ಸಿನಿಮಾ

ಸಿನಿಮಾ

ಸಿನಿಮಾ ಓದು-10: ಲಿಂಗ ತಾರತಮ್ಯ ನೆಲೆ ಬುಡಮೇಲು ಮಾಡುವ ಕಿರಗೂರಿನ ‘ಗಯ್ಯಾಳಿ’ಗಳು

ಸಿನಿಮಾ ಓದು-10: ಲಿಂಗ ತಾರತಮ್ಯ ನೆಲೆ ಬುಡಮೇಲು ಮಾಡುವ ಕಿರಗೂರಿನ ‘ಗಯ್ಯಾಳಿ’ಗಳು

ಕನ್ನಡದ ಖ್ಯಾತ ಲೇಖಕರಾದ ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ನೀಳ್ಗತೆಗಳಲ್ಲಿ ಒಂದಾದ “ಕಿರಗೂರಿನ ಗಯ್ಯಾಳಿಗಳು”(1991) ಇದೇ ಶೀರ್ಷಿಕೆಯಲ್ಲಿ ಸಿನಿಮಾವಾಗಿ ಪ್ರದರ್ಶಿತವಾಗುತ್ತಿದೆ. ಇದಕ್ಕೆ ಕನ್ನಡದ ಜನಪ್ರಿಯ ಪತ್ರಕರ್ತರೂ ಲೇಖಕರೂ ಆದ ಅಗ್ನಿ ಶ್ರೀಧರ ಅವರು ಚಿತ್ರಕತೆ ಮತ್ತು ಸಂಭಾಷಣೆಯನ್ನು ಸಿದ್ದಪಡಿಸಿದ್ದು, ಸುಮನ್ ಕಿತ್ತೂರು ಅವರು ಚಿತ್ರದ ನಿರ್ದೇಶಕರಾಗಿದ್ದಾರೆ. ಈ ಹಿಂದೆ ‘ಸ್ಲಂ ಬಾಲ’(2008), ‘ಕಳ್ಳರ ಸಂತೆ’(2009) ಮತ್ತು ‘ಎದೆಗಾರಿಕೆ’(2012) ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವೆನೋ ಅವರ ಬೆನ್ನಿಗಿದೆ. ಇವುಗಳಲ್ಲಿ ‘ಸ್ಲಂ ಬಾಲ’ ಹಾಗೂ ‘ಎದೆಗಾರಿಕೆ’ ಪಕ್ಕಾ ಭೂಗತ ಜಗತ್ತಿನ ಪಾತಕಗಳನ್ನು […]

ಸಿನಿಮಾ ಓದು-9: ಚಿತ್ತ ಕಲಕುವ ಚಿತ್ರ ತಿಥಿ

ಸಿನಿಮಾ ಓದು-9: ಚಿತ್ತ ಕಲಕುವ ಚಿತ್ರ ತಿಥಿ

ಈಚೆಗಷ್ಟೆ ಎಂಟನೆಯ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ(2016 ಜನವರಿ 29 ರಿಂದ ಫೆಬ್ರುವರಿ 4 ವರೆಗೆ) ಅದ್ದೂರಿಯಾಗಿ ಮತ್ತು ವ್ಯವಸ್ಥಿತವಾಗಿ ನಡೆದಿದ್ದು ಸಿನಿಮಾ ಪ್ರಿಯರಿಗೆ ಮರೆಯಲಾಗದ ನೆನಪಾಗಿದೆ. ಏಳು ದಿನಗಳ ಕಾಲ ಸುಮಾರು 50 ದೇಶಗಳ 170ಕ್ಕೂ ಹೆಚ್ಚು ಚಿತ್ರಗಳು ಬೆಂಗಳೂರಿನ ರಾಜಾಜಿನಗರದ ‘ಓರಿಯನ್ ಮಾಲ್’ನಲ್ಲಿರುವ ಪಿವಿಆರ್ ಸಿನಿಮಾದ 11 ಸ್ಕ್ರೀನ್‍ಗಳಲ್ಲಿ ಪ್ರದರ್ಶಿತವಾಗಿದ್ದವು. ಬಹುತೇಕ ಸಿನಿಮಾಗಳ ಗುಣಮಟ್ಟ ಚೆನ್ನಾಗಿರಲಿಲ್ಲ ಎಂಬ ಅಭಿಪ್ರಾಯಗಳು ಪತ್ರಿಕೆಗಳಲ್ಲಿ ವ್ಯಕ್ತವಾಗಿದ್ದವು. ಇಂತಹ ಅನಿಸಿಕೆಗಳೇನೆ ಇದ್ದರು ಸಹ ದೇಶ-ವಿದೇಶಗಳ ಹಾಗೂ ಜಗತ್ತಿನ ಬೇರೆಬೇರೆ ಭಾಷೆ, ಸಂಸ್ಕøತಿಗಳ […]

ಸಿನಿಮಾ ಓದು-8: ಸ್ಟೀವೆನ್ ಸ್ಪಿಲ್‍ಬರ್ಗ್ ನ ‘ಡ್ಯುಯೆಲ್’

ಸಿನಿಮಾ ಓದು-8: ಸ್ಟೀವೆನ್ ಸ್ಪಿಲ್‍ಬರ್ಗ್ ನ ‘ಡ್ಯುಯೆಲ್’

ಜಾಗತಿಕ ಸಿನಿಮಾ ಲೋಕದಲ್ಲಿ ಸ್ಟೀವೆನ್ ಸ್ಪಿಲ್‍ಬರ್ಗ್ ಎಂಬ ಹೆಸರು ಅತ್ಯಂತ ಚಿರಪರಿಚಿತವಾದದ್ದು. ಸದ್ಯಕ್ಕೆ ಜೀವಂತ ಇರುವ ಸಿನಿಮಾ ನಿರ್ದೇಶಕರಲ್ಲಿ ಅತಿ ಜನಪ್ರಿಯರು ಕೂಡ ಹೌದು. ಅಮೇರಿಕಾದ ಈ ನಿರ್ದೇಶಕ ಕಳೆದ ಐದು ದಶಕಗಳಿಂದ ನಿರಂತರವಾಗಿ ಸಿನಿಮಾಗಳನ್ನು ಮಾಡುತ್ತ ಬಂದಿರುವುದು ಅವರ ದೈತ್ಯ ಪ್ರತಿಭೆಗೊಂದು ನಿದರ್ಶನವಾಗಿದೆ. ಸ್ಪಿಲ್‍ಬರ್ಗ್ ಅವರ ಸಿನಿಮಾಯಾನವೇ ಒಂದು ಅದ್ಭುತವಾದ ಚರಿತ್ರೆ ಆಗಬಲ್ಲದು. ತೀರ ಸಾಮಾನ್ಯವೆನಿಸುವ ‘ಡ್ಯುಯೆಲ್’(1971)ನಂತಹ ಟೆಲಿಫಿಲ್ಮ್‍ನಿಂದ ಆರಂಭವಾದ ಸ್ಪಿಲ್‍ಬರ್ಗ್ ಅವರ ನಿರ್ದೇಶನವು ಇತ್ತೀಚಿನ ಅಂತರಾಷ್ಟ್ರೀಯ ಬೇಹುಗಾರಿಕೆಯನ್ನು ಕುರಿತ ‘ಬ್ರಿಡ್ಜ್ ಆಫ್ ಸ್ಪೈಸ್’(2016)ವರೆಗಿನ ದೀರ್ಘಕಾಲೀನ […]

ಇಂಟರ್‍ನೆಟ್ ಮತ್ತು ಸಿನಿಮಾ

ಇಂಟರ್‍ನೆಟ್ ಮತ್ತು ಸಿನಿಮಾ

ಸುಮಾರು 1990ರ ದಶಕದಲ್ಲಿ ಇಂಟರ್‍ನೆಟ್ ಅಸ್ತಿತ್ವಕ್ಕೆ ಬಂದದ್ದು ಮುಖ್ಯವಾಗಿ ಬಹು ಉಪಯೋಗಗಳ ನೆಲೆಯಿಂದ. ಅದರ ಮುಖ್ಯವಾದ ಬಳಕೆಯು ಅಮೇರಿಕಾದ ಸೈನ್ಯಕ್ಕೆ ಅನುರೂಪವಾಗಿ ಸೇವೆ ಒದಗಿಸುವ ಕಾರಣಗಳಿಂದ. 1990ರ ಮತ್ತು ನಂತರದ ಅವಧಿಯಲ್ಲಿ ಇಂಟರ್‍ನೆಟ್ ಸಿನಿಮಾ ರಂಗವನ್ನೂ ಕೂಡಾ ಪ್ರಭಾವಿಸಿ ವ್ಯಾಪಿಸುತ್ತಿದೆ. ಅದು ಎರಡು ರೀತಿಯ ಅಂದರೆ ಧನಾತ್ಮಕ ಮತ್ತು ಋಣಾತ್ಮಕವೆನ್ನಬಹುದಾದ 2 ಪರಿಣಾಮಗಳನ್ನುಂಟು ಮಾಡಿದೆಯಾದರೂ ಕೂಡಾ ಈಗೀಗ ಇವುಗಳ ಪ್ರತ್ಯೇಕೀರಣ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಸಂಬಂಧ ನಿಕಟವಾಗಿ ಮಾರ್ಪಟ್ಟಿದೆ. ಇಂಟರ್‍ನೆಟ್ ಸಾಮಾಜಿಕ ಬದುಕಿನ ಎಲ್ಲಾ ಆಯಾಮಗಳನ್ನು ಪ್ರಭಾವಿಸಿ […]

ಸಿನಿಮಾ ಓದು-7: ‘ದ ರೆಡ್ ಬಲೂನ್’-ಅನಾಥ ಪ್ರಜ್ಞೆಯ ಅನಾವರಣ

ಸಿನಿಮಾ ಓದು-7: ‘ದ ರೆಡ್ ಬಲೂನ್’-ಅನಾಥ ಪ್ರಜ್ಞೆಯ ಅನಾವರಣ

ಕನ್ನಡ ಸಾಹಿತ್ಯದ ವಿಮರ್ಶಕರಲ್ಲಿ ಒಬ್ಬರಾದ ಕೆ.ವಿ.ಸುಬ್ಬಣ್ಣ ಅವರು ಅಕ್ಷರನೊಂದಿಗೆ ಜಂಟಿಯಾಗಿ ಬರೆದು ಪ್ರಕಟಿಸಿದ ಜಾಗತಿಕ ಸಿನಿಮಾಗಳ ಚರಿತ್ರೆ ಕುರಿತ ‘ಸಿನೆಮಾದ ದೂರಚಿತ್ರ ಸಮೀಪ ಚಿತ್ರಗಳು’(1980) ಎಂಬ ಕೃತಿಯಲ್ಲಿ ಒಂದು ಕಡೆ ಹೀಗೆ ಹೇಳುತ್ತಾರೆ: “ಸ್ಥೂಲವಾಗಿ ಹೇಳುವುದಾದರೆ, ಚಲನಚಿತ್ರದಲ್ಲಿ ಕಾಣುವ ಮುಖ್ಯವಾದ ಎರಡು ಮಾರ್ಗಗಳು: ವಾಸ್ತವವನ್ನು ದಾಖಲಿಸುವ ನಿಜಚಿತ್ರಗಳು ಹಾಗೂ ಅಭಿನಯದಿಂದ ಸನ್ನಿವೇಶಗಳನ್ನು ನಿರ್ಮಿಸಿಕೊಂಡು ಚಿತ್ರೀಕರಿಸಿಕೊಳ್ಳುವ ಕಾಲ್ಪನಿಕ ಚಿತ್ರಗಳು. ಇವೆರಡೂ ಅಲ್ಲದ ಮೂರನೆಯ ಮಾರ್ಗ, ಉಜ್ಜೀವನ-ಚಮತ್ಕಾರ ಚಿತ್ರಗಳದ್ದು.” ಸಿನಿಮಾ ಮಾಧ್ಯಮದ ಮೂರು ಪ್ರಕಾರಗಳ ಸ್ವರೂಪವನ್ನು ಇಲ್ಲಿ ಪ್ರಸ್ತಾಪಿಸಿಲಾಗಿದೆ. ಮೊದಲನೆಯದಾಗಿ- […]

ಸಿನಿಮಾ ಓದು-6 : ಅಕ್ಷರದರಿವು-ಲೋಕದರಿವುಗಳ ತಾಕಲಾಟ

ಸಿನಿಮಾ ಓದು-6 : ಅಕ್ಷರದರಿವು-ಲೋಕದರಿವುಗಳ ತಾಕಲಾಟ

ಕನ್ನಡದ ಮಹತ್ವದ ನಾಟಕಕಾರರಾದ ಟಿ.ಪಿ. ಕೈಲಾಸಂ ಅವರ ‘ಟೊಳ್ಳುಗಟ್ಟಿ’(1923) ನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ರಾತ್ರಿ ಮನೆಯವರೆಲ್ಲ ಮಲಗಿದ್ದಾಗ ಯಜಮಾನನಾದ ಹಿರಿಯಣ್ಣಯ್ಯನ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲುತ್ತದೆ. ಹಿರಿಯಣ್ಣಯ್ಯನಿಗೆ ಮಾದು ಮತ್ತು ಪುಟ್ಟು ಇಬ್ಬರು ಮಕ್ಕಳು. ಇವರಲ್ಲಿ ಓದನ್ನು ಹೊರತುಪಡಿಸಿ ಬೇರೆ ಯಾವ ಕೆಲಸವನ್ನೂ ಮಾಡದ ಕಿರಿಯವನಾದ ಪುಟ್ಟು ಆ ಕ್ಷಣಕ್ಕೆ ತನ್ನ ಪುಸ್ತಕಗಳನ್ನಷ್ಟೇ ರಕ್ಷಿಸಿಕೊಳ್ಳುತ್ತಾನೆ. ಓದಿನಲ್ಲಿ ಹೆಚ್ಚಿನ ಆಸಕ್ತಿಯಿಲ್ಲದ ಅಣ್ಣನಾದ ಮಾಧು ಬೆಂಕಿಯಲ್ಲಿ ಸಿಕ್ಕುಬಿದ್ದಿದ್ದ ಮನೆಯವರನ್ನೆಲ್ಲ ಕಾಪಾಡುತ್ತಾನೆ. ಆದರೆ ಹಿರಿಯಣ್ಣಯ್ಯ ಯಾವಾಗಲೂ ಪುಟ್ಟುವಿನ ಓದಿನ ಜಾಣ್ಮೆಯನ್ನೇ […]

ಸಿನಿಮಾ ಓದು-5 : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು

ಸಿನಿಮಾ ಓದು-5 : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು

ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮೇಷ್ಟ್ರುಗಳಾಗಿದ್ದ ಲಂಕೇಶ್, ಬರಗೂರು ರಾಮಚಂದ್ರಪ್ಪ ಮತ್ತು ನಾಗತಿಹಳ್ಳಿ ಚಂದ್ರಶೇಖರ ಸಿನಿಮಾ ಜಗತ್ತಿಗೂ ಕಾಲಿಟ್ಟವರು. ಶಿವರಾಮ ಕಾರಂತರಂತಹ ದೊಡ್ಡ ಲೇಖಕರು ಸಹ ಸಿನಿಮಾ ನಿರ್ದೇಶನಕ್ಕೆ ಇಳಿದದ್ದನ್ನು ನೆನಪಿಸಿಕೊಳ್ಳಬಹುದು. ಸಿನಿಮಾ ಮಾಧ್ಯಮ ಎಂತಹವರನ್ನೂ ತನ್ನೆಡೆಗೆ ಸೆಳೆಯುವ ಒಂದು ಬಗೆಯ ವಿಚಿತ್ರ ಗುಣ ಅದಕ್ಕಿದೆ. ಇವರು ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಿ ಜನಪ್ರಿಯರೂ ಆಗಿದ್ದಾರೆ. ಆದರೆ ಅಗ್ಗದ ಸಿನಿಮಾಗಳನ್ನು ಮಾಡಿದವರಲ್ಲ. ಒಂದು ನಾಡಿನ ಸಂಸ್ಕøತಿಯನ್ನು ಬಿಂಬಿಸುವ ಚಿತ್ರಗಳನ್ನು ಮಾಡಿದವರಾಗಿದ್ದಾರೆ. ಮೇಷ್ಟ್ರು ವೃತ್ತಿಯಿಂದ ಸಿನಿಮಾ ನಿರ್ದೇಶಕನ ಸ್ಥಾನಕ್ಕೆ ಸ್ವಯಂ ಬಡ್ತಿ ಮಾಡಿಕೊಂಡವರಲ್ಲಿ […]

ಕೊ ಕೊ ಕೊ ಕೋಳಿಮೊಟ್ಟೆ

ಕೊ ಕೊ ಕೊ ಕೋಳಿಮೊಟ್ಟೆ

ಅದು ಕನ್ನಡ ಚಿತ್ರರಂಗದ ಸುವರ್ಣ ಕಾಲ. ಅಂದರೆ ಕನ್ನಡ ಚಿತ್ರಗಳೂ ದಾಖಲೆ ನಿರ್ಮಿಸಬಲ್ಲವು ಅನ್ನುವುದನ್ನು ತೋರಿಸಿಕೊಟ್ಟ ಕಾಲ. ಅಂದರೆ ಎಪ್ಪತ್ತರ ದಶಕವದು. ’ನಾಗರ ಹಾವು’ ಚಿತ್ರದಿಂದ ಹೊಸ ಹೀರೋ ಹುಟ್ಟಿಕೊಂಡಿದ್ದ. ಹಾಗೆಯೇ ’ಬಂಗಾರದ ಮನುಷ್ಯ’ಚಿತ್ರದಿಂದ ಡಾ. ರಾಜ್ ಇನ್ನಿಲ್ಲದಷ್ಟು ಎತ್ತರ ಏರಿದ್ದರು. ವಿಷ್ಣುವರ್ಧನ್ ಬರೀ ಹೀರೋ ಮಾತ್ರ ಆಗಿರಲಿಲ್ಲ. ಅದ್ಭುತ ನಟ ಅನ್ನುವುದನ್ನೂ’ನಾಗರಹಾವು’ ಚಿತ್ರದಿಂದ ಸಾಧಿಸಿ ತೋರಿಸಿದ್ದರು. ಅದಕ್ಕಿಂತ ಮುಖ್ಯವಾಗಿ ಪುಟ್ಟಣ್ಣ ಕಣಗಾಲ್ ತಮ್ಮ ಅದ್ಭುತ ನಿರ್ದೇಶನ ಪ್ರತಿಭೆಯನ್ನು ಮೆರೆದಿದ್ದರು. ಬಹುಶಃ ’ನಾಗರಹಾವು’ ಚಿತ್ರದಲ್ಲಿ ಕೆಲಸ ಮಾಡಿದ […]

ಸಿನಿಮಾ ಓದು-4 : ಲೂಸಿಯಾ – ವಾಸ್ತವ ಮತ್ತು ಕನಸುಗಳ ಡಿಕ್ಕಿ

ಸಿನಿಮಾ ಓದು-4 : ಲೂಸಿಯಾ – ವಾಸ್ತವ ಮತ್ತು ಕನಸುಗಳ ಡಿಕ್ಕಿ

ಪ್ರಾಚೀನ ಚೀನದಲ್ಲಿ ಬುದ್ದಿವಂತ  ಒಬ್ಬನಿಗೆ ಪ್ರತಿ ರಾತ್ರಿ ಕನಸು. ಪ್ರತಿ ರಾತ್ರಿ ಮುಸುಂಬಿ- ಬಣ್ಣದ ಚಿಟ್ಟೆಯಾಗಿ ನೈದಿಲೆಯಿಂದ ಸೇವಂತಿಗೆ ಸೇವಮತಿಗೆಯಿಂದ ನೈದಿಲೆಗೆ ಹಾರಿ ಹಾರಿ ಗಾಳಿಯಲ್ಲಿ ತೇಲಿದ ಹಾಗೆ ಕನಸು. ಎಷ್ಟೋ ರಾತ್ರಿ ಚಿಟ್ಟೆಯಾಗಿ ಕನಸು ಕಂಡು ಕಡೆಗೆ ಮನುಷ್ಯನೋ ಚಿಟ್ಟೆಯೋ ರಾತ್ರಿಯ ಚಿಟ್ಟೆ ಹಗಲು ಮನುಷ್ಯನ ಕನಸೋ ಹಗಲು ರಾತ್ರಿಯ ಕನಸೋ ತಿಳಿಯದೆ ಭ್ರಮೆ ಹಿಡಿಯಿತು. ಇದು ಎ. ಕೆ. ರಾಮಾನುಜನ್ ಅವರ ‘ಬುದ್ದಿವಂತರಿಗೆ ಕನಸು ಬಿದ್ದರೆ’ ಎಂಬ ಕವಿತೆಯ ಸಾಲುಗಳು. ಚಿಟ್ಟೆಯಂತೆ ಮನಸ್ಸು ಸಹ […]

ಬಿಗ್‍ಬಾಸ್‍ನಿಂದ ಹುಚ್ಚ ವೆಂಕಟ್ ಹೊರಗೆ ಬಂದಿದ್ದು ರಾಷ್ಟ್ರೀಯ ದುರಂತನಾ?

ಬಿಗ್‍ಬಾಸ್‍ನಿಂದ ಹುಚ್ಚ ವೆಂಕಟ್ ಹೊರಗೆ ಬಂದಿದ್ದು ರಾಷ್ಟ್ರೀಯ ದುರಂತನಾ?

ಬಿಗ್‍ಬಾಸ್‍ನಿಂದ ಹುಚ್ಚ ವೆಂಕಟ್ ಹೊರಗಡೆ ಬಂದ ವಿಷಯ ಬಯಲಾಗುತ್ತಿದ್ದಂತೆಯೇ ಬೇರೆ ಮಾಧ್ಯಮಗಳು ಪ್ರತಿಕ್ರಿಯಿಸಿದ ರೀತಿ ಹುಟ್ಟುಹಾಕಿದ ಪ್ರಶ್ನೆ ಇದು. ನಿಜ, ಈಗಿನ ಮಾಧ್ಯಮಗಳಿಗೆ ಕಾರ್ಯಕ್ರಮ ವೀಕ್ಷಿಸಿದ ಜನರ ಸಂಖ್ಯೆ (ಟಿಆರ್‍ಪಿ)ಯೇ ಜಾಹೀರಾತು ಪಡೆಯುವ ಅಳತೆಗೊಲು. ಜನರಿಷ್ಟ ಪಡುವಂತಹ ಕಾರ್ಯಕ್ರಮ ನೀಡುವುದು ಕೂಡಾ ಮಾಧ್ಯಮಗಳ ಕರ್ತವ್ಯ. ಅದು ಅನಿವಾರ್ಯ ಕೂಡಾ. ಯಾವುದೇ ಕಾರ್ಯಕ್ರಮವನ್ನು ಜನ ಜಾಸ್ತಿ ನೋಡ್ತಾರೆ ಎಂದಾದರೆ ಮಾಧ್ಯಮಗಳೂ ಅದರತ್ತನೇ ಜಾಸ್ತಿ ಆಸಕ್ತಿ ವಹಿಸುತ್ತವೆ. ಖಂಡಿತಾ ಇದಂತೂ ತಪ್ಪಲ್ಲ. ಸದ್ಯ ಪರಿಸ್ಥಿತಿ ಇದು ಬೇಕಾಗಿರುವಂತಹದ್ದೇ. ಆದರೆ, ಬೇರೆ […]