ಚಳವಳಿ

ಚಳವಳಿ

ಜನನುಡಿ-ಕಟ್ಟುವಿಕೆಯ ಪ್ರಕ್ರಿಯೆ

ಜನನುಡಿ-ಕಟ್ಟುವಿಕೆಯ ಪ್ರಕ್ರಿಯೆ

ಈ ಬಾರಿಯ ನಾಲ್ಕನೇ ಜನನುಡಿ ಕಾರ್ಯಕ್ರಮವು ತುಸುಹೆಚ್ಚಿನ ಮಟ್ಟಿಗೆಯೇ ಸದ್ದು ಮಾಡಿತು. ಮಳೆನಿಂತರೂ ಮರದ ಹನಿಗಳು ನಿಲ್ಲುವುದಿಲ್ಲ ಎಂಬ ಮಾತಿನಂತೆ  ಜನನುಡಿಯ ಕುರಿತು ಕೆಲವು ಕಡೆ ಚರ್ಚೆ, ವಾದ-ವಿವಾದಗಳು ಬಹು ಬಿರುಸಿನಿಂದ ಸಾಗಿದವು. ಮಂಗಳೂರಿನ ಶಾಂತಿಕಿರಣದಲ್ಲಿ  ನಡೆದ ಎರಡು ದಿನದ ಜನನುಡಿಯು ಸಾಹಿತಿಗಳ, ವಿಚಾರಶೀಲ, ಪ್ರಗತಿಪರ ಚಿಂತನೆಯುಳ್ಳವರ ಹಾಗೂ ಯುವಜನತೆಯ ಸಮಾಗಮವಾಗಿ ಜನನುಡಿಯು ಹೊಮ್ಮಿದೆ. ನಾಡಿನ ಬೇರೆ ಬೇರೆ ಭಾಗದಲ್ಲಿದ್ದ ಸಮಾನ ಮನಸ್ಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ನಿಜವಾದ ಜನರ ನುಡಿಯೇ ಇದು ಎಂದು ಸಾಬೀತು ಪಡಿಸಿದರು. […]

ಕಂಬಾಲಪಲ್ಲಿ-ದಿಡ್ಡಳ್ಳಿಯ ಸೇತುವೆ ಶಿಥಿಲವಾಗಿಯೇ ಇದೆ

ಕಂಬಾಲಪಲ್ಲಿ-ದಿಡ್ಡಳ್ಳಿಯ ಸೇತುವೆ ಶಿಥಿಲವಾಗಿಯೇ ಇದೆ

“ ಭವ್ಯ ಭಾರತದ ಪರಂಪರೆ ” ಈ ಪದಗಳ ಬಳಕೆ ಎಷ್ಟೇ ಆಕರ್ಷಣೀಯವಾಗಿ ಕಂಡರೂ ಎಲ್ಲೋ ಒಂದು ಕಡೆ ಅಭಾಸವನ್ನೂ ಮೂಡಿಸುತ್ತದೆ. ಯಾವ ಭಾರತ, ಎತ್ತಣ ಭವ್ಯ, ಎಂತಹ ಪರಂಪರೆ ಎಂಬ ಮರುಪ್ರಶ್ನೆ ಹುಟ್ಟುತ್ತದೆ. ಇತಿಹಾಸ ಚಕ್ರ ಉರುಳಿದ ಮಾರ್ಗಗಳನ್ನು ಕ್ರಮಿಸುತ್ತಾ ಬರುವಾಗ ರಾಮರಾಜ್ಯ, ಕುರುಕ್ಷೇತ್ರ ಮಗಧ ಸಾಮ್ರಾಜ್ಯದ ಹೆಜ್ಜೆಗುರುತುಗಳನ್ನು ಮಾತ್ರವೇ ಗಮನಿಸುವ ಸಾಂಪ್ರದಾಯಿಕ ಮನಸುಗಳಿಗೆ ನಿಷಾದರ ಆಕ್ರಂದನ, ಶಂಭೂಕನ ಮೌನ ಮತ್ತು ಬಲಿ ಚಕ್ರವರ್ತಿಯ ದಮನ ಗೋಚರಿಸುವುದೇ ಇಲ್ಲ. 21ನೆಯ ಶತಮಾನದ ಎರಡನೆಯ ದಶಮಾನದಲ್ಲಿ ಭಾರತ […]

ಅಗಲಿದ ಕ್ರಾಂತಿಕಾರಿ ಕ್ಯಾಸ್ಟ್ರೋಗೆ ಲಾಲ್ ಸಲಾಂ

ಅಗಲಿದ ಕ್ರಾಂತಿಕಾರಿ ಕ್ಯಾಸ್ಟ್ರೋಗೆ ಲಾಲ್ ಸಲಾಂ

ಕ್ಯೂಬಾದ ಗ್ರಾಮವೊಂದರಲ್ಲಿ ಶ್ರೀಮಂತ ರೈತ ಕುಟುಂಬದಲ್ಲಿ ಜನಿಸಿದ ಕ್ಯಾಸ್ಟ್ರೋ ತನ್ನ ಬಾಲ್ಯದ ದಿನಗಳಿಂದಲೇ ಪ್ರತಿಭಟನೆಯ ಮನೋಭಾವವನ್ನು ರೂಢಿಸಿಕೊಂಡವರು. ತನ್ನ ಕೌಟುಂಬಿಕ ಬೆಳವಣಿಗೆಯಲ್ಲಾಗಲೀ, ಹಿನ್ನೆಲೆಯಿಂದಾಗಲೀ ಕ್ಯಾಸ್ಟ್ರೋ ಯಾವುದೇ ರೀತಿಯ ಕ್ರಾಂತಿಕಾರಿ ಪರಂಪರೆಯನ್ನು ಕಂಡವರಾಗಿರಲಿಲ್ಲ. ತಂದೆಯ ಆಕಾಂಕ್ಷೆಯ ಮೇರೆಗೆ ಕಾನೂನು ಪದವಿ ಪಡೆದ ಕ್ಯಾಸ್ಟ್ರೋ ತನ್ನ 1952ರಲ್ಲಿ ಕ್ಯೂಬಾವನ್ನು ಆಳುತ್ತಿದ್ದ ಸರ್ವಾಧಿಕಾರಿ ಜನರಲ್ ಬಾಟಿಸ್ಟಾ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಿ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅವರ ಜೀವನದಲ್ಲಿ ಮಹತ್ತರ ತಿರುವನ್ನು ನೀಡಿತ್ತು. 50ರ ದಶಕದಲ್ಲಿ ಕ್ಯಾಸ್ಟ್ರೋ ಒಬ್ಬ ರಾಷ್ಟ್ರೀಯವಾದಿಯಾಗಿಯೇ ರೂಪುಗೊಂಡಿದ್ದರು. […]

ಚಲೋ ಉಡುಪಿ ಮುಂದಿರುವ ಸವಾಲುಗಳು

ಚಲೋ ಉಡುಪಿ ಮುಂದಿರುವ ಸವಾಲುಗಳು

ಊನ ಏಕೆ ಸಂಭವಿಸಿದೆ ? ದಾದ್ರಿ ಏಕೆ ಘಟಿಸಿದೆ ? ರೋಹಿತ್ ವೇಮುಲನ ಆತ್ಮಹತ್ಯೆಗೆ ಕಾರಣವೇನು ? ಕನ್ನಯ್ಯ ಕುಮಾರ್ ಏಕೆ ದೇಶದ್ರೋಹಿಯಾಗಿ ಕಾಣುತ್ತಾನೆ ? ಖೈರ್ಲಾಂಜಿ, ಕಂಬಾಲಪಲ್ಲಿ, ಕರಂಚೇಡು,  ಸುಂಡೂರು, ಬತಾನಿತೊಲ, ಲಕ್ಷ್ಮಣ ಬಾತೆ ಘಟನೆಗಳು ಏಕೆ ಸಂಭವಿಸುತ್ತವೆ ? ಈ ಪ್ರಶ್ನೆಗಳು ಭಾರತದ ಸಾರ್ವಜನಿಕ ಪ್ರಜ್ಞೆಯನ್ನು ಕಾಡುತ್ತಿರುವಂತೆಯೇ ಪ್ರಶ್ನೆಗಳಿಗೆ ಉತ್ತರ ಹುಡುಕಲು ಇತಿಹಾಸ ಶೋಧಿಸಬಹುದು. ಉತ್ತರ ದೊರೆಯಲೂಬಹುದು. ಆದರೆ ಈ ಪ್ರಶ್ನೆಗಳು ಸೃಷ್ಟಿಸುವ ಮತ್ತೊಂದು ನಿಗೂಢ ಪ್ರಶ್ನೆ , ಈ ಘಟನೆಗಳ ರೂವಾರಿಗಳಿಗೆ ಏಕೆ […]

ಬನ್ನಿ ..ಕಾಶ್ಮೀರವನ್ನು ಅರ್ಥಮಾಡಿಕೊಳ್ಳೋಣ ..

ಬನ್ನಿ ..ಕಾಶ್ಮೀರವನ್ನು  ಅರ್ಥಮಾಡಿಕೊಳ್ಳೋಣ ..

ಆತ್ಮೀಯರೇ, ದಯವಿಟ್ಟು ಒಂದೇ ಒಂದು  ನಿಮಿಷ ಕೊಟ್ಟು ಇದನ್ನು ಓದಿ…  ಕಳೆದ ಜುಲೈ ೮ ಕ್ಕೆ ಪ್ರಾರಂಭವಾದ ಕಾಶ್ಮೀರಿ ಬಂಡಾಯ ಇಂದು ೪ ನೇ ತಿಂಗಳಿಗೆ ಕಾಲಿರಿಸುತ್ತಿದೆ.. ಕಳೆದ ೩ ತಿಂಗಳ ಒಂದು ಸಣ್ಣ report card ಕೆಳಗಿದೆ..  ಮೂರನೇ  ತಿಂಗಳ ಅಂತ್ಯದ ವೇಳೆಗೆ:  93- ಕಾಶ್ಮೀರಿ (ಮಕ್ಕಳು, ಹೆಂಗಸರನ್ನು ಒಳಗೊಂಡಂತೆ )ಗಳನ್ನೂ ಭಾರತದ ಸೇನಾ ಪಡೆಗಳು ಪೆಲೆಟ್ ಮತ್ತು ಗುಂಡು ದಾಳಿಗಳಲ್ಲಿ ಕೊಂದುಹಾಕಿವೆ ..  1000+- ಕಾಶ್ಮೀರಿ ಜನತೆ,  ವಿಶೇಷವಾಗಿ ನವ ಯುವಕರು,  ಪೆಲೆಟ್ ದಾಳಿಗಳಲ್ಲಿ ತಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ..  12,344- […]

ದಮನಿತ ಹೊಸ ತಲೆಮಾರಿನ ಎಚ್ಚೆತ್ತ ಪ್ರಜ್ಞೆ ಮತ್ತು ಚಲೋ ಉಡುಪಿ

ದಮನಿತ ಹೊಸ ತಲೆಮಾರಿನ ಎಚ್ಚೆತ್ತ ಪ್ರಜ್ಞೆ ಮತ್ತು ಚಲೋ ಉಡುಪಿ

ದಲಿತರ ಶೋಷಣೆಯ ಚಿತ್ರಗಳು ಜಾತಿವಾದಿ ಭಾರತz ಅಮಾನವೀಯ ಮುಖಗಳನ್ನು ಬಯಲಿಗೆಳೆಯುತ್ತಿವೆ. ದಲಿತರ ಹಲ್ಲೆ, ಶೋಷಣೆ, ಬಹಿಷ್ಕಾರದ ಸುದ್ದಿಗಳಿಗೆ ಪ್ರತಿಯಾಗಿ ದಮನಿತ ಹೊಸ ತಲೆಮಾರು ಪ್ರತಿರೋಧವನ್ನೂ ಒಡ್ಡುತ್ತಿದೆ. ಈ ಪ್ರತಿರೋಧ ದೇಶದ ಆಳುವ ವರ್ಗವನ್ನು ಬೆಚ್ಚಿಬೀಳಿಸುತ್ತಿದೆ. ಮೇಲುಜಾತಿಗಳ ಅಹಮ್ಮಿನ ಕೋಟೆಗಳನ್ನು ಅಲುಗಾಡಿಸುತ್ತಿವೆ. ಇದು ನಮ್ಮ ಕಾಲದಲ್ಲಿ ಹುಟ್ಟಿಕೊಂಡ ಹೊಸ ಎಚ್ಚರದ ಪ್ರಜ್ಞೆಯಾಗಿದೆ. ಇದೊಂದು ದಮನಿತರ ಪಾಲಿನ ಆಶಾದಾಯಕ ಬೆಳವಣಿಗೆ. ಬಹುಶಃ ಭಾರತದ ಚರಿತ್ರೆಯಲ್ಲಿ ಹೀಗೆ ದೇಶವ್ಯಾಪಿ ದಲಿತ ಕೆಳಜಾತಿ ಕೆಳವರ್ಗ ಧಾರ್ಮಿಕ ಅಲ್ಪಸಂಖ್ಯಾತ, ಲೈಂಗಿಕ ಅಲ್ಪಸಂಖ್ಯಾತ, ಮಹಿಳಾ, ದಮನಿತ […]

ಶೋಷಣೆ –ದಬ್ಬಾಳಿಕೆ ಮತ್ತು ಶಾಂತಿಮಂತ್ರ

ಶೋಷಣೆ –ದಬ್ಬಾಳಿಕೆ ಮತ್ತು ಶಾಂತಿಮಂತ್ರ

ಇತ್ತೀಚೆಗೆ ಗುಜರಾತ್‍ನ ಊನ ಗ್ರಾಮದಲ್ಲಿ ದಲಿತರ ಮೇಲೆ ನಡೆದ ಅಮಾನವೀಯ ಹಲ್ಲೆಯ ಹಿನ್ನೆಲೆಯಲ್ಲಿ ಪ್ರೊ ಕೆ ಎಸ್ ಭಗವಾನ್, ದಲಿತರ ರಕ್ಷಣೆಗಾಗಿ ಅವರ ಕೈಗೆ ಬಂದೂಕು ನೀಡಬೇಕು ಎಂದು ಹೇಳಿರುವುದು ಚರ್ಚೆಗೊಳಗಾಗಿದ್ದು ಪರ ವಿರೋಧಗಳ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ. ಹೋರಾಟದ ಮಾರ್ಗಗಳ ಶೋಧನೆಯಲ್ಲಿ ಇಂತಹ ಪಲ್ಲಟಗಳು ಸಹಜ, ಸಾಮಾನ್ಯ . ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಸೃಷ್ಟಿಸಿರುವ ಅಸಮಾನತೆ ಮತ್ತು ಅಪಮಾನಕರ ನೆಲೆಗಳ ಹಿನ್ನೆಲೆಯಲ್ಲಿ ಇಂತಹ ಗೊಂದಲಗಳೂ ಸಹಜ. 12ನೆಯ ಶತಮಾನದ ಬಸವಣ್ಣನ ಕಾಲದಿಂದ ಇಂದಿನವರೆಗೂ ಹೋರಾಟದ ಮಾರ್ಗಗಳು […]

ವಿಕೃತ ಮನಸ್ಸುಗಳಿಂದ ಮಲಿನಗೊಂಡ ಕಾವೇರಿ

ವಿಕೃತ ಮನಸ್ಸುಗಳಿಂದ ಮಲಿನಗೊಂಡ ಕಾವೇರಿ

ಕಾವೇರಿ ಯಾರ ಸ್ವತ್ತು ? ಕಾವೇರಿ ಯಾರ ಸಮಸ್ಯೆ ? ಬಹುಶಃ ಈ ಎರಡು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೊಳಗಾದರೆ ಕರ್ನಾಟಕ ಅಗ್ನಿಕುಂಡವಾಗುತ್ತದೆ. ಕನ್ನಡಿಗರು ಶಾಂತಿ ಪ್ರಿಯರು ಎಂಬ ನಾಣ್ಣುಡಿಯನ್ನು ಒಂದು ಮಿಥ್ಯೆ ಎಂದು ನಿರೂಪಿಸಬೇಕಾದರೆ ಕಾವೇರಿ ಗಲಭೆ ಸೃಷ್ಟಿಯಾಗುವುದು ಅಗತ್ಯ. ಕಾವೇರಿ ಸಮಸ್ಯೆ ಸಮಸ್ತ ಕರ್ನಾಟಕದ ಜನತೆಯ ಸಮಸ್ಯೆ ಅಲ್ಲವಾದರೂ ಇಡೀ ರಾಜ್ಯವನ್ನೇ ಪ್ರಕ್ಷುಬ್ಧಗೊಳಿಸುವ ವಿದ್ಯಮಾನ ಹೇಗಾಗುತ್ತದೆ ? ಸಮಗ್ರ ದೃಷ್ಟಿಯಿಂದ ನೋಡಿದಾಗ ಕಾವೇರಿ ಇಡೀ ರಾಜ್ಯದ ಜನತೆಯ ಸಮಸ್ಯೆ ಅಲ್ಲ. ಮೈಸೂರು, ಬೆಂಗಳೂರು ಮತ್ತು […]

ಚಿಂತನೆಗಳ ಹಂತಕರೂ ಹಂತಕರ ಚಿಂತನೆಗಳೂ

ಚಿಂತನೆಗಳ ಹಂತಕರೂ ಹಂತಕರ ಚಿಂತನೆಗಳೂ

ಖ್ಯಾತ ಸಂಶೋಧಕ, ಸಾಹಿತಿ, ವಿಚಾರವಾದಿ ಮತ್ತು ಮಾನವತೆಯ ಪ್ರತಿಪಾದಕ ಡಾ ಎಂ ಎಂ ಕಲಬುರ್ಗಿ ಹತ್ಯೆಯಾಗಿ ಒಂದು ವರ್ಷ ಕಳೆದಿದೆ. ಧಾರವಾಡದಲ್ಲಿ ಈ ಸಂದರ್ಭದಲ್ಲಿ ನೆರೆದು ಕಲಬುರ್ಗಿಯವರ ಹತ್ಯೆಗೆ ಸಾರ್ವಜನಿಕ ಪ್ರತಿರೋಧ ವ್ಯಕ್ತಪಡಿಸಿದ ಜನಸ್ತೋಮದ ಆಗ್ರಹ ಒಂದೇ ಆಗಿತ್ತು. ಕಲಬುರ್ಗಿಯವರ ಹಂತಕರ ಬಂಧನ. ಆದರೆ ಈ ಸಂದರ್ಭದಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ಕಲಬುರ್ಗಿಯ ಹಂತಕರು ಯಾರು? ಹಂತಕರಿಗೆ ಏಕೆ ಇನ್ನೂ ಶಿಕ್ಷೆಯಾಗಿಲ್ಲ ? ಗೋವಿಂದ ಪನ್ಸಾರೆ, ಧಬೋಲ್ಕರ್ ಮತ್ತು ಕಲಬುರ್ಗಿಯವರ ಹತ್ಯೆಯ ಹಿಂದಿರುವ ಅಧಿಪತ್ಯದ ಶಕ್ತಿಗಳಾದರೂ ಯಾವುದು? […]

ಕಾವೇರಿಯಲ್ಲಿ ಪ್ರೀತಿ ಸದ್ಭಾವನೆ ಹರಿಯಲಿ

ಕಾವೇರಿಯಲ್ಲಿ ಪ್ರೀತಿ ಸದ್ಭಾವನೆ ಹರಿಯಲಿ

ಶತಮಾನದ ಸಮಸ್ಯೆಯಾಗಿರುವ ಕಾವೇರಿ ವಿವಾದ ಮತ್ತೊಮ್ಮೆ ಕಾವೇರುತ್ತಿದೆ. 1991ರ ಕರಾಳ ಛಾಯೆ ಮತ್ತೊಮ್ಮೆ ರಾಜ್ಯದಾದ್ಯಂತ ಆವರಿಸುತ್ತಿದೆ. ಮಾನವರ ಉಳಿವಿಗೆ ಅತ್ಯಗತ್ಯವಾದ ನೀರು, ಅಮಾಯಕರ ಅಂತ್ಯಕ್ಕೆ ಕಾರಣವಾಗುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಕರ್ನಾಟಕದ ಜೀವನದಿ ಎಂದೇ ಜನಜನಿತವಾಗಿರುವ ಕಾವೇರಿ ಜೀವಹಾನಿಗೆ ವೇದಿಕೆಯಾಗುವ ಸಂಭವವೂ ಹೆಚ್ಚಾಗುತ್ತಿದೆ. ಇದು ಆತಂಕಕಾರಿ ವಿಚಾರ. ನಿಜ, ರಾಜ್ಯದ ಸಮಸ್ತ ಜನತೆ ಹೋರಾಟದಲ್ಲಿ ತೊಡಗಿದೆ. ಜಾತಿ, ಧರ್ಮ, ಪಕ್ಷ, ಭಾಷೆಗಳ ಹಂಗನ್ನು ತೊರೆದು ಕರ್ನಾಟಕದ ಜನತೆ ಕಾವೇರಿ ನದಿ ನೀರಿನ ರಕ್ಷಣೆಗಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಕೆಲವರು ಅನಿವಾರ್ಯತೆಯಿಂದ, […]