ದೇಶ

ದೇಶ

ರಾಷ್ಟ್ರಪತಿ ಚುನಾವಣೆಯೂ-ಜಾತಿ ಲೆಕ್ಕಾಚಾರಗಳೂ!

ರಾಷ್ಟ್ರಪತಿ ಚುನಾವಣೆಯೂ-ಜಾತಿ ಲೆಕ್ಕಾಚಾರಗಳೂ!

    ನಾವು ಒಪ್ಪಲಿ ಬಿಡಲಿ ಇಂಡಿಯಾದ ಚುನಾವಣಾ ರಾಜಕೀಯದಲ್ಲಿ ಜಾತಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಲೇ ಇರುವುದಂತೂ ಸತ್ಯ. ಬಹುಶ: ಈ ಕಟುಸತ್ಯವನ್ನು ಅರಗಿಸಿಕೊಂಡೇ ರಾಜಕೀಯ ಮಾಡಬೇಕಾದ ಅನಿವಾರ್ಯತೆಗೆ ಎಲ್ಲ ಪಕ್ಷಗಳು ಒಗ್ಗಿಹೋಗಿವೆ. ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಈ ನೆಲದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಚುನಾವಣೆಯವರೆಗೂ ಈ ಜಾತಿಯ ಪ್ರಭಾವ ದಟ್ಟವಾಗಿದ್ದು, ಅದನ್ನು ನಿರಾಕರಸಿ ಇಲ್ಲ ತಿರಸ್ಕರಿಸಿ ರಾಜಕಾರಣ ಮಾಡುವ ಗಟ್ಟಿತನವನ್ನು ನಮ್ಮ ರಾಜಕೀಯ ಪಕ್ಷಗಳು ಯಾವತ್ತಿಗೂ ತೋರಿಸಿಲ್ಲ.  ಇದಕ್ಕೆ ಈ ಬಾರಿಯ ರಾಷ್ಟ್ರಪತಿ ಚುನಾವಣೆಯೇನು ಅಪವಾದವಾಗಿ […]

ನಮ್ಮೊಳಗೂ ಮನದ ಮಾತುಗಳಿವೆ ಕೇಳುವಿರಾ ಪ್ರಭೂ: ನರೇಂದ್ರ ಮೋದಿಗೆ ಬಹಿರಂಗ ಪತ್ರ

ನಮ್ಮೊಳಗೂ ಮನದ ಮಾತುಗಳಿವೆ ಕೇಳುವಿರಾ ಪ್ರಭೂ: ನರೇಂದ್ರ ಮೋದಿಗೆ ಬಹಿರಂಗ ಪತ್ರ

ನಾನು ಪ್ರಜಾತಂತ್ರ ವ್ಯವಸ್ಥೆಯ ಸಮರ್ಥಕನಾಗಿದ್ದರೂ ತಮ್ಮನ್ನು ಪ್ರಭೂ ಎಂದು ವಿನಮ್ರತೆಯಿಂದ ಸಂಭೋಧಿಸುತ್ತಿರುವುದನ್ನು ಕಂಡು ಚಕಿತಗೊಳ್ಳಬೇಕಿಲ್ಲ ಮಾನ್ಯ ಮೋದಿ ಜಿ. ಪ್ರಭೂ ಎನ್ನುವ ಪದ ಊಳಿಗಮಾನ್ಯ ವ್ಯವಸ್ಥೆಯಿಂದ ರಾಜಪ್ರಭುತ್ವ ವ್ಯವಸ್ಥೆಯೆಡೆಗೆ ಚಲಿಸಿ ಸ್ಥಾಪಿತವಾದ ಒಂದು ಗೌರವಯುತವಾದ ಸಂಭೋಧನೆ. ಗೌರವಯುತ ಎನ್ನುವುದಕ್ಕಿಂತಲೂ ಸ್ವಾಮಿನಿಷ್ಠೆಯ ಪ್ರತೀಕವಾಗಿ ಹೊರಹೊಮ್ಮಿದ ಗುಲಾಮಗಿರಿಯ ಸಂಕೇತ. ಆದರೂ ನಿಮ್ಮನ್ನು ಪ್ರಭೂ ಎಂದು ಕರೆಯುತ್ತಿದ್ದೇನೆ. ಕಾರಣವೇನು ಗೊತ್ತೇ ? ನಿಮ್ಮ ಆಡಳಿತ ವೈಖರಿ, ನೀವು ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ಮತ್ತು ತಮ್ಮ ಸರ್ಕಾರ ಅನುಸರಿಸುತ್ತಿರುವ ಆಡಳಿತದ ಮಾರ್ಗ ಸರ್ವಾಧಿಕಾರಿ ರಾಜಪ್ರಭುತ್ವವನ್ನೇ […]

ಭಗ್ನಗೊಂಡ ಕೋಟ್ಯಾಂತರ ಜನರ ಪರ್ಯಾಯ ರಾಜಕಾರಣದ ಕನಸು!

ಭಗ್ನಗೊಂಡ ಕೋಟ್ಯಾಂತರ ಜನರ ಪರ್ಯಾಯ ರಾಜಕಾರಣದ ಕನಸು!

ಇಂಡಿಯಾದ ಕೋಟ್ಯಾಂತರ ಜನರ ಕನಸುಗಳು ಒಂದೇ ದಿನದಲ್ಲಿ ಛಿದ್ರಗೊಂಡಿವೆ! ಹೌದು,ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲರ ಮೇಲೆ ಎರಡು ಕೋಟಿ ರೂಪಾಯಿ ಲಂಚ ಪಡೆದ ಆರೋಪ ಮತ್ತು  ಸುಳ್ಳು ಕಂಪನಿಗಳ ಮೂಲಕ ಹವಾಲ ಹಣಕಾಸು ವ್ಯವಹಾರ ನಡೆಸಿದ ಆರೋಪ ಹೊರಬೀಳುತ್ತಲೇ ಜನತೆಯಲ್ಲಿ ಭ್ರಮನಿರಸನದ ನಿಟ್ಟುಸಿರು ಕೇಳಿ ಬರುತ್ತಿದೆ.    ಯಾಕೆಂದರೆ ಭಾರತೀಯರ ಮಟ್ಟಿಗೆ, ಅದರಲ್ಲೂ ಇಂದಿನ ಅಕ್ಷರಸ್ಥ ಯುವಪೀಳಿಗೆಯ ಪಾಲಿಗೆ ಆಮ್ ಆದ್ಮಿ ಪಕ್ಷ ಕೇವಲ ಒಂದು ರಾಜಕೀಯ ಪಕ್ಷ ಮಾತ್ರವಾಗಿರಲಿಲ್ಲ. ಈ ನಾಡಿನಲ್ಲಿ […]

ರಾಷ್ಟ್ರಪತಿ ಚುನಾವಣೆ: ಒಮ್ಮತದ ಅಭ್ಯರ್ಥಿಯ ಆಯ್ಕೆಸಾದ್ಯವೇ?-2

ರಾಷ್ಟ್ರಪತಿ ಚುನಾವಣೆ:   ಒಮ್ಮತದ ಅಭ್ಯರ್ಥಿಯ ಆಯ್ಕೆಸಾದ್ಯವೇ?-2

  ಮುಂದಿನ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಪರವಾಗಿ ಒಮ್ಮತದ ಅಭ್ಯರ್ತಿಯನ್ನು ನಿಲ್ಲಿಸಬೇಕು, ತನ್ಮೂಲಕ 2019ರ ಸಾರ್ವತ್ರಿಕ ಚುನಾವಣೆಗಳ ಹೊತ್ತಿಗೆ ಬಾಜಪವನ್ನು ಸಮರ್ಥವಾಗಿ ಎದುರಿಸಲು ಶಕ್ತಿಯಿರುವಂತಹ  ಸಮಾನಮನಸ್ಕ ಪಕ್ಷಗಳ ಮೈತ್ರಿಕೂಟವೊಂದನ್ನು ರಚಿಸಬೇಕೆಂದಿರುವ ಕಾಂಗ್ರೇಸ್ ಪಕ್ಷದ   ಪ್ರಯತ್ನಗಳಿಗೆ  ಪೂರಕವಾದ ವಾತಾವರಣವಿನ್ನೂ ನಿರ್ಮಾಣವಾಗಿರುವಂತೆ ಕಾಣುತ್ತಿಲ್ಲ. ತನ್ನ ಅಧಿಕೃತ ಅಭ್ಯರ್ಥಿಯನ್ನು ಯಾವ ಕಷ್ಟವೂ ಇರದೆ ಗೆಲ್ಲಿಸಿಕೊಳ್ಳುವ ಸಾಮಥ್ರ್ಯ ಹೊಂದಿರುವ ಬಾಜಪ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಹೆಚ್ಚಿಗೇನೂ ಮಾತಾಡುತ್ತಿಲ್ಲ.  ಇಂತಹ ಸಂದರ್ಭದಲ್ಲಿ ಬಾಜಪದ ನಡೆಗೆ ಕಾಯದೆ ವಿರೋಧಪಕ್ಷಗಳ ಪರವಾಗಿ ಒಮ್ಮತದ ವ್ಯಕ್ತಿಯೊಬ್ಬರನ್ನು ಸ್ಪರ್ದೆಗೆ […]

ಚುನಾವಣಾವೆಚ್ಚವನ್ನು ಸರಕಾರವೇ ಭರಿಸುವ ಮಾತು! ಎಷ್ಟರ ಮಟ್ಟಿಗೆ ಉಚಿತ ?

ಚುನಾವಣಾವೆಚ್ಚವನ್ನು ಸರಕಾರವೇ ಭರಿಸುವ ಮಾತು!  ಎಷ್ಟರ ಮಟ್ಟಿಗೆ ಉಚಿತ ?

  ರಾಜಕೀಯ ಪಕ್ಷಗಳ ಚುನಾವಣಾ ಖರ್ಚನ್ನು ಸರಕಾರವೇ ಭರಿಸುವುದರಿಂದ ಚುನಾವಣಾ ಅಕ್ರಮಗಳು ನಿಲ್ಲುತ್ತವೆ ಮತ್ತು ಕಪ್ಪುಹಣದ ಗಳಿಕೆಗೆ ಮತ್ತು ಸಂಗ್ರಹಕ್ಕೆ  ಹಿನ್ನಡೆಯಾಗುತ್ತದೆ ಎಂಬ ಮಾತು ಇತ್ತೀಚೆಗೆ  ಹೆಚ್ಚು ಹೆಚ್ಚು ಕೇಳಿ ಬರುತ್ತಿದೆ. ಅದರಲ್ಲೂ ಇತ್ತೀಚೆಗೆ ಸಭೆಯೊಂದರಲ್ಲಿ ಪ್ರದಾನಮಂತ್ರಿ ನರೇಂದ್ರಮೋದಿಯವರು ಈ ಬಗ್ಗೆ ಮಾತಾಡಿದ ನಂತರವಂತು ನಮ್ಮ ಬಹುತೇಕ  ಮಾಧ್ಯಮಗಳು  ಈ ಕುರಿತು ಹಲವು ಚರ್ಚೆಗಳನ್ನು ನಡೆಸುತ್ತ  ಈ ಕ್ರಮದಿಂದ ರಾಷ್ಟ್ರದಲ್ಲಿನ ಚುನಾವಣಾ ಭ್ರಷ್ಟಾಚಾರ ಇಲ್ಲವಾಗಿ ನಾಡು ಸ್ವರ್ಗವಾಗಿ ಬಿಡುತ್ತದೆಯೆಂಬ ಹುಸಿ ಭ್ರಮೆಯೊಂದನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತಿವೆ.  ಇದರಿಂದ […]

ನಾಜಿ ಪಡೆಗಳ ಮಾರ್ಗದಲ್ಲೇ ನಡೆಯುತ್ತಿರುವ ಕೇಸರಿ ಪಡೆಗಳು

ನಾಜಿ ಪಡೆಗಳ ಮಾರ್ಗದಲ್ಲೇ ನಡೆಯುತ್ತಿರುವ ಕೇಸರಿ ಪಡೆಗಳು

“ 20ನೆಯ ಶತಮಾನದಲ್ಲಿ ಯೂರೋಪ್‍ನ ಪ್ರಜಾತಂತ್ರ ವ್ಯವಸ್ಥೆಗಳು ಕುಸಿದು ಫ್ಯಾಸಿಸಂ, ನಾಜಿಸಂ ಮತ್ತು ಕಮ್ಯುನಿಸಂ ಉಗಮಿಸಿದ್ದವು. ಒಬ್ಬ ನಾಯಕ ಜನಸಾಮಾನ್ಯರ ದನಿಯಾಗಿ ಹೊರಹೊಮ್ಮುವುದು, ಹೊರಗಿನ ಶತ್ರುಗಳಿಂದ ರಕ್ಷಿಸುವ ಭರವಸೆ ನೀಡುವುದು ಮತ್ತು ಮಿಥ್ಯೆಗಳನ್ನು ಬಳಸಿ ತರ್ಕವನ್ನು ಅಲ್ಲಗಳೆಯುವುದು ಈ ಶತಮಾನದಲ್ಲಿ ಕಂಡ ವೈಶಿಷ್ಟ್ಯ. ಸಮಾಜಗಳ ವಿಘಟನೆ, ನೈತಿಕತೆಯ ಕುಸಿತ, ಪ್ರಜಾತಂತ್ರದ ಪತನ ಇವೆಲ್ಲಕ್ಕೂ ಸಾಕ್ಷಿಯಾಗಿರುವ 20ನೆಯ ಶತಮಾನದ ಇತಿಹಾಸದಲ್ಲಿ ವಿಶ್ವದ ಜನಸಾಮಾನ್ಯರು ಸಾಕಷ್ಟು ಸಂಕಷ್ಟಕ್ಕೀಡಾಗಿದ್ದಾರೆ. 20ನೆಯ ಶತಮಾನದಲ್ಲಿ ಪ್ರಜಾತಂತ್ರ ವ್ಯವಸ್ಥೆ ಸರ್ವಾಧಿಕಾರಕ್ಕೆ ಶರಣಾಗಲು ಅವಕಾಶ ಮಾಡಿಕೊಟ್ಟ ಯೂರೋಪ್ […]

ಆನಂದ ಒಕ್ಕಾಲು, ಆತಂಕ ಮುಕ್ಕಾಲು

ಆನಂದ ಒಕ್ಕಾಲು, ಆತಂಕ ಮುಕ್ಕಾಲು

ಬಾಬ್ರಿ ಮಸೀದಿ ಪ್ರಕರಣದಲ್ಲಿ ವರಿಷ್ಠ ನ್ಯಾಯಾಲಯ ಕೊಟ್ಟಿರುವ ಆದೇಶವು ನ್ಯಾಯಾಂಗ ವ್ಯವಸ್ಥೆಯ ಆಳದಲ್ಲಿರುವ ಸಮಸ್ಯೆಗಳನ್ನು ಪರಿಗಣಿಸಿಲ್ಲ. ಸುಪ್ರಿಂ ಕೋರ್ಟು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಒಂದು ಉಪಕಾರವನ್ನೇ ಮಾಡಿದಂತಾಗಿದೆ. ಅದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧಂಸಮಾಡಿದ ಜಾಗದಲ್ಲಿ ರಾಮಮಂದಿರವನ್ನು ಕಟ್ಟುವ ವಿವಾದಾಸ್ಪದ ವಿಷಯವನ್ನು ಜೀವಂತವಾಗುಳಿಸುವುದನ್ನು ಖಾತರಿಗೊಳಿಸಿದೆ. ಹಾಗೆಂದು ಏಪ್ರಿಲ್ ೨೩ ರಂದು ಅದು ಸಿಬಿಐಗೆ ಕೊಟ್ಟ ನಿರ್ದೇಶನದ ಉದ್ದೇಶವೇನೂ ಇದಾಗಿರಲಿಲ್ಲ. ಆ ಆದೇಶದಲ್ಲಿ ವರಿಷ್ಯ ನ್ಯಾಯಾಲಯವು ಬಾಬ್ರಿ ಮಸೀದಿಯನ್ನು ನಾಶಮಾಡಲು ತಂತ್ರ ರೂಪಿಸಿದರೆಂದು ಎಲ್‌ಕೆ. ಅಡ್ವಾನಿ, ಮುರಳಿ […]

ರಾಷ್ಟ್ರಪತಿ ಚುನಾವಣೆ: ಒಮ್ಮತದ ಅಭ್ಯರ್ಥಿ ಹಾಕಲು   ವಿರೋಧಪಕ್ಷಗಳು ಸಮರ್ಥವಾಗಿವೆಯೇ?

ರಾಷ್ಟ್ರಪತಿ ಚುನಾವಣೆ:  ಒಮ್ಮತದ ಅಭ್ಯರ್ಥಿ ಹಾಕಲು   ವಿರೋಧಪಕ್ಷಗಳು ಸಮರ್ಥವಾಗಿವೆಯೇ?

         ಅಂತೂ ಇದೇ ಜುಲೈ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಚಟುವಟಿಕೆಗಳು ಗರಿಗೆದರಿದಂತೆ ಕಾಣುತ್ತಿದೆ…      ಕಾಂಗ್ರೇಸ್ ಅದ್ಯಕ್ಷೆ ಸೋನಿಯಾಗಾಂದಿ ಮತ್ತು ಬಿಹಾರದ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ ಬೇಟಿಯಾಗಿ ಮುಂದಿನ ರಾಷ್ಟ್ರಪತಿ ಚುನಾವಣೆಗೆ  ಜೆಡಿಯುನ  ಅದ್ಯಕ್ಷರಾದ ಶರದ್ ಯಾದವರನ್ನು ವಿರೋಧಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.  ಈ ನಿಟ್ಟಿನಲ್ಲಿ ಇದು ವಿರೋಧಪಕ್ಷಗಳ ಮೊದಲ ಹೆಜ್ಜೆಯಾಗಿದೆ. ಆಡಳಿತಾರೂಢ ಬಿಜೆಪಿಯಲ್ಲೂ ಈ ಬಗ್ಗೆ ಆಂತರೀಕವಾಗಿ ಪಿಸುಮಾತಿನ ಚರ್ಚೆಗಳು ನಡೆಯುತ್ತಿದ್ದು ಅಂತಿಮವಾಗಿ ಪ್ರದಾನಿ ನರೇಂದ್ರ ಮೋದಿಯವರೇ ಈ […]

ಹೀಗೊಂದು ಪತ್ರ!

ಹೀಗೊಂದು ಪತ್ರ!

ಪ್ರೀತಿಯ  ಕೆ, ಮೊನ್ನೆ ನೀವೆಲ್ಲ ಮಾತಾಡಿದ ಪರ್ಯಾಯ ರಾಜಕಾರಣದ ಮಾತುಗಳನ್ನು ಬಹಳ ಆಸಕ್ತಿಯಿಂದ, ಕುತೂಹಲದಿಂದ ಕೇಳಿಸಿಕೊಂಡೆ. ಬಹಳ ವಿದ್ವತ್ ಪೂರ್ಣವಾದ ಆ ಮಾತುಗಳನ್ನು, ಅದರಲ್ಲಿದ್ದ  ಸಮರ್ಥನೀಯ ಗುಣವನ್ನು ಅಲ್ಲಗೆಳೆಯಲು ಸಾದ್ಯವೇ ಇಲ್ಲವಾದರೂ ಆ ಕ್ಷಣಕ್ಕೆ ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಂತು ನಿಜ. ಆದರೆ ಆ ಪ್ರಶ್ನೆಗಳಿಗೆ ಒಂದು ಸ್ಪಷ್ಟರೂಪ ಬರಲು  ಒಂದಷ್ಟು ದಿನಗಳೇ ಬೇಕಾಗಿದ್ದು, ಇದೀಗ ಆ ಪ್ರಶ್ನೆಗಳನ್ನು ನಿನಗೆ ಕೇಳುತ್ತಿರುವೆ. ನಿಮ್ಮ  ಬದ್ದತೆಯನ್ನಾಗಲಿ,  ನೀವು ನಡೆಯಹೊರಟಿರುವ ಹಾದಿಯ ಬಗ್ಗೆಯಾಗಲಿ ನನೆ ಕಿಂಚಿತ್ತೂ  ಅನುಮಾನವಿಲ್ಲ ಮತ್ತು […]

ವ್ಯಾಪಂ ಹಗರಣ: ಮೌನದ ಕುತಂತ್ರ

ವ್ಯಾಪಂ ಹಗರಣ: ಮೌನದ ಕುತಂತ್ರ

ವ್ಯಾಪಂ ಹಗರಣದಲ್ಲಿ ಕಂಡುಬರುವ ಶಿಕ್ಷಾಭೀತಿ ಇಲ್ಲದಿರುವಿಕೆ ಮತ್ತು ಸಿನಿಕತನಗಳು ಕಂಗೆಡಿಸುವಂತಿದೆ. ಸದಾ ಹಗರಣಗಳ ಮತ್ತು ಭ್ರಷ್ಟಾಚಾರಗಳ ಸುದ್ದಿಗೆ ಬಕಾಸುರ ಹಸಿವಿನಿಂದ ಕಾಯುವ ಮಾಧ್ಯಮಗಳು ವ್ಯಾಪಂ ಹಗರಣ ಎಂದೇ ಕುಖ್ಯಾತಿ ಪಡೆದ ಮಧ್ಯಪ್ರದೇಶದ ವೃತ್ತಿ ತರಬೇತಿ ಇಲಾಖೆಯ ನೊಂದಾವಣೆ ಮತ್ತು ನೇಮಕಾತಿ ಹಗರಣದ ಹಿಂದೆ ಯಾಕೆ ಬೀಳಲಿಲ್ಲ ಎನ್ನುವುದು ಮಾತ್ರ ಯಾವ ವಿವರಣೆಗೂ ದಕ್ಕುತ್ತಿಲ್ಲ. ಆ ಹಗರಣದ ಬೃಹತ್ ಸ್ವರೂಪವು ೨೦೧೩ರ ವೇಳೆಗೆ ಬಯಲಿಗೆ ಬಿದ್ದ ನಂತರದಲ್ಲಿ ೪೫ಕ್ಕೂ ಹೆಚ್ಚು ಸಾಕ್ಷಿಗಳು ಮತ್ತು ಆರೋಪಿಗಳು ನಿಗೂಢ ರೀತಿಯಲ್ಲಿ ಸತ್ತಿದ್ದಾರೆ. […]