ದೇಶ

ದೇಶ

ಫ್ಯಾಸಿಸಂನ ಪರ್ವಕಾಲ ಸೃಜನಶೀಲತೆಯ ಅವಸಾನಕಾಲ

ಫ್ಯಾಸಿಸಂನ ಪರ್ವಕಾಲ ಸೃಜನಶೀಲತೆಯ ಅವಸಾನಕಾಲ

ಭಾರತೀಯ ಸಮಾಜ ವಿಶಿಷ್ಟ ಸಂದರ್ಭವನ್ನು ಎದುರಿಸುತ್ತಿದೆ. ಯಂತ್ರಜ್ಞಾನ, ತಂತ್ರಜ್ಞಾನ, ವಿಜ್ಞಾನದ ಪಥದಲ್ಲಿ ವಿಶ್ವಮಾನ್ಯತೆ ಗಳಿಸುತ್ತಿರುವ ಸಂದರ್ಭದಲ್ಲೇ ಭಾರತದ ಸಾಮಾಜಿಕ ಪ್ರಜ್ಞೆ ಪ್ರಾಚೀನತೆಯತ್ತ ಹೊರಳುತ್ತಿರುವುದು ಸತ್ಯ,. ಯಾವುದೇ ಒಂದು ಪ್ರಬುದ್ಧ ಸಮಾಜ ತನ್ನ ಅಭ್ಯುದಯದ ಹಾದಿಯಲ್ಲಿ ತನ್ನದೇ ಆತ ಸಾಕ್ಷೀಪ್ರಜ್ಞೆಯನ್ನು ಅರಸುತ್ತಾ ಮುನ್ನಡೆಯುತ್ತದೆ. ಈ ಅರಸುವಿಕೆಯಲ್ಲಿ ಸಮಾಜದ ಆಂತರ್ಯದಲ್ಲಿ ಸಂಭವಿಸುವ ತುಮುಲಗಳು, ಚಿಂತನ ಮಂಥನಗಳು ಸಮಾಜದ ಧೋರಣೆಯನ್ನೇ ಬದಲಿಸುವ ಸಾಧ್ಯತೆಗಳಿರುತ್ತವೆ. ಮಾನವ ಸಮಾಜ ತನ್ನ ಪ್ರಾಚೀನ ಚಿಂತನೆಗಳಿಂದ, ಅನಾಗರೀಕ ವರ್ತನೆಯಿಂದ ವಿಮುಖವಾಗಿ ಸಾಮಾಜಿಕ, ಸಾಂಸ್ಕøತಿಕ ಅಭ್ಯುದಯದತ್ತ ಸಾಗುವ ಹಾದಿಯಲ್ಲಿ […]

ನ್ಯಾಷನಲ್ ಹೆರಾಲ್ಡ್ : ನೊಣ ತಿಂದ ಕೇಸು

ನ್ಯಾಷನಲ್ ಹೆರಾಲ್ಡ್ : ನೊಣ ತಿಂದ ಕೇಸು

ಕಳೆದ ಕೆಲ ವಾರಗಳಿಂದ ದಿನ ಪತ್ರಿಕೆಗಳಲ್ಲಿ, ಟಿವಿ ಚಾನೆಲ್‍ಗಳಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮೇಲೆ ಬಿದ್ದಿರುವ ಒಂದು ಕೇಸಿನ ಬಗ್ಗೆ ಸುದ್ದಿಯೋ ಸುದ್ದಿ. ಟಿವಿ ಚಾನೆಲ್‍ಗಳಲ್ಲಂತೂ ಪ್ಯಾನೆಲ್ ಚರ್ಚೆಗಳು ನಡೆಯುತ್ತಿವೆ. ಜನಪ್ರಿಯ ಇಂಗ್ಲಿಷ್ ಸುದ್ದಿ ವಾಹಿನಿ ‘ಟೈಮ್ಸ್ ನೌ’ನಲ್ಲಿ ಅರ್ನಾಬ್ ಗೋಸ್ವಾಮಿ “ದಿಸ್ ನೇಷನ್ ವಾಂಟ್ಸ್ ಟು ನೋ ಮೋರ್” ಅಂತಾ ಅರಚಿದ್ದೇ ಅರಚಿದ್ದು. ಮಾಧ್ಯಮಗಳ ವಿಷಯ ಹೀಗಾದರೆ ಅತ್ತ ಸಂಸತ್ ಅಧಿವೇಶನದಲ್ಲೂ ಇದೇ ಪ್ರಮುಖ ಸುದ್ದಿ. ಮೋದಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ, […]

ಸಂಘ ಪರಿವಾರದ ಹಿಡಿತದಿಂದ ಸಂವಿಧಾನವನ್ನು ಉಳಿಸಿ

ಸಂಘ ಪರಿವಾರದ ಹಿಡಿತದಿಂದ ಸಂವಿಧಾನವನ್ನು ಉಳಿಸಿ

ಈ ಬಾರಿ 26 ನವೆಂಬರ್ ಅನ್ನು 66ನೇ ಸಂವಿಧಾನ ಸಮರ್ಪಣಾ ದಿನವನ್ನಾಗಿ ಆಚರಿಸಲಾಯಿತು. ವೈರುಧ್ಯವೆಂದರೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಆರೆಸ್ಸಸ್ ಸಂಘಟನೆಯ ಸಹೋದರ ಪಕ್ಷ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ 2015ರಲ್ಲಿ ಇದಕ್ಕೆ ಚಾಲನೆ ನೀಡಿದೆ. ಸೆಕ್ಯಲರಿಸಂ ಅನ್ನು ಬೋಗಸ್ ಎಂದು ಹೀಗೆಳೆಯುತ್ತಿದ್ದ ಈ ಹಿಂದೂ ರಾಷ್ಟ್ರೀಯವಾದಿಗಳ ವಕ್ತಾರರು 80 ವರ್ಷಗಳ ನಂತರ ಧರ್ಮನಿರಪೇಕ್ಷತೆಯನ್ನು ಪ್ರತಿಪಾದಿಸುವ ಸಂವಿಧಾನವನ್ನು ಒಪ್ಪಿಕೊಂಡಂತಿದೆ. ಅಥವಾ ನಟಿಸುತ್ತಿದ್ದಾರೆ? 80 ವರ್ಷಗಳ ನಿರಂತರ ಮತೀಯವಾದ ಮತ್ತು ಕೋಮುವಾದದ ಘಟನೆಗಳ, ಹತ್ಯಾಕಾಂಡಗಳ ನಂತರವೂ ಇಂದು ಅಧಿಕಾರದಲ್ಲಿರುವ […]

ರಾಜಕಾರಣಿಗಳಿಗೇಕೆ ಹೊಸ ಭೂಸ್ವಾದೀನ ಕಾಯ್ದೆ ಬೇಡ?

ರಾಜಕಾರಣಿಗಳಿಗೇಕೆ ಹೊಸ ಭೂಸ್ವಾದೀನ ಕಾಯ್ದೆ ಬೇಡ?

 ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಕೃತಿ ಪ್ರಕಟಗೊಂಡ ಒಂದು ಶತಮಾನದುದ್ದಕ್ಕೂ ಅಭಿವೃದ್ಧಿ ಮೀಮಾಂಸೆ ಕುರಿತು ನಡೆದ ಚರ್ಚೆಗಳ ಚರಿತ್ರೆ ನಮ್ಮ ಕಣ್ಣ ಮುಂದೆ ಇದೆ. ಅದರಲ್ಲೂ ಕಳೆದ ಕಾಲು ಶತಮಾನವಂತೂ ಅಭಿವೃದ್ಧಿ ಕುರಿತಂತೆ ಜನರ ತಿಳುವಳಿಕೆಯ ಮಟ್ಟ ಹೆಚ್ಚಾದದ್ದಕ್ಕೋ ಅಥವಾ ಭೂಮಿಯೆಂಬ ನಿಯಮಿತ ವಸ್ತುವಿನ ಮೇಲೆ ಹೆಚ್ಚಿದ ಅಗಾಧ ಅವಲಂಬನೆಯ ಕಾರಣಕ್ಕೋ ಅಥವಾ ಜನ ನಿರಾಶ್ರಿತಗೊಂಡು ನಿರ್ಗತಿಕರಾಗುವ ಪ್ರಮಾಣ ಹೆಚ್ಚಾದದ್ದಕ್ಕೋ, ಹೊಸ ಅವತಾರದಲ್ಲಿ ಬಂದ ಬಹುರಾಷ್ಟ್ರೀಯ ಕಂಪನಿಗಳ ತಾಳಕ್ಕೆ ವ್ಯವಸ್ಥೆ ಕುಣಿಯಲಾರಂಭಿಸಿದ್ದಕ್ಕೋ, ಅಂತೂ ಜನ ಸಂಘರ್ಷದ ಹಾದಿಗೆ ನಡೆದೇ ನಡೆದರು. […]

ಬಿಜೆಪಿಗೆ ಗುನ್ನ ಇಟ್ಟ ಗೋವು

ಬಿಜೆಪಿಗೆ ಗುನ್ನ ಇಟ್ಟ ಗೋವು

ಬಿಹಾರ್‍ದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ನಿತೀಶ್ ಕುಮಾರ್ ಅವರ ಗ್ರಾಂಡ್ ಅಲೈಯನ್ಸ್ ಎದುರು ದಯನೀಯವಾಗಿ ಸೋಲನ್ನು ಅನುಭವಿಸಿದೆ. ಇಡೀ ಚುನಾವಣಾ ಪ್ರಕ್ರಿಯೆಯನ್ನು ಅವಲೋಕಿಸಿದಾಗ ನಮ್ಮಲ್ಲಿನ ‘ದನಕ್ಕೆ ಬಡಿದ ಹಾಗೆ ಬಡಿದರು’ ಎನ್ನುವ ಒಂದು ಗಾದೆ ಮಾತು ಮತ್ತೆ ಮತ್ತೆ ನೆನಪಾಗುತ್ತದೆ. ಈ ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಗೋವನ್ನು ಬಳಸಿಕೊಂಡು ಧರ್ಮದ ಆಧಾರದ ಮೇಲೆ ಧೃವೀಕರಣ ಸಾಧಿಸಲು ಹೊರಟು, ಇದಕ್ಕೆ ವ್ಯತಿರಿಕ್ತವಾಗಿ ಬಿಹಾರದ ಮತದಾರರಿಂದ ದನಕ್ಕೆ ಬಡಿದ ಹಾಗೆ ಬಡಿಸಿಕೊಂಡ ನಂತರ ಇವರ ಗೋವಿನ […]

ಜನರ ಆಹಾರದ ಮೇಲಿನ ಹಲ್ಲೆ ಪ್ರಜಾತಂತ್ರದ ಮೇಲಿನ ಹಲ್ಲೆ

ಜನರ ಆಹಾರದ ಮೇಲಿನ ಹಲ್ಲೆ ಪ್ರಜಾತಂತ್ರದ ಮೇಲಿನ ಹಲ್ಲೆ

ನಮ್ಮ ದೇಶದ ಅಗತ್ಯಗಳನ್ನು ಬ್ರಾಹ್ಮಣ್ಯದ ಕಣ್ಣಿಂದಲ್ಲದೆ ರೈತಾಪಿಯ ದಮನಿತರ ಕಣ್ಣಿಂದ ಎಂದಿಗೂ ಅರ್ಥಮಾಡಿಕೊಳ್ಳದ ಬಿಜೆಪಿಗೆ ಈ ದೇಶ ಎಂದಿಗೂ ಅರ್ಥವಾಗಿಲ್ಲ. ಹೀಗಾಗಿ ಈ ದೇಶದ ಸಂಸ್ಕೃತಿಯನ್ನು ಉಳಿಸುವ ಹೆಸರಲ್ಲಿ ಅದು ರೂಪಿಸುತ್ತಿರುವ ಕಾನೂನುಗಳೆಲ್ಲಾ ಈ ದೇಶದ ಬಹುಸಂಖ್ಯಾತರ ಹಿತಾಸಕ್ತಿಗೆ ವಿರುದ್ಧವಾಗಿದೆ; ಮತ್ತು ಅವರ ಬದುಕನ್ನು ಮತ್ತಷ್ಟು ದುರ್ಭರಗೊಳಿಸುತ್ತಿದೆ. ಬಿಜೆಪಿ ಮತ್ತು ಸಂಘಪರಿವಾರವು ಮೂಲಭೂತವಾಗಿ ಬ್ರಾಹ್ಮಣ್ಯವನ್ನು ಹೊರತುಪಡಿಸಿ ಮಿಕ್ಕಿದ್ದೆಲ್ಲಾ ಕೀಳೆಂದು ಪ್ರತಿಪಾದಿಸುವ ಶ್ರೇಣೀಕೃತ ವರ್ಣಾಶ್ರಮ ಪದ್ಧತಿಯನ್ನು ಪುನರ್ ಸ್ಥಾಪನೆ ಮಾಡಲು ಪ್ರಯತ್ನಿಸುತ್ತಲೇ ಬಂದಿದೆ. ಶೂದ್ರ ಹಾಗೂ ದಲಿತ ಶಕ್ತಿಗಳು […]

ವಿಷಗಾಳಿಯಲಿ ನಲುಗುತ್ತಿರುವ ‘ಭವ್ಯ ಭಾರತ’

ವಿಷಗಾಳಿಯಲಿ ನಲುಗುತ್ತಿರುವ ‘ಭವ್ಯ ಭಾರತ’

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಏಪ್ರಿಲ್ 2, 2014ರಂದು ಬಿಹಾರ್‍ನ ನವಾಡ್‍ನಲ್ಲಿ ನರೇಂದ್ರ ಮೋದಿಯವರು ಮಾಡಿದ ಭಾಷಣದ ಸಾರಾಂಶವಿದು. “ ನಾನು ದ್ವಾರಕಾ ನಗರದಿಂದ ಬಂದಿದ್ದೇನೆ ಮತ್ತು ದ್ವಾರಕೆಯೊಂದಿಗೆ ಯದುವಂಶಿಗಳಿಗೆ (ಬಿಹಾರ್‍ನ ಯಾದವ ಸಮುದಾಯವನ್ನು ಉದ್ದೇಶಿಸಿ) ನೇರವಾದ ಸಂಪರ್ಕವಿದೆ. ಈ ಸಂಬಂಧದಿಂದಾಗಿ ನಾನು ಇಂದು ನನ್ನ ಮನೆಯ ಲ್ಲಿದ್ದೇನೆ ಎನ್ನುವ ಭಾವನೆ ಉಂಟಾಗುತ್ತಿದೆ. ಆದರೆ ಶ್ರೀಕೃಷ್ಣನನ್ನು ಪೂಜಿಸುವ, ಗೋವನ್ನು ತಮ್ಮ ದಿನಬಳಕೆಗೆ ಬಳಸುವ, ಪೂಜಿಸುವ ಇದೇ ಯಾದವರ ನಾಯಕರು ಈ ಪ್ರಾಣಿಗಳನ್ನು ಹೆಮ್ಮೆಯಿಂದ ನಾಶಪಡಿಸುವ ಜನರೊಂದಿಗೆ ಸೌಹಾರ್ದಯುತವಾಗಿ ವ್ಯವಹಾರ […]

ಪಟೇಲರ ಮೀಸಲಾತಿ ಗದ್ದಲದ ಒಳಮರ್ಮ

ಪಟೇಲರ ಮೀಸಲಾತಿ ಗದ್ದಲದ ಒಳಮರ್ಮ

ಆಗಸ್ಟ್ 25ರಂದು ಗುಜರಾತ್ ರಾಜ್ಯ ಮತ್ತೊಮ್ಮೆ ಹೊತ್ತಿ ಉರಿಯಿತು. ಗುಜರಾತ್‍ನಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮಾತ್ರವಲ್ಲ ಸಂಖ್ಯಾತ್ಮಕವಾಗಿಯೂ ಪ್ರಬಲವಾಗಿರುವ ಪಟೇಲ್ ಸಮುದಾಯದ ಲಕ್ಷಾಂತರ ಮಂದಿ ಅಂದು ಅಹಮದಾಬಾದ್ ನಗರದ ಬೀದಿಗಳಲ್ಲಿ ನೆರೆದಿದ್ದರು. ಅವರ ಬೇಡಿಕೆ ಇಷ್ಟೆ. ಪಟೇಲ್ ಸಮುದಾಯವನ್ನು ಓಬಿಸಿ ಜಾತಿಗಳ ಪಟ್ಟಿಗೆ ಸೇರಿಸಿ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂಬುದು. ಚರಿತ್ರೆಯ ವಿಪರ್ಯಾಸ ಹೇಗಿದೆ ನೋಡಿ. ಮೂರು ದಶಕಗಳ ಹಿಂದೆ ನಡೆದಿದ್ದ ಮಂಡಲ್ ವಿರೋಧಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದದ್ದು ಇದೇ ಪಟೇಲ್ ಸಮುದಾಯ. ಈಗ ಒಂದು ಹೊಸ ತಲೆಮಾರು […]

1 6 7 8