ಆಹಾರ-ಆರೋಗ್ಯ

ಆಹಾರ-ಆರೋಗ್ಯ

ವೈದ್ಯಕುಲದ ಆತ್ಮಾವಲೋಕನ ಅಗತ್ಯ

ವೈದ್ಯಕುಲದ ಆತ್ಮಾವಲೋಕನ ಅಗತ್ಯ

ಖಾಸಗಿ ವೈದ್ಯಕೀಯ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ-2017’ ವಿಚಾರದಲ್ಲಿ ದೊಡ್ಡ ಗದ್ದಲ ಎದ್ದಿರುವುದು ನಿರೀಕ್ಷಿತ. ಇತಿಹಾಸದಲ್ಲಿ ಎಂದೂ ಯಾರೂ ನಿಯಂತ್ರಿಸಲಾಗದ ವೈದ್ಯಕುಲವನ್ನು ಒಂದು ಚೌಕಟ್ಟಿಗೆ ತರುವ ಪ್ರಯತ್ನವು ಸುಲಭಕ್ಕೆ ಯಶಸ್ವಿಯಾಗುವುದು ಅನುಮಾನ. ನಮ್ಮನ್ನು ನಿಯಂತ್ರಿಸಲು ನೀವ್ಯಾರು? ಎಂದು ವೈದ್ಯರಲ್ಲಿನ ಒಂದು ಗುಂಪು ಕೇಳುತ್ತಿದೆ. ವಾಸ್ತವದಲ್ಲಿ ವೈದ್ಯಲೋಕದ ಅಹಂನ ಮಟ್ಟ ಇನ್ನೂ ಹೆಚ್ಚೇ ಇದೆ. ವ್ಯಕ್ತಿಯೊಬ್ಬರ ದೇಹದ ಕುರಿತು, ಆ ವ್ಯಕ್ತಿಗಿಂತ ಇನ್ನೊಬ್ಬರಿಗೆ ಹೆಚ್ಚು ತಿಳಿದಿರುತ್ತದೆ ಎಂಬುದೇ ತಿಳಿದಿರುವ ವ್ಯಕ್ತಿಯನ್ನು ಸರ್ವಜ್ಞನನ್ನಾಗಿಸಿಬಿಡುತ್ತದೆ. ಅದು ವೈದ್ಯರುಗಳಿಗೆ ತಂದುಕೊಟ್ಟಿರುವ ಸೊಕ್ಕು […]

ಜೆನರಿಕ್ ಔಷಧಿಗಳ ಪ್ರಶ್ನೆ

ಜೆನರಿಕ್ ಔಷಧಿಗಳ ಪ್ರಶ್ನೆ

ವೈದ್ಯರು ಔಷಧಿಗಳನ್ನು ಸೂಚಿಸುವಾಗ ಅದರ ಜೆನರಿಕ್ (ಮೂಲ ವರ್ಗೀಕರಣದ) ಹೆಸರುಗಳನ್ನೇ ಬಳಸಬೇಕೆಂಬ ಕ್ರಮ ಅಷ್ಟೊಂದು ವಿವೇಚನೆಯಿಂದ ಕೂಡಿದ ತೀರ್ಮಾನವಲ್ಲ. ಎಸ್. ಶ್ರೀನಿವಾಸನ್ ಬರೆಯುತ್ತಾರೆ: ಇನ್ನು ಮುಂದೆ ವೈದ್ಯರು ಔಷಧಿಗಳನ್ನು ಸೂಚಿಸುವಾಗ ಅದರ ಜೆನರಿಕ್ ಹೆಸರನ್ನು ಸೂಚಿಸುವುದು ಕಡ್ಡಾಯವೆಂಬ ಪ್ರಧಾನಮಂತ್ರಿಯವರ ಹೇಳಿಕೆಯು ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ. ಅದು ಅಷ್ಟೊಂದು ವಿವೇಚನಾಯುಕ್ತ ಕ್ರಮವೂ ಅಲ್ಲ. ಮತ್ತು ಅದು ಸಾರ್ವಕನಿಕ ಆರೋಗ್ಯವು ಎದುರಿಸುತ್ತಿರುವ ನಿಜವಾದ ಬಿಕ್ಕಟ್ಟಿನಿಂದ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗದ ಮತ್ತು ಕೈಗೆಟಕುವ ಬೆಲೆಯಲ್ಲಿ ಔಷಧಗಳು ದೊರಕದಂಥ ನಿಜವಾದ […]

ಭಾರತ ಅತಿತೂಕ – ಬೊಜ್ಜುಗಳ ಸಮಸ್ಯೆ ಎದುರಿಸುತ್ತಿದೆ

ಭಾರತ ಅತಿತೂಕ – ಬೊಜ್ಜುಗಳ ಸಮಸ್ಯೆ ಎದುರಿಸುತ್ತಿದೆ

ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ–೪ (ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ– ಎನ್.ಎಫ್.ಎಚ್.ಎಸ್.-೪ )ರ ಅಂಕಿಅಂಶಗಳು ಆರೋಗ್ಯದ ಸ್ಥಿತಿಗತಿಗಳಲ್ಲಿ ಸುಧಾರಣೆಯನ್ನು ತೋರಿಸುತ್ತಿದ್ದರೂ ಒಟ್ಟಾರೆ ಪರಿಸ್ಥಿತಿ ಕಳವಳಕಾರಿಯೇ ಆಗಿದೆ. ದೇಶದ ಆರೋಗ್ಯ ನೀತಿಯು ಭಾರತದ ಆರೋಗ್ಯದ ಸ್ಥಿತಿಗತಿಗಳ ಬಗೆಗಿನ ಅಂಕಿಅಂಶಗಳನ್ನೇ ಆಧರಿಸಿರಬೇಕು. ದುರದೃಷ್ಟವಶಾತ್ ಬಹಳಷ್ಟು ಸಾರಿ ಹೀಗೆ ಆಗುವುದಿಲ್ಲ. ಭರ್ತಿ ಹತ್ತು ವರ್ಷಗಳ ನಂತರ ನಡೆಸಿದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-೪ ರ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ. ಈ ಹಿಂದೆ, ೨೦೦೫-೦೬, ೧೯೯೮-೯೯ […]

ರಕ್ತಸಿಕ್ತವಾಗುತ್ತಿರುವ ವೈದ್ಯ ಮತ್ತು ರೋಗಿಗಳ ಸಂಬಂಧ

ರಕ್ತಸಿಕ್ತವಾಗುತ್ತಿರುವ ವೈದ್ಯ ಮತ್ತು ರೋಗಿಗಳ ಸಂಬಂಧ

ಕಳಪೆಯಾದ ಸಾರ್ವಜನಿಕ ಆರೋಗ್ಯ ಸೇವಾ ಸೌಲಭ್ಯಗಳು ವೈದ್ಯರು ಮತ್ತು ರೋಗಿಗಳನ್ನು ಪರಸ್ಪರ ಹೊಡೆದಾಟಕ್ಕೆ ಹಚ್ಚುತ್ತಿದೆ. ವೈದ್ಯರು ಆತಂಕದಲ್ಲಿದ್ದಾರೆ; ರೋಗಿಗಳು ದುಃಖದಲ್ಲಿದ್ದಾರೆ. ಇದೀಗ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚೂಕಡಿಮೆ ಇದೇ ವಾತಾವರಣವೇ ಕಾಣಬರುತ್ತಿದೆ. ಮಹಾರಾಷ್ಟ್ರದಲ್ಲಂತೂ ಇತ್ತಿಚೆಗೆ ಐದು ವಿವಿಧ ಪ್ರಕರಣಗಳಲ್ಲಿ ರೋಗಿಯ  ಬಗ್ಗೆ ನಿರ್ಲಕ್ಶ್ಯ ತೋರಿದರೆಂದು ಆರೋಪಿಸಿ ಅವರ ಸಂಬಂಧಿಕರು ಸಾರ್ವಜನಿಕ ಆಸ್ಪತ್ರೆಗಳ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇರೀತಿಯ ಪ್ರಕರಣಗಳು ದೆಹಲಿ, ಸೂರತ್, ಅಹಮದಾಬಾದ್, ಬುಲಂದ್‌ಶಹರ್ ಮತ್ತು ಚೆನ್ನೈಗಳಿಂದಲೂ ವರದಿಯಾಗಿದೆ. ಹಾಗೆ ನೋಡಿದರೆ, […]

ಹೊಟ್ಟೆಬಾಕತನ

ಹೊಟ್ಟೆಬಾಕತನ

ನನಗೂ ಉಪವಾಸಕ್ಕೂ ಬಲುದೂರ. ಕರುಳುಗಳು ತಲೆ ಎತ್ತಿ ಕಾಲಕಾಲಕ್ಕೆ ಏನು ಬೀಳುತ್ತೋ ಎಂದು ಕಾಯುತ್ತಾ ಇರುತ್ತವೆ. ಅಂತವಕ್ಕೆ ಮೆದುಳು ಏನಾದರೂ ‘ಇವತ್ತು ಉಪವಾಸ ನಿಮಗೆ’ ಎಂದು ಸಂಕೇತ ನೀಡಿದರೆ ಸಾಕು . . . ಹೊಟ್ಟೆಗೆ ಏನೂ ಬೀಳುವುದಿಲ್ಲವೆಂಬ ಬೀಕರ ಕಲ್ಪನೆ ಮಾತ್ರಕ್ಕೆ ಅವು ತತ್ತರಿಸಿ, ಒಣಗಿ, ಮುರುಟಿ ಹೋದಾವು. ಇಂತಾ ನನಗೆ ಈ ವರ್ಷದ ಶಿವರಾತ್ರಿಯಂದು ನನ್ನ ಹೆಂಡಂತೆ‘ಉಪವಾಸ ಮಾಡುವಂತೆ’ ತಾಕೀತು ಮಾಡಿದಳು. ನಾನೂ ಸಹ ಮಾಡಿದರಾಯಿತು ಎನ್ನುವ ಉಪೇಕ್ಷೆಯಿಂದ ‘ಆಯಿತು’ ಎಂದು ಹೇಳಿಬಿಟ್ಟೆ. ಬೆಳಿಗ್ಗೆ […]

ಸುರಕ್ಷಿತ ಗರ್ಭಪಾತ ಆರೈಕೆಯ ಹಕ್ಕು

ಸುರಕ್ಷಿತ ಗರ್ಭಪಾತ ಆರೈಕೆಯ ಹಕ್ಕು

ವೈದ್ಯಕೀಯವಾಗಿ ಗರ್ಭವನ್ನು ಅಂತ್ಯಗೊಳಿಸಿಕೊಳ್ಳುವ ಕಾಯಿದೆಗೆ ಬಹುಕಾಲದಿಂದ ಸೂಚಿಸುತ್ತಿರುವ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ, ಸುಪ್ರೀಂ ಕೋರ್ಟಿನಲ್ಲಿ, ಗರ್ಭಧಾರಣೆಯಾದ ಇಪ್ಪತ್ತು ವಾರಗಳ ನಂತರದಲ್ಲೂ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಕೋರುತ್ತಾ ಸಾಲುಸಾಲು ಅಹವಾಲುಗಳು ದಾಖಲಾಗುತ್ತಿವೆ. ಇದು ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್-1971 (ವೈದ್ಯಕೀಯವಾಗಿ ಬಸಿರನ್ನು ಕೊನೆಗೊಳಿಸಿಕೊಳ್ಳುವ ಕಾಯಿದೆ-1971)ಗೆ ತುರ್ತಾಗಿ ತಿದ್ದುಪಡಿಗಳು ಆಗಲೇಬೇಕಿರುವುದನ್ನು ಸೂಚಿಸುತ್ತದೆ. ಈಗಿರುವ ಕಾನೂನು ಗರ್ಭವತಿ ಮಹಿಳೆಯ ಜೀವಕ್ಕೆ ಅಪಾಯವಾಗುವಂತಿದ್ದರೆ ಮಾತ್ರ ಇಪ್ಪತ್ತು ವಾರಗಳ ನಂತರವೂ ಗರ್ಭಪಾತಕ್ಕೆ ಅನುಮತಿ ನೀಡುತ್ತದೆ. ಆದ್ದರಿಂದಲೇ ಇಂಥಾ ಅಹವಾಲುಗಳು ಹೆಚ್ಚಿನ ಸಂಖ್ಯೆಯಲ್ಲಿ […]

ಕೊಟ್ಟೂರಿನ ಮಂಡಕ್ಕಿ ಮಿರ್ಚಿಯ ಗಮ್ಮತ್ತು

ಕೊಟ್ಟೂರಿನ ಮಂಡಕ್ಕಿ ಮಿರ್ಚಿಯ ಗಮ್ಮತ್ತು

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಇತಿಹಾಸ, ಸಾಹಿತ್ಯ, ಸಂಸ್ಕೃತಿಗಳಿಗೆ ಹೇಗೆ ಆಗರವಾಗಿದೆಯೋ ಅಂತೆಯೇ ಇಲ್ಲಿನ ವಿಶಿಷ್ಟ ತಿನಿಸು ಪ್ರಸಿದ್ಧಿಯನ್ನು ಹೊಂದಿದೆ. ಈಗಾಗಲೇ ನೀವು ಅಂದುಕೊಂಡಂತೆಯೇ ಅದು ಇಲ್ಲಿನ ಮಂಡಕ್ಕಿ ಮೆಣಸಿನಕಾಯಿ. ನಿನ್ನೆ ನಾನು ನನ್ನ ಪತ್ನಿ ಹಾಗೂ ನನ್ನ ಎರಡನೇ ಪತ್ನಿ(ಕೆಮರಾ) ಜೊತೆ ಕೊಟ್ಟೂರಿಗೆ ಹೋಗಿದ್ದೆ. ಮಾರ್ಗದಲ್ಲಿ ಅಡವಿಯಲ್ಲಿ ಸುತ್ತಾಡಿ, ಹೊರಪ್ರಪಂಚದ ಜಂಜಾಟವ ಮರೆತು ಪುಟ್ಟ ಗಿಡಮರಗಳ ಮಧ್ಯೆ ಸುತ್ತಾಡಿದೆವು. ಅಲ್ಲಿನ ಪ್ರಪಂಚವೇ ಬೇರೆ ಬಿಡಿ. ಮುಂದೆ ಕೊಟ್ಟೂರಿಗೆ ಹೋದ ಮೇಲೆ ಅಲ್ಲಿನ ತಿನಿಸನ್ನು ತಿನ್ನದೇ ಇರಲು […]

ದಲಿತ ಪದಕಥನ -೧ : ‘ಬಾಡಿದ್ರೆ ಬಳಗ’

ದಲಿತ ಪದಕಥನ -೧ : ‘ಬಾಡಿದ್ರೆ ಬಳಗ’

ಪ್ರೊ.ಮೊಗಳ್ಳಿ ಗಣೇಶ್ ಅವರು ಸದ್ಯಕ್ಕೆ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೊಗಳ್ಳಿ ಅವರು `ಬುಗುರಿ’ ಕಥೆಯ ಮೂಲಕ ಕನ್ನಡ ಕಥನ ಲೋಕದಲ್ಲಿ ಬೆರಗನ್ನು ಮೂಡಿಸಿ, ಕನ್ನಡ ನಿರೂಪಣೆಗೆ ಅವರದ್ದೇ ಆದ ನುಡಿಗಟ್ಟನ್ನು ಕೊಟ್ಟವರು. ಕನ್ನಡ ಕಥನ ಪರಂಪರೆಯಲ್ಲಿ ದಲಿತಲೋಕದ ನೋವಿನ ಎಳೆಗಳನ್ನು ನುಡಿಸಿ ಆಳವಾಗಿ ಕಾಡುವ ಕಥನ ಮಾದರಿಯನ್ನು ರೂಪಿಸಿದವರು. ಮ್ಯಾಜಿಕ್ ರಿಯಲಿಜಮ್‍ನ ಮಾರ್‍ಕ್ವೇಜ್ ಮಾದರಿಯ ಕಥನವನ್ನು ಕನ್ನಡದಲ್ಲಿ ಅರ್ಥಪೂರ್ಣವಾಗಿ ಬೆಸೆದವರು. `ದಲಿತರು ಮತ್ತು ಜಾಗತೀಕರಣ’ ಕೃತಿಯ ಮೂಲಕ […]

ಗೋಮಾಂಸ : ಅಧಿಕಾರ ರಾಜಕಾರಣದ ಅಸ್ತ್ರ

ಗೋಮಾಂಸ : ಅಧಿಕಾರ ರಾಜಕಾರಣದ ಅಸ್ತ್ರ

ಈಗ ನಮಗೆ ಅಭಿವ್ಯಕ್ತಿಗೆ ಹಲವು ತಾಣಗಳು ಕೈಯಳತೆಯಲ್ಲಿವೆ. ಈ ಮೂಲಕ ಕೆಲವರು ರಾತ್ರಿ ಬೆಳಗಾಗುವುದರೊಳಗೆ ಪರಿಚಿತರಾಗಿ ಬಿಡುತ್ತಾರೆ. ದಶಕಗಳ ಕಾಲ ಸಾಧನೆ ಮಾಡಿದ ಇನ್ನು ಕೆಲವರು ಏನೂ ಮಾಡದವರಿಂದ ಏನೇನೋ ಅನ್ನಿಸಿಕೊಳ್ಳಬೇಕಾಗುತ್ತದೆ. ಸಾಧಕರನ್ನು ಕೀಳುಗೈಯುವುದರ ಮೂಲಕ ಸೆಲೆಬ್ರೆಟಿಗಳಾಗುವ ಹಂಬಲ ಹಲವರದು. ಹೀಗೆ ಪ್ರತಿಕ್ರಿಯೆಗೆ ಪ್ರತಿಕ್ರಿಯೆ ಎಂಬ ಕಾಲದಲ್ಲಿ ಹೀಗೆ ಬರುವ ಪ್ರತಿಕ್ರಿಯೆಗಳಿಗೆ ನಿಲುವುಗಳೇನಾದರೂ ಇದೆಯೇ ಎಂದು ನೋಡ ಹೋದರೆ ನಿರಾಶೆಯೇ ನಿಶ್ಚಿತ. ಏಕೆಂದರೆ ಒಂಥರಾ ಹುಸಿ ಭಾವುಕತೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸುವ ಇವರು ತಮ್ಮ ಮೂಗಿನ ನೇರಕ್ಕೆ ಕೆಲವು […]

ಬಡವರ ಬಾಪು ಮಹಮ್ಮದ್ ಯೂನಸ್-1: ಹಸಿವು ಮತ್ತು ಸಾವಿನ ನಡುವೆ

ಬಡವರ ಬಾಪು ಮಹಮ್ಮದ್ ಯೂನಸ್-1: ಹಸಿವು ಮತ್ತು ಸಾವಿನ ನಡುವೆ

ಬಾಂಗ್ಲಾ ದೇಶದ ಪ್ರಸಿದ್ದ ಚಿಂತಕ, ಬಡವರ ಬಂಧು ಮಹಮದ್ ಯೂನಿಸ್ ಅವರ ಆತ್ಮಕತೆಯನ್ನು ಕನ್ನಡಕ್ಕೆ ಡಾ.  ಜಗದೀಶ್ ಕೊಪ್ಪ ತಂದಿದ್ದಾರೆ. ಅದು ಪ್ರತಿ ೧೫ ದಿನಗಳಿಗೆ ಒಮ್ಮೆ ಇಲ್ಲಿ ಪ್ರಕಟವಾಗಲಿದೆ.  ಮೊದಲಿಗೆ. ಬಡತನ ಶಾಪವಲ್ಲ, ಅದು ಒಂದು ವ್ಯವಸ್ಥೆ. ಆಳುವ ಸರ್ಕಾರಗಳು ಮತ್ತು ಸಮಾಜದ ಕುರುಡುತನದಿಂದಾಗಿ ಸೃಷ್ಟಿಯಾದ ವ್ಯವಸ್ಥೆ ಎಂದು ಬಡತನಕ್ಕೆ ಹೊಸ ಭಾಷ್ಯ ಬರೆದ ಬಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮಹಮದ್ ಯೂನಸ್ ಈ ಜಗತ್ತು ಕಂಡ ಅಪರೂಪದ ಮಾತೃ ಹೃದಯದ ವ್ಯಕ್ತಿ. ಮರದ ಕೆಳೆಗೆ ಕುಳಿತು […]