ಸಮಾಜ

ಸಮಾಜ

ಮುಧೋಳ ಕೊಮು ಗಲಭೆ: ಉರಿಯಲ್ಲಿ ಬೆಂದ ಬದುಕು

ಮುಧೋಳ ಕೊಮು ಗಲಭೆ: ಉರಿಯಲ್ಲಿ ಬೆಂದ ಬದುಕು

ಅದು ಜನತಾ ಕಾಲೋನಿ. ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ವಾಡೆಯಲ್ಲಿ ದಲಿತರು, ಭಜಂತ್ರಿಯರು, ನಾಯಕರು, ಮುಸ್ಲಿಮರು, ಲಿಂಗಾಯತರು ಸೇರಿದಂತೆ ಇನ್ನಿತರರು ವಾಸಿಸುವ ತಾಣ. ಪ್ರವೇಶಕ್ಕೆ ಮುನ್ನ ಮುಖ್ಯರಸ್ತೆಯಲ್ಲಿ ದೊಡ್ಡದಾದ ಹಿಂದೂ ಜಾಗರಣ ವೇದಿಕೆ, ಕರ್ನಾಟಕ ಶಿವಸೇನೆ ನಾಮಫಲಕಗಳು ರಾರಾಜಿಸುತ್ತವೆ. ಈ ಬೋರ್ಡ್‍ಗಳಿಂದ ಅನತಿ ದೂರದಲ್ಲಿರುವ ನಾಲ್ಕು ಸಾಲು ಮನೆಗಳಲ್ಲಿ ಮುಸ್ಲಿಂ ಕುಟುಂಬದ ಮನೆಯೊಂದು ಕಪ್ಪು ಬಣ್ಣದಿಂದ ಆವರಿಸಿತ್ತು. ಕಲ್ಲಿನಿಂದ ಕಟ್ಟಿದ ಮನೆಯ ಕಿಟಕಿಗಳು ಕಾಣೆಯಾಗಿದ್ದವು. ಕುಳಿತುಕೊಳ್ಳಬೇಕಾದ ಸೋಫಾ ಸೆಟ್ಟುಗಳು ಸುಟ್ಟುಕರಕಲಾಗಿದ್ದವು. ಗಾಳಿ ಬೀಸುವ ಫ್ಯಾನ್‍ಗಳು ಸ್ಥಗಿತಗೊಂಡಿದ್ದವು. ಮನೆಯೊಳಗಿನ […]

ಸೃಜನಶೀಲತೆಗೆ ಸಂದ ಪ್ರಶಸ್ತಿಗಳು ಪ್ರತಿಭಟನೆಯ ಅಸ್ತ್ರಗಳೂ/Awards and resistance

ಸೃಜನಶೀಲತೆಗೆ ಸಂದ ಪ್ರಶಸ್ತಿಗಳು ಪ್ರತಿಭಟನೆಯ ಅಸ್ತ್ರಗಳೂ/Awards and resistance

ದೇಶದಲ್ಲಿ ದಿನವೂ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಚಾರಿಕತೆಯ ಮೇಲಿನ ಹಲ್ಲೆಯಿಂದ ಬೇಸತ್ತ ಸಾಹಿತಿಗಳು ತಮ್ಮದೇ ರೀತಿಯಲ್ಲಿ ಪ್ರತಿಭಟನೆ ಸೂಚಿಸುತ್ತಿದ್ದಾರೆ. ಸದ್ಯದಲ್ಲಿ ಕನ್ನಡದ ಪ್ರಮುಖ ಸಂಶೋಧಕರಾದ ಕಲಬುರ್ಗಿಯವರ ಹತ್ಯೆ ಮತ್ತು ಉತ್ತರ ಪ್ರದೇಶದ ದಾದ್ರಿಯಲ್ಲಿ ಇಕ್ಲಾಕ್ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿಯ ಕಗ್ಗೊಲೆಯನ್ನು ವಿರೋಧಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ‘ಪ್ರಶಸ್ತಿ’ಗಳನ್ನು ಹಿಂತಿರಿಗಿಸುತ್ತಿದ್ದಾರೆ. ಇದು ಮುಖ್ಯವಾಗಿ ಕೇಂದ್ರ ಸರಕಾರ ಮತೀಯ ಹಿಂಸೆಯನ್ನು ಹತ್ತಿಕ್ಕುವಲ್ಲಿ ತಾಳುತ್ತಿರುವ ನಿಧಾನ ಧೋರಣೆಯ ವಿರುದ್ಧ ಇಂತಹ ವಿಭಿನ್ನ ಪ್ರತಿಭಟನೆಯನ್ನು ತೋರುತ್ತಿದ್ದಾರೆ. […]

ಹೀಗೊಂದು ಉತ್ಸವ

ಹೀಗೊಂದು ಉತ್ಸವ

   ಅವತ್ತು ನಮ್ಮೂರಲ್ಲಿ ಪ್ರಶಾಂತ ಆಡೂರ್ ಅಭಿಮಾನಿ ಸಂಘದ ವಾರ್ಷಿಕೋತ್ಸವ. ಅದರ ಆಜೀವ ಅಧ್ಯಕ್ಷನಾದ ನಾನು, ಕಾರ್ಯದರ್ಶಿ ವಸೂ, ಖಜಾಂಚಿ ರಷೀದು, ಕಾನೂನು ಸಲಹೆಗಾರ ಇಸ್ಮಾಯಿಲ್ ಮುಂತಾದವರೆಲ್ಲ ಹೊಸ ಬಟ್ಟೆ ತೊಟ್ಟು ನಗು ನಗುತ್ತಾ ಓಡಾಡಿಕೊಂಡಿದ್ದೆವು. `ಒಂದರಾಗ ಒಂದು ಮುಗದು ಹೋಗಲಿ’ ಅಂತ ಆಡೂರ್ ಅವರು ತಮ್ಮ ಮಗನ ಮುಂಜಿ, ಮಗಳ ಬರ್ಥಡೇ ಹಾಗೂ ಅವರ ತಾತನ ಶತ ಸಹಸ್ರ ಚಂದ್ರ ದರ್ಶನ, ಎಲ್ಲಾ ಕೂಡಿಯೇ ಇಟ್ಟುಕೊಂಡಿದ್ದರು. ಇಷ್ಟೆಲ್ಲಾ ಮಾಡಿದಾಗ ಸತ್ಯನಾರಾಯಣ ಪೂಜೆ ಮಾಡದೇ ಇದ್ದರೆ ಹೇಗೆ […]

ಅಂತ್ಯವಿಲ್ಲದ ಮರಣ

ಅಂತ್ಯವಿಲ್ಲದ ಮರಣ

ಗಂಡನ ಮನೆಯಿಂದ ತಾಯಿಯ ಮನೆಗೆ ಹೋದಳು ಗಂಡ ಹೆಂಡತಿಯ ಮದ್ಯೆ ಯಾವ ತಕರಾರು ಇತ್ತೆಂಬುದು ಯಾರಿಗೂ ಗೊತ್ತಿಲ್ಲ ಮತ್ತು ಅದನ್ನು ಅವಳು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಆದರೆ  ಹಾಲುಗೆನ್ನೆಯ ಹಸುಗೂಸುಗಳಿಬ್ಬರನ್ನು ಗಂಡನ ಮನೆಯಲ್ಲಿ ಬಿಟ್ಟು ತವರು ಮನೆಗೆ ಹೋಗುತ್ತಿರುವುದನ್ನು ನೋಡಿ ಗಂಡ ಮತ್ತು ಹೆಂಡತಿಯ ಮದ್ಯೆ ಯಾವುದೋ ತಕರಾರು ಇರಬಹುದೆಂದು ಅಕ್ಕ-ಪಕ್ಕದವರು ಭಾವಿಸಿದ್ದರು. ಚಿತ್ರದುರ್ಗ ತಾಲ್ಲೂಕಿನ ಚಿಕ್ಕೇನಹಳ್ಳಿಯೇ ಅವಳ ಗಂಡನ ಗ್ರಾಮ, ಈ ಗ್ರಾಮ ಚಿತ್ರದುರ್ಗದಿಂದ ಪಶ್ಚಿಮಕ್ಕೆ 30 ಕಿ.ಮೀ. ದೂರದಲ್ಲಿದೆ.  ಅವಳ ಹುಟ್ಟೂರು ವಿಜಾಪುರ ಇದು ಚಿಕ್ಕೇನಹಳ್ಳಿಯಿಂದ […]

ಅನ್ಯವನ್ನು ಒಳಗೊಳ್ಳುವ ಕಷ್ಟ

ಅನ್ಯವನ್ನು ಒಳಗೊಳ್ಳುವ ಕಷ್ಟ

ಇಸ್ಲಾಂ ಮತ್ತು ಕ್ರೈಸ್ತ ರಿಲಿಜನ್ನುಗಳು ಶತಮಾನಗಳಷ್ಟು ಹಿಂದೆಯೆ ಭಾರತದಲ್ಲಿ ನೆಲಸಿ ಈ ಸಮಾಜದ ಅವಿಭಾಜ್ಯ ಅಂಗವೇ ಆಗಿ ಹೋಗಿವೆ. ಆದರೆ ಅವುಗಳನ್ನು ಸೈದ್ಧಾಂತಿಕವಾಗಿ ಅರ್ಥಮಾಡಿಕೊಳ್ಳುವ ಕೆಲಸವನ್ನು ಗಂಭೀರವಾಗಿ ಮಾಡಿರುವ ಪ್ರಯತ್ನಗಳು ಬಹಳ ಕಡಿಮೆ. ಕೆಲವು ಚಿಂತಕರು ಇಸ್ಲಾಂ ಮತ್ತು ಕ್ರೈಸ್ತ ರಿಲಿಜನ್‍ಗಳು ಹೇಗೆ ಭಾರತದ ಸಂಪ್ರದಾಯಗಳಿಗಿಂತ ಬರ್ಬರ ಎನ್ನುವುದನ್ನು ತೋರಿಸುದರಲ್ಲೇ ಕಾಲಕಳೆದರೆ, ಇನ್ನೂ ಕೆಲ ವಿದ್ವಾಂಸರು ಭಾರತೀಯ ಪರಂಪರೆ ಎಂದು ಮಾತನಾಡುವುದೇ ‘ರಿವೈವಲಿಸಂ’ ಅಥವಾ ಬ್ರಾಹ್ಮಣ ಶಾಹಿಗೆ ಉತ್ತರಾಧಿಕಾರಿಯಾಗುವುದು ಎನ್ನುವಂತೆ ನೋಡುತ್ತಾರೆ. ಈ ಎರಡು ಅತಿಗಳನ್ನು ಮೀರಿ […]

ಸೂತಕಕೆ ಕಲ್ಲಾದವಳು.

ಸೂತಕಕೆ ಕಲ್ಲಾದವಳು.

ಇದೊಂದು ಎಲ್ಲರಿಗೂ ಅರ್ಥವಾಗುವ ತೀರಾ ಸಣ್ಣ ಕಥೆ. ಇದನ್ನು ಕಥೆ ಎನ್ನುವುದೂ ತಪ್ಪಾಗುತ್ತದೆ ಎನಿಸುತ್ತದೆ. ಎಲ್ಲಾ ಮನೆಗಳಲ್ಲಿ ಬಹುತೇಕವಾಗಿ ಎಲ್ಲಾ ಮಹಿಳೆಯರೂ ಅನುಭವಿಸುವ ಯಾತನೆಯ ವ್ಯಥೆಯ ಕಥೆ ಎಂದರೆ ಬಹುಶಃ ಸರಿ ಹೊಂದುತ್ತದೆ . ಇಂತಹ ಸಮಸ್ಯೆಯನ್ನು ಆದಿಮ ಕಾಲದ ` ಮಿಥ್’ ‘ ಗಳಿಂದ ಹಿಡಿದು ಆಧುನಿಕ ` ಫ್ಯಾಷನ್ ` ಕಾಲದ ಅನೇಕ ಘಟನೆಗಳು ಇಂತÀಹ ಕಥೆಗಳನ್ನು ಕಥಿಸುತ್ತವೆ . ಆದರೆ ಇದು ಹಟ್ಟಿ ಸಂಪ್ರದಾಯಗಳಲ್ಲಿ ಅಲಿಖಿತವಾದ ಆಚರಣೆಯಾಗಿ ರೂಢಿಗತವೆನಿಸುವಷ್ಟು ಸಹಜವಾಗಿದೆ ಈ ಕಥೆ […]

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ: ಮುಂದಿಟ್ಟ ನಿಜದ ಸಂಗತಿ.

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ: ಮುಂದಿಟ್ಟ ನಿಜದ ಸಂಗತಿ.

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ: ಮುಂದಿಟ್ಟ ನಿಜದ ಸಂಗತಿ. -ಬಿ. ಶ್ರೀಪಾದ ಭಟ್ “ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ” ಸಂಘಟನೆಯು ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಹೋರಾಡುತ್ತಾ, ಸಮಾನ ಶಿಕ್ಷಣ ವ್ಯವಸ್ಥೆಯ ಜಾರಿಗಾಗಿ ಶ್ರಮಿಸುತ್ತಿರುವ, ‘ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ಸಮಿತಿ’ ಎಂಬ ರಾಷ್ಟ್ರÀಮಟ್ಟದ ವೇದಿಕೆಯ ಸದಸ್ಯ ಸಂಘಟನೆಯಾಗಿದೆ. ಹಲವಾರು ದಶಕಗಳಿಂದ ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಮೊದಲಾದ ರಾಜ್ಯಗಳಲ್ಲಿ ಶಿಕ್ಷಣದ ಜವಾಬ್ದಾರಿಯಿಂದ ಸರ್ಕಾರ ಹಿಂದೆ ಸರಿಯುತ್ತಿರುವುದರ ವಿರುದ್ದ ಹಾಗೂ ಸಮಾನ ಶಿಕ್ಷಣಕ್ಕಾಗಿ ನಿರಂತರವಾಗಿ ಪ್ರಯತ್ನಶೀಲವಾಗಿರುವ ಸಂಘಟನೆಗಳು, ಪರಿಣತ ಶಿಕ್ಷಣ ತಜ್ಞರು, […]

ಚಿಕ್ಕಮಗಳೂರು ಜಿಲ್ಲೆ ವಡ್ಡರಹಳ್ಳಿ: ದಲಿತರ ಮೇಲಿನ ಸಾಮಾಜಿಕ ಬಹಿಷ್ಕಾರ

ಚಿಕ್ಕಮಗಳೂರು ಜಿಲ್ಲೆ ವಡ್ಡರಹಳ್ಳಿ: ದಲಿತರ ಮೇಲಿನ ಸಾಮಾಜಿಕ ಬಹಿಷ್ಕಾರ

ಚಿಕ್ಕಮಗಳೂರು ಜಿಲ್ಲೆ ವಡ್ಡರಹಳ್ಳಿ: ದಲಿತರ ಮೇಲಿನ ಸಾಮಾಜಿಕ ಬಹಿಷ್ಕಾರ – ಸತ್ಯಶೋಧನಾ ಸಮಿತಿಯ ಚುಟುಕು ವರದಿ ಕರ್ನಾಟಕದಲ್ಲಿ ದಲಿತ ಸಮುದಾಯದ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ಬಹಿಷ್ಕಾರಗಳು ಮುಂದುವರೆಯುತ್ತಲೇ ಇವೆ, ಇತ್ತೀಚೆಗಷ್ಟೆ ಚಿಕ್ಕಮಗಳೂರು ಜಿಲ್ಲೆ ವಡ್ಡರಹಳ್ಳಿಯಲ್ಲಿನ ಮಾದಿಗ ಸಮುದಾಯದ ಎರಡು ಕುಟುಂಬಗಳ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ಮಾದ್ಯಮಗಳಲ್ಲಿ ಪ್ರಸಾರವಾಗಿತ್ತು. ಸ್ವಾಭಿಮಾನಿ ದಲಿತ ಶಕ್ತಿ, ಜಾತಿ ವಿನಾಶ ವೇದಿಕೆ ಮತ್ತು ಚಿಕ್ಕಮಗಳೂರಿನ ಪ್ರಗತಿಪರ ಚಿಂತಕರ ವೇದಿಕೆಗಳ ಸದಸ್ಯರು, ಮಾಧÀ್ಯಮದ ಪ್ರತಿನಿಧಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ನಿಜಸಂಗತಿಗಳನ್ನು ಶೋಧಿಸಲಾಯಿತು. […]

ಟೈಗರ್ ಎಂಬ ನಮ್ಮ ಮನೆಯ ಸದಸ್ಯ

ಟೈಗರ್ ಎಂಬ ನಮ್ಮ ಮನೆಯ ಸದಸ್ಯ

    ‘ಅಪ್ಪಾಜಿ, ಟೈಗರ್‍ಗೆ ಏನೋ ಆತು’ ಎಂದು ನನ್ನ ಮಗ ಆಕಾಶ್ ಓಡೋಡುತ್ತ ಬಂದ. ನನಗೋ ಗಾಬರಿ ಪ್ರತಿದಿನವೂ ನಮ್ಮನ್ನು ಕಂಡೊಡನೆ ಬಾಲ ಅಲ್ಲಾಡಿಸುತ್ತ, ಪ್ರೀತಿಯ ಮೊಗ ತೋರುತ್ತಿದ್ದ ಟೈಗರ್‍ಗೆ ಏನಾಯ್ತೋ ಎಂದು ಆತಂಕವಾಯ್ತು. ಟೈಗರ್ ಯಾರು ಅಂತ ಅದರ ಹಿನ್ನೆಲೆ ಹೇಳಲೇಬೇಕು. 11 ವರ್ಷಗಳ ಹಿಂದೆ ಸೊಂಡೂರಿನಲ್ಲಿ ಕೋಳಿ ಫಾರ್ಮ್‍ನಲ್ಲಿ ಟೈಗರ್ ಎಂಬ ಪುಟ್ಟ ಮರಿ ತನ್ನ ಇತರ ಸಹೋದರರೊಂದಿಗಿತ್ತು. ನಾಯಿಯನ್ನು ಸಾಕಲೇಬೇಕೆಂದು ಮನೆಯವಳ ವಿರೋಧವನ್ನೂ ಲೆಕ್ಕಿಸದೆ ಸೊಂಡೂರಿಗೆ ಹೋಗಿದ್ದೆ. ಚುಚುಚು ಎಂದು ಕರೆದೊಡನೆ […]

ಕನಸು ರೂಪಕವಾಗಿ ಕಾಡದಿರಲಿ

ಕನಸು ರೂಪಕವಾಗಿ ಕಾಡದಿರಲಿ

ಕನಸು ರೂಪಕವಾಗಿ ಕಾಡದಿರಲಿ -ಬಿ.ಪೀರ್‍ಬಾಷ “ಮಗಾ, ಹಾಲು ಕುಡಿಯೋದು ಮುಗೀತಾ?” “ಹ್ಞೂಂ” “ಸರಿ, ಬೇಗ ಹೋಂ ವರ್ಕ್…” ನನ್ನ ಮಾತು ಮುಗಿಯುವ ಮೊದಲೇ ಮಗ, ‘’ಅಪ್ಪಾ, ನನಗೊಂದು ಕನಸು ಬಿದ್ದಿತ್ತು” ಎಂದ. “ಏನು ಮಗಾ ಆ ಕನಸು… ಹೇಳು” ಎಂದೆ. ಅವನ ನುಡಿಗಳಿನ್ನೂ ತೊದಲು. ಬಿದ್ದ ಕನಸನ್ನು ಅರಹುವ ವಯಸ್ಸಲ್ಲ ಅದು. ಒಂದನೇ ತರಗತಿ ಶುರುವಾಗಿ ಈಗಷ್ಟೇ ಎರಡು ತಿಂಗಳು…. ಆದರೆ, ಕನಸಿಗ್ಯಾವ ವಯಸ್ಸಿನ ಹಂಗು? ಕನಸಿನ ಚಿತ್ರಣವನ್ನು ತನಗೆ ತೋಚಿದ ಪದಗಳಲ್ಲಿ ನನಗೆ ತಿಳಿಸಲು ಪ್ರಯತ್ನಿಸಿದ, […]

1 18 19 20