ದೇಶ

ದೇಶ

ಹಾಸ್ಯ ಮತ್ತು ಸಿಟ್ಟು ಒಟ್ಟಿಗೆ ವಾಸಿಸಬಲ್ಲವೇ?

ಹಾಸ್ಯ ಮತ್ತು ಸಿಟ್ಟು ಒಟ್ಟಿಗೆ ವಾಸಿಸಬಲ್ಲವೇ?

ಒಂದು ಒಳ್ಳೆಯ ವ್ಯಂಗ್ಯಚಿತ್ರ ನಗುವಿಗಿಂತ ಜಾಸ್ತಿ ಅಲೋಚನೆಯನ್ನು ಪ್ರಚೋದಿಸಬೇಕು. ಎನ್. ಪೊನ್ನಪ್ಪ ಬರೆಯುತ್ತಾರೆ: ಇದೇ ಅಕ್ಟೋಬರ್ ೨೯ರಂದು ತಮಿಳುನಾಡಿನ ವ್ಯಂಗ್ಯಚಿತ್ರಕಾರ ಜಿ. ಬಾಲಾ ಅವರನ್ನು ಪೊಲೀಸರು ಬಂಧಿಸಿದರು. ಏಕೆಂದರೆ ಇತ್ತೀಚೆಗೆ ಅವರು ಒಂದು ವ್ಯಂಗ್ಯಚಿತ್ರವನ್ನು ರಚಿಸಿದ್ದರು. ಅದರಲ್ಲಿ ಅವರು ಮೂರು ಬೆತ್ತಲೆ ಪುರುಷರನ್ನು ಚಿತ್ರಿಸಿದ್ದರು. ಆ ಮೂವರಲ್ಲಿ ಒಬ್ಬರು ಟೈ ಅನ್ನು ಮತ್ತೊಬ್ಬರು ಟೋಪಿಯನ್ನು ಧರಿಸಿದ್ದರು ಮತ್ತು ಮೂವರೂ ತಮ್ಮ ಮರ್ಮಾಂಗಗಳನ್ನು ನೋಟುಗಳ ಕಂತೆಯಿಂದ ಮುಚ್ಚಿಕೊಂಡಿದ್ದರು. ಅವರ ಕಾಲುಗಳ ಬಳಿ ಸುಟ್ಟು ಕರಕಲಾಗಿರುವ ಮಗುವೊಂದು ಮುಖ ಅಡಿಯಾಗಿ […]

ಗುಜರಾತ್ ಚುನಾವಣೆ – ಪ್ರದಾನಮಂತ್ರಿಗಳ ಪ್ರತಿಷ್ಠೆ

ಗುಜರಾತ್ ಚುನಾವಣೆ –  ಪ್ರದಾನಮಂತ್ರಿಗಳ ಪ್ರತಿಷ್ಠೆ

2014ರ ಸಾರ್ವತ್ರಿಕ ಚುನಾವಣೆಗಳ ನಂತರ ಮೊದಲಬಾರಿಗೆ ಬಾಜಪ ಮತ್ತದರ  ರಾಷ್ಟ್ರೀಯ ನಾಯಕರುಗಳಿಗೆ ಸೋಲಿನ ಭೀತಿ ಎದುರಾದಂತೆ ಕಾಣುತ್ತಿದೆ. ರಾಜ್ಯವೊಂದರ ವಿದಾನಸಭಾ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡು ಖುದ್ದು ಪ್ರದಾನಮಂತ್ರಿಯವರೇ ಚುನಾವಣಾ ಕಣದ ಜಂಗೀ ಕುಸ್ತಿಯ ಅಖಾಡಕ್ಕಿಳಿದು ನಿರಂತರ ಪ್ರಚಾರ ಕೈಗೊಳ್ಳುವುದನ್ನು ನಾವು ಹಿಂದೆಂದೂ ಇತಿಹಾಸದಲ್ಲಿ ನೋಡಿರಲಿಲ್ಲ, ಕೇಳಿರಲಿಲ್ಲ. ಅದೀಗ ನಮ್ಮ ಕಾಲದಲ್ಲೇ ನಡೆಯುತ್ತಿದೆ. ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ರಾಜ್ಯ ವಿದಾನಸಭಾ ಚುನಾವಣೆಗಳು ಅಂತಹದೊಂದು  ಸಂದರ್ಭಕ್ಕೆ ಸಾಕ್ಷಿಯಾಗುತ್ತಿವೆ.  ಕಳೆದ ಎರಡು ದಶಕಗಳಿಂದಲೂ ಸತತವಾಗಿ  ಗುಜರಾತಿನ ಅಧಿಕಾರದ ಚುಕ್ಕಾಣಿ ಹಿಡಿದಿರುವ […]

ಕಾಂಗ್ರೇಸ್ ಅದ್ಯಕ್ಷ ಗಾದಿಗೆ ರಾಹುಲ್ ಗಾಂದಿ

ಕಾಂಗ್ರೇಸ್ ಅದ್ಯಕ್ಷ ಗಾದಿಗೆ ರಾಹುಲ್ ಗಾಂದಿ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ ಅಕ್ಟೋಬರ್ 31ರ  ಒಳಗೆ  ಕಾಂಗ್ರೇಸ್ಸಿನ ಉಪಾದ್ಯಕ್ಷ ರಾಹುಲ್ ಗಾಂದಿ  ಪಕ್ಷದ ಅದ್ಯಕ್ಷ ಸ್ಥಾನದಲ್ಲಿ ವಿರಾಜಮಾನರಾಗಬೆಕಿತ್ತು. ಆದರೆ  ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿದಾನಸಬೆಗಳಿಗೆ ಘೋಷಣೆಯಾಗಿರುವ ಚುನಾವಣೆಗಳು ರಾಹುಲರ ಪದನ್ನೋತಿಗೆ ಅಡ್ಡಿಯಾಗಿವೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕಾಂಗ್ರೇಸ್ ಮತ್ತು ಬಾಜಪಕ್ಕೆ  ಮಾಡು ಇಲ್ಲವೇ ಮಡಿ ಎನ್ನುವಷ್ಟರ ಮಟ್ಟಿಗೆ ಮಹತ್ವ ಪಡೆದಿರುವ ಈ ಚುನಾವಣೆಗಳಿಗೆ ಸಿದ್ದತೆ ನಡೆದಿದ್ದು ಅಭ್ಯರ್ಥಿಗಳಿಗೆ ಪಕ್ಷದ ಟಿಕೇಟು ಹಂಚಿಕೆ ನಡೆದಿರುವ ಈ ಸಂಕೀರ್ಣ ಸಮಯದಲ್ಲಿ ಕಾರ್ಯಕರ್ತರಲ್ಲಿ ಅಲ್ಲದಿದ್ದರೂ ರಾಷ್ಟ್ರ […]

ವಿಫಲವಾದ ಅನರ್ಥಕ್ರಾಂತಿಗೆ ಯಾರು ಹೊಣೆ ?

ವಿಫಲವಾದ ಅನರ್ಥಕ್ರಾಂತಿಗೆ ಯಾರು ಹೊಣೆ ?

ನವಂಬರ್ 8 2016ರಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವೇ ನಿಬ್ಬೆರಗಾಗುವ ರೀತಿಯಲ್ಲಿ 500 ಮತ್ತು 1000 ರೂ ನೋಟುಗಳನ್ನು ರದ್ದುಪಡಿಸಿದಾಗ ಭಾರತ ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ ಎಂದು ಎಲ್ಲೆಡೆ ಜಯಘೋಷ ಮೊಳಗಿತ್ತು. ಐವತ್ತು ದಿನಗಳ ಕಾಲಾವಕಾಶ ಕೊಡಿ, ನೋಟು ರದ್ದತಿ ಅಥವಾ ಅಮಾನ್ಯೀಕರಣ ವಿಫಲವಾದರೆ ಅಥವಾ ಸರ್ಕಾರದ ಉದ್ದೇಶಿತ ಧ್ಯೇಯ ಈಡೇರದಿದ್ದರೆ ನನ್ನನ್ನು ಸಾರ್ವಜನಿಕವಾಗಿ ಸುಟ್ಟುಬಿಡಿ ಎಂದು ತಮ್ಮ ಮನ್ ಕಿ ಬಾತ್ ಮೂಲಕ ಘೋಷಿಸಿದ ಪ್ರಧಾನಿ ಮೋದಿ ದೇಶದ ಮಧ್ಯಮ ವರ್ಗಗಳ ವಂದಿಮಾಗಧ […]

ಎಪ್ಪತ್ತು ವರ್ಷಗಳು ಏಳು ಹೆಜ್ಜೆಗಳು ಮತ್ತು ಎಂಟನೆಯ ಆಯಾಮ

ಎಪ್ಪತ್ತು ವರ್ಷಗಳು ಏಳು ಹೆಜ್ಜೆಗಳು  ಮತ್ತು ಎಂಟನೆಯ ಆಯಾಮ

ಭಾರತದ ಪ್ರಜಾತಂತ್ರ ವ್ಯವಸ್ಥೆ ಏಳು ದಶಕಗಳನ್ನು ಪೂರೈಸುತ್ತಿದೆ. ಜೈ ಹಿಂದ್, ಭಾರತ್ ಮಾತಾ ಕಿ ಜೈ, ಹಿಂದೂಸ್ತಾನ್ ಹಮಾರ, ಇನ್‍ಕ್ವಿಲಾಬ್ ಜಿಂದಾಬಾದ್ ಮುಂತಾದ ಘೋಷಣೆಗಳ ಮೂಲಕ ಹೊಸ ಹುಟ್ಟನ್ನು ಪಡೆದ ಸ್ವತಂತ್ರ ಭಾರತ ಇಂದು ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗುವ ನಿಟ್ಟಿನಲ್ಲಿ ಭರದಿಂದ ಸಾಗುತ್ತಿದೆ. ನವ ಉದಾರವಾದ ತನ್ನ ಉತ್ಕøಷ್ಟ ಹಂತದಲ್ಲಿರುವ ಸಂದರ್ಭದಲ್ಲಿ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗುವುದೆಂದರೆ ಬಂಡವಾಳ ಕ್ರೋಢೀಕರಣದಲ್ಲಿ ಮುಂಚೂಣಿಯಲ್ಲಿರುವುದು ಎಂದೇ ಅರ್ಥ. ಅಥವಾ ಹಣಕಾಸು ಬಂಡವಾಳದ ಚಲನಶೀಲತೆಗೆ ಪೂರಕವಾಗಿರುವುದು ಎಂದರ್ಥ. ಹಣಕಾಸು ಬಂಡವಾಳ ಭಾರತದ ಔದ್ಯಮಿಕ […]

ಫಿರಂಗಿ (ಟ್ಯಾಂಕ್) ರಾಷ್ಟ್ರೀಯವಾದ

ಫಿರಂಗಿ (ಟ್ಯಾಂಕ್) ರಾಷ್ಟ್ರೀಯವಾದ

ಭಾರತದ ರಾಷ್ಟ್ರೀಯವಾದಿ ಪರಿಕಲ್ಪನೆಗಳಿಗೂ ಮತ್ತು ಸಶಸ್ತ್ರಪಡೆಗಳಿಗೂ ನಡುವೆ ಇದ್ದ ಸಂಬಂಧಗಳಲ್ಲಿ ಸ್ಪಷ್ಟವಾದ ಬದಲಾವಣೆಗಳು ಬರುತ್ತಿವೆ. ಈ ಹಿಂದೆ ಭಾರತೀಯರನ್ನು ನಾಗರಿಕರನ್ನಾಗಿಸುವ ಜವಾಬ್ದಾರಿಯನ್ನು ಬಿಳಿಯರು ತಮ್ಮ ಮೇಲೆ ತಾವೇ ಹೇರಿಕೊಂಡಿದ್ದರು. ಅದೇ ರೀತಿ ಇಂದು ಹಾಲಿ ಕೇಂದ್ರ ಸರ್ಕಾರ ಪ್ರತಿಯೊಬ್ಬ ಭಾರತೀಯನನ್ನು ರಾಷ್ಟ್ರೀಯವಾದಿನ್ನಾಗಿ ಮಾಡುವ ಜವಾಬ್ದಾರಿಯನ್ನು ತನ್ನ ಮೇಲೆ ಹೇರಿಕೊಂಡಿದೆ. ಇದರ ಹಿಂದೆ  ಭಾರತೀಯರು ಎಷ್ಟು ರಾಷ್ಟ್ರೀಯವಾದಿಗಳಾಗಿರಬೇಕಿತ್ತೋ ಅಷ್ಟು ರಾಷ್ಟ್ರೀಯವಾದಿಗಳಾಗಿಲ್ಲವೆಂಬ ತರ್ಕವಿರುವುದು ಸ್ಪಷ್ಟ. ಈ ಗುರಿಯನ್ನು ಸಾಧಿಸಲು ಅದು ಅನುಸರಿಸುತ್ತಿರುವ ವಿಧಾನವೇನೆಂದರೆ ಸಶಸ್ತ್ರಪಡೆಗಳ ಬಗ್ಗೆ ಗೌರವ ಮತ್ತು ಭಯವನ್ನು […]

ಗುಜರಾತ್ ಚುನಾವಣೆ: ಕಾಂಗ್ರೇಸ್ಸಿನ ಪುನಶ್ಚೇತನಕ್ಕೆ ಕಾರಣವಾಗಲಿವೆಯೇ?

ಗುಜರಾತ್ ಚುನಾವಣೆ: ಕಾಂಗ್ರೇಸ್ಸಿನ ಪುನಶ್ಚೇತನಕ್ಕೆ ಕಾರಣವಾಗಲಿವೆಯೇ?

ರಾಷ್ಟ್ರ ರಾಜಕಾರಣದಲ್ಲಿ  ಸರಿಸಾಟಿಯಿರದಂತೆ ಬೆಳೆಯುತ್ತಿರುವ  ಬಾರತೀಯ ಜನತಾ ಪಕ್ಷಕ್ಕೆ ಕಡಿವಾಣ ಹಾಕಲು ಕರ್ನಾಟಕವೇ  ಸರಿಯಾದ ರಾಜ್ಯವೆಂಬ ಮಾತು ಕಾಂಗ್ರೇಸ್ಸಿಗರಿಂದ ಮಾತ್ರವಲ್ಲದೆ ಪಕ್ಷಾತೀತವಾಗಿರುವ ಜನರಿಂದಲೂ ಕೇಳಿ ಬರುತ್ತಿದೆ. ಉತ್ತರದ ರಾಜ್ಯಗಳಂತೆ ಕರ್ನಾಟಕದ ಜನತೆ ಮತಾಂಧತೆಯ  ಮತ್ತಿನಲ್ಲಿ ಮತಚಲಾಯಿಸಲಾರರೆಂಬ ನಂಬಿಕೆಯೇ ಆ ಮಾತಿನ ಹಿಂದಿರುವ ಭರವಸೆ. ಆದರೆ  ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ರಾಜ್ಯ ವಿದಾನಸಭಾ ಚುನಾವಣೆಗಳಿಗೂ ಮುಂಚೆಯೇ ಬರಲಿರುವ  ಗುಜರಾತ್ ರಾಜ್ಯ ವಿದಾನಸಭಾ ಚುನಾವಣೆಗಳನ್ನು ಸರಿಯಾದ ರೀತಿಯಲ್ಲಿ ನಿಬಾಯಿಸಿದರೆ  ಅಲ್ಲಿಯೂ ಬಾಜಪವನ್ನು ಹಿಮ್ಮೆಟ್ಟಿಸಿ ಎರಡು ದಶಕಗಳ ನಂತರ ಕಾಂಗ್ರೇಸ್ಸನ್ನು […]

ಚುನಾವಣಾ ಮೈತ್ರಿಕೂಟದ ಪಾಠಗಳು

ಚುನಾವಣಾ ಮೈತ್ರಿಕೂಟದ ಪಾಠಗಳು

ಮಹಾಮೈತ್ರಿಕೂಟವನ್ನು (ಮಹಾಘಟ್‌ಬಂಧನ್) ತೊರೆಯುವ ಮೂಲಕ ನಿತೀಶ್ ಕುಮಾರ್ ಅವರು ಮೈತ್ರಿ ರಾಜಕಾರಣದ ಹುಳುಕುಗಳನ್ನು ಬಯಲುಗೊಳಿಸಿದ್ದಾರೆ. ರಾಜಕೀಯವೆಂಬುದು ಪರಸ್ಪರ ಸಂಬಂಧವಿಲ್ಲದ ಶಕ್ತಿಗಳನ್ನು ಒಟ್ಟಿಗೆ ತಂದು ಅಸಂಗತ ನಾಟಕಕ್ಕೆ ದಾರಿಮಾಡಿಕೊಡುತ್ತದೆ. ಜನತಾದಳ (ಯುನೈಟೆಡ್), ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟು ಸೇರಿ ರಚಿಸಿಕೊಂಡ ಮಹಾಘಟ್‌ಬಂಧನ್ (ಮಹಾ ಮೈತ್ರಿಕೂಟ) ವು ಒಂದು ಅತ್ಯಂತ ವಿವೇಕಯುತ ರಾಜಕೀಯ ನಡೆಯೆಂದೂ, ಆದರೆ ಅಷ್ಟೇ ಮಟ್ಟಿಗೆ ಒಂದು ವಿನಾಶಕಾರಿ ಹೆಜ್ಜೆಯೆಂದೂ ಏಕಕಾಲದಲ್ಲಿ ಕಂಡುಬಂದಿತ್ತು. ಮೈತ್ರಿಕೂಟದ ಅಂಗಪಕ್ಷಗಳಲ್ಲಿ ಸಮಾನವಾಗಿದ್ದ ಸಮಾಜವಾದಿ ಹಿನ್ನೆಲೆ, ಜಾತ್ಯತೀತತೆಯ ಪರಂಪರೆ […]

ಡಿ.ಕೆ.ಶಿ ಮನೆಯ ಮೇಲಿನ ಆದಾಯತೆರಿಗೆ ದಾಳಿ ಹಿಂದಿರುವ ಸತ್ಯಗಳು

ಡಿ.ಕೆ.ಶಿ ಮನೆಯ  ಮೇಲಿನ ಆದಾಯತೆರಿಗೆ ದಾಳಿ ಹಿಂದಿರುವ ಸತ್ಯಗಳು

ಅಗಸ್ಟ್ ಎಂಟರ ಗುಜರಾತಿನ ರಾಜ್ಯಸಭಾ ಚುನಾವಣೆಗೂ, ಕರ್ನಾಟಕದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಆದಾಯ ತೆರಿಗೆ ದಾಳಿಗೂ ಎತ್ತಣಿಂದೆತ್ತ ಸಂಬಂದವಯ್ಯಾ  ಎಂದು ಅಚ್ಚರಿ ಪಡುವ ಅಗತ್ಯವೇನಿಲ್ಲ. ಕಳೆದ ಮೂರು ವರ್ಷಗಳ ಕಾಲದ ದೇಶದ ರಾಜಕೀಯದ ಚದುರಂಗದಾಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ   ಇವೆರಡರ ಹಿಂದಿರುವ ನಿಗೂಢ ರಹಸ್ಯ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಈ ಬೆಳವಣಿಗೆಗಳನ್ನು   ಒಂದು ಕಡೆಯಿಂದ ನೋಡುತ್ತ ಹೋಗಬೇಕಾಗುತ್ತದೆ: ಆಗಸ್ಟ್ ಎಂಟನೆ ತಾರೀಖಿನಂದು ಗುಜರಾತಿನ ವಿದಾನಸಭೆಯಿಂದ ರಾಜ್ಯಸಭೆಗೆ ಮೂರು ಜನ ಸದಸ್ಯರು ಆಯ್ಕೆಯಾಗಿ ಹೋಗಬೇಕಾಗಿದೆ. ಸದ್ಯದ ವಿದಾನಸಭೆಯ ಬಲಾಬಲಗಳನ್ನು […]

ಇನ್ನೂ ಜಾತ್ಯಾತೀತತೆಯ ಭ್ರಮೆ ನಮ್ಮನ್ನು ಕಾಡಬೇಕೇ ?

ಇನ್ನೂ ಜಾತ್ಯಾತೀತತೆಯ ಭ್ರಮೆ ನಮ್ಮನ್ನು ಕಾಡಬೇಕೇ ?

ಬಿಹಾರದ ಮುಖ್ಯಮಂತ್ರಿ ನೀತಿಶ್ ಕುಮಾರ್ ಮತ್ತೊಮ್ಮೆ ಬೇಲಿ ಹಾರಿದ್ದಾರೆ. ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ ಮಿತ್ರರೂ ಇಲ್ಲ ಎಂದು ನಿರೂಪಿಸಲು ಬಹುಶಃ ಭಾರತದ ತುರ್ತುಪರಿಸ್ಥಿತಿಯ ಕೂಸುಗಳೇ ಸಾಕು ಎನಿಸುತ್ತದೆ. ಸಮಾಜವಾದ, ಲೋಹಿಯಾವಾದದ ನೆರಳಿನಲ್ಲಿ ಜಾತ್ಯಾತೀತತೆಯ ಪ್ರವಾದಿಗಳಂತೆ ವರ್ತಿಸುವ ಜೆಪಿ ಅಂದೋಲನದ ಎಲ್ಲ ಭ್ರೂಣಗಳೂ ಇಂದು ರಾಜಕೀಯ ಅರಾಜಕತೆಯ ಸಂಕೇತವಾಗಿರುವುದು ದುರಂತವಾದರೂ ಸತ್ಯ. ಬಹುಶಃ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೆಪಿ ಅಂದೋಲನ ಭಾರತೀಯ ಪ್ರಭುತ್ವ ರಾಜಕಾರಣದ ವಿರುದ್ಧ ಹೋರಾಡಿದ್ದರೆ ಬಹುಶಃ ಅವರ ಕಾಂಗ್ರೆಸ್ ವಿರೋಧಿ ಧೋರಣೆಯಿಂದ ಜನಿಸಿದ ಈ ಭ್ರೂಣಗಳು […]