ಧರ್ಮ-ಆಧ್ಯಾತ್ಮ

ಧರ್ಮ-ಆಧ್ಯಾತ್ಮ

ವೈಚಾರಿಕ ವಚನಕಾರ್ತಿ ಶಿವಶರಣೆ ಅಕ್ಕಮ್ಮ

ವೈಚಾರಿಕ ವಚನಕಾರ್ತಿ ಶಿವಶರಣೆ ಅಕ್ಕಮ್ಮ

ವಚನ ಸಾಹಿತ್ಯ ಇತರೆ ಸಾಹಿತ್ಯದಂತೆ ಯಾವುದೇ ಒಂದು ಮಿತಿಗೆ ಒಳಪಡುವುದಿಲ್ಲ. ಶಿವಶರಣರ ವಚನಗಳು ಇಡೀ ಮನುಕುಲದ ಒಳಿತಿಗಾಗಿ ಮಿಡಿದ ಭಾವಗಳು. ವಚನಕಾರರ ಅನುಭಾವದ ನುಡಿಗಡಣಗಳೇ ವಿಶ್ವ ಸಂದೇಶಗಳಾಗಿವೆ. ಸಾಹಿತ್ಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಣ್ಣು ಅವಕೃಪೆಗೆ ಒಳಗಾದ ಸಂಧರ್ಭದಲ್ಲಿ ವಿಶ್ವವೇ ಬೆರಗಾಗುವಂತೆ ಹನ್ನೆರಡನೆಯ ಶತಮಾನದ ಶಿವಶರಣರು ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಾನಮಾನಗಳನ್ನು ನೀಡಿದ ಪರಿಣಾಮವಾಗಿ ಅಜ್ಞಾತವಾಗಿದ್ದ ಸ್ತ್ರೀಮನಸ್ಸುಗಳು ತಮ್ಮ ವಚನಗಳ ಮೂಲಕ ಮಾನವೀಯ ಮೌಲ್ಯಗಳ ಪರಿಮಳವನ್ನು ಸೂಸಿದವು. ಯಾವುದು ತಪ್ಪು ? ಯಾವುದು ಒಪ್ಪು […]

ಸೂಫಿಗಳ ಚಾರಿತ್ರಿಕ ಕಥನ

ಸೂಫಿಗಳ ಚಾರಿತ್ರಿಕ ಕಥನ

ಸೂಫಿಗಳು  ಧಾರ್ಮಿಕ ಸಂತರು ಅದಕ್ಕಿಂತ ಮಿಗಿಲಾಗಿ ಅಖಂಡ ಮಾನವ ಸಮುದಾಯದ ಹಿತಾಶಕ್ತಿಯ ಬಗ್ಗೆ, ಬದುಕಿನ ಬಗ್ಗೆ, ಧರ್ಮದ ಗಡಿಗಳನ್ನು ದಾಟಿ ಚಿಂತಿಸಿದ ಮತ್ತು ಅದಕ್ಕಾಗಿ ಲೋಕಸಂಚಾರ ಮಾಡಿ ತಾವು ಕಂಡ ಜ್ಞಾನವನ್ನು ಸರಳವಾಗಿ ಪ್ರಸಾರ ಮಾಡಿದ ಸೂಫಿಗಳು ವಿಶ್ವ ಧರ್ಮಿಗಳಾಗಿದ್ದಾರೆ. ಒಂದು ಕಾಲದಲ್ಲಿ ಇವರು ಬೌದ್ಧಿಕವಾಗಿ ಎಲ್ಲೆಡೆ ಅಲೆದಾಡಿದ್ದಾರೆ. ಇಂದು ಸಂಸ್ಕøತಿ ಪ್ರಿಯರು, ಮಾನವ ಕಲ್ಯಾಣಾಕಾಂಕ್ಷಿಗಳ ಚಿರಂತನ, ಸತ್ಯ ಶೋಧಕರ ಹೃದಯಗಳಲ್ಲಿ ಜೀವ ಸಂಚಾರವನ್ನು ಉಂಟು ಮಾಡುತ್ತಿರುವ ಆತ್ಮಸಾಕ್ಷಿಯ ಪ್ರತೀಕಗಳಾಗಿದ್ದಾರೆ. ಸೂಫಿಪಂಥದಲ್ಲಿ ಆಧ್ಯಾತ್ಮಕ್ಕೆ ಪ್ರಮುಖ ಸ್ಥಾನ. ನೊಂದ […]

ಕಾಯಕಯೋಗಿ ನಾಯಕನಹಟ್ಟಿ ತಿಪ್ಪೇಸ್ವಾಮಿ

ಕಾಯಕಯೋಗಿ ನಾಯಕನಹಟ್ಟಿ ತಿಪ್ಪೇಸ್ವಾಮಿ

16 ಮತ್ತು 17 ನೇ ಶತಮಾನದಲ್ಲಿ ಬಾಳಿ ಬದುಕಿದ ಕರ್ಮ ಜೀವಿ ಕಾಯಕಯೋಗಿ ತಿಪ್ಪೇಸ್ವಾಮಿ ಸಮಾಜ ಸುಧಾರಕನಾಗಿ, ಜನಕಲ್ಯಾಣಕ್ಕೆ ತನ್ನನ್ನು ಅರ್ಪಿಸಿಕೊಂಡ ಅವಧೂತ. ಆಧುನಿಕ ಜಗತ್ತಿಗೆ ಆಶ್ಚರ್ಯಮೂಡಿಸುವ ಹಾಗೆ ಸಾಧುವಾಗಿ ಸಿದ್ಧನಾಗಿ, ಸಂತನಾಗಿ,ಯೋಗಿಯಾಗಿ ತನ್ನನ್ನು ನಂಬಿದ ಶ್ರದ್ಧಾಭಕಿಯುಳ್ಳ ಭಕ್ತ ಜನತೆಗೆ ಕೃಪೆ ತೋರಿದ ಅವಧೂತ ಇಂದು ಅಪಾರ ಭಕ್ತ ಜನತೆಯನ್ನು ಹೊಂದಿರುವ ತಿಪ್ಪೇಸ್ವಾಮಿಯಿಂದ ನೆಲೆ ನಿಂತ ನಾಯಕನಹಟ್ಟಿ ಕ್ಷೇತ್ರ ನಿತ್ಯ ಯಾತ್ರಾ ಸ್ಥಳವಾಗಿದೆ. ಮಠದಲ್ಲಿ ನಡೆಯುತ್ತಿರುವ ಪೂಜೆ ಆಚರಣೆ, ನಂಬಿಕೆ, ಜಾತ್ರೆ, ಉತ್ಸವಗಳು, ಮದುವೆ ಕಾರ್ಯಗಳು, ಇಂಥ […]

ಅರಸಮ್ಮ ದೇವಿ ಮತ್ತು ಅಣ್ಣಯ್ಯನೆಂಬೋ ಆಧ್ಯಾತ್ಮಿ

ಅರಸಮ್ಮ ದೇವಿ ಮತ್ತು ಅಣ್ಣಯ್ಯನೆಂಬೋ ಆಧ್ಯಾತ್ಮಿ

ನಮ್ಮೂರು ಉಡುಸಲಮ್ಮ ಅಂದು ಮಾನಿಹುಲ್ಲು ಬಯಲಲ್ಲಿ ಹಸಿರಿನ ನಡುವೆ ಪುಟ್ಟದೊಂದು ಸುಣ್ಣ ಬಳಿದ ಗುಡಿ ಒಳಗೆ ಕುಳಿತು ಆಕೆಯ ಭಕ್ತರೊಡನೆ ಕೋಳಿತಲೆ ದಿನ ಬೇಕೆಂದು ಆಸೆ ಪಟ್ಟವಳಲ್ಲ. ಹಣ್ಣು ತುಪ್ಪಕ್ಕೂ ಅಭಯ ಹಸ್ತ ನೀಡಿ ಆಸರೆಯಾಗಿದ್ದವಳು, ಪಕ್ಕದಲ್ಲೆ ಆಕೆಯ ಅಣ್ಣ ಮರಸು-ರಂಗನಾಥಸ್ವಾಮಿ ಸುಮಾರದ್ದೊಂದು ಹೆಂಚಿನ ಮನೆ ಕಟ್ಟಿಸಿಕೊಂಡು ವಿಷ್ಣು ನಾಮ ಧರಿಸಿರುವ ಕಾರಣ ಮುಜರಾಯಿ ಇಲಾಖೆಗೊಳಪಟ್ಟುಬಿಟ್ಟ. ಎಂದೋ ಶೈವ-ವೈಷ್ಣವ ದೇವರ ಜಗಳದಲ್ಲಿ ಮರಸು ಆಳುತ್ತಿದ್ದ ಅರಸು ಕುಲದವರು ಊರು ಬಿಡಬೇಕಾಯಿತಂತೆ. ಹೀಗೆ ಊರು ಬಿಟ್ಟು ಬೆಂಗಳೂರೆಂಬ ಮಹಾನಗರದಲ್ಲಿ […]

ಸಂತ ಪರಂಪರೆಯ ಸಾಮಾಜಿಕ ಒತ್ತಾಸೆಗಳು

ಸಂತ ಪರಂಪರೆಯ ಸಾಮಾಜಿಕ ಒತ್ತಾಸೆಗಳು

`ಸಂತ’ರ ಪರಿಕಲ್ಪನೆ ಬಗೆಗೆ ತಾತ್ವಿಕವಾಗಿ ವಿವೇಚನೆ ಮಾಡುವಾಗ ಅದರ ಸಾಮಾಜಿಕ ಮುಖ ಯಾವುದು ಎಂದು ನಾನು ಮಾತನಾಡಬೇಕಿದೆ. ಮೊದಲನೆಯ ದಾಗಿ ಕೋಲಾರದಲ್ಲಿ ಈ ಕಾರ್ಯಕ್ರಮ ಏರ್ಪಟ್ಟಿರುವುದು ಅರ್ಥಪೂರ್ಣವಾಗಿದೆ. ಏಕೆಂದರೆ ಇದು ಸಂತರ ಭೂಮಿ. ಕೈವಾರ ತಾತಯ್ಯನ ನಾಡಿದು. ಅಲ್ಲದೆ ದೊಡ್ಡ ವೆಂಕಟಗಿರಿ ಎನ್ನುವ ಇನ್ನೊಬ್ಬ ಸಂತನಿದ್ದ. ಅವನಿಗೆ `ನಡೆಕಾರ’ ಅಂತ ಕರೆಯಲಾಗುತ್ತಿತ್ತು. ಮತ್ತು ಸಂತ ಪರಂಪರೆಯ ಸಾಮಾಜಿಕ ಆಶಯವನ್ನು ನಮ್ಮ ಕಾಲದಲ್ಲಿ ಒಂದು ಚಳವಳಿ ರೂಪದಲ್ಲಿ ಬದಲಾಯಿಸಿ ದಲಿತ ಚಳವಳಿಗೆ ಭೂಮಿಕೆ ಒದಗಿಸಿದ ಸೀಮೆಯಿದು. ಹೀಗಾಗಿ ಇಲ್ಲಿ […]

ಆರೆಸ್ಸಸ್, ನಾಥುರಾಮ್ ಗೋಡ್ಸೆ ಮತ್ತು ಗಾಂಧಿ ಹತ್ಯೆ

ಆರೆಸ್ಸಸ್, ನಾಥುರಾಮ್ ಗೋಡ್ಸೆ ಮತ್ತು ಗಾಂಧಿ ಹತ್ಯೆ

Asked about Advani’s claim that Nathuram had nothing to do with the RSS, Gopal Godse replied: “I have countered him, saying it is cowardice to say that. You can say that RSS did not pass a resolution, saying, ‘go and assassinate Gandhi’. But you do not disown him [Nathuram]. The Hindu Mahasabha did not disown […]

ಮೋಟ್ನಳ್ಳಿ ಹಸನ್ ಸಾಹೇಬರ : ‘ಅಲ್ಲಿಲ್ಲಾ ಶಿವನಿಲ್ಲಿಲ್ಲಾ ಶಿವನೆಲ್ಲಿಲ್ಲಾ?’

ಮೋಟ್ನಳ್ಳಿ ಹಸನ್ ಸಾಹೇಬರ : ‘ಅಲ್ಲಿಲ್ಲಾ ಶಿವನಿಲ್ಲಿಲ್ಲಾ ಶಿವನೆಲ್ಲಿಲ್ಲಾ?’

ಧಾರ್ಮಿಕ ಸೌಹಾರ್ದತೆ ಮತ್ತು ಹಿಂಸೆಗಳೆರಡನ್ನೂ ಅನುಭವಿಸಿದ ವೈಯಕ್ತಿಕ ಬದುಕು :  ಬಹುತೇಕ ತತ್ವಪದಕಾರರಂತೆ ಮೋಟ್ನಳ್ಳಿ ಹಸನ್ ಸಾಹೇಬ ಕೂಡ ತೀರ ಕೆಳವರ್ಗದವ ಮತ್ತು ವೈಯಕ್ತಿಕ ಬದುಕಿನಲ್ಲಿ ಆಘಾತಗಳನ್ನನುಭವಿಸಿದವನು. ಮೂರು ವರುಷದ ಕೂಸನ್ನು ಮಠದಲ್ಲಿ ಬಿಟ್ಟು ಕಾಲರಾಕ್ಕೆ ತುತ್ತಾಗಿ ಸತ್ತು ಹೋದ ತಂದೆತಾಯಿಗಳು, ಆರು ತಿಂಗಳದವನಿರುವಾಗಲೇ ತೀರಿಹೋದ ಮಗ ಬಾಲೇಸಾಹೇಬ, ಆ ಚಿಂತೆಯಲ್ಲಿಯೇ ಮಗನ ದಾರಿ ಹಿಡಿದ ಹೆಂಡತಿ ಅಬ್ಬಾಸ….. ಹೀಗೆ ಆಘಾತ ಮತ್ತು ಹಿಂಸೆಗಳಿಂದ ಕೂಡಿದ ವ್ಯಕ್ತಿಗತ ಬದುಕು ತನ್ನ ಕಾಲದ ಜನಸಾಮಾನ್ಯರ ಬದುಕಿನ ಆಘಾತ ಹಿಂಸೆ […]

ಅಂಬೇಡ್ಕರ್ ಚಿಂತನೆ-6 : ಬುದ್ಧ ಅಥವಾ ಮಾರ್ಕ್ಸ್

ಅಂಬೇಡ್ಕರ್ ಚಿಂತನೆ-6 : ಬುದ್ಧ ಅಥವಾ ಮಾರ್ಕ್ಸ್

ಬುದ್ಧ ಮತ್ತು ಮಾರ್ಕ್ಸ್ ನಡುವಿನ ಹೋಲಿಕೆಯನ್ನು ಒಂದು ಜೋಕ್ ಎಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ಆಶ್ಚರ್ಯವೇನಿಲ್ಲ. ಮಾರ್ಕ್ಸ್  ಮತ್ತು ಬುದ್ಧರ ನಡುವೆ 2381 ವರ್ಷಗಳ ಅಂತರವಿದೆ. ಬುದ್ಧ ಕ್ರಿ.ಪೂ.531 ರಲ್ಲಿ ಜನಿಸಿದರೆ ಮಾರ್ಕ್ಸ್  ಕ್ರಿ.ಶ. 1818 ರಲ್ಲಿ ಜನಿಸಿದ್ದಾರೆ. ಮಾರ್ಕ್ಸ್  ಅವರನ್ನು ಹೊಸ ಐಡಿಯಾಲಜಿಯ, ಹೊಸ ಆರ್ಥಿಕ ಚಿಂತನೆಗಳ ಜನಕನೆಂದು ಕರೆಯುತ್ತಾರೆ. ಮತ್ತೊಂದೆಡೆ ಬುದ್ಧನನ್ನು ಯಾವುದೇ ರಾಜಕೀಯ-ಆರ್ಥಿಕತೆಗೆ ಸಂಬಂಧವೇ ಇಲ್ಲದ ಧರ್ಮದ ಸ್ಥಾಪಕನೆಂದು ಕರೆಯುತ್ತಾರೆ. ಶತಮಾನಗಳ ನಡುವಿನ ಅಂತರದಿಂದಾಗಿ ಹಂಚಿಹೋದ ಈ ಇಬ್ಬರು ಮಾನವತಾವಾದಿಗಳ ನಡುವಿನ ಹೋಲಿಕೆ ಅಥವಾ ವೈರುಧ್ಯಗಳ […]

‘ಈ ಊರೊಳಗಿಷ್ಟು ಉತ್ಪಾತವೇನೋ’ -ಕೈವಾರ ತಾತಯ್ಯ

‘ಈ ಊರೊಳಗಿಷ್ಟು ಉತ್ಪಾತವೇನೋ’ -ಕೈವಾರ ತಾತಯ್ಯ

ಕೈವಾರ ನಾರೇಯಣ ಯತಿಯ ಕಾಲ ಕ್ರಿ.ಶ. ಸು. 1730 ರಿಂದ 1840. ನೂರಾಹತ್ತು ವರುಷಗಳ ಸುದೀರ್ಘ ಬದುಕಿನಲ್ಲಿ ಮೊದಲಿನ ಅರ್ಧಶತಕ ಪ್ರಾಪಂಚಿಕ ಜೀವನ. ನಂತರದ್ದು ಯೋಗಿಯ ಬಾಳು. ಮೂಲತಃ ಆಂಧ್ರಪ್ರದೇಶದ ಬಲಿಜ ಜಾತಿಯ ಬಳೆಗಾರ ಕುಟುಂಬದ ನಾರೇಯಣ ಕರ್ನಾಟಕ ಮತ್ತು ಆಂಧ್ರಗಳ ಗಡಿಭಾಗಗಳಲ್ಲಿ ಬಳೆಮಾರಿ ಹೊಟ್ಟೆಹೊರೆದುಕೊಳ್ಳಲು ಪರದಾಡಿದವನು. ಕಠೋರವಾದ ಬಡತನ ಮತ್ತು ಸಾಲದ ಬದುಕಿಗೆ ಬೇಸತ್ತು ಭಕ್ತಿ ಮಾರ್ಗವನ್ನು ತುಳಿದವನು. ಚಿತ್ತೂರಿನ ಮೊಗಲಿವೆಂಕಟಗಿರಿಯ ಕಣಿವೆಯಲ್ಲಿ ಪರದೇಶಸ್ವಾಮಿಯಿಂದ ಗುರುದೀಕ್ಷೆ ಪಡೆದು, ಯೋಗಸಾಧಕನಾದವ. ‘ಹರಿನಾಮ’ವನ್ನೇ ಗುರುನಾಮವನ್ನಾಗಿ ಸ್ವೀಕರಿಸಿ ಏಕಲವ್ಯನಂತೆ ಸ್ವಯಂ […]

ದೈವ ಸಂಹಾರಕ ಡಾ. ಬಿ. ಆರ್. ಅಂಬೇಡ್ಕರ್ ! : -2

ದೈವ ಸಂಹಾರಕ ಡಾ. ಬಿ. ಆರ್. ಅಂಬೇಡ್ಕರ್ ! : -2

ಭಾರತದ ಕೇಂದ್ರ ಬಿಂದುವಿನ ಸುತ್ತ ನಡೆಯುತ್ತಿರುವ ಸಮಕಾಲೀನ ಸಂಘರ್ಷಗಳಿಗೆ ಭೂಮಿಕೆ ಒದಗಿಸುವ ವಿಚಾರದಲ್ಲಿಯೂ ಸಹ ಅಂಬೇಡ್ಕರ್ ಕ್ಲೇಷ ಉಂಟುಮಾಡುತ್ತಾರೆ. ಮೊದಲನೆಯದಾಗಿ ಅಂಬೇಡ್ಕರ್ ಹಿಂದೂ ಸಮಾಜದ ಸಂರಚನೆಯ ಒಡಲಲ್ಲೇ ಹಿಂಸೆಯನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ. ಇಲ್ಲಿ ಹಿಂಸೆ ಅಪಭ್ರಂಶವಲ್ಲ ಬದಲಾಗಿ ಹಿಂದೂ ಸಮಾಜದ ಮೇಲ್ಪದರದ ತೊಡಕುಗಳನ್ನು ತೊಡೆದುಹಾಕಿ ನೋಡಿದಾಗ ಆಳದಲ್ಲಿ ಈ ಹಿಂಸಾತ್ಮಕ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಹಿಂದೂ ಸಮಾಜದ ಅಸ್ಮಿತೆ ಮತ್ತು ಕಾರ್ಯನಿರ್ವಹಣೆಗೆ ಹಿಂಸೆಯೇ ಕೇಂದ್ರ ಬಿಂದು. ನ್ಯಾಯಕ್ಕಾಗಿ ಹೋರಾಡುವುದೆಂದರೆ ಹಿಂದೂ ಧರ್ಮದ ವಿರುದ್ಧ ಸಮರ ಸಾರುವುದೊಂದೇ ಮಾರ್ಗ […]