ದೇಶ

ದೇಶ

ನಿರ್ಲಕ್ಷಿಸಿರುವ ಈಶಾನ್ಯರಾಜ್ಯಗಳ ಚುನಾವಣೆಗಳು

ನಿರ್ಲಕ್ಷಿಸಿರುವ ಈಶಾನ್ಯರಾಜ್ಯಗಳ ಚುನಾವಣೆಗಳು

ಇಂಡಿಯಾದ ರಾಜಕಾರಣವೇ ಅಂತಾದ್ದು. ಅದು ಲೋಕಸಭಾ ಚುನಾವಣೆಗಳಿರಲಿ ಇಲ್ಲ ರಾಜ್ಯ ವಿದಾನಸಭಾ ಚುನಾವಣೆಗಳಿರಲಿ  ಮಾಧ್ಯಮಗಳು ಅವನ್ನು ಒಂದು ಯುದ್ದವೆಂಬಂತೆ ಚಿತ್ರಿಸುತ್ತ ತಿಂಗಳುಗಟ್ಟಳೆ ಚುನಾವಣಾ ವಾತಾವರಣವನ್ನು ದೇಶದಾದ್ಯಂತ ಸೃಷ್ಠಿಸುವುದು ಮಾಮೂಲಿ. ಆದರೆ  ಇದು ಅನ್ವಯವಾಗುವುದು ದೇಶದ ದೊಡ್ಡ ಮತ್ತು ಅಭಿವೃದ್ದಿಯಾದ ಕೆಲವೇಕೆಲವು ರಾಜ್ಯಗಳ ಚುನಾವಣೆಗಳಿಗೆ ಮಾತ್ರ.. ಆಗಾಗ ಇಂಡಿಯಾದ ಕೇಂದ್ರ ಸರಕಾರಗಳು ಮತ್ತು ರಾಷ್ಟ್ರೀಯ ಮಾಧ್ಯಮಗಳು ತಮ್ಮನ್ನು ನಿರ್ಲಕ್ಷಿಸಿವೆ ಎನ್ನುವ ಆರೋಪವನ್ನು  ಈಶಾನ್ಯರಾಜ್ಯಗಳ ಜನತೆ ಮಾಡುತ್ತಾ ಬಂದಿದ್ದರೆ ಅದಕ್ಕೆ ಇದೂ ಒಂದು ಕಾರಣ. ಕೇವಲ ಚುನಾವಣೆಗಳು ಮಾತ್ರವಲ್ಲ, ಈಶಾನ್ಯರಾಜ್ಯಗಳ […]

ಬಾಜಪ ಮತ್ತು ಕಾಂಗ್ರೇಸ್ ತದ್ರೂಪಿಗಳು!

ಬಾಜಪ ಮತ್ತು ಕಾಂಗ್ರೇಸ್ ತದ್ರೂಪಿಗಳು!

ಬದಲಾದ ಸನ್ನಿವೇಶಗಳಿಗೆ ತಕ್ಕಂತೆ ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳ ಪಾತ್ರನಿರ್ವಹಣೆ ಒಂದೇ ದಿಕ್ಕಿನಲ್ಲಿ ನಡೆಯುತ್ತಿರುವಂತೆ ಕಾಣುತ್ತಿದೆ. ಮೊನ್ನೆ ನಡೆದ ಗುಜರಾತ್ ಚುನಾವಣೆಗಳ ಪ್ರಚಾರ ವೈಖರಿಯನ್ನು ಮತ್ತು ಮುಂದಿನ ತಿಂಗಳುಗಳಲ್ಲಿ ನಡೆಯಲಿರುವ ಕನರ್ಾಟಕ ರಾಜ್ಯದ ವಿದಾನಸಭೆಗಳಿಗೆ ನಡೆಯುತ್ತಿರುವ ತಯಾರಿಗಳನ್ನು ಸೂಕ್ಷ್ಮವಾಗಿ ನೋಡಿದರೆ ಈ ಎರಡು ಪಕ್ಷಗಳೊಳಗೆ ನಡೆಯುತ್ತಿರುವ ಬದಲಾವಣೆಗಳನ್ನು  ಅರ್ಥಮಾಡಿಕೊಳ್ಳಬಹುದಾಗಿದೆ.   ಕಾಂಗ್ರೇಸ್ ಪಕ್ಷ ಬಾಜಪದ ಮತ್ತೊಂದು ರೂಪವಾಗಿ, ಬಾಜಪ ಕಾಂಗ್ರೇಸ್ಸಿನ ಮತ್ತೊಂದು ರೂಪವಾಗಿ ಹೊರಹೊಮ್ಮುತ್ತಿರುವ ಈ ಬದಲಾವಣೆ ಪ್ರಾರಂಭವಾಗಿದ್ದು ಬಹುಶ: 2017ರ ಹಲವು ರಾಜ್ಯಗಳ ಚುನಾವಣಾ ಪಲಿತಾಂಶಗಳು ಹೊರಬಿದ್ದನಂತರವೇ. […]

ಬಾಜಪ: ಹೈಕಮ್ಯಾಂಡ್ ಸಂಸ್ಕೃತಿಯ ಸರ್ವಾಧಿಕಾರಿ ಧೋರಣೆ

ಬಾಜಪ: ಹೈಕಮ್ಯಾಂಡ್ ಸಂಸ್ಕೃತಿಯ ಸರ್ವಾಧಿಕಾರಿ ಧೋರಣೆ

ತಾನೇನು ಕಾಂಗ್ರೇಸ್ ಪಕ್ಷಕ್ಕಿಂತ ಭಿನ್ನವೇನಲ್ಲ! ಎನ್ನುವುದನ್ನು ಸಾಬೀತು ಪಡಿಸಲು ಬಾಜಪ ಪಣತೊಟ್ಟಂತೆ ಕಾಣುತ್ತಿದೆ. ಈ ಹಿಂದೆ ಕಾಂಗ್ರೇಸ್ಸಿನ ಹೈಕಮ್ಯಾಂಡ್ ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದ ಬಾಜಪ ಇಂದು ಸ್ವತ: ಅದೇ ಹೈಕಮ್ಯಾಂಡ್ ಸಂಸ್ಕೃತಿಯನ್ನು ಅಳವಡಿಸಿಕೊಂಡು ತನ್ನ ಪಕ್ಷದ ಪ್ರಾದೇಶಿಕ ನಾಯಕರುಗಳ ರಾಜಕೀಯ ನಿರ್ದಾರ ಕೈಗೊಳ್ಳುವ ಸ್ವಾತಂತ್ರವನ್ನು, ಸ್ಥಳೀಯ ಕಾರ್ಯಕರ್ತರುಗಳ   ಅಭಿಪ್ರಾಯ ಸ್ವಾತಂತ್ರವನ್ನು ಹರಣ ಮಾಡುತ್ತ ಸಾಗುತ್ತಿದೆ. ಬಹಳ ಹಿಂದಿನಿಂದಲೂ ಬಹುಶ: ಮಾಜಿ ಪ್ರದಾನಮಂತ್ರಿಗಳಾದ  ಇಂದಿರಾಗಾಂದಿಯವರ ಕಾಲದಿಂದಲೂ ಕಾಂಗ್ರೆಸ್ಪಕ್ಷ ಹೈಕಮ್ಯಾಂಡ್ ಸಂಸ್ಕೃತಿಯನ್ನು ಪಾಲಿಸಿಕೊಂಡು ಬರುತ್ತಿದ್ದು,  ರಾಜ್ಯನಾಯಕರುಗಳಿಗೆ  ಯವುದೇ ಸ್ವಾತಂತ್ರ  […]

ಮಂಗಮಾಯವಾದ ಭ್ರಷ್ಟಾಚಾರ!

ಮಂಗಮಾಯವಾದ ಭ್ರಷ್ಟಾಚಾರ!

೨–ಜಿ ಹಗರಣವು ಖುಲಾಸೆಯಾಗಿರುವ ರೀತಿಯು ಹೇಗೆ ಭ್ರಷ್ಟಾಚಾರವನ್ನು  ಒಂದು ಸಿನಿಕ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲಾಗುತ್ತಿದೆಯೆಂಬುದನ್ನು ಬಯಲುಮಾಡುತ್ತದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ೨-ಜಿ ಹಗರಣದ ಎಲ್ಲಾ ಆರೋಪಿಗಳನ್ನು ವಿಚಾರಣಾ ನ್ಯಾಯಲಯವು ಬಿಡುಗಡೆ ಮಾಡಿರುವುದು ಒಂದು ಆಶ್ಚರ್ಯಕರ ಸಂಗತಿಯೇ ಸರಿ. ಅದಕ್ಕಿಂತ ಆಶ್ಚರ್ಯಕರವಾದ ಸಂಗತಿಯೆಂದರೆ ಅತ್ಯಂತ ಕಡಿಮೆ ಅವಧಿಯಲ್ಲೇ ಈ ಹಗರಣವು ಸಾರ್ವಜನಿಕರ ನೆನಪಿನಿಂದ ಮರೆಯಾಗಿರುವುದು. ಎರಡನೆ ಪೀಳಿಗೆಯ (೨-ಜಿ)ಮೊಬೈಲ್ ತರಂಗಾಂತರವನ್ನು ಮೊದಲು ಬಂದವರಿಗೆ, ಮೊದಲ ಆದ್ಯತೆಯ ತತ್ವದಡಿ ಹರಾಜು ಮಾಡುವಾಗ ಅಪಾರ ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಈ ದೇಶದಲ್ಲಿ […]

ಗುಜರಾತ್ ಚುನಾವಣೆ: ಆದಿವಾಸಿಗಳ ಕಡೆಗಣಿಸಿ ಸೋತ ಕಾಂಗ್ರೇಸ್

ಗುಜರಾತ್ ಚುನಾವಣೆ: ಆದಿವಾಸಿಗಳ ಕಡೆಗಣಿಸಿ ಸೋತ ಕಾಂಗ್ರೇಸ್

ಕಾಂಗ್ರೇಸ್ ಪಕ್ಷದ ಸರ್ವ ಪ್ರಯತ್ನಗಳ ನಂತರವೂ ಗುಜರಾತ್ ವಿದಾನಸಭಾ ಚುನಾವಣೆಗಳಲ್ಲಿ ಬಾಜಪ 99 ಸ್ಥಾನಗಳನ್ನು  ಗೆದ್ದು ಅದಿಕಾರ ಹಿಡಿಯುವಲ್ಲಿ  ಅದಕ್ಕೆ  ನೆರವಾಗಿದ್ದು  ಗುಜರಾತಿನ ಆದಿವಾಸಿಗಳ ಮತಗಳು. ನಿಜ, ಈ ಬಾರಿಯ ಚುನಾವಣೆಗಳನ್ನು ಗೆಲ್ಲಲು ಬೇಕಾದಂತಹ ಎಲ್ಲ ರೀತಿಯ ಜಾತಿ ಸಮೀಕರಣಗಳನ್ನು ಬಳಸಿದ  ಕಾಂಗ್ರೇಸ್ ಅದಕ್ಕಾಗಿಯೇ  ಹಾರ್ದಿಕ್ ಪಟೇಲ್ ಮೂಲಕ ಪಾಟೀದಾರರ, ಅಲ್ಪೇಶ್ ಠಾಕೂರ್ ಮೂಲಕ ಹಿಂದುಳಿದ ಮತದಾರರನ್ನು, ಜಿಗ್ನೇಶ್ ಮೆವಾನಿಯವರ ಮೂಲಕ ದಲಿತ ಸಮುದಾಯವನ್ನು ತನ್ನೆಡಗೆ ಸೆಳೆಯುವ ಸರ್ವ ಪ್ರಯತ್ನಗಳನ್ನೂ ಮಾಡಿ ಭಾಗಶ; ಯಶಸ್ಸನ್ನು ಕಂಡು ಬಾಜಪ […]

ಥ್ಯಾಂಕ್ಯು ವೆರಿಮಚ್ ಸೋನಿಯಾಜಿ……!

ಥ್ಯಾಂಕ್ಯು ವೆರಿಮಚ್ ಸೋನಿಯಾಜಿ……!

ಸೋನಿಯಾ ಗಾಂದಿ! 1984ರ ಅಕ್ಟೋಬರ್31-ಅದೊಂದು ದಿನದವರೆಗೂ ಆಕೆ ತನ್ನ ಫೈಲಟ್ ಗಂಡ ಮತ್ತು ಎರಡು ಮಕ್ಕಳ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ ಸಾಮಾನ್ಯ ಮಹಿಳೆ!ವಿಶ್ವದ ಶಕ್ತಿಶಾಲಿರಾಷ್ಟ್ರವೊಂದರ ಪ್ರದಾನಮಂತ್ರಿಯ ಸೊಸೆಯಾಗಿದ್ದರೂ ತನ್ನ ಪಾಡಿಗೆ ತಾನುಬದುಕುತ್ತ   ರಾಜಕಾರಣದ ಯಾವ ಸೋಂಕನ್ನೂ ಅಂಟಿಸಿಕೊಳ್ಳದಂತೆ ಬದುಕಿದಾಕೆ. ಆದರೆ ಅದೊಂದು ದಿನ ಪ್ರದಾನಿಯಾಗಿದ್ದ ತನ್ನಗಂಡನ ತಾಯಿ  ಹತ್ಯೆಗೀಡಾದಾಗ ಕಂಗೆಟ್ಟು ಕೂತ ಗಂಡನ ತೋಳುಗಳನ್ನ  ಬಳಸಿ ಹಿಡಿದು ಆತನಿಗೆ ಆಸರೆ ನೀಡಿ ಸಾಂತ್ವಾನ ಹೇಳಬೇಕಾಗಿ ಬಂತು. ಕಾಂಗ್ರೆಸ್ಸಿನ ಘಟಾನುಘಟಿ ನಾಯಕರುಗಳೆಲ್ಲ ರಾಜೀವ್ ಗಾಂದಿಯವರನ್ನುಪಕ್ಷದ ಅದ್ಯಕ್ಷರನ್ನಾಗಿಸಿ ಪ್ರದಾನಮಂತ್ರಿಯನ್ನಾಗಿ ಮಾಡಲು […]

ಬಹುಕೋನ ಸ್ಪರ್ದಿಯಿಂದ ಕ್ಲಿಷ್ಟಗೊಳ್ಳುತ್ತಿರುವ ಗುಜರಾತ್ ಚುನಾವಣೆ

ಬಹುಕೋನ ಸ್ಪರ್ದಿಯಿಂದ ಕ್ಲಿಷ್ಟಗೊಳ್ಳುತ್ತಿರುವ ಗುಜರಾತ್ ಚುನಾವಣೆ

ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ರಾಜ್ಯ ವಿದಾನಸಭಾ ಚುನಾವಣೆಯಲ್ಲಿ ಬಾಜಪೇತರ ಪಕ್ಷಗಳು ಮೈತ್ರಿಕೂಟವೊಂದನ್ನು ರಚಿಸಿಕೊಳ್ಳುವುದರತ್ತ ಮನಸ್ಸು ಕೊಡದೆ ಸ್ವತಂತ್ರವಾಗಿ ಸ್ಪರ್ದಿಸುತ್ತಿವೆ. ಹೀಗಾಗಿ ಸತತವಾಗಿ ಇಪ್ಪತ್ತೆರಡು ವರ್ಷಗಳಿಂದ ಅಡಳಿತ ನಡೆಸುತ್ತಿರುವ ಬಾಜಪ ಸರಕಾರಕ್ಕಿರಬಹುದಾದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಅದನ್ನು ಸೋಲಿಸುವ ಅವಕಾಶವೊಂದನ್ನು ಹೆಚ್ಚೂ ಕಡಿಮೆ ಕೈಚೆಲ್ಲಿದಂತೆ ಕಾಣುತ್ತಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೇಸ್ ಸೇರಿದಂತೆ, ಪ್ರಾದೇಶಿಕ ಪಕ್ಷಗಳಾದ ಕುಮಾರಿ ಮಾಯಾವತಿಯವರ ಬಹುಜನಪಕ್ಷ, ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷ, ಶರದ್ಪವಾರರ ಎನ್.ಸಿ.ಪಿ. ಮತ್ತು ಶಂಕರ್ ಸಿಂಗ್ ವಘೇಲಾರವರ ಆಲ್ […]

ಹಾಸ್ಯ ಮತ್ತು ಸಿಟ್ಟು ಒಟ್ಟಿಗೆ ವಾಸಿಸಬಲ್ಲವೇ?

ಹಾಸ್ಯ ಮತ್ತು ಸಿಟ್ಟು ಒಟ್ಟಿಗೆ ವಾಸಿಸಬಲ್ಲವೇ?

ಒಂದು ಒಳ್ಳೆಯ ವ್ಯಂಗ್ಯಚಿತ್ರ ನಗುವಿಗಿಂತ ಜಾಸ್ತಿ ಅಲೋಚನೆಯನ್ನು ಪ್ರಚೋದಿಸಬೇಕು. ಎನ್. ಪೊನ್ನಪ್ಪ ಬರೆಯುತ್ತಾರೆ: ಇದೇ ಅಕ್ಟೋಬರ್ ೨೯ರಂದು ತಮಿಳುನಾಡಿನ ವ್ಯಂಗ್ಯಚಿತ್ರಕಾರ ಜಿ. ಬಾಲಾ ಅವರನ್ನು ಪೊಲೀಸರು ಬಂಧಿಸಿದರು. ಏಕೆಂದರೆ ಇತ್ತೀಚೆಗೆ ಅವರು ಒಂದು ವ್ಯಂಗ್ಯಚಿತ್ರವನ್ನು ರಚಿಸಿದ್ದರು. ಅದರಲ್ಲಿ ಅವರು ಮೂರು ಬೆತ್ತಲೆ ಪುರುಷರನ್ನು ಚಿತ್ರಿಸಿದ್ದರು. ಆ ಮೂವರಲ್ಲಿ ಒಬ್ಬರು ಟೈ ಅನ್ನು ಮತ್ತೊಬ್ಬರು ಟೋಪಿಯನ್ನು ಧರಿಸಿದ್ದರು ಮತ್ತು ಮೂವರೂ ತಮ್ಮ ಮರ್ಮಾಂಗಗಳನ್ನು ನೋಟುಗಳ ಕಂತೆಯಿಂದ ಮುಚ್ಚಿಕೊಂಡಿದ್ದರು. ಅವರ ಕಾಲುಗಳ ಬಳಿ ಸುಟ್ಟು ಕರಕಲಾಗಿರುವ ಮಗುವೊಂದು ಮುಖ ಅಡಿಯಾಗಿ […]

ಗುಜರಾತ್ ಚುನಾವಣೆ – ಪ್ರದಾನಮಂತ್ರಿಗಳ ಪ್ರತಿಷ್ಠೆ

ಗುಜರಾತ್ ಚುನಾವಣೆ –  ಪ್ರದಾನಮಂತ್ರಿಗಳ ಪ್ರತಿಷ್ಠೆ

2014ರ ಸಾರ್ವತ್ರಿಕ ಚುನಾವಣೆಗಳ ನಂತರ ಮೊದಲಬಾರಿಗೆ ಬಾಜಪ ಮತ್ತದರ  ರಾಷ್ಟ್ರೀಯ ನಾಯಕರುಗಳಿಗೆ ಸೋಲಿನ ಭೀತಿ ಎದುರಾದಂತೆ ಕಾಣುತ್ತಿದೆ. ರಾಜ್ಯವೊಂದರ ವಿದಾನಸಭಾ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡು ಖುದ್ದು ಪ್ರದಾನಮಂತ್ರಿಯವರೇ ಚುನಾವಣಾ ಕಣದ ಜಂಗೀ ಕುಸ್ತಿಯ ಅಖಾಡಕ್ಕಿಳಿದು ನಿರಂತರ ಪ್ರಚಾರ ಕೈಗೊಳ್ಳುವುದನ್ನು ನಾವು ಹಿಂದೆಂದೂ ಇತಿಹಾಸದಲ್ಲಿ ನೋಡಿರಲಿಲ್ಲ, ಕೇಳಿರಲಿಲ್ಲ. ಅದೀಗ ನಮ್ಮ ಕಾಲದಲ್ಲೇ ನಡೆಯುತ್ತಿದೆ. ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ರಾಜ್ಯ ವಿದಾನಸಭಾ ಚುನಾವಣೆಗಳು ಅಂತಹದೊಂದು  ಸಂದರ್ಭಕ್ಕೆ ಸಾಕ್ಷಿಯಾಗುತ್ತಿವೆ.  ಕಳೆದ ಎರಡು ದಶಕಗಳಿಂದಲೂ ಸತತವಾಗಿ  ಗುಜರಾತಿನ ಅಧಿಕಾರದ ಚುಕ್ಕಾಣಿ ಹಿಡಿದಿರುವ […]

ಕಾಂಗ್ರೇಸ್ ಅದ್ಯಕ್ಷ ಗಾದಿಗೆ ರಾಹುಲ್ ಗಾಂದಿ

ಕಾಂಗ್ರೇಸ್ ಅದ್ಯಕ್ಷ ಗಾದಿಗೆ ರಾಹುಲ್ ಗಾಂದಿ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ ಅಕ್ಟೋಬರ್ 31ರ  ಒಳಗೆ  ಕಾಂಗ್ರೇಸ್ಸಿನ ಉಪಾದ್ಯಕ್ಷ ರಾಹುಲ್ ಗಾಂದಿ  ಪಕ್ಷದ ಅದ್ಯಕ್ಷ ಸ್ಥಾನದಲ್ಲಿ ವಿರಾಜಮಾನರಾಗಬೆಕಿತ್ತು. ಆದರೆ  ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿದಾನಸಬೆಗಳಿಗೆ ಘೋಷಣೆಯಾಗಿರುವ ಚುನಾವಣೆಗಳು ರಾಹುಲರ ಪದನ್ನೋತಿಗೆ ಅಡ್ಡಿಯಾಗಿವೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕಾಂಗ್ರೇಸ್ ಮತ್ತು ಬಾಜಪಕ್ಕೆ  ಮಾಡು ಇಲ್ಲವೇ ಮಡಿ ಎನ್ನುವಷ್ಟರ ಮಟ್ಟಿಗೆ ಮಹತ್ವ ಪಡೆದಿರುವ ಈ ಚುನಾವಣೆಗಳಿಗೆ ಸಿದ್ದತೆ ನಡೆದಿದ್ದು ಅಭ್ಯರ್ಥಿಗಳಿಗೆ ಪಕ್ಷದ ಟಿಕೇಟು ಹಂಚಿಕೆ ನಡೆದಿರುವ ಈ ಸಂಕೀರ್ಣ ಸಮಯದಲ್ಲಿ ಕಾರ್ಯಕರ್ತರಲ್ಲಿ ಅಲ್ಲದಿದ್ದರೂ ರಾಷ್ಟ್ರ […]

1 2 3 8