ಕತೆ

ಕತೆ

ಬಣ್ಣದ ಹನಿಗಳು

ಬಣ್ಣದ ಹನಿಗಳು

ಹಲ್ಕಟ್ ಪದ ಹೇಳಿ ಲಬೋ ಲಬೋ ಅಂತ ಹೊಯ್ಕಂಡರ ಸಾಕು, ಮನ್ಯಾಗ ಇದ್ದವರು ಓಡಿ ಬಂದು ಹರಕ ಜ್ವಾಳದ ಚೀಲದೊಳಗ ಎರಡು ಕುಳ್ಳು ಒಗದಮ್ಯಾಲೇ ಆ ಚುಕ್ಕೋಳು ಮುಂದಿನ ಮನಿಗಿ ನಡೆವರು. ಅಲ್ಲೂ ಅದರಂಗೇ ಹಾಡ, ಹೊಯ್ಕೊ ಬಡ್ಕೊ.. ಲಬೋ ಲಬೋ.. ಅಟ್ಟಾದ ಮ್ಯಾಲ ಕುಳ್ಳೋ, ಕಟಗಿ ತುಂಡೊ ಚೀಲಕ್ಕ ಬಿದ್ದರ ಮುಗೀತು. ತಪ್ಪಿ ಆ ಮನಿಯವರು ಎರಡು ಮೂರು ಬಾರಿ ಹಿಂಗ ಹೊಯ್ಕೊಂಡ ಮ್ಯಾಲೂ ಕಾಮಣ್ಣಗ ಏನೂ ಕೊಡಲಿಲ್ಲಂದ್ರ ಅವರ ಮನಿ ಮುಂದ ಕಟಗೀ ಜಾತೀದು […]

ಜನ್ನತ್ ಗೆ ಬೆಂಕಿ ಬಿದ್ದಿದೆ …

ಜನ್ನತ್ ಗೆ ಬೆಂಕಿ ಬಿದ್ದಿದೆ …

ಗದುಗು ಎಂದೂ ಕಂಡು ಕೇಳರಿಯದ,  ಅನುಭವಿಸಿರದ ರಣ ಬಿಸಿಲು ಭುಸಭುಸನೇ ಆಕಾಶದಿಂದ ಸುರಿಯುತ್ತ ಉಗಿಉಗಿ ಹಾಯುತ್ತಿತ್ತು. ಜನವೆಲ್ಲ ಉರಿ ಬಿಸಿಲಿಗೆ ಅಂಜಿ ಮನೆಹೊಕ್ಕ ಕಾರಣ ರಸ್ತೆಗಳು ಬಹುತೇಕ ನಿರ್ಜನವಾಗಿದ್ದವು.  ಅನಿವಾರ್ಯವಾಗಿ ಹೊರಬೀಳಲೇಬೇಕಾದವರು ಈ ಬೆಂಕಿ ಮಳೆಗೆ ಹಿಡಿಶಾಪ ಹಾಕುತ್ತಾ, ಬೆವರಿನ ಸ್ನಾನ ಮಾಡುತ್ತಾ ಜೋಲು ಮುಖದ ನರಪೇತಲುಗಳಂತೆ ಹೆಜ್ಜೆ ಹಾಕುತ್ತಿದ್ದರು.  ಅವರು ಹಿಡಿದಿದ್ದ ನೈಲಾನ್ ಬಟ್ಟೆಯ ಕೊಡೆಗಳು ಬಿಸಿಲನ್ನು ತಡೆದು ನೆರಳು ನೀಡುತ್ತಿದ್ದವೋ,  ಇಲ್ಲಾ ಬಿಸಿಲನ್ನು ಸೋಸಿ ಶಾಖವನ್ನು ರವಾನಿಸುತ್ತಿದ್ದವೋ ಹೇಳುವುದು ಕಷ್ಟವಾಗಿತ್ತು! ಧಾರಾಕಾರವಾಗಿ ಸುರಿಯುತ್ತಿದ್ದ ಬೆವರನ್ನು […]

ದೀನ ದಲಿತನ ಹೋಟ್ಲು

ದೀನ ದಲಿತನ ಹೋಟ್ಲು

ನಮುಸ್ಕಾರ ಸಾ, ನನ್ ಬಗ್ಗ ಅದೇನೋ ಕತ ಗಿತ ಬರ್ದರಂತಲ್ಲಾ? ನಾನು : ಯಾರಪ್ಪ ನೀನು? ಅಯ್! ಅದೆ ಕನಿ ಸಾ ನಾನು ರಾ….ಜ…. ನಾನು : ರಾ….ಜ….? ಹುಂ ಕನಿ ಸಾ ರಾಜ. ಗೊತ್ತಾಗ್ನಿಲ್ವಾ? ಬಿಲಾಂಗು ಸಾ ಬಿಲಾಂಗು ನಾನು : ನಿನ್ನಜ್ಜಿ. ನೀನೇನ್ಲಾ? ಹೆಂಗ್ಲಾ ಗೊತ್ತಾಗ್ಬುಡ್ತು ನಿಂಗ? ಯಾರು ಸಾ ನಾನು? ರಾ…ಜ. ನಿಮ್ ಕತಾ ಒಳಗ ಇರೋನ್ಗ ಗೊತ್ತಾಗ್ನಿಲ್ಲ ಅಂದ್ರ ಅದೇನ್ ಮಾತ! ನಾನೂವಿ ನಿಮ್ಮಂಗ ಮೀನ್‍ಮಂಡಿ ತಿಂದೋನು. ಗಂಗೊಳ್ಳಿ ಇತ್ತಲ್ಲ ಅಲ್ಲೀಗಂಟ […]

‘ಮಣ್ಣಿಂದ ಮಣ್ಣಿಗೆ’

ಪುಟ್ಟ ತಲೆಯೊಂದೇ ಕಾಣುತ್ತಿದ್ದ ಅವಳನ್ನು ಅವರು ಕೆಸರಿನ ಗುಡ್ಡೆಯ ಮಧ್ಯದಲ್ಲಿ ದೂರದಿಂದ ಗಮನಿಸಿದರು. ಹನ್ನೆರಡು ವರುಷದ ಆ ಹಸುಳೆ, ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ, ಇಡೀ ನಾಡಿಗೆ ಎರಗಿದ ನಿಸರ್ಗದ ವಿಕೋಪಕ್ಕೆ ತುತ್ತಾಗಿದ್ದಳು. ತೆರೆದೇ ಇದ್ದ ಅವಳ ಬಟ್ಟಲ ಕಣ್ಣುಗಳೆರಡೂ ತುಂಬ ದೂರ ಕಾಣುತ್ತಿದ್ದವರನ್ನು ಸಹಾಯಕ್ಕಾಗಿ ಕರೆಯುತ್ತಿದ್ದಂತೆ ಭಾಸವಾಗುತ್ತಿದ್ದವು. ಆ ಪುಟ್ಟ ಹಸುಳೆಯನ್ನು ಆಕೆಯ ತಾಯ್ತಂದೆಗಳು ಅಂiÀhುಕೆನಾ ಎಂದು ಹೆಸರಿಸಿದ್ದರು. ಅವಳ ಸುತ್ತಲೂ ಇಂದು ನೋಡಿದಲ್ಲೆಲ್ಲಾ ನಾಡು ಸ್ಮಶಾನ ಸದೃಶವಾಗಿ ಗೋಚರಿಸುತ್ತಿತ್ತು. ಹೆಣಗಳ ರಾಶಿಯಿಂದ ಉದ್ಭವಿಸುತ್ತಿದ್ದ ವಾಸನೆ […]