ವಿದೇಶ

ವಿದೇಶ

ಸಮಾನತೆ ಸಮೃದ್ಧಿ ಕೋರಿ ಎಡಪಂಥೀಯರಿಗೆ ಮತ

ಸಮಾನತೆ  ಸಮೃದ್ಧಿ  ಕೋರಿ ಎಡಪಂಥೀಯರಿಗೆ ಮತ

ಸ್ಥಿರತೆಗಾಗಿ ನೀಡಿದ ಮತ ಸಮಾನತೆ ಮತ್ತು ನ್ಯಾಯಗಳಿಂದ ಕೂಡಿದ ಸಮೃದ್ಧಿಯನ್ನು ಕೋರಿ ನೇಪಾಳಿಗಳು ಎಡಪಂಥೀಯರಿಗೆ ಮತನೀಡಿದ್ದಾರೆ. ೨೦೧೫ರಲ್ಲಿ ಅಳವಡಿಸಿಕೊಂಡ ಹೊಸ ಸಂವಿಧಾನದಡಿಯಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ನೇಪಾಳಿ ಜನರು ನೇಪಾಳಿ ಕಾಂಗ್ರೆಸ್‌ನ ನೇತೃತ್ವದ ಮಿತ್ರಕೂಟವನ್ನು ತಿರಸ್ಕರಿಸಿ ಎಡ ಮೈತ್ರಿಕೂಟವನ್ನು ಆಯ್ಕೆಮಾಡಿದ್ದಾರೆ. ಇದು  ೧೯೯೦ರ ನಂತರದಲ್ಲಿ ಎಡಪಕ್ಷಗಳಿಗೆ ದೊರೆತಿರುವ ಅತಿ ದೊಡ್ಡ ಬಹುಮತವಾಗಿದೆ. ಕಮ್ಯುನಿಸ್ಟ್ ಪಾರ್‍ಟಿ ಆಫ್ ನೇಪಾಳ್ (ಯೂನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್) ಅಥವಾ ಯುಎಂಎಲ್ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ (ಮಾವೋಯಿಸ್ಟ್- ಸೆಂಟರ್) ಅಥವಾ ಸಿಪಿಎನ್ […]

ಇಸ್ರೇಲ್‍ನಲ್ಲಿ ಮೋದಿ-ಆತ್ಮಸಾಕ್ಷಿ ಇದ್ದರೆ ಆತ್ಮಾವಲೋಕನ ಅಗತ್ಯ

ಇಸ್ರೇಲ್‍ನಲ್ಲಿ ಮೋದಿ-ಆತ್ಮಸಾಕ್ಷಿ ಇದ್ದರೆ ಆತ್ಮಾವಲೋಕನ ಅಗತ್ಯ

ಇಸ್ರೇಲ್‍ಗೆ ಅಧಿಕೃತ ಭೇಟಿ ನೀಡಿದ ಭಾರತದ ಪ್ರಪ್ರಥಮ ಪ್ರಧಾನಿ ನರೇಂದ್ರ ಮೋದಿ ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಳ್ಳುವ ಮುನ್ನ ಭಾರತದ ಪ್ರಜ್ಞಾವಂತ ಸಮಾಜ ಸ್ವತಃ ಕೆಲವು ಪ್ರಶ್ನೆಗಳಿಗೆ ಉತ್ತರ ಶೋಧಿಸಬೇಕಿದೆ. ಇಲ್ಲಿ ಇಸ್ರೇಲ್ ಭೇಟಿಯ ಔಚಿತ್ಯಕ್ಕಿಂತಲೂ ಹೆಚ್ಚು ಪ್ರಧಾನವಾಗುವುದು ಈ ಭೇಟಿಯ ವೈಭವೀಕರಣ ಮತ್ತು ಸ್ವಪ್ರಶಂಸೆಯ ವಂಧಿಮಾಗದ ಪ್ರವೃತ್ತಿ. ಪ್ರಜಾತಂತ್ರ ಮೌಲ್ಯಗಳನ್ನು ಪ್ರತಿನಿಧಿಸುವ ಯಾವುದೇ ವ್ಯಕ್ತಿ ದ್ವೇಷ ರಾಜಕಾರಣವನ್ನು ಅನುಮೋದಿಸಕೂಡದು. ರಾಜತಾಂತ್ರಿಕ ಸಂಬಂಧಗಳ ವಿಚಾರದಲ್ಲೂ ಇದು ಸತ್ಯ. ಆದರೆ ಈ ಪ್ರಜಾತಂತ್ರ ಮೌಲ್ಯಗಳನ್ನು ವಿಶ್ವ ಜನಸಮುದಾಯಗಳ ಹಿತಾಸಕ್ತಿಯ […]

ಚೀನಾ ಪ್ರಾರಂಭಿಸಿರುವ ಹೊಸ ಸಿಲ್ಕ್ ರಸ್ತೆ

ಚೀನಾ ಪ್ರಾರಂಭಿಸಿರುವ ಹೊಸ ಸಿಲ್ಕ್ ರಸ್ತೆ

ಚೀನಾ ಪ್ರಾರಂಭಿಸಿರುವ ಒನ್ ರೋಡ್–ಒನ್ ಬೆಲ್ಟ್ (ಒಂದು ವಲಯ– ಒಂದು ರಸ್ತೆ) ಯೋಜನೆಯು ಒಂದು ಅತ್ಯಂತ ಜಾಣತನದ ರಾಜಕೀಯ–ಭೌಗೋಳಿಕ ಮತ್ತು ಆರ್ಥಿಕ ನಡೆಯಾಗಿದೆ. ಜಗತ್ತಿನ ಎರಡನೇ ದೊಡ್ಡ ಆರ್ಥಿಕತೆಯೆಂಬ ಸ್ಥಾನ ಪಡೆದಿರುವ ಚೀನಾ ಈಗ ಅತ್ಯಂತ ತ್ವರಿತವಾಗಿ ಮೊದಲನೇ ಸ್ಥಾನವನ್ನು ಆಕ್ರಮಿಸುವತ್ತ ದಾಪುಗಾಲಿಡುತ್ತಿದೆ. ಇದನ್ನು ಅದು ಏಕಕಾಲಕ್ಕೆ ರಾಜಕೀಯ-ಭೌಗೋಳಿಕ ಲಾಭವನ್ನೂ ಮತ್ತು ಸ್ಪರ್ಧಾತ್ಮಕ ಆರ್ಥಿಕ ಲಾಭಗಳೆರಡನ್ನೂ ಸಾಧಿಸುವ ಒಂದು ದೊಡ್ಡ ವ್ಯೂಹತಂತ್ರದ ಭಾಗವಾಗಿಯೇ ಯೋಜಿಸಿದೆ. ಮೇ ೧೪ ಮತ್ತು ೧೫ ರಂದು ಚೀನಾದ ಬೀಜಿಂಗ್‌ನಲ್ಲಿ ಆಯೋಜಿಸಲಾಗಿದ್ದ ಬೆಲ್ಟ್ […]

ಭಾರತಕ್ಕೆ ಹರಿಯುತ್ತಿದ್ದ ವಿದೇಶಿ ವಿನಿಮಯ ಹಣದಲ್ಲಿ ಇಳಿಮುಖ

ಭಾರತಕ್ಕೆ ಹರಿಯುತ್ತಿದ್ದ ವಿದೇಶಿ ವಿನಿಮಯ ಹಣದಲ್ಲಿ   ಇಳಿಮುಖ

ಕಳವಳಕಾರಿ ಆರ್ಥಿಕ ಸೂಚನೆಗಳು ವಿದೇಶಗಳಲ್ಲಿರುವ ಭಾರತೀಯ ಕಾರ್ಮಿಕರಿಂದ  ಭಾರತಕ್ಕೆ ಹರಿಯುತ್ತಿದ್ದ ಹಣಪಾವತಿಗಳು ಇಳಿಮುಖಗೊಂಡಿರುವುದು ಹಲವಾರು ಕಾರಣಗಳಿಂದ ಕಳವಳಕಾರಿಯಾಗಿದೆ. ಮುಂದುವರೆದ ದೇಶಗಳಲ್ಲಿ ದುಡಿಯುತ್ತಿರುವ ಭಾರತೀಯ ಮೂಲದ ಕಾರ್ಮಿಕರ ಮೂಲಕ ಭಾರತಕ್ಕೆ ಹರಿದು ಬರುತ್ತಿದ್ದ ಪಾವತಿಗಳ ಮೊತ್ತವು ೨೦೧೫ ಮತ್ತು ೨೦೧೬ರ ಎರಡೂ ಸಾಲಿನಲ್ಲೂ ಇಳಿಮುಖಗೊಂಡಿದೆ. ೨೦೧೫ರಲ್ಲಿ ಈ ಒಳಹರಿವಿನ ಪ್ರಮಾಣ ಶೇ. ೧ ರಷ್ಟು ಕಡಿತವಾದರೆ, ೨೦೧೬ರಲ್ಲಿ ಈ ಪ್ರಮಾಣ ಶೇ.೨.೪ಕ್ಕೆ ಕುಸಿದಿದೆ. ಭಾರತದ ಮಟ್ಟಿಗಂತೂ ಈ ಕುಸಿತ ಶೇ.೯ ರಷ್ಟಾಗಿದೆ ಹಾಗೆ ನೋಡಿದರೆ ಜಗತ್ತಿನ ಅನಿವಾಸಿ ಕಾರ್ಮಿಕ […]

ಸಿರಿಯಾ ಬಗ್ಗೆ ಅಮೆರಿಕದ ಭಂಡ ನೀತಿಗಳು

ಸಿರಿಯಾ ಬಗ್ಗೆ ಅಮೆರಿಕದ ಭಂಡ ನೀತಿಗಳು

ಸಿರಿಯಾದಲ್ಲಿ  ಅಮೆರಿಕ ಮಾಡುತ್ತಿರುವ ಮಿಲಿಟರಿ ಕಾರ್ಯಾಚರಣೆಗಳು ಸಲಫಿ ಜೆಹಾದಿ ಶಕ್ತಿಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದಷ್ಟೆ. ಸಾಮ್ರಾಜ್ಯವಾದವು ಯಾವಾಗಲೂ ಮಾನವತಾವಾದವೆಂಬ ನೈತಿಕ ನಿಲುವಂಗಿಯನ್ನು ಧರಿಸಿರುತ್ತದೆ. ಹೀಗಾಗಿ ಸೈನಿಕ ಕಾರ್ಯಾಚರಣೆಗಳ ಮಾರ್ಗವನ್ನು, ಜನಾಂಗೀಯವಾದವನ್ನು, ಭಾವೋನ್ಮಾದದ ದೇಶಪ್ರೇಮಗಳನ್ನು ಸದಾ ಪ್ರತಿಪಾದಿಸುವ ಅಮೆರಿಕದ ಅಧ್ಯಕ್ಷ ಟ್ರಂಪ್ ಸಹ,  ಕಾಲಾನುಕಾಲದಿಂದ ಅಮೆರಿಕ ಸಾಮ್ರಾಜ್ಯವಾದವು ಯಶಸ್ವಿಯಾಗಿ ಬಳಸಿಕೊಂಡುಬಂದಿರುವ ನೈತಿಕ ಬಾವುಟವನ್ನು ಪ್ರದರ್ಶಿಸುವ ಮೂಲಕ ತನ್ನ ಯುದ್ಧಕೋರ ನೀತಿಗೆ ಉಭಯಪಕ್ಷದ ಸಮ್ಮತಿಯನ್ನು ದಕ್ಕಿಸಿಕೊಂಡುಬಿಟ್ಟರು. ವಿಷಯವೇನೆಂದರೆ ೧೯೬೧-೭೧ರ ಅವಧಿಯಲ್ಲಿ ವಿಯೆಟ್ನಾಮ್ ಮೇಲೆ ಅಮೆರಿಕದ ನಡೆಸಿದ ದುರಾಕ್ರಮಣದಲ್ಲಿ ಆಪರೇಷನ್ ರಾಂಚ್ ಹ್ಯಾಂಡ್ […]

ದ್ವೇಷವು ಸಹಿಷ್ಣುತೆಯನ್ನು ಸೋಲಿಸಿದಾಗ

ದ್ವೇಷವು ಸಹಿಷ್ಣುತೆಯನ್ನು ಸೋಲಿಸಿದಾಗ

ಅಮೆರಿಕ ಮತ್ತು ಭಾರತ ದೇಶಗಳ ಎರಡೂ ಸರ್ಕಾರಗಳು ದ್ವೇಷದ ಫಸಲಿಗೆ ಗೊಬ್ಬರ ಸುರಿಯುತ್ತಿವೆ. ಇದೊಂದು ನಿಜಕ್ಕೂ ವಿಚಿತ್ರ ಸಂಗತಿ. ತನ್ನ ದೇಶದೊಳಗೆ ನಡೆಯುತ್ತಿರುವ ದ್ವೇಷಾಧಾರಿತ ಅಪರಾಧಗಳ ಬಗ್ಗೆ ಕುರುಡಾಗಿರುವ ಭಾರತ ಸರ್ಕಾರ, ಅಮೆರಿಕದಲ್ಲಿ ಒಬ್ಬ ಭಾರತೀಯ ಇದೇ ರೀತಿಯ ದ್ವೇಷಕ್ಕೆ ಬಲಿಯಾದ ಕೂಡಲೇ ಆ ದೇಶದ ಅಧ್ಯಕ್ಷ ಇಂಥಾ ಅಪರಾಧಗಳನ್ನು ಖಂಡಿಸಬೇಕೆಂದು ಒತ್ತಾಯಿಸುತ್ತಿದೆ. ಕಳೆದ ಫೆಬ್ರವರಿ 22 ರಂದು ಅಮೆರಿಕದ ಕಾನ್ಸಾಸ್ ಪ್ರಾಂತ್ಯದ ಒಲಾಥೆಯಲ್ಲಿ ಶ್ರೀನಿವಾಸ್ ಕುಚ್ಚಿಬೋತ್ಲಾ ಎಂಬ ಭಾರತೀಯನನ್ನು ಒಬ್ಬ ಅಮೆರಿಕನ್ ಬಿಳಿಯ ಗುಂಡಿಟ್ಟು ಕೊಂದುಹಾಕಿದ. […]

ಉರಿಗೆ ಉರಿ ಔಷಧವಲ್ಲ

ಉರಿಗೆ ಉರಿ ಔಷಧವಲ್ಲ

‘ಪಾಕಿಸ್ಥಾನ ತನ್ನ ಮಾರ್ಗಗಳನ್ನು ತಿದ್ದಿಕೊಳ್ಳದಿದ್ದರೆ ಉಭಯ ರಾಷ್ಟ್ರಗಳ ನಡುವಣ ಯುದ್ಧ ಸಾಧ್ಯವೆಂಬ ಗಾಂಧೀಜಿಯವರ ಅಭಿಪ್ರಾಯ ದೊಡ್ಡ ಬಿರುಗಾಳಿಯನ್ನು ಎಬ್ಬಿಸಿತು’ ಈ ಮಾತು ಶಸ್ತ್ರಾಸ್ತ್ರಗಳನ್ನು ಸೈನ್ಯಗಳನ್ನು ಹೊಂದಿದ್ದ ಉಭಯ ರಾಷ್ಟ್ರಗಳನ್ನು ಕುರಿತವಾಗಿದ್ದವು. ಮೌಂಟ್ ಬ್ಯಾಟನ್ ಅವರು ಈಗ ಕಸಿವಿಸಿಗೊಂಡಿದ್ದರು. ಅದು ಗಾಂಧೀಜಿ ಅಭಿಪ್ರಾಯದಲ್ಲಿ ಉಷ್ಟ್ರ ಪಕ್ಷಿಯಂತೆ ಮರಳಿನಲ್ಲಿ ತಲೆ ಹೂಳುವುದರಿಂದ ಪ್ರಯೋಜನವಿಲ್ಲವೆಂಬುದಾಗಿತ್ತು. ಜನರಲ್ ಕಾರಿಯಪ್ಪನವರು ಗಾಂಧೀಜಿ ಬಳಿ ಬಂದು ನೆಲದ ಮೇಲೆ ಕುಳಿತು ಚರ್ಚಿಸಿದ್ದರು. ‘ಹಿಂಸೆಯ ಎದುರು ಅಸಹಾಯಕತಾಭಾವ ತಾಳುವುದು ಅಹಿಂಸೆಯಲ್ಲ, ಹೇಡಿತನ. ಹೇಡಿತನ ಮತ್ತು ಅಹಿಂಸೆಗಳ ನಡುವೆ […]

ಪನಾಮಾ ಪೇಪರ್ಸ್ ಲೀಕ್ ಅಲಿಯಾಸ್ ಪಂಗನಾಮ ಪೇಪರ್ಸ್!

ಪನಾಮಾ ಪೇಪರ್ಸ್ ಲೀಕ್ ಅಲಿಯಾಸ್ ಪಂಗನಾಮ ಪೇಪರ್ಸ್!

ಪಂಗನಾಮ ಪೇಪರ್ಸ್! ಕಳೆದ ಏಪ್ರಿಲ್ ಮೊದಲ ವಾರದಲ್ಲಿ ‘ಪನಾಮಾ ಪೇಪರ್ಸ್ ಲೀಕ್’ ಎಂಬ ರೋಚಕವಾದ ಸುದ್ದಿಯೊಂದು ಸ್ಫೋಟಗೊಂಡಿತು. ಕ್ಷಣಾರ್ಧದಲ್ಲಿ ಈ ಸುದ್ದಿ ಇಡೀ ಜಗತ್ತಿನಾದ್ಯಂತ ಹರಡಿ ಎಲ್ಲೆಡೆ ಸಂಚಲನ ಶುರುವಾಯ್ತು. ಯಾಕೆಂದರೆ ಆ ಪನಾಮಾ ಪೇಪರ್ಸ್‍ನಲ್ಲಿ ಅಡಗಿದ್ದ ರಹಸ್ಯ ಮಾಹಿತಿಗಳೇ ಅಂಥಾದ್ದು. ವಿವಿಧ ದೇಶಗಳ ಪ್ರಭಾವಿ ವ್ಯಕ್ತಿಗಳು, ಶ್ರೀಮಂತರು ಹಾಗೂ ಕಂಪನಿಗಳು ತಮ್ಮ ದಲ್ಲಾಳಿಗಳ ಮೂಲಕ ತೆರಿಗೆ ಸ್ವರ್ಗಗಳೆಂದು ಕರೆಯಲಾಗುವ ದೇಶಗಳಲ್ಲಿ ಬೇನಾಮಿ ಕಂಪನಿಗಳನ್ನು ಆರಂಭಿಸಿ, ಬಿಲಿಯಗಟ್ಟಳೆ ಡಾಲರ್ ಹಣವನ್ನು ಅಕ್ರಮವಾಗಿ ತೊಡಗಿಸಿರುವುದು ಬಟಾಬಯಲಾಯ್ತು. ಈ ಪಟ್ಟಿಯಲ್ಲಿ […]

ನವವಸಹಾತುಶಾಹಿ ಪ್ರಾಬಲ್ಯ ಮತ್ತು ಆರ್ಥಿಕ ಮುಗ್ಗಟ್ಟು

ನವವಸಹಾತುಶಾಹಿ ಪ್ರಾಬಲ್ಯ ಮತ್ತು ಆರ್ಥಿಕ ಮುಗ್ಗಟ್ಟು

ಅಂತಾರಾಷ್ಟ್ರೀಯ ಹಂತದಲ್ಲಿ ಪ್ರಾಮುಖ್ಯತೆ ಗಳಿಸಿದ ಸುದ್ಧಿವಾಹಿನಿಗಳು ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಒಂದಲ್ಲಾ ಒಂದು ದೇಶದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಮಾಹಿತಿಯನ್ನು ಸುದೀರ್ಘವಾಗಿ ವಿಶ್ಲೇಷಿಸಿ ಬಾಯಿ ನೋಯಿಸಿಕೊಂಡಿವೆ. ಆರ್ಥಿಕ ಮುಗ್ಗಟ್ಟಿನ ಸಾಲಿನಲ್ಲಿ ಗ್ರೀಸ್, ಚೀನಾ, ಫ್ರಾನ್ಸ್ ಇತ್ಯಾದಿ ದೇಶಗಳು ಕಾಲುಮುರಿದು ನಿಂತಿದ್ದವು. ಪ್ರಪಂಚದ ಒಂದಂಚಿನ ಭೂಭಾಗದಲ್ಲಿ ಮುಂದೊಂದು ದಿನ ಇನ್ನೊಂದು ಸ್ವರೂಪದಲ್ಲಿ ನಮ್ಮಲ್ಲೂ ಉದ್ಭವಿಸುವ ಸಾಧ್ಯತೆ-ಸನ್ನಿವೇಶಗಳಿಗೆ ವಿರುದ್ಧವಾಗಿ ಸಜ್ಜುಗೊಳಿಸಿ ಕೊಳ್ಳಬೇಕಾದ ವಿಧಿವಿಧಾನಗಳನ್ನು ಸನ್ನದ್ಧಗೊಳಿಸಿ ಕಾರ್ಯ ಪ್ರವೃತ್ತರಾಗುವುದು ಪ್ರಜ್ಞಾವಂತ ದೇಶದ ದೂರದೃಷ್ಟಿತ್ವವನ್ನು ಸೂಚಿಸುತ್ತದೆ. ಆದರೆ ಆರ್ಥಿಕ ಮುಗ್ಗಟ್ಟಗೆ ಸಿಲುಕದಿರುವ […]

ದಾಳಿಯಿಡುತ್ತಿರುವ ಹೆಜಮನಿ

ದಾಳಿಯಿಡುತ್ತಿರುವ ಹೆಜಮನಿ

ಅಂತರಾಷ್ಟ್ರೀಯ ವ್ಯಾಪಾರಿ ಒಪ್ಪಂದಗಳ ಕುರಿತು ವರದಿ ಮಾಡುವುದೆಂದರೆ ಅದು ಒಂದು ಪತ್ತೇದಾರಿ ಕೆಲಸದಂತೆ ಮತ್ತು ತ್ಯಾಪೇದಾರಿ ಕೆಲಸದಂತೆಯೂ ಹೌದು. ಈ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಆರಂಭದಿಂದ ಕೊನೆಯವರೆಗೂ ಭಾಗವಹಿಸಿ ತನ್ನ ಎಲ್ಲಾ ಜ್ಞಾನ ಮತ್ತು ಅನುಭವವನ್ನು ಬಳಸಿಕೊಂಡ ನಂತರವೂ ಅದರ ವರದಿಗಾರನಿಗೆ ಕೊನೆಗೂ ತನ್ನ ದೇಶವು ತನ್ನ ಹಿತಾಸಕ್ತಿಯನ್ನು ಬಿಟ್ಟುಕೊಡದೆ ಅಂತರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕಿದೆಯೇ? ಆ ಒಪ್ಪಂದದ ವಿವರಗಳೇನು ? ಅದರ ಸಾಧಕಬಾಧಕಗಳೇನು? ಎನ್ನುವ ವಿವರಗಳು ದೊರಕುವುದಿಲ್ಲ. ಚಿತ್ರಾ ಸುಬ್ರಮಣ್ಯಂ ಅವರು ಹೇಳುವಂತೆ ಆ ಒಪ್ಪಂದದ ಕರಡು […]