ರಾಜ್ಯ

ರಾಜ್ಯ

ಕಾವೇರಿ ಗಲಭೆಯ ಸುತ್ತಮುತ್ತ ಒಂದು ಪ್ರಶ್ನೋತ್ತರ

ಕಾವೇರಿ ಗಲಭೆಯ ಸುತ್ತಮುತ್ತ ಒಂದು ಪ್ರಶ್ನೋತ್ತರ

1. ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿಜವಾಗಿಯೂ ಅನ್ಯಾಯವಾಗಿದೆಯೆ? ಇಟ್ಟ ಬೇಡಿಕೆ ಅಥವಾ ಇದ್ದ ನಿರೀಕ್ಷೆಗಿಂತ ಕಡಿಮೆ ಪಡೆಯುವಂತಾದ ಪರಿಸ್ಥಿತಿಯಲ್ಲಿ ಯಾರಾದರೂ ಅನ್ಯಾಯವಾಗಿದೆ ಎಂದು ಹೇಳುವುದು ಸಹಜ. ಆ ಅರ್ಥದಲ್ಲಿ ಕರ್ನಾಟಕ್ಕೆ ಅನ್ಯಾಯವಾಗಿದೆ ಎಂಬ ಕೂಗನ್ನು ಗ್ರಹಿಸಬೇಕಿದೆ. ಏಕೆಂದರೆ ಈ ವಿವಾದದ ಇನ್ನೊಂದು ಪಕ್ಷವಾದ ತಮಿಳ್ನಾಡು ಕೂಡ ಹಾಗೇ ಹೇಳುತ್ತಿದೆ ಎಂಬುದನ್ನೂ ಗಮನಿಸಿದಾಗ ಈ ನ್ಯಾಯ-ಅನ್ಯಾಯಗಳ ಮಾತಿಗೆ ಒಂದು ಪರಿಪ್ರೇಕ್ಷ್ಯ ಒದಗುತ್ತದೆ. ನ್ಯಾಯಕ್ಕಾಗಿ ನಾವು ಹೋದ ವೇದಿಕೆ ಸರ್ವೋಚ್ಛ ನ್ಯಾಯಾಲಯವೆಂಬ ಒಂದು ಸಾಂವಿಧಾನಿಕ ಅಧಿಕಾರ ಮತ್ತು […]

ಕಾವೇರಿ ನೀರಿನ ಹಂಚಿಕೆ : ಹಿಂಸಾಚಾರದಿಂದಲ್ಲ; ಮಾತುಕತೆಯಿಂದ ಪರಿಹಾರ-ಸ್ವರಾಜ್‍ ಅಭಿಯಾನ

ಕಾವೇರಿ ನೀರಿನ ಹಂಚಿಕೆ : ಹಿಂಸಾಚಾರದಿಂದಲ್ಲ; ಮಾತುಕತೆಯಿಂದ ಪರಿಹಾರ-ಸ್ವರಾಜ್‍ ಅಭಿಯಾನ

ಸ್ವರಾಜ್‍ ಅಭಿಯಾನ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಸಮಿತಿಗಳ ಜಂಟಿ ಪತ್ರಿಕಾ ಹೇಳಿಕೆ —————————————————————————————— ಮಾನ್ಯರೆ, ಕರ್ನಾಟಕ ಮತ್ತು ತಮಿಳುನಾಡುಗಳ ನಡುವೆ ಕಾವೇರಿ ನೀರಿನ ಹಂಚಿಕೆ ವಿಷಯವನ್ನು ಸಮರ್ಪಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಎರಡೂ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಎರಡೂ ರಾಜ್ಯ ಸರ್ಕಾರಗಳ ಹಾಗೂ ಕೇಂದ್ರ ಸರ್ಕಾರದ ಈ ಹೊಣೆಗೇಡಿತನವನ್ನು ಸ್ವರಾಜ್ ಅಭಿಯಾನದ ಕರ್ನಾಟಕ ಮತ್ತು ತಮಿಳುನಾಡು ಘಟಕಗಳು ಒಕ್ಕೊರಲಿನಿಂದ ಖಂಡಿಸುತ್ತವೆ. ಈಗ ಭುಗಿಲೆದ್ದಿರುವ ಹಿಂಸಾಚಾರದಿಂದಾಗಿ ಲಕ್ಷಾಂತರ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಎರಡೂ ಸರ್ಕಾರಗಳು […]

ಗೂಟಗಳು ಕಾರಿನ ಮೇಲಿರಲಿ ಸಚಿವ ಸ್ಥಾನದಲ್ಲಿ ಬೇಕಿಲ್ಲ

ಗೂಟಗಳು ಕಾರಿನ ಮೇಲಿರಲಿ ಸಚಿವ ಸ್ಥಾನದಲ್ಲಿ ಬೇಕಿಲ್ಲ

ರಾಜಕಾರಣದ ಒಂದು ವೈಶಿಷ್ಟ್ಯ ಎಂದರೆ ಇಲ್ಲಿ ಮೇಲಕ್ಕೇರುವ ಹಪಾಹಪಿಗೆ ಅಂತ್ಯವೇ ಇರುವುದಿಲ್ಲ. ನಾ ಏರುವ ಮಟ್ಟಕ್ಕೆ ನೀ ಏರಬಲ್ಲೆಯಾ ಎಂಬ ಕವಿವಾಣಿಯಂತೆ ರಾಜಕೀಯ ಕ್ಷೇತ್ರದಲ್ಲಿ ಹಾರಾಡುವ ಹಕ್ಕಿಗಳು ಪರಸ್ಪರ ಪೈಪೋಟಿಗೆ ಬಿದ್ದು ಮೇಲೇರಲು ಯತ್ನಿಸುತ್ತಲೇ ಇರುತ್ತಾರೆ. ರಾಜಕೀಯ ಮುನ್ನಡೆಯ ಮಾರ್ಗದಲ್ಲಿ ರಾಜಕಾರಣಿಗಳು, ವಿಶೇಷವಾಗಿ ಭಾರತದ ರಾಜಕಾರಣಿಗಳು, ದಿಗಂತದಿಂದಾಚೆಗೆ ಜಿಗಿಯುವ ಅನಿಕೇತನರೂ ಆಗಿಬಿಡುತ್ತಾರೆ. ತತ್ವ, ಸಿದ್ಧಾಂತ, ಮೌಲ್ಯ ಮತ್ತು ಸಂವೇದನೆ ಎಂಬ ಪದಪುಂಜಗಳು ತಮ್ಮ ಅರ್ಥ ಕಳೆದುಕೊಳ್ಳುವುದರಲಿ, ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಅನಿಕೇತನರ ಸಂಖ್ಯೆ ಹೆಚ್ಚಾಗುವುದು […]

ಸರಕಾರ ಸಾಧನೆ ಮತ್ತು ಪ್ರಜಾತಂತ್ರ ವ್ಯವಸ್ಥೆ

ಸರಕಾರ ಸಾಧನೆ ಮತ್ತು ಪ್ರಜಾತಂತ್ರ ವ್ಯವಸ್ಥೆ

ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದು ವೈಶಿಷ್ಟ್ಯ ಇದೆ. ಈ ವೈಶಿಷ್ಟ್ಯ ದುರಂತವೂ ಹೌದು. ದೇಶದ 120 ಕೋಟಿ ಜನತೆಯ ಭವಿಷ್ಯವನ್ನು ನಿರ್ಧರಿಸುವ ಆಳುವ ವರ್ಗಗಳಿಗೆ ಆತ್ಮಾವಲೋಕನದ ಪರಿಜ್ಞಾನವೇ ಇಲ್ಲ. ಇಲ್ಲಿ ತಪ್ಪು ಒಪ್ಪುಗಳ ಪರಾಮರ್ಶೆಗಳು ಆತ್ಮರತಿಯ ಗುಂಗಿನಲ್ಲಿ ಎಲ್ಲೋ ಮರೆಯಾಗಿ ಹೋಗುತ್ತವೆ. ತನ್ನ ತಪ್ಪುಗಳನ್ನು ಪರಾಮರ್ಶಿಸದ ವ್ಯಕ್ತಿಯಾಗಲಿ, ಸಂಘಟನೆಯಾಗಲಿ ಆಡಳಿತ ವ್ಯವಸ್ಥೆಯಾಗಲಿ ಊರ್ಜಿತವಾಗುವುದು ಅಸಾಧ್ಯ. ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆರೂವರೆ ದಶಕದ ಸ್ವತಂತ್ರ ಆಳ್ವಿಕೆಯ ನಂತರ ನಾವು ಈ ದುರಂತವನ್ನು ಕಾಣುತ್ತಿದ್ದೇವೆ. ಸಾಧನೆಯ ಹಪಾಹಪಿ ಸಹಜ ಮಾನವ […]

ಅಧಿಕಾರದಲ್ಲಿ ಕೊಚ್ಚಿಹೋಗುವ ಸ`ಮಜಾ’ವಾದ

ಅಧಿಕಾರದಲ್ಲಿ ಕೊಚ್ಚಿಹೋಗುವ ಸ`ಮಜಾ’ವಾದ

ಎರಡು ದಶಕಗಳಿಗೂ ಹೆಚ್ಚುಕಾಲ ಪಶ್ಚಿಮ ಬಂಗಾಳವನ್ನು ಆಳಿದ ಜ್ಯೋತಿ ಬಸುರವರ ಉತ್ತರಾಧಿಕಾರಿಯಾದ ಬುದ್ಧದೇವ ಭಟ್ಟಾಚಾರ್ಯರವರನ್ನು ಉದಹರಿಸಲು ಕಮ್ಯುನಿಸ್ಟ್ ನಾಯಕರು ಹಿಂದೇಟು ಹಾಕುತ್ತಾರೆ. ಹಾಗೆ ನೋಡಿದರೆ, ಜ್ಯೋತಿ ಬಸುರವರ ಕೊನೆಯ ದಿನಗಳನ್ನು ಸಹ ನೆನೆಯೋದಿಲ್ಲ. ಕಾರಣವಿಷ್ಟೆ…. ಬದಲಾದ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ, ಇವರಿಬ್ಬರೂ ಫೈವ್ ಸ್ಟಾರ್ ಸಮಾಜವಾದಿಗಳಾಗಿ ಬದಲಾಗಿದ್ದು. ಹಾಗೆ ನೋಡಿದರೆ, ಬಹಳಷ್ಟು ಸಮಾಜವಾದಿಗಳು ಈ ಬದಲಾವಣೆಯನ್ನು ಅಳವಡಿಸಿಕೊಂಡಿದ್ದಾರೆ. ಆದರೆ, ಅದನ್ನು ಒಪ್ಪಿಕೊಳ್ಳೋ ಧೈರ್ಯ ಇದ್ದಿದ್ದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲ್ ಗೆ ಮಾತ್ರ. `ಎಲ್ಲಿದ್ದಾರೆ […]

ಬದಲಾಗುತ್ತಿರುವ ಕರ್ನಾಟಕ -3

ಬದಲಾಗುತ್ತಿರುವ ಕರ್ನಾಟಕ -3

ಇವಿಷ್ಟೇ ಶಿಕ್ಷಣದ ಸಮಸ್ಯೆಯಲ್ಲ. ಬಹುತ್ವವನ್ನು ಗೌರವಿಸುವ ಪಾಠವನ್ನು ಶಿಕ್ಷಣ ಮತ್ತು ಸಂಸ್ಕೃತಿ ಎರಡೂ ಕೊಡುತ್ತಿಲ್ಲ. ಮತ್ತೊಬ್ಬರನ್ನು ಗೌರವಿಸು ವುದೆಂದರೇನು? ಮತ್ತೊಬ್ಬರ ಭಾಷೆ, ಆಚಾರ ವಿಚಾರ, ಉಡುಗೆತೊಡುಗೆ ಇತ್ಯಾದಿಗಳನ್ನು ಗೌರವಿಸುವುದು. ನಮ್ಮಲ್ಲಿ ಧರ್ಮಗಳ ನಡುವಿನ ವಿವಿಧತೆಯನ್ನು ರಕ್ಷಿಸಲು ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗಿದೆ. ಆದರೆ ಒಂದೇ ಧರ್ಮದೊಳಗಿನ ವಿವಿಧತೆಗಳನ್ನು ರಕ್ಷಿಸುವ ಅವಕಾಶಗಳ ಮತ್ತು ಕಾರ್ಯಕ್ರಮಗಳ ಕೊರತೆ ಇದೆ. ಇದಕ್ಕಿಂತಲೂ ಮುಖ್ಯವಾಗಿ ಶಾಲೆ ನಮ್ಮೆಲ್ಲರ ಸಂಸ್ಕೃತಿಯ ಗುಣಲಕ್ಷಣಗಳೆಂದು ಮಕ್ಕಳ ಮನಸ್ಸಿಗೆ ತುಂಬುವ ಹಲವಾರು ವಿಚಾರಗಳು ಸಮಾಜದ ಬಹುದೊಡ್ಡ ಸಂಖ್ಯೆಯ ಮಂದಿಯಲ್ಲಿ ಕೀಳರಿಮೆಯನ್ನು […]

ಕುಮಾರಣ್ಣನ ಹಿಟ್ ವಿಕೆಟ್

ಕುಮಾರಣ್ಣನ ಹಿಟ್ ವಿಕೆಟ್

ನಾನು ಫೀನಿಕ್ಸ್ ನಂತೆ ಬೂದಿಯಿಂದ ಮತ್ತೆ ಎದ್ದು ಬರುತ್ತೇನೆ ಅಂತ ಗುಡುಗಿ, ಪ್ರಧಾನಮಂತ್ರಿ ಸ್ಥಾನದಿಂದ ದೇವೇಗೌಡರು ಕೆಳಗಿಳಿದು ಎರಡು ದಶಕಗಳಾಗುತ್ತಾ ಬಂತು. ಟ್ರಾಕ್ಟರ್ ಗುರುತಿನ ಪಕ್ಷ ಕಟ್ಟಿ, ಅಪ್ಪ ಮಕ್ಕಳೆಲ್ಲ ಸೋತು, ಪಕ್ಷ ಬೂದಿಯಾಗಿದ್ದು ಒಂದಾದರೆ, ಮುಂದಿನ ಚುನಾವಣೆಯಲ್ಲಿ 57 ಸ್ಥಾನ ಗೆದ್ದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದೊಂದು ಚರಿತ್ರೆ. ಆದರೆ, ಈಗ್ಯಾಕೋ ಕುಮಾರಸ್ವಾಮಿಯರು ಹಿಟ್ ವಿಕೆಟ್ ಮಾಡಿಕೊಂಡ ಹಾಗಿದೆ. ಕುಟುಂಬದಲ್ಲಂತೂ ದೇವೇಗೌಡರನ್ನ ಬಿಟ್ಟರೆ ಇನ್ನೆಲ್ಲರೂ ಮುಖ ತಿರುಗಿಸಿ ನಿಂತಿದ್ದರೆ, ಪಕ್ಷದಲ್ಲಿ ಸ್ನೇಹಿತರ್ಯಾರೂ ಉಳಿದಿಲ್ಲ ಅನ್ನೋದು ಸಾರ್ವತ್ರಿಕ ಸತ್ಯ. ಇದರ […]

ಮೋದಿ ಅಮಲಲ್ಲಿ ತೇಲುತ್ತಿದೆ ರಾಜ್ಯ ಬಿಜೆಪಿ

ಮೋದಿ ಅಮಲಲ್ಲಿ ತೇಲುತ್ತಿದೆ ರಾಜ್ಯ ಬಿಜೆಪಿ

ಪಕ್ಕದ ಮನೆಯಲ್ಲಿ ಮಗು ಹುಟ್ಟಿದರೆ ನಮ್ಮ ಮನೆಯಲ್ಲಿ ತೊಟ್ಟಿಲು ತೂಗಿದಂತಿದೆ, ನಮ್ಮ ರಾಜ್ಯದ ಬಿಜೆಪಿ ಎಂಬ ವಿರೋಧ ಪಕ್ಷದ ಸ್ಥಿತಿಗತಿಗಳು. ತನ್ನ ಕಮಲದ ಬಹುತೇಕ ದಳಗಳನ್ನು ಕಳೆದುಕೊಂಡರೂ, ಪಕ್ಷದ ನಾಯಕರು ಒಬ್ಬರ ಕಾಲನ್ನೊಬ್ಬರು ಎಳೆಯುತ್ತಾ, ತಾವೇ ಮುಂದಿನ ಮುಖ್ಯಮಂತ್ರಿ ಅನ್ನೋ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದಾರೆ. ವಾಸ್ತವತೆಯನ್ನು ಮರೆಮಾಚಲು ಮಾಧ್ಯಮದಲ್ಲಿ ಸದ್ದು ಮಾಡುತ್ತಾ ಓಡಾಡುವ ಬಿಜೆಪಿ ನಾಯಕರಿಗೆ ವಾಸ್ತವತೆಯ ಅರಿವು ಇಲ್ಲದಿಲ್ಲ. ಆದರೂ, ಮೋದಿ ಹವಾ ತಮ್ಮನ್ನು ದಡ ಮುಟ್ಟಿಸಬಹುದು ಅನ್ನೋ ಆಸೆ ಇಲ್ಲದಿಲ್ಲ. ಮುಂದಿನ ಚುನಾವಣೆಯಲ್ಲಿ ಮೋದಿ ಹವಾ […]

ಬದಲಾಗುತ್ತಿರುವ ಕರ್ನಾಟಕ

ಬದಲಾಗುತ್ತಿರುವ ಕರ್ನಾಟಕ

ಭಾಗ ೨ ಭೂಮಿ ಅಥವಾ ಸಂಪನ್ಮೂಲಗಳನ್ನು ಹಂಚಿ ಸಮಾನತೆ ತರುವುದು ಕಷ್ಟದ ಕೆಲಸ. ಆದರೆ ಸಮಾಜದ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಕೊಟ್ಟು ಮಾನಸಮ್ಮಾನದಿಂದ ಬದುಕಲು ಅವಕಾಶ ಮಾಡಿಕೊಡುವುದು ಸಂಪನ್ಮೂಲ ಗಳನ್ನು ಹಂಚುವಷ್ಟು ಕಷ್ಟದ ಕೆಲಸವಲ್ಲ. ಆದರೆ ಇಲ್ಲೂ ಕರ್ನಾಟಕ ತನ್ನ ವಿಫಲತೆ ಯನ್ನು ಮೆರೆದಿದೆ. ಇತ್ತೀಚಿನ ಕೆಲವು ಯೋಜನೆಗಳನ್ನು ಹೊರತುಪಡಿಸಿದರೆ ಹಿಂದಿನ ಬಹುತೇಕ ಯೋಜನೆಗಳಲ್ಲಿ ಸಾಮಾಜಿಕ ವಲಯದ(ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು ಇತ್ಯಾದಿಗಳ ಮೇಲೆ) ಮೇಲೆ ದೊಡ್ಡಮಟ್ಟದ ವಿನಿಯೋಜನೆ ನಡೆಸಲಿಲ್ಲ. ಸಾಮಾಜಿಕ ವಲಯವನ್ನು […]

ಕುಟುಂಬ ರಾಜಕಾರಣ: ಕುಮಾರ ಪರ್ವದ ಅಂತ್ಯೋದಯ?

ಕುಟುಂಬ ರಾಜಕಾರಣ: ಕುಮಾರ ಪರ್ವದ ಅಂತ್ಯೋದಯ?

ಕೆಲ ವರ್ಷಗಳ ಹಿಂದೆ ಹಿರಿಯ ಪೋಲಿಸ್ ಅಧಿಕಾರಿಯೊಬ್ಬರ ಜೊತೆ ಮಾತನಾಡುವಾಗ ಅವರು ಒಂದು ಮಾತು ಹೇಳಿದ್ದರು: `ನೋಡ್ರೀ, ದೇವೇಗೌಡರು ಜಾತಿವಾದಿ ಅಂತ ಯಾರು ಹೇಳಿದ್ರೂ ನಾನು ಒಪ್ಪೋದಿಲ್ಲ. ಅವರು ಕುಟುಂಬವಾದಿ, ಅಷ್ಟೆ,’ ಅಂತ. ನಾನು ನಕ್ಕು ಸುಮ್ಮನಾಗಿದ್ದೆ. ಕುಟುಂಬ ರಾಜಕಾರಣವನ್ನು ಸಾವಿರಾರು ವರ್ಷಗಳಿಂದ ಒಪ್ಪಿಕೊಂಡಿರುವ ನಮ್ಮ ದೇಶದಲ್ಲಿ, ದೇವೇಗೌಡರು ಒಬ್ಬ ಸಣ್ಣ ಆಟಗಾರ ಅಷ್ಟೆ. ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ಇರಬಹುದು, ರಾಜಸ್ಥಾನದ ಸಿಂಧ್ಯಾ, ಹರ್ಯಾಣಾದ ಚೌತಾಲಾ, ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್, ಬಿಹಾರದ ಲಾಲೂ, ಒಡಿಸ್ಸಾದ […]