ಧರ್ಮ-ಆಧ್ಯಾತ್ಮ

ಧರ್ಮ-ಆಧ್ಯಾತ್ಮ

ವಿರಾಗಿಯ ನೆಲದ ನೋವು ಮತ್ತು ನಾವು

ವಿರಾಗಿಯ ನೆಲದ ನೋವು ಮತ್ತು ನಾವು

ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಶ್ರವಣಬೆಳಗೊಳ ಮತ್ತೆ ಎಲ್ಲರ ಗಮನ ಸೆಳೆಯುತ್ತಿದೆ. ಬರುವ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ಈಗಾಗಲೇ ಪೂರ್ವಸಿದ್ಧತೆ ಶುರುವಾಗಿದೆ. ರಾಜ್ಯ ಸರ್ಕಾರ 175 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದಿಂದಲೂ ಅನುದಾನ ದಕ್ಕಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಹಾಗು ಕೇಂದ್ರದ ಸಚಿವರು ಪದೇ ಪದೇ ಇಲ್ಲಿಗೆ ಭೇಟಿ ನೀಡಿ, ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕಾರ್ಯಕ್ರಮವು ಸುಸೂತ್ರವಾಗಿ ನೆರವೇರಲು ಅಗತ್ಯವಿರುವ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮಹಾಮಸ್ತಕಾಭಿಷೇಕ ಸಮೀಪಿಸಿದರೂ ಪೂರ್ವಸಿದ್ಧತಾ […]

ನಂಬಿಕೆ ಮೂಢನಂಬಿಕೆ ಮತ್ತು ವರ್ಗ ತಾರತಮ್ಯ

ನಂಬಿಕೆ ಮೂಢನಂಬಿಕೆ ಮತ್ತು ವರ್ಗ ತಾರತಮ್ಯ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಸೂದೆಯೊಂದು ಕೊನೆಗೂ ವಿರೂಪಗೊಂಡು ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದಿದೆ. ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ನಡೆದುಕೊಳ್ಳುತ್ತಲೇ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದರಲ್ಲಿ ನಾವು ನಿಸ್ಸೀಮರು ಎಂದು ರಾಜ್ಯ ಸರ್ಕಾರ ಮತ್ತೊಮ್ಮೆ ನಿರೂಪಿಸಲು ಹೊರಟಿದೆ. ನಮ್ಮಲ್ಲಿ ಏನೆಲ್ಲಾ ಶಾಸನಗಳಿಲ್ಲ. ಕೌಟುಂಬಿಕ ದೌರ್ಜನ್ಯ ನಿಯಂತ್ರಣ, ಜಾತಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ, ಬಾಲಕಾರ್ಮಿಕ ನಿಯಂತ್ರಣ ಕಾಯ್ದೆ, ಅತ್ಯಾಚಾರ ನಿಯಂತ್ರಣ ಕಾಯ್ದೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹೀಗೆ ಹತ್ತು ಹಲವಾರು. ಇವೆಲ್ಲವೂ ಅಲಂಕಾರಿಕ ವಸ್ತುಗಳಂತೆ ಸಂವಿಧಾನದ […]

ಔದಾರ್ಯದ ಹೆಸರಲ್ಲಿ ಮತೀಯ ರಾಜಕಾರಣ

ಔದಾರ್ಯದ ಹೆಸರಲ್ಲಿ ಮತೀಯ ರಾಜಕಾರಣ

ಅಧಿಪತ್ಯ ರಾಜಕಾರಣದ ವಿಕೃತ ಸ್ವರೂಪವನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಕಾಣುತ್ತಿರುವಂತೆಯೇ ಸಾಂಸ್ಕøತಿಕ ರಾಜಕಾರಣದ ಒಂದು ವಿಕೃತ ಸ್ವರೂಪವನ್ನೂ ಉಡುಪಿಯ ಪೇಜಾವರರ ಪ್ರಹಸನದಲ್ಲಿ ಕಾಣುತ್ತಿದ್ದೇವೆ. ವಿಷ ಬೀಜಗಳನ್ನು ಬಿತ್ತನೆ ಮಾಡಿ ಸಂಜೀವಿನಿ ಔಷಧಿಯನ್ನು ಬೆಳೆಯಲಾಗುವುದಿಲ್ಲ ಎಂಬ ಸರಳ ಸತ್ಯ ಪೇಜಾವರರಿಗೆ ಅರ್ಥವಾಗಿದ್ದರೆ ಬಹುಶಃ, ಇಫ್ತಾರ್ ಪ್ರಹಸನಕ್ಕಿಂತಲೂ ಹೆಚ್ಚಿನ ಜ್ಞಾನೋದಯ ಆಗಬಹುದಿತ್ತು. ಸಹಭೋಜನ ಎನ್ನುವ ಪರಿಕಲ್ಪನೆಯನ್ನು ಎರಡು ಆಯಾಮಗಳಲ್ಲಿ ನೋಡಬಹುದು. ಮೊದಲನೆಯದು “ ನಮ್ಮವರಲ್ಲದವರೊಡನೆ ” ಸಹಭೋಜನ ನಡೆಸುವ ಮೂಲಕ ಐಕ್ಯತೆಯನ್ನು ಸಾಧಿಸುವ ಒಂದು ಪರಿ. ಈ ಧೋರಣೆಯನ್ನು ಅನುಸರಿಸುವಾಗ ನಮ್ಮವರಲ್ಲದವರನ್ನು […]

ಬಿಪಿಎಲ್ ಮಂದಿಗೂ ಕೈಗೆಟುಕುವಂತಹ ಬೂತಗಳು

ಬಿಪಿಎಲ್ ಮಂದಿಗೂ ಕೈಗೆಟುಕುವಂತಹ ಬೂತಗಳು

ನಾನು  ಮಟ್ಟುವಿಗೆ ಕಾಲಿಟ್ಟ ದಿನದಿಂದ ನಮ್ಮೂರ ದೈವಗಳಾದ ಕೊರ್ದಬ್ಬು-ತನಿಮಾನಿಗಾ ಮತ್ತು ಜುಮಾದಿ.-ಬಂಟರ ಜತೆ ನನಗೆ ಸಂಬಂಧ ಇದೆ. ಅವರನ್ನು ದೈವಗಳಿಗಿಂತ ಹೆಚ್ಚಾಗಿ ಮನೆ ಹಿರಿಯರಂತೆ ಗೌರವಿಸುತ್ತಾ  ಬಂದವನು ನಾನು. ತಮ್ಮ ಕಷ್ಟಗಳನ್ನು ಹೇಳಿಕೊಂಡು ಬಂದವರ ಪಾಲಿಗೆ ಈ ಭೂತಗಳು ವೈದ್ಯರಾಗುತ್ತಾರೆ, ನ್ಯಾಯಾಧೀಶರಾಗುತ್ತಾರೆ, ತಂದೆ-ತಾಯಿ,ಅಣ್ಣ-ಅಕ್ಕ ಆಗುತ್ತಾರೆ. ಅದು ನೀಡುವ ಒಂದೆಲೆ ಕರಿಗಂಧದಿಂದ ಎಲ್ಲವೂ ಪರಿಹಾರ. ಸಣ್ಣವನಿದ್ದಾಗ ಈ ಭೂತಗಳು ನೀಡುವ ಭರವಸೆಗಳನ್ನು ನೋಟ್ ಬುಕ್ ನಲ್ಲಿ ಬರೆದಿಡುತ್ತಿದ್ದೆ. ಅವುಗಳಲ್ಲಿ ೯೦ ಭಾಗ ನಿಜವಾಗುತ್ತಿತ್ತು. ಊರು ಬಿಟ್ಟು ಹೋದ ಮಗ ವಾಪಾಸು […]

ಧರ್ಮ ಮತ್ತು ಪ್ರಭುತ್ವ ! ಜೊತೆಯಲಿ, ಜೊತೆಜೊತೆಯಲಿ?  

ಧರ್ಮ ಮತ್ತು ಪ್ರಭುತ್ವ !  ಜೊತೆಯಲಿ, ಜೊತೆಜೊತೆಯಲಿ?   

   ಗೋರಖ್ ಪುರದ ಪ್ರಮುಖ ಮಹಾಂತರಾದ ಆದಿತ್ಯನಾಥ್ ಯೋಗಿಯವರು ಉತ್ತರಪ್ರದೇಶದ ನೂತನ ಮುಖ್ಯಮಂತ್ರಿಗಳಾಗಿದ್ದಾರೆ. ಬಹುತೇಕ ಮಾಧ್ಯಮಗಳು ಇದೊಂದು ಅಚ್ಚರಿಯ ಅನಿರೀಕ್ಷಿತ ಬೆಳವಣಿಗೆಯೆಂದು ಹೊಸ ಹವಾ ಸೃಷ್ಠಿಸುತ್ತಿವೆ. ಆದರೆ ನನಗನ್ನಿಸುವಂತೆ ಇದೇನು ಅಚ್ಚರಿಯ ಅಥವಾ ಅನಿರೀಕ್ಷಿತವಾದ ಬೆಳವಣಿಗೆಯೇನೂ ಅಲ್ಲ. ಯಾವಾಗ 2014ರ ಮೇ ತಿಂಗಳಲ್ಲಿ ನಡೆದ ರಾಷ್ಟ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಜಪ ಅಭೂತಪೂರ್ವ ಬಹುಮತ ಪಡೆದು ಸರಕಾರ ರಚಿಸುವಲ್ಲಿ ಯಶಸ್ವಿಯಾಯಿತೊ ಆ ಕ್ಷಣದಿಂದಲೇ ಇಂತಹುದೊಂದು ಪ್ರಕ್ರಿಯೆ ಪ್ರಾರಂಭವಾಯಿತೆನ್ನಬುದು.    ಬಲಪಂಥೀಯ ರಾಜಕಾರಣದ ಬಗ್ಗೆ ಏನೇನು ಆತಂಕಗಳಿದ್ದವೊ ಅವುಗಳೀಗ ಒಂದೊಂದಾಗಿ ನಿಜವಾಗತೊಡಗುವುದು […]

ಕೊಟ್ಟೂರೇಶ್ವರ – ಧರ್ಮ – ರಾಜಕೀಯ

ಕೊಟ್ಟೂರೇಶ್ವರ – ಧರ್ಮ – ರಾಜಕೀಯ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನಲ್ಲಿ ದೈವವಾಗಿ ಆರಾಧನೆಗೊಳ್ಳುವ ಕೊಟ್ಟೂರೇಶ್ವರ ೧೬ ನೇ ಶತಮಾನದಲ್ಲಿ ಇದ್ದರೆಂದು ಪುರಾವೆ ಸಿಗುವ ಈ ಚಾರಿತ್ರಿಕ ವ್ಯಕ್ತಿ. ಇಂದು ಕೊಟ್ಟೂರಿನಲ್ಲಿ ಕೊಟ್ಟೂರೇಶ್ವರನ  ರಥೋತ್ಸವವಿದೆ. ಈ ಸಂದರ್ಭ ದಲ್ಲಿ  ಡಾ.ಸತೀಶ್ ಪಾಟೀಲ್  ಅವರು ಬರೆದ ಬರಹ. ರಾಜಕೀಯ ನಾಯಕರು ಗೆಲುವಿಗಾಗಿ ಇನ್ನಿಲ್ಲದ ಕಸರತ್ತನ್ನು ಮಾಡುತ್ತಾರೆ. ಇದಕ್ಕಾಗಿ ಧಾರ್ಮಿಕ ಪುರುಷರ ಮೊರೆ ಹೋಗುವುದು, ಮಠಗಳಿಗೆ ಭೇಟಿಕೊಡುವುದು, ಸ್ವಾಮೀಜಿಗಳನ್ನು ಒಲಿಸಿಕೊಳ್ಳುವ ಸರ್ಕಸ್ ಮಾಡುವುದು ಸಹಜ.. ಕೊಟ್ಟೂರಿನ ಇತಿಹಾಸದಲ್ಲೂ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ರಾಜ-ಮಹಾರಾಜರು ಕೊಟ್ಟೂರೇಶ್ವರರನ್ನು ಒಲಿಸಿಕೊಳ್ಳಲು ವಿವಿಧ […]

ಬುರ್ಖಾ, ಕುಂಕುಮ, ಮಾಂಗಲ್ಯ ಮತ್ತು ಸ್ತ್ರೀ ಸಂವೇದನೆ

ಬುರ್ಖಾ, ಕುಂಕುಮ, ಮಾಂಗಲ್ಯ ಮತ್ತು ಸ್ತ್ರೀ ಸಂವೇದನೆ

  ಭಾರತದ ಸಾಮಾಜಿಕ ಸಂಕಥನದಲ್ಲಿ ಧರ್ಮ ಮತ್ತು ಸಂಸ್ಕøತಿ ಎರಡೂ ವಿದ್ಯಮಾನಗಳು ಪರಸ್ಪರ ಪೂರಕವಾಗಿಯೇ ಬೆಳೆದುಬಂದಿದೆ. ಭಾರತೀಯ ಸಂಸ್ಕøತಿ ಎಂದ ಕೂಡಲೇ ಸನಾತನ ಹಿಂದೂ ಧರ್ಮದ ನೆರಳು ಆವರಿಸುತ್ತದೆ. ಜನಪದ ಸಂಸ್ಕøತಿ ಎಂದ ಕೂಡಲೇ ಪ್ರಾಚೀನ ಭಾರತದ ಸಾಂಸ್ಕøತಿಕ ಮತ್ತು ಧಾರ್ಮಿಕ ಪರಂಪರೆ ಮುಖಾಮುಖಿಯಾಗುತ್ತದೆ. ಹಾಗಾಗಿ ಸಂಸ್ಕøತಿಯ ಸಂಕಥನಗಳೆಲ್ಲವೂ ಬಹುಪಾಲು ಧರ್ಮದ ಚೌಕಟ್ಟಿನಲ್ಲೇ ನಡೆಯುತ್ತಿರುವುದನ್ನು ಕಾಣಬಹುದು. ಒಂದು ಜನಸಮುದಾಯದ ಅಥವಾ ಒಂದು ಭೂಪ್ರದೇಶದಲ್ಲಿ ವಾಸಿಸುವ ಜನಸಾಮಾನ್ಯರ ಜೀವನ ಶೈಲಿಯನ್ನು ಬಿಂಬಿಸುವ ಸಾಂಸ್ಕøತಿಕ ನೆಲೆಗಳಿಗೂ, ಈ ಜನಸಮುದಾಯಗಳನ್ನು ಹಲವು […]

ಕೋಮುವಾದವು ಕರಾವಳಿ ಕರ್ನಾಟಕದ ಜೀವಂತ ಟೈಮ್ ಬಾಂಬ್

ಕೋಮುವಾದವು ಕರಾವಳಿ ಕರ್ನಾಟಕದ ಜೀವಂತ ಟೈಮ್ ಬಾಂಬ್

ಕರಾವಳಿಯು ಕೋಮುಗಲಭೆಗಳ ನಾಡು, ಧರ್ಮ-ಧರ್ಮಗಳ ಮದ್ಯೆ ದ್ವೇಷ ಹಾಗೂ ಹಿಂಸೆ ಎಂಬ ಎರಡು ಬೆಂಕಿಯುಂಡೆಗಳನ್ನು ತನ್ನ ಮಡಿಲಲ್ಲಿ  ಹೊತ್ತುಕೊಂಡಿರುವ ನಾಡು ಎಂದು ಪತ್ರಿಕೆಗಳ ವರದಿಗಳಿಂದ ನನಗೆ  ಮೇಲ್ನೋಟಕ್ಕೆ  ಅನ್ನಿಸಿತ್ತು.   ಇಲ್ಲಿನ ಜನರು ಧರ್ಮದ ಕಾರಣಗಳಿಗಾಗಿ ಒಡೆದು ಹೋಗಿದ್ದಾರೆ. ಧರ್ಮವು ಈ ಜನರನ್ನು ಬೇರ್ಪಡಿಸಿಬಿಟ್ಟಿದೆ. ಪರಸ್ಪರ ಪ್ರೀತಿಯಿಂದ ಹಾಗೂ ಅನ್ಯೋನ್ಯತೆಯಿಂದ ಬದುಕುವುದನ್ನು ಕಲಿಸಬೇಕಾದ ಧರ್ಮಗಳು ಇಲ್ಲಿ ವ್ಯತಿರಿಕ್ತ ಪರಿಣಾಮ ಬೀರಿ ಹಿಂಸೇ ಮತ್ತು ದ್ವೇಷವನ್ನು ಬಿತ್ತಿರುವುದನ್ನು ಕಂಡು ಆತಂಕವಾಗುತ್ತಿತ್ತು. ಆ ರೀತಿಯಲ್ಲಿ ಆತಂಕವಾಗಲು ಮಾಧ್ಯಮಗಳು ಬಿತ್ತರಿಸುತ್ತಿದ್ದ ಸುದ್ದಿಗಳು ಹಾಗೂ […]

ಮಾನವ ವಿರೋಧಿಗಳಾಗುವುದಕ್ಕಿಂತಲೂ ಹಿಂದೂ ವಿರೋಧಿಗಳಾಗುವುದು ಒಳಿತು :ಪೇಜಾವರರಿಗೊಂದು ಬಹಿರಂಗ ಪತ್ರ

ಮಾನವ ವಿರೋಧಿಗಳಾಗುವುದಕ್ಕಿಂತಲೂ ಹಿಂದೂ ವಿರೋಧಿಗಳಾಗುವುದು ಒಳಿತು :ಪೇಜಾವರರಿಗೊಂದು ಬಹಿರಂಗ ಪತ್ರ

ಚಲೋ ಉಡುಪಿಯ ನಂತರ ಉಡುಪಿಯಲ್ಲಿ ನಡೆದ ಕನಕನಡೆ ಎಂಬ ಶುದ್ಧೀಕರಣ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಪೇಜಾವರರು ಬುದ್ಧಿಜೀವಿಗಳು ನಡೆದಾಡಿದ ಜಾಗವನ್ನು ಶುದ್ಧೀಕರಣಗೊಳಿಸುವುದು ತಪ್ಪೇನಲ್ಲ ಎನ್ನುವ ಮೂಲಕ ಅಸ್ಪøಶ್ಯ ಸಮುದಾಯಗಳಿಗೆ ಹೊಸ ಸೇರ್ಪಡೆ ಮಾಡಿದ್ದಾರೆ ಈ ಕುರಿತು ಪೇಜಾವರರಿಗೆ ಒಂದು ಬಹಿರಂಗ ಪತ್ರ. ಬುದ್ಧಿಜೀವಿಗಳು ಎಂದರೆ ಯಾರು ? ಈ ಪ್ರಶ್ನೆಗೆ ಇಡೀ ವಿಶ್ವದಲ್ಲಿ ಒಂದು ಉತ್ತರ ಬಂದರೆ ಭಾರತದಲ್ಲಿ ವಿಭಿನ್ನವಾದ ಉತ್ತರ ದೊರೆಯುತ್ತದೆ. ಆಂಗ್ಲಭಾಷೆಯ Intellectual ಎಂಬ ಪದವನ್ನು ಕನ್ನಡದಲ್ಲಿ ಬುದ್ಧಿಜೀವಿ ಎಂದು ಕರೆಯಲಾಗುತ್ತದೆ. […]

ಟಿಪ್ಪು : ಮತಾಂಧರು ಯಾರು ?

ಟಿಪ್ಪು : ಮತಾಂಧರು ಯಾರು ?

ಟಿಪ್ಪು ಒಬ್ಬ ಕ್ರೂರಿ ಹಾಗೂ ಮುಸ್ಲಿಂ ಮತಾಂಧ ರಾಜನೆಂಬ ಪ್ರಚಾರ ಇಂದು ನಿನ್ನೆಯದಲ್ಲ. ಮೊದಲು ಈ ಪ್ರಚಾರ ನಡೆಸಿದವರು ಸ್ವಯಂ ಬ್ರಿಟಿಷರೇ. ಟಿಪ್ಪುವಿನ ದೇಶಪ್ರೇಮಿ ಸೈನ್ಯದಿಂದ ಎರಡುಬಾರಿ ಸೋತು ಇನ್ನೆರಡು ಬಾರಿ ಮೋಸ ಹಾಗೂ ಕುತಂತ್ರಗಳಿಂದಲೇ ಗೆದ್ದ ಬ್ರಿಟಿಷರಿಗೆ ಟಿಪ್ಪುವಿನ ವ್ಯಕ್ತಿತ್ವವೇ ದೊಡ್ಡ ಸವಾಲಾಗಿತ್ತು. ಆ ವ್ಯಕ್ತಿತ್ವವನ್ನು ಹಾಳುಗೆಡವಿದಷ್ಟೂ ಅದಕ್ಕೆ ಅಪಕೀರ್ತಿ ತಂದಷ್ಟೂ ಬ್ರಿಟಿಷರ ವಸಾಹತುಶಾಹಿ ಶೋಷಣೆ ನಿರಂತರವಾಗಿ ಮುಂದುವರೆಯುವುದು ಸಾಧ್ಯವಿತ್ತು. ಆದ್ದರಿಂದಲೇ ತಮ್ಮ ವಸಾಹತುಶಾಹಿ ಕುತಂತ್ರ ನೀತಿಗೆ ತಕ್ಕಂತೆ ಒಂದಿಷ್ಟೂ ತಳಬುಡವಿಲ್ಲದ ಹಸೀಸುಳ್ಳು, ಅರ್ಧಸತ್ಯಗಳನ್ನು ಬೆರೆಸಿ, […]

1 2 3 4