ವ್ಯಕ್ತಿಚಿತ್ರ-ಅನುಭವಚಿತ್ರ

ವ್ಯಕ್ತಿಚಿತ್ರ-ಅನುಭವಚಿತ್ರ

ಗಾಂಧೀಜಿಯ ಪ್ರತಿಬಿಂಬಗಳು

ಗಾಂಧೀಜಿಯ ಪ್ರತಿಬಿಂಬಗಳು

(ಗಾಂಧಿ ತೀರಿಕೊಂಡ ನಂತರ 1949ರಲ್ಲಿ ಬರೆದ ಲೇಖನ) ದೋಷಿಯೆಂದು ತೀರ್ಮಾನವಾಗುವವರೆಗೂ ಪ್ರವಾದಿಗಳನ್ನು ಮುಗ್ಧರೆಂದೇ ಪರಿಗಣಿಸಲಾಗುತ್ತದೆ. ಆದರೆ ಇದಕ್ಕಾಗಿ ಸಾಮಾನ್ಯ ಜನರು ಒಳಪಡುವ ಅಗ್ನಿಪರೀಕ್ಷೆ ಈ ಪ್ರವಾದಿಗಳಿಗೂ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗಾಂಧಿಯ ವಿಷಯದಲ್ಲಿ ನನ್ನ ಕೆಲವು ಪ್ರಶ್ನೆಗಳು : ಆಧ್ಯಾತ್ಮದ ಚಿಂತನೆಗಳನ್ನು ಮೈಗೂಡಿಸಿಕೊಂಡು ತನ್ನನ್ನು ತಾನು ಬೆತ್ತಲೆ ಫಕೀರ ಹಾಗೂ ವಿನಯಶೀಲನೆಂದು ಅತ್ಯಂತ ಎಚ್ಚರಿಕೆಯ ಸ್ಥಿತಿಯಲ್ಲಿ ಕರೆದುಕೊಳ್ಳುತ್ತಲೇ ಒಂದು ದೊಡ್ಡ ಸಾಮ್ರಾಜ್ಯವನ್ನು ಅಲ್ಲಾಡಿಸಿದ ಗಾಂಧಿಯ ಈ ಕ್ರಾಂತಿಯಲ್ಲಿ ಒಣಹೆಮ್ಮೆಯ ಬಂಡಾಯದ ಪಾಲೆಷ್ಟು ? ಅಥವಾ ಇದೆಲ್ಲ ಮಾಯೆಯೇ […]

ಗಾಂಧೀಜಿಯ ಕನ್ನಡಕದೊಳಗಿಂದ

ಗಾಂಧೀಜಿಯ ಕನ್ನಡಕದೊಳಗಿಂದ

ಆಧುನಿಕ ಭಾರತದ ಇತಿಹಾಸವನ್ನು ಕೆದಕಿದಾಗ ಕಣ್ಣೆದುರು ನಿಲ್ಲುವುದು ಬರೇ ದ್ವಂದ್ವಗಳೇ. ಒಂದೆಡೆ ವಸಾಹತುಶಾಹಿಯನ್ನು ಸ್ವೀಕರಿಸಿ ತಮ್ಮ ಪಾಳಯಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡಿದ ರಾಜಮಹಾರಾಜರುಗಳ ಕಥೆಯಾದರೆ ಮತ್ತೊಂದೆಡೆ ಸ್ವದೇಶದ ವಿಮೋಚನೆಗಾಗಿ ಬಲಿದಾನ ಮಾಡಿದ ವೀರ ಯೋಧರ ಕಥನಗಳು ರಾರಾಜಿಸುತ್ತವೆ. ಮತ್ತೊಂದೆಡೆ ರಾಷ್ಟ್ರ ವಿಮೋಚನೆಯೊಂದಿಗೇ ದೇಶದ ಆಂತರ್ಯವನ್ನು ದಹಿಸುತ್ತಿದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಪಣ ತೊಟ್ಟ ನಿದರ್ಶನಗಳು ಅನಾವರಣಗೊಳ್ಳುತ್ತವೆ. ಫುಲೆ, ಅಂಬೇಡ್ಕರ್, ಮಹಾತ್ಮ ಗಾಂಧೀಜಿಯವರ ಸಂಕಥನಗಳು ನವ ಭಾರತದ ಇತಿಹಾಸವನ್ನು ಅಲಂಕರಿಸುತ್ತವೆ. ಗಾಂಧೀಜಿಯವರ ಶಾಂತಿ ಅಹಿಂಸೆಯ ಮಂತ್ರದೊಂದಿಗೇ ಭಗತ್ ಸಿಂಗ್ ಮತ್ತು […]

ಕಿಲಾರಿ ಬೋರಯ್ಯನ ಆತ್ಮಕಥೆ-9: ಉಗಾದಿ ಗೂಡಿಗೆ ಮಿನಿಷ್ಟ್ರುಯಾವಾಗಲ್ಲೂ ಬರ್ತಾರೆ

ಕಿಲಾರಿ ಬೋರಯ್ಯನ ಆತ್ಮಕಥೆ-9: ಉಗಾದಿ ಗೂಡಿಗೆ ಮಿನಿಷ್ಟ್ರುಯಾವಾಗಲ್ಲೂ ಬರ್ತಾರೆ

ಯುಗಾದಿ ಯುಗಾದಿ ಅಮಾವಾಸೆ ದಿನ ಎತ್ತುಗಳ ಗೂಡು. ಅವೊತ್ತಿನ ದಿವ್ಸದಾಗೆ ಗೂಡನ್ನು ಬೇರೆ ಯಾರಾದರೂ ಭಕ್ತಾದಿಗಳ ಹೊಲದಲ್ಲಿ ಆಕಿರ್ತಾರೆ. ಅಂಗೆ ಗೂಡು ಹಾಕಿದ ಜಾಗಕ್ಕೆ ಊರಿನ್ಯಾಗೆ ಇರುವುವವರೆಲ್ಲರೂ ಬರುತ್ತಾರೆ. ಕೂದ್ಲು ತೆಗಿಸೋರು, ಹರಕೆ ಕಟ್ಟಿಕೊಂಡವರು ಬೇಟೆಗಳನ್ನು ತೆಗೆದುಕೊಂಡು ಬಂದಿರುತ್ತಾರೆ. ಅವೊತ್ತು ರಾತ್ರಿ ಸರಗ ಹಾಕ್ತೀವಿ. ಮುತ್ತಯ್ಯಗಳ ಮಾರಮ್ಮನಿಗೆ ಸರಗ ಹಾಕುವುದು. ಸರಗ ಹಾಕುವುದು ಎಂದ್ರೆ ಯಾರಾದರೂ ಭಕ್ತರು ವಾಸಿ ಪಿಲ್ಲ ತಂದು ಕೊಡ್ತಾರೆ. ಅದನ್ನು ಗೂಡಿನಲ್ಲಿ ಕೊಯ್ಯಬೇಕು. ಮೂರು ಎಡೆ ಹಾಕಿ ಪೂಜೆ ಮಾಡಿ ಬೇಟೆಗೆ ಕುಂಕುಮ […]

ಮನಸ್ಸುಗಳ ಬೆಸೆಯುವ ಜನಪದ ಕವಿ ಇಬ್ರಾಹಿಂ ಸುತಾರ

ಮನಸ್ಸುಗಳ ಬೆಸೆಯುವ ಜನಪದ ಕವಿ ಇಬ್ರಾಹಿಂ ಸುತಾರ

ಉತ್ತರ ಕರ್ನಾಟಕ ಬೌಗೋಳಿಕವಾಗಿಯೂ ಸಾಂಸ್ಕøತಿಕವಾಗಿಯೂ ಭಿನ್ನ ಚಹರೆಗಳನ್ನು ಹೊಂದಿವೆ. ಇಲ್ಲಿ ಧೀರ್ಘಕಾಲದ ಮುಸ್ಲಿಂ ಆಳ್ವಿಕೆಯ ಕಾರಣಕ್ಕೆ ಹಿಂದು ಮುಸ್ಲಿಂ ಸಾಮರಸ್ಯ ಬೆಸೆದಂತಿದೆ. ಧರ್ಮ ಬೇಧವಿಲ್ಲದೆ ಹಿಂದು ಮುಸ್ಲಿಂಮರು ಕೂಡಿ ಮಾಡುವ ಮೊಹರಂ ಆಚರಣೆ, ಉರುಸುಗಳನ್ನು ನೋಡಿದರೆ ತಿಳಿಯುತ್ತದೆ. ಅಂತೆಯೇ ಈ ಸಾಮರಸ್ಯದ ಪರಂಪರೆಗೆ ಈ ಭಾಗದಲ್ಲಿ ಹುಟ್ಟಿದ ವಚನ ಚಳವಳಿ, ತತ್ವಪದಕಾರರ ಹಾಡಿಕೆಗಳು ಪ್ರೇರಣೆಯಾಗಿದೆ. ಹೀಗೆ ಆದ್ಯಾತ್ಮ ಭಕ್ತಿಗಳನ್ನು ಬಳಸಿಕೊಂಡೆ ಸಮಸಮಾಜವನ್ನು ನಿರ್ಮಿಸಲು, ಅಂತೆಯೇ ಜಾತಿಧರ್ಮ ರಹಿತ ಸಮಾಜವನ್ನು ಕಟ್ಟಲು ಈ ಪರಂಪರೆಗಳು ಶ್ರಮಿಸಿವೆ. 18 ನೇ […]

ಸುಧಾರಣವಾದಿ ಸುಬ್ಬಣ್ಣ

ಸುಧಾರಣವಾದಿ ಸುಬ್ಬಣ್ಣ

ಮಾವೋ ಅವರ ಒಂದು ಮಾತಿದೆ. ಅದೇನೆಂದರೆ “ ಚಳವಳಿ ಹಲವರನ್ನು ಕೈ ಬೀಸಿ ಕರೆಯುತ್ತದೆ, ಕೆಲವರನ್ನು ಮಾತ್ರ ಅದು ಆಯ್ದು ಕೊಳ್ಳುತ್ತದೆ” ಹೀಗೆ ಚಳವಳಿ ಆಯ್ದುಕೊಂಡ ವ್ಯಕ್ತಿಗಳ ಪಟ್ಟಿಯಲ್ಲಿ ಕೆ.ವಿ.ಸುಬ್ಬಣ್ಣ ಪ್ರಮುಖರು. ಇವರನ್ನು ಇಡೀ ನಾಡು ಸಮಾಜವಾದಿ ಚಿಂತಕ,ಬರಹಗಾರ,ಸಂಘಟಕ,ಗಾಂಧಿ ತತ್ವಗಳನ್ನು ತಮ್ಮ ಬದುಕಿನಲ್ಲಿ ಮತ್ತು ಚಟುವಟಿಕೆಯಲ್ಲಿ ಅಳವಡಿಸಿಕೊಂಡವರು ಎಂದು ಗುರುತಿಸಿದೆ. ಎಲ್ಲದ್ದಕ್ಕೂ ಮುಖ್ಯವಾಗಿ ಇವರೊಬ್ಬ ಅಪ್ಪಟ ಡೆಮೊಕ್ರಾಟ್. ಹೀಗಾಗಿಯೇ ಇವರು ತಮ್ಮ ಬದುಕಿನುದ್ದಕ್ಕೂ ಮಾಡಿದ ವಿವಿಧ ರೀತಿಯ ಕೆಲಸಗಳಲ್ಲಿ ಪ್ರಜಾಪ್ರಭುತ್ವದಲ್ಲಿ ಇರಬಹುದಾದ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ಪ್ರಭುತ್ವವನ್ನು […]

ಸ್ನಾನ ಅಂದ್ರೆ ಉಗಾದಿ ಹಬ್ಬ ಬಂತಾ ಅಂತಾನೆ!

ಸ್ನಾನ ಅಂದ್ರೆ ಉಗಾದಿ ಹಬ್ಬ ಬಂತಾ ಅಂತಾನೆ!

ಅಲ್ಲೊಂದು ಕರಿ ಅತ್ತಿಮರ. ಅದರಲ್ಲಿ ದೆವ್ವ ಕೂತಿರುತ್ತದೆಂದೂ; ಕಾಲು ಹಿಂದು ಮುಂದು ಮಾಡಿ ಬೆಳ್ಳಗೆ ಅಂಬಾರದುದ್ದ ನಿಂತು ಬಿಡುತ್ತದೆಂದು ಆ ಪಟೇಲನಂತೆ ಕತ್ತು ಬಗ್ಗಿಸಿ ಬೀಡಿ ಕಚ್ಚಿ ಹಿಂದಿರುಗಿ ನೋಡದೆ ಜಿಯಂಕು ಜಿಯಂಕನೆ ನೊರನೊರ ಅಂತಾ ಮೆಟ್ಟಿನ ಕಾಲಿನಲ್ಲಿ ಬರುವವನಿಗೆ ಮಾತ್ರ ಬೆಚ್ಚಿ ದೂರ ಸರಿಯುತ್ತದೆಂದೂ; ದೆವ್ವನ ಹಿಂದಿರುಗಿ ನೋಡಬಾರದೆಂದು ಆಗ ಏನೂ ಮಾಡುವುದಿಲ್ಲವೆಂದು ನಮ್ಮೂರ ಜನ ಹೇಳುತ್ತಿದ್ದುಂಟು. ಅದರ ಪಕ್ಕದಲ್ಲೆ ಮಿಡಚಲ ಮರ ಅದರ ಬುಡದಲ್ಲೊಬ್ಬಳು ದೇವರು ಕುಂತವಳೆ. ಅವಳು ಆ ಬುಡ್ಡಪ್ಪನ ಮನೆತನದವರ ತಲೆ […]

ಕಿಲಾರಿ ಬೋರಯ್ಯನ ಆತ್ಮಕಥೆ-8: ಮೊದಲ ಮೊಲ ಮಾತ್ರ ಬೇಟೆ

ಕಿಲಾರಿ ಬೋರಯ್ಯನ ಆತ್ಮಕಥೆ-8: ಮೊದಲ ಮೊಲ ಮಾತ್ರ ಬೇಟೆ

ದೀವಳಿಗೆ ದೀಪಾವಳಿಯ ಅಮಾವಾಸೆಯ ಮುಂದೆ ಗುರುವಾರದ ದಿನಾನೋ ಶುಕ್ರವಾರದ ದಿನಾನೋ ಊರಿನ ಕುಲಸಾವಿರದವರು ಸೇರಿ ದೇವರು ಮಾಡಲು ಮಾತಾಡುತ್ತಾರೆ. ಮಾತಾಡಿದ ಮೇಲೆ ಬರುವ ಸೋಮುವಾರ ದೀವಳಿಗೆ ಗೂಡು ಮಾಡ್ತಾರೆ. ಗೂಡು ಮಾಡಾದು ಎಂಗೆ ಅಂದ್ರೆ. ಸೋಮುವಾರ ಉರಿನ ಜನ ತಮ್ಮ ತಮ್ಮ ಹೊಲಗಳಿಂದ ಸಜ್ಜೆತೆನೆ ಮುರಕ್ಕೊಂಡು ಬರಬೇಕು. ಸಜ್ಜೆ ಹಾಕದಿದ್ದವರು ರಾಗಿ ತೆನೆ ತರ್ತಾರೆ. ಹಿಂಗೆ ತಂದ ತೆನೆಗಳನ್ನೆಲ್ಲಾ ಊರೊರಗೆ ಮೈದಾನವಿದ್ದ ಜಾಗದಲ್ಲಿ ಕೂಡಿ ಹಾಕುತ್ತಾರೆ. ಅಂಗೆ ಕೂಡು ಹಾಕಿದ ತೆನೆಗಳನ್ನು ಸ್ವಲ್ಪ ಅಂಗೆ ಉಳಿಸಿ ಉಳಿದದ್ದೆನ್ನಲ್ಲ […]

ಕಿಲಾರಿ ಬೋರಯ್ಯನ ಆತ್ಮಕಥೆ-7: ದೇವರ ಕಟ್ಲೆಗಳ ನಡುವೆ

ಕಿಲಾರಿ ಬೋರಯ್ಯನ ಆತ್ಮಕಥೆ-7: ದೇವರ ಕಟ್ಲೆಗಳ ನಡುವೆ

ನಮ್ಮೂರಾಗೆ ದೇವರ ಕಟ್ಲೆಗಳನ್ನು ಭಾರಿ ಕಟ್ಟುನಿಟ್ಟಾಗಿ ಮಾಡುತ್ತಾರೆ. ಬೇರೆ ಕಡೆ ಎಲ್ಲ ಹೊಡೆದಾಡಿಕೊಂಡು ಬಡುದಾಡಿಕೊಂಡು ಇನ್ನು ಯಾವ್ಯಾವುದಕ್ಕೊ ಸರಿಯಾಗಿ ಕಟ್ಲೆ ಮಾಡುವುದಿಲ್ಲ. ನಮ್ಮೂರಾಗೆ ಮೊದಲು ನಡೆಯುವ ಹಬ್ಬ ಎತ್ತಿನ ಹಬ್ಬ. ವರ್ಷದಾಗೆ ಅದೇ ಮೊದಲ ಹಬ್ಬ ಆಮೇಲೆ ನಾಗಪ್ಪಲು (ನಾಗರಪಂಚಮಿ) ಆಮೇಲೆ ಮಾರಮ್ಮ. ದೀವಳಿಗೆ ಹಬ್ಬ, ಮಾರಮ್ಮ .ಆಮೇಲೆ ಗುಗ್ಗರಿಹಬ್ಬ, ಗುಗ್ಗರಿಹಬ್ಬ ಆದ ಮೇಲೆ ಯುಗಾದಿ. ಇಷ್ಟು ಬಿಟ್ಟರೆ ಇನ್ನೂ ಒಂದೊಂದು ದಿನ ಪೂಜೆ ಮಾಡುವ ದಿನಗಳು ಇದ್ದಾವೆ. ನಲಕೇತಲ ಎರಗಯ್ಯ, ಫಲಮಾರು ಗುಡ್ಡ, ಕಂಪಳ ದೇವರು […]

ಅಜ್ಜ ಮತ್ತು ಹೀರೋ ಪೆನ್

ಅಜ್ಜ ಮತ್ತು ಹೀರೋ ಪೆನ್

ಮನುಷ್ಯ ಹಳೆಯ ನೆನಪುಗಳ ಮರೆಯಲ್ಲಿ ಹೊಸ ದಾರಿಯನ್ನು ಹುಡುಕುತ್ತಾನೆ. ಈ ನೆನಪುಗಳು ಒಳ್ಳೆಯವೋ, ಕೆಟ್ಟವೋ ಕೆಲವೊಮ್ಮೆ ಕ್ರೂರವೂ ಆಗಿರುತ್ತವೆ. ಇವು ಹೊಸ ಅನುಭವಕ್ಕೆ ದಾರಿಯನ್ನು ತೆರೆಯುತ್ತದೆ ಎನ್ನಬಹುದು. ಈ ಅನುಭವ ಮನುಷ್ಯನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ನೆನಪುಗಳು ಮನುಷ್ಯನ ಜೊತೆ ಜೊತೆಗೆ ಇರುತ್ತವೆ. ನೆನಪುಗಳು ಗತದ ತದ್ರೂಪವೇನಲ್ಲ. ಅವು ಸದಾ ವರ್ತಮಾನೀಯ. ನೆನಪುಗಳು ಮತ್ತು ಗತ ಅಥವಾ ಚರಿತ್ರೆ ಇವುಗಳನ್ನು ಒಂದೇ ಆಗಿ ಗ್ರಹಿಸುವ ಕ್ರಮವಿದೆ. ಆದರೆ ಇವುಗಳ ನಡುವೆ ರೂಪ ಸ್ವರೂಪದಲ್ಲಿ ವ್ಯತ್ಯಾಸವಿದೆ […]

“ಹೊತ್ತು ಮುಳುಗುವ ಮುನ್ನ” ಎದ್ದು ನಡೆದವರು

“ಹೊತ್ತು ಮುಳುಗುವ ಮುನ್ನ” ಎದ್ದು ನಡೆದವರು

ಜಿಗಿದು ಅಡಿಗೆ ದೇವರ ಕೋಣೆಯ ತುಳಿದು ಉಪ್ಪರಿಗೆಯನ್ನೇರಿ ಅಗಳಿ ಮುರಿದು ಕುದಿವ ಸಹಸ್ರ ಕಿರಣಗಳ ಎಸಳು ಎಸಳಿಗೆ ಉಜ್ಜಿ ಪ್ರೀತಿ ಮುಕ್ಕುವುದಕ್ಕೆ ಹೆಪ್ಪು ಕರಗಲೇ ಬೇಕು, ದ್ರವಿಸಿ ಪಾರಜವಾಗಿ ಜುಟ್ಟ-ಜನಿವಾರಗಳ, ಗೋಸುಂಬೇ ಬಾಯಿಗಳ ಕಚ ಕಚ ಕೊಚ್ಚಿ ಬೇಲಿ ಬಿಚ್ಚುವುದಕ್ಕೆ ಮತ್ತೆ ಮತ್ತೆ ಕಾಯುವುದಿಲ್ಲ. ಎಂದು ಭಾರತ ದೇಶದಲ್ಲಿ ಇರುವ ಜಾತಿ ವ್ಯವಸ್ಥೆಯನ್ನು ಕಂಡು ಮೈ ಉರಿದವರು ಕವಿ ಜಿ.ಎಸ್.ಅವಧಾನಿಯವರು. ಇದು ಅವರ ‘ಗಂಗೋತ್ರಿಯ ಹಕ್ಕಿಗಳು’ ಕವನ ಸಂಕಲನದ ‘ಕಾಯುವುದಿಲ್ಲ’ ಕವಿತೆಯ ಸಾಲುಗಳು. ಜಾತಿಯ ಹೆಸರಿನಲ್ಲಿ ಅಮಾನವೀಯವಾಗಿ […]