ಚಳವಳಿ

ಚಳವಳಿ

ಕಳಸಾ-ಬಂಡೂರಿ ನಾಲಾ ಯೋಜನೆ-2: ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.’

ಕಳಸಾ-ಬಂಡೂರಿ ನಾಲಾ ಯೋಜನೆ-2: ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.’

ನಿಚ್ಚಳವಾಗಿ ಕಾಣುವ ವಾಸ್ತವ: ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.’ ಮಹಾದಾಯಿಗೆ ಕರ್ನಾಟಕದ ಜಲಾನಯನ ಪ್ರದೇಶದಿಂದ ಸೇರ್ಪಡೆಯಾಗುವ ನೀರಿನಲ್ಲಿ ತನ್ನ ಪಾಲಿನ ಒಂದು ಭಾಗವನ್ನು ಮಾತ್ರ ಬಳಸಿಕೊಳ್ಳುವುದಕ್ಕೂ ಬಿಡದೆ, ಪರಿಸರ ಹಾನಿಯ ಪ್ರಶ್ನೆಯನ್ನೆತ್ತಿ ಕಳೆದ 25 ವರ್ಷಗಳಿಂದಲೂ ಅಡ್ಡಿ ಮಾಡುತ್ತಾ ಬರುತ್ತಿರುವ ಗೋವಾ ಸರ್ಕಾರ ತನ್ನ ಪ್ರದೇಶದಲ್ಲೇ ಈ ನದಿಯ ಪರಿಸರವನ್ನೇನೂ ಸ್ವಚ್ಛವಾಗಿ ಇಟ್ಟುಕೊಂಡಿಲ್ಲ ಎಂದು ವರದಿಗಳು ಹೇಳುತ್ತವೆ. ನದಿಯ ಜಲಾನಯನ ಪ್ರದೇಶದಲ್ಲೇ ಗಣಿಗಾರಿಕೆಗೆ ಅವಕಾಶ ಕೊಟ್ಟಿದೆ. ಮ್ಯಾಂಗನೀಸ್ ಅದಿರನ್ನು ಸಂಸ್ಕರಿಸಿದ ಅಪಾರ ಮಣ್ಣಿನ ರಾಶಿಯನ್ನು ನದಿಯ ಮುಖಜಭೂಮಿಯಲ್ಲಿ […]

ಅಮ್ನೆಸ್ಟಿ ಏಕೆ ದೇಶ ದ್ರೋಹಿಯಾಗುತ್ತದೆ ?

ಅಮ್ನೆಸ್ಟಿ ಏಕೆ ದೇಶ ದ್ರೋಹಿಯಾಗುತ್ತದೆ ?

ಮಾನವರೇ ಇಲ್ಲದ ಸಮಾಜವನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಆದರೆ ಮಾನವ ಸಮಾಜದಲ್ಲಿ ಮಾನವೀಯತೆಯೇ ಇಲ್ಲದ ಸಂದರ್ಭವನ್ನು ಕಾಣಲು ಸಾಧ್ಯ. ಬಹುಶಃ ಭಾರತದ ಪ್ರಸ್ತುತ ಸಂದರ್ಭದಲ್ಲಿ ಇದು ಪ್ರಜ್ವಲಿಸುತ್ತಿರುವ ಸತ್ಯ. ವಸಾಹತು ಆಳ್ವಿಕೆಯ ಸಂದರ್ಭದಲ್ಲಿ “ ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು ನಾನು ಪಡೆದೇ ತೀರುತ್ತೇನೆ ” ಎಂಬ ಘೋಷಣೆ ಮೊಳಗಿದಾಗ ಅದು ಬ್ರಿಟೀಷ್ ಸಾಮ್ರಾಜ್ಯವನ್ನು ಕಂಗೆಡಿಸಿತ್ತು. ಈ ಘೋಷಣೆಯ ಹಿಂದೆ ಕೇವಲ ಒಂದು ಭೌಗೋಳಿಕ ಪ್ರಾಂತ್ಯದ ರಾಜಕೀಯ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಮಾತ್ರ ನೋಡುವುದು ಇತಿಹಾಸಕ್ಕೆ ಅಪಚಾರವೆಸಗಿದಂತೆ. ದೇಶದ […]

ಜಮೀನ್ದಾರಿಕೆ ವಿರುದ್ಧ ದಲಿತರ ಭೂಹೋರಾಟ

ಜಮೀನ್ದಾರಿಕೆ ವಿರುದ್ಧ  ದಲಿತರ ಭೂಹೋರಾಟ

ಅಂದು ಚಳವಳಿಯ ಸಂಗಾತಿ ಕರಿಯಪ್ಪ ಗುಡಿಮನೆ ಅವರ ಕಮಲಾಪುರದ ಮನೆಗೆ ಹೋದಾಗ ಅವರು ಪ್ರಯಾಣದಿಂದ ಬಳಲಿದ್ದರು. ಕಾರಣ ಹಿಂದಿನ ದಿನ ಬೆಂಗಳೂರಿನ ಟೌನ್ ಹಾಲ್ ಮುಂದೆ ತನ್ನ ಮೇಲಿನ ಕೊಲೆಯ ಯತ್ನ ವಿರೋಧಿಸಿ ಪ್ರಗತಿಪರರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂದಿದ್ದರು. ಇದರ ಹಿನ್ನೆಲೆ ನೋಡಿದರೆ, ಬಳ್ಳಾರಿ ಭಾಗದ ದಲಿತ ಕೆಳಜಾತಿಗಳೇ ಹೆಚ್ಚಿರುವ ಬಂಡೆಟ್ಟಿ ಮತ್ತು ದಾನಪ್ಪ ಬೀದಿಯ ಪೌರಕಾರ್ಮಿಕರಿರುವ ಫಲಾನುಭವಿಗಳಿಗೆ 1970-80 ರ ಸುಮಾರಿಗೆ ಭೂನ್ಯಾಯ ಮಂಡಳಿಯಿಂದ ಸುಮಾರು 140 ಎಕರೆ ಜಮೀನು ಮುಂಜೂರಾಗಿತ್ತು. ಈ ಎಲ್ಲಾ ಭೂಮಿ […]

ನಕ್ಸಲ್ ಚಳುವಳಿ -3 : ಜನರಿಂದ ಬಂದು ಮತ್ತೆ ಜನರ ಬಳಿಗೆ ಮರಳಿದವರು

ನಕ್ಸಲ್ ಚಳುವಳಿ -3 : ಜನರಿಂದ ಬಂದು ಮತ್ತೆ ಜನರ ಬಳಿಗೆ ಮರಳಿದವರು

ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾನವ ಹಕ್ಕುಗಳ ಹೋರಾಟಗಾರರ ಜೊತೆಜೊತೆಯಾಗಿ ನಡೆದ ಇಬ್ಬರು ಹಿರಿಯ ಐಎಎಸ್ ಆಫೀಸರ್‍ಗಳನ್ನು ನೆನೆಸಿಕೊಳ್ಳಬೇಕಾಗಿದೆ. ಅವರು ಶಂಕರನ್ ಮತ್ತು ಬಿ.ಡಿ.ಶರ್ಮ.ಇದು ನಿಜಕ್ಕೂ ಹೃದಯಂಗಮವಾದದ್ದು.ಏಕೆಂದರೆ ಮಾನವ ಹಕ್ಕುಗಳ ಕುರಿತಾಗಿ ಮಾತನಾಡುವಾಗ ಮೇಲಿನ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ ಮಾತನಾಡಲು ಸಾಧ್ಯವೇ ಇಲ್ಲ. ಶಂಕರನ್ ಅವರಂತೂ ಜನತೆಯ ಐಎಎಸ್ ಅಧಿಕಾರಿ ಎಂದು ಜನಪ್ರಿಯರಾಗಿದ್ದರು.ಬದಲಾವಣೆಗಾಗಿ ಕಾಯುತ್ತಾ ಕೂಡದೆ ಸ್ವತಹ ತಾವೇ ಮುನ್ನುಗ್ಗಿ ಬದಲಾವಣೆಯ ಪ್ರಕ್ರಿಯೆಯೊಳಗೆ ಬೆರೆತದ್ದು ಈ ಶಂಕರನ್ ಅವರ ವಿಶೇಷತೆ.ತಮ್ಮ ಜೀವನವನ್ನೇ ಸಾಮಾಜಿಕ ಸಂಘಟನೆಗೆ ಮುಡಿಪಾಗಿಟ್ಟ ಅಪರೂಪದ […]

ಕಳಸಾ-ಬಂಡೂರಿ ನಾಲಾ ಯೋಜನೆ: ಮತ್ತೆ ಸಿಡಿದ ಉತ್ತರ ಕರ್ನಾಟಕ

ಕಳಸಾ-ಬಂಡೂರಿ ನಾಲಾ ಯೋಜನೆ: ಮತ್ತೆ ಸಿಡಿದ ಉತ್ತರ ಕರ್ನಾಟಕ

ಮೂವತ್ತೈದು ವರ್ಷದ ಹಿಂದೊಮ್ಮೆ ಸಿಡಿದು, ಅದು ಸಿಡಿದ ರಭಸಕ್ಕೆ “ಬಂಡೆಯಂತಹ ಸರ್ಕಾರ”ವನ್ನೇ ಬುಡಮೇಲು ಮಾಡಿ, ಕರ್ನಾಟಕದಾದ್ಯಂತ ಹಸಿರು ಶಾಲಿಗೆ ಬಾರುಕೋಲಿಗೆ ಎಂದಿಲ್ಲದ ಗೌರವ ಮನ್ನಣೆಯನ್ನೂ, ಮಣ್ಣಿನ ಮಕ್ಕಳಿಗೆ ಬಂಡಾಯದ ಕೆಚ್ಚನ್ನೂ ಸಾಗರದಂಥ ಆತ್ಮವಿಶ್ವಾಸವನ್ನೂ ತಂದುಕೊಟ್ಟಿತ್ತೊಂದು ಅಗ್ನಿಪರ್ವತ! ತಲೆಮಾರು ತಲೆಮಾರುಗಳ ಕಾಲದಿಂದ ನೆಲದೊಡಲು ನುಂಗಿಕೊಂಡು ಬಂದಿದ್ದ ಅನ್ಯಾಯ ಶೋಷಣೆ ದಮನ ದಬ್ಬಾಳಿಕೆಗಳನ್ನೆಲ್ಲ ಒಮ್ಮೆಲೇ ಹೊರಹಾಕಿ ನಿರುಮ್ಮಳವಾದಂತೆ, ತಾನು ಸಿಡಿದ ಘನೋದ್ದೇಶ ಈಡೇರಿತೆಂಬಂತೆ ಅದು ಆನಂತರ ಕ್ರಮೇಣ ತಣಿದು ಸುಮ್ಮಗಾಗಿತ್ತು; ಅಥವಾ, ನೋಡಿದವರಿಗೆ ಹಾಗೆನ್ನಿಸಿತ್ತು. ಆ ಹಸಿರು ಅಗ್ನಿಪರ್ವತದ ಹೆಸರು […]

ಮಲ ಹೊರುವ ದಾಸ್ಯದ ವಿಮೋಚನೆಯ ಕೂಗು ಬೆಜ್ವಾಡ್ ವಿಲ್ಸನ್

ಮಲ ಹೊರುವ ದಾಸ್ಯದ ವಿಮೋಚನೆಯ ಕೂಗು ಬೆಜ್ವಾಡ್ ವಿಲ್ಸನ್

ಕರ್ನಾಟಕದ ಕೋಲಾರ ಮೂಲದ ಬೆಜ್ವಾಡ್ ವಿಲ್ಸನ್ ಅವರಿಗೆ ರೆಮನ್ ಮ್ಯಾಗ್ಸಸ್ಸೆ ಪ್ರಶಸ್ತಿ ಬಂದಿರುವುದು ದೇಶವ್ಯಾಪಿ ಚರ್ಚೆಯಾಗುತ್ತಿದೆ. ಮುಖ್ಯವಾಗಿ ಈ ಪ್ರಶಸ್ತಿಯ ಚರ್ಚೆಯ ಜತೆಗೆ ಮೊದಲ ಬಾರಿಗೆ ಭಾರತದ ಸಫಾಯಿ ಕರ್ಮಚಾರಿಗಳ ಸಮಸ್ಯೆಯ ಬಗ್ಗೆಯೂ ಜಗತ್ತಿನಾಧ್ಯಾಂತ ಅರಿಯುವಂತಾಗಿದೆ. ಎಲೈಟ್ ಸಾಮಾಜಿಕ ಕಾರ್ಯಕರ್ತರೇ ಮುಟ್ಟಲಾರದೆ ದೂರ ಇಟ್ಟಿದ್ದ ಸಫಾಯಿ ಕರ್ಮಚಾರಿಗಳ ಸಮಸ್ಯೆಯನ್ನು ರಾಜಕೀಯ ಹಕ್ಕೊತ್ತಾಯದ ದೊಡ್ಡ ಪ್ರಶ್ನೆಯನ್ನಾಗಿಸಿದ್ದು ಬೆಜ್ವಾಡ್ ವಿಲ್ಸನ್. ಸಮಾನಾಸಕ್ತರೊಂದಿಗೆ ಅವರು 1982 ರಲ್ಲಿ ಕಟ್ಟಿದ `ಸಫಾಯಿ ಕರ್ಮಚಾರಿ ಆಂದೋಲನ’ ನಿರಂತರವಾಗಿ ಸಫಾಯಿ ಕರ್ಮಚಾರಿಗಳ ಪರವಾದ ಹಕ್ಕೊತ್ತಾಯಗಳನ್ನು ಮಂಡಿಸುತ್ತಾ […]

ಪರ್ಯಾಯ ಚಿಂತನೆಗಳ ಸವಾಲುಗಳು

ಪರ್ಯಾಯ ಚಿಂತನೆಗಳ ಸವಾಲುಗಳು

ಜುಲೈ 2016 ರ 9 ಮತ್ತು 10 ಎರಡು ದಿನಗಳ ಕಾಲ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲಪುಟ್ಟಪ್ಪ ಸಭಾಭವನದಲ್ಲಿ ಜನಪರ್ಯಾಯ ಸಮಾವೇಶ ನಡೆಯಿತು. ನಿರೀಕ್ಷೆಗೂ ಮೀರಿ ಯುವ ಮತ್ತು ಮಧ್ಯವಯಸ್ಕ ಜನ ಸುರಿವ ಮುಂಗಾರಿನ ಮಳೆಯಲ್ಲಿ ಶ್ರದ್ಧೆಯಿಂದ ಕೂತಿದ್ದರು. ಬಹುಶಃ ಪ್ರಭುತ್ವದ ನಡೆಗಳನ್ನು ವಿಮರ್ಶಿಸುವ ಈಚಿನ ಎಲ್ಲ ಸಭೆಗಳಲ್ಲಿ ಈ ಥರದ್ದೊಂದು ಶ್ರದ್ಧೆ ಕಾಣಿಸುತ್ತದೆ. ಈ ರೀತಿಯ ಶ್ರದ್ಧೆ ಚಳುವಳಿಗಾರರಿಗೆ ಹೊಸ ಆಸೆ ಹುಟ್ಟಿಸುವಂತೆ ಕಾಣಿಸುವುದೇನೋ ನಿಜ.ಆದರೆ ಈ ಶ್ರದ್ಧೆ 80ರ ದಶಕದ […]

ನಕ್ಸಲ್ ಚಳುವಳಿ -2 : ವರ್ತಮಾನದ ಮಾವೋವಾದ ಮತ್ತು ಭಾರತ

ನಕ್ಸಲ್ ಚಳುವಳಿ -2 : ವರ್ತಮಾನದ ಮಾವೋವಾದ ಮತ್ತು ಭಾರತ

ವರ್ತಮಾನದ ಮಾವೋವಾದ ಮತ್ತು ಭಾರತ ಇಂದು ಮೇಲಿನ ವಿದ್ಯಾಮಾನಗಳು ಇಂಡಿಯಾ ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಒಂದು ರುದ್ರ ಪ್ರಹಸನದಂತೆ ನಿರಂತರವಾಗಿ ನಡೆಯುತ್ತಿದೆ. ಅದರಲ್ಲೂ ಖನಿಜ ಸಂಪತ್ತಿನಿಂದ ತುಂಬಿರುವ ಜಾರ್ಖಂಡ್ ಮತ್ತು ಒರಿಸ್ಸಾ , ಛತ್ತೀಸ್‍ಗಢ ರಾಜ್ಯಗಳು ಅಭಿವೃದ್ಧಿಯ ಹೆಸರಿನಲ್ಲಿ ಈ ಬಗೆಯ ಅತ್ಯಾಚಾರಕ್ಕೆ ತುತ್ತಾಗುತ್ತಿವೆ.ನಾಗರಿಕ ಸಮಾಜದಿಂದ ಯಾವುದೇ ಸಹಕಾರ ಮತ್ತು ಬೆಂಬಲ ದೊರೆಯದೆ ಅಲ್ಲಿನ ಆದಿವಾಸಿಗಳು ಮತ್ತು ರೈತಾಪಿ ಗ್ರಾಮಸ್ಥರು ಅನಿವಾರ್ಯವಾಗಿ ಮಾವೋವಾದಿಗಳೊಂದಿಗೆ ಕೈಜೋಡಿಸಿದ್ದಾರೆ.ಕಳೆದ ವರ್ಷಗಳಿಂದ ಸರ್ಕಾರ ಮತ್ತು ಭೂಗತ ಮಾವೋವಾದಿಗಳ ನಡುವೆ […]

ವಿಮೋಚನಾ ಹೋರಾಟದ ಹಣತೆ ಪ್ರೊ.ಬಿ. ಕೃಷ್ಣಪ್ಪ-2: ಹೋರಾಟದ ಮುಂಗೋಳಿ ಕೂಗು :

ವಿಮೋಚನಾ ಹೋರಾಟದ ಹಣತೆ ಪ್ರೊ.ಬಿ. ಕೃಷ್ಣಪ್ಪ-2: ಹೋರಾಟದ ಮುಂಗೋಳಿ ಕೂಗು :

ಹೋರಾಟದ ಮುಂಗೋಳಿ ಕೂಗು : ಆಗ ಅಮೆರಿಕಾ ಮತ್ತು ಆಫ್ರಿಕಾಗಳ ನೀಗ್ರೋ ಕಪ್ಪು ಲೇಖಕರು  ಬಿಳಿಯರ ವಸಾಹತುಶಾಹಿ ಧೋರಣೆ ಹಾಗೂ ವರ್ಣಬೇಧ ನೀತಿಯನ್ನು ವಿರೋಧಿಸಿ ಸಾಹಿತ್ಯ ರಚಿಸುತ್ತಾ Black is Beautiful ಎಂಬ ಘೋಷಣೆಯೊಂದಿಗೆ ಸ್ವಾಭಿಮಾನಿ ಹೋರಾಟ ನಡೆಸುತ್ತಿದ್ದರು. ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಸಂಘಟನೆಯು ಅಲ್ಲಿನ ದಲಿತ ಕವಿ ನಾಮದೇವ ಡಸ್ಸಾಳರ ‘ಗೋಲಪೀಠ’ ಎಂಬ ಕ್ರಾಂತಿಕಾರಿ ಪುಸ್ತಿಕೆಯ ಪ್ರಕಟಣೆಯೊಂದಿಗೆ ದಲಿತ ಚಳುವಳಿಯಲ್ಲಿ ತೊಡಗಿಕೊಂಡಿತ್ತು. ಇನ್ನು ಆಂಧ್ರದಲ್ಲಿ ಚರಬಂಡರಾಜು, ನಗ್ನಮುನಿ (ಕೊಯಗುರ್ರಂ), ವರವರರಾವು ಮುಂತಾದ ದಿಗಂಬರ ರಚಯಿತಲು ಹಾಗೂ ವಿಪ್ಲವ […]

ನಕ್ಸಲ್ ಚಳುವಳಿ -1 : ನಿಜ ಎತ್ತಿಹಿಡಿಯಲಾಗದ ಸುಳ್ಳನ್ನು ಖಂಡಿಸಲಾಗದ ಸ್ಥಿತಿ

ನಕ್ಸಲ್ ಚಳುವಳಿ -1 : ನಿಜ ಎತ್ತಿಹಿಡಿಯಲಾಗದ ಸುಳ್ಳನ್ನು ಖಂಡಿಸಲಾಗದ ಸ್ಥಿತಿ

ಪ್ರಗತಿಪರ ಚಿಂತಕರು, ಮಾನವತಾವಾದಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದ ದಿವಂಗತ ಪ್ರೊ. ಬಾಲಗೋಪಾಲ್ ನೆನಪಾದಾಗಲೆಲ್ಲ ಪ್ರಭುತ್ವದ ಹಿಂಸೆಯನ್ನು ಮತ್ತು ಭೂಗತ ಚಳುವಳಿಗಳ ಪ್ರತಿ ಹಿಂಸೆಯ ಕುರಿತಾಗಿ ಅಥೆಂಟಿಕ್ ಆಗಿ ಮಾತನಾಡಲು ಇವರಿಗೆ ಮಾತ್ರ ಸಾಧ್ಯವೇನೋ ಅನ್ನುವಷ್ಟರ ಮಟ್ಟಿಗೆ ಇವರು ತಮ್ಮ ಸಾರ್ವಜನಿಕ ಜೀವನವನ್ನು ವ್ಯವಸ್ಥೆಯ ಶಾಂತಿಗಾಗಿ ಮೀಸಲಿಟ್ಟಿದ್ದಾರೆ. ಸರಳತೆ ಹಾಗೂ ಅದ್ಭುತ ಪ್ರತಿಭೆ ಎರಡೂ ಒಂದಕ್ಕೊಂದು ಪೂರಕವಾಗಿ ಇವರ ವ್ಯಕ್ತಿತ್ವದಲ್ಲಿ ಬೆರೆತು ಹೋಗಿದೆ. ಪ್ರೊ. ಬಾಲಗೋಪಾಲ್ ಅವರು ಕಾಕತೀಯ ವಿಶ್ವವಿದ್ಯಾಲಯದಲ್ಲಿ ಗಣಿತದ ರೀಡರ್ ಆಗಿದ್ದರು. ಮಾನವ ಹಕ್ಕುಗಳ […]