ಧರ್ಮ-ಆಧ್ಯಾತ್ಮ

ಧರ್ಮ-ಆಧ್ಯಾತ್ಮ

ಕಡಕೋಳ ಮಡಿವಾಳಪ್ಪ: ‘ತೊಗಲೊಳು ತೊಗಲ್ಹೊಕ್ಕು ತಗಲಿ ಬಂದವ ನೀನು’

ಕಡಕೋಳ ಮಡಿವಾಳಪ್ಪ: ‘ತೊಗಲೊಳು ತೊಗಲ್ಹೊಕ್ಕು ತಗಲಿ ಬಂದವ ನೀನು’

ಕಡಕೋಳ ಮಡಿವಾಳಪ್ಪನ ‘ಶರಣಾರ್ಥಿ’ ಎಂಬ ತತ್ವಪದವು ತತ್ವಪದಕಾರರ ಧಾರ್ಮಿಕ ಸೌಹಾರ್ದತೆಯ ಪರಿಕಲ್ಪನೆಯ ಸ್ವರೂಪವನ್ನು ಹಾಗೂ ಅದರ ಹಿಂದಿರುವ ತಾತ್ವಿಕ-ವಿನ್ಯಾಸಗಳನ್ನು ಖಚಿತವಾಗಿ ನಿರೂಪಿಸುತ್ತದೆ. ಸ್ಥಾಪಿತ ಧರ್ಮಗಳು ಜಡಗೊಂಡು ಆಂತರಿಕವಾಗಿ ಪುರೋಹಿತಶಾಹಿ ಮತ್ತು ಮೌಢ್ಯಗಳನ್ನು ಬೆಳೆಸಿ ಜನಸಮುದಾಯವನ್ನು ಶೋಷಿಸುತ್ತಿದ್ದವು ಹಾಗೂ ಜಡಗೊಂಡ ಧರ್ಮಗಳು ಪರಸ್ಪರ ದ್ವೇಷ ಅಸಹನೀಯತೆಗಳ ಕಾರಣದಿಂದ ಧಾರ್ಮಿಕ ಹಿಂಸೆಗೆ ವೇದಿಕೆಯಾಗುತ್ತಿದ್ದವು. ಈ ಬಗೆಯ ಧಾರ್ಮಿಕ ಹಿಂಸೆಗೆ ಪರ್ಯಾಯವಾಗಿ ಎಲ್ಲ ಧರ್ಮಜಾತಿ ಜನಾಂಗಗಳ ಜನಸಮುದಾಯಗಳು ಸೌಹಾರ್ದತೆಯಿಂದ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಒತ್ತಾಸೆಯಿಂದ ‘ಸಾಮರಸ್ಯ’ದ ತಾತ್ವಿಕತೆಯನ್ನು ಈ ತತ್ವಪದದಲ್ಲಿ ಪ್ರತಿಪಾದಿಸಲಾಗಿದೆ. ಒಂದು […]

ಅಂಬೇಡ್ಕರ್ ಚಿಂತನೆ-5 : ಶಾಸ್ತ್ರಗಳನ್ನು ತಿರಸ್ಕರಿಸುವುದರ ಮೂಲಕ ಜಾತಿಯನ್ನು ನಾಶಗೊಳಿಸಬೇಕು

ಅಂಬೇಡ್ಕರ್ ಚಿಂತನೆ-5 :  ಶಾಸ್ತ್ರಗಳನ್ನು ತಿರಸ್ಕರಿಸುವುದರ ಮೂಲಕ ಜಾತಿಯನ್ನು ನಾಶಗೊಳಿಸಬೇಕು

 ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರುವುದು ಹೇಗೆ? ಜಾತಿಯನ್ನು ನಿರ್ಮೂಲನೆ ಮಾಡುವುದು ಹೇಗೆ? ಜಾತಿಯನ್ನು ಸುಧಾರಣೆಗೊಳಿಸಬೇಕಾದರೆ ಮೊದಲು ಉಪಜಾತಿಗಳನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಲಾಗುತ್ತಿದೆ. ಇವರ ಕಲ್ಪನೆಯ ಪ್ರಕಾರ ಉಪಜಾತಿಗಳು ಮತ್ತು ಜಾತಿಗಳ ನಡುವಿನ ಸಾಮ್ಯತೆ, ಆಚರಣೆಯಲ್ಲಿನ,ವರ್ತನೆಯಲ್ಲಿನ ಸಾಮ್ಯತೆಯಿದೆ ಎನ್ನುವುದು. ಇದು ತಪ್ಪಾದ ಕಲ್ಪನೆ. ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವ ದಕ್ಷಿಣ ಭಾರತದ ಬ್ರಾಹ್ಮಣರಿಗೆ ಹೋಲಿಸಿದರೆ ಕೇವಲ ಅಡುಗೆ ಮಾಡುತ್ತಾ,ನೀರು ಮಾರುತ್ತಿರುವ ಮಧ್ಯ ಮತ್ತು ಉತ್ತರ ಭಾರತದ ಬ್ರಾಹ್ಮಣರು ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದಾರೆ. ಆದೇ ರೀತಿ ಉತ್ತರ ಭಾರತದ ವೈಶ್ಯರು […]

ಅಂಬೇಡ್ಕರ್ : ಹಿಂದೂ-ಅರ್ಥೈಸಿಕೊಳ್ಳಲು ನಮ್ಮ ಮುಂದಿರುವ ತೊಂದರೆಗಳು

ಅಂಬೇಡ್ಕರ್ : ಹಿಂದೂ-ಅರ್ಥೈಸಿಕೊಳ್ಳಲು ನಮ್ಮ ಮುಂದಿರುವ ತೊಂದರೆಗಳು

ಇಂಡಿಯಾ ದೇಶವು ಪಾರ್ಸಿ, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಹಿಂದೂಗಳಂತಹ ವಿಭಿನ್ನ ಸಮುದಾಯಗಳ ಒಂದು ಗುಚ್ಛ. ಈ ಕಮ್ಯೂನಿಟಿಗಳ ಮೂಲತತ್ವವು ವರ್ಣಬೇಧವನ್ನಾಧರಿಸಿದ ಜನಾಂಗ ನೀತಿಗಳಲ್ಲ. ಇದು ಧರ್ಮಗಳ ತಳಹದಿಯ ಮೇಲೆ ನಿಂತಿದೆ. ಇದು ಒಂದು ಪೊಳ್ಳುತನದ ನೋಟ ಮಾತ್ರ. ಆದರೆ ಒಬ್ಬ ಪಾರ್ಸಿ ಏಕೆ ಪಾರ್ಸಿ ಮಾತ್ರ? ಒಬ್ಬ ಕ್ರಿಶ್ಚಿಯನ್ ಏಕೆ ಕ್ರಿಶ್ಚಿಯನ್ ಮಾತ್ರ?,ಒಬ್ಬ ಮುಸ್ಲಿಂ ಏಕೆ ಮುಸ್ಲಿಂ ಮಾತ್ರ? ಒಬ್ಬ ಹಿಂದೂ ಏಕೆ ಹಿಂದೂ ಮಾತ್ರ? ಎನ್ನುವುದು ಮಾತ್ರ ಕುತೂಹಲಕರ. ಆದರೆ ಪಾರ್ಸಿ,ಕ್ರಿಶ್ಚಿಯನ್,ಮಸ್ಲಿಂ ಕುರಿತಾಗಿ ಯಾವುದೇ ಜಿಜ್ಞಾಸೆಗಳಿಲ್ಲ. […]

ಬೌದ್ಧಧರ್ಮ ಮತ್ತು ಸ್ವಾಭಿಮಾನ

ಬೌದ್ಧಧರ್ಮ ಮತ್ತು ಸ್ವಾಭಿಮಾನ

ಅಧ್ಯಕ್ಷರೇ! ಸಹೋದರಿ-ಸಹೋದರರೆ! ಸ್ವಾಭಿಮಾನ ಮತ್ತು ಬೌದ್ಧಧರ್ಮ ಎಂಬ ವಿಚಾರದ ಬಗ್ಗೆ ನಡೆಯುವ ಈ ಸಭೆಯಲ್ಲಿ ನಾನು ಮಾತನಾಡಬೇಕಾಗಬಹುದು ಎಂದು ಈ ಮೊದಲು ಭಾವಿಸಿರಲಿಲ್ಲ. ನಾನು ಇಂದು ರೈಲು ಪ್ರಯಾಣ ಆರಂಭಿಸಲು ಸ್ವಲ್ಪ ಸಮಯವಿದ್ದ ಕಾರಣ ಈ ಸಂಘದ ಕಾರ್ಯದರ್ಶಿಯವರು ನನ್ನನ್ನು ಈ ಸಭೆಗೆ ಆಹ್ವಾನಿಸಿದ ಕಾರಣ ಇಲ್ಲಿ ನಡೆಯುತ್ತಿರುವ ಉಪನ್ಯಾಸ ಕೇಳಿ ಹೋಗಲು ಬಂದೆ, ಈಗ ದಿಢೀರನೆ ನನ್ನನ್ನು ಮಾತನಾಡಬೇಕೆಂದು ಆದೇಶಿಸಿದರು. ಆದ ಕಾರಣ ತಮ್ಮ ಆದೇಶವನ್ನು ನಿರಾಕರಿಸದೆ ಸ್ವಲ್ಪ ಸಮಯ ಕೆಲವು ಮಾತುಗಳನ್ನಾಡುತ್ತೇನೆ. ನನ್ನ ಮಾತಿನಲ್ಲಿರುವ […]

ಧ್ಯಾನ: ಕೆಲವು ಸಂಗತಿಗಳು  

ಧ್ಯಾನ: ಕೆಲವು ಸಂಗತಿಗಳು  

 ಧ್ಯಾನ” ಎಂದರೇನು ಎಂದು ವಿವರಿಸಿಕೊಳ್ಳುವುದು ತುಸು ಪ್ರಾಯಾಸದಾಯಕ ಕೆಲಸ. ಯಾಕೆಂದರೆ ಧ್ಯಾನದ ಅರ್ಥವನ್ನು ಬಹುತೇಕ ಆಧ್ಯಾತ್ಮಿಕ ಅಥವಾ ಧಾರ್ಮಿಕ ನೆಲೆಯಲ್ಲಿ ವಿವರಿಸಿಕೊಳ್ಳಲಾಗಿದೆ. ಆಧ್ಯಾತ್ಮಿಕ ನೆಲೆಯಿಂದ ಬಿಡಿಸಿ ನೋಡುವುದೇ ಕಷ್ಟಸಾಧ್ಯ ಎನ್ನುವಂತಾಗಿದೆ. ಬಹುಮಟ್ಟಿಗೆ “ಧ್ಯಾನ” ಎಂದರೆ ‘ಹೀಗೆ’ ಎಂದು ನಿಖರವಾಗಿ ವಿವರಿಸಲು ಅಸಾಧ್ಯ. ಹೀಗಾಗಿ ಧ್ಯಾನಕ್ಕೆ ಹಲವು ವ್ಯಾಖ್ಯಾನಗಳು ಬಂದಿವೆ. ಧ್ಯಾನವನ್ನು ಒಂದರ್ಥದಲ್ಲಿ “ತಪಸ್ಸು” ಎಂದೂ ಕರೆಯಲಾಗುತ್ತದೆ. ಯಾಕೆಂದರೆ ಈಗ ಧ್ಯಾನವೆನ್ನುವುದನ್ನು ಹಿಂದೆ ‘ತಪಸ್ಸು’ ಎಂಬರ್ಥದಲ್ಲಿ ಕರೆದುಕೊಳ್ಳಲಾಗಿತ್ತು. ತಪಸ್ಸು ಮುಕ್ತಿಯ ಕಡೆಗೆ ಸಾಗಲು ಬಹುಮುಖ್ಯವಾದ ಮಾಧ್ಯಮವೇ ಆಗಿತ್ತು. ಹಾಗೆಯೇ […]

ಭಾರತ ನಾಸ್ತಿಕ ದೇಶವಾಗುತ್ತಿದೆಯೆ?

ಭಾರತ ನಾಸ್ತಿಕ ದೇಶವಾಗುತ್ತಿದೆಯೆ?

ಇನ್ನು ‘50 ವರ್ಷಗಳಲ್ಲಿ ಅಮೆರಿಕ ಆಸ್ತಿಕ ದೇಶವಾಗಲಿದೆ, ಭಾರತ ನಾಸ್ತಿಕ ದೇಶವಾಗಲಿದೆ’ ಎಂದು ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಎಂಭತ್ತರ ಸನ್ಮಾನ ಸಮಾರಂಭದ ಸಂಭ್ರಮದಲ್ಲಿ (ಪ್ರಜಾವಾಣಿ, ಡಿಸೆಂಬರ್ 24.12.2015) ಆತಂಕ ವ್ಯಕ್ತಪಡಿಸಿದ್ದಾರೆ. ಆದರಿದು ಕಲ್ಪಿತ ಆತಂಕವೇ ಅಥವಾ ಸಂಭವನೀಯವೇ ಎಂಬುದನ್ನು ನಾವೀಗ ಒರೆಗೆ ಹಚ್ಚಿ ನೋಡುವುದು ಉಚಿತ. ಯಾಕೆಂದರೆ, ಬನ್ನಂಜೆಯವರಂಥ ವಯೋವೃದ್ಧರೂ, ಜ್ಞಾನವೃದ್ಧರೂ ಹಾಗೂ ಮಾಧ್ವಮತ ದಾರ್ಶನಿಕರೂ ಆಡಿರುವ ಮಾತು ಕೇವಲ ಲಾಘವವಾದುದಲ್ಲ. ಅವರ ಮಾತಿನ ಆಂತರ್ಯದಲ್ಲಿ ಕೃಷ್ಣ ಭಕ್ತಿಪಾರಮ್ಯತೆ ಮನೆ ಮಾಡಿದೆ. ಆದ್ದರಿಂದ ಆಸ್ತಿಕ-ನಾಸ್ತಿಕ ವಿಚಾರಗಳು ಮುನ್ನೆಲೆಗೆ […]

ಪರ್ಯಾಯ: ಅಷ್ಟಮಠದ ಜಾಬ್ ರೊಟೇಷನ್

ಪರ್ಯಾಯ: ಅಷ್ಟಮಠದ ಜಾಬ್ ರೊಟೇಷನ್

ಎಂಟು ನೂರು ವರ್ಷದ ಇತಿಹಾಸವಿರುವ ಉಡುಪಿ ಅಷ್ಟಮಠಗಳಿಗೆ ಎರಡು ವರ್ಷಗಳಿಗೊಮ್ಮೆ ವಾರಸುದಾರರು ಬದಲಾಗುತ್ತಾರೆ. ಮಧ್ವಾಚಾರ್ಯರು ತಮ್ಮ ಕಾಲಾವಧಿಯಲ್ಲೇ ಈ ಪದ್ಧತಿಯನ್ನು ಜಾರಿಗೊಳಿಸಿದ್ದರು. ದ್ವೈತ ಸಿದ್ಧಾಂತದ ಹರಿಕಾರರಾದ ಮಧ್ವಾಚಾರ್ಯರು ಉಡುಪಿಯ ಕೃಷ್ಣಮಂದಿರವನ್ನು ತಮ್ಮ ತತ್ವಗಳ ಬೋಧನೆಯ ಕೇಂದ್ರವನ್ನಾಗಿ ಪರಿಗಣಿಸಿದ್ದರು. ಉಡುಪಿಯ ಸುತ್ತ ಮುತ್ತಲೂ ಮಧ್ವ ಸಿದ್ಧಾಂತವನ್ನು ಪ್ರಚಾರ ಮಾಡುತ್ತಾ ಅದ್ವೈತ ಸಿದ್ಧಾಂತಕ್ಕೆ ಪ್ರತಿಯಾಗಿ ದ್ವೈತ ಸಿದ್ಧಾಂತವನ್ನು ಸ್ಥಾಪಿಸಲೆತ್ನಿಸಿದ ಮಧ್ವಾಚಾರ್ಯರಿಗೆ ಈ ಸಂದರ್ಭದಲ್ಲಿ ಸ್ಥಾಪಿಸಲ್ಪಟ್ಟ ಕೃಷ್ಣ ಮಠಗಳು ಕೇಂದ್ರ ಬಿಂದುಗಳಾಗಿದ್ದವು. ಉಡುಪಿ ಕೃಷ್ಣ ಮಠ ಮತ್ತು ದೇವಾಲಯದಲ್ಲಿ ಪೂಜೆ ಸಲ್ಲಿಸುವ […]

ಧರ್ಮದ ಬಗೆಗೆ ಆದಿಪುರಾಣ ಹೇಳುವುದೇನು?

ಧರ್ಮದ ಬಗೆಗೆ ಆದಿಪುರಾಣ ಹೇಳುವುದೇನು?

ಆದಿಪುರಾಣವೊಂದು ಮಹಾರಣ್ಯ. ಅದು ಬಹುಕೋನಗಳಿಗೆ ತೆರೆದುಕೊಂಡ ಚಾಚುಗಳ ಸಮುಚ್ಚಯ. ಆದಿನಾಥ ಹಾಗೂ ಆತನ ಮಕ್ಕಳಾದ ಭರತ-ಬಾಹುಬಲಿಯರ ಕತೆಯ ಜೊತೆಗೆ ಭಾರತದ ಹಾಗೂ ಲೋಕದ ಬದುಕಿಗೆ ಸಂಬಂಧಿಸಿದ ಅನೇಕ ಸಂಗತಿಗಳು ಅಲ್ಲಿವೆ. ಜಾತಿಸ್ವರೂಪ, ವರ್ಣಸೃಷ್ಟಿ, ಅದರ ಗುಣಾವಗುಣಗಳ ಸಾಮಾಜಿಕ ನಿರೂಪಣೆಗಳ ಜೊತೆಗೆ ಲಿಂಗಾಧಾರಿತವಾದ ಸಾಮಾಜಿಕ ಚಹರೆಯನ್ನೂ ಕೃತಿ ಸೂಕ್ಷ್ಮವಾಗಿ ಒಳಗೊಳ್ಳುತ್ತದೆ. ಉತ್ಸವಾಚರಣೆ, ವೈವಾಹಿಕವಿಧಿ, ತಪಸ್ಸು ಮುಂತಾದ ಕ್ರಿಯಾಚರಣೆಗಳನ್ನೂ; ಪ್ರೀತಿ ಪ್ರಣಯವೇ ಮೊದಲಾದ ಜೀವಸಹಜ ಆಗುಹೋಗುಗಳನ್ನೂ ಒಳಗೊಳ್ಳುವ ಮೂಲಕ ಅದು ಪುರಾಣವಷ್ಟೇ ಆಗದೆ ಮಾನವ ಇತಿಹಾಸದ ದಾಖಲೆಯೂ ಆಗುತ್ತದೆ. ಧರ್ಮ […]

ಬಸವಣ್ಣನ ವ್ಯಾಪಾರದಲ್ಲಿ ತೊಡಗಿರುವ ಮಠಗಳು-ಸ್ವಾಮೀಜಿ

ಬಸವಣ್ಣನ ವ್ಯಾಪಾರದಲ್ಲಿ ತೊಡಗಿರುವ ಮಠಗಳು-ಸ್ವಾಮೀಜಿ

ಕರ್ನಾಟಕ ರಾಜ್ಯದಾದ್ಯಂತಹ ಮೌಢ್ಯಾಚರಣೆ ನಿಷೇಧ ಕಾಯಿದೆ ಜಾರಿಗಾಗಿ ವ್ಯಾಪಕವಾದ ಹೋರಾಟ ನಡೆಯುತ್ತಿದೆ. ಇದೇ ತಿಂಗಳ ನವೆಂಬರ್ 16, 2015ಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಆಸಕ್ತರು ಇದರಲ್ಲಿ ಪಾಲ್ಗೊಳ್ಳಬಹುದು. ಈ ಸಮಾವೇಶದ ಆಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಶ್ರೀ ನಿಡುಮಾಮಿಡಿ ವೀರಭದ್ರಚನ್ನಮಲ್ಲ ಸ್ವಾಮೀಜಿಗಳ ಸಂದರ್ಶನವನ್ನು ಮಾಡಲಾಯಿತು. ಅದರ ಆಯ್ದಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ. `ಅನಿಕೇತನ’ಕ್ಕೆ ಈ ಸಂದರ್ಶನವನ್ನು ಮಾಡಿಕೊಟ್ಟವರು ಡಾ.ರವಿಕುಮಾರ್ ಬಾಗಿ… ಪ್ರಶ್ನೆ : ಸಮಕಾಲೀನ ಸಂದರ್ಭದಲ್ಲಿ ಮೌಡ್ಯಾಚರಣೆಗಳ ಸಮಾಜದಲ್ಲಿ ಹೆಚ್ಚಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದಕ್ಕೆ ಮಾಧ್ಯಮಗಳ ಅಬ್ಬರದ […]

ದೇವರು ಮತ್ತು ಕಾನೂನು/Law and order

ದೇವರು ಮತ್ತು ಕಾನೂನು/Law and order

ಈ ದಿನಗಳಲ್ಲಿ ಹಬ್ಬ ಅಥವಾ ವಿಶೇಷ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುವುದು ವ್ಯರ್ಥವೆಂದು ನನ್ನ ಭಾವನೆ. ಘಂಟೆಗಟ್ಟಲೆ ಸಾಲಿನಲ್ಲಿ ನಿಂತು ಆ ಜನಸ್ತೋಮದ ನೂಕುನುಗ್ಗಲಿನಲ್ಲಿ 3-4 ಸೆಕೆಂಡುಗಳ ದೇವರ ದರ್ಶನ ಪಡೆಯುವುದರಿಂದ ಏನು ಉಪಯೋಗ, ಜನಜಂಗುಲಿ ಕಡಿಮೆ ಇದ್ದ ಸಮಯದಲ್ಲಿ ನಿಧಾನವಾಗಿ ದೇವರೊಂದಿಗೆ ನೇರ ಮಾತುಕತೆ ನಡೆಸುವುದೇ ಚೆಂದ ಎಂಬುದು ನನ್ನ ವಾದ ಹಾಗೂ ಅದನ್ನೇ ಬಹುತೇಕ ಪಾಲಿಸಿಕೊಂಡು ಬಂದಿದ್ದೆ. ಆದರೆ ಅದು ಕೈಗೆ ನಿಲುಕದ “ದ್ರಾಕ್ಷಿ ಹುಳಿ” ಎಂಬ ಧಾಟಿ ಎಂಬುದು ತಿಳಿದಿದ್ದು, ಈ ಆಷಾಢ ಮಾಸದಲ್ಲಿ […]