ಕತೆ

ಕತೆ

ಕುರುಡು ಕಾಂಚಾಣ

ಕುರುಡು ಕಾಂಚಾಣ

ಮುಂಗಾರು ಕಥಾ ಸ್ಪರ್ದೆಯಲ್ಲಿ ಬಹುಮಾನ ಪಡೆದ ಕತೆ ‘ಕುರುಡು ಕಾಂಚಾಣ’ ರಸ್ತೆ ದಾಟಿ ಕವಲು ದಾರಿಯಲ್ಲಿ ಹೆಜ್ಜೆ ಹಾಕುತ್ತಲೇ ಇಜಾರಿನ ಕಿಸೆಯನ್ನು ತಡಕಾಡಿದ ಚಂದ್ರು. ದಂಟು ಕೈಗೆ ತಗುಲಿದಾಗ ನೆಮ್ಮದಿಯಾಯ್ತು. ಮಡದಿ ಮಾದೇವಿ ಎಚ್ಚರಿಸುತ್ತಲೇ ಇದ್ದಳು ಜಾಗ್ರತೆಯಾಗಿ ನೋಡಿಕೋ…… ಬೀಳಿಸಿಬಿಟ್ಟೀಯ ಜೋಕೆ. ಬಾರಿ ಬಾರಿಗೂ ಎಚ್ಚರಿಸಿ ಇಜಾರಿನ ಕಿಸೆಯಲ್ಲಿ ತುರುಕಿದ್ದಳು. ಹೆಜ್ಜೆ ತೀವ್ರಗೊಳಿಸುತ್ತಿದ್ದಂತೆ ಸೂರ್ಯ ಮೇಲೇರಿ ಮೇಲೇರಿ ತನ್ನ ಇರವನ್ನು ಜಗತ್ತಿಗೇ ತೋರ್ಪಡಿಸುವಂತೆ ತೋರಿ ಬರುತ್ತಿದ್ದ. ಬಿಸಿಲು ಬೇಗೆಯನ್ನು ಲೆಕ್ಕಿಸದೇ ಹೆಜ್ಜೆ ಹಾಕುತ್ತಿದ್ದರೂ ಪಕ್ಕದಲ್ಲೆಲ್ಲೋ ಮರಗಿಡಗಳಿಲ್ಲದೇ ಬಿಸಿಲ […]

ಮೌನ ತಳೆದ ಹುಡುಗಿ

ಮೌನ ತಳೆದ ಹುಡುಗಿ

ಆಗಷ್ಟೆ ಬೆಳಕಿನ ಬೆನ್ನಿಗೆ ಕತ್ತಲು ಪತ್ತಲ ಹಾಸುತ್ತಿತ್ತು. ಮಿಣಮಿಣ ಮಿನುಗುವ ತಾರೆಗಳು ಚಂದ್ರನೊಂದಿಗೆ ಕಣ್ಣಾ ಮುಚ್ಚಾಲೆ ಆಡಲು ಸಿದ್ಧವಾಗಿದ್ದವು. ಚಂದ್ರನೋ, ತಾರೆಗಳ ಬಳಗದಿಂದ ತಪ್ಪಿಸಿಕೊಂಡವನಂತೆ ರಮೇಶನ ಕೋಣೆಯನ್ನೇ ಇಣುಕಿ ಇಣುಕಿ ನೋಡುತ್ತಿದ್ದ. ದೀಪ ಹಚ್ಚದ ಕೋಣೆಯಲ್ಲಿ ಕತ್ತಲ ತೆಕ್ಕೆಯೊಳಗೆ ರಮೇಶ್ ಗಾಢ ಮೌನಕ್ಕೆ ಶರಣಾಗಿದ್ದ. ಮನದ ಮೈದಾನದಲಿ ಜಾನಕಿಯೆಡೆಗಿನ ವಿಚಾರಗಳು ಕಾಳಗದ ಹೋರಿಯಂತೆ ಕಾದಾಟ ನಡೆಸಿದ್ದವು. ಅರಳು ಹುರಿದಂತೆ ಮಾತಾಡುವ ಜಾನಕಿ ಕಳೆದ ಆರು ತಿಂಗಳಿನಿಂದ ಮೌನವಾಗಿದ್ದಳು. ಆ ದೀರ್ಘಮೌನ ರಮೇಶನನ್ನು ಭಾದಿಸುತ್ತಿತ್ತು.  ತಲೆ ಚಿಟ್ಟೆನ್ನುವ ಅಸಹನೆ. […]

ಅಪರಾಧಿ

ಅಪರಾಧಿ

“ಧರ್ಮಣ್ಣಾ” ಎಂದು ಕೂಗುತ್ತಾ ನನ್ನ ರೂಮಿನ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ದಿವಾಕರ ನನ್ನ ಬಳಿಗೆ ಓಡಿ ಬಂದ. ಅವನನ್ನು ನೋಡಿದರೆ ಎಲ್ಲೂ ನಿಲ್ಲದೆ ಒಂದೇ ಸಮನೆ ಓಡಿ ಬಂದಂತಿತ್ತು. ಏದುಸಿರು ಬಿಡುತ್ತಾ ನನ್ನ ಮುಂದ ನಿಂತ ಅವನನ್ನು ನೋಡಿ ನಾನು ‘ಏಕೋ ಇಷ್ಟು ಜೋರಾಗಿ ಓಡಿ ಬರ್ತಾ ಇದ್ದಿ? ಏನಾಯ್ತೋ?” ಎಂದು ಪ್ರಶ್ನಿಸಿದೆ. “ಅಯ್ಯೋ ಧರ್ಮಣ್ಣಾ ಬೇಗ ನೀನು ಈ ಊರು ಬಿಟ್ಟು ಒಂದೆರಡು ದಿನ ಎಲ್ಲಾದ್ರೂ ಹೋಗಿ ತಲೆ ಮರೆಸ್ಕೋ. ಆ ಪುರುಷೋತ್ತಮನ ಗ್ಯಾಂಗ್‍ನವರು ಇವತ್ತು […]

ಸಣ್ಣಕತೆ: ಅವುಳು, ಅವುನು, ಅದು

ಸಣ್ಣಕತೆ:  ಅವುಳು, ಅವುನು, ಅದು

    ಬೆಳ್ಳಂಬೆಳುಗ್ಗೆಯೇ ಒಂದಸವುನೆ ಹಂಗ ತೆಳ್ಳುಗೆ ಚಹಾದ ಘಮವು ದಿನುದಿನವೂ ತೂರಿ ಬರುವುದು ಆ ಸರ್ಕಲ್‍ನ ಒಂದು ಬಗುಲಿನ ಮೂಲೆಯ ವಿಶೇಷವಾಗಿತ್ತು. ಚಿಮುಣಿ ಎಣ್ಣೀಲಿ ಉರಿವ ಚೆಕ್ಕುಚೌಕಾದ ಆ ಸ್ಟ್ಟವ್ವುನ ಬರು..ಬರು.. ಅನ್ನುವ ಸೌವುಂಡು ಹೊರುಡಲು.. ಟನುಪನು ಅಂತನ್ನುವ ಆ ಸಾಮಾನು ಸರಂಜಾಮುಗಳನ್ನು ಅವುನು ಗಸುಗಸು ತಿಕ್ಕುತ ರೆಡಿಮಾಡಲು ಆಟೊತ್ತಿಗೆ ಅಲ್ಲಿ ಅವುಳ ಸುತ್ತಲೂ ಒಂದಳುತಿ ಮೊಕಯಿರುವ ಹುಡುಗರು, ಅವುಳು, ಅವುನು, ಅವುರು, ಆ ಚಹಾ, ಮಸಾಲಿ ಐಟೆಮ್ಮುವಿನ ಘಮುಘಮು ಅನ್ನೋ ವಾಸುನೆ ಹಿಡುದು ಬರುವ […]

ಮಿಂಚು ಕಥೆಗಳು

ಮಿಂಚು ಕಥೆಗಳು

ಪರಿವರ್ತನೆ ವಿಕೃತ ಕಾಮಿಯೊಬ್ಬ ಕಥೆ ಓದುತ್ತಲೇ ಅದರಾಳಕ್ಕಿಳಿದು ಕಥಾ ನಾಯಕನ ಪಾತ್ರಕ್ಕೆ ಪರಕಾಯ ಪ್ರವೇಶ ಪಡೆದ ಅವನೊಳಗಿದ್ದ ಹೆಣ್ಣು ಜಾಗೃತಳಾದಳು ನಿಮ್ಹಾನ್ಸನಲ್ಲಿ ಬೆನ್ನು ಬಿಡದ ಹುಚ್ಚು ಈಗ ಬಿಟ್ಟು ಹೋಯಿತು ನಕಲು ಅವಳನ್ನು ಮನೆ ತುಂಬಿಸಿಕೊಂಡ ಹೊಸತರಲ್ಲಿ ಆತ ಇಪ್ಪತ್ತೈದರ ಹರೆಯ ಗತಿಸಿದ ಒಂದೇ ವರ್ಷಕ್ಕೆ ಅವನ ಮರುಹುಟ್ಟು ತಾಯಂದಿರು ಮುಖ ನೋಡಿ ನಕ್ಕರು ಆತ ಮುಖ ಮುಚ್ಚಿಕೊಂಡ ಮಡಿಲು ಒಂಭತ್ತು ತಿಂಗಳ ತನ್ನ ಗರ್ಭಕ್ಕೆ ಜನ್ಮವಿತ್ತ ಅನಾಥೆ ಕಣ್ಣು ಮುಚ್ಚಿಕೊಂಡಳು ಮಗು ಕಣ್ ಬಿಟ್ಟಿರಲಿಲ್ಲ ಅಳುತ್ತಿತ್ತು […]

ಮಲ್ಲಿಗಿ ಬನದ ಕರಡಿ

ಮಲ್ಲಿಗಿ ಬನದ ಕರಡಿ

ಗುಡ್ಡಬೆಟ್ಟಗಳೇ ತುಂಬಿರುವ ಬಾಳೆಬರೆಯ ಊರುಕೇರಿಗಳಿಗೆ ಮಳೆಗಾಲ ಬಂತೆಂದರೆ ಬೆಟ್ಟದ ನಡುವಿನ ಕೊರಕಲಿನಲ್ಲೆಲ್ಲ ಒಂದೊಂದು ಹೊಳೆ ಸೃಷ್ಟಿಯಾಗಿ ಮೈದುಂಬಿ ಹರಿಯುತ್ತದೆ. ಎರಡೂ ದಂಡೆಗಳ ಸಮೃದ್ಧವಾದ ತೋಟ, ಸಾಲುಸಾಲು ಕೇರಿ ಮನೆಗಳ ನಡುವೆ ಬೆಟ್ಟದ ಕೆಮ್ಮಣ್ಣು ಕರಗಿಸಿಕೊಂಡ ಕೆನ್ನೀರ ಹೊಳೆ ಹರಿಯುತ್ತದೆ. ಗುಡ್ಡೇಕಾನು ಹೊಳೆ ಇನ್ನೇನು ಶರಾವತಿ ನದಿಯನ್ನು ಕೂಡಲಿದೆ ಎಂಬಲ್ಲಿ ದೇವಿ, ಸುಬ್ಬಿಯರ ಮನೆಯಿದೆ. ತಮ್ಮ ಪೈಕಿಯವರ ಕೇರಿಯಿಂದ ಅಕಾ ಮತ್ತೂ ಹತ್ತು ಮಾರು ಕೆಳಗೆ, ಅಲ್ಲೆ ನದಿಯೊಳಗೇ ಇದೆಯೇನೋ ಎಂಬ ಹಾಗೆ ಅವರ ಮನೆ. ಬೇಸಿಗೆಯಲ್ಲಿ ಗುಂಡಗಿನ […]

ಹೊಸ ಹೆಜ್ಜೆ

ಹೊಸ ಹೆಜ್ಜೆ

ಹೊರಗಡೆ ಸ್ಕೂಟರ್ ನಿಂತ ಶಬ್ಧ ಕೇಳಿದ ನಳಿನಾ ರೂಮಿನ ಕಿಟಕಿಯಿಂದ ಬಗ್ಗಿ ನೋಡಿದಳು. ಬಂದಿದ್ದವರು ಅಣ್ಣ ಮಧು ಹಾಗೂ ಅವನ ಸ್ನೇಹಿತ ರಾಘವ. ಇಷ್ಟು ಹೊತ್ತು ತಡೆದಿದ್ದ ದುಃಖದ ಕಟ್ಟೆ ಒಡೆಯಿತು. ಮಂಡಿಗೆ ಮುಖವಾನಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಹೊರಗಡೆ ಅತ್ತೆ ಮತ್ತು ಮಾವನವರ ಧ್ವನಿ ಕೇಳಿಸುತ್ತಿತ್ತು. ನಳಿನಾ ಬಿಕ್ಕಳಿಕೆಗಳ ನಡುವೆಯೂ ಅದಕ್ಕೆ ಗಮನ ಕೊಟ್ಟಳು. “ಅದಕ್ಕೇ ನಾವು ಹೇಳಿದ್ದು, ನಾಳೆ ಕುಂಕುಮ, ಬಳೆ ತೆಗೆಯೋ ಶಾಸ್ತ್ರ ಒಂದು ಆಗೋಗ್ಲಿ. ಆಮೇಲೆ ನಿಮ್ಮ ಮನೆಗೆ ಕಳಿಸೋ ಯೋಚನೆ […]

ಕಡಿ ಪಂಗ್ತಿ

ಕಡಿ ಪಂಗ್ತಿ

ದುರಗೇಶಿ ಸಮುದ್ದರದಂತಾ ಜಾತ್ರಿಯ ಜನಗೋಳನ ದಾಟಿ ಓಡ್ಕೋಂತ ಬಂದು ಕೆಳಗೇರಿಯ ಮಂದೀನ ಕೂಡಿದಾಗ ನೆತ್ತಿ ಮ್ಯಾಗಿನ ಹೊತ್ತು ಹೊಳ್ಳಿ ಇಳವಾರಿಗಿ ಬಿದ್ದಿತ್ತು. ಒಂದ್ ಕೈಯ್ಯಾಗ ಸಿಲಾವರ್ ಬೋಗಾಣಿ ಮತ್ತೊಂದ್ ಕೈಯ್ಯಾಗ ನೆಗ್ಗಿದ ತಾಟ್ ಹಿಡಕೊಂಡು ಪಕಪಕ ಕಣ್ ಹೊಳ್ಳ್ಯಾಡಸತಾ ಗಾಬರಾಸಿದ್ಹಂಗ ನಿಂತ. ಕವರಾಬವರ್ಯಾಗಿದ್ದ ಅಂವನ್ನ ನೋಡಿದ ಕಳ್ಳ್ಯಾಗೋಳ ಸಾವಂತ್ರವ್ವಾಯಿ “ಇನ್ನಾ ಊರಾನವರ ಪಂಗತಿಗೋಳ ನಡದ್ದಾವ ತೊಗೊ ಕೂಸ„„… ಕಡಿಪಂಗತಿಗಿ ಯೆಳೆ ಆದೋತು…” ಅಂತಂದಳು. ಬೆವತ ಹಣಿ ಮ್ಯಾಗ ಗಾಳಿ ತೀಡಿದಂಗಾಗಿ ದುರಗೇಶಿ ಹಗೂರಕ ಅಕಿ ಬಾಜೂಕ ಕುಂತ. […]

ಭೂಮಿ

ಭೂಮಿ

ಈ ದಿನ ಆಫೀಸಿನಲ್ಲಿ ನನ್ನ ಹೊರತು ಯಾರೊಬ್ಬರು ಇಲ್ಲ. ರಜಾದಿನಗಳು ಹೊರತು ಈ ಸಮಯದಲ್ಲಿ ಸಾರ್ವಜನಿಕರು ಮತ್ತು ನಮ್ಮ ಆಫೀಸ್ ಸಿಬ್ಬಂದಿ ತುಂಬಿಕೊಂಡು ಮದುವೆ ಮನೆಯಂತೆ ಸದಾ ಗದ್ದಲ ಇರುವುದು ನಮ್ಮ ಸರ್ವೇ ಆಫೀಸಿನಲ್ಲಿ ಸರ್ವೇ ಸಾಮನ್ಯದ ಸಂಗತಿಯೇ ಸರಿ. ಆದರೆ ನಮ್ಮ ಸಿಬ್ಬಂದಿಯೆಲ್ಲಾ ಮದುವೆಗೆ ಹೋಗಿದ್ದರಿಂದಲೇ ಏನೋ ಕುರ್ಚಿ ,ಟೇಬಲ್ ,ಕಂಪ್ಯೂಟರ್ ಮತ್ತು ಅಭಿಲೇಖಾಯದಲ್ಲಿನ ಎಲ್ಲ ದಪ್ತರಗಳು ಮೌನವಾಗಿ ನಿರಶನ ಕೂತಂತೆ ಇದ್ದ ಜಾಗದಲ್ಲಿಯೇ ಚೂರು ಕದಲದೆ ಕುಂತಿವೆ. ಇಡೀ ಆಫೀಸಿನಲ್ಲಿ ಸೂಜಿ ಬಿದ್ದರು ಸಪ್ಪಳಾಗುವಷ್ಟು […]

ಚಿನ್ನದ ಕನ್ನಡಕ

ಚಿನ್ನದ ಕನ್ನಡಕ

“ಏ ಬೇಗ ಬೇಗ ಕಸ ಹೊಡೀರಿ. ಉಸ್ತವದಲ್ಲಿ ಒಂದು ಕಸ ಕಾಣಂಗಿಲ್ಲ” ಹನುಮಕ್ಕ ಒದರುತ್ತಾ ಸಂಗಡಿಗರಿಗೆ ಕೂಗಿ ಕೂಗಿ ಹೇಳುತ್ತಿದ್ದಳು. ಅವರೂ ಹರಿಬರಿಯಲ್ಲಿ ಸಂದಿಗುಂದಿಯಲ್ಲಿರುವ ಕಸವನ್ನೆಲ್ಲಾ ಹುಡುಕಿ ಗುಡ್ಡೆ ಹಾಕುತ್ತಿದ್ದರು. ಹನುಮಪ್ಪ ಇನ್ನಿಬ್ಬರೊಂದಿಗೆ ಗಬ್ಬು ನಾರುತ್ತಿದ್ದಂತಹ ಮ್ಯಾನ್ ಹೋಲಿಗೆ ಇಳಿದಿದ್ದ. ಕಸವೆಲ್ಲಾ ರಸವಾಗಿ ಜೀವವಾಯುವಿನ ಜೊತೆಗೆ ಪ್ರಾಣಹಾನಿ ವಾಯುಗಳೂ ಹೆಚ್ಚಿದ್ದದ್ದು ವಾಸನೆಯಿಂದಲೇ ತಿಳಿಯುತ್ತಿತ್ತು. ಅದಕ್ಕೆ ‘ಅಣ್ಣಾ ಉಸ್ರು ಕಟ್ಟುದ್ರೆ ಹೊರಿಕ್ಕೆ ಬಂದ್ಬುಡು’ ಎನ್ನುತ್ತಿದ್ದ ಸೂರಿ ಅಲ್ಲೆ ಹೊರಗೆ ಕೂತು ‘ಆಗಾಗ ಅಣ್ಣಾ, ಹನುಮಂತಣ್ಣ’ ಎಂದು ಮಾತನಾಡಿಸುತ್ತಿದ್ದ. ಹನುಮಂತಣ್ಣ […]