ರಾಜ್ಯ

ರಾಜ್ಯ

ಕರ್ನಾಟಕದಲ್ಲಿ ಮತ್ತೆ ಶುರುವಾದ ಪಕ್ಷಾಂತರ ಪರ್ವ

ಕರ್ನಾಟಕದಲ್ಲಿ ಮತ್ತೆ ಶುರುವಾದ ಪಕ್ಷಾಂತರ ಪರ್ವ

‘ಆಯಾರಾಂ-ಗಯಾರಾಂ’ ಅಂತೂ ಕರ್ನಾಟಕದಲ್ಲಿ ಪಕ್ಷಾಂತರ ಪರ್ವವೊಂದು ಮತ್ತೆ ಶುರುವಾಗಿದೆ.. ತಮ್ಮ ಕ್ಷೇತ್ರಗಳಲ್ಲಿ ನೆಲೆಯೇ ಇಲ್ಲದವರು,ನೆಲೆಯಿದ್ದೂ ಮುಂದಿನ ಚುನಾವಣೆಗಳಲ್ಲಿ ಗೆಲ್ಲುವ ಭರವಸೆಯಿಲ್ಲದವರೂ, ತಮ್ಮ ವೈಯುಕ್ತಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಹವಣಿಸುತ್ತಿರುವವರೂ,  ಹೀಗೆ  ನಮ್ಮ ಹಲವು ರಾಜಕಾರಣಿಗಳು ಪಕ್ಷಾಂತರ ಮಾಡುತ್ತ  ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಪ್ರಶ್ನಿಸಬೇಕಾದಂತಹ ವಾತಾವರಣವೊಂದನ್ನು ಸೃಷ್ಠಿಸುತ್ತಿದ್ದಾರೆ. ಪಕ್ಷಾಂತರ ಎನ್ನುವುದು ಇಂಡಿಯಾದ ರಾಜಕಾರಣದ ಮಟ್ಟಿಗೆ ಹೊಸತೇನಲ್ಲ. ಇಂತಹ ಪಕ್ಷಾಂತರಿಗಳ ಕುರಿತಾಗಿಯೇ ಹಿಂದಿ ಬಾಷೆಯಲ್ಲಿ ‘ಆಯಾ ರಾಂ-ಗಯಾರಾಂ’ ಎನ್ನುವ ಒಂದು ವಿಶೇಷ ನಾಣ್ನುಡಿಯೇ ಸೃಷ್ಠಿಯಾಗಿತ್ತು. ಅದು 1967ರ ಸಮಯ: ಹರಿಯಾಣ ರಾಜ್ಯದ ಗಯಾರಾಂ […]

ಮುಂದಿನ  ಚುನಾವಣೆ: ಧೃವೀಕರಣಗೊಳ್ಳಲಿರುವ ಮೇಲ್ವರ್ಗಗಗಳು.

ಮುಂದಿನ  ಚುನಾವಣೆ: ಧೃವೀಕರಣಗೊಳ್ಳಲಿರುವ ಮೇಲ್ವರ್ಗಗಗಳು.

ಈ ವಿಷಯವಾಗಿ ನಾವೀಗ ಮಾತಾಡುವುದು ತೀರಾ ಅವಸರದ ವಿಚಾರವೆನಿಸಿದರು, ಇನ್ನು ಹದಿನೈದು ತಿಂಗಳಲ್ಲಿ ಬರಲಿರುವ  ರಾಜ್ಯ ವಿದಾನಸಭಾ ಚುನಾವಣೆಗಳ ಹೊತ್ತಿಗೆ   ಅಹಿಂದ ರಾಜಕಾರಣದ ವಿರುದ್ದ ಸೃಷ್ಠಿಯಾಗಬಹುದಾದ  ಮೇಲ್ವರ್ಗದ ರಾಜಕಾರಣದ  ಹೆಜ್ಜೆಗಳನ್ನು  ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ದೃಷ್ಠಿಯಿಂದ  ಇದನ್ನು ಬರೆಯಲೆಬೇಕಾಗಿದೆ. ಕಳೆದ ಐದು ವರ್ಷಗಳಿಂದ ಅಂದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೇಸ್ ಗೆದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕ್ಷಣದಿಂದಲೇ ಹುಟ್ಟಿಕೊಂಡ  ಅಹಿಂದಕ್ಕೆ ಪರ್ಯಾಯವಾದ ಒಂದು ರಾಜಕಾರಣ ಯಾವುದೇ ಗೊತ್ತು ಗುರಿಯಿಲ್ಲದೆ ನಡೆಯುತ್ತ ಬಂದಿದ್ದು, ಇದುವರೆಗೂ ಒಂದು ಪ್ರಬಲ ಪರ್ಯಾಯವಾಗಿ ಬೆಳೆದಿರಲಿಲ್ಲ. ಆದರೆ  […]

ಮುಖ್ಯಮಂತ್ರಿಗೆ ಬಹಿರಂಗ ಪತ್ರ

ಮುಖ್ಯಮಂತ್ರಿಗೆ ಬಹಿರಂಗ ಪತ್ರ

ನಮಸ್ತೆ ಸರ್, ನಾನು ಖಂಡಿತ ನಿಮ್ಮ ಪಕ್ಷದ ಬೆಂಬಲಿಗನಲ್ಲ, ಕಟ್ಟಾ ವಿರೋಧಿಯೂ ಅಲ್ಲ. ತಮಗನಿಸಿದ್ದನ್ನು ಮುಕ್ತವಾಗಿ ಹೇಳುವ ರಾಜ್ಯದ ಜನಸಾಮಾನ್ಯರ ಗುಂಪಿನ ಒಬ್ಬ ಸದಸ್ಯನೆಂದುಕೊಳ್ಳಬಹುದು. ಮುಖ್ಯಮಂತ್ರಿಯ ಹುದ್ದೆಯಲ್ಲಿದ್ದರೂ ರಾಜ್ಯದ ಜನಸಾಮಾನ್ಯನೊಬ್ಬ ಹೇಳಲು ಬಯಸುವುದನ್ನು ಕೇಳುವ ವ್ಯವಧಾನ ತಮ್ಮಲ್ಲಿದೆ ಎಂಬ ಭರವಸೆಯೊಂದಿಗೆ ಈ ಪತ್ರ ಬರೆಯುತ್ತಿದ್ದೇನೆ. ನೀವು ವಿರೋಧ ಪಕ್ಷದಲ್ಲಿದ್ದಾಗ ತೋರುತ್ತಿದ್ದ ರೋಷಾವೇಶ, ಮಂತ್ರಿಯಾಗಿದ್ದಾಗ ನಿಮ್ಮಲ್ಲಿದ್ದ ಕ್ರಿಯಾಶೀಲತೆ ಗಮನಿಸಿದ ಹಲವರಿಗೆ ಅನಿಸಿದಂತೆ ನನಗೂ ನೀವು ಮುಖ್ಯಮಂತ್ರಿ ಸ್ಥಾನಕ್ಕೇರುವ ಎಲ್ಲ ಅರ್ಹತೆಯುಳ್ಳವರೆನಿಸಿತ್ತು. ಅದೇ ಕಾರಣಕ್ಕೆ ಸಾಕಷ್ಟು ಏಳುಬೀಳುಗಳ ನಂತರ ಕೊನೆಗೂ […]

ದಲಿತ ಸಂವೇದನೆ ಮತ್ತು ದಲಿತ ರಾಜಕಾರಣ

ದಲಿತ ಸಂವೇದನೆ ಮತ್ತು ದಲಿತ ರಾಜಕಾರಣ

ಭಾರತದ ರಾಜಕಾರಣದಲ್ಲಿ ದಲಿತ ರಾಜಕಾರಣಿಗಳ ಪಾತ್ರ ಮಹತ್ತರವಾದುದು. ಸಾಂವಿಧಾನಿಕ ಮೀಸಲಾತಿ ಸೌಲಭ್ಯದಿಂದ ಹೊರತಾಗಿಯೂ ಅನೇಕ ದಲಿತ ಶಾಸಕರು, ಸಂಸದರು ದೇಶದ ಆಡಳಿತ ವ್ಯವಸ್ಥೆಗೆ ತಮ್ಮ ಮಹತ್ತರ ಕಾಣಿಕೆಯನ್ನು ಸಲ್ಲಿಸಿದ್ದಾರೆ, ಸಲ್ಲಿಸುತ್ತಲೂ ಇದ್ದಾರೆ. ದಲಿತ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು, ದಲಿತರ ಜೀವನಮಟ್ಟ ಸುಧಾರಿಸಲು ಅವಿರತ ಶ್ರಮಿಸಿದ್ದಾರೆ. ಸ್ಥಾಪಿತ ರಾಜಕೀಯ ಚೌಕಟ್ಟಿನಿಂದ ಕೊಂಚವೂ ಹೊರನುಸುಳದೆ, ಚಾಲ್ತಿಯಲ್ಲಿರುವ ರಾಜಕೀಯ ವ್ಯವಸ್ಥೆಯ ಒಳಗಿದ್ದುಕೊಂಡೇ ಸಂವಿಧಾನದತ್ತ ಹಕ್ಕುಗಳನ್ನ ದಲಿತ ಸಮುದಾಯಗಳಿಗೆ ಒದಗಿಸುವಲ್ಲಿ ದಲಿತ ನಾಯಕರ ಪಾತ್ರವನ್ನು ಅಲ್ಲಗಳೆಯಲಾಗುವುದಿಲ್ಲ. ಒಂದು ವೇಳೆ ಶಾಸಕಾಂಗ ಸಭೆಗಳಲ್ಲಿ ದಲಿತ […]

ಮುಳ್ಳಿನ ಹಾದಿಯ ಪಯಣಿಗ ಪನ್ನೀರ್ ಸೆಲ್ವಂ

ಮುಳ್ಳಿನ ಹಾದಿಯ ಪಯಣಿಗ ಪನ್ನೀರ್ ಸೆಲ್ವಂ

ಓ. ಪನ್ನೀರ್ ಸೆಲ್ವಂ! ಬಹುಶ: ಮುಂದಿನ ಕೆಲವು ತಿಂಗಳ ಕಾಲ ರಾಷ್ಟ್ರದಲ್ಲಿ ಎಲ್ಲರ ಕಣ್ಣೂ ಇವರ ನಡೆಯ ಮೇಲಿರುವುದು ಖಚಿತ. ಮೂರನೇ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಪನ್ನೀರ್ ಸೆಲ್ವಂ ಅವರು ಎ.ಐ.ಎ.ಡಿ.ಎಂ.ಕೆ ಪಕ್ಷದ ಮುಖ್ಯಸ್ಥೆಯಾಗಿದ್ದ ಜಯಲಲಿತಾರವರ ಸ್ಥಾನವನ್ನು ಪಕ್ಷದಲ್ಲಾಗಲಿ, ಆಡಳಿತದಲ್ಲಾಗಲಿ ಯಾವ ಮಟ್ಟದಲ್ಲಿ ತುಂಬಲಿದ್ದಾರೆಂಬುದು ಕುತೂಹಲದ ಸಂಗತಿಯಾಗಿದೆ. ಯಾಕೆಂದರೆ ಹಿಂದೆಯೂ ಅವರು ಮುಖ್ಯಮಂತ್ರಿಯಾಗಿದ್ದು ಸಹ ಕಾನೂನಿನ ತೊಡಕಿನ ಕಾರಣದಿಂದ ಜಯಲಲಿತಾರವರು ಮುಖ್ಯಮಂತ್ರಿಯ ಗಾದಿಯಿಂದ ಇಳಿಯಬೇಕಾಗಿ ಬಂದಾಗ ಬದಲಿ ವ್ಯವಸ್ಥೆಯ ಫಲವಾಗಿ ಸೆಲ್ವಂ ಅವರಿಗೆ ಅಧಿಕಾರ ಸಿಕ್ಕಿತ್ತು. ಕಾನೂನಿನ […]

ಜಾತಿಗಣತಿಯ ವರದಿ ಬಹಿರಂಗ ಪಡಿಸದ ಸರಕಾರ: ಮೇಲ್ವರ್ಗಗಳ ಒತ್ತಡಕ್ಕೆ ಮಣಿದರೇ ಮುಖ್ಯಮಂತ್ರಿಗಳು?

ಜಾತಿಗಣತಿಯ ವರದಿ ಬಹಿರಂಗ ಪಡಿಸದ ಸರಕಾರ: ಮೇಲ್ವರ್ಗಗಳ ಒತ್ತಡಕ್ಕೆ ಮಣಿದರೇ ಮುಖ್ಯಮಂತ್ರಿಗಳು?

2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಚುನಾವಣೆಗಳಿಗೂ ಮುಂಚೆ ಹೇಳಿದಂತೆಯೇ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ,ಶೈಕ್ಷಣಿಕ ಮತ್ತು ಆರ್ಥಿಕ ಗಣತಿಯನ್ನು ( ಇನ್ನೊಂದು ಅರ್ಥದಲ್ಲಿ ಜಾತಿಗಣತಿ),ಮೇಲ್ವರ್ಗಗಳ ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಾಡಿ ಮುಗಿಸಿದರು. ಇವತ್ತು ನಾವೇನೇ ಜಾತಿವಿನಾಶದ ಆದರ್ಶದ ಮಾತುಗಳನ್ನು ಆಡಿದರೂ ಜಾತಿ ಎನ್ನುವುದು ಈ ದೇಶದ ಕಟುವಾಸ್ತವ ಎಂಬುದನ್ನು ಮರೆಯಬಾರದು. ಈ ಗಣತಿ ಕಾರ್ಯವನ್ನು ವಿರೋಧಿಸಿದವರೆಲ್ಲ  ಜಾತಿಪದ್ದತಿಯ ಪೋಷಕರೇ ಆಗಿದ್ದುದು ಮತ್ತು ಅಂತಹ ಮೇಲ್ವರ್ಗಗಳ ಬೆಂಬಲ ಪಡೆದ […]

ಈಶ್ವರಪ್ಪನವರ ‘ಹಿಂದ’ ದ ಗೊಂದಲಗಳು

ಈಶ್ವರಪ್ಪನವರ ‘ಹಿಂದ’ ದ ಗೊಂದಲಗಳು

ರಾಜಕೀಯ ನಾಯಕನೊಬ್ಬನಿಗೆ ಸ್ಪಷ್ಟವಾದ ಸಿದ್ದಾಂತವೊಂದು ಇಲ್ಲದೇ ಹೋದಾಗ ಆತನಲ್ಲಿ ಉಂಟಾಗಬಹುದಾದ ಗೊಂದಲಗಳು ಸಮಕಾಲೀನ ರಾಜಕೀಯದಲ್ಲಿ ಅಪಹಾಸ್ಯದ ಮಟ್ಟಕ್ಕಿಳಿದಿಡಬಹುದು. ಇದೀಗ ಸದ್ಯದ ಮಟ್ಟಿಗೆ ‘ಹಿಂದ’ದ ನಾಯಕನೆಂದು ಸ್ವಘೋಷಿಸಿಕೊಂಡಿರುವ ಈಶ್ವರಪ್ಪನವರು ಸಹ ಇಂತಹ ನಗೆಪಾಟಲಿಗೆ ಈಡಾಗುತ್ತಿರುವುದರ ಕಾರಣ ಅವರೇ ಸೃಷ್ಠಿಸಿಕೊಂಡ ದ್ವಂದ್ವಗಳ ಪರಿಣಾಮವೇ ಆಗಿದೆ. ಕಳೆದ ವಿದಾನಸಭೆಗೆ ಮುಂಚೆ ಬಾಜಪವನ್ನು ತೊರೆದ ಮಾಜಿಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮದೇ ಆದ ಕೆಜೆಪಿಯನ್ನು ಕಟ್ಟಿದಾಗ ಈಶ್ವರಪ್ಪನವರೂ ಸೇರಿದಂತೆ ರಾಜ್ಯಮಟ್ಟದ ಯಾವ ನಾಯಕರೂ ಅವರನ್ನು ಹಿಂಬಾಲಿಸಲಿಲ್ಲ, ಒಬ್ಬ ಶೋಭಾ ಕರಂದ್ಲಾಜೆಯನ್ನು ಹೊರತು ಪಡಿಸಿ. ಆದರೆ ನಡೆದ […]

ಸಂಗೊಳ್ಳಿರಾಯಣ್ಣ ಬ್ರಿಗೇಡ್  ಹಿಂದಿರುವ ಶಕ್ತಿಗಳು ಯಾವುವು?

ಸಂಗೊಳ್ಳಿರಾಯಣ್ಣ ಬ್ರಿಗೇಡ್  ಹಿಂದಿರುವ ಶಕ್ತಿಗಳು ಯಾವುವು?

      ತಾನ್ಯಾವತ್ತೂ ಬಾಜಪದ ರಾಜಕೀಯ ವಿಚಾರಗಳಲ್ಲಿ ಮದ್ಯಪ್ರವೇಶಿಸುವುದಿಲ್ಲವೆಂದು ಹೇಳುವ ಸಂಘಪರಿವಾರದ ಆಣತಿಯಿಲ್ಲದೆ ಬಾಜಪದಲ್ಲಿ ಒಂದು ಸಣ್ಣ ಚಟುವಟಿಕೆಯೂ ನಡೆಯುವುದಿಲ್ಲವೆಂಬುದು ಈಗಾಗಲೇ ಬಹಳಷ್ಟು ಸಂದರ್ಭಗಳಲ್ಲಿ ಸಾಬೀತಾಗಿದೆ.  ಇದೀಗ ಕರ್ನಾಟಕದ ಬಾಜಪದೊಳಗೆ ಎದ್ದಿರುವ  ಭಿನ್ನಮತೀಯ ಚಟುವಟಿಕೆಗಳ ಹಿಂದೆಯೂ ಸಂಘಪರಿವಾರದ ಕಾಣದ ಕೈವಾಡಗಳಿರುವುದು ಸುಳ್ಳೇನಲ್ಲ. ಯಾಕೆಂದರೆ ಯಡಿಯೂರಪ್ಪನವರು ಮತ್ತೆ ಬಾಜಪದ ಅದ್ಯಕ್ಷರಾಗುವ ತನಕ ಯಾವುದೇ ಚಟುವಟಿಕೆಗಳಿರದೆ ಮೌನವಾಗುಳಿದಿದ್ದ ಬಾಜಪದೊಳಗೆ ಯಡಿಯೂರಪ್ಪನವರು ಅದ್ಯಕ್ಷರಾದ ನಂತರ ಎರಡು ರೀತಿಯ ಚಟುವಟಿಕೆಗಳು ಶುರುವಾದವು. ಇನ್ನೇನು ಯಡಿಯೂರಪ್ಪನವರ ಕೃಪೆಯಿಂದ ಮುಂದಿನ ವಿದಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿದೇ ಹಿಡಿಯುತ್ತೇವೆಂದು […]

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ವಿಫಲವಾಗಲು ಕಾರಣಗಳು

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ವಿಫಲವಾಗಲು ಕಾರಣಗಳು

  ಕರ್ನಾಟಕದಲ್ಲಿ ಪ್ರದೇಶಿಕ ಪಕ್ಷಗಳಿಗೆ ಮನ್ನಣೆ ಸಿಗುವುದಿಲ್ಲ ಮತ್ತು ಕರ್ನಾಟಕದ ಜನತೆ ಆ ವಿಷಯದ ಮಟ್ಟಿಗೆ ರಾಷ್ಟ್ರೀಯವಾಗಿ ಚಿಂತಿಸುತ್ತಾರೆಂಬ ಮಾತು  ಮಾಮೂಲಿಯಾಗಿಬಿಟ್ಟಿದೆ. ಕರ್ನಾಟಕದ ಜನತೆ ಒಕ್ಕೂಟ ವ್ಯವಸ್ಥೆಗೆ ಎಷ್ಟು ಒಗ್ಗಿ ಹೋಗಿದ್ದಾರೆಂದರೆ ನಮ್ಮ  ಜನತೆ ಇದುವರೆಗು ಯಾವುದೇ ಪ್ರಾದೇಶಿಕ ಪಕ್ಷವೊಂದನ್ನು ನಮ್ಮದೂ ಎಂದು ಒಪ್ಪಿಕೊಂಡು ಸಂಪೂರ್ಣವಾಗಿ ಅದನ್ನು ಬೆಂಬಲಿಸಿದ ನಿದರ್ಶನಗಳೇ ಸಿಗುವುದಿಲ್ಲ. ಕನ್ನಡದ ನೆಲಜಲಗಳ ಪ್ರಶ್ನೆ ಬಂದಾಗ ಪ್ರಾದೇಶಿಕ ಪಕ್ಷವೊಂದರ ಅನಿವಾರ್ಯತೆಯ ಬಗ್ಗೆ ಆವೇಶದಿಂದ ಮಾತಾಡುವ ಕನ್ನಡಿಗರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬಾಜಪ ಅಥವಾ ಕಾಂಗ್ರೇಸ್ ಅನ್ನುವ […]

ಕಾವೇರಿ ವಿಷಯದಲ್ಲಿ ಕ್ಷುದ್ರ ರಾಜಕೀಯ ಬೇಡ

ಕಾವೇರಿ ವಿಷಯದಲ್ಲಿ ಕ್ಷುದ್ರ ರಾಜಕೀಯ ಬೇಡ

ನಾನು ಕಾವೇರಿ ‌ವಿಷಯ ಕುರಿತ ಚರ್ಚೆ, ಸಂವಾದವನ್ನು ಕಳೆದ ನಲವತ್ತು ವರ್ಷಗಳಿಂದ  ಗಮನಿಸುತ್ತಿದ್ದೇನೆ. ಅರಸು, ವೀರೇಂದ್ರ ಪಾಟೀಲ್, ಹೆಗಡೆ, ದೇವೇಗೌಡರು, ಎಸ್.ಎಂ. ಕೃಷ್ಣ, ಗುಂಡೂರಾಯರು, ಇವರು ಕೇಂದ್ರದಲ್ಲಿ ಯಾರೇ ಪ್ರಧಾನಿಯಾಗಿರಲಿ ಅವರೊಂದಿಗೆ ಹಾಗೂ ನೆರೆ ರಾಜ್ಯಗಳ ಕೆಲವು ಮುಖ್ಯ ಮಂತ್ರಿಗಳೊಂದಿಗೆ ಕನಿಷ್ಠ ಒಂದು working relationship ಹೊಂದಿದ್ದರು. ಇವರು ಅಲ್ಲಿಗೆ, ಅವರು ಇಲ್ಲಿಗೆ ಹೋಗಿ ಬಂದು ಮಾತುಕತೆ ನಡೆಸುತ್ತಿದ್ದರು. ಆದರೆ ಈಚೆಗೆ ಈ ವಿದ್ಯಮಾನ ಕಣ್ಮರೆಯಾಗಿರುವುದು ದೇಶದ  ಒಕ್ಕೂಟ ವ್ಯವಸ್ಥೆಯಲ್ಲಿ ಬಿಕ್ಕಟ್ಟುಗಳು ಉಲ್ಬಣಗೊಳ್ಳಲು ಕಾರಣವಾಗಿದೆ. ಪ್ರಜಾ ಪ್ರಭುತ್ವದಲ್ಲಿ ಸಂವಾದ, […]