ಮನೆಮಾತು

ಮನೆಮಾತು

ಕೊಲ್ಲುವ ಕೈಗಳ ಅಸ್ತ್ರವಾಗಿರುವ ದಲಿತ ಶೂದ್ರ ಯುವಕರು

ಕೊಲ್ಲುವ ಕೈಗಳ ಅಸ್ತ್ರವಾಗಿರುವ ದಲಿತ ಶೂದ್ರ ಯುವಕರು

ನಮ್ಮ ದೇಶದ ಹೆಸರಾಂತ ಚಿಂತಕರಾದ ಡಾ. ಆನಂದ್ ತೇಲ್ತುಂಡೆ ಅವರು, 2002ರಲ್ಲಿ ಗುಜರಾತ್ ನಲ್ಲಿ ನಡೆದ ಜನಾಂಗ ನಿರ್ಮೂಲನೆಯ ಹತ್ಯಾಕಾಂಡದಲ್ಲಿ ದಲಿತರು, ಆದಿವಾಸಿಗಳು ಮತ್ತು ಶೂದ್ರರು ಪಾಲ್ಗೊಂಡು ಏನೂ ತಪ್ಪು ಮಾಡದವರನ್ನು ಕಗ್ಗೊಲೆ ಮಾಡಿ ತಮ್ಮ ಕೈಗಳನ್ನು ನೆತ್ತರ ಕೊಳದಲ್ಲಿ ಅದ್ದಿ ಅಪರಾಧಿಗಳಾದ ಸಂಗತಿಯನ್ನು ಚರ್ಚಿಸಿದ್ದಾರೆ. ಅವರೆನ್ನುವಂತೆ, “1992ರ ಬಾಬರಿ ಮಸೀದಿಯ ಧ್ವಂಸವಾಗಲಿ, ಅನಂತರ ಕಾಣಿಸಿಕೊಂಡ ಗಲಭೆಗಳ ಸಂದರ್ಭದಲ್ಲಾಗಲಿ ಅಥವಾ ಇತ್ತೀಚಿನ ಗುಜರಾತ್ ಕೋಮುವಾದಿ ಮಾರಣಹೋಮದಲ್ಲಾಗಲಿ ಸಂಘಪರಿವಾರದ ರಾಕ್ಷಸೀ ಕಾರ್ಯಕ್ರಮವನ್ನು ಜಾರಿಗೊಳಿಸಿದವರ ಆಜ್ಞೆ ಮತ್ತು ಆದೇಶಗಳನ್ನು ಶಿರಸಾವಹಿಸಿ […]

ಕೂಡ್ಲಿಗಿಯ ಗುಳೆಲಕ್ಕವ್ವನ ವಿಶಿಷ್ಟ ಜಾತ್ರೆ

ಕೂಡ್ಲಿಗಿಯ ಗುಳೆಲಕ್ಕವ್ವನ ವಿಶಿಷ್ಟ ಜಾತ್ರೆ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಐತಿಹಾಸಿಕ, ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳು ಹೇಗಿವೆಯೋ ಹಾಗೆಯೇ ಜನಪದ ಆಚರಣೆಗಳೂ ಹಾಸುಹೊಕ್ಕಾಗಿವೆ. ಒಂದು ಗ್ರಾಮದ ಸಂಸ್ಕೃತಿಯೆಂದರೆ ಅಲ್ಲಿನ ಆಚರಣೆಗಳು. ಅವು ಧಾರ್ಮಿಕ ಹಿನ್ನೆಲೆಯಲ್ಲಿರಬಹುದಾದರೂ ಆ ಊರಿನ ಇತಿಹಾಸ, ಐತಿಹ್ಯವನ್ನು ಅವು ಖಂಡಿತವಾಗಿ ತಿಳಿಸಬಲ್ಲವು. ಈ ದೃಷ್ಟಿಯಿಂದ ನಾನು ಯಾವುದೇ ಗ್ರಾಮದಲ್ಲಿ ಗುಡಿ ಗುಂಡಾರಗಳಿಗೆ ಭೇಟಿ ನೀಡುತ್ತೇನೆಂದರೆ ಅದು ಇತಿಹಾಸವನ್ನು ತಿಳಿದುಕೊಳ್ಳುವ ಅಲ್ಲಿನ ಸಂಸ್ಕೃತಿಯನ್ನು ತಿಳಿದುಕೊಳ್ಳುವ ಉದ್ದೇಶದಿಂದ. ಬಳ್ಳಾರಿ ಜಿಲ್ಲೆಯಲ್ಲಿ ಬಹಳ ವಿಶಿಷ್ಟವಾದ ಜನಪದ ಆಚರಣೆಗಳಿವೆ. ಅವುಗಳಲ್ಲಿ ಗುಳೆ ಹೋಗುವುದು ಒಂದು. ಇದೊಂದು […]

ಅಮ್ಮನ ನೆನಪು-8 : ಸೂಫೀ ಫಕೀರನ ದಯೆ

ಅಮ್ಮನ ನೆನಪು-8 : ಸೂಫೀ ಫಕೀರನ ದಯೆ

ನನ್ನ ತಾಯಿಯ ನೆನಪು ಬಂದಾಗ ನನ್ನ ಕಣ್ಣಿನ ಎದುರು ಆಕೆಯ ಹಲವು ಆಯಾಮಗಳು ಬಂದು ನಿಲ್ಲುತ್ತವೆ. ಆಕೆ ಮೂಲತಃ ತಾಯಿ. ನಂತರ ಗೃಹಿಣಿ, ಮನೆ ಯಜಮಾನಿ, ನನಗೆ ಸನ್ಮಾರ್ಗ ತೋರಿದ ಗುರು. ಮೇಲಾಗಿ ನನ್ನಲ್ಲಿ ಜೀವನದ ಸಂಘರ್ಷಗಳನ್ನು ಎದುರಿಸುವ ಧೈರ್ಯಸ್ಥೈರ್ಯ ತುಂಬಿದ ಶಕ್ತಿ ದೇವತೆ. ಪ್ರೀತಿ, ಮಮಕಾರ, ಕಾರುಣ್ಯಗಳ ಸಾಕಾರ ಮೂರ್ತಿಯಾಗಿದ್ದ ಆಕೆ ಜೀವನದ ಕೊನೆಯ ಕ್ಷಣದವರೆಗೂ ನನಗೆ ಒಗಟಾಗಿದ್ದಳು. ಆಕೆಯದು ನಿಗೂಢ ವ್ಯಕ್ತ್ವಿತ್ವ. ಆಕೆಯ ಮನಸ್ಸಿನ ಆಳವನ್ನು ಕಂಡು ಹಿಡಿಯಲು ನನಗೆ ಆಗಲೇ ಇಲ್ಲ. “ನಿನ್ನ […]

ಮೊಬೈಲು ನಮ್ಮೊಳಗಿನ ಮಾತು ಕಸಿದುಕೊಳ್ಳುತ್ತಿದೆಯೇ?

ಮೊಬೈಲು ನಮ್ಮೊಳಗಿನ ಮಾತು ಕಸಿದುಕೊಳ್ಳುತ್ತಿದೆಯೇ?

ಮೊನ್ನೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದೆ. ನನ್ನನ್ನೂ ಒಳಗೊಂಡಂತೆ ಬಹುತೇಕ ಎಲ್ಲರೂ ಸಮಯ ನೂಕಲು ತಮ್ಮ ಮೊಬೈಲು ಅಥವಾ ನಿದ್ರೆಯ ಮೊರೆ ಹೋಗಿದ್ದರು. ಎಲ್ಲೋ ಕೆಲವರು ಮಾತ್ರ ಪರಸ್ಪರ ಮಾತುಕತೆಯಲ್ಲಿ ತೊಡಗಿಕೊಂಡಿದ್ದರು. ಪ್ರಯಾಣದೊಂದಿಗೆ ಹುಟ್ಟಿಕೊಳ್ಳುತ್ತಿದ್ದ ಹೊಸ ಒಡನಾಟಗಳಿಗೆಲ್ಲ ಮೊಬೈಲು ಎಳ್ಳು ನೀರು ಬಿಡುತ್ತಿದೆಯೇ ಎಂಬ ಪ್ರಶ್ನೆಯೊಂದಿಗೆ ಮನಸ್ಸು ಗುದ್ದಾಡುವ ಹೊತ್ತಿಗೆ ಸರಿಯಾಗಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಪ್ಪ-ಮಗನ ನಡುವಿನ ಮಾತುಕತೆ ಕಿವಿಗೆ ಬೀಳಲಾರಂಭಿಸಿತು. ಐದಾರು ವರ್ಷದ ಪುಟ್ಟ ಹುಡುಗ, ‘ಪಪ್ಪಾ ಒನ್ಗೆ ಅರ್ಜೆಂಟ್ ಆಗ್ತಿದೆ’ ಅಂತ ತನ್ನ ಅಳಲು ತೋಡಿಕೊಳ್ಳಲಾರಂಭಿಸಿದ್ದ. […]

ವರುಷ ಹೊಸತಾದರೇನು ಭಾವ ಪ್ರಾಚೀನ

ವರುಷ ಹೊಸತಾದರೇನು ಭಾವ ಪ್ರಾಚೀನ

ಆಧುನಿಕತೆ ಮತ್ತು ಪ್ರಜ್ಞೆ ಈ ಎರಡೂ ವಿದ್ಯಮಾನಗಳು ಮಾನವ ಸಮಾಜವನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ವ್ಯಾಖ್ಯಾನಿಸಲು ನೆರವಾಗುವ ಆಕರಗಳು. ಆಧುನಿಕತೆ ಎಂಬ ಪದವನ್ನು ಸಾಮಾನ್ಯ ಪರಿಭಾಷೆಯಲ್ಲಿ ನಾಗರೀಕತೆಯ ಮುಂದುವರೆದ ಹಂತ ಎಂದು ಪರಿಗಣಿಸಲಾಗುತ್ತದೆ. ಮಾನವ ಸಮಾಜ ಶತಮಾನಗಳ ಕಾಲದ ಚರಿತ್ರೆಯ ಹಿನ್ನೆಲೆಯಲ್ಲಿ ನಾಗರೀಕತೆಯನ್ನು ಮೈಗೂಡಿಸಿಕೊಂಡಿದೆ ಎಂಬ ನಂಬಿಕೆಯೊಂದಿಗೇ ತನ್ನ ಆಧುನಿಕತೆಯ ಬಗ್ಗೆ ಹೆಮ್ಮೆ ಪಡುತ್ತದೆ. 21ನೆಯ ಶತಮಾನದ ಎರಡನೆಯ ದಶಮಾನದಲ್ಲಿರುವ ಮನುಕುಲ “ನಾಗರೀಕತೆಯತ್ತ ಮುನ್ನಡೆಯುವ” ಹಂತವನ್ನು ಮೀರಿ “ ಆಧುನಿಕತೆಯತ್ತ ದಾಪುಗಾಲು ಹಾಕುವ ” ಹಂತ ತಲುಪಿದೆ. […]

ಅಮ್ಮನ ನೆನಪು-8 : ‘ನಾನವನಲ್ಲ, ಅವಳು’

ಅಮ್ಮನ ನೆನಪು-8 : ‘ನಾನವನಲ್ಲ, ಅವಳು’

ಹದಿನಾಲ್ಕು ವರ್ಷಗಳಲ್ಲಿ ನಾನು ಅದೆಷ್ಟು ಬದಲಾಗಿದ್ದೆ ! ಪ್ರೀತಿಯಿಂದ ಕೈತುತ್ತು ನೀಡಿ ಸಲಹಿದ ತಾಯಿಯನ್ನ ನಾನು ಕಲ್ಲು ಮನಸ್ಸಿನಿಂದ ತೊರೆಯುವಾಗ ನನ್ನೊಳಗೆ ಹೆಣ್ಣೊಬ್ಬಳು ಹುಟ್ಟಿಕೊಂಡಿದ್ದಳು. ನನ್ನೊಳಗಿದ್ದ ಹೆಣ್ಣು ನನ್ನ ತಾಯಿಯನ್ನ ನೋಡಿ ತಾನು ಹೆಣ್ಣಾಗಬೇಕೆಂದುಕೊಂಡು ಹೊಸ್ತಿಲು ದಾಟಿದಾಗ ನನಗೆ ಹದಿನಾಲ್ಕು ವರ್ಷ. ಆ ಹದಿನಾಲ್ಕು ವರ್ಷಗಳಲ್ಲಿ ನನ್ನಮ್ಮನ ನೆನಪುಗಳನ್ನ ಮರೆಯಲಾಗದು. ಆ ನೆನಪಿನ ಬುತ್ತಿಯೊಂದಿಗೆ ನನ್ನ ಬದುಕಿನ ಪ್ರಯಾಣ ಈಗಲೂ ಮುಂದುವರೆಯುತ್ತಿದೆ ! ನಾನು ಹುಟ್ಟುವಾಗ ಗಂಡಾಗಿ ಹುಟ್ಟಿದೆ. ಬೆಳೆಯುತ್ತಾ ಬಂದಂತೆ ನನ್ನ ದೇಹದ ಪ್ರಕೃತಿ ಹೆಣ್ಣಿನ […]

ವಿಷ ಬಿತ್ತುವವರ ಬಗ್ಗೆ ಎಚ್ಚರವಿರಲಿ

ವಿಷ ಬಿತ್ತುವವರ ಬಗ್ಗೆ ಎಚ್ಚರವಿರಲಿ

ನಾಯಕ/ವಾಲ್ಮೀಕಿ ಸಮುದಾಯದ ಬಂಧುಗಳಿಗೆ ಟಿಪ್ಪು ಸುಲ್ತಾನನ ಬಗ್ಗೆ ತಪ್ಪು ಸಂದೇಶಗಳು ರವಾನೆಯಾಗುತ್ತಿವೆ. ಹೀಗೆ ರವಾನೆ ಮಾಡುವವರನ್ನು ನಿಮ್ಮ ಮಾತಿಗೆ ದಾಖಲೆಗಳನ್ನು ತೋರಿಸಿ ಎಂದು ಕೇಳಿದರೆ ಅವರ ಬಣ್ಣ ಬಯಲಾಗುತ್ತದೆ. ಕಾರಣ ಟಿಪ್ಪು ಸುಲ್ತಾನನ ಬಗ್ಗೆ ಸುಳ್ಳು ಚರಿತ್ರೆಯನ್ನು ಧಾರ್ಮಿಕ ಮೂಲಭೂತವಾದಿಗಳು ಹಬ್ಬಿಸುತ್ತಿದ್ದಾರೆ. ಇದರ ಮೂಲ ಅಜೆಂಡಾವೆಂದರೆ ಈ ನಾಯಕ/ವಾಲ್ಮೀಕಿ ಸಮುದಾಯದವರು ಮುಸ್ಲೀಮರ ವಿರುದ್ಧ ಜಗಳ ತೆಗೆದು ಜೈಲು ಪಾಲಾಗಲಿ ಎನ್ನುವ ಹುನ್ನಾರವಿದೆ. ದೇಶದಲ್ಲಿ ಮುಸ್ಲೀಮರ ವಿರುದ್ಧ ನಡೆದ ಎಲ್ಲಾ ಕೋಮುಗಲಬೆಗಳಲ್ಲಿ ಸತ್ತವರು, ಜೈಲು ಪಾಲಾಗಿ ನಾಶವಾದವರು ಬೇಡರಂತಹ […]

ಅಮ್ಮನ ನೆನಪು-8 : ‘ಅವ್ವ’ ಅನ್ನೋ ರಾಕ್ಷಸಿ !

ಅಮ್ಮನ ನೆನಪು-8 : ‘ಅವ್ವ’ ಅನ್ನೋ ರಾಕ್ಷಸಿ !

ಒಂದಾನೊಂದು ಸಮಯದಲ್ಲಿ ದೇವದಾಸಿಯಾಗಿದ್ದ, ಈಗ ಪಾರಿಜಾತ ಕಲಾವಿದೆಯಾಗಿ ಬದುಕು ನಿರ್ವಹಿಸುತ್ತಿರುವ ವಿಲಾಸಬಾಯಿ ರಾಯಣ್ಣವರ ಅವರು ತೇರದಾಳ ಮತ ಕ್ಷೇತ್ರದವರು. ಅದೇನು ಮೂಢನಂಬಿಕೆಯೊ ಅಥವಾ ಆ ಸಂದರ್ಭದಲ್ಲಿ ಆಕೆಯ ಕುಟುಂಬಕ್ಕೆ ಬಂದೊದಗಿದ ಕಿತ್ತು ತಿನ್ನುವ ಬಡತನದ ಕಾರಣವೊ ಏನೋ ಎಂಬಂತೆ ವಿಲಾಸಬಾಯಿಯವರ ಇಚ್ಛೆಗೆ ವಿರುದ್ಧವಾಗಿ, ತಮ್ಮ ತಾಯಿಯ ಒತ್ತಾಸೆಯಿಂದಾಗಿ ಮುತ್ತು ಕಟ್ಟಿಸಿಕೊಂಡು ‘ದೇವದಾಸಿ ಪದ್ಧತಿ’ ಎಂಬ ಕೂಪದಲ್ಲಿ ಬಿದ್ದವರು. ಹೀಗೆ, ಆಕೆಯನ್ನು ಇಂಥ ಕರಾಳ ದಂಧೆಗೆ ತಳ್ಳಿ ಆ ದಂಧೆಯಿಂದ ಬರುತ್ತಿದ್ದ ಹಣದಲ್ಲಿ ಇಡೀ ಕುಟುಂಬವೇ ಹೊಟ್ಟೆ ಹೊರೆದುಕೊಂಡಿದ್ದೂ […]

ಅಮ್ಮನ ನೆನಪು-7 : ಅಮ್ಮನ ಮಾರ್ಗದಲ್ಲಿ ಅಚ್ಚುಮೆಚ್ಚಿನ ಸೊಸೆ

ಅಮ್ಮನ ನೆನಪು-7 : ಅಮ್ಮನ ಮಾರ್ಗದಲ್ಲಿ ಅಚ್ಚುಮೆಚ್ಚಿನ ಸೊಸೆ

ಹೆಸರಾಂತ ಕವಿ ತೀ.ನಂ.ಶ್ರೀ. ಅವರ ಅಣ್ಣ ತೀ.ನಂಜುಂಡಯ್ಯನವರ ಏಕೈಕ ಪುತ್ರಿ ತೀ.ನಂ.ನಂಜಮ್ಮ. ಇವರೇ ನನ್ನ ಮಾತೃಶ್ರೀ. ಒಂಬತ್ತು ಮಕ್ಕಳನ್ನು ಹಡೆದು ಸಾಕಿ ಸಲುಹಿದರು ನನ್ನ ಅಮ್ಮ. ನಾವು ಚಿಕ್ಕವರಿದ್ದಾಗ ನನ್ನ ತಂದೆಯವರು ಮಂಡ್ಯದಲ್ಲಿ ಹೈಸ್ಕೂಲ್ ಹೆಡ್‍ಮಾಸ್ಟರ್ ಆಗಿದ್ದರು. ನಾನು ಶಿಶುವಿಹಾರಕ್ಕೆ ಹೋಗಲು ಬಹಳ ಹಠ ಮಾಡುತ್ತಿದ್ದೆ. ಆಗ ಅಮ್ಮ ನನ್ನನ್ನು ಸಮಾಧಾನಿಸಿ, ಬಿಸ್ಕೆಟ್, ಚಾಕಲೇಟ್ ಕೊಟ್ಟು ಸ್ಕೂಲಿಗೆ ಹೋಗಲು ಹುರಿದುಂಬಿಸುತ್ತಿದ್ದರು. ನನಗೆ ಆ ವಯಸ್ಸಿನಲ್ಲಿ ಬಹಳ ಕೋಪ, ಹಠವಿತ್ತು. ಆದರೂ ಅಮ್ಮ ಅದನ್ನು ಸಹಿಸಿಕೊಂಡು, ಒಂದು ಏಟು ಕೊಡದೇ […]

ಹನುಮವ್ವನ ನೆನಪು

ಹನುಮವ್ವನ ನೆನಪು

ಮನುಷ್ಯ ಸಂಬಂಧಗಳು ತುಂಬಾ ಬೆಲೆಯುಳ್ಳದ್ದಾಗಿರುತ್ತದೆ (ಗುಣಾತ್ಮಕ ಸ್ವರೂಪ) ಮತ್ತು ಸಂಕೀರ್ಣವಾಗಿರುತ್ತದೆ. ನಮ್ಮ ನಿಲುವುಗಳು ಸಂಬಂಧಗಳ ಸ್ವರೂಪವನ್ನು ನಿರ್ಧರಿಸಲ್ಪಡುತ್ತದೆ. ಕಾರಣ ಸಂಬಂಧಗಳು ಬಹುತೇಕ ಭಾವನಾತ್ಮಕ ನೆಲೆಗೆ ಸಂಬಂಧಿಸಿರುತ್ತದೆ. ಶುಷ್ಕವಾದ ಸ್ವರೂಪವನ್ನು ಹೊಂದುವುದು ಬಹು ಅಪರೂಪವೆನ್ನಬಹುದು. ಸಂಬಂಧಗಳು ಮಾನವೀಯ ಸ್ವರೂಪವನ್ನು ಪಡೆದಷ್ಟೂ ಸಂಬಂಧಗಳು ಗಟ್ಟಿಯಾಗುತ್ತದೆ. ಸಂಬಧಗಳು ಗಟ್ಟಿಗೊಳ್ಳುವುದಕ್ಕೆ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಮುಖ್ಯವಾಗಿ ಇರಲೇಬೇಕು. ಇಲ್ಲವಾದರೆ ಅದು ಸಹನೀಯವಾಗಿರುವುದಿಲ್ಲ. ಭಾರತದಂತಹ ದೇಶದಲ್ಲಿ ಜಾತಿಮೂಲವಾದ (ಸ್ವಜಾತಿ) ಸಂಬಂಧಗಳು ಬೆಳೆಯುವ ಅವಕಾಶ ಹೆಚ್ಚಿಗೆ ಇರುತ್ತದೆ. ಅನ್ಯಜಾತಿ, ಧರ್ಮದ ವ್ಯಕ್ತಿಗಳ ನಡುವೆ ಇಂತಹ […]