ರಂಗಭೂಮಿ

ರಂಗಭೂಮಿ

ರಷ್ಯಾದ ದೇಹ-ಭಾರತೀಯ ಆತ್ಮ

ರಷ್ಯಾದ ದೇಹ-ಭಾರತೀಯ ಆತ್ಮ

“ಬಾಬಾ ಸಾಹೇಬನಿಗೆ, ಮೋಹನ ದಾಸನಿಗೆ ಶಿರಭಾಗಿ ನಮಿಸಿ ಕಲಿಯಬೇಕಿದೆ ನನಗೆ” ಇದು ಚಳುವಳಿಯಲ್ಲಿ ತನ್ನ ಮಗನನ್ನು ಕಳೆದುಕೊಂಡ ಚಲಕೊಪ್ಪದ ದುರ್ಗವ್ವಳ ಮನದಾಳದ ಬಯಕೆ. ಚಮ್ಮಾರಿಕೆಯನ್ನು ಮಾಡಿ ದುರ್ಗವ್ವ ಮತ್ತು ಅವನ ಮಗ ಬದುಕನ್ನು ದೂಡುತ್ತಿದ್ದಾರೆ. ಅವರು ತಯಾರಿಸುವ ವಸ್ತುಗಳಿಗೂ ತೆರೆಗಿ ವಿಧಿಸಿದ ಸರ್ಕಾರದ ನಿರ್ಧಾರ ಅವರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ಸರ್ಕಾರ ನಿರ್ಧಾರವನ್ನು ವಿರೋಧಿಸಿ ದುರ್ಗವ್ವಳ ಮಗ ಚೆಲುವ ಚಳುವಳಿಯನ್ನು ರೂಪಿಸುತ್ತಿದ್ದಾನೆ. ಚಳುವಳಿಯಿಂದ ಮಗನನ್ನು ದೂರಮಾಡಲು ಹೋದ ದುರ್ಗವ್ವ ತಾನೇ ಚಳುವಳಿಯ ಒಂದು ಭಾಗವಾಗುತ್ತಾಳೆ. ಅನೇಕ ಕಾರಣಗಳಿಂದಾಗಿ […]

ಸಂಘರ್ಷದಲ್ಲಿ ಚಿಗುರೊಡೆದ ಪ್ರೇಮವಂಶವೆಂಬ ‘ಶುದ್ಧವಂಶ’

ಸಂಘರ್ಷದಲ್ಲಿ ಚಿಗುರೊಡೆದ ಪ್ರೇಮವಂಶವೆಂಬ ‘ಶುದ್ಧವಂಶ’

ಭಾರತೀಯ ನಾಟಕಗಳಲ್ಲಿ ಪುರಾಣದ ಕಥೆಗಳನ್ನು ಇಟ್ಟುಕೊಂಡು ಸಮಕಾಲೀನಗೊಳಿಸುವುದೇ ಹೆಚ್ಚಾಗಿರುವ ಪ್ರಸ್ತುತ ಸಂದರ್ಭದಲ್ಲಿ ಮರಾಠಿಯ ‘ಪ್ರೇಮಾನಂದ ಗಜ್ವಿ’ಯವರು ರಚಿಸಿದ ‘ಶುದ್ಧ ಬೀಜಾಪೋಟಿ’ ನಾಟಕ ಭಿನ್ನವಾಗಿ ನಿಲ್ಲುತ್ತದೆ. ಇದನ್ನು ಕನ್ನಡದಲ್ಲಿ ‘ಡಿ.ಎಸ್.ಚೌಗಲೆ’ಯವರು ‘ಶುದ್ಧವಂಶ’ ಎಂದು ಅನುವಾದಿಸಿದ್ದಾರೆ. ಇದೊಂದು ಸಂಪೂರ್ಣವಾಗಿ ಸಾಮಾಜಿಕ ನಾಟಕವಾಗಿದೆ. ಅಲ್ಲದೆ ಪ್ರತಿಯೊಂದು ಪಾತ್ರಗಳು ಕಥೆಗೆ ಇಂಬುಕೊಡುತ್ತಾ ನಾಟಕದ ವಸ್ತುವನ್ನು ಪ್ರತಿನಿಧಿಸುತ್ತವೆ. ಪ್ರಸ್ತುತ ಭಾರತದ ಸಮಸ್ಯೆಗಳಾದ ಧಾರ್ಮಿಕ ಸಂಘರ್ಷದ ಕೋಮುವಾದವು ನಾಟಕದ ಮುಖ್ಯ ವಸ್ತುವಾದರೂ ಇದರೊಂದಿಗೆ ಅಂಟಿಕೊಂಡೆ ಸಾಗುವ ಜನಾಂಗಿಯ ದ್ವೇಷದ ಸುತ್ತ ಯುವ ಪೀಳಿಗೆಯ ಪ್ರೇಮದ ಮೇಲೆ […]

ನನ್ನ ಕೈಯಲ್ಲಿದ್ದ ಆಯ್ಕೆಯನ್ನೂ ಕಸಿದುಕೋಡು ತೀರ್ಮಾನಿಸಿದಿರಲ್ಲಾ ಯಾಕೆ?”-ಅಂಬೇಡ್ಕರ್

ನನ್ನ ಕೈಯಲ್ಲಿದ್ದ ಆಯ್ಕೆಯನ್ನೂ ಕಸಿದುಕೋಡು ತೀರ್ಮಾನಿಸಿದಿರಲ್ಲಾ ಯಾಕೆ?”-ಅಂಬೇಡ್ಕರ್

ಕೋಲಾರದ ಕಾಪಾಲಿಕಾ ತಂಡ ಪ್ರದರ್ಶಿಸಿದ ನಾಟಕ “ನನ್ನ ಅಂಬೇಡ್ಕರ್” (ರಚನೆ-ಕೋಟಿಗಾನಹಳ್ಳಿ ರಾಮಯ್ಯ) ಬೇರೆಯದೇ ಮಣ್ಣು ಬೇರೆಯದೇ ಕತೆ ಎಂಬ ತತ್ವದಲ್ಲಿ ಉತ್ತಮ ನಾಟಕವನ್ನು ಪ್ರದರ್ಶಿಸಿತು. ಅಂಬೇಡ್ಕರ್ ಚಿಂತನೆ ಮತ್ತು ವಯಕ್ತಿಕ ಸನ್ನಿವೇಶಗಳಿಂದ ಹೆಣೆದ ಕತೆ ಇದಾಗಿದ್ದು ನಾಟಕದ ರೂಪದಲ್ಲಿ ಅದ್ಬುತವಾಗಿ ಮೂಡಿಬಂತು. ಭಾರತದ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ಅಂಬೇಡ್ಕರ್ ಬಹಳ ಮುಖ್ಯ ಹೆಸರು. ಭಾರತದ ಸನ್ನಿವೇಶವನ್ನು ಇತರೆ ರಾಷ್ಟ್ರೀಯ ನಾಯಕರು ಗ್ರಹಿಸಿದ ರೀತಿ ಮತ್ತು ಅಂಬೇಡ್ಕರ್ ಗ್ರಹಿಸಿದ್ದ ರೀತಿ ಭಿನ್ನವಾಗಿತ್ತು ಎಂಬುದನ್ನು ನಾಟಕ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. […]

ಭಾಸ್ಕರ ಗೌಡರಿಗೆ ‘ಸಹಯಾನ ಸಮ್ಮಾನ’ ಪ್ರದಾನ..

ಭಾಸ್ಕರ ಗೌಡರಿಗೆ ‘ಸಹಯಾನ ಸಮ್ಮಾನ’ ಪ್ರದಾನ..

ಪರದೆಯ ಹಿಂದೆ ದುಡಿದ ಕಲಾವಿದರೊಬ್ಬರಿಗೆ ಸನ್ಮಾನ ನೀಡಿರುವುದು ಮಹತ್ವದ್ದಾಗಿದೆ- ಕಪ್ಪೆಕೆರೆ ಭಾಗವತರು. “ಯಕ್ಷಗಾನ ಇಂದು ಹಲವು ಬದಲಾವಣೆ ಕಾಣುತ್ತಿದೆ. ಈಗ ಯಕ್ಷಗಾನ ಅತಿ ತ್ವರಿತಗತಿಯಲ್ಲಿದೆ. ಭಾವನೆ ಬೇಡ, ಅಭಿನಯ ಬೇಡ, ಭಾವನಾತ್ಮಕ ಮಾತು ಬೇಡ, ಔಚಿತ್ಯಪೂರ್ಣ ಪಾತ್ರ ಚಿತ್ರಣ ಬೇಡ ಎನ್ನುವಂತಾಗಿದೆ. ಯಾರು ಮಂಡಿ ಹಾಕುತ್ತಾರೋ, ಕುಪ್ಪಳಿಸುತ್ತಾರೋ ಅವರೇ ದೊಡ್ಡ ಕಲಾವಿದರು ಎನ್ನಿಸಿಕೊಳ್ಳುತ್ತಿದ್ದಾರೆ. ಒಂದು ಪ್ರಸಂಗವನ್ನು ರಾತ್ರಿಯಿಡೀ ವಿವರವಾಗಿ, ಸೂಕ್ಷ್ಮವಾಗಿ ಆಡುತ್ತಿದ್ದ ಕಾಲ ಇತ್ತು. ಇಂದು 4-5 ಪ್ರಸಂಗಗಳನ್ನು ಒಂದೇ ರಾತ್ರಿ ಆಡಿ ಮುಗಿಸುವ ಕಾಲ ಬಂದಿದೆ. […]

ಯಕ್ಷಗಾನ ಪ್ರಸಂಗಗಳು ಸಂವಿಧಾನಕ್ಕೆ ವಿರುದ್ಧ

ಯಕ್ಷಗಾನ ಪ್ರಸಂಗಗಳು ಸಂವಿಧಾನಕ್ಕೆ ವಿರುದ್ಧ

ಈಚೆಗೆ ಹೊನ್ನಾವರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಅವರು ಕರಾವಳಿ ಯಕ್ಷಗಾನ ಕಲೆಯ ಪ್ರವೃತ್ತಿಗಳನ್ನು ಕುರಿತು ಮಾತನಾಡುತ್ತಾ, ‘ ಕೆಲವೊಂದು ಯಕ್ಷಗಾನ ಪ್ರಸಂಗಗಳು ಭಾರತೀಯ ಸಂವಿಧಾನಕ್ಕೆ ವಿರುದ್ಧವಾದ ತತ್ವಗಳನ್ನು ಪ್ರಚುರಪಡಿಸುತ್ತಿವೆ. ಪುರಾಣ ಕತೆಯ ಹೆಸರಲ್ಲಿ ಕೆಲವೆಡೆ ಜಾತಿ ನಿಂದನೆಯೂ ನಡೆಯುತ್ತಿದೆ. ‘ಕನಕಾಂಗಿ ಕಲ್ಯಾಣ’ದಲ್ಲಿ ಜಾತಿ ನಿಂದನೆಯ ಮಾತು ಬರುತ್ತದೆ. ಜಲಂಧರನ ಪ್ರಸಂಗದಲ್ಲಿ, ಜಲಂಧರನ ವೇಷದಲ್ಲಿ ಬರುವ ವಿಷ್ಣುವು ಜಲಂಧರನ ಪತ್ನಿಯ ಶೀಲ ಕೆಡಿಸುವುದಲ್ಲದೆ, ಆಕೆ ಆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡು, ಮರುಜನ್ಮ ಪಡೆದಾಗ […]

ರಂಗಕಥನ -13: ‘ಗಾನಮನೋಹರ’ ಮಧ್ವರಾಜ ಉಮರ್ಜಿ

ರಂಗಕಥನ -13: ‘ಗಾನಮನೋಹರ’ ಮಧ್ವರಾಜ ಉಮರ್ಜಿ

ಮಧ್ವರಾಜ ಉಮರ್ಜಿಯವರು(1914-1952) ಗರುಡ ಸದಾಶಿವರಾಯರ ಅಭಿನಯ ಕಲೆಯನ್ನು ಕರಗತ ಮಾಡಿಕೊಂಡು ನಟನಾಗಿ, ಹಾಡುಗಾರರಾಗಿ ಹೆಸರಾದವರು. ‘ನಟರಾಜ’, ‘ನಾಟ್ಯನಿಪುಣ’, ‘ಗಾನಮನೋಹರ’ ಮತ್ತು ‘ಗಾನರತ್ನ’ರೆಂಬ ಅಭಿದಾನಕ್ಕೆ ಪಾತ್ರರಾಗಿದ್ದ ಉಮರ್ಜಿಯವರು ತಮ್ಮ ನಾಯಕ ಪಾತ್ರಗಳಿಂದ ಜನಪ್ರಿಯರಾದವರು. ಉತ್ತರ ಕರ್ನಾಟಕದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಉಮರ್ಜಿಯವರು ಬೀಳಗಿಯಲ್ಲಿ ಜನ್ಮತಾಳಿದರು. ಇದು ಕನ್ನಡ ರಂಗಭೂಮಿಯ ಕಲಾವಿದರಾದ ಅಮೀರ್‍ಬಾಯಿ ಮತ್ತು ಗೋಹರ್‍ಬಾಯಿಯವರ ಊರು. ಉಮರ್ಜಿಯವರ ಪ್ರಾಥಮಿಕ ಶಿಕ್ಷಣದ ಗುರುಗಳು ಕನ್ನಡದ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರ ತಂದೆ ತಮ್ಮಣ್ಣ ಭಟ್ಟರು. ಉಮರ್ಜಿಯವರಿಗೆ ಸಂಗೀತದ ಆಸಕ್ತಿಯಿದ್ದ ಕಾರಣ, […]

ರಂಗಕಥನ -12: ನಡೆದಾಡುವ ರಂಗಭೂಮಿಯ ವಿಶ್ವಕೋಶ ಏಣಗಿ ಬಾಳಪ್ಪ

ರಂಗಕಥನ -12: ನಡೆದಾಡುವ ರಂಗಭೂಮಿಯ ವಿಶ್ವಕೋಶ ಏಣಗಿ ಬಾಳಪ್ಪ

ನೂರು ತುಂಬಿರುವ ಬಾಳಪ್ಪನವರು ಆಧುನಿಕ ಕನ್ನಡ ವೃತ್ತಿರಂಗಭೂಮಿಯ ಸಂದರ್ಭದಲ್ಲಿ ಎರಡನೆಯ ತಲೆಮಾರಿನ ಕಲಾವಿದರಲ್ಲಿ ಒಬ್ಬರು. ಕನ್ನಡ ವೃತ್ತಿರಂಗಭೂಮಿಯ ಮಟ್ಟಿಗೆ ‘ನಡೆದಾಡುವ ರಂಗಭೂಮಿಯ ವಿಶ್ವಕೋಶ’ದಂತಿರುವ ಅವರು, ಉತ್ತರ ಕರ್ನಾಟಕದ ವೃತ್ತಿರಂಗಭೂಮಿಯಲ್ಲಿ ಬಾಲನಟರಾಗಿ ರಂಗಪ್ರವೇಶಿಸಿ, ಗಾಯಕನಟರಾಗಿ, ನಂತರದಲ್ಲಿ ಸ್ವತಂತ್ರ ನಾಟಕ ಕಂಪನಿ ಕಟ್ಟಿದ ಮಾಲೀಕರಾಗಿ ಐದು ದಶಕಗಳನ್ನು ಮೀರಿದ ಬಣ್ಣದ ಬದುಕಿನ ಹಾದಿಯಲ್ಲಿ ನಡೆದವರು. ಇದರಿಂದ ಬಾಳಪ್ಪನವರ ಶತಮಾನದ ಬದುಕಿನ ಚರಿತ್ರೆಯೊಂದಿಗೆ ಕನ್ನಡ ರಂಗಭೂಮಿಯ ಶತಮಾನದ ಇತಿಹಾಸವೂ ತಳಕು ಹಾಕಿಕೊಂಡಿದೆ. 40ರ ದಶಕದಲ್ಲಿ ‘ಕಲಾವೈಭವ ನಾಟ್ಯ ಸಂಘ’ ಸ್ಥಾಪಿಸಿದ ಬಾಳಪ್ಪನವರು […]

ರಂಗಕಥನ -11: ಜೋಳದರಾಶಿ ದೊಡ್ಡನಗೌಡ

ರಂಗಕಥನ -11: ಜೋಳದರಾಶಿ ದೊಡ್ಡನಗೌಡ

ಜೋಳದರಾಶಿ ದೊಡ್ಡನಗೌಡರು(1910-1994) ಗಮಕಿ, ನಟ, ಪ್ರವಚನಕಾರ, ನಾಟಕಕಾರ, ಚಿಂತಕರಾಗಿ ಬಹುಮುಖ ಪ್ರತಿಭೆಯನ್ನು ತೋರಿದವರು. ಅವರು ಹೆಸರು ಮಾಡಿದ್ದು ಗಮಕ ಹಾಗೂ ನಟನೆಯಲ್ಲಿ. ಗಮಕಕಲೆಯನ್ನು ತಮ್ಮ ರಂಗಪ್ರಜ್ಞೆಗೆ ಧಾರೆಯೆರೆದು ಅವರು ನಾಟಕೀಯ ಗೊಳಿಸಿದರು. ಗಮಕ ಕಲೆಗೂ ಹಾಗೂ ಅಭಿನಯ ಕಲೆಗೂ ಇಲ್ಲಿ ಸಾವಯವ ಸಂಬಂಧವಿದೆ. ಗಮಕ ಕಲೆ ಅಭಿಯನಕ್ಕೆ ಪೋಷಕವಾದರೆ, ಅಭಿನಯಕಲೆ ಗಮಕ ಕಲೆಗೆ ಶಕ್ತಿಕೊಡುತ್ತದೆ. ಮುಂದೆ ಬಳ್ಳಾರಿಯ ಹೆಸರಾಂತ ನಟ ಟಿ. ರಾಘವರ ಒಡನಾಟದಲ್ಲಿ ಗೌಡರ ಗ್ರಾಮೀಣ ಕಲಾ ಪ್ರತಿಭೆಗೆ ಅಭಿಜಾತದ ಆಯಾಮ ದೊರೆಯಿತು. ರಾಘವರನ್ನು ‘ನಾಟಕದ […]

ರಂಗಕಥನ: ಮಲ್ಲಿಕಾರ್ಜುನ ಮನಸೂರರ ರಸಯಾತ್ರೆ,

ರಂಗಕಥನ: ಮಲ್ಲಿಕಾರ್ಜುನ ಮನಸೂರರ ರಸಯಾತ್ರೆ,

ಉತ್ತರ ಕರ್ನಾಟಕ ವೃತ್ತಿರಂಗಭೂಮಿಯಲ್ಲಿ ರಂಗಗೀತೆಗಳನ್ನು ಶಾಸ್ತ್ರೀಯ ಸಂಗೀತದ ಹಿನ್ನೆಲೆಯಲ್ಲಿ ಹಾಡಿ ಉಳಿಸಿದವರಲ್ಲಿ ಮಲ್ಲಿಕಾರ್ಜುನ ಮನಸೂರರು(1911-1992) ಒಬ್ಬರು. ತಂದೆ ಭೀಮರಾಯಪ್ಪ ಹಿರಿಯ ಮಗ ಬಸವರಾಜ ಮನಸೂರರಿಗೆ ಕರ್ನಾಟಕಿ ಗಾಯಕ ಅಪ್ಪಯ್ಯಸ್ವಾಮಿಯವರನ್ನು ಕರೆಸಿ ತಾಲೀಮು ಕೊಡಿಸುವಾಗ, ಅದನ್ನು ಮಲ್ಲಿಕಾರ್ಜುನರು ಕೇಳಿಸಿಕೊಳ್ಳುತ್ತಿದ್ದರು. ತಾಯಿ ನೀಲಮ್ಮನವರ ಕಂಠದಿಂದ ಬೀಸುವ ಪದಗಳು, ಲಾಲಿಹಾಡುಗಳು, ಭಕ್ತಿಯ ಹಾಡುಗಳು ಹೊರಹೊಮ್ಮುತ್ತಿದ್ದವು. ಮಲ್ಲಿಕಾರ್ಜುನರಿಗೆ ಚಿಕ್ಕಂದಿನಲ್ಲಿಯೇ ಹೀಗೆ ಸಂಗೀತದ ಆಸಕ್ತಿ ಬೆಳೆಯಿತು. ಅವರು ಶಾಲೆಯನ್ನು ನಿರ್ಲಕ್ಷಿಸಿ ಸಂಗೀತ ಮತ್ತು ನಾಟಕದ ಹುಚ್ಚನ್ನು ಹತ್ತಿಸಿಕೊಂಡರು. ಅವರ ಹೆಣ್ಣಜ್ಜ ಅನಾಡ ಚೆನ್ನವೀರಪ್ಪನವರ ಆಶ್ರಯದಲ್ಲಿ […]

ನಿಂದನೆಯ ಛಡಿಯೇಟೇ ಲೇಸು, ಆದಾಗ್ಯೂ….!

ನಿಂದನೆಯ ಛಡಿಯೇಟೇ ಲೇಸು, ಆದಾಗ್ಯೂ….!

ಇದೇ ಏಪ್ರಿಲ್ ಮೂರರಂದು ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ನಾನು ರಚಿಸಿದ ‘ಸಿರಿಗೆ ಸೆರೆ’ ನಾಟಕ ಕುರಿತು ಸಂವಾದ ಏರ್ಪಡಿಸಲಾಗಿತ್ತು. ಅಂದು ಭಾಗವಹಿಸಿದ್ದ ರಂಗಭೂಮಿ ಹಿನ್ನೆಲೆಯ ಗೆಳೆಯರು ಒಂದು ನಾಟಕ ಕೃತಿಯ ಸಾರ್ಥಕತೆ ಕುರಿತು ಹಲವು ಮಹತ್ವದ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಈ ಪ್ರಶ್ನೆಗಳ ವ್ಯಾಪ್ತಿ ಕೇವಲ ಒಂದು ಕೃತಿಗೆ ಸೀಮಿತವಾಗಿರದೆ ಸಾಹಿತ್ಯ – ರಂಗಭೂಮಿ ವಲಯದಲ್ಲಿ ವ್ಯಾಪಕ ಅವಲೋಕನಕ್ಕೆ ಒಳಪಡಬೇಕಾದ ಹೂರಣ ಮತ್ತು ಅರ್ಹತೆ ಹೊಂದಿವೆ. ಈ ಹಿನ್ನೆಲೆಯಲ್ಲಿ ನನ್ನ ಅರಿವಿಗೆ ದಕ್ಕಿದ ಚಿಂತನೆ ಇಂತಿದೆ : ಒಂದು […]