ಸಿನಿಮಾ

ಸಿನಿಮಾ

ನಿನಗೆ ಅಲ್ವಿದಾ ಹೇಳಲು ಸಾಧ್ಯವೇ ?

ನಿನಗೆ ಅಲ್ವಿದಾ ಹೇಳಲು ಸಾಧ್ಯವೇ ?

(ಅಕ್ಟೋಬರ್ 13 1987ರಂದು ಇಹಲೋಕ ತ್ಯಜಿಸಿದ ವೈವಿಧ್ಯಮಯ ಗಾಯಕ, ನಟ , ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ವಿದೂಷಕ ಇತ್ಯಾದಿ ಇತ್ಯಾದಿ , ಕಿಶೋರ್ ಕುಮಾರ್ ಅವರ 30ನೆಯ ವರ್ಷದ ಸ್ಮರಣೆಯಲ್ಲಿ ಈ ಲೇಖನ ) ಮುಂಜಾವಿನ ಸೂರ್ಯೋದಯ ನೋಡುತ್ತಲೇ ನಿನ್ನ “ ಸವೇರೇ ಕಾ ಸೂರಜ್ ತುಮ್ಹಾರೇ ಲಿಯೇ ಹೈ ” ಮನದಾಳದಲ್ಲಿ ಗುನುಗುನಿಸುತ್ತದೆ. ನಿತ್ಯ ಚಟುವಟಿಕೆಗಳು ಆರಂಭವಾಗುತ್ತಲೇ “ ಜಿಂದಗೀ ಕೆ ಸಫರ್ ಮೆ ಗುಜರ್ ಜಾತೆ ಹೈ ಜೋ ಮಖಾಂ ಓ ಫಿರ್ […]

ಮಾಧ್ಯಮ ಅಭಿವ್ಯಕ್ತಿ ಮತ್ತು ಸಾಮಾಜಿಕ ಹೊಣೆಗಾರಿಕೆ

ಮಾಧ್ಯಮ ಅಭಿವ್ಯಕ್ತಿ ಮತ್ತು ಸಾಮಾಜಿಕ ಹೊಣೆಗಾರಿಕೆ

ನಾಗರಿಕತೆಯ ಬೆಳವಣಿಗೆಯಲ್ಲಿ ಮತ್ತು ಮಾನವನ ಅಭ್ಯುದಯದ ಹಾದಿಯಲ್ಲಿ ಸಂವಹನ ಕ್ರಿಯೆ ಮಹತ್ತರ ಪಾತ್ರ ವಹಿಸುತ್ತದೆ. ಎರಡು ಧೃವಗಳಲ್ಲಿರುವ ಜನಸಮುದಾಯಗಳನ್ನು ಪರಸ್ಪರ ಸಂಪರ್ಕ ಹೊಂದುವಂತೆ ಮಾಡುವ ಸಂವಹನ ಕ್ರಿಯೆ ಸಮಾಜವನ್ನು ಒಂದುಗೂಡಿಸುವಲ್ಲಿ ಸಫಲವಾಗುತ್ತದೆ. ಸಂವಹನ ಕ್ರಿಯೆಗೆ ಪೂರಕವಾದ ಸಂಪರ್ಕ ಮಾಧ್ಯಮಗಳು ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ನಿಜ, ಆಧುನಿಕ ತಂತ್ರಜ್ಞಾನ ಸಾಮಾಜಿಕ ವಲಯದಲ್ಲಿ ಸಂವಹನವನ್ನು ಜಂಗಮ ಸ್ವರೂಪಿಯಾಗಿಸಿದ್ದು ವ್ಯಕ್ತಿಗಳ ನಡುವೆ ನೇರಾನೇರ ಸಂಪರ್ಕ ಸಾಧಿಸಲು ನೆರವಾಗಿದೆ. ಇಂದು ಜಗತ್ತಿನ ಮತ್ತೊಂದು ತುದಿಯಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿಯಲು […]

ಅಲ್ಲಿ ಎಲ್ಲರೂ ‘Cut Throat’ ಗುಣವುಳ್ಳವರೇ.

ಅಲ್ಲಿ ಎಲ್ಲರೂ ‘Cut Throat’ ಗುಣವುಳ್ಳವರೇ.

 1966 ರಲ್ಲಿ ಬಿಡುಗಡೆಯಾದ “ಗುಡ್ ಬ್ಯಾಡ್ ಅಗ್ಲಿ” ಹಾಲಿವುಡ್ ಸಿನಿಮಾಗೆ ಈಗ ೫೦ ವರ್ಷ. ಇದರ ವಿಶೇಷವೆಂದರೆ ಕೌಬಾಯ್ ಮಾದರಿಯ ಸಿನಿಮಾಗಳಿಗೆ ನಾಂದಿ ಹಾಡಿದ್ದು. ಸಿನಿಮಾವನ್ನು ಸ್ಟೈಲಿಷ್ ಆಗಿ ಹೇಗೆ ರೂಪಿಸಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ “ಗುಡ್ ಬ್ಯಾಡ್ ಅಗ್ಲಿ” ಸಿನಿಮಾ. ಕ್ಲಿಂಟ್ ಈಸ್ಟ್ ವುಡ್ ಇದರ ನಿರ್ದೇಶಕ. ಈ ಸುದ್ದಿಯನ್ನು ಓದಿಗಾಗ ಕೂಡಲೆ ನೆನಪಾದದ್ದು ಅರವತ್ತರ ದಶಕದಲ್ಲಿ ತೆರೆಕಂಡ ಮೂರು ಕೌಬಾಯ್ ಚಿತ್ರಗಳು. A Fistful of Dollars,  For a Few Dollars More, […]

ಯುದ್ಧೋನ್ಮಾದ ಬಾಹುಬಲಿ ಮತ್ತು ಮಾಧ್ಯಮಗಳು

ಯುದ್ಧೋನ್ಮಾದ ಬಾಹುಬಲಿ ಮತ್ತು ಮಾಧ್ಯಮಗಳು

ಮಾನವ ಸಮಾಜ ನವ ಉದಾರವಾದ ಮತ್ತು ಜಾಗತೀಕರಣದ ಸುಳಿಗೆ ಸಿಲುಕಿ ಗ್ರಾಹಕ ಸಂಸ್ಕøತಿಯನ್ನೇ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳು, ಮಾನವ ಸಂವೇದನೆ ಮತ್ತು ಮನುಜ ಸಂಬಂಧಗಳು ಕ್ರಮೇಣ ನಶಿಸುತ್ತಿವೆ. ಕ್ರೌರ್ಯ , ಅಸಹನೆ, ಆಕ್ರೋಶ, ಹತಾಶೆ ಮತ್ತು ದ್ವೇಷ ಈ ಋಣಾತ್ಮಕ ಗುಣಗಳು ನಾಗರಿಕ ಸಮಾಜವನ್ನು ಆವರಿಸಿವೆ. ಮಾನವ ಸಮಾಜ ಯಾವುದೇ ಕ್ಷೇತ್ರದಲ್ಲೂ ಸ್ವಾರ್ಥತೆ ಇಲ್ಲದ, ಸಹನೆ ಸಂವೇದನೆ ಇರುವಂತಹ ಸನ್ನಿವೇಶವನ್ನು ಸೃಷ್ಟಿಸಲಾಗುತ್ತಿಲ್ಲ. ಬದಲಾಗಿ ಭಾಷೆ, ಜಾತಿ,ಧರ್ಮ, ಪಂಗಡ ಮತ್ತಿತರ ಸಂಕುಚಿತ ಅಸ್ಮಿತೆಗಳ ಬಲೆಗೆ ಸಿಲುಕಿ […]

ಸಿನಿಮಾ ಹೊಸಕಾಲದ ಜನಪದ ಭಾಷೆ

ಸಿನಿಮಾ ಹೊಸಕಾಲದ ಜನಪದ ಭಾಷೆ

ನಮ್ಮ ಕಾಲದಲ್ಲಿ ಕೊಂಚ ಸಮಯ ಸಿಕ್ಕರೆ ಜನರು ಚರ್ಚೆಗೆ ಆರಿಸಿಕೊಳ್ಳುವ ಮುಖ್ಯಸಂಗತಿಗಳೆಂದರೆ ಕ್ರಿಕೆಟ್, ಸಿನಿಮಾ ಮತ್ತು ಧಾರಾವಾಹಿಗಳ ವಿಚಾರಗಳೇ ಆಗಿವೆ. ಅಷ್ಟರಮಟ್ಟಿಗೆ ಜನರು ಇವುಗಳ ಬಗೆಗೆ ಮಾತಿಗಿಳಿಯುತ್ತಾರೆ. ಬಸ್ಸು, ರೈಲು, ಶಾಲೆ-ಕಾಲೇಜು, ಕಚೇರಿ-ಮನೆ ಎಲ್ಲಿ ಬೇಕಾದರೂ ಇದನ್ನು ಕಾಣಬಹುದು. ಎಷ್ಟೋ ಸಂದರ್ಭದಲ್ಲಿ ತಮ್ಮನ್ನು, ತಮ್ಮ ಮನೆಯನ್ನು ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗೆಗೆ ಯೋಚಿಸಲು ಪುರಸೊತ್ತಿಲ್ಲದವರು; ಈ ಸಂಗತಿಗಳ ಬಗೆಗೆ ಚರ್ಚೆ ಮಾಡಿಯೇ ಮಾಡುತ್ತಾರೆ. ಇದು ಈ ಕಾಲಮಾನದ ಯುಗದ ಜನಪದ ಧರ್ಮದಂತೆ ಪ್ರಬಲ ಜನಪ್ರಿಯ ಸಂಸ್ಕøತಿಯಾಗಿ ಬೆಳೆದಿದೆ. […]

ಬಿಸಿಲು ಬಯಲು ನೆಳಲು

ಬಿಸಿಲು ಬಯಲು ನೆಳಲು

ಲೇಖಕ ಶ್ರೀಪಾದ ಭಟ್‍ರವರು ಬರೆದಿರುವ ಹೊಸ ಅಲೆಯ ಸಿನಿಮಾಗಳ ಕುರಿತಾದ ಪುಸ್ತಕ ಬಿಸಿಲು ಬಯಲು ನೆಳಲು. ಸಿನಿಮಾಗಳ ಕುರಿತಾಗಿ ವಿಮರ್ಶೆಗಳು ಬರುತ್ತಿರುತ್ತವೆಯಾದರೂ ಒಂದು ಸೈದ್ದಾಂತಿಕ ಗ್ರಹಿಕೆಯ ಹಿನ್ನಲೆಯಲ್ಲಿ ವಿಮರ್ಶೆಯಾಗುವುದು ಕಡಿಮೆ; ಈ ಕಾರಣದಿಂದಾಗಿ ಹೊಸ ಅಲೆಯ ಸಿನಿಮಾ ಕುರಿತಾದ ಈ ಬರವಣಿಗೆ ವಿಶಿಷ್ಟವೆನಿಸುತ್ತದೆ. ಮನರಂಜನಾತ್ಮಕವಾಗಿಯೇ ಬಹುಜನ ಸಿನಿಮಾಗಳನ್ನು ಗುರ್ತಿಸುವುದರ ಪರಿಣಾಮವಾಗಿ ಸಿನಿಮಾದ ಚಿಂತನಾ ಆಯಾಮ ಸಂಕುಚಿತಗೊಂಡಂತೆ ಭಾಸವಾದರೂ ಹೊಸ ಅಲೆಯ ಸಿನಿಮಾಗಳು ಜನರ ಮನಸ್ಸಿನಲ್ಲಿ ಉಂಟುಮಾಡಿರುವ, ಮಾಡಬಹುದಾದಂತಹ ಯೋಚನೆಗಳನ್ನು ಈ ಪುಸ್ತಕ ಓದುಗರಿಗೆತೆರೆದಿಡುತ್ತದೆ. ನಿಯೋ-ರಿಯಲಿಸಂನ ಕಾಲಘಟ್ಟದಲ್ಲಿ ಸಿನಿಮಾಗಳ […]

ಸಿನಿಮಾ ಓದು-21: ದಲಿತರ ನೆತ್ತರಗಾಥೆ ‘ಕಮ್ಮಟ್ಟಿಪಾಡಮ್’

ಸಿನಿಮಾ ಓದು-21: ದಲಿತರ ನೆತ್ತರಗಾಥೆ ‘ಕಮ್ಮಟ್ಟಿಪಾಡಮ್’

ಕೇರಳದ ಕೋಚಿಯವರಾದ ರಾಜೀವ ರವಿ(1973) ಪುಣೆಯಲ್ಲಿರುವ ‘ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ’(ಎಫ್‍ಟಿಐಐ)ಯಿಂದ 1997ರಲ್ಲಿ ಪದವಿ ಪಡೆದವರು. ರಾಜೀವ ಮುಂಬೈಗೆ ಹೋಗಿ ಮಧುರ ಭಂಡಾರಕರ್ ಅವರ ‘ಚಾಂದನಿ ಬಾರ್’(2001) ಚಿತ್ರಕ್ಕೆ ಸ್ವತಂತ್ರ ಸಿನಿಮಾಟೋಗ್ರಾಫರ್‍ನಾಗಿ ಸಿನಿಮಾ ಬದುಕನ್ನು ಆರಂಭಿಸಿದರು. ಅನುರಾಗ ಕಶ್ಯಪ್ ಅವರ ‘ದೇವ್ ಡಿ’, ‘ಗ್ಯಾಂಗ್ಸ್ ಆಫ್ ವಸ್ಸೇಪುರ’(ಭಾಗ ಒಂದು ಮತ್ತು ಎರಡು) ಹಾಗೂ ‘ಬಾಂಬೆ ವೆಲ್ವೆಟ್’ ಚಿತ್ರಗಳಿಗೆ ರಾಜೀವ ಅವರೇ ಸಿನಿಮಾಟೋಗ್ರಾಫರ್‍ನಾಗಿ ಕೆಲಸ ನಿರ್ವಹಿಸಿದವರು. ರಾಜೀವ ತನ್ನ ಹೆಂಡತಿಯಾದ ಗೀತು ಮೋಹನದಾಸ್ ನಿರ್ದೇಶನದ ‘ಲೈಯರ್ಸ್ ಡೈಸ್’ […]

ಸಿನಿಮಾ ಓದು- 20 : ಅಕಿರ ಕುರೋಸಾವನ ಕನಸುಗಳ ಜಗತ್ತು ‘ಡ್ರೀಮ್ಸ್’

ಸಿನಿಮಾ ಓದು- 20 : ಅಕಿರ ಕುರೋಸಾವನ ಕನಸುಗಳ ಜಗತ್ತು ‘ಡ್ರೀಮ್ಸ್’

ಸುಭಾಷ್ ರಾಜಮಾನೆ ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ; ಯಾರ ಲೀಲೆಗೋ ಯಾರೊ ಏನೊ ಗುರಿ- ಯಿರದೆ ಬಿಟ್ಟ ಬಾಣ ! ಇದು ಬಾಳು ನೋಡು; ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ; ಹಲವುತನದ ಮೈಮರೆಸುವಾಟವಿದು; ನಿಜವು ತೋರದಲ್ಲ ! – ಗೋಪಾಲಕೃಷ್ಣ ಅಡಿಗ(‘ಇದು ಬಾಳು’ ಕವಿತೆಯಿಂದ) ನಮಗೆ ಬೀಳುವ ಕನಸುಗಳು ಬಹುಮಟ್ಟಿಗೆ ಅಸಂಬದ್ಧವೂ ಅಪೂರ್ಣವೂ ಆಗಿರುತ್ತವೆ. ವಾಸ್ತವವಾಗಿ ಕನಸುಗಳು ಅಸ್ಪಷ್ಟವಾಗಿರುತ್ತವೆ; ತರ್ಕಬದ್ಧವಲ್ಲದ ಅಂಶಗಳಿಂದ ಕೂಡಿರುತ್ತವೆ. ಇಂತಹ ಕನಸುಗಳನ್ನು ನೋಡಲಾಗದು; ಹಾಗೊಂದು ವೇಳೆ ಕನಸನ್ನು ಕಾಣಲು ಪ್ರಯತ್ನಿಸಿದರೆ ಅದು ಹಗಲುಗನಸಾಗುತ್ತದೆ. […]

ಸಿನಿಮಾ ಓದು- 19: ತಂದೆ ಮಗನ ಸಂಬಂಧದ ಚಿತ್ರ ‘ದಿ ಪರ್‍ಸ್ಯೂಟ್ ಆಫ್ ಹ್ಯಾಪಿನೆಸ್’

ಸಿನಿಮಾ ಓದು- 19: ತಂದೆ ಮಗನ ಸಂಬಂಧದ ಚಿತ್ರ ‘ದಿ ಪರ್‍ಸ್ಯೂಟ್ ಆಫ್ ಹ್ಯಾಪಿನೆಸ್’

ಯಾರೇ ಆಗಲಿ ತಾವು ಅಂದುಕೊಂಡಿದ್ದನ್ನು ಸಾಧಿಸಲು ದೃಢವಾದ ಮನಸ್ಸು ಬೇಕಾಗುತ್ತದೆ. ತಮ್ಮೊಳಗಿನ ಸುಪ್ತ ಸಾಮಥ್ರ್ಮದ ಬಗ್ಗೆ ಮೊದಲು ತಮಗೆ ನಂಬಿಕೆ ಇರಬೇಕಾಗುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಆಯ್ಕೆಯ ಕ್ಷೇತ್ರದಲ್ಲಿ ಯಶಸ್ವಿಯಾಗಲು ಏನೆಲ್ಲ ಸಮಸ್ಯೆಗಳನ್ನು ದಾಟಬೇಕಾಗುತ್ತದೆ. ಯಶಸ್ಸು ಎನ್ನುವುದು ಯಾವ ಪ್ರಯತ್ನಗಳಿಲ್ಲದೆ ಅಷ್ಟು ಸುಲಭದಲ್ಲಿ ಕೈವಶವಾಗದು ಎಂದು ಆಗಾಗ ಹಿರಿಯರು ಹೇಳುತ್ತಿರುತ್ತಾರೆ. ಅದು ಕಲ್ಲು ಮುಳ್ಳುಗಳಿಂದ ಕೂಡಿರುವ ದಾರಿ ಎಂದು ಕೂಡ ಹೇಳುತ್ತಾರೆ. ಸಾಧಿಸುವ ಮನಸ್ಸಿದ್ದರೆ ಏನನ್ನು ಬೇಕಾದರು ಸಾಧಿಸಬಹುದು; ಮನಸ್ಸಿದ್ದರೆ ಮಾರ್ಗವಿದೆ. ಇಂತಹ ಉಪದೇಶದ ಮಾತುಗಳನ್ನು […]

ಸಿನಿಮಾ ಓದು-18 : ಬೌದ್ಧ ತಾತ್ವಿಕತೆಯ ಚಿತ್ರ ‘ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್ ಅಂಡ್… ಸ್ಪ್ರಿಂಗ್’

ಸಿನಿಮಾ ಓದು-18 : ಬೌದ್ಧ ತಾತ್ವಿಕತೆಯ ಚಿತ್ರ ‘ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್ ಅಂಡ್… ಸ್ಪ್ರಿಂಗ್’

ದಕ್ಷಿಣ ಕೋರಿಯಾ ದೇಶದ ಚಲನಚಿತ್ರ ನಿರ್ದೇಶಕರಲ್ಲೇ ಕಿಮ್ ಕಿ ಡುಕ್‍ನ ಹೆಸರು ಅತ್ಯಂತ ಚಿರಪರಿತವಾಗಿದೆ. ಡುಕ್ ತನ್ನ ದೇಶದ ಸಮಕಾಲೀನ ಹೊಂಗ್ ಸಂಗ್-ಸೂ ಮತ್ತು ಲೀ ಚಾಂಗ್ ಡೊಂಗ್ ಅವರಂತಹ ಬುದ್ಧಿಶಾಲಿ ನಿರ್ದೇಶಕರಿಗಿಂತ ವಿಭಿನ್ನವಾದ ಸಿನಿಮಾಗಳನ್ನು ಜಗತ್ತಿಗೆ ನೀಡಿದವನು. ತೀರ ಸಾಮಾನ್ಯ ಎನ್ನಿಸುವ ಕತೆಗಳಿಗೆ ತನ್ನದೇ ಆದ ಮಾಂತ್ರಿಕ ಸ್ಪರ್ಶವನ್ನು ನೀಡಿ ಪ್ರೇಕ್ಷಕರನ್ನು ಸೆಳೆದವನು. ಆದರೆ ಡುಕ್‍ನ ಸಿನಿಮಾಗಳಲ್ಲಿ ಹಿಂಸೆ ಮತ್ತು ಕ್ರೌರ್ಯದ ಅತಿಯಾದ ವಿಜೃಂಭನೆಯೂ ಇರುವುದರಿಂದ ಆತ ಅಷ್ಟೇ ವಿವಾದಗಳಿಗೂ ಕಾರಣವಾಗಿದ್ದಾನೆ. ಔಪಚಾರಿಕ ಉನ್ನತ ಶಿಕ್ಷಣದಿಂದ […]

1 2 3 4