕನಸು ಯಾವ ಮಟ್ಟದ್ದು ಎಂಬುದನ್ನು ಮಾರ್ಮಿಕವಾಗಿ ಧ್ವನಿಸುತ್ತದೆ. ನಮ್ಮವರು ‘ಭೂಮ್ತಾಯಿ’ ಎಂದು ಭೂಮಿಯನ್ನು ಕರೆದು ತಾವು ಭೂಮಿ ತಾಯಿಯ ಮಕ್ಕಳು ಎಂದು ಹೇಳಿಕೊಳ್ಳುತ್ತಿದ್ದರು. ಆದರೆ […]

ದಲಿತ ಪದಕಥನ -7 : ‘ಬಾಳೆಲ್ಲ ಬರಗಾಲವಾಯ್ತು’

ದಲಿತ ಪದಕಥನ -7 : ‘ಬಾಳೆಲ್ಲ ಬರಗಾಲವಾಯ್ತು’

ಬರ ‘ಬಾಳೆಲ್ಲ ಬರಗಾಲವಾಯ್ತು’ ಎಂಬ ಅಜ್ಜಿಯರು ಗೊಣಗುತ್ತಿದ್ದರು. ನಮಗೆ ಬರದ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಹಳೆ ಕಾಲದವರು ಬರಗಾಲದ ಬಗ್ಗೆ ಆಗಾಗ ಅಂಗಳದಲ್ಲಿ ಮೆಲುಕು ಹಾಕುವುದಿತ್ತು. ಮಳೆ ಬೆಳೆ ಇಲ್ಲ ಎಂದರೆ ಬರಗಾಲ ಎಂದಷ್ಟೇ ನಮ್ಮ ತಿಳಿವಳಿಕೆಯಾಗಿತ್ತು. ಬರಗಾಲದಲ್ಲಿ ಊರು ಬಿಟ್ಟು ಬಂಧು ಬಳಗ ಎಲ್ಲೆಲ್ಲೋ ಹೋಗಿ ನೆಲೆಸಿದ್ದನ್ನು ಕೇಳಿ ತಿಳಿದಿದ್ದೆವು. ಬರಗಾಲದಲ್ಲಿ ಸತ್ತ ದನಕುರಿಗಳನ್ನು ನಮ್ಮವರು ತಿಂದು ಬದುಕಿದ್ದರು. ಬರಗಾಲದ ಭೀಕರ ನೆನಪುಗಳನ್ನು ಕೇರಿಯು ಮರೆತೇ ಇರಲಿಲ್ಲ. ಬರಗಾಲದಲ್ಲಿ ಮಕ್ಕಳನ್ನೇ ಮಾರಿದವರಿದ್ದರು. ಬರದ ಬರೆಯನ್ನು ತಾಳದವರು […]

1 2 3