ಸಮಾಜ

ಸಮಾಜ

ದಲಿತ ಪದಕಥನ -9 : ನೋವ ನುಂಗಿ ನುಡಿದ ಪಾಡು

ದಲಿತ ಪದಕಥನ -9 : ನೋವ ನುಂಗಿ ನುಡಿದ ಪಾಡು

ದಲಿತರ ಮೌಖಿಕ ಪರಂಪರೆ, ಪರರ ಮಾತಿಗೆ ಕೊಟ್ಟಷ್ಟು ಅವಕಾಶವನ್ನು ತನ್ನ ಒಳನುಡಿಗೆ ಕೊಡಬೇಕಾದಷ್ಟು ಅವಕಾಶವನ್ನು ಕೊಟ್ಟೇ ಇಲ್ಲ. ವಿಷಾದದಲ್ಲಿ ಹಾಡಿದ ಪದಗಳಿಗೆ ಒಂದಿಷ್ಟು ಬಿಕ್ಷೆ ನೀಡುವುದು ಮೇಲು ಜಾತಿಗಳಿಗೆ ಕಷ್ಟವಿರಲಿಲ್ಲ. ಪ್ರಶ್ನಿಸುವ ಯಾವ ನಿರೂಪಣೆಯನ್ನೂ ಮೇಲು ಜಾತಿಗಳು ತಳ ಜಾತಿಗಳ ಮೌಖಿಕ ಪರಂಪರೆಗೆ ನೀಡಿರಲಿಲ್ಲ. ಹಗಲು ರಾತ್ರಿ ಎಷ್ಟಾದರೂ ದಲಿತರು ಹಾಡಬಹುದಿತ್ತು. ಭೂಮಾಲೀಕನನ್ನು ಪ್ರಶ್ನಿಸಿ ಅವನ ಆಸ್ತಿ ಪಾಸ್ತಿಯ ಒಡೆತನಕ್ಕೆ ಪ್ರತಿಕ್ರಿಯಿಸಿ ಕಥನ ಗೀತೆಗಳನ್ನು ಆಡಿದ್ದಾದರೆ ಅವರ ಬಾಯನ್ನು ಮುಚ್ಚಿಸಿ ಸದ್ದಡಗಿಸುವುದು ಅದೇ ಮೇಲು ಜಾತಿಗಳಿಗೆ ಕಷ್ಟವಿರಲಿಲ್ಲ. […]

ನಕ್ಸಲ್ಬರಿ- ಒಂದು ಮುಗಿಯದ ಇತಿಹಾಸ

ನಕ್ಸಲ್ಬರಿ- ಒಂದು ಮುಗಿಯದ ಇತಿಹಾಸ

ಭಾರತೀಯ ಬಂಡವಾಳದ ಅತಾರ್ಕಿಕತೆ, ಬರ್ಬರತೆ ಮತ್ತು ಅಮಾನವೀಯತೆಗಳ ಮೇಲೆ ವಿಶ್ವಾಸ, ಪ್ರೀತಿ ಮತು ಭರವಸೆಗಳು ವಿಜಯ ಸಾಧಿಸಬಲ್ಲದೇ? ಬರ್ನಾಡ್  ಡಿಮೆಲ್ಲೋ ಬರೆಯುತ್ತಾರೆ: ೧೯೪೭ರಲ್ಲಿ ಭಾರತದ ಆಳುವ ವರ್ಗಗಳಿಗೆ ಅಧಿಕಾರ ವರ್ಗಾವಣೆಯಾಯಿತು. ಆದರೆ ಆ ನಂತರ,  ಅತಿ ಸ್ವಲ್ಪ ಸಮಯದಲ್ಲೇ ಭಾರತದ ಹೊಸ ಆಳುವ ವರ್ಗ ೧೯೪೮ರಲ್ಲಿ ತೆಲಂಗಾಣಕ್ಕೆ ಸೈನ್ಯವನ್ನು ಕಳಿಸಿ ತನ್ನ ನಿಜಬಣ್ಣವನ್ನು ಬಯಲುಮಾಡಿಕೊಂಡಿತು. ಹೊಸ ಸರ್ಕಾರದ  ಈ ಸೈನಿಕ ಕಾರ್ಯಾಚರಣೆಗೆ ಇತರ ಉದ್ದೇಶಗಳಿದ್ದವಾದರೂ, ಅದರ ಪ್ರಮುಖವಾದ ಉದ್ದೇಶ ತೆಲಂಗಾಣದಲ್ಲಿ ಅಸ್ಥಿತ್ವದಲ್ಲಿದ್ದ ಅರೆ ಊಳಿಗಮಾನ್ಯತೆಯ ವಿರುದ್ಧದ ಪ್ರಜಾತಾಂತ್ರಿಕ […]

ಜಂಗಮ ಸನ್ಯಾಸಿಗೆ ಸ್ಥಾವರದ ಸಂಕೋಲೆ

ಜಂಗಮ ಸನ್ಯಾಸಿಗೆ ಸ್ಥಾವರದ ಸಂಕೋಲೆ

ಸಾರ್ವಜನಿಕ ಜೀವನದಲ್ಲಿ ಮುಂದಿನ ಹಲವು ಪೀಳಿಗೆಗಳಿಗೆ ಮಾದರಿಯಾಗಿ ಹೊರಹೊಮ್ಮುವ ವ್ಯಕ್ತಿತ್ವಗಳನ್ನು ಒಂದು ಚೌಕಟ್ಟಿನಲ್ಲಿ ಸಿಲುಕಿಸಿ ಚಿತ್ರಪಟವನ್ನಾಗಿಸಿದಾಗ ಸಮಾಜ ಮತ್ತು ಆ ವ್ಯಕ್ತಿಗಳ ನಡುವಿನ ಕಂದರ ಸೃಷ್ಟಿಯಾದಂತೆ. ಇದರ ಮುಂದಿನ ಹಂತ ಎಂದರೆ ಅಂತಹ ವ್ಯಕ್ತಿಗಳ ಪ್ರತಿಮೆಯ ಸ್ಥಾಪನೆ. ಗೌರವಾದರಗಳನ್ನು ಪ್ರದರ್ಶಿಸುವ ಆಡಂಬರದ ಆಚರಣಾತ್ಮಕ ಧೋರಣೆಗೆ ಬಲಿಯಾಗುವ ವಿದ್ಯಮಾನ ಪ್ರತಿಮೆಯಲ್ಲಿ ಪರ್ಯವಸಾನಹೊಂದುತ್ತದೆ. ಈ ಪ್ರಕ್ರಿಯೆಯ ಶಿಖರ ಹಂತವೆಂದರೆ ಇಂತಹ ಆದರ್ಶಪ್ರಾಯ, ಆದರಣೀಯ ವ್ಯಕ್ತಿಗಳ ಹೆಸರಿನಲ್ಲಿ ನಿರ್ಮಿಸಲಾಗುವ ಸ್ಮಾರಕಗಳು. ಚಿತ್ರಪಟದಿಂದ ಸ್ಮಾರಕದವರೆಗಿನ ಪಯಣದಲ್ಲಿ ಸಾರ್ವತ್ರಿಕವಾಗಿ ಸ್ವೀಕೃತವಾಗಬಹುದಾದ ವ್ಯಕ್ತಿಗಳು ಸಾಮುದಾಯಿಕ ಚೌಕಟ್ಟಿನೊಳಗೋ, […]

ಬರ ಮತ್ತು ವಲಸೆಯ ಬಹುರೂಪಿ ಚಿತ್ರಗಳು

ಬರ ಮತ್ತು ವಲಸೆಯ ಬಹುರೂಪಿ ಚಿತ್ರಗಳು

ರೈತರ ಪಾಲಿಗೆ ಬರ ಎನ್ನುವುದು ವಿಶೇಷ ಅತಿಥಿಯಾಗಿ ಉಳಿದಿಲ್ಲ. ಅವರ ಬೆನ್ನಿಗಂಟಿದ ಹುಣ್ಣಾಗಿ ಸದಾ ನೋಯಿಸುತ್ತಲೇ, ಅದಕ್ಕವರು ಚಿಕಿತ್ಸೆ ಪಡೆಯುತ್ತಿರುವ ವಿದ್ಯಮಾನ ಸಹಜವಾಗಿದೆ. ಕನಿಷ್ಠ ಎರಡು ದಶಕಗಳ ಬರದ ಛಾಯೆ ಚೂರು ಅದಲುಬದಲಾಗಿದ್ದು ಬಿಟ್ಟರೆ ಒಂದು ಏಕರೂಪ ಇದೀಗ ಸ್ಥಿರವಾಗಿದೆ. ಹಾಗಾಗಿ ರೈತರು ಭೂಮಿಯ ಜತೆಗಿನ ನಂಬಿಕೆಯನ್ನು ಅತಂತ್ರಗೊಳಿಸಿಕೊಂಡಿದ್ದಾರೆ. ಮುಖ್ಯವಾಗಿ ಬರಪರಿಹಾರದಂತಹ ಸರಳ ಪರ್ಯಾಯವನ್ನು ಸರಕಾರ ಯೋಜಿಸುತ್ತಿದೆ. ಆದರೆ ಇಂತಹ ಏಕರೂಪದ ಬರ ಪರಿಹಾರ ರೈತ ಸಮುದಾಯದ ಕಷ್ಟಗಳನ್ನು ನೀಗಿಸಲಾರದು. ಹಾಗಾಗಿ ಬರ ಹಲವು ಬಗೆಯ ಅನಪೇಕ್ಷಿತ […]

ವೈದ್ಯಕುಲದ ಆತ್ಮಾವಲೋಕನ ಅಗತ್ಯ

ವೈದ್ಯಕುಲದ ಆತ್ಮಾವಲೋಕನ ಅಗತ್ಯ

ಖಾಸಗಿ ವೈದ್ಯಕೀಯ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ-2017’ ವಿಚಾರದಲ್ಲಿ ದೊಡ್ಡ ಗದ್ದಲ ಎದ್ದಿರುವುದು ನಿರೀಕ್ಷಿತ. ಇತಿಹಾಸದಲ್ಲಿ ಎಂದೂ ಯಾರೂ ನಿಯಂತ್ರಿಸಲಾಗದ ವೈದ್ಯಕುಲವನ್ನು ಒಂದು ಚೌಕಟ್ಟಿಗೆ ತರುವ ಪ್ರಯತ್ನವು ಸುಲಭಕ್ಕೆ ಯಶಸ್ವಿಯಾಗುವುದು ಅನುಮಾನ. ನಮ್ಮನ್ನು ನಿಯಂತ್ರಿಸಲು ನೀವ್ಯಾರು? ಎಂದು ವೈದ್ಯರಲ್ಲಿನ ಒಂದು ಗುಂಪು ಕೇಳುತ್ತಿದೆ. ವಾಸ್ತವದಲ್ಲಿ ವೈದ್ಯಲೋಕದ ಅಹಂನ ಮಟ್ಟ ಇನ್ನೂ ಹೆಚ್ಚೇ ಇದೆ. ವ್ಯಕ್ತಿಯೊಬ್ಬರ ದೇಹದ ಕುರಿತು, ಆ ವ್ಯಕ್ತಿಗಿಂತ ಇನ್ನೊಬ್ಬರಿಗೆ ಹೆಚ್ಚು ತಿಳಿದಿರುತ್ತದೆ ಎಂಬುದೇ ತಿಳಿದಿರುವ ವ್ಯಕ್ತಿಯನ್ನು ಸರ್ವಜ್ಞನನ್ನಾಗಿಸಿಬಿಡುತ್ತದೆ. ಅದು ವೈದ್ಯರುಗಳಿಗೆ ತಂದುಕೊಟ್ಟಿರುವ ಸೊಕ್ಕು […]

ಭುಗಿಲೆದ್ದಿರುವ ಹೊಲಗದ್ದೆಗಳು

ಭುಗಿಲೆದ್ದಿರುವ ಹೊಲಗದ್ದೆಗಳು

ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸಲಾಗುವುದೆಂಬ ಚುನಾವಣಾ ಭರವಸೆಗಳಿಗೆ ಮಾಡಿದ ದ್ರೋಹದ ವಿರುದ್ಧ ಭಾರತದ ರೈತಾಪಿ ಬೀದಿಗಿಳಿದಿದ್ದಾರೆ. ೨೦೧೪ರ ಚುನಾವಣಾ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸುವ, ದೊಡ್ಡ ಮಟ್ಟದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಕಪ್ಪುಹಣವನ್ನು ವಿದೇಶದಿಂದ ವಾಪಸ್ ತರುವಂಥ ಹಲವಾರು ದುಬಾರಿ ಭರವಸೆಗಳನ್ನು ನೀಡಿತ್ತು. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳ ಗತಿ ಏನಾಗುತ್ತದೆಂಬುದು ಈ ದೇಶದಲ್ಲಿ ರಹಸ್ಯವಾಗೇನೂ ಉಳಿದಿಲ್ಲ. ಆದರೆ ಈ ಸರ್ಕಾರದ ಭಿನ್ನತೆ ಏನೆಂದರೆ ಅದು ತಾನು ಕೊಟ್ಟ ಭರವಸೆಗಳನ್ನು ವಾಸ್ತವದಲ್ಲಿ ಈಡೇರಿಸುವಂಥಾ […]

ದಲಿತನ ಮನೆಯ ಕೂಳು ಧನಿಕರ ಮನೆಯ ಕಾಳು

ದಲಿತನ ಮನೆಯ ಕೂಳು ಧನಿಕರ ಮನೆಯ ಕಾಳು

ಆಹಾರ ಪದ್ಧತಿ ಮಾನವ ಸಮಾಜದ ಒಂದು ವಿಶಿಷ್ಟ ಅಂಗ. ಮಾನವನ ಉಗಮವಾದ ದಿನದಿಂದಲೂ ಆಹಾರ ಪದ್ಧತಿ ತನ್ನದೇ ಆದ ವಿಭಿನ್ನ ಆಯಾಮಗಳನ್ನು, ವಿಶಿಷ್ಟ ಸ್ವರೂಪಗಳನ್ನು ಪಡೆದುಕೊಳ್ಳುತ್ತಲೇ ಬಂದಿದೆ. ಮಾನವನ ಅಭ್ಯುದಯದ ಹಾದಿಯಲ್ಲಿ ಕಾಣಲಾಗುವ ಮನ್ವಂತರಗಳನ್ನು, ಬದಲಾವಣೆಗಳನ್ನು, ಪರಿವರ್ತನೆಗಳನ್ನು ಸಮಾಜದ ಆಹಾರ ಪದ್ಧತಿಗಳಲ್ಲೂ ಕಾಣಬಹುದು. ಆಹಾರ ಸಾಮುದಾಯಿಕ ಪ್ರಜ್ಞೆಯಿಂದ ರೂಪುಗೊಳ್ಳುವುದಿಲ್ಲ. ವ್ಯಕ್ತಿಗತ ನೆಲೆಯಲ್ಲಿ ರೂಪುಗೊಂಡು ಸಾಮುದಾಯಿಕ ಸ್ವರೂಪ ಪಡೆಯುತ್ತದೆ. ಮತ್ತೊಂದೆಡೆ ಯಾವುದೇ ಕಾಲಘಟ್ಟದ, ಯಾವುದೇ ಪ್ರದೇಶದ ಆಹಾರ ಪದ್ಧತಿಯನ್ನು ಸಾರ್ವತ್ರೀಕರಿಸಲೂ ಸಾಧ್ಯವಿಲ್ಲ. ಗಡ್ಡೆ ಗೆಣಸುಗಳನ್ನು ತಿನ್ನುವ ಹಂತದಿಂದ ಮಾನವ […]

ಉತ್ತರಪ್ರದೇಶದಲ್ಲಿ ಸ್ವಾಭಿಮಾನೀ ದಲಿತರು ಹಾಕಿರುವ ಮತ್ತೊಂದು ಸವಾಲು

ಉತ್ತರಪ್ರದೇಶದಲ್ಲಿ ಸ್ವಾಭಿಮಾನೀ ದಲಿತರು ಹಾಕಿರುವ ಮತ್ತೊಂದು ಸವಾಲು

ಸಹರಾನ್‌ಪುರದಲ್ಲಿ ಉದಯಿಸಿರುವ ಭೀಮ್ ಆರ್ಮಿ (ಭೀಮ ಸೇನೆ)ಯು ಉತ್ತರ ಪ್ರದೇಶದ ದಲಿತರಲ್ಲಿ ಹರಳುಗಟ್ಟುತ್ತಿರುವ ಆಕ್ರಮಣಶೀಲತೆಯನ್ನು ಸೂಚಿಸುತ್ತದೆ ಇತ್ತೀಚೆಗೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಠಾಕೂರರಿಗೂ ಮತ್ತು ದಲಿತರಿಗೂ ಮಧ್ಯೆ ನಡೆದಿರುವ ಘರ್ಷಣೆಗಳು, ಅಧಿಕಾರದಲ್ಲಿ ಬದಲಾವಣೆಯಾಗುತ್ತಿದ್ದಂತೆ ಅಲ್ಲಿ ವಿಷಮಗೊಳ್ಳುತ್ತಿರುವ ಸಾಮಾಜಿಕ ಸಂಬಂಧಗಳನ್ನೂ ಮತ್ತು ಸಾಂಸ್ಕೃತಿಕ ಹಕ್ಕುದಾರಿಕೆಗಳ (ಅಸರ್ಷನ್) ನಡುವಿನ ಸಂಘರ್ಷವನ್ನೂ ಸೂಚಿಸುತ್ತದೆ. ಕಳೆದ ೧೫ ವರ್ಷಗಳಲ್ಲಿ ಮಾಯಾವತಿಯವರ ಬಹುಜನ್ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷ (ಎಸ್‌ಪಿ)ಗಳು ದಲಿತರ ಮತ್ತು ಹಿಂದುಳಿದ ಜಾತಿಗಳ ಸಾಮಾಜಿಕ […]

ನಡೆದರಷ್ಟೇ ಮೂಡುವುದು ಹೊಸ ದಾರಿ, ನುಡಿದರಷ್ಟೇ ಕೇಳುವುದು ಹೊಸ ಹಾಡು

ನಡೆದರಷ್ಟೇ ಮೂಡುವುದು ಹೊಸ ದಾರಿ, ನುಡಿದರಷ್ಟೇ ಕೇಳುವುದು ಹೊಸ ಹಾಡು

ಎಲ್ಲವೂ ಆಗಿ ಹೋಗಿದೆ, ಮತ್ತು ಎಲ್ಲವೂ ಉಳಿದಿದೆ ಆದರೆ ನಾವು ಮುನ್ನುಗ್ಗುವದೇ ನಮ್ಮ ಕಾರ್ಯಭಾರ ರಸ್ತೆಗಳನ್ನು ನಿರ್ಮಿಸುತ್ತಾ ಸಾಗುವುದು ಸಮುದ್ರವನ್ನು ಸೀಳಿಕೊಂಡ ರಸ್ತೆಗಳು ಪಯಣಿಗನೆ, ನಿನ್ನ ಹೆಜ್ಜೆ ಗುರುತುಗಳೇ ರಸ್ತೆ ಮತ್ತೇನಿಲ್ಲ ಪಯಣಿಗನೇ ಅಲ್ಲಿ ರಸ್ತೆಯೇ ಇಲ್ಲ ನಡೆದರಷ್ಟೇ ಮೂಡುವುದು ಹೊಸ ದಾರಿ ನಮ್ಮ ನಡೆಯೇ ರಸ್ತೆ                                           […]

ವಿದ್ರೋಹ ಸಾಹಿತ್ಯದ ಒಡಲಲ್ಲೇ ಇದೆ

ವಿದ್ರೋಹ ಸಾಹಿತ್ಯದ ಒಡಲಲ್ಲೇ ಇದೆ

 “ನಮ್ಮ ನಾಡು-ನುಡಿಗಳು ಇಂದು ಒಂದು ನಿರ್ಧಾರಾತ್ಮಕ ಕ್ಷಣದಲ್ಲಿ ನಿಂತಿವೆ. ಜಾಗತೀಕರಣ, ತೀವ್ರ ಬಂಡವಾಳಶಾಹಿ, ಮುಂದುವರಿದ ದೇಶಗಳ ಆರ್ಥಿಕ ಶೋಷಣೆ ಮತ್ತು ಸಾಂಸ್ಕøತಿಕ ರಾಜಕಾರಣಗಳ ಕವಲು ಹಾದಿಯಲ್ಲಿ ನಿಂತಿರುವ ನಾವು ಈ ತನಕ ನಿರೂಪಿಸಿಕೊಂಡು ಬಂದಿರುವ ರಾಷ್ಟ್ರ ಮತ್ತು ಆಧುನಿಕತೆಗಳ ಕಲ್ಪನೆಗಳನ್ನು ವಿಶ್ಲೇಷಿಸಿಕೊಂಡು ನಮಗೆ ಬೇಕಾದ ಆಧುನಿಕತೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಆ ಆಧುನಿಕತೆಯು ಜನಪರ, ಪರಿಸರ ಸ್ನೇಹಿ, ಯುದ್ಧ ವಿರೋಧಿ, ವರ್ಗ, ಜಾತಿ, ಲಿಂಗ ತಾರತಮ್ಯ ವಿರೋಧಿ, ವಿವಿಧ ಜನ, ಜನಾಂಗ, ಗುಂಪು, ಪಂಗಡಗಳ ಸಾಮಾಜಿಕ ಅಸ್ಮಿತೆಯನ್ನೂ ಸಾಂಸ್ಕøತಿಕ ಅನನ್ಯತೆಯನ್ನೂ […]