ವ್ಯಕ್ತಿಚಿತ್ರ-ಅನುಭವಚಿತ್ರ

ವ್ಯಕ್ತಿಚಿತ್ರ-ಅನುಭವಚಿತ್ರ

ತರಗತಿಯ ಒಳಹೊರಗೆ ರಾಮದಾಸ್ ಕಲಿಸಿದ ಪಾಠಗಳು

ತರಗತಿಯ ಒಳಹೊರಗೆ  ರಾಮದಾಸ್ ಕಲಿಸಿದ ಪಾಠಗಳು

 ನಾನು ಮೈಸೂರಿಗೆ ಹೋದದ್ದು 1982ರಲ್ಲಿ. ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಬಿಎ ಕಲಿಯಲು ದೂರದ ಚಿತ್ರದುರ್ಗದಿಂದ ಅಲ್ಲಿಗೆ ಬಂದಿದ್ದೆ. ಜನಪರ ಚಳುವಳಿಗಳು ಚಿತ್ರದುರ್ಗ ಜಿಲ್ಲೆಯಲ್ಲೂ ಆಗ ಒಂದಷ್ಟು ಚಾಲ್ತಿಯಲ್ಲಿದ್ದವು. ನಾನು ಪಿಯುಸಿ ಓದುವಾಗ ಗೋಕಾಕ್ ವರದಿ ಚಳುವಳಿಯ ಅಬ್ಬರ ದುರ್ಗದಲ್ಲಿ ಕಂಡುಬಂದಿತ್ತು. ಡಾ.ರಾಜ್ ಮತ್ತು ಸಾಹಿತಿಗಳ ತಂಡ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ನಡೆಸಿತ್ತು. ಅದು ಬಿಟ್ಟರೆ ದಲಿತ ಸಂಘರ್ಷ ಸಮಿತಿಯ ಘಟಕಗಳು ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದ್ದವು. ನನಗೆ ಈ ಯಾವ ಸಂಘಟನೆಗಳೊಂದಿಗೂ ನೇರ ಸಂಪರ್ಕವಿರಲಿಲ್ಲ. ಅಖಿಲ ಭಾರತೀಯ ವಿದ್ಯಾರ್ಥಿ […]

ಕಿಲಾರಿ ಬೋರಯ್ಯನ ಆತ್ಮಕಥೆ-6: ಬರ ಬಂದಾಗ ಬಾಳ ದಿನ ಪ್ರಯಾಣ ಮಾಡಿದ್ದೀವಿ

ಕಿಲಾರಿ ಬೋರಯ್ಯನ ಆತ್ಮಕಥೆ-6: ಬರ ಬಂದಾಗ ಬಾಳ ದಿನ ಪ್ರಯಾಣ ಮಾಡಿದ್ದೀವಿ

6. ಪಯಣ ಹೋದಾಗ ದೇವರೆತ್ತುಗಳಿಗೆ ಕಾವಲಲ್ಲಿ ಹುಲ್ಲು ಸಿಗತ್ತೇ, ಆದರೂ ಮಳೆ ಹೋದಾಗ ಹುಲ್ಲು ಇಲ್ದಂಗೆ ಆಗುತ್ತೆ. ಆವಾಗ ನಾವು ಪ್ರಯಾಣ ಹೋಗುತ್ತೇವೆ. ಪ್ರಯಾಣ ಹೋಗುವುದಕ್ಕೆ ಊರಿನ ಹಿರಿಯರೆಲ್ಲ ಸೇರಿ ಯಾವಕಡೆ ಬಿಡಬೇಕು ಅಂತ ನಿರ್ಧರಿಸುತ್ತಾರೆ. ಅಂಥ ಕಡೆಗೆ ಹೊಡಕೊಂಡು ಹೋಗೀವಿ. ಬರ ಬಂದಾಗ ಮಾತ್ರ ಬಾಳ ದಿನ ಇಂತ ಪ್ರಯಾಣ ಮಾಡಿದ್ದೀವಿ. ಇತ್ಲಿತ್ಲಾಗೂ ಮಸ್ತ್ ಹೋಗಿದ್ದೇವೆ. ಹೋಗುವಾಗ ಊರಿನ ದನಗಳಿಗೂ ಮೇವು ಇರುವುದಿಲ್ಲ. ಅವರು ಕೂಡ ಮುತ್ತಯ್ಯಗಳ ಜೊತೆ ಸೇರಿಕೊಂಡು ಬರ್ತಾರೆ. ಯಜಮಾನರಲ್ಲಿ ಕೆಲವು ಜನ ಮೊದಲೇ […]

ಸುಡುಬಂಡೆಗಳ ನಡುವೆ ಕಾಡಿನ ಸಂತ ಭಟ್ರಳ್ಳಿ ಗೂಳೆಪ್ಪ

ಸುಡುಬಂಡೆಗಳ ನಡುವೆ ಕಾಡಿನ ಸಂತ ಭಟ್ರಳ್ಳಿ ಗೂಳೆಪ್ಪ

ಕಳೆದ ವರ್ಷ ಕೆ.ಎ.ಎಸ್ ಪ್ರಿಲಿಮನರಿ ಪರೀಕ್ಷೆಯಲ್ಲಿ ಕರ್ನಾಟಕದ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದೆಂಬ ಪ್ರಶ್ನೆಯಿತ್ತು. ಪರೀಕ್ಷೆ ಮುಗಿದ ನಂತರ `ಚಳ್ಳಕೆರೆ’ ಎಂದು ಸರಿ ಉತ್ತರ ಬರೆದ ಅನೇಕರು ಒಂದು ಅಂಕ ದೊರಕಿದ ಖುಷಿಯನ್ನು ಹಂಚಿಕೊಂಡಿದ್ದರು. ತಪ್ಪು ಉತ್ತರ ಬರೆದವರು ಗೊತ್ತೇ ಇರಲಿಲ್ಲ ಎಂದು ಮೌನವಾದರು. ಪ್ರಶ್ನೆ ರೂಪಿಸುವವರು ಕರ್ನಾಟಕ ಆಡಳಿತ ಸೇವೆಗೆ ಬರುವ ಅಧಿಕಾರಿಯೊಬ್ಬ ಈ ಸಂಗತಿಯನ್ನು ತಿಳಿದಿರಲಿ ಎಂದು ಉದ್ಧೇಶಿಸಿರಬಹುದು. ಆದರೆ ಯಾರೊಬ್ಬರಿಗೂ ತುಂಬಾ ಕಡಿಮೆ ಮಳೆಬೀಳುವ ಈ ಪ್ರದೇಶದ ಹಳ್ಳಿಗಳ ರೈತರ […]

ಕಿಲಾರಿ ಬೋರಯ್ಯನ ಆತ್ಮಕಥೆ-5: ನಾನು ಮತ್ತು ನನ್ನ ಕುಟುಂಬ

ಕಿಲಾರಿ ಬೋರಯ್ಯನ ಆತ್ಮಕಥೆ-5: ನಾನು ಮತ್ತು ನನ್ನ ಕುಟುಂಬ

ನಾನು ಮತ್ತು ನನ್ನ ಕುಟುಂಬ ನಾನು ಮದುವೆಯಾಗಿದ್ದು ಇತ್ತಿತ್ಲಾಗೆ-ದಗಮುು ಮರ್ರಿಯ್ಲಲ್ಲಿ ಗೂಡು ಇದ್ದಾಗ. ನಲ್ಲನ ಮುತ್ತಜ್ಜನೇ ಮದುವೆ ಮಾಡ್ಸಿದ್ದು. ನನ್ನ ಹೆಂಡ್ತಿ ಹೆಸರು ಸಣ್ಣಕ್ಕಯ್ಯ ಅಂತ. ನಾವು ಮೂರು ದಿನ ಮುಂಜಿ ಹೋಗಿದ್ವಿ. ಮುಂಜಿ ಹೋಗುವುದು ಅಂದ್ರೆ ನಮ್ಮ ಮದುವೆಯ ಮೊದಲ ಶಾಸ್ತ್ರಕ್ಕಿಂತ ಮೂರನೇ ದಿನದ ಹಿಂದಿನ ರಾತ್ರಿ ಊರಿನ ದೇವರ ಗುಡಿಯ ಮುಂದೆ ನೀರಾಕಿಸಿಕೊಳ್ಳಬೇಕು. ನೀರನ್ನು ಊರಿನ ಪೆದ್ದಗಳ ಮನೆಯವರು ಹಾಕ್ಬೇಕು. ಪೂಜಾರಿಗಳ ಮನೆಗಳ ಹತ್ರ ನೀರು ಕಾಯಿಸಿರುತ್ತಾರೆ. ಮೂರು ಜನ ಪೂಜಾರಿಗಳೆಂದರೆ ಚನ್ನಕೇಶವ ಪೂಜಾರಿ, […]

ಕಿಲಾರಿ ಬೋರಯ್ಯನ ಆತ್ಮಕಥೆ-4: ನಡೀತಾ ಬರುವಾಗ ಹಾವು ಮೇಲೆ ಕಾಲಿಟ್ಟೆ!

ಕಿಲಾರಿ ಬೋರಯ್ಯನ ಆತ್ಮಕಥೆ-4: ನಡೀತಾ ಬರುವಾಗ ಹಾವು ಮೇಲೆ ಕಾಲಿಟ್ಟೆ!

ಈಗ 80 ದೇವರೆತ್ತುಗಳು  ಇವೆ. ಇದರಾಗೆ ಪೂರ್ವದಿಂದ ಬಂದವು ಸ್ವಲ್ಪ ಇವೆ. ಇನ್ನುಳಿದವು ಭಕ್ತರು ಬಿಟ್ಟವು. ಭಕ್ತರಿಗೆ ಏನಾದರೂ ಕಷ್ಟ ಬಂತು ಅಂದ್ರೆ ಮುತ್ತಯ್ಯಗಳಿಗೆ ಒಂದು ಸುರುಬು ಬಿಡುತ್ತೇವೆ ಅಂತ ಹರಕೆ ಕಟ್ಟಿಕೊಳ್ಳುತ್ತಾರೆ. ಹಿಂಗೆ ಭಕ್ತರು ಬಿಡುವ ಎತ್ತುಗಳನ್ನು ನಮ್ಮ ಹತ್ತಿರ ಮುದ್ರೆಕೋಲುಗಳು ಅಂಥ ಇದಾವೆ. ಮುದ್ರೆಗಳು ತ್ರಿಶೂಲ, ಬಿಲ್ಲು, ಬಾಣ, ಸೂರ್ಯ, ಚಂದ್ರ ಆಕಾರದವು. ಅವುಗಳಲ್ಲಿ ಸೂರ್ಯ-ಚಂದ್ರನ ಮುದ್ರೆಗಳನ್ನು ಎಲ್ಲ ಎತ್ತುಗಳಿಗೂ, ಆಕಳುಗಳಿಗೂ ಹಾಕ್ತೀವಿ. ಆದರೆ, ಬಿಲ್ಲು, ಬಾಣ ತ್ರಿಶೂಲ ಇವುನ್ನೆಲ್ಲ ಬರೀ ಎತ್ತುಗಳಿಗೆ ಮಾತ್ರ […]

ಕಿಲಾರಿ ಬೋರಯ್ಯನ ಆತ್ಮಕಥೆ-3: ಮ್ಯಾಸರಿಗೆಲ್ಲ ಮುತ್ತಯ್ಯಗಳೆ ಗುರುಗಳು

ಕಿಲಾರಿ ಬೋರಯ್ಯನ ಆತ್ಮಕಥೆ-3: ಮ್ಯಾಸರಿಗೆಲ್ಲ ಮುತ್ತಯ್ಯಗಳೆ ಗುರುಗಳು

ಮುತ್ತಯ್ಯಗಳೆ ಗುರುಗಳು ಒಂದ್ಸಲ ಮುತ್ತಯ್ಯಗಳನ್ನು ದೊಡ್ಡಿಗೆ ಕೂಡಿದ್ದನಂತೆ ಒಬ್ನು, ಆವಾಗ ನಮ್ಮವರು ಏನೋ ಮಾಡಿ ಬಿಡಿಸಿಕೊಂಡು ಬಂದ್ರಂತೆ. ಆ ದೊಡ್ಡಿಗೆ ಕೂಡಿದವನಿಗೆ ಆವೊತ್ತಿನಿಂದ್ಲೆ ಚಳಿ-ಜ್ವರ ಬಂದಿತ್ತಂತೆ. ಇಂಗಾದ ಕೆಲವು ದಿನಗಳ ನಂತರ ಪದಿಯಾಗಳ ದೇವರು ಸಾಗಿತ್ತು. ಆವಾಗ ಆ ದೇವರಿಗೆ ಕಾಯಿಲೆಗೆ ಬಿದ್ದ ಪಾರಂನವನು ಬಂದ. ಆವಾಗ ಇಲ್ಲಿ ಸಜ್ಜೆ ಮುದ್ದೆ ಮಾಂಸದ ಸಾರು ಮಾಡಿದ್ದರಂತೆ. ಈ ಸಜ್ಜೆ ಅನ್ನ ಮತ್ತು ಮಾಂಸದ ಸಾರನ್ನು ಉಂಡು ಹೋದನಂತೆ. ಹೋದ ಎರಡು ಮೂರು ತಿಂಗಳ ನಂತರ ಆತ ಸತ್ತು […]

ಮ್ಯಾಸಬೇಡರ ಎತ್ತಿನ ಕಿಲಾರಿ ಬೋರಯ್ಯನ ಆತ್ಮಕಥೆ-2

ಮ್ಯಾಸಬೇಡರ ಎತ್ತಿನ ಕಿಲಾರಿ ಬೋರಯ್ಯನ ಆತ್ಮಕಥೆ-2

ಕಥನ ಆರಂಭ-2 ನನ್ನ ಹೆಸರು ಎತ್ತಿನ ಬೋರಯ್ಯ. ನಮ್ಮ ಮನೆತನದವರನ್ನು ‘ಎತ್ತಿನ ಮನೆತನ’ ಎಂದು ಕರೆಯುತ್ತಾರೆ. ಅದಕ್ಕೆ ನಮ್ಮ ಹೆಸರುಗಳ ಜೊತೆಗೆ ಎತ್ತಿನ ಅಂತ ಸೇರಿಸುತ್ತಾರೆ. ನಮ್ಮ ಅಪ್ಪ, ತಾತ ಇವರೆಲ್ಲರಿಗೂ ಹಿಂಗೆ ಕರೀತಿದ್ರು. ನಾವು ನಾಲ್ಕು ಜನ ಗಂಡು ಮಕ್ಕಳು. ಅದರಲ್ಲಿ ಒಬ್ರು ಸತ್ಹೋದ್ರು. ಇನ್ನು ಮೂರು ಜನ ಇದ್ದೀವಿ. ನಾನು ಬೇರೆ ಇದ್ದೀನಿ. ಇನ್ನಿಬ್ರು ಬೇರೆ ಬೇರೆ ಇದ್ದಾರೆ. ಜಮೀನಿನಲ್ಲಿ ನಾನು ಇನ್ನು ಯಾವುದೇ ಭಾಗ ತಗೊಂಡಿಲ್ಲ. ನನ್ನ ಭಾಗವನ್ನು ಅವರಿಬ್ಬರೇ ಮಾಡ್ಕೊಂಡು ತಿಂತಾರೆ. […]

ಮ್ಯಾಸಬೇಡರ ಎತ್ತಿನ ಕಿಲಾರಿ ಬೋರಯ್ಯನ ಆತ್ಮಕಥೆ-1

ಮ್ಯಾಸಬೇಡರ ಎತ್ತಿನ ಕಿಲಾರಿ ಬೋರಯ್ಯನ ಆತ್ಮಕಥೆ-1

ಡಾ. ಎಸ್. ಎಂ. ಮುತ್ತಯ್ಯ ಮ್ಯಾಸನಾಯಕ ಬುಡಕಟ್ಟಿನಿಂದ ಬಂದ ಪ್ರತಿಭಾವಂತ. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ., ಪಿಎಚ್.ಡಿ. ಪದವಿ ಪಡೆದಿರುವ ಇವರು ಪ್ರಸ್ತುತ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಿಖಿತ- ಅಲಿಖಿತ, ಜಾನಪದ ಸಂಕಥನ, ಕನ್ನಡ ಜನಪದ ಮಹಾಕಾವ್ಯಗಳು ಮತ್ತು ಪ್ರತಿ ಸಂಸ್ಕøತಿ ಎಂಬ ಕೃತಿಗಳು ಪ್ರಕಟವಾಗಿವೆ. ಮುತ್ತಯ್ಯನವರ ಕೃತಿ ‘ಕಿಲಾರಿ’ ಇಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗಲಿದೆ. ಕಿಲಾರಿ ಬೋರಯ್ಯನ ಆತ್ಮಕಥೆ ಓದುವ ಮುನ್ನ ಮ್ಯಾಸ ನಾಯಕರ ಸಾಂಸ್ಕøತಿಕ ಪರಂಪರೆಯ ಕುರುಹು, ಪಶುಪಾಲನೆಯ […]

‘ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು’

‘ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು’

(ಪಾಕಿಸ್ತಾನದ ಕವಯಿತ್ರಿ ಸಾರಾ ಶಗುಫ್ತಾ ಅವರ ಜೀವನ ಮತ್ತು ಕಾವ್ಯ  ಕುರಿತು ಅಮೃತಾ ಪ್ರೀತಂ ಬರೆದಿದ್ದಾರೆ . ಕನ್ನಡಕ್ಕೆ ಹಸನ್ ನಯೀಂ ಸುರಕೋಡ ಅನುವಾದಿಸಿದ್ದಾರೆ. ಲಡಾಯಿ ಪ್ರಕಾಶನ, ಗದಗ ಅದನ್ನು ಪ್ರಕಟಿಸಿದೆ. ಅದು ೨೮. ೫. ೨೦೧೬ರಂದು ಧಾರವಾಡದಲ್ಲಿ ಬಿಡುಗಡೆಯಾಗಲಿದೆ . ಅದರ ಆಯ್ದ  ಇಲ್ಲಿ ನಿಮಗಾಗಿ. ) ಹಾಲ ಮೇಲೆ ಆಣೆ ಆಸ್ಟ್ರೇಲಿಯಾದಲ್ಲಿ ಒಂದು ಕತೆ ಜನಜನಿತವಾಗಿದೆ. ಆ ದೇಶದಲ್ಲಿ ಒಮ್ಮೆ ಜನಿಸಿದ ಬಾತುಕೋಳಿಗಳಿಗೆ ಬಿಳಿಯ ರೆಕ್ಕೆಗಳಿದ್ದವು. ಆಗ ಅವು ಒಂದು ಪ್ರಚಂಡ ಬಿರುಗಾಳಿಗೆ ಸಿಲುಕಿಕೊಂಡವು. ಅವು ಹದ್ದುಗಳ ಗೂಡಿನಲ್ಲಿ ಆಶ್ರಯ ಪಡೆಯಬೇಕಾಯಿತು. ಹದ್ದುಗಳು ಸಾಯಂಕಾಲ ತಮ್ಮ ಗೂಡಿಗೆ ಮರಳಿದಾಗ ಅಲ್ಲಿ […]

ಲಾಟೀನ ಬೆಳಕು – 4: “ಮಾಸ್ತರನ ಮಗಳ ಮಾಸುಂದ್ರಿನ್ಯಾಕ ಕರ್ಕೊಂಡ ಬಂದರ್ಲೆ

ಲಾಟೀನ ಬೆಳಕು – 4: “ಮಾಸ್ತರನ ಮಗಳ ಮಾಸುಂದ್ರಿನ್ಯಾಕ ಕರ್ಕೊಂಡ ಬಂದರ್ಲೆ

ನಮ್ಮ ಜನರೆಲ್ಲರೂ ಕೂಲಿ ಕೆಲಸವನ್ನೇ ನೆಚ್ಚಿಕೊಂಡವರು. ಹೀಗಾಗಿ ನಾನು ಏಳುವಷ್ಟರಲ್ಲಿ ಅವರೆಲ್ಲ ನಸುಕಿನಲ್ಲೇ ಎದ್ದು, ರೊಟ್ಟಿ ಮಾಡಿ, ಜಳಕ ಮಾಡಿ, ಉಂಡು ಬುತ್ತಿಗಂಟು ಕಟ್ಟಿಕೊಂಡು ಕೂಲಿಗಾಗಿ ಹೋಗುತ್ತಿದ್ದರು. ವಯಸ್ಸಾಗಿ ಹಾಸಿಗೆ ಹಿಡಿದವರು ಮತ್ತು ಮಕ್ಕಳನ್ನು ಬಿಟ್ಟರೆ ಎಲ್ಲವೂ ಖಾಲಿ ಖಾಲಿ, ನಮ್ಮ ಮನೆಯಲ್ಲಿ ನನ್ನ ಆಯಿ (ತಂದೆಯ ತಾಯಿ) ಆಗಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ತನ್ನ ಹರೆಯದ ವಯಸ್ಸಿನಲ್ಲಿ ಗಂಡ ತೀರಿಕೊಂಡಿದ್ದರಿಂದ ಆಯಿ ತನ್ನ ಮೂರು ಮಕ್ಕಳನ್ನು ಕೂಲಿ ಮಾಡಿಯೇ ಬೆಳೆಸಿದ್ದಳು. ನಮ್ಮ ಹೊಲದಲ್ಲಿ ಕೆಲಸವಿಲ್ಲದಾಗ ಕೂಲಿ […]