ವ್ಯಕ್ತಿಚಿತ್ರ-ಅನುಭವಚಿತ್ರ

ವ್ಯಕ್ತಿಚಿತ್ರ-ಅನುಭವಚಿತ್ರ

ಲಾಟೀನ ಬೆಳಕು-2: ಅಪ್ಪ ಕಲಿಸಿದ ನಾಟಕ ತಂದ ಸಂಕಷ್ಟ

ಲಾಟೀನ ಬೆಳಕು-2: ಅಪ್ಪ ಕಲಿಸಿದ ನಾಟಕ ತಂದ ಸಂಕಷ್ಟ

{ “ಲಾಟೀನ ಬೆಳಕು” ಆತ್ಮಕಥೆಯ ಆಯ್ದ ಭಾಗ-2} ಖವಟಗೊಪ್ಪ ಒಂದು ಸಣ್ಣ ಹಳ್ಳಿ. ಅಲ್ಲಿ ನಮ್ಮ ಸಂಬಂಧಿಕರಿದ್ದರು. ಅಪ್ಪ ಆಗಾಗ ಅಲ್ಲಿಗೆ ಹೋಗುತ್ತಿದ್ದರು. ಆವರೂ ನಮ್ಮ ಮನಗೆ ಬರುತ್ತಿದ್ದರು. ನಾವು ಅವರನ್ನು ಸತ್ಯವ್ವಾಯಿ, (ಅವಳ ಮಗ) ರಾಮಚಂದ್ರ ಕಾಕಾ ಎಂದು ಕರೆಯುತ್ತಿದ್ದೆವು. ಸತ್ಯವ್ವಾಯಿ ನಮ್ಮ ಮನೆಗೆ ಬಂದು ಬಹಳ ದಿನ ಉಳಿದು ಕೊಂಡಿದ್ದರೆ ನಮಗೆ ಚಂದದ ಕೌದಿ ಹೊಲೆದು ಕೊಡುತ್ತಿದ್ದಳು. ರಾತ್ರಿ ನಮ್ಮನ್ನೆಲ್ಲ ತನ್ನ ಸುತ್ತ ಕೂಡ್ರಿಸಿಕೊಂಡು ಕಥೆ ಹೇಳುತ್ತಿದ್ದಳು. ಹೀಗಾಗಿ ಅವಳು ಬಂದರೆ ನಮಗೆ ಇಷ್ಟವಾಗುತ್ತಿತ್ತು. […]

ಕಾಡಿನ ಸಂತ –ತೇಜಸ್ವಿ -1: ಹ್ಯಾಂಡ್ಸ್ ಅಪ್

ಕಾಡಿನ ಸಂತ –ತೇಜಸ್ವಿ -1: ಹ್ಯಾಂಡ್ಸ್ ಅಪ್

 ಧನಂಜಯ ಜೀವಾಳ ಬಿ. ಕೆ. ಅವರ ಕಾಡಿನ ಸಂತ -ತೇಜಸ್ವಿ ಕೃತಿಯ ಆಯ್ದ ಭಾಗ. ಇದು ಕೆಲವು ಕಾಲ ಇಲ್ಲಿ ಪ್ರಕಟವಾಗಲಿದೆ. ನಾನಿನ್ನೂ ಹೈಸ್ಕೂಲಿನಲ್ಲಿದ್ದ ದಿನಗಳು. ಹ್ಯಾಂಡ್ ಪೋಸ್ಟ್ ಬಳಿಯ ನೀಲಗಿರಿ ತೋಪಿನ ಹತ್ತಿರದ ಕ್ರಿಕೆಟ್ ಮೈದಾನದಲ್ಲಿ ಮ್ಯಾಚ್ ಮುಗಿಸಿಕೊಂಡು (ಸೋತು) ವಾಪಾಸ್ ಮೂಡಿಗೆರೆ ಕಡೆಗೆ ಹೊರಟಿದ್ದೆವು. ಸ್ಕೂಟರೊಂದು ಭರ್ರೆಂದು ನಮ್ಮನ್ನು ದಾಟಿಕೊಂಡು ಮುಂದೆ ಹೋಯಿತು. ಅದರ ಹಿಂದೆಯೇ ಮೂರ್ನಾಲ್ಕು ಬೈಕ್‍ಗಳು ಸ್ಕೂಟರನ್ನು ಬೆರೆಸಾಡಿಕೊಂಡು ಹೋಗುವಂತೆ ಹೋದವು. ರಸ್ತೆಯು ನೇರವಾಗಿ ಇದ್ದುದರಿಂದ ನಮಗೆ ಬಹಳ ದೂರದವರೆಗೂ ಕಾಣುತಿತ್ತು. […]

ಪ್ರಗತಿಪರ ಮಹಾರಾಜ ಶಾಹೂ ಛತ್ರಪತಿ

ಪ್ರಗತಿಪರ ಮಹಾರಾಜ ಶಾಹೂ ಛತ್ರಪತಿ

ಒಬ್ಬ ವ್ಯಕ್ತಿ ಎಷ್ಟೇ ಪ್ರಗತಿಪರ ದೃಷ್ಟಿಯುಳ್ಳವನಾಗಿದ್ದರೂ ಅದನ್ನು ಕಾರ್ಯಗತಗೊಳಸುವಲ್ಲಿ ಅಧಿಕಾರ ಸೂತ್ರ ಅವನ ಕೈಯಲ್ಲಿರದಿದ್ದರೆ ಅದು ಕೇವಲ ಫಲಿಸದೆ ಬಿದ್ದ ಹೂವಿನಂತಾಗುವುದು. ಪ್ರಗತಿಪರ ರಾಜನ ಆಧೀನಕ್ಕೊಳಪಟ್ಟು ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ನಡೆದುದಾದರೆ, ಅಂಥ ರಾಜ್ಯ ಸುಖೀ ರಾಜ್ಯವಾಗುವುದರಲ್ಲಿ ಎರಡು ಮಾತಿಲ್ಲ. ಆಗ ಅದು ಅವನ ಇಚ್ಛೆಯಂತೆ ಅಭಿವೃದ್ಧಿಪಥದತ್ತ ಸಾಗುವುದು. ಆದರೆ ರಾಜ ಲೋಲುಪನೂ ಅಮಾಯಕನೂ ಆಗಿದ್ದು ಮಂತ್ರಿ ಪುರೋಹಿತ ಹಾಗೂ ಅಧಿಕಾರಗಳ ಕೈಗೊಂಬೆಯಾಗಿದ್ದ ಪಕ್ಷದಲ್ಲಿ ಅಂಥ ದೇಶ ಮುಂದುವರಿಯಲು ಸಾಧ್ಯವೇ ಇಲ್ಲ. ಎಂದರೆ ರಾಜನಾದವನಿಗೆ ತಕ್ಕ […]

ಅಪ್ಪನ ಕಾಯುವ ಪುಟ್ಟ ಮಗಳು

ಅಪ್ಪನ ಕಾಯುವ ಪುಟ್ಟ ಮಗಳು

{ “ಲಾಟೀನ ಬೆಳಕು” ಆತ್ಮಕಥೆಯ ಆಯ್ದ ಭಾಗ}  ನನ್ನ ತಂದೆ ಪರಮಾನಂದ ವಾಡಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಾನೂ ಅವರ ಶಾಲೆಯಲ್ಲಿಯೇ ಓದುತ್ತಿದ್ದೆ. ನಾನು ಪ್ರತಿದಿನ ತಂದೆಯೊಡನೆಯೇ ಶಾಲೆಗೆ ಹೋಗಿ ಸಂಜೆ ಅವರೊಂದಿಗೆ ಮನೆಗೆ ಮರಳಿ ಬರುತ್ತಿದ್ದೆ. ನನ್ನ ತಮ್ಮ ಹುಟ್ಟಿದ ಮೇಲೆ ನಮ್ಮ ದೊಡ್ಡಪ್ಪ ಅಂದರೆ ನನ್ನ ತಂದೆಯ ದೊಡ್ಡಪ್ಪನ ಮಗ ಹೊಲದಲ್ಲಿ ಪಾಲು ನೀಡುವ ಬಗ್ಗೆ ತಕರಾರು ತೆಗೆದಿದ್ದರಿಂದ ಕೋರ್ಟಿನಲ್ಲಿ ಕೇಸು ನಡೆದಿತ್ತು. ನಮ್ಮ ಹೊಲಗೇರಿಯ ಎಲ್ಲ ಜಗಳಗಳು ನಮ್ಮೂರ ಗೌಡರ ಮನೆಯಲ್ಲೇ ಬಗೆಹರಿಯುತ್ತಿದ್ದವು. […]

ಭಟ್ಯನ ವೃತ್ತಾಂತ

ಭಟ್ಯನ ವೃತ್ತಾಂತ

ಭಟ್ಯನೆಂಬ ಭಟ್ಯ ನಾಯ್ಕ ಮೊದಲು ನನ್ನ ಕಣ್ಣಿಗೆ ಬಿದ್ದಿದ್ದು ಆಕಾಶದಿಂದ ಯಕ್ಷನ ಹಾಗೆ ಯಾವುದೋ ರಾಕ್ಷಸ ಮರದಿಂದ ರೊಂಯ್ಯನೆ ಇಳಿದಾಗ. ನಾನಿನ್ನೂ ಚಿಕ್ಕವನು. ಆ ಮರ ನೋಡಿದರೆ ಅದಕ್ಕೆ ಹತ್ತುವುದು ಸಾದ್ಯವೇ ಇರಲಿಲ್ಲ. ಆದ್ದರಿಂದ ಅವನು ಆಕಾಶದಿಂದಲೇ ಇಳಿದದ್ದೆಂದು ನಾನು ನನ್ನ ವಾರಗೆಯವರಲ್ಲಿ ವಾದಿಸಿದ್ದೆ. ಆ ದಿನ ಅವನ ಕೈಲಿ ಒಂದು ಉಡ ಇತ್ತೆಂದು ನನ್ನ ನೆನಪು. ಆಮೇಲೆ ಎಷ್ಟೊ ವರ್ಷ ಅಂದರೆ ನಾನು ಘಟ್ಟ ಹತ್ತಿ ಇಳಿವ ವರೆಗೆ ಅವನನ್ನು ಕಂಡಿರಲಿಲ್ಲ. ಕಂಡಿರಲಿಲ್ಲ ಅಂದರೆ ಅಲ್ಲಿ […]

ಹರಿಯಪ್ಪ ಎಂಬ ಕಾಮ್ರೇಡ್

ಹರಿಯಪ್ಪ ನಮ್ಮೂರಿನ ಎರಡನೇ ಕಮ್ಯೂನಿಸ್ಟ್ ಎಂದು ಜತ್ತಪ್ಪ ಯಾವಾಗಲೂ ರೇಗಿಸುವುದಿದೆ. ಮೊದಲನೆಯವರು ಯಾರು ಎಂದರೆ ಯಾರದ್ರೂ ಇದ್ದಿರಬೋದು ಎನ್ನುವನು. ಅವನ ಪ್ರಕಾರ ಕಮ್ಯುನಿಸ್ಟ್‍ರು ಲಾಗಾಯ್ತಿಂದ ಇದ್ದಾರೆ. “ಉಳ್ಳಾಕುಲು ಮುನ್ನೂರೊಕ್ಲು ಎಂತ ಹೇಳಿದ ಗಳಿಗೇಲಿ ಬೇರೆಲ್ಲ ಜನ ಇರೋವಾಗ ಕಮ್ಯುನಿಸ್ಟರು ಇಲ್ಲದೇ ಇರೋದು ಹೇಗೆ ಅಣ್ಣ,?” ಎಂದು ತಿರುಗಿ ಕೇಳುವನು. ಅವನ ತರ್ಕ ಸರಳ. “ಅಣ್ಣಾ, ಈ ಮಾವಿನ ಹಣ್ಣು ಇತ್ತು, ಬಾಳೆ ಹಣ್ಣೂ ಇತ್ತು. ಅದಿಕ್ಕೆ ಇಂಗ್ಲಿಶ್ ಹೆಸರು ನೀವಲ್ವಾ ಕೊಟ್ಟದ್ದು, ಹಾಗೇ ಇದೂ “ ಎಂದು […]

1 3 4 5