ಚಳವಳಿ

ಚಳವಳಿ

ನಡೆದರಷ್ಟೇ ಮೂಡುವುದು ಹೊಸ ದಾರಿ, ನುಡಿದರಷ್ಟೇ ಕೇಳುವುದು ಹೊಸ ಹಾಡು

ನಡೆದರಷ್ಟೇ ಮೂಡುವುದು ಹೊಸ ದಾರಿ, ನುಡಿದರಷ್ಟೇ ಕೇಳುವುದು ಹೊಸ ಹಾಡು

ಎಲ್ಲವೂ ಆಗಿ ಹೋಗಿದೆ, ಮತ್ತು ಎಲ್ಲವೂ ಉಳಿದಿದೆ ಆದರೆ ನಾವು ಮುನ್ನುಗ್ಗುವದೇ ನಮ್ಮ ಕಾರ್ಯಭಾರ ರಸ್ತೆಗಳನ್ನು ನಿರ್ಮಿಸುತ್ತಾ ಸಾಗುವುದು ಸಮುದ್ರವನ್ನು ಸೀಳಿಕೊಂಡ ರಸ್ತೆಗಳು ಪಯಣಿಗನೆ, ನಿನ್ನ ಹೆಜ್ಜೆ ಗುರುತುಗಳೇ ರಸ್ತೆ ಮತ್ತೇನಿಲ್ಲ ಪಯಣಿಗನೇ ಅಲ್ಲಿ ರಸ್ತೆಯೇ ಇಲ್ಲ ನಡೆದರಷ್ಟೇ ಮೂಡುವುದು ಹೊಸ ದಾರಿ ನಮ್ಮ ನಡೆಯೇ ರಸ್ತೆ                                           […]

ನಮ್ಮ ತಪ್ಪಿನ ಶಿಲುಬೆಗಳನ್ನು ಕಾಶ್ಮೀರಿಗಳು ಹೊರುತ್ತಿದ್ದಾರೆ..

ನಮ್ಮ ತಪ್ಪಿನ ಶಿಲುಬೆಗಳನ್ನು ಕಾಶ್ಮೀರಿಗಳು ಹೊರುತ್ತಿದ್ದಾರೆ..

ಸತ್ಯಗಳು ಬಯಲಾಗುತ್ತವೆಂಬ ಹೆದರಿಕೆಯಿಂದಲೇ ಸರ್ಕಾರವು ಕಾಶ್ಮೀರದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿದೆ. ಈ ಹಿಂದೆ ಕಾಶ್ಮೀರದಲ್ಲಿ ತಪ್ಪುಸುದ್ದಿಗಳು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕೆಲವು ಬಾರಿ ಸುದ್ದಿಗಳ ಸಾರವನ್ನು ಮತ್ತು ಕೆಲವೊಮ್ಮೆ ಕೆಲವು ಸುದ್ದಿತಾಣಗಳನ್ನೇ ನಿಷೇಧಿಸಿರುವುದುಂಟು. ಆದರೆ ಈಗ ಹೇರಲಾಗಿರುವ ನಿಷೇಧ ಹಿಂದಿನ ನಿಷೇಧಗಳ ತರದ್ದಲ್ಲ.  ಕಾಶ್ಮೀರಿ ಹೋರಾಟಗಾರರು ಪರಸ್ಪರ ಸಂಪರ್ಕವಿಟ್ಟುಕೊಂಡು ಸಂಘಟಿತರಾಗಬಾರದೆಂಬುದೂ ಮತ್ತು ಹಲವು ಮಾನವ ಹಕ್ಕು ಉಲ್ಲಂಘನೆಗಳನ್ನು ಬಟಾಬಯಲು ಮಾಡುವ ಪ್ರತಿಭಟನೆಗಳ ವಿಡಿಯೋಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ತಡೆಗಟ್ಟುವುದೇ ಈ ಬಾರಿ ಸಾಮಾಜಿಕ ಮಾಧ್ಯಮಗಳ ಮೇಲೆ ಒಂದು ತಿಂಗಳ […]

ಮಣಿಪುರದ ಸಂದೇಶ: ಕೈಯನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡುವಂತೆ

ಮಣಿಪುರದ ಸಂದೇಶ: ಕೈಯನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡುವಂತೆ

ಪೊಳ್ಳು ಎನ್ಕೌಂಟರ್ ಪ್ರಕರಣದಲ್ಲಿ ಸುಪ್ರಿಂ ಕೋರ್ಟು ನೀಡಿರುವ ಆದೇಶ ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯುತ್ತದೆ. ಮಣಿಪುರದಲ್ಲಿ ನಡೆದ ಪೊಳ್ಳು ಎನ್ಕೌಂಟರ್‌ಗಳ ಬಗ್ಗೆ ೨೦೧೬ರ ಜುಲೈನಲ್ಲಿ ಸುಪ್ರೀಂ ಕೋರ್ಟು ಒಂದು ಸ್ಪಷ್ಟವಾದ ಆದೇಶವನ್ನು ನೀಡಿತ್ತು. ಕೇಂದ್ರ ಸರ್ಕಾರವು ಈ ಆದೇಶದ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಹಾಕಿಕೊಂಡಿತ್ತು. ಇತ್ತೀಚೆಗೆ ಸುಪ್ರಿಂ ಕೋರ್ಟು ಕೇಂದ್ರ ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ. ಇದು ಅತ್ಯಂತ ಮಹತ್ವದ ಆದೇಶವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರವು ಯಾವುದೆಲ್ಲಾ ದೇಶದ ಆಸಕ್ತಿಗೆ ವಿರುದ್ಧವೆಂದು ಭಾವಿಸುತ್ತದೋ ಅಂಥಾ […]

ಮೇ ದಿನವನ್ನು  ನೆನೆಯುತ್ತಾ

ಮೇ ದಿನವನ್ನು  ನೆನೆಯುತ್ತಾ

“On May 1, 1886, Chicago unionists, reformers, socialists,anarchists, and ordinary workers combined to make the city the center of the national movement for an eight-hour day. Between April 25 and May 4, workers attended scores of meetings and paraded through the streets at least 19 times. On Saturday, May 1, 35,000 workers walked off their […]

ಮೇಯುತಿರುವ ಬೇಲಿಗಳೂ ಬೇಯುತಿರುವ ಶ್ರಮಿಕರೂ

ಮೇಯುತಿರುವ ಬೇಲಿಗಳೂ ಬೇಯುತಿರುವ ಶ್ರಮಿಕರೂ

ಮೇ ದಿನಾಚರಣೆ ವಿಶ್ವ ಕಾರ್ಮಿಕರಿಗೆ ಹಬ್ಬದ ದಿನವಲ್ಲ. ವಿಶ್ರಾಂತಿಯ ದಿನವಲ್ಲ. ವಿಜೃಂಭಿಸುವ ದಿನವಲ್ಲ. ಅಥವಾ ಆಚರಣೆಯೂ ಅಲ್ಲ. 130 ವರ್ಷಗಳಿಂದ ವಿಶ್ವದ ಶ್ರಮಜೀವಿಗಳನ್ನು ಒಂದುಗೂಡಿಸುವ ಭೌತಿಕ ವೇದಿಕೆಯಾಗಿ, ಬೌದ್ಧಿಕ ಚಿಂತನೆಯಾಗಿ, ಲೌಕಿಕ ಚಿಮ್ಮುಹಲಗೆಯಾಗಿ, ರಾಜಕೀಯ ಭೂಮಿಕೆಯಾಗಿ ಮೇ ದಿನಾಚರಣೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕಾರಣ ಶ್ರಮಜೀವಿಗಳ ಬದುಕು ಇನ್ನೂ ಸವಾಲುಗಳನ್ನು ಎದುರಿಸುತ್ತಲೇ ಇದೆ. ಶ್ರಮಜೀವಿಗಳ ಸ್ವರೂಪ ಬದಲಾಗಿದೆ, ಧೋರಣೆ ಬದಲಾಗಿದೆ, ಸಾಮಾಜಿಕ-ಆರ್ಥಿಕ ಸ್ಥಿತ್ಯಂತರಗಳು ಬದಲಾಗಿವೆ, ರಾಜಕೀಯ ಪರಿಭಾಷೆ ಬದಲಾಗಿದೆ ಆದರೆ ಶೋಷಣೆ ಯಥಾಸ್ಥಿತಿಯಲ್ಲಿದೆ. ಬಂಡವಾಳ ವ್ಯವಸ್ಥೆಯ ದೌರ್ಜನ್ಯ […]

ರೈತರ ಗೋಳು ಕೇಳೋರ್ ಯಾರು? 

ರೈತರ ಗೋಳು ಕೇಳೋರ್ ಯಾರು? 

ದೆಹಲಿಯಲ್ಲಿ ತಮಿಳುನಾಡಿನ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 41ನೇ ದಿನಕ್ಕೆ ಕಾಲಿಟ್ಟಿದೆ. ಸಾಲ ಮನ್ನಾ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಮಿಳುನಾಡಿನ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತೀವ್ರ ಬರಗಾಲದ ಹಿನ್ನೆಲೆಯಲ್ಲಿ ತಮಿಳುನಾಡಿಗೆ 40,000 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕು, ರಾಷ್ಟ್ರೀಯ ಬ್ಯಾಂಕ್​ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು, ಅಶಕ್ತ ರೈತರಿಗೆ ವೃದ್ಧಾಪ್ಯ ವೇತನ ನೀಡಬೇಕು, ಉತ್ತರದಿಂದ ದಕ್ಷಿಣಕ್ಕೆ ನದಿ ಜೋಡಣೆ ಮಾಡಬೇಕು ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿ ರೈತರು ರಾಷ್ಟ್ರ […]

ಕಾಶ್ಮೀರ ನೀಡಿರುವ ಸಂದೇಶ ಸ್ಪಷ್ಟವಾಗಿದೆ!

ಕಾಶ್ಮೀರ ನೀಡಿರುವ ಸಂದೇಶ ಸ್ಪಷ್ಟವಾಗಿದೆ!

ಸಂಸತ್ ಉಪಚುನಾವಣೆಯ ಬಹಿಷ್ಕಾರವು ಭಾರತದ ಪ್ರಭುತ್ವದ ಬಗ್ಗೆ ಕಾಶ್ಮೀರಿಗಳು ಎಷ್ಟು  ಭ್ರಮನಿರಸನಗೊಂಡಿದ್ದಾರೆಂಬುದನ್ನು ತೋರಿಸುತ್ತದೆ. ಕಾಶ್ಮೀರದ ಕಣಿವೆಯಲ್ಲಿ ನಡೆದ ಚುನಾವಣೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿರುವುದು ಅಲ್ಲಿನ ಜನರ ಬದಲಾಗುತ್ತಿರುವ ಮನೋಧರ್ಮಕ್ಕೆ ಸೂಚಕವೆಂದು ತುಂಬಾ ದಿನಗಳಿಂದ ಭಾರತೀಯರನ್ನು ನಂಬಿಸಿಕೊಂಡು ಬರಲಾಗಿದೆ. ನಾವೂ ಸಹ ಚುನಾವಣೆಯಲ್ಲಿ ಮತಹಾಕಿದವರ ಸಂಖ್ಯೆಯನ್ನು ಗಮನಿಸುತ್ತಿದ್ದೇವೆಯೇ ವಿನಃ ಮತವನ್ನು ಬಹಿಷ್ಕಾರ ಮಾಡಿದವರ ಸಂಖ್ಯೆ ಗಮನಿಸುತ್ತಿಲ್ಲ. ದಮನದ ತೀವ್ರತೆ ಎಷ್ಟೇ ಇದ್ದರೂ ಕಾಶ್ಮೀರಿಗಳು ಹೊರಬಂದು ತಮ್ಮ ಮತಗಳನ್ನು ಚಲಾಯಿಸುತ್ತಾರೆಂದು ನಮ್ಮನ್ನು ನಂಬಿಸಲಾಗಿತ್ತು. ಆದರೆ ಏಪ್ರಿಲ್ ೯ ರಂದು […]

ತರುಣ ಜಗತ್ತಿಗೆ ತೆರೆದಿರಲಿ- ಅಂಬೇಡ್ಕರ್ ನಮ್ಮೊಳಗೆ ಒಬ್ಬರಾಗಿರಲಿ

ತರುಣ ಜಗತ್ತಿಗೆ ತೆರೆದಿರಲಿ- ಅಂಬೇಡ್ಕರ್ ನಮ್ಮೊಳಗೆ ಒಬ್ಬರಾಗಿರಲಿ

ಡಾ ಬಿ ಆರ್ ಅಂಬೇಡ್ಕರ್ ಅವರ 125ನೆಯ ಜನ್ಮ ದಿನಾಚರಣೆಯನ್ನು ಇಂದು ಆಚರಿಸುತ್ತಿದ್ದೇವೆ. ಜನ್ಮ ದಿನಾಚರಣೆ ಆಚರಿಸುವುದು ಅಂಬೇಡ್ಕರರನ್ನು ಸ್ಮರಿಸಲೆಂದೋ ಅಥವಾ ಅಂಬೇಡ್ಕರರನ್ನು ನಾವಿನ್ನೂ ಮರೆತಿಲ್ಲ ಎಂದು ಮನದಟ್ಟು ಮಾಡಲೆಂದೋ ಆದರೆ ಅದು ವ್ಯರ್ಥ ಎನಿಸುತ್ತದೆ. ಇಂದು ಅಂಬೇಡ್ಕರರ್ ಸ್ಮರಣೆ ಮತ್ತು ವೈಭವೀಕರಣಕ್ಕಿಂತಲೂ, ಆರಾಧನೆ ಮತ್ತು ಭಜನೆಗಿಂತಲೂ ಮುಖ್ಯವಾಗಿ ಬೇಕಾಗಿರುವುದು ಅಂಬೇಡ್ಕರರನ್ನು ಮತ್ತು ಅವರ ತತ್ವಗಳನ್ನು ಗ್ರಹಿಸುವ ಬಗೆ ಮತ್ತು ಅವರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸುವ ವಿಧಾನ. ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗಗಳು ಯಾವುದು ? ಹಿಂಸಾತ್ಮಕವೋ ಅಹಿಂಸಾತ್ಮಕವೋ […]

ಕಠಿಣ ಸವಾಲುಗಳ ನಡುವೆ ದಕ್ಷಿಣಾಯಣದ ದಿಟ್ಟ ಪಯಣ

ಕಠಿಣ ಸವಾಲುಗಳ ನಡುವೆ ದಕ್ಷಿಣಾಯಣದ ದಿಟ್ಟ ಪಯಣ

ಬದಲಾದ ಸಂದರ್ಭದಲ್ಲಿ ಭಾರತದ ರಾಜಕಾರಣ ಹಲವು ಸಂಕೀರ್ಣ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 1991ರ ಜಾಗತೀಕರಣದ ಸಂದರ್ಭದಲ್ಲಿದ್ದ ಪರಿಸ್ಥಿತಿ ಇಂದು ಕಂಡುಬರುತ್ತಿಲ್ಲ. 2002ರ ಗೋದ್ರಾ-ಗುಜರಾತ್ ನಂತರ ಸಾಮಾಜಿಕ ತಲ್ಲಣಗಳು ಇಂದು ಕಾಣುತ್ತಿಲ್ಲ. 1989ರ ಸೋಮನಾಥ ರಥಯಾತ್ರೆಯ ತಲ್ಲಣಗಳ ರಾತ್ರಿ ಇಂದು ಕಾಣಲಾಗುತ್ತಿಲ್ಲ. ಅಥವಾ 2014ರ ರಾಜಕೀಯ ಸನ್ನಿವೇಶ ಇಂದು ಎದುರಾಗುತ್ತಿಲ್ಲ. ಭಾರತ ಖಚಿತವಾಗಿಯೂ ಮನ್ವಂತರದ ಹಾದಿಯಲ್ಲಿದೆ. ಮನ್ವಂತರ ಎಂದರೆ ಗುಣಾತ್ಮಕ ಎಂದೇ ಇರಬೇಕಿಲ್ಲ. ನಾವು ಎತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ದೇಶದ ಪ್ರಜ್ಞಾವಂತ ಜನತೆಯನ್ನು ಕಾಡುತ್ತಿದ್ದರೆ ನಾವು ಸಾಗುತ್ತಿರುವ ಹಾದಿಯೇ […]

ಹೋರಾಟದ ಮೇಲ್ಪಂಕ್ತಿ ಹಾಕಿಕೊಟ್ಟ ಮಾರುತಿ ಸುಜುಕಿ ಕಾರ್ಮಿಕರು

ಹೋರಾಟದ ಮೇಲ್ಪಂಕ್ತಿ ಹಾಕಿಕೊಟ್ಟ ಮಾರುತಿ ಸುಜುಕಿ ಕಾರ್ಮಿಕರು

ಮಾರುತಿ ಸುಜುಕಿ ಕಾರ್ಮಿಕರು ದಮನಕಾರಿ ಆಡಳಿತ ವರ್ಗ ಮತ್ತು ಅವರೊಂದಿಗೆ ಕೈಜೋಡಿಸಿದ ಪ್ರಭುತ್ವವನ್ನು ವೀರೋಚಿತವಾಗಿ ಎದುರಿಸಿದ್ದಾರೆ. ಗುತ್ತಿಗೆ ಕಾರ್ಮಿಕರ ನೇಮಕಾತಿ ವಿಷಯದಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್)ನ  ಕಾರ್ಮಿಕರು ಮತ್ತು ಮೇಲುಸ್ತುವಾರಿ ಸೂಪರ್ವೈಸರ್ ಒಬ್ಬರ ನಡುವೆ ನಡೆದ ಘರ್ಷಣೆ ಮತ್ತು ಆ ಘರ್ಷಣೆಯಲ್ಲಿ ೨೦೧೨ರಲ್ಲಿ ಆ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಜನರಲ್ ಮ್ಯಾನೇಜರ್ ಒಬ್ಬರು ಸಾವನ್ನಪ್ಪಿದ ಪ್ರಕರಣ ಕೋರ್ಟಿನ ಮೆಟ್ಟಿಲನ್ನೇರಿದ್ದು ದೇಶದೆಲ್ಲೆಡೆ ಸುದ್ದಿಯಾಗಿತ್ತು. ಆದರೆ ಎಲ್ಲರ ಗಮನವು ಈ ಘರ್ಷಣೆ ಮತ್ತು ಕೋರ್ಟು ಕೇಸಿನ […]