ರಂಗಭೂಮಿ

ರಂಗಭೂಮಿ

ರಂಗಕಥನ: ಬಸವರಾಜ ಮನಸೂರರ ಹೋರಾಟದ ಕಲಾಬದುಕು

ರಂಗಕಥನ: ಬಸವರಾಜ ಮನಸೂರರ  ಹೋರಾಟದ ಕಲಾಬದುಕು

ಖ್ಯಾತಗಾಯಕ ಮಲ್ಲಿಕಾರ್ಜುನ ಮನಸೂರರ ಸೋದರ ಬಸವರಾಜ ಮನಸೂರರು(1905-1979), ಭೀಮರಾಯಪ್ಪ-ನೀಲಮ್ಮ ಅವರ ಮಗನಾಗಿ ಧಾರವಾಡ ಜಿಲ್ಲೆಯ ಮನಸೂರಿನಲ್ಲಿ ಹುಟ್ಟಿದರು. ತಂದೆ ಭೀಮರಾಯಪ್ಪನವರು ಸಂಗೀತ, ದೊಡ್ಡಾಟ ಹಾಗೂ ನಾಟಕಗಳಲ್ಲಿ ಆಸಕ್ತಿಯುಳ್ಳವರು. ದೊಡ್ಡಾಟಗಳಲ್ಲಿ ರಾಮನ ಪಾತ್ರಕೆ ಹೆಸರುವಾಸಿಯಾಗಿದ್ದರು. ಬೇರೆ ಬೇರೆ ಊರುಗಳಿಂದ ದೊಡ್ಡಾಟದ ಮೇಳಗಳನ್ನು ಕರೆಯಿಸಿ ಪ್ರದರ್ಶನ ಏರ್ಪಡಿಸುತ್ತಿದ್ದವರು. ಸಂಗೀತ, ಲಾವಣಿ, ಗೀಗೀಪದ ಹಾಡುವವರನ್ನು ಕರೆಯಿಸಿ ಹಾಡಿಸುತ್ತಿದ್ದರು. ತಾಯಿ ನೀಲಮ್ಮ ಗರತಿಯಹಾಡು, ಬೀಸುವಹಾಡು, ಮದುವೆಯ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಈ ಪರಿಸರ ಬಸವರಾಜರ ಕಲಾಭಿರುಚಿಯನ್ನು ಬೆಳೆಸಿತು. ಬಸವರಾಜ ಅವರು ಕನ್ನಡ ಪರ […]

ರಂಗಕಥನ : ಅಮೀರ್‍ಬಾಯಿ ಕರ್ನಾಟಕಿ

ರಂಗಕಥನ : ಅಮೀರ್‍ಬಾಯಿ ಕರ್ನಾಟಕಿ

ಅಮೀರ್‍ಬಾಯಿ ಕರ್ನಾಟಕಿಯವರು(1912-1965) ಉತ್ತರ ಕರ್ನಾಟಕದ ವೃತ್ತಿರಂಗಭೂಮಿ ಗಾಯಕ ನಟಿಯರಲ್ಲಿ ಪ್ರಮುಖ ಸ್ಥಾನಪಡೆದುಕೊಂಡಿದ್ದಾರೆ. ಇವರು ಸಿನಿಮಾದ ಹಾಡುನಟಿಯಾಗಿ, 30-40ರ ದಶಕದಲ್ಲಿ ಮುಂಬೈ ಚಿತ್ರರಂಗದಲ್ಲಿ ತಮ್ಮ ಗಾಯನದ ಮೂಲಕ ಗುರುತಿಸಿಕೊಂಡವರು. ಅಮೀರ್‍ಬಾಯಿಯವರು ವೃತ್ತಿರಂಗಭೂಮಿಯಲ್ಲಿ ಲಕ್ಷ್ಮೇಶ್ವರದ ಬಚ್ಚಾಸಾನಿ, ಬಸವರಾಜ ಮನಸೂರ, ಮಲ್ಲಿಕಾರ್ಜುನ ಮನಸೂರ, ಹಂದಿಗನೂರ ಸಿದ್ರಾಮಪ್ಪ, ಶಾಂತಾ ಹುಬ್ಳಿಕರ್, ಅಥಣಿ ಶಂಕರರಾವ್, ಮಧ್ವರಾಜ ಉಮರ್ಜಿ, ಏಣಗಿ ಬಾಳಪ್ಪ ಮತ್ತು ಜೋಳದರಾಶಿ ದೊಡ್ಡನಗೌಡರ ಸಮಕಾಲೀನರು. ಇವರ ಕಿರಿಯ ಸಮಕಾಲೀನರು ಸಿದ್ಧರಾಮ ಜಂಬಲದಿನ್ನಿ, ಲಾಡ್‍ಸಾಹೇಬ ಅಮೀನಗಡ, ಎಲಿವಾಳ ಸಿದ್ಧಯ್ಯ, ಡಿ.ದುರ್ಗಾದಾಸ ಮೊದಲಾದವರು. ಅಮೀರ್‍ಬಾಯಿಯವರು ಮುಂಬೈ […]

ಬೇತಾಳ ಪ್ರಶ್ನೆ

ಬೇತಾಳ ಪ್ರಶ್ನೆ

(ಏಕಾಂಕ ನಾಟಕ) [ಜೋಗಿ ಗುಡ್ಡದ ದೊಡ್ಡ ಆಲದ ಮರದ ಕೊಂಬೆಗೆ ಭೇತಾಳ ತಲೆಕೆಳಕು ನೇತು ಬಿದ್ದಿದೆ. ಆ ಮರದ ನೆರಳಿಗೆಂದು ವಿಕ್ರಮರಾಯ ಬರ್ತಾನೆ.] ವಿಕ್ರಮ: ಯಾಕಪಾ..ಭೇತಾಳ ? ಇದ್ಯಾವ ಶಾಪಾನೋ ನಿಂಗ ? ಬಾವಲಿ ಹಾಂಗ ನೇತ ಬಿದ್ದಿದ್ದಿ? ಭೇತಾಳ: ಹೌದಪಾ.. ವಿಕ್ರಮ, ನನ್ ಪ್ರಶ್ನೆಗ್ ಉತ್ರ ಸಿಗೋ ತಂಕ ನನ್ಗ ಇದ ಗತಿ ಐತಿ ನೋಡು. ಅಲ್ಲೋ ವಿಕ್ರಮ.. ಈ ಎಂ. ಎಂ. ಕಲ್ಬುರ್ಗಿ ಅಂಬಾವ ಯಾರಪಾ…? ವಿಕ್ರಮ: ಇದೇನ್ ಹಿಂಗ್ ಕೇಳತಿದ್ದಿ..? ಬೀಸೋ ಗಾಳೀಲಿ, […]

ಪ್ರಸಿದ್ಧ ಖಳನಾಯಕ ಹಂದಿಗನೂರು ಸಿದ್ರಾಮಪ್ಪ!

ಪ್ರಸಿದ್ಧ ಖಳನಾಯಕ ಹಂದಿಗನೂರು ಸಿದ್ರಾಮಪ್ಪ!

ಕರ್ನಾಟಕದ ವೃತ್ತಿರಂಗಭೂಮಿಯ ಮೇಲೆ ವೀರರಸ, ಕರುಣಾರಸ, ಹಾಸ್ಯರಸಗಳ ಮರ್ಮವನ್ನರಿತು ಅಭಿನಯ ಕಲೆ ಮತ್ತು ಹಾಡುಗಾರಿಕೆಯಲ್ಲಿ ಖ್ಯಾತಿ ಪಡೆದ ನಟರೆಂದರೆ ಹಂದಿಗನೂರು ಸಿದ್ರಾಮಪ್ಪ(1899-1947) ಪ್ರಸಿದ್ಧ ಖಳನಾಯಕರೂ ಆಗಿದ್ದ ಸಿದ್ರಾಮಪ್ಪನವರು, ಬಳ್ಳಾರಿ ರಾಘವ, ಎ.ವಿ.ವರದಾಚಾರ್ಯ, ಮಹಮ್ಮದ್‍ಪೀರ, ಗರೂಡ ಸದಾಶಿವರಾಯರಂತಹ ಪ್ರತಿಭಾಶಾಲಿ ನಟರ ಸಾಲಿಗೆ ಸಿದ್ರಾಮಪ್ಪನವರು. ಸಿದ್ರಾಮಪ್ಪನವರು ಬಿಜಾಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಹಂದಿಗನೂರಲ್ಲಿ ಜನಿಸಿದರು. ರಜಪೂತ ಸಮುದಾಯಕ್ಕೆ ಸೇರಿದ ಇವರ ತಂದೆ ರಾಜಾರಾಮ್, ತಾಯಿ ಹೀರಾಬಾಯಿ. ಇವರ ಹುಟ್ಟು ಹೆಸರು ಸಿದ್ಧಸಿಂಹ. ಮನೆಯಲ್ಲಿ ಬಡತನದ ಕಾರಣ ಬಾಲ್ಯದಲ್ಲಿಯೇ ದುಡಿಮೆಗೆ ಸಿದ್ರಾಮಪ್ಪ ಬಿದ್ದರು. […]

‘ಗಾನರತ್ನ’ ಗಂಗೂಬಾಯಿ ಗುಳೇದಗುಡ್ಡ-Gangubai Guledagudda

‘ಗಾನರತ್ನ’ ಗಂಗೂಬಾಯಿ ಗುಳೇದಗುಡ್ಡ-Gangubai Guledagudda

‘ಗಾನರತ್ನ’ ಬಿರುದಿನಿಂದ ಪ್ರಖ್ಯಾತರಾಗಿದ್ದ ಗಂಗೂಬಾಯಿ ಗುಳೇದಗುಡ್ಡದವರು (1902-1941) ಉತ್ತರ ಕರ್ನಾಟಕದ ಶ್ರೇಷ್ಠ ನಟಿಯರಲ್ಲಿ ಒಬ್ಬರು. ಪ್ರಸಿದ್ಧ ಗಾಯಕನಟಿ ಯಲ್ಲೂಬಾಯಿಯವರ ಮಗಳಾಗಿದ್ದ ಗಂಗೂಬಾಯಿಗೆ ಚಿಕ್ಕಂದಿನಲ್ಲೆ ಸಂಗೀತದ ಪರಿಸರದಲ್ಲಿ ಬೆಳೆಯುವ ಅವಕಾಶ ಸಿಕ್ಕಿತು. ಗಂಗೂಬಾಯಿಯವರು ತಾಯಿಯ ಜತೆಯಲ್ಲೇ ಬೆಳೆದರು. ಇವರ ಪ್ರತಿಭೆಯನ್ನು ಗುರುತಿಸಿದ್ದು ಕೊಣ್ಣೂರ ಕಂಪನಿಯ ಮಾಲೀಕರಾದ ಶಿವಮೂರ್ತಿಸ್ವಾಮಿ ಕಣಬರ್ಗಿಮಠ ಅವರು. ಅವರು ತಮ್ಮ ಕಂಪನಿಯಲ್ಲಿ ಪಾತ್ರವಹಿಸಲು ಗಂಗೂಬಾಯಿಯವರನ್ನು ಆಹ್ವಾನಿಸಿದರು. ಕೊಣ್ಣೂರ ಕಂಪನಿಯ ‘ಹರಿಶ್ಚಂದ್ರ’ ನಾಟಕದಲ್ಲಿ ಯಲ್ಲೂಬಾಯಿ ‘ಚಂದ್ರಮತಿ’ಯಾಗಿ ಅಭಿನಯಿಸುತ್ತಿದ್ದರೆ, ಆರು ವರ್ಷದ ಗಂಗೂಬಾಯಿ ‘ರೋಹಿತಾಶ’್ವನ ಪಾತ್ರದಲ್ಲಿ ತಮ್ಮ ಅಭಿನಯದಿಂದ […]

ರಂಗಕಥನ : ಮುರಗೋಡ ಗಂಗಾಧರಪ್ಪ

ರಂಗಕಥನ : ಮುರಗೋಡ ಗಂಗಾಧರಪ್ಪ

ಮುರಗೋಡ ಗಂಗಾಧರಪ್ಪ ಉತ್ತರ ಕರ್ನಾಟಕದ ರಂಗಸಂಗೀತವನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹಾಡಿ ರಂಗಗೀತೆಗಳಿಗೆ ಹೊಸಜೀವ ಕೊಟ್ಟವರಲ್ಲಿ ಗಾಯಕನಟ ಮುರಗೋಡ ಗಂಗಾಧರಪ್ಪನವರು (1874-1949)ಮುಖ್ಯರು. ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಜನಿಸಿದರು. ಅವರು ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿದÀರೂ ಬಣ್ಣದ ಗೀಳು ಹಚ್ಚಿಕೊಂಡಿದ್ದರು. ಊರಿನಲ್ಲಿ ಆಡುತ್ತಿದ್ದ ನಾಟಕಗಳಲ್ಲಿ ಸಣ್ಣ ಪುಟ್ಟ ಪಾರ್ಟನ್ನು ಹಾಕುತ್ತಿದ್ದರು. ಹೀಗಾಗಿ ಚಿಕ್ಕಂದಿನಲ್ಲೇ ಅಭಿನಯಿಸುವ ಗುಣ ಅವರಲ್ಲಿ ಬಂದಿತ್ತು. ಅವರ ಹಾಡುಗಳನ್ನು ಕೇಳಿದ ಊರಿನ ಜನರು ಅವರು ದೊಡ್ಡ ಗಾಯಕರಾಗುವ ಬಗ್ಗೆ ಭರವಸೆ ಇಟ್ಟು, […]

ರಂಗಕಥನ : ನೀಲಕಂಠಬುವಾ ಗಾಡಗೋಳಿ (Neelakantabuvaa gaadagoli)

ರಂಗಕಥನ : ನೀಲಕಂಠಬುವಾ ಗಾಡಗೋಳಿ (Neelakantabuvaa gaadagoli)

ನೀಲಕಂಠ ಬುವಾ ಗಾಡಗೋಳಿಯವರು(1860-1959) ಸವಾಯಿ ಗಂಧರ್ವರ ಹಿರಿಯ ಪ್ರಥಮ ಶ್ರೇಣಿಯ ಶಿಷ್ಯವರ್ಗದವರಲ್ಲಿ ಒಬ್ಬರು. ಅವರು ಹೊಳೆ ಆಲೂರಿನ ಹಿರೇಮಠದ ಶ್ರೀ ದಾನಯ್ಯ ಮತ್ತು ಮಹಾಲಿಂಗವ್ವನರ ಎರಡನೇ ಮಗನಾಗಿ ಜನಿಸಿದರು. ಹೆತ್ತವರನ್ನು ಕಳೆದುಕೊಂಡ ನೀಲಕಂಠಯ್ಯ, ಹಿರಿಯಣ್ಣ ಶಂಭಯ್ಯನ ಆಸರೆಯಲ್ಲಿ ಬೆಳೆದು ದೊಡ್ಡವರಾದರು. ತಮ್ಮ ವಿದ್ಯಾವಂತನಾಗಬೇಕೆಂಬ ಹಂಬಲ ಶಂಭಯ್ಯನವರಿಗಿತ್ತು. ಬಾಲ್ಯದಿಂದಲೇ ನೀಲಕಂಠಯ್ಯನವರಿಗೆ ಸಂಗೀತದಲ್ಲಿ ಒಲವಿತ್ತು. ಅವರು ಬಡತನದಲ್ಲಿಯೂ ಸಂಗೀತವನ್ನು ಅತ್ಯಂತ ಪರಿಶ್ರಮದಿಂದ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿದರು. ಅದಕ್ಕಾಗಿ ತಮ್ಮ ಇಡೀ ಬಾಳನ್ನು ಸಂಗೀತಕ್ಕೆ ಅರ್ಪಿಸಿಕೊಂಡರು. ನೀಲಕಂಠಯ್ಯನವರು ಅಬ್ದುಲ್ ಕರೀಂಖಾನರ […]