ವಿಜ್ಞಾನ-ತಂತ್ರಜ್ಞಾನ

ವಿಜ್ಞಾನ-ತಂತ್ರಜ್ಞಾನ

ಜನಪರ ವಿಜ್ಞಾನಿ ರಾಗಿ ಲಕ್ಷ್ಮಣಯ್ಯ

ಜನಪರ ವಿಜ್ಞಾನಿ ರಾಗಿ ಲಕ್ಷ್ಮಣಯ್ಯ

ಡಾ. ಸಿ. ಎಚ್. ಲಕ್ಷ್ಮಣಯ್ಯನೆಂಬ ರಾಗಿ ವಿಜ್ಞಾನಿ ಇಂಡಾಫ್ ರಾಗಿ ಸೇರಿದಂತೆ ಸುಮಾರು 23 ಅಧಿಕ ಇಳುವರಿಯ ರಾಗಿ ತಳಿಗಳನ್ನು ಕಂಡುಹಿಡಿದ ಜನಪರ ವಿಜ್ಞಾನಿ. ಅವರು ದಲಿತ ಜನಾಂಗಕ್ಕೆ ಸೇರಿದವರು. ರಾಗಿ ವಿಜ್ಞಾನಿ ಲಕ್ಷ್ಮಣಯ್ಯನವರ ಅಮೂಲ್ಯ ಕೊಡುಗೆಗಳನ್ನು ಪ್ರೀತ್ಯಾದರಗಳಿಂದ ನೋಡಬೇಕಿದೆ. ಮೈಸೂರು ತಾಲ್ಲೂಕಿನ ಹಾರೋಹಳ್ಳಿಯಲ್ಲಿ 1921ರಲ್ಲಿ ಜನಿಸಿದ ಲಕ್ಷ್ಮಣಯ್ಯನವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ 1941ರಲ್ಲಿ ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳೊಂದಿಗೆ ಬಿಎಸ್‍ಸಿ ಪದವಿಯನ್ನು ಪಡೆದರು. ರೈಲ್ವೆಯಲ್ಲಿ ಗುಮಾಸ್ತರಾಗಿ ಕೆಲಕಾಲ ಸೇವೆ, ಅಲ್ಲಿಯ ನೌಕರರ ಕಳ್ಳತನ, ಭ್ರಷ್ಟಾಚಾರ […]

ಅಲೆಯ ಲೀಲೆ ತೋರಿದವರು…

ಅಲೆಯ ಲೀಲೆ ತೋರಿದವರು…

ವಿಶ್ವದ ರಹಸ್ಯವನ್ನು ಭೇದಿಸಲು ಹೊರಟ ವಿಜ್ಞಾನಿಗಳಿಗೆ ದೊಡ್ಡದೊಂದು ಬ್ರೇಕ್ ಸಿಕ್ಕಿದೆ. ವಿಶ್ವ ರಚನೆಗೆ ಸಂಬಂಧಿಸಿದಂತೆ ‘ಮಿಸ್ಸಿಂಗ್ ಲಿಂಕ್’ಗಳನ್ನು ಜೋಡಿಸುವಲ್ಲಿ ಒಂದು ಪ್ರಮುಖ ಕೊಂಡಿ. ಅದುವೇ ಗುರುತ್ವದ ಅಲೆಗಳ ಅಸ್ತಿತ್ವವನ್ನು ವಿಜ್ಞಾನಿಗಳು ಸಾಕ್ಷ್ಯ ಸಮೇತ ಖಚಿತಪಡಿಸಿರುವುದು. ಭೂಮಿಯಲ್ಲಿ ಜೀವಿಗಳ ಉಗಮಕ್ಕೆ ಮುನ್ನ ಹೊರಟ ಗುರುತ್ವ ಅಲೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದೇಶ-ಕಾಲದ ಹರವಿನಲ್ಲಿ (Space-Time),  ಗುರುತ್ವದ ಅಲೆಗಳ (Gravitational Waves) ಇರುವಿಕೆಯನ್ನು ಪತ್ತೆ ಮಾಡಿದ ಕೀರ್ತಿ ಅಮೆರಿಕ, ಭಾರತದ ವಿಜ್ಞಾನಿಗಳೂ ಸೇರಿದಂತೆ ಇಡೀ ವಿಶ್ವದ ವಿಜ್ಞಾನಿಗಳಿಗೆ ಸಲ್ಲುತ್ತದೆ. ಈ ಮೂಲಕ ವಿಶ್ವ […]

ಮೈಸೂರು ವಿಜ್ಞಾನ ಸಮ್ಮೇಳನದಲ್ಲಿ ಶಂಖನಾದ

ಮೈಸೂರು ವಿಜ್ಞಾನ ಸಮ್ಮೇಳನದಲ್ಲಿ ಶಂಖನಾದ

ಮೈಸೂರು ವಿಶ್ವ ವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದರೆ ಅದಕ್ಕೆ ಕಾರಣ ಈ ಗಂಗೋತ್ರಿಯಲ್ಲಿ ಒಂದು ಶತಮಾನದ ಕಾಲಾವಧಿಯಲ್ಲಿ ಹರಿದುಹೋಗಿರುವ ವೈಚಾರಿಕ ಪರಂಪರೆ ವiತ್ತು ವಿದ್ವತ್ತಿನ ಭಂಡಾರ. ಮಾನಸ ಗಂಗೋತ್ರಿ ಎಂದು ಕರೆಯಲ್ಪಡುವ ಈ ವಿಶ್ವವಿದ್ಯಾಲಯದಲ್ಲಿ ವೈಚಾರಿಕ ಮನಸ್ಥಿತಿಯ ಗಂಗೆ ಹರಿದಿರುವಷ್ಟೇ ಅವೈಚಾರಿಕ-ಅವೈಜ್ಞಾನಿಕ ಮನಸ್ಥಿತಿಗಳ ಮಲಿನವೂ ಹರಿದುಹೋಗಿದೆ. ಇದು ಸ್ವಾಭಾವಿಕ. ಆದಾಗ್ಯೂ ಶತಮಾನ ಪೂರೈಸುತ್ತಿರುವ ಮೈಸೂರು ವಿಶ್ವವಿದ್ಯಾಲಯ 103ನೆಯ ರಾಷ್ಟ್ರೀಯ ವಿಜ್ಞಾನ ಸಮ್ಮೇಳನವನ್ನು ಆಯೋಜಿಸಿ ಯಶಸ್ವಿಯಾಗಿ ಪೂರೈಸಿರುವುದು ಹೆಮ್ಮೆಯ ವಿಚಾರ. ಈ ಸಮ್ಮೇಳನದ ವಿಶಿಷ್ಟವೇನೆಂದರೆ ಗಣೇಶ ಮತ್ತು […]

ಪ್ರಾಚೀನ ಭಾರತೀಯ ರಸಾಯನ ವಿಜ್ಞಾನ

ಪ್ರಾಚೀನ ಭಾರತೀಯ ರಸಾಯನ ವಿಜ್ಞಾನ

ನಾವು ಇಂದು ತಿಳಿದಿರುವ ಆಧುನಿಕ ರಸಾಯನ ವಿಜ್ಞಾನ ಜನ್ಮತಾಳಿ ಅಂದಾಜು 300 ವರ್ಷ ಸಂದಿವೆ. ರಸಾಯನ ವಿಜ್ಞಾನದ ಮೂಲ ನಿಸ್ಸಂದೇಹವಾಗಿ ಯುರೋಪ್ ಖಂಡ. ಹೀಗಾಗಿ ಆ ಕಲೆಯ ಉಗಮವೂ ಸಹಿತ ಯುರೋಪ ಖಂಡದಲ್ಲಿಯೇ ಆಗಿದ್ದಿರಬಹುದು ಎಂದು ಅನ್ನಿಸಬಹುದು. ಆದರೆ ವಸ್ತುಸ್ಥಿತಿ ಹಾಗಿಲ್ಲ. ಯುರೋಪದಲ್ಲಿಯಕ್ಕಿಂತ ಎಷ್ಟೋ ವರ್ಷಗಳ ಮೊದಲೇ ಪೌರಾತ್ಯ ದೇಶಗಳಲ್ಲಿ ಅದರಲ್ಲೂ ಭಾರತ ದೇಶದಲ್ಲಿ ರಸಾಯನ ವಿಜ್ಞಾನ ಒಂದು ಪ್ರಾಯೋಗಿಕ ಕಲೆಯಾಗಿ ಮತ್ತು ಒಂದು ಊಹಾತ್ಮಕ ತತ್ವಜ್ಞಾನವಾಗಿ ಬೆಳೆದಿತ್ತು. ಯಾವುದೇ ಒಂದು ಕಲೆಯ ಹುಟ್ಟು ಮತ್ತು ಪ್ರಾರಂಬಿsಕ ಬೆಳವಣಿಗೆಯ ಬಗೆಗಿನ […]

ವಿಜ್ಞಾನದ ಮೇಲೆ ಧರ್ಮಶಾಸ್ತ್ರಕಾರರ ಹಲ್ಲೆ

ವಿಜ್ಞಾನದ ಮೇಲೆ ಧರ್ಮಶಾಸ್ತ್ರಕಾರರ ಹಲ್ಲೆ

ಉದ್ದಾಲಕನ ವೈಜ್ಞಾನಿಕ ನಿಗಮವು ಅವನ ನಂತರವೂ ಬೇರೆಬೇರೆ ಪ್ರಕಾರಗಳಲ್ಲಿ ಮುಂದುವರಿದು ಪ್ರಾಚೀನ ಭಾರತದಲ್ಲಿ ವಿಜ್ಞಾನವು ಸಾಕಷ್ಟು ಪ್ರಖರವಾಗಿ ಬೆಳೆದುಬಂತು. ಹರಪ್ಪ ಮೊಹೆಂಜೊದಾರೊ ನಾಗರಿಕತೆಯ ಕಾಲದಷ್ಟು ಹಿಂದೆಯೇ ಖಗೋಳಶಾಸ್ತ್ರ ಮತ್ತು ರೇಖಾಗಣಿತಗಳು ಗಮನಾರ್ಹ ರೀತಿಯಲ್ಲಿ ಬೆಳೆದಿದ್ದುವೆಂಬುದಕ್ಕೆ ಆಧಾರಗಳಿವೆ. ಎರಡೂ ಮೂಲತ: ಕೃಷಿಯ ಕೆಲಸಗಳಿಗೆ ಅನುವಾಗುವಂತಿದ್ದುವು. ನಂತರದ ಕಾಲದಲ್ಲಿ ಯಜ್ಞವಿಧಿಗಳಿಗೆ ಸಂಬಂಧಿಸಿದಂತೆ ಇವರೆಡೂ ಪ್ರಮುಖ ಪಾತ್ರವನ್ನು ನಿರ್ವಹಿಸಿದುವು. ವಿವಿಧ ರೀತಿಯ ಚಿತಿಗಳನ್ನು ನಿರ್ಮಿಸಲು ರೇಖಾಗಣಿತದ ವಿಪುಲ ಬಳಕೆಯಿಂದಾಗಿ ಅದು ಹೆಚ್ಚಿನ ಸೂಕ್ಷ್ಮತೆಯನ್ನು  ಪಡೆಯಿತು. ಶುಲ್ಬಸೂತ್ರಗಳೆಂದು ಪ್ರಸಿದ್ದವಾಗಿರುವ ಗ್ರಂಥಗಳಲ್ಲಿ ಇದರ ಬಗೆಗಿನ […]

ವಿಜ್ಞಾನ ಮತ್ತು ಸಮಾಜ

   ವಿಜ್ಞಾನದ ಯಾವುದೇ ವಿಭಾಗವೂ ಸಮಾಜದ ಒಳಿತಿಗಾಗಿ ಉಪಯೋಗಕ್ಕೆ ಬರಬಲ್ಲದು. ಅನೇಕ ಕ್ಷೇತ್ರಗಳಲ್ಲಿ ರಸಾಯನ ಶಾಸ್ತ್ರದ ಬಳಕೆ ಕಂಡು ಬರುತ್ತದೆ. ರಾಸಾಯನಿಕ ಕ್ರಿಯೆ ಇಲ್ಲದ ಕಾರ್ಯಗಳು ಅಪರೂಪ. ಜೀವನವೇ ಬಹುಪಾಲು ರಸಾಯನಶಾಸ್ತ್ರವಾಗಿ ಕಂಡುಬರುತ್ತದೆ. ವಿಜ್ಞಾನದ ಈ ವಿಭಾಗದ ಪ್ರಾಧಾನ್ಯ ತುಂಬಾ ಹೆಚ್ಚಾಗಿದ್ದು, ಆಳವಾದ ಸಂಶೋಧನೆಯ ಮೂಲಕ ಮನುಷ್ಯಕುಲದ ಸಂತೋಷಕ್ಕಾಗಿ ಇದರ ಉಪಯೋಗವಾಗಬೇಕು. ಸಂಶೋಧನೆ ದಿನದಿನಕ್ಕೆ ಹೆಚ್ಚು ದುಬಾರಿಯಾಗುತ್ತಿದೆ. ಭಾರತದಂತಹ ಅಭಿವೃದ್ದಿಶೀಲ ದೇಶಗಳಿಗೆ ಇಷ್ಟೇ ಪ್ರಮುಖವಾದ ಅನೇಕ ಆವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಇರುತ್ತದೆ. ವಿಜ್ಞಾನದ ಸಂಶೋಧನೆಯಲ್ಲಿ, ಗುಣಮಟ್ಟದಿಂದಾಗಲೀ, ಸಾಮಥ್ರ್ಯದಿಂದಾಗಲೀ […]

ರಸವಿದ್ಯೆ –Alchemist

ರಸಾಯನ ಶಾಸ್ತ್ರದ ಇತಿಹಾಸದಲ್ಲಿ ಮೊದಲ ಘಟ್ಟ ರಸವಿದ್ಯೆ (Alchemist). ಇದು ಗ್ರೀಕ್ ತತ್ವಶಾಸ್ತ್ರದ ಪೌರ್ವಾತ್ಯ ಕರಕುಶಲತೆ ಮತ್ತು ಧಾರ್ಮಿಕ ಹಾಗೂ ಆಧ್ಯಾತ್ಮಿಕ ರಹಸ್ಯಗಳನ್ನೊಳಗೊಂಡ ವಿಷಯವಾಗಿದೆ. ರಸವಿದ್ಯೆಯ ಗುಣಲಕ್ಷಣಗಳನ್ನು ವರ್ಣಿಸಬಲ್ಲ ಸಾರಶಬ್ದ ಪರಿವರ್ತನೆ. ಕಬ್ಬಿಣವನ್ನು ಚನ್ನವಾಗಿ ಪರಿವರ್ತಿಸುವುದು ರಸವಿದ್ಯೆಯ ಎದ್ದುಕಾಣುವ ಪರಿವರ್ತನೆಯಾದರೂ, ಅನಾರೋಗ್ಯದಿಂದ ಆರೋಗ್ಯ, ಮುಪ್ಪಿನಿಂದ ಯೌವನ, ಮೃತ್ಯುವಿನಿಂದ ಅಮರತ್ವ ಗಳಿಸುವ ಆಕಾಂಕ್ಷೆಗಳಿಗೆ ಸಹ ಇದು ಅನ್ವಯಿಸುತ್ತದೆ. ರಸವಿದ್ಯೆಗಿಂತ ಮೊದಲೇ, ಧರ್ಮ, ವೈದ್ಯಕೀಯ ಮತ್ತು ಲೋಹಶಾಸ್ತ್ರ ಈ ಪರಿವರ್ತನೆಯನ್ನು ಗುರಿಯಾಗಿಟ್ಟುಕೊಂಡಿದ್ದವು. ಸಂದೇಹಾಸ್ಪದ ಒಂದೊ, ಎರಡೊ, ಮೂರೊ ಇತ್ಯಾದಿ ವಸ್ತುಗಳ […]