ಸಿನಿಮಾ

ಸಿನಿಮಾ

ಸಿನಿಮಾ ಓದು- 17 : ಸ್ತ್ರೀವಾದ ಮರು ವ್ಯಾಖ್ಯಾನದ ಚಿತ್ರ ‘ಪಿಂಕ್’

ಸಿನಿಮಾ ಓದು- 17 : ಸ್ತ್ರೀವಾದ ಮರು ವ್ಯಾಖ್ಯಾನದ ಚಿತ್ರ ‘ಪಿಂಕ್’

ಅನಿರುದ್ ರಾಯ್ ಚೌಧರಿ ನಿರ್ದೇಶನದ ಹಿಂದಿಯ ‘ಪಿಂಕ್’(2016) ಎಂಬ ಚಿತ್ರವು ನಗರಗಳಲ್ಲಿ ವಾಸಿಸುವ ಸ್ವತಂತ್ರ ಮನೋಭಾವದ ಸ್ವಾವಲಂಬಿ ಮಹಿಳೆಯರ ಲಿಂಗ ಅಸಮಾನತೆಯ ಪ್ರಶ್ನೆಯನ್ನು ಕೇಂದ್ರವಾಗಿಟ್ಟುಕೊಂಡ ಸಿನಿಮಾ. ಭಾರತೀಯ ಸಮಾಜ ಎಷ್ಟೇ ಆಧುನಿಕವಾಗಿರುವಂತೆ ಕಂಡರು ಮಹಿಳೆಯರ ನಿಟ್ಟಿನಿಂದ ಗಮನಿಸಿದರೆ ತುಂಬ ಸಾಂಪ್ರದಾಯಿಕವಾಗಿಯೇ ಕಾಣುತ್ತದೆ. ಅದು ಮಹಿಳೆಯರನ್ನು ನೋಡುವ ದೃಷ್ಟಿಕೋನದಲ್ಲಿ ಯಾವ ಗುರುತರ ಬದಲಾವಣೆಗಳನ್ನೂ ಕಂಡಿಲ್ಲವೆನೋ ಎಂಬ ಸಂಶಯವನ್ನು ಮೂಡಿಸುತ್ತದೆ. ಮಹಿಳೆಯರು ಯಾವ ಯಾವ ಸಾರ್ವಜಿನಿಕ ಸ್ಥಳಗಳಲ್ಲಿ ಯಾವ ಯಾವ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರ ನಡತೆ ಅಥವಾ […]

ಇಂಡಿಯಾದ ಹೊಸ ಅಲೆಯ ಸಿನಿಮಾ ಚಳುವಳಿ

ಇಂಡಿಯಾದ ಹೊಸ ಅಲೆಯ ಸಿನಿಮಾ ಚಳುವಳಿ

ಅಹರ್ನಿಶಿ ಪ್ರಕಾಶನ ಪ್ರಕಟಿಸುತ್ತಿರುವ “ ಬಿಸಿಲು ಬಯಲು ನೆಳಲು – ಹೊಸ ಅಲೆ ಸಿನಿಮಾ ಕುರಿತ ಕಥನ.” ಪುಸ್ತಕದಿಂದ ಆಯ್ದ ಅಧ್ಯಾಯ. ಸಿನಿಮಾ ಎನ್ನುವುದು ಸಂಕೀರ್ಣವಾದ ಕಲೆ. ಒಂದೇ ಸ್ತರದಲ್ಲಿ ಹೌದು ಮತ್ತು ಇಲ್ಲ ಎನ್ನುವಂತೆ ತೋರಿಸಿಕೊಡುತ್ತದೆ. ಅದು ದೃಶ್ಯಕಾವ್ಯ ಹೌದಾದರೆ ಅದು ದೃಶ್ಯ ಕಾವ್ಯ ಅಲ್ಲ ಎನ್ನುವುದೂ ನಿಜ. ಸಂದೀಪ್ ದೆಬ್ ಅವರು “ಅದು ಸಾಹಿತ್ಯವಲ್ಲ, ಆದರೆ ಅದು ಸಾಹಿತ್ಯ. ಅದು ಥಿಯೇಟರ್ ಅಲ್ಲ, ಆದರೆ ಅದು ಥಿಯೇಟರ್. ಮೇಲ್ನೋಟಕ್ಕೆ ಅದು ಒಂದು ಸಮೂಹದ, ತಂಡವನ್ನು […]

ಸಿನಿಮಾ ಓದು- 16: ಆಂತರಿಕ ನವ ವಾಸ್ತವವಾದಿ ಚಿತ್ರ ‘ಬ್ಲೋ-ಅಪ್’

ಸಿನಿಮಾ ಓದು- 16: ಆಂತರಿಕ ನವ ವಾಸ್ತವವಾದಿ ಚಿತ್ರ ‘ಬ್ಲೋ-ಅಪ್’

ಮೈಕೆಲೆಂಜಲೋ ಆಂಟೋನಿಯೋನಿ ಇಟಲಿಯ ಫೆರೆರಾ ಎಂಬ ಪ್ರಾಂತ್ಯದಲ್ಲಿ 1912ರಲ್ಲಿ ಶ್ರೀಮಂತ ಭೂಮಾಲಿಕ ಕುಟುಂಬದಲ್ಲಿ ಜನಿಸಿದಾತ. ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಆಂಟೋನಿಯೋನಿ 1930ರ ದಶಕದಲ್ಲಿ ಚಿತ್ರ ವಿಮರ್ಶೆಗಳನ್ನು ಬರೆಯಲಾರಂಭಿಸಿದ. 1940ರಲ್ಲಿ ಸಿನಿಮಾ ನಿರ್ದೇಶನ ಕಲೆಯನ್ನು ಅಧ್ಯಯನ ಮಾಡಿದನಲ್ಲದೆ, ರೋಸೆಲಿನಿಯಂತಹ ಖ್ಯಾತ ನಿರ್ದೇಶಕನ ಬಳಿ ಚಿತ್ರಕತೆ ಬರಹಗಾರನಾಗಿ ಕೆಲಸ ಮಾಡಿದ. ತನ್ನ ಮೊದಲ ಚಿತ್ರ ‘ಸ್ಟೋರಿ ಆಫ್ ಲವ್ ಅಫೇರ್’(1950)ನ್ನು ನಿರ್ದೇಶಿಸುವ ಮೊದಲು ಹಲವು ಡಾಕ್ಯುಮೆಂಟರಿಗಳನ್ನು ತಯಾರಿಸಿದ್ದ. ಅರವತ್ತರ ದಶಕದಲ್ಲಿ ಬಂದ ‘ಲಾ ಅವೆಂಚುರಾ’(ಸಾಹಸ, 1960), ‘ಲಾ ನೊಟ್ಟೆ’(ರಾತ್ರಿ, 1961) […]

ಸಿನಿಮಾ ಓದು-15: ವಿಡಂಬನಾತ್ಮಕ ನಿರೂಪಣೆಯ ‘ಭುವನ್ ಶೋಮ್’

ಸಿನಿಮಾ ಓದು-15: ವಿಡಂಬನಾತ್ಮಕ ನಿರೂಪಣೆಯ ‘ಭುವನ್ ಶೋಮ್’

ಕಾರ್ಲಮಾಕ್ರ್ಸ್‍ನ ಸಿದ್ಧಾಂತದಿಂದ ಗಾಢವಾಗಿ ಪ್ರಭಾವಿತರಾಗಿದ್ದ ಮೃಣಾಲ್ ಸೇನ್ ಅವರು ಜನಪ್ರಿಯ ಶೈಲಿಯ ಚಿತ್ರಗಳ ಸಂಪ್ರದಾಯವನ್ನು ಮುರಿದು ವಿಭಿನ್ನವಾದ ನಿರೂಪಣೆಯ ಚಿತ್ರಗಳಿಗೆ ನಾಂದಿ ಹಾಡಿದ ಭಾರತೀಯ ನಿರ್ದೇಶಕರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದವರು. ಹಿಂದಿಯಲ್ಲಿ 1969ರಲ್ಲಿ ಬಿಡುಗಡೆಯಾದ ಮೃಣಾಲ್ ಸೇನ್ ಅವರ ‘ಭುವನ್ ಶೋಮ್’, ಮಣಿ ಕೌಲ್ ಅವರ ‘ಉಸ್ಕಿ ರೋಟಿ’ ಹಾಗೂ ಬಸು ಚಟರ್ಜಿಯವರ ‘ಸಾರಾ ಆಕಾಶ್’-ಈ ಮೂರು ಚಿತ್ರಗಳು ಭಾರತೀಯ ಸಿನಿಮಾ ಉದ್ಯಮಕ್ಕೆ ಹೊಸ ರಕ್ತಸಂಚಲನೆಯನ್ನು ನೀಡಿದವು. ಬಂಗಾಳಿ ನಿರ್ದೇಶಕನೊಬ್ಬ ಮೊದಲ ಬಾರಿಗೆ ಹಿಂದಿಯಲ್ಲಿ ಸಿನಿಮಾ […]

ಸಿನಿಮಾ ಓದು-14: ರೂಪಕಾತ್ಮಕ ನಿರೂಪಣೆಯ ‘ಎಲಿಪತ್ತಾಯಮ್’

ಸಿನಿಮಾ ಓದು-14: ರೂಪಕಾತ್ಮಕ ನಿರೂಪಣೆಯ ‘ಎಲಿಪತ್ತಾಯಮ್’

ಫಾಲ್ಕೆ ಪ್ರಶಸ್ತಿ ವಿಜೇತರಾದ ಅಡೂರ್ ಗೋಪಾಲಕೃಷ್ಣನ್ ಅವರ ಮೂರನೆಯ ಚಿತ್ರ ‘ಎಲಿಪತ್ತಾಯಮ್’(ಇಲಿಬೋನು) (1981) ಕಾವ್ಯಾತ್ಮಕ ನಿರೂಪಣೆ ಹಾಗೂ ವಿನೂತನ ವಸ್ತು ವಿನ್ಯಾಸದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಕೇರಳದಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಅವನತಿ ಮತ್ತು ಅದನ್ನು ಎದುರುಗೊಂಡ ಭೂಮಾಲಿಕರ ಕತೆಯನ್ನು ‘ಇಲಿಬೋನು’ ಎಂಬ ರೂಪಕದಲ್ಲಿ ಅಳವಡಿಸಿ ನಿರೂಪಿಸಿದ್ದು ಸಿನಿಮಾಗೊಂದು ಹೊಸ ಚಹರೆಯನ್ನು ನೀಡಿದೆ. ಕೇರಳ ಎತ್ತರದ ತೆಂಗಿನ ತೋಟಗಳಿಂದ, ಹಸಿರು ಬೆಟ್ಟ-ಪರ್ವತಗಳಿಂದ, ಸಮುದ್ರ ತೀರಗಳಿಂದ ಹಾಗೂ ತನ್ನ ಭೌಗೋಳಿಕ ಚೆಲುವಿನಿಂದ ಕಂಗೊಳಿಸುವ ರಾಜ್ಯವಾಗಿದೆ. ಸಾಂಪ್ರದಾಯಿಕ ಕಲೆ, ನೃತ್ಯ, […]

ಸಿನಿಮಾ ಓದು: 13 – “ಟೇಸ್ಟ್ ಆಫ್ ಚೆರಿ”

ಸಿನಿಮಾ ಓದು: 13 – “ಟೇಸ್ಟ್ ಆಫ್ ಚೆರಿ”

“ಮಧ್ಯೆ ವಯಸ್ಕನೊಬ್ಬ ತನ್ನ ರೇಂಜ್ ರೋವರ್ ಕಾರನ್ನು ಟೆಹರಾನ್ ಪಟ್ಟಣದ ಸುತ್ತ ಮುತ್ತ ಓಡಿಸುತ್ತಿದ್ದಾನೆ. ದುಃಖಿತನಂತೆ ಕಾಣುವ ಆ ಕಾರ್ ಚಾಲಕನ ಕಣ್ಣುಗಳು ಏನನ್ನೋ ಹುಡುಕುತ್ತಿವೆ. ಆದರೆ ಆತನಿಗೆ ಏನು ಬೇಕಾಗಿದೆ ಎಂಬುದು ನಮಗೆ ತಿಳಿಯದು. ರಸ್ತೆ ಬದಿಯಲ್ಲಿ ಕಾರು ನಿಂತಾಗ ಯಾರೋ ಒಬ್ಬ ಕೆಲಸಕ್ಕೆ ಕಾರ್ಮಿಕನ ಅಗತ್ಯವಿದೆಯೇ ಎಂದು ಕೇಳುತ್ತಾನೆ. ಆತ ಇಲ್ಲ ಎಂದು ಹೇಳಿ ಮತ್ತೆ ಕಾರ್ ಓಡಿಸಿಕೊಂಡು ಅಲ್ಲಿಂದ ಹೊರಡುತ್ತಾನೆ. ಕಾರ್ ಚಲಿಸುತ್ತಲೇ ಇದೆ. ಅಲ್ಲೊಂದು ಟೆಲಿಫೋನ್ ಬೂತ್‍ನಲ್ಲಿ ಮಾತನಾಡುತ್ತಿರುವ ಯುವಕನೊಬ್ಬ ಕಾಣಿಸುತ್ತಾನೆ. […]

ಜಬ್ಯನಿಗೆ ಪ್ರೇಮಿಸುವ ಹಕ್ಕು ಇದೆಯೇ?

ಜಬ್ಯನಿಗೆ ಪ್ರೇಮಿಸುವ ಹಕ್ಕು ಇದೆಯೇ?

ಮಹಾರಾಷ್ಟ್ರದ ಅಹ್ಮದನಗರದ ಅಕೋಲ್ನೇರ್ ಗ್ರಾಮದಲ್ಲಿ ಮರಾಠಿ ಸಿನಿಮಾ “ಫಂಡ್ರಿ” (2014)ಬಿಚ್ಚಿಕೊಳ್ಳುತ್ತದೆ .  ಇಲ್ಲಿ ಶೌಚಾಲಯವೂ ಒಂದು ಲಕ್ಸುರಿಯಾದಂತಹ, ಶ್ರೇಣೀಕೃತ ವ್ಯವಸ್ಥೆಯ ಗ್ರಾಮೀಣ ಭಾರತದ ವಿಭಜನೆಯ, ಇಬ್ಬಗೆಯ ಮುಖಗಳನ್ನು ಅಂಬೇಡ್ಕರ್ ಅವರ ಕನ್ನಡಕದ ಮೂಲಕ  ಚಿತ್ರಿಸುತ್ತದೆ. ಜಾತಿ ಭಾರತದ ಕಠೋರ ವಾಸ್ತವಗಳನ್ನು ತನ್ನ ಅಂಬೇಡ್ಕರ್‍ವಾದದ ಚಿಂತನೆಗಳ ಮೂಲಕ ಸೆಲ್ಯುಲಾಯ್ಡ್‍ಗೆ ಅಳವಡಿಸಿರುವ ನಿರ್ದೇಶಕ ನಾಗ್ರಾಜ ಮಂಜುಲೆ ತಾಯ್ತನದ ಅಂತಕರಣದಲ್ಲಿ, ಮನುಕುಲದ ಪ್ರೀತಿಯಲ್ಲಿ,ಬುದ್ಧನ ಕಾರುಣ್ಯದಲ್ಲಿ ಇಡೀ ಚಿತ್ರವನ್ನು ಅದ್ಭುತವಾಗಿ ನಿರೂಪಿಸುತ್ತಾರೆ. ಇಡೀ ಸಿನಿಮಾವನ್ನು ಗ್ರಾಮೀಣ ಭಾರತದ ಸಹಜವಾಗಿಯೇ ದಣಿದ,ಸೊರಗಿದ ಸ್ಥಿತಿಯಲ್ಲಿ ಮತ್ತು ಅದರದೇ […]

ಸಿನಿಮಾ ಓದು-12: ‘ನಟ ಸಮ್ರಾಟ್’ ಕೌಟುಂಬಿಕ ಬಿಕ್ಕಟ್ಟನ್ನು ಬಿಚ್ಚಿಡುವ ಫ್ಯಾಮಿಲಿ ಡ್ರಾಮಾ

ಸಿನಿಮಾ ಓದು-12: ‘ನಟ ಸಮ್ರಾಟ್’ ಕೌಟುಂಬಿಕ ಬಿಕ್ಕಟ್ಟನ್ನು ಬಿಚ್ಚಿಡುವ ಫ್ಯಾಮಿಲಿ ಡ್ರಾಮಾ

ವಿಲಿಯಮ್ ಶೇಕ್ಸ್‍ಪಿಯರ್ ಜಗತ್ತು ಕಂಡ ಮಹಾನ್ ಇಂಗ್ಲಿಷ್ ನಾಟಕಕಾರ. ಈತನ ನಾಟಕಗಳು ಜಗತ್ತಿನ ನೂರಾರು ಭಾಷೆಗಳಿಗೆ ತರ್ಜುಮೆಗೊಂಡಿವೆ. ಭಾರತದ ಬೆಂಗಾಲಿ, ಕನ್ನಡ, ಗುಜರಾತಿ, ಹಿಂದಿ, ಮರಾಠಿ ಸೇರಿದಂತೆ ಬಹುತೇಕ ಎಲ್ಲ ಮುಖ್ಯ ಭಾಷೆಗಳಿಗೆ ಆತನ ಕೆಲವು ನಾಟಕಗಳು ಹತ್ತೊಂಬತ್ತನೆಯ ಶತಮಾನದ ಮಧ್ಯೆ ಭಾಗದಿಂದಲೇ ಅನುವಾದ/ರೂಪಾಂತರಗೊಳ್ಳಲು ಆರಂಭವಾದವು. ಹರಚಂದ್ರ ಘೋಷ್ ಅವರು ‘ದಿ ಮರ್ಚಂಟ್ ಆಫ್ ವೆನಿಸ್’ ನಾಟಕವನ್ನು ಬಂಗಾಳಿಗೆ(1852) ಅನುವಾದಿಸಿದರು. ಪಂಜಾಬಿ ನಾಟಕದ ಆದ್ಯರಾದ ಪ್ರೊ.ವಿ.ಸಿ. ನಂದಾ ತಮ್ಮ ‘ಶಾಮುಶಾ’ ನಾಟಕವನ್ನು ‘ದಿ ಮರ್ಚಂಟ್ ಆಫ್ ವೆನಿಸ್’ನಾಟಕವನ್ನು […]

ಟಿ.ವಿ. ಮಾಧ್ಯಮ ; ಆಳುವವರ ದೊಡ್ಡ ಆಯುಧ

ಟಿ.ವಿ. ಮಾಧ್ಯಮ ; ಆಳುವವರ ದೊಡ್ಡ ಆಯುಧ

ಹೊಸಯುಗಗಳು ಏಕಾಏಕಿ ಶುರುವಾಗುವುದಿಲ್ಲ ನಮ್ಮ ಅಜ್ಜನಾಗಲೇ ಹೊಸ ಯುಗದಲ್ಲಿ ಬಾಳುತ್ತಿದ್ದ ನನ್ನ ಮೊಮ್ಮಗನಿನ್ನೂ ಪ್ರಾಯಶಃ ಹಳೆಯದರಲ್ಲೇ ಬಾಳುವನೇನೋ. ……………………………………………………………………………………………………………….. ಹೊಸ ಆಂಟೇನಾಗಳು ಹರಡಿದ್ದು ಹಳೆಯ ಮೂರ್ಖತನಗಳನ್ನೇ ವಿವೇಕ ಸಾಗಿಬಂದದ್ದು ಬಾಯಿಂದ ಬಾಯಿಗೆ [ಬರ್ಟೋಲ್ಟ್ ಬ್ರೆಷ್ಟ್, ಅನು; ಶಾ. ಬಾಲುರಾವ್,) ಮಹಾಮಾನವತಾವಾದಿಯೆಂದು ಹೆಸರಾದ ಜರ್ಮನಿಯ ಬ್ರೆಕ್ಟ್ , ಹೋದಲೆಲ್ಲ ಬೆಂಬತ್ತಿ ಬರುತ್ತಿದ್ದ ನಾಜಿಗಳ ಬೇಟೆಯಿಂದ ತಪ್ಪಿಸಿಕೊಳ್ಳಲು ಖಂಡಾಂತರ ಅಲೆದ. ಸದಾ ಸಾವಿನ ನೆರಳಿನಲ್ಲಿ ಬದುಕುತ್ತಿದ್ದ ಈತ 1943?ರಲ್ಲಿ, ಎರಡನೆ ಮಹಾಯುದ್ದದ ರಣಕಾವಲಿಯ ಜೀವಭಯದಲ್ಲಿ ಬರೆದ ಕವಿತೆಯಿದು. ಜಗತ್ತಿನ ಬಹುತೇಕ […]

ಸಿನಿಮಾ ಓದು-11 : ಸಾವು ಕ್ಷಣಿಕ ಜೀವನ ನಿರಂತರ- ‘ಮಸಾನ್’ನ ತಿರುಳು

ಸಿನಿಮಾ ಓದು-11 : ಸಾವು ಕ್ಷಣಿಕ ಜೀವನ ನಿರಂತರ- ‘ಮಸಾನ್’ನ ತಿರುಳು

“ಜಿಂದಗಿ ಕ್ಯಾ ಹೈ ಅನಾಸಿರ ಮೇ-ಎ-ತರತೀಬ್ ಮೌತ್ ಕ್ಯಾ ಹೈ ಇನ್ಹಿ ಅಜ್ಝಾ ಕಾ ಪರೆಶಾನ್ ಹೋನಾ” (ಜೀವನ ಎಂಬುದು ದಾಳಿಂಬೆಯೊಳಗಿನ ಬೀಜದ ದಳಗಳಂತೆ; ಸಾವು ಎಂಬುದು ಅದೇ ದಾಳಿಂಬೆಯ ಬೀಜದ ದಳಗಳನ್ನು ತೆಗೆದು ಹೊರ ಚೆಲ್ಲಿದಂತೆ) ಇದು ಉತ್ತರ ಪ್ರದೇಶ ರಾಜ್ಯದ ಫರಿದಾಬಾದ್‍ನ ಉರ್ದು ಕವಿಯಾದ ಬ್ರಿಜ್ ನಾರಾಯಣ ‘ಚಕ್‍ಬಸ್ತ್’ ಅವರ ಪ್ರಖ್ಯಾತ ಗಜಲ್‍ಗಳಲ್ಲಿ ಒಂದು. ನೀರಜ್ ಘಾಯ್ವನ್ ನಿರ್ದೇಶನದ ಚೊಚ್ಚಿಲ ಚಿತ್ರ ‘ಮಸಾನ್’(2015)ನ ಆರಂಭದಲ್ಲಿ ಈ ಗಜಲ್‍ನ್ನು ಕೋಟ್ ಮಾಡಲಾಗಿದೆ. ಬದುಕು-ಸಾವುಗಳ ನಿಗೂಢತೆ ಹಾಗೂ […]