ಚಳವಳಿ

ಚಳವಳಿ

ವಿಮೋಚನಾ ಹೋರಾಟದ ಹಣತೆ : ಪ್ರೊ.ಬಿ. ಕೃಷ್ಣಪ್ಪ

ವಿಮೋಚನಾ ಹೋರಾಟದ ಹಣತೆ : ಪ್ರೊ.ಬಿ. ಕೃಷ್ಣಪ್ಪ

ನವಿಲುಗಳ ದಂಗೆ : ನಾನು ಹದಿನೈದು ಹದಿನಾರನೇ ವರ್ಷದ ಚಿಕ್ಕ ಹುಡುಗನಾಗಿದ್ದಾಗಲೇ, ನನ್ನ ಹೈಸ್ಕೂಲು ವಿದ್ಯಾಭ್ಯಾಸದ (1980…) ದಿನಗಳಿಂದಲೂ ದಲಿತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತನಾಗಿ ದಲಿತ ಚಳುವಳಿಗಳೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡ ಕಾರಣದಿಂದಾಗಿಯೂ ದಲಿತ ಹೋರಾಟದ ಭಾಗವಾಗಿ ಇತರೆ ಪ್ರಗತಿಪರ ಮತ್ತು ಜಾತ್ಯತೀತ ಚಳುವಳಿಗಳೊಂದಿಗೂ ಮೈತ್ರಿ ಸಂಬಂಧ ಏರ್ಪಡಿಸಿಕೊಂಡಿದ್ದ ಕಾರಣದಿಂದಾಗಿಯೂ ಚಳುವಳಿಗಳು ನನ್ನ ಬದುಕಿನ ಅನುಭವದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದವು. ನನ್ನ ವಿದ್ಯಾರ್ಥಿ ಜೀವನದ ಬಹುಪಾಲು ವೇಳೆಯನ್ನು ಜನಪರ ಕಾಳಜಿಗಳಗೋಸ್ಕರ ಬಳಸುತ್ತಿದ್ದ ನನ್ನಂತೆಯೇ ನನ್ನ ಅನೇಕ ಸಹಪಾಠಿ […]

ಭಾರತಕ್ಕೆ ಬೇಕಾದ ತತ್ವವಾದ ಯಾವುದು?

ಭಾರತಕ್ಕೆ ಬೇಕಾದ ತತ್ವವಾದ ಯಾವುದು?

ಲೋಕಸಭಾ ಚುನಾವಣೆಗಳಲ್ಲಿ ಹಿಂದುತ್ವ ಮತ್ತು ಕಾರ್ಪೊರೇಟ್ ಮಾದರಿಯ ಅಭಿವೃದ್ಧಿಯ ಪ್ರತೀಕವಾಗಿರುವ ನರೇಂದ್ರ ಮೋದಿ ಗೆದ್ದು ಪ್ರಧಾನಿಯಾದಾಗ, ಅವರನ್ನು ಗೆಲ್ಲಿಸಿದ ಜನರ ಆಶೋತ್ತರ ಯಾವುದು ಎಂಬ ಪ್ರಶ್ನೆ ಎದ್ದಿತ್ತು. ದೆಹಲಿಯ ಚುನಾವಣೆಯಲ್ಲಿ ಎಳೆಯದಾದ ಆಮ್‍ಆದ್ಮಿ ಪಕ್ಷವು ಎರಡೂ ರಾಷ್ಟ್ರೀ ಯ  ಪಕ್ಷಗಳನ್ನು ಕಸದ ಹಾಗೆ ಗುಡಿಸಿಹಾಕಿ  ಗೆಲುವನ್ನು ಸಾಧಿಸಿದಾಗ ಇದೇ ಪ್ರಶ್ನೆ ಇತ್ತು . ಹಿಂದೊಮ್ಮೆ ಲೇಖಕ ಪೂರ್ಣಚಂದ್ರ ತೇಜಸ್ವಿಯವರು, ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದಲ್ಲಿ ಗೆದ್ದಾಗ, ಈಗ ವಿಮೋಚನ ಸಿದ್ಧಾಂತಗಳ ಅಗತ್ಯವಿಲ್ಲ; ವಸಾಹತುಶಾಹಿ ಬಂಡವಾಳಶಾಹಿ ಸಾಮ್ರಾಜ್ಯಶಾಹಿ ಜಾಗತೀಕರಣ ಮುಂತಾದ ಪರಿಭಾಷೆಗಳು […]

ಸರ್ಕಾರಕ್ಕೆ ಶಾಲೆಗಳನ್ನು ಮುಚ್ಚುವ ಹಕ್ಕಿಲ್ಲ

ಸರ್ಕಾರಕ್ಕೆ ಶಾಲೆಗಳನ್ನು ಮುಚ್ಚುವ ಹಕ್ಕಿಲ್ಲ

 ಸಮಾನ ಶಿಕ್ಷಣಕ್ಕಾಗಿ ಜನಾಂದೋಲನವು ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ಶಿಕ್ಷಣದ ವ್ಯಾಪಾರೀಕರಣದ ಹಾಗೂ ಶಿಕ್ಷಣದಲ್ಲಿನ ಅಸಮಾನತೆಯ ವಿರುದ್ಧ, ಸಮಾನ ಶಾಲಾ ವ್ಯವಸ್ಥೆಯ ಸ್ಥಾಪನೆಗಾಗಿ ಹತ್ತು ಹಲವು ರೀತಿಗಳಲ್ಲಿ ಕ್ರಿಯಾಶೀಲವಾಗಿರುವ ಒಕ್ಕೂಟವಾಗಿದೆ. ಹಾಗೆಯೇ, ‘ಅಖಿಲ ಭಾರತ ಶಿಕ್ಷಣ ಹಕ್ಕು ಸಮಿತಿ’ಯ ಸದಸ್ಯ ಸಂಘಟನೆಯಾಗಿ ಅಖಿಲ ಭಾರತ ಮಟ್ಟದಲ್ಲೂ ಇದೇ ಹೋರಾಟದಲ್ಲಿ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನವು ತೊಡಗಿದೆ. ಕೇವಲ ಸರ್ಕಾರವನ್ನು ಒತ್ತಾಯಿಸುವುದು ಮಾತ್ರವಲ್ಲದೆ, ಸ್ವತಃ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ‘ಸರ್ಕಾರಿ ಶಾಲೆ ಉಳಿಸಿ ಅಭಿಯಾನ’ವನ್ನು ಕೈಗೊಂಡಿದೆ. ಸರ್ಕಾರಿ ಶಾಲೆಗಳನ್ನೂ ಸಮರ್ಪಕವಾಗಿ […]

ಪೊಲೀಸರೂ ಮನುಷ್ಯರೇ ಅವರೂ ಪ್ರಜೆಗಳೇ !

ಪೊಲೀಸರೂ ಮನುಷ್ಯರೇ ಅವರೂ ಪ್ರಜೆಗಳೇ !

ವೇತನ, ಬಡ್ತಿ, ಭತ್ಯೆ ಮುಂತಾದ ತಮ್ಮ ಸೇವಾಕ್ಷೇತ್ರದ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮುಷ್ಕರ ಹೂಡಿರುವ ರಾಜ್ಯ ಪೊಲೀಸ್ ಸಿಬ್ಬಂದಿ ಸರ್ಕಾರದಿಂದ ತೀವ್ರ ಬೆದರಿಕೆ ಮತ್ತು ಒತ್ತಡ ಎದುರಿಸುತ್ತಿದ್ದರೆ ಹಿರಿಯ , ನಿವೃತ್ತ ಪೊಲೀಸ್ ಅಧಿಕಾರಿಗಳಿಂದ ಖಂಡನೆ ಎದುರಿಸುತ್ತಿದ್ದಾರೆ. ಬಹುಶಃ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸಿ ಕಾಪಾಡಬೇಕಾದ ಪೊಲೀಸ್ ಸಿಬ್ಬಂದಿ ತಾವೇ ಕಾನೂನು ಭಂಜಕರಾಗಬಾರದು ಎಂಬ ಉದ್ದೇಶ ಈ ಪ್ರತಿರೋಧದಲ್ಲಿ ಕಾಣಬಹುದು. ಆದರೆ ಒಂದು ಪ್ರಜಾಸತ್ತಾತ್ಮಕ ಸಮಾಜದಲ್ಲಿ, ಪ್ರಜಾತಂತ್ರ ಆಡಳಿತ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಸಾರ್ವಭೌಮ ಪ್ರಜೆಗೂ ತನ್ನ ಹಕ್ಕೊತ್ತಾಯ ಮಂಡಿಸುವ […]

ದಿಟ್ಟ ಹೋರಾಟದ ಗೌಸಿಯಾ ಖಾನ್

ದಿಟ್ಟ ಹೋರಾಟದ ಗೌಸಿಯಾ ಖಾನ್

ಹೊಸಪೇಟೆಯ ಕೆ.ಎಸ್.ಆರ್.ಟಿ.ಸಿ. ಬಸ್‍ಸ್ಟಾಂಡಿನಿಂದ ರೈಲ್ವೇ ಸ್ಟೇಷನ್‍ಗೆ ಹೋಗುದ ದಾರಿಯಲ್ಲಿ ನಡೆಯುತ್ತಿದ್ದರೆ ಸ್ವಲ್ಪ ದೂರದಲ್ಲಿ ಕಾಲುವೆಯೊಂದು ಬರುತ್ತದೆ. ಕಾಲುವೆ ದಾಟುತ್ತಲೂ ಬೃಹತ್ ಹೋಟೆಲೊಂದು ನಿಮ್ಮನ್ನು ದಂಗುಬಡಿಸುತ್ತದೆ. ಇದಕ್ಕೆ ಎದುರಾಗಿ ನಿಂತರೆ ಅದರ ಎಡಭಾಗಕ್ಕೆ ಹೋಟೆಲಿನ ಮೈಗೆ ಅಂಟಿಕೊಂಡಂತೆ ಪುಟ್ಟದೊಂದು ಮನೆ ಕಾಣುತ್ತದೆ. ಮೇಲುನೋಟಕ್ಕೆ ಈ ಮನೆಗಾಗಿ ಹೋಟೆಲ್ ಕಾಂಪೋಂಡಿನ ವಿನ್ಯಾಸವೇ ಬದಲಾದಂತಿದೆ. ಅಂತೆಯೇ ಈ ಮನೆಗೆ ಭಯಗೊಂಡು ಕಾಂಪೋಂಡು ತಾನೇ ಹಿಂದಕ್ಕೆ ಸರಿದು ಮುದುರಿಕೊಂಡಂತೆ ಕಾಣುತ್ತದೆ. ಈ ಬೃಹತ್ ಕಟ್ಟಡದೆದುರು ಗುಬ್ಬಚ್ಚಿ ಗೂಡಿನಂತಹ ಈ ಪುಟ್ಟಮನೆಯ ಬಗ್ಗೆ ಏನಿದು […]

ದೈವ ಸಂಹಾರಕ ಡಾ. ಬಿ. ಆರ್. ಅಂಬೇಡ್ಕರ್ ! : -1

ದೈವ ಸಂಹಾರಕ ಡಾ. ಬಿ. ಆರ್. ಅಂಬೇಡ್ಕರ್ ! : -1

1. ಜನ್ಮ ದಿನಾಚರಣೆಗಳು ಸಾಮಾನ್ಯವಾಗಿ ಆತ್ಮಾವಲೋಕನದ ಸಂದರ್ಭಗಳಾಗಿರುತ್ತವೆ. ಸಾಧಕ ಬಾಧಕಗಳ ವಿಶ್ಲೇಷಣೆ ಮತ್ತು ವೈಫಲ್ಯಗಳ ಪರಾಮರ್ಶೆಯ ಸಂದರ್ಭಗಳಾಗಿರುತ್ತವೆ. ಆದರೆ ಭೀಮರಾವ್ ರಾಮ್‍ಜಿ ಅಂಬೇಡ್ಕರ್ ವಿಚಾರದಲ್ಲಿ ಈ ಪ್ರಕ್ರಿಯೆ ದುರಹಂಕಾರದ ಪ್ರತೀಕ ಎನಿಸುತ್ತದೆ. ಇತರ ನಾಯಕರ ಸಾಧನೆಗಳನ್ನು ಪರಾಮರ್ಶಿಸುವಾಗ ಅವರು ನಾಗರಿಕತೆಯ ಆದರ್ಶಗಳಿಗೆ ನಿಲುಕುತ್ತಾರೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ಅಂಬೇಡ್ಕರ್ ವಿಚಾರದಲ್ಲಿ ನಾಗರಿಕತೆ ಅಂಬೇಡ್ಕರ್ ಅವರ ಆದರ್ಶಕ್ಕೆ ನಿಲುಕುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ನಮ್ಮ ಆದರ್ಶಗಳ ನೆಲೆಯಲ್ಲಿ ನಾವು ಅಂಬೇಡ್ಕರ್ ಅವರನ್ನು ಅರ್ಥೈಸಲಾಗುವುದಿಲ್ಲ. ಬದಲಾಗಿ ಅಂಬೇಡ್ಕರ್ ಅವರ […]

ಎಲ್ಲ ಜನರ ನಾಯಕ ಬಾಬಾಸಾಹೇಬ್ ಅಂಬೇಡ್ಕರ್

ಎಲ್ಲ ಜನರ ನಾಯಕ ಬಾಬಾಸಾಹೇಬ್ ಅಂಬೇಡ್ಕರ್

ರಂಜಾನ್ ದರ್ಗಾ ಅವರ ಬಸವಣ್ಣ ಮತ್ತು ಅಂಬೇಡ್ಕರ್ ಪುಸ್ತಕ ಬಿಡುಗಡೆ ಎಪ್ರೀಲ್ 14 ರ ಇಂದು ಧಾರವಾಡದಲ್ಲಿ ಇಂದು ಬಿಡುಗಡೆಯಾಗಲಿದೆ. ಇದನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಇದರಿಂದ ಆರಿಸಿದ ಒಂದು ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ. ಭರತಖಂಡದ ಜನ ಯುಗಯುಗಗಳಿಂದಲೂ ಜಾತಿ ಮತ್ತು ಅಸ್ಪøಶ್ಯತೆಯ ಬಲೆಗೆ ಬಿದ್ದು ಒದ್ದಾಡುತ್ತಿದ್ದಾರೆ. ಈ ಬಲೆ ಕಾಲಕಾಲಕ್ಕೆ ಹೊಸ ಹೊಸ ರೂಪ ಪಡೆದು ಇಂದಿಗೂ ಅಸ್ತಿತ್ವದಲ್ಲಿದೆ. ಈ ಅನಿಷ್ಟದ ಬಲೆಯನ್ನು ಬಯಸುವ ಮನುಷ್ಯ ಅಸಹ್ಯವಾಗಿ ಕಾಣುತ್ತಾನೆ. ಆತ ತನ್ನ ಆತ್ಮಸೌಂದರ್ಯವನ್ನು ಕಳೆದುಕೊಂಡು ವಿಚಿತ್ರ ಪಶುವಾಗಿದ್ದಾನೆ. ಮೆಲ್ಜಾತಿಯ […]

ಅಂಬೇಡ್ಕರ್ ಜನ್ಮ ಆತ್ಮಾವಲೋಕನದ ದಿನವಾಗಲಿ

ಅಂಬೇಡ್ಕರ್ ಜನ್ಮ ಆತ್ಮಾವಲೋಕನದ ದಿನವಾಗಲಿ

“ ಭಾರತದ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ವಿಶಿಷ್ಟ ಅಥವಾ ನಿರ್ದಿಷ್ಟ ಪಾತ್ರವೇನು ? ” ಬಹುಶಃ ಈ ಪ್ರಶ್ನೆಯನ್ನು ಸಾರ್ವಜನಿಕವಾಗಿ ಕೇಳಿದರೆ ದೇಶದ ಬೌದ್ಧಿಕ ವಲಯದಲ್ಲಿ ಅಲ್ಲೋಲಕಲ್ಲೋಲವಾಗಬಹುದು. ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಗೌರವಯುತವಾಗಿ ಸಂವಿಧಾನ ಕರ್ತೃ ಎಂದೇ ಗುರುತಿಸಿರುವಾಗ ಇಂತಹ ಪ್ರಶ್ನೆ ಸರಿಯೇ ಎಂಬ ಪ್ರಶ್ನೆ ಉದ್ಭವಿಸಬಹುದು. ಇಂತಹ ಒಂದು ಪ್ರಶ್ನೆಯೇ ಅಪ್ರಸ್ತುತ ಎಂಬ ಅಭಿಪ್ರಾಯವೂ ಕೇಳಿಬರಬಹುದು. ಬಹುಶಃ ಭಾರತದ ಇಂದಿನ ರಾಜಕೀಯ ಸನ್ನಿವೇಶವನ್ನು ನೋಡಿದರೆ , ಅಂಬೇಡ್ಕರ್ ಇಂದು ಬದುಕಿದ್ದಲ್ಲಿ ಈ […]

ಕನ್ನಡ ಕ್ರೈಸ್ತ ರ ಹೋರಾಟ: ಚೆಸರಾ ನಂತರ ಮುಂದೇನು…?

ಕನ್ನಡ ಕ್ರೈಸ್ತ ರ ಹೋರಾಟ: ಚೆಸರಾ ನಂತರ ಮುಂದೇನು…?

ಕನ್ನಡ ಕ್ರೈಸ್ತರಿಗೆ ಸಾಂಸ್ಕøತಿಕ ತಾಕತ್ತನ್ನು ಒದಗಿಸಿದ, ಯಾವುದೇ ಮುಚ್ಚುಮರೆ ಇಲ್ಲದೆ ನನ್ನಂತಹವರನ್ನು ‘ಸಂಗೋಪನೆ’ ಮಾಡಿದ ಚೇತನವೇ ಇಂದು ಎಲ್ಲೋ ‘ಕತ್ತಲು-ಬೆಳಕಿನಾಟ’ದಲ್ಲಿ ಮುಸುಕಾದಂತೆ ಕಾಣುತ್ತ್ತಿದೆ. ಮನೋ ವೇದನೆ ಅಸಹನೀಯವಾದುದು…! ಕೆಲವೊಮ್ಮೆ ಎಲ್ಲರೊಡನಿದ್ದೂ ಇಲ್ಲದಂತಹ ಒಂಟಿತನ. ಸಾಂತ್ವಾನದ ಏಕಾಂತತೆಯ ಜಾಗ ಬಿಸಿಲಿನ ಬೇಗುದಿಯಲ್ಲಿ ಕಾಣೆಯಾಗಿದೆ. ಒಂದಷ್ಟು ಹಿರಿಯರು ಚೆಸರಾ ಅವರನ್ನು ಕಳೆದುಕೊಂಡ ಸಂಕಟದಲ್ಲಿದ್ದಾರೆ. ಯುವಜನತೆಯಲ್ಲಿ ಚೆಸರಾ ಹೊತ್ತಿಸಿದ ನ್ಯಾಯದ ಕಿಡಿ ಎಂದೂ ನಂದಿಹೋಗದಂತೆ ಬಹುರೂಪಿಯಾಗಿ ಸ್ಪಂದಿಸುತ್ತಿದ್ದಾರೆ. ಜೈಲಿನಲ್ಲಿರುವ ಮೂರು ಮಂದಿಯ ನೋವು ಊಹಿಸಲಾಗದು. ಈ ನೋವಿಗೆ ಬಿಡುಗಡೆ ಬೇಗನೇ ಸಿಗಲೆನ್ನುವ ಮತ್ತು […]

ಕನಸು ಕಾಣುವ ಹಕ್ಕು ನಮಗಿರಲಿ

ಕನಸು ಕಾಣುವ ಹಕ್ಕು ನಮಗಿರಲಿ

(ಬಡವರ ಹಕ್ಕುಗಳಿಗಾಗಿ ಬರೆಯುತ್ತಾ, ಹೋರಾಡುತ್ತಾ ಬಂದಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕಿ ಮಹಾಶ್ವೇತಾದೇವಿಯವರು ಕೆಲವು ವರ್ಷಗಳ ಹಿಂದೆ ಫ್ರಾಂಕ್‍ಫರ್ಟ್ ಪುಸ್ತಕ ಮೇಳದಲ್ಲಿ ಮಾಡಿದ ಒಂದು ಅಪರೂಪದ ಉಪನ್ಯಾಸ ಆಯ್ದ ಭಾಗ ) ನೆನಪುಗಳ ನೆರಳಲ್ಲಿ ಬದುಕುತ್ತಲೇ ನಾನು ಆಗಾಗ ಎಂಭತ್ತರ ನಂತರವೂ ಮುನ್ನೆಡೆಯುತ್ತಿದ್ದೇನೆ. ಕೆಲವು ಸಾರಿ ನಾನು ಸೂರ್ಯನ ಬೆಳಕಿಗೆ ಮತ್ತೆ ಮೈಯ್ಯೊಡ್ಡುವಂಥ ಧೈರ್ಯ ಮಾಡುತ್ತೇನೆ. ವಯಸ್ಸಾಗಿದ್ದರೂ ಯುವತಿಯಾಗಿ, ತಾಯಿಯಾಗಿ ಮುನ್ನೆಡೆಯುತ್ತಿದ್ದೇನೆ. ಮಗನ ಖುಷಿಗಾಗಿ ಕುರುಡಿಯಂತೆ, ಕಿವುಡಿಯಂತೆ ನಟಿಸುತ್ತೇನೆ. ತಕ್ಷಣವೇ ನಡೆದ ಘಟನೆಗಳನ್ನು ಮರೆತಂತೆ ನೆನಪುಗಳನ್ನು ಅಣಕಿಸುತ್ತೇನೆ. […]