ಸಮಾಜ

ಸಮಾಜ

ಜ್ಯೋತಿಸಿಂಗ್ ಜೀವಂತವಾಗಿದ್ದಾಳೆ

ಜ್ಯೋತಿಸಿಂಗ್ ಜೀವಂತವಾಗಿದ್ದಾಳೆ

ಜ್ಯೋತಿಸಿಂಗ್ ಪ್ರಕರಣ ಸಂಭವಿಸಿ ಐದು ವರ್ಷಗಳಾಗಿದ್ದರೂ ಅಲ್ಲಲ್ಲಿ ಅಲ್ಪಸ್ವಲ್ಪ ಬದಲಾಗಿದೆಯೇ ಹೊರತು ಮೂಲಭೂತ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆ ಬಂದಿಲ್ಲ. ಐದು ವರ್ಷದ ಕೆಳಗೆ ೨೦೧೨ರ ಡಿಸೆಂಬರ್ ೧೬ ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸೊಂದರಲ್ಲಿ ಜ್ಯೋತಿ ಸಿಂಗ್ ಮೇಲೆ ಅತ್ಯಂತ ಭೀಕರವಾಗಿ ಲೈಂಗಿಕ ಆಕ್ರಮಣ ನಡೆಯಿತು. ಈ ಲೈಂಗಿಕ ಹಲ್ಲೆಯ ವಿವರಗಳು ಸಾರ್ವಜನಿಕಗೊಳ್ಳುತ್ತಿದ್ದಂತೆ ಆಕೆ ಅನುಭವಿಸಿದ ಆ ಭೀಬತ್ಸ ಕ್ರೌರ್ಯವು ಜನರಲ್ಲಿ ಆಕ್ರೋಶವನ್ನು ಕೆರಳಿಸಿತು, ಎಲ್ಲಾ ಕಡೆ ಪ್ರತಿಭಟನೆಗಳು ನಡೆದವು. ಇವೆಲ್ಲ ಕಾರಣದಿಂದ ಅಧಿಕಾರ ರೂಢ ಸರ್ಕಾರವು ತನಿಖೆಯನ್ನು […]

ನಿರ್ಭಯಾಳಿಂದ ಧಾನೇಶ್ವರಿಯವರೆಗೆ

ನಿರ್ಭಯಾಳಿಂದ ಧಾನೇಶ್ವರಿಯವರೆಗೆ

ದೆಹಲಿಯಿಂದ ವಿಜಯಪುರದವರೆಗೆ ಡಿಸೆಂಬರ್ 16, 2017ಕ್ಕೆ ದೆಹಲಿಯ ಜ್ಯೋತಿ ಸಿಂಗ್ ಅತ್ಯಾಚಾರಕ್ಕೀಡಾಗಿ ಹತ್ಯೆಗೊಳಗಾದ ಘಟನೆ ನಡೆದು ಐದು ವರ್ಷ ಪೂರೈಸಿದೆ. ನಿರ್ಭಯ ಪ್ರಕರಣ ಎಂದೇ ಹೆಸರಾದ ಈ ಘಟನೆಯ ನಂತರ ಭಾರತದ ಆಳುವ ವರ್ಗಗಳು ಎಚ್ಚೆತ್ತವು. ನ್ಯಾಯಾಂಗದಲ್ಲಿ ಆತ್ಮಾವಲೋಕನದ ಛಾಯೆ ಮೂಡಿತು. ರಾಜಕೀಯ ಪಕ್ಷಗಳು ಜಾಗೃತವಾದವು. ಮಹಿಳಾ ಸಂಘಟನೆಗಳು ನಿರಂತರ ಹೋರಾಟದ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದವು. ಕೇಂದ್ರ ಸರ್ಕಾರ ನೇಮಿಸಿದ್ದ ವರ್ಮಾ ಸಮಿತಿಯ ಶಿಫಾರಸುಗಳು ಮಹಿಳಾ ಸಮುದಾಯದಲ್ಲಿ ಆಶಾಭಾವನೆಯನ್ನು ಮೂಡಿಸಿದ್ದವು. ನಿರ್ಭಯ ಪ್ರಕರಣದ ಆರೋಪಿಗಳಿಗೆ […]

ವಿರಾಗಿಯ ನೆಲದ ನೋವು ಮತ್ತು ನಾವು

ವಿರಾಗಿಯ ನೆಲದ ನೋವು ಮತ್ತು ನಾವು

ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಶ್ರವಣಬೆಳಗೊಳ ಮತ್ತೆ ಎಲ್ಲರ ಗಮನ ಸೆಳೆಯುತ್ತಿದೆ. ಬರುವ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ಈಗಾಗಲೇ ಪೂರ್ವಸಿದ್ಧತೆ ಶುರುವಾಗಿದೆ. ರಾಜ್ಯ ಸರ್ಕಾರ 175 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದಿಂದಲೂ ಅನುದಾನ ದಕ್ಕಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಹಾಗು ಕೇಂದ್ರದ ಸಚಿವರು ಪದೇ ಪದೇ ಇಲ್ಲಿಗೆ ಭೇಟಿ ನೀಡಿ, ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕಾರ್ಯಕ್ರಮವು ಸುಸೂತ್ರವಾಗಿ ನೆರವೇರಲು ಅಗತ್ಯವಿರುವ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮಹಾಮಸ್ತಕಾಭಿಷೇಕ ಸಮೀಪಿಸಿದರೂ ಪೂರ್ವಸಿದ್ಧತಾ […]

ಬದಲಾಗಬೇಕಾದ ಕಾರ್ಮಿಕ ಸಂಘಟನೆಗಳ ಹೋರಾಟತಂತ್ರಗಳು

ಬದಲಾಗಬೇಕಾದ ಕಾರ್ಮಿಕ ಸಂಘಟನೆಗಳ ಹೋರಾಟತಂತ್ರಗಳು

ಕಾರ್ಮಿಕ ಕಾನೂನುಗಳಿಗೆ ತರಲಾಗುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳು ತಮ್ಮ ತಂತ್ರಗಳ ಬಗ್ಗೆ ಪುನರಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ ಸಂಘಟನೆ ಹುಟ್ಟಿ ಭರ್ತಿ ನೂರು ವರ್ಷಗಳಾಗುತ್ತಿರುವಾಗ, ಮತ್ತು ಕಾರ್ಮಿಕ ವರ್ಗವು ಸಂಘಟಿಸಿಕೊಳ್ಳುವ ಮತ್ತು ಮಾಲೀಕ ವರ್ಗದ ಜೊತೆ ತನ್ನ ಹಕ್ಕುಗಳಿಗಾಗಿ ಸಾಮೂಹಿಕ ಅನುಸಂಧಾನ ನಡೆಸುವ ಹಕ್ಕುಗಳನ್ನು ಪಡೆದುಕೊಂಡು ಹಲವು ದಶಕಗಳಾಗುತ್ತಿರುವ ಸಂದರ್ಭದಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರವು ಕಾಲಚಕ್ರವನ್ನು ಹಿಂದಕ್ಕೆಳೆಯುವ ಪ್ರಯತ್ನದಲ್ಲಿ ತೊಡಗಿದೆ. ಭಾರತದಲ್ಲಿ ಹೆಚ್ಚಿನ ಮಟ್ಟದಲ್ಲಿ ಬಂಡವಾ ಹೂಡಿಕೆ ಆಗದಿರಲು ಮತ್ತು ಹೆಚ್ಚಿನ […]

ಕೊಲ್ಲುವ ಕೈಗಳ ಅಸ್ತ್ರವಾಗಿರುವ ದಲಿತ ಶೂದ್ರ ಯುವಕರು

ಕೊಲ್ಲುವ ಕೈಗಳ ಅಸ್ತ್ರವಾಗಿರುವ ದಲಿತ ಶೂದ್ರ ಯುವಕರು

ನಮ್ಮ ದೇಶದ ಹೆಸರಾಂತ ಚಿಂತಕರಾದ ಡಾ. ಆನಂದ್ ತೇಲ್ತುಂಡೆ ಅವರು, 2002ರಲ್ಲಿ ಗುಜರಾತ್ ನಲ್ಲಿ ನಡೆದ ಜನಾಂಗ ನಿರ್ಮೂಲನೆಯ ಹತ್ಯಾಕಾಂಡದಲ್ಲಿ ದಲಿತರು, ಆದಿವಾಸಿಗಳು ಮತ್ತು ಶೂದ್ರರು ಪಾಲ್ಗೊಂಡು ಏನೂ ತಪ್ಪು ಮಾಡದವರನ್ನು ಕಗ್ಗೊಲೆ ಮಾಡಿ ತಮ್ಮ ಕೈಗಳನ್ನು ನೆತ್ತರ ಕೊಳದಲ್ಲಿ ಅದ್ದಿ ಅಪರಾಧಿಗಳಾದ ಸಂಗತಿಯನ್ನು ಚರ್ಚಿಸಿದ್ದಾರೆ. ಅವರೆನ್ನುವಂತೆ, “1992ರ ಬಾಬರಿ ಮಸೀದಿಯ ಧ್ವಂಸವಾಗಲಿ, ಅನಂತರ ಕಾಣಿಸಿಕೊಂಡ ಗಲಭೆಗಳ ಸಂದರ್ಭದಲ್ಲಾಗಲಿ ಅಥವಾ ಇತ್ತೀಚಿನ ಗುಜರಾತ್ ಕೋಮುವಾದಿ ಮಾರಣಹೋಮದಲ್ಲಾಗಲಿ ಸಂಘಪರಿವಾರದ ರಾಕ್ಷಸೀ ಕಾರ್ಯಕ್ರಮವನ್ನು ಜಾರಿಗೊಳಿಸಿದವರ ಆಜ್ಞೆ ಮತ್ತು ಆದೇಶಗಳನ್ನು ಶಿರಸಾವಹಿಸಿ […]

ಗೋರಖ್‍ಪುರದ ಮಕ್ಕಳೂ ಮಕ್ಕಳ ದಿನಾಚರಣೆಯೂ

ಗೋರಖ್‍ಪುರದ ಮಕ್ಕಳೂ ಮಕ್ಕಳ ದಿನಾಚರಣೆಯೂ

1954ರಲ್ಲಿ ಬಿಡುಗಡೆಯಾದ ಜಾಗೃತಿ ಹಿಂದಿ ಚಲನಚಿತ್ರದಲ್ಲಿ ರಾಷ್ಟ್ರೀಯತೆ ಮತ್ತು ಮಾನವೀಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಬೆಸೆಯುವ ಮೂಲಕ ಅಸಂಖ್ಯಾತ ಗೀತೆಗಳನ್ನು ರಚಿಸಿರುವ ಮಹಾನ್ ಕವಿ ಪ್ರದೀಪ್ ( ಮೂಲ ನಾಮ ರಾಮಚಂದ್ರ ನಾರಾಯಣ್‍ಜಿ ದ್ವಿವೇದಿ) ಅವರ ಒಂದು ಹಾಡು ಹೀಗಿದೆ “ ಹಮ್ ಲಾಯೆ ಹೈ ತೂಫಾನ್ ಸೆ ಕಸ್ತಿ ನಿಕಾಲ್ ಕೇ ಇಸ್ ದೇಶ್ ಕೊ ರಖನಾ ಮೆರೆ ಬಚ್ಚೋ ಸಂಭಾಲ್ ಕೆ ” ( ನಾವು ಈ ನಾವೆಯನ್ನು ಚಂಡಮಾರುತದಿಂದ ರಕ್ಷಿಸಿ ಹೊರತಂದಿದ್ದೇವೆ ಮಕ್ಕಳೇ, ಈ […]

ರಷ್ಯಾದ ಮಹಾನ್ ಕ್ರಾಂತಿ ಮತ್ತು  ಲೆನಿನ್‌ವಾದ

ರಷ್ಯಾದ ಮಹಾನ್ ಕ್ರಾಂತಿ ಮತ್ತು  ಲೆನಿನ್‌ವಾದ

ಅಂತರ್ಯುದ್ಧದ ಸಮಯದಲ್ಲಿ ತಲೆದೋರಿದ ಹವಾರು ಲೋಪದೋಷಗಳನ್ನು ಸರಿಪಡಿಸಲು ಲೆನಿನ್‌ವಾದ ವಿಫಲವಾಯಿತು. ಬರ್ನಾಡ್ ಡಿ’ಮೆಲ್ಲೋ ಬರೆಯುತ್ತಾರೆ: ಈ ಲೇಖನದ ಶೀರ್ಷಿಕೆಯಲ್ಲಿರುವ ಮೊದಲರ್ಧ ಭಾಗ (’೧೯೧೭-೨೧ರ ರಷ್ಯಾದ ಮಹಾನ್ ಕ್ರಾಂತಿ’) ವು ಬೊಲ್ಷೆವಿಕರ ಬಗ್ಗೆ, ೧೯೧೭ರ ರಷ್ಯಾ ಕ್ರಾಂತಿಯ ಬಗ್ಗೆ  ಹಾಗೂ  ಆ ನಂತರದ  ಅಂತರ್ಯುದ್ಧದ ಬಗೆಗಿನ ಇತಿಹಾಸಕಾರರಲ್ಲಿ ಅತ್ಯಂತ ಪ್ರಖ್ಯಾತ ಇತಿಹಾಸಕಾರನಾದ ಅಲೆಕ್ಸಾಂಡರ್ ರಬಿನೋವಿಚ್ ಅವರಿಗೆ ಖುಣಿಯಾಗಿದೆ. ಅವರ ಒಂದು ಲೇಖನವು ಇಪಿಡಬ್ಲ್ಯೂ ಪತ್ರಿಕೆಯ ಈ  ರಷ್ಯಾ ಕ್ರಾಂತಿಯ ಶತಮಾನೋತ್ಸವ ಸಂಚಿಕೆಯಲ್ಲಿ ಪ್ರಕಟವಾಗಿದೆ. ರಬಿನೋವಿಚ್, ರೆಕ್ಸ್ ಎ ವೇಡ್ […]

ನಂಬಿಕೆ ಮೂಢನಂಬಿಕೆ ಮತ್ತು ವರ್ಗ ತಾರತಮ್ಯ

ನಂಬಿಕೆ ಮೂಢನಂಬಿಕೆ ಮತ್ತು ವರ್ಗ ತಾರತಮ್ಯ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಸೂದೆಯೊಂದು ಕೊನೆಗೂ ವಿರೂಪಗೊಂಡು ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದಿದೆ. ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ನಡೆದುಕೊಳ್ಳುತ್ತಲೇ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದರಲ್ಲಿ ನಾವು ನಿಸ್ಸೀಮರು ಎಂದು ರಾಜ್ಯ ಸರ್ಕಾರ ಮತ್ತೊಮ್ಮೆ ನಿರೂಪಿಸಲು ಹೊರಟಿದೆ. ನಮ್ಮಲ್ಲಿ ಏನೆಲ್ಲಾ ಶಾಸನಗಳಿಲ್ಲ. ಕೌಟುಂಬಿಕ ದೌರ್ಜನ್ಯ ನಿಯಂತ್ರಣ, ಜಾತಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ, ಬಾಲಕಾರ್ಮಿಕ ನಿಯಂತ್ರಣ ಕಾಯ್ದೆ, ಅತ್ಯಾಚಾರ ನಿಯಂತ್ರಣ ಕಾಯ್ದೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹೀಗೆ ಹತ್ತು ಹಲವಾರು. ಇವೆಲ್ಲವೂ ಅಲಂಕಾರಿಕ ವಸ್ತುಗಳಂತೆ ಸಂವಿಧಾನದ […]

ಜಾಗತೀಕರಣ : ಸಂದಿಗ್ಧತೆಯಲ್ಲಿ ಮಹಿಳೆ

ಜಾಗತೀಕರಣ : ಸಂದಿಗ್ಧತೆಯಲ್ಲಿ ಮಹಿಳೆ

ಇಡೀ ವಿಶ್ವವೇ ಒಂದು ಸಣ್ಣ ಹಳ್ಳಿಯಾಗಿದೆ. ಆಧುನಿಕ ಸಂಪರ್ಕ ಮಾದ್ಯಮಗಳು ,ಸಮೂಹ ಮಾಧ್ಯಮಗಳು ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿದ್ಯಮಾನವನ್ನು ಪ್ರಪಂಚದ ಇನ್ನಾವುದೇ ಒಂದು ಮೂಲೆಯಲ್ಲಿ ಕುಳಿತು ನೋಡಲು, ತಿಳಿಯಲು ಸಾಧ್ಯವಾಗುವಂತೆ ಮಾಡಿದೆ. ಇದನ್ನೆ ನಾವು ಸ್ಥೂಲವಾಗಿ ಜಾಗತೀಕರಣ ಎನ್ನುತ್ತೇವೆ. ಅಖಂಡ ಜಗತ್ತನ್ನು ತನ್ನ ಅಖಾಡವಾಗಿರಿಸಿಕೋಂಡು ಸಮಕಾಲೀನ ಮಾನವ ಜೀವನದ ಎಲ್ಲ ಶಾಖೆಗಳ ಮೇಲೂ ಪ್ರಭಾವವನ್ನು ಬೀರುತ್ತಿರುವ ಅತ್ಯಂತ ಪ್ರಭಲ ಹಾಗು ಪ್ರಚೊದಕ ವಿದ್ಯಮಾನ ಈ ಜಾಗತೀಕರಣ. ಮೇಲ್ನೋಟಕ್ಕೆ ಇಷ್ಟೊಂದು ಸುಂದರವಾದ ಆಶಯಗಳನ್ನು ಒಳಗೊಂಡ ಪ್ರಕ್ರಿಯೆಗೆ ಒಂದೆಡೆ […]

ಭಾರತೀಯ ಜನತಾ ಪಕ್ಷದ ದುರ್ಬಲ ಕೊಂಡಿ

ಭಾರತೀಯ ಜನತಾ ಪಕ್ಷದ ದುರ್ಬಲ ಕೊಂಡಿ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಗ್ರಾಮೀಣ ಭಾರತವನ್ನು ನಿರ್ಲಕ್ಷ್ಯ ಮಾಡುತ್ತಿದ್ದು ಅದಕಾಗಿ ಅದು ವಿತ್ತೀಯ ಮತ್ತು ರಾಜಕೀಯ ಬೆಲೆಯನ್ನು ತೆರಬೇಕಾಗುತ್ತದೆ. ರಾಜಸ್ಥಾನದ ರೈತರು ಸತತ ಹೋರಾಟ ನಡೆಸಿ ಅಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರದಿಂದ ೨೦,೦೦೦ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮನ್ನಾ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಳೆದ ನಾಲಕ್ಕು ತಿಂಗಳಲ್ಲಿ ಈ ರೀತಿ ನಾಲಕ್ಕು ರಾಜ್ಯಗಳು ಸಾಲಮನ್ನಾವನ್ನು ಘೋಷಿಸಿವೆ. ಅಷ್ಟೇ ಅಲ್ಲ. ಇದೇ ಬಗೆಯ ರೈತ ಹೋರಾಟಗಳು ದೇಶದ ಇನ್ನೂ ಹಲವು ಕಡೆ ಹರಡಿಕೊಳ್ಳುವ ಸಾಧ್ಯತೆಗಳಿವೆ. ಇವೆಲ್ಲವೂ ಆ […]