ಮನೆಮಾತು

ಮನೆಮಾತು

ಅಮ್ಮನ ನೆನಪು-6 : ಮಕ್ಕಳ ನಿಮಿತ್ತ ಅವ್ವನ ಬಹುಕೃತ ವೇಷ !

ಅಮ್ಮನ ನೆನಪು-6 : ಮಕ್ಕಳ ನಿಮಿತ್ತ ಅವ್ವನ ಬಹುಕೃತ ವೇಷ !

ನಾನಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಸ್ಪಷ್ಟ ನೆನಪು. ಹೊಲದಲ್ಲಿ ಕೂಲಿ ಕೆಲಸ ಮಾಡಿ ಆಗ ತಾನೇ ಬಂದು ಚಪ್ಪರದ (ಗುಡಿಸಲು) ಮುಂದೆ ಸಗಣಿ ಸಾರಿಸಿದ ಅಂಗಳಲ್ಲಿ ಕೂತು ನನ್ನಕ್ಕನ ತಲೆಯಲ್ಲಿ ಏನೋ (ಹೇನು?) ನೋಡುತ್ತಿದ್ದಳು ನನ್ನವ್ವ. ಅಂದು ನನ್ನ ಶಾಲೆಯಲ್ಲಿ ಜನ್ಮದಿನದ (ಜಯಂತಿ) ಕುರಿತು ಚರ್ಚೆ ನಡೆದಿತ್ತು. ನನ್ನ ಜನ್ಮ ದಿನಾಂಕವನ್ನು ತಿಳಿದುಕೊಳ್ಳಬೇಕೆಂಬ ಕೂತೂಹಲದಿಂದ ಹೆಗಲಿನಲ್ಲಿದ್ದ ಶಾಲೆಯ ಚೀಲ ಮೂಲೆಗೆ ಎಸೆದವನೇ ನನ್ನವ್ವನ ಬೆನ್ನಿಗೆ ಆತುಕೊಂಡು, ‘ಯವ್ಯಾ ನನ್ನ ಹುಟ್ಟಿದ ದಿನಾಂಕ ಯಾವುದಬೇ?’ ಅಂತ ಕೇಳಿದೆ. ಅದಕ್ಕೆ […]

ಅಮ್ಮನ ನೆನಪು-5 : ಅಮ್ಮಿಯ ಸೌಹಾರ್ದ ಬದುಕು

ಅಮ್ಮನ ನೆನಪು-5 : ಅಮ್ಮಿಯ ಸೌಹಾರ್ದ ಬದುಕು

ನನ್ನವ್ವನ ಬದುಕಿನ ಪ್ರೀತಿ, ಹೋರಾಟ, ಸೌಹಾರ್ದದ ಬದುಕು ಇಂದಿಗೂ ನನ್ನ ಕಣ್ಣ ಮುಂದಿದೆ. ಇಂದು ಬದುಕಿನಲ್ಲಿ ಅಮ್ಮಿ ಅಬ್ಬಾ ಇಬ್ಬರೂ ಇಲ್ಲ. ಆದರೆ ಅವರು ಬದುಕಿದ ಸೌಹಾರ್ದದ ಬದುಕು ಇಂದಿಗೂ ನನಗೆ ಮಾದರಿ. ಅಮ್ಮಿ ಅಶಿಕ್ಷಿತಳು, ದೈವಭಕ್ತೆ. ಆದರೆ ಎಂದಿಗೂ ಭಿನ್ನವಾದ ಧರ್ಮದ ರೇಖೆಗಳೊಳಗೆ ಬದುಕಿದವಳಲ್ಲ. ನನ್ನ ಬಾಲ್ಯ ಕಳೆದದ್ದು ಗುಲಬರ್ಗಾದ ಷಹಬಜಾರದಲ್ಲಿ. ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ಇದ್ದಕ್ಕಿದ್ದಂತೆ ಏನಾಯಿತೋ ಕಾಣೆ, ಮುಸ್ಲೀಮರ ಮನೆಗಳಿಗೆ, ಅದೂ ಪುರಾತನ ಕಾಲದ ಜುಮ್ಮಾ ಮಸೀದಿಯ ಪಕ್ಕದಲ್ಲಿರುವ ಮುಸ್ಲೀಮರ ಮನೆಗಳಿಗೆ […]

ಅಮ್ಮನ ನೆನಪು-4 :ನನ್ನದೊಂದು ಹಿಡಿ ನುಡಿಮಣ್ಣು !

ಅಮ್ಮನ ನೆನಪು-4 :ನನ್ನದೊಂದು ಹಿಡಿ ನುಡಿಮಣ್ಣು !

ನಾನು ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ದಾಖಲಾಗಿದ್ದ ಅಮ್ಮನ ಬಳಿಗೆ ಧಾವಿಸಿ ಬಂದಾಗ ಆಕೆ ಕಣ್ಣು ತೆರೆದಿದ್ದಳು; ಉಸಿರು ನಿಂತಿತ್ತು ! ಹಾಸಿಗೆ ಪಕ್ಕದಲ್ಲಿ ಒಬ್ಬನೇ ದಂಗಾಗಿ ನಿಂತಿದ್ದ ನನಗೆ ಜೋರು ಅಳು ಬರಲಿಲ್ಲ. ಆ ಕ್ಷಣ ದುಃಖ ರಕ್ತವಾಗಿ ನನ್ನ ಮೈತುಂಬ ಹರಿದಾಡುತ್ತಿತ್ತು. ಏನು ಮಾಡಬೇಕೆಂದು ತೋಚದ ಅಸಹಾಯಕ ಸ್ಥಿತಿ. ಆಕೆಯ ತಣ್ಣನೆಯ ಅಂಗೈಯಲ್ಲಿ ನನ್ನ ಕೈಯಿಟ್ಟು ಅದುಮಿದೆ. ಹಣೆಯ ಮೇಲೆ ಕೈಯಾಡಿಸಿದೆ. ಹಸ್ತವನ್ನು ಹಣೆಮೇಲಿಂದ ಕೆಳಗೆ ಸರಿಸಿ ಸಾವಕಾಶವಾಗಿ ರೆಪ್ಪೆ ಸವರಿದೆ. ಕಣ್ಣು ಮುಚ್ಚಿದಳು ! […]

ಅಮ್ಮನ ನೆನಪು-3 : ಗಟ್ಟಿ ಕಾದಂಬರಿಗಾರ್ತಿಯ ದಿಟ್ಟ ಬದುಕು

ಅಮ್ಮನ ನೆನಪು-3 : ಗಟ್ಟಿ ಕಾದಂಬರಿಗಾರ್ತಿಯ ದಿಟ್ಟ ಬದುಕು

‘ಮೈ ಲೈಫ್ ಈಸ್ ಫುಲ್ ಆಫ್ ರೋಮಾನ್ಸ್’ ಎಂದು ಪತ್ರಿಕೆಯೊಂದರಲ್ಲಿ ದಿಟ್ಟತನದ ಹೇಳಿಕೆ ನೀಡಿದ್ದ ನಮ್ಮ ತಾಯಿ ಉಷಾ ನವರತ್ನರಾಮ್ ನೇರನುಡಿ ಹಾಗೂ ಪ್ರಾಮಾಣಿಕತೆಯ ಪ್ರತಿರೂಪ. ನಮ್ಮ ತಂದೆ ಹಾಗೂ ತಾಯಿಯವರದು ಪ್ರೇಮವಿವಾಹ. ಆ ಕಾಲದಲ್ಲಿ ನಮ್ಮ ತಾಯಿಯವರು ಬರೆಯುತ್ತಿದ್ದ ಕಾದಂಬರಿಗಳು ಬಹುತೇಕ ‘ಮಿಲ್ಸ್ ಆಂಡ್ ಬೂನ್’ ತರಹ ರೊಮ್ಯಾಂಟಿಕ್ ಆಗಿರುತ್ತವೆ ಎಂದು ಅನೇಕರ ಟೀಕೆ ಹಾಗೂ ಅಭಿಪ್ರಾಯವಾಗಿತ್ತು. ಅದನ್ನು ದಿಟ್ಟತನದಿಂದ ಎದುರಿಸಿ ‘ನನ್ನ ಜೀವನ ರಸಿಕತೆಯಿಂದ ತುಂಬಿದೆ’ ಎಂದು ಹೇಳಿಕೆ ನೀಡಿದ ನಮ್ಮ ತಾಯಿಯವರ ನೇರನುಡಿಗಳನ್ನು […]

ಅಮ್ಮನ ನೆನಪು-2 : ಆಧಾರ ರಹಿತ ಆಪಾದನೆಗೆ ಅವ್ವನ ಅಂಕುಶ !

ಅಮ್ಮನ ನೆನಪು-2 : ಆಧಾರ ರಹಿತ ಆಪಾದನೆಗೆ ಅವ್ವನ ಅಂಕುಶ !

ನನ್ನ ಹುಟ್ಟೂರು ಅಂದಿನ ಧಾರವಾಡ ಜಿಲ್ಲೆಯ (ಈಗ ಗದಗ ಜಿಲ್ಲೆ) ರೋಣ ತಾಲೂಕಿನ ಬೆಳವಣಿಕೆ ಗ್ರಾಮ. ನನ್ನ ತಂದೆ ಅವರು ಅಲ್ಲಿನ ಸಹಕಾರ ಸಂಘದಲ್ಲಿ ಕೆಲ ಕಾಲ ಚೇರ್ಮನ್ ಆಗಿದ್ದರು. ಊರಿನ ಸಂತೆ ನಡೆಯುವ ಜಾಗ ಬದಲಾವಣೆಗೆ ಸಂಬಂಧಿಸಿದಂತೆ ವರ್ತಕರು ಮತ್ತು ಬಡ ನಾಗರಿಕರ ನಡುವೆ ವಿವಾದ ಸಂಭವಿಸಿದಾಗ ನನ್ನ ತಂದೆ ಹಳ್ಳಿಯ ಬಡವರ ಸಲುವಾಗಿ ಒಂದು ದಾವೆ ಹೂಡಿದರು. ಇದು ಅಲ್ಲಿನ ಪ್ರಭಾವಶಾಲಿಗಳ ಕಣ್ಣು ಕೆಂಪಾಗಿಸಿತು. ಅವರೆಲ್ಲ ಸೇರಿ ನನ್ನ ತಂದೆಯನ್ನು ಕೊಲೆ ಮಾಡುವ ಸಂಚು […]

ಅಮ್ಮನ ನೆನಪು-1 : ಅವರ ಮಗ ಎನ್ನಿಸಿಕೊಳ್ಳಲು ಹೆಮ್ಮೆ

ಅಮ್ಮನ ನೆನಪು-1 : ಅವರ ಮಗ ಎನ್ನಿಸಿಕೊಳ್ಳಲು ಹೆಮ್ಮೆ

ಅಮ್ಮನ ನೆನಪು : ಈ ಸರಣಿಯ ಬರೆಹಗಳು ಕೆಲವು ಕಾಲ ಅನಿಕೇತನದಲ್ಲಿ ಪ್ರಕಟವಾಗಲಿವೆ. ಮೈಸೂರಿನ ಅಂಕುರ ಪ್ರಕಾಶನವು ಅಮ್ಮನ ನೆನಪು ಎಂಬ ಪುಸ್ತಕವನ್ನು ಎರಡು ಸಂಪುಟಗಳಲ್ಲಿ ಹೊರತಲಿದೆ. ಅದರ ಕೆಲವು ಭಾಗಗಳು ಇಲ್ಲಿ ಕೆಲವು ಕಾಲ ಪ್ರಕಟವಾಗಲಿವೆ.  ಸೋಗಾಲ ಪಾಪಣ್ಣ ಸರೋಜಮ್ಮ ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ (1928), ಕಲಿತದ್ದು ಕೇವಲ ನಾಲ್ಕನೇ ಕ್ಲಾಸು. ನಾಲ್ಕು ಜನ ಅಣ್ಣಂದಿರ ಒಬ್ಬಳೇ ತಂಗಿಯಾಗಿ, ಪಡೆದ ಪ್ರೀತಿಗಿಂತ, ಕೊಟ್ಟ ಪ್ರೀತಿಯೇ ಹೆಚ್ಚು. ಗಂಡನ ಮನೆಗೆ ಬಂದ ಮೇಲೆ, ತೌರಿನ […]

ಅಮ್ಮಾ ಎಂದರೆ ಏನೋ ಹರುಷವೂ ….

ಅಮ್ಮಾ ಎಂದರೆ ಏನೋ ಹರುಷವೂ ….

“ ಅಮ್ಮಾ,, ಅಮ್ಮಾ ,,,, ನೀ ಅಮ್ಮಾ ಎಂದಾಗ ಏನೋ ಸಂತೋóಷವೂ ” “ ಅಮ್ಮಾ ನಿನ್ನ ತೋಳಿನಲ್ಲಿ ಕಂದಾ ನಾನು ನಿನ್ನಾ ಸಂಗ ಆಡಲೆಂದು ಬಂದೇ ನಾನು ” “ ಅಮ್ಮಾ ಎಂದರೆ ಏನೋ ಹರುಷವೂ ನಮ್ಮ ಪಾಲಿಗೆ ಅವಳೇ ದೈವವೂ ” “ ಅಮ್ಮಾ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಬಾಳಲೆ ಬೇಕು ” ಇಂತಹ ಸುಮಧುರ ಗೀತೆಗಳು 1960 ರಿಂದ 90ರ ದಶಕದವರೆಗೂ ಗುನುಗುನಿಸುತ್ತಿದ್ದವು. ಇಂದಿಗೂ ಇಂತಹ ಹಾಡುಗಳು ನಮ್ಮ ಸುಪ್ತ […]

ಮೂರ್ಖರ ದಿನಾಚರಣೆಯೂ ಮೂರ್ಖರ ಸಹವಾಸವೂ

ಮೂರ್ಖರ ದಿನಾಚರಣೆಯೂ ಮೂರ್ಖರ ಸಹವಾಸವೂ

ಮೂರ್ಖರ ದಿನ ಅಥವಾ ಏಪ್ರಿಲ್ ಫೂಲ್ ದಿನವೆಂದೇ ಪ್ರಸಿದ್ಧಿ ಪಡೆದಿರುವ ಏಪ್ರಿಲ್ ಒಂದನೆಯ ದಿನಕ್ಕೆ ತನ್ನದೇ ಆದ ಸ್ಪಷ್ಟ ಇತಿಹಾಸವಿಲ್ಲ. ಈ ಪರಂಪರೆ ಯಾವ ಕಾಲಘಟ್ಟದಲ್ಲಿ ಪ್ರಾರಂಭವಾಯಿತೆಂಬ ಮಾಹಿತಿಯೂ ಸ್ಪಷ್ಟವಾಗಿಲ್ಲ. ಕೆಲವು ಚಾರಿತ್ರಿಕ ದಾಖಲೆಗಳ ಪ್ರಕಾರ ಏಪ್ರಿಲ್ ಫೂಲ್ ಪರಂಪರೆಯ ಆದಿಯನ್ನು 1582ರ ಫ್ರಾನ್ಸ್‍ನ ಇತಿಹಾಸದಲ್ಲಿ ಗುರುತಿಸಲಾಗುತ್ತದೆ. 1581ರ ಹೊಸವರ್ಷದ ಸಂದರ್ಭವನ್ನು ಎಂಟು ದಿನಗಳ ಕಾಲ ಆಚರಿಸಲಾಗಿತ್ತು. ಏಪ್ರಿಲ್ 1ರಂದು ಕೊನೆಯ ದಿನವಾಗಿತ್ತು. ಚಾಲ್ರ್ಸ್ ದೊರೆಯು ಗ್ರೆಗೋರಿಯನ್ ಕ್ಯಾಲೆಂಡರನ್ನು ಜಾರಿಗೊಳಿಸಿದ ನಂತರ ಹೊಸವರ್ಷಾಚರಣೆಯನ್ನು ಜನವರಿ 1 ಕ್ಕೆ […]

ಟೈಗರ್ ಎಂಬ ನಮ್ಮ ಮನೆಯ ಸದಸ್ಯ

ಟೈಗರ್ ಎಂಬ ನಮ್ಮ ಮನೆಯ ಸದಸ್ಯ

    ‘ಅಪ್ಪಾಜಿ, ಟೈಗರ್‍ಗೆ ಏನೋ ಆತು’ ಎಂದು ನನ್ನ ಮಗ ಆಕಾಶ್ ಓಡೋಡುತ್ತ ಬಂದ. ನನಗೋ ಗಾಬರಿ ಪ್ರತಿದಿನವೂ ನಮ್ಮನ್ನು ಕಂಡೊಡನೆ ಬಾಲ ಅಲ್ಲಾಡಿಸುತ್ತ, ಪ್ರೀತಿಯ ಮೊಗ ತೋರುತ್ತಿದ್ದ ಟೈಗರ್‍ಗೆ ಏನಾಯ್ತೋ ಎಂದು ಆತಂಕವಾಯ್ತು. ಟೈಗರ್ ಯಾರು ಅಂತ ಅದರ ಹಿನ್ನೆಲೆ ಹೇಳಲೇಬೇಕು. 11 ವರ್ಷಗಳ ಹಿಂದೆ ಸೊಂಡೂರಿನಲ್ಲಿ ಕೋಳಿ ಫಾರ್ಮ್‍ನಲ್ಲಿ ಟೈಗರ್ ಎಂಬ ಪುಟ್ಟ ಮರಿ ತನ್ನ ಇತರ ಸಹೋದರರೊಂದಿಗಿತ್ತು. ನಾಯಿಯನ್ನು ಸಾಕಲೇಬೇಕೆಂದು ಮನೆಯವಳ ವಿರೋಧವನ್ನೂ ಲೆಕ್ಕಿಸದೆ ಸೊಂಡೂರಿಗೆ ಹೋಗಿದ್ದೆ. ಚುಚುಚು ಎಂದು ಕರೆದೊಡನೆ […]