ವ್ಯಕ್ತಿಚಿತ್ರ-ಅನುಭವಚಿತ್ರ

ವ್ಯಕ್ತಿಚಿತ್ರ-ಅನುಭವಚಿತ್ರ

ಲಾಟೀನ ಬೆಳಕು- 5: ನೆಲದ ಹಂಚಿಕೆಗು ಆಹಾರ ಪದ್ಧತಿಗೂ ನಂಟಿದೆ

ಲಾಟೀನ ಬೆಳಕು- 5: ನೆಲದ ಹಂಚಿಕೆಗು ಆಹಾರ ಪದ್ಧತಿಗೂ ನಂಟಿದೆ

ಮಳೆಗಾಲ ಆಶೆ-ಭರವಸೆಗಳ ಕನಸಿನ ಕಣಜ. ಹರುಷದ ಕೂಳಿಗೆ ವರುಷದ ಕೂಳನ್ನು ಮರೆಯಬಾರದು ಎಂದು ಹಸಿವಿನ ಸಂಕಟವನ್ನು ಹೊಕ್ಕುಳಲ್ಲಿ ಹೂತು ಕುಳಿತರೂ ದೇವರೇ ಮಳೆಯಾಗಲಿ ಎಂಬ ಮೊರೆ ನಮ್ಮದು. ಮಳೆಗಾಲದಲ್ಲಿ ಕೂಲಿ ಕೆಲಸ ಇರುವುದಿಲ್ಲವಾದ್ದರಿಂದ ದಿನದ ಗಂಜಿಗೆ ತತ್ವಾರ. ವಯಸ್ಸಾದವರ, ಬಾಣಂತಿಯರನ್ನು, ಮಕ್ಕಳನ್ನು ಸೋರುವ ಗುಡಿಸಲು, ಹಸಿವು-ಅನಾರೋಗ್ಯಳಿಂದ ರಕ್ಷಿಸಿಸುವುದೇ ದೊಡ್ಡ ಚಿಂತೆ. ಮಳೆಗಾಲ ಎಷ್ಷು ಮುದಕ/ಮುದಕಿಯರನ್ನು ಕರೆದೊಯ್ಯಿತು ಎಂದು ಲೆಕ್ಕಹಾಕಿದ ಸನ್ನಿವೇಶಗಳೂ ಉಂಟು. ಮಳೆ ಇದ್ದರೆ ಬೆಳೆ; ಬೆಳೆ ಬಂದರೆ ಒಂದ್ಹೊತ್ತು ಊಟಕ್ಕಾದೆರೂ ದುಡಿಯಬಹುದು ಎಂದು ಭರವಸೆಯ ಬೆಳಕಲಿ […]

ಗದ್ದರ್ ಯಾಕೆ ಬದಲಾದಿರಿ?  

ಗದ್ದರ್ ಯಾಕೆ ಬದಲಾದಿರಿ?   

  ಗದ್ದರ್!ಗದ್ದರ್ !!  ಕಳೆದೆರಡು ದಿನಗಳಿಂದ  ಸುದ್ದಿಯಾಗುತ್ತಿರುವ ಗದ್ದರ್ ಇಷ್ಟು ವರ್ಷಗಳ ಕಾಲ ತಾವು ನಂಬಿಕೊಂಡಿದ್ದ ಮಾರ್ಕ್ಸ್ ವಾದವನ್ನು ತಮ್ಮ ಹಾಡುನೃತ್ಯಗಳ ಮೂಲಕ ಜನರಿಗೆ ಯೂ ತಳ ಸಮುದಾಯಗಳ ಯುವಕರಿಗೆ  ತಲುಪಿಸುತ್ತಿದ್ದ ಕ್ರಾಂತಿಕಾರಿ ನಾಯಕನೊಬ್ಬ ಪುರೋಹಿತರ ಪಾದದ ಬಳಿ ಮಂಡಿಯೂರಿ ಕುಳಿತು ಪೂಜೆ ಸಲ್ಲಿಸಿದ ಬಗ್ಗೆ ಪರವಿರೋಧಗಳ ಚರ್ಚೆ ಬಿರುಸಿನಿಂದ ನಡೆಯುತ್ತಿದೆ. ಯಾಕೆ ವ್ಯಕ್ತಿಯೊಬ್ಬ  ಇದ್ದಕ್ಕಿದ್ದ ಹಾಗೆ ಹೀಗೆ ಬದಲಾಗಿ ಬಿಡುತ್ತಾನೆ? ಅಥವಾ ನಾವು ಅಂದುಕೊಳ್ಳುವ ಆ ‘ಇದ್ದಕ್ಕಿದ್ದಂತೆ’ ಎಂಬುದು ಆ ವ್ಯಕ್ತಿಯ ಒಳಗೆ ವರುಷಗಳಿಂದ ನಡೆಯುತ್ತಿದ್ದ […]

ಹುತಾತ್ಮ ಭಗತ್ ಸಿಂಗ್ ಏಕೆ ನೆನಪಾಗುತ್ತಾನೆ ?

ಹುತಾತ್ಮ ಭಗತ್ ಸಿಂಗ್ ಏಕೆ ನೆನಪಾಗುತ್ತಾನೆ ?

ಒಂದು ನಿರ್ದಿಷ್ಟ ಧ್ಯೇಯ ಮತ್ತು ಆದರ್ಶಗಳಿಗಾಗಿ ಹೋರಾಡಿ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ವ್ಯವಸ್ಥೆಯ ಬದಲಾವಣೆಗಾಗಿ ಅವಿರತ ಶ್ರಮಿಸಿ ಪ್ರಭುತ್ವದ ಧೂರ್ತತನಕ್ಕೆ ಬಲಿಯಾಗುವ ಪ್ರಾಮಾಣಿಕ ಹೋರಾಟಗಾರರನ್ನು ಹುತಾತ್ಮ ಎಂದು ಬಣ್ಣಿಸಬಹುದು. ವ್ಯಕ್ತಿಗತ ಸೈದ್ಧಾಂತಿಕ ನೆಲೆಯಲ್ಲಿ ಹುತಾತ್ಮ ಎಂಬ ಪದಕ್ಕೆ ನಾನಾ ಅರ್ಥಗಳು ಮೂಡುತ್ತವೆ, ನಾನಾ ಗರಿಗಳು ಕೆದರುತ್ತವೆ. ಭಾರತದ ಕ್ಷುದ್ರ ರಾಜಕಾರಣದಲ್ಲಿ ಹುತಾತ್ಮ ಎಂಬ ಪದವೂ ಸಹ ಮಾರುಕಟ್ಟೆಯ ಸರಕಿನಂತಾಗಿದ್ದು ರಾಜಕೀಯ ಮುನ್ನಡೆಗೆ ಚಿಮ್ಮುಹಲಗೆಯಾಗಿ ಪರಿಣಮಿಸಿದೆ. ದೇಶ-ದೇಶದ್ರೋಹ-ದೇಶ ಭಕ್ತಿ ಮುಂತಾದ ವಿದ್ಯಮಾನಗಳು ಅನುಕೂಲಸಿಂಧು ರಾಜಕಾರಣದ ನೆಲೆಯಲ್ಲಿ […]

ಅನುವಾದ ನಿರಂತರ ಪಯಣದಂತೆ

ಅನುವಾದ ನಿರಂತರ ಪಯಣದಂತೆ

ತೆಲುಗು-ಕನ್ನಡ ಅನುವಾದ ಕ್ಷೇತ್ರದಲ್ಲಿ ಬಿ.ಸುಜ್ಞಾನಮೂರ್ತಿ ಅವರದು ಇತ್ತೀಚಿಗೆ ಕೇಳಿಬರುತ್ತಿರುವ ಪ್ರಮುಖ ಹೆಸರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಇವರು ಪುಸ್ತಕಗಳ ಸೊಗಸು, ವಿನ್ಯಾಸ ಮತ್ತು ಅಚ್ಚುಕಟ್ಟುತನದಿಂದ ಪುಸ್ತಕಲೋಕದಲ್ಲಿ ಹೆಸರಾದವರು. ವೃತ್ತಿಜೀವನದ ಜೊತೆಗೆ ಅನುವಾದದಲ್ಲಿಯೂ ಗಂಭೀರವಾಗಿ ತೊಡಗಿಸಿಕೊಂಡು ಈವರೆಗೆ 40 ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ತಂದಿದ್ದಾರೆ. ಮಹಾಶ್ವೇತಾದೇವಿ ಅವರ ‘ಯಾರದೀ ಕಾಡು’ ಕಾದಂಬರಿಯ ಅನುವಾದಕ್ಕೆ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸೃಜನಶೀಲ ಭಾಷಾಂತರ ವಿಭಾಗದಲ್ಲಿ ಪುಸ್ತಕ ಬಹುಮಾನ(2003) ಹಾಗೂ ಆಂಧ್ರಪ್ರದೇಶದ ಚಾರಿತ್ರಿಕ ರೈತ ಹೋರಾಟವನ್ನು ಆಧರಿಸಿದ ‘ತೆಲಂಗಾಣ ಹೋರಾಟ’ […]

ನೆಲದ ಕವಿ ಜಂಬಣ್ಣ ಅಮರಚಿಂತ

ನೆಲದ ಕವಿ ಜಂಬಣ್ಣ ಅಮರಚಿಂತ

ನೆಲದ ಕವಿ ಜಂಬಣ್ಣ ಅಮರಚಿಂತ ಇಂದು ಬೆಳಿಗ್ಗೆ 4 ಗಂಟೆಗೆ ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಸುಮಾರು 8 ವರ್ಷಗಳ ಹಿಂದೆ ದಾಳಿಮಾಡಿದ ಪಾರ್ಶ್ವವಾಯು ಅವರನ್ನು ಬಹುತೇಕ ಗೃಹಬಂಧನದಲ್ಲಿಟ್ಟಿತ್ತು. ಆಗಾಗ ಹೈದರಾಬಾದಿನ ಇದೇ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತಿದ್ದರು. ಇತ್ತೀಚೆಗಂತೂ ಅವರು ಗಾಲಿಜುರ್ಚಿಯಲ್ಲೇ ಬದುಕು ಸಾಗಿಸುತ್ತಿದ್ದರು. ಮೊನ್ನೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಬಿಳಿಗ್ಗೆ ಇಹಲೋಕವನ್ನು ತ್ಯಜಿಸಿದರು. ಅವರು ಹೆಂಡತಿ, ಇಬ್ಬರು ಗಂಡು ಮಕ್ಕಳು, ಒಬ್ಬ […]

ಸಮಾಜವಾದಿ ಚಳುವಳಿಯ ಮಹಾನ್‍ ಗುರು

ಸಮಾಜವಾದಿ ಚಳುವಳಿಯ ಮಹಾನ್‍ ಗುರು

ಇಪ್ಪತ್ತನೆಯ ಶತಮಾನದ ಅರವತ್ತು- ಎಪ್ಪತ್ತರ ದಶಕದಲ್ಲಿ ಎಂ.ಡಿ.ನಂಜುಂಡಸ್ವಾಮಿಯವರು ಕರ್ನಾಟಕದ ಸಮಾಜವಾದಿಗಳ ಪುಟ್ಟ ಬುದ್ಧಿಜೀವಿ ಗುಂಪಿನ ಗುರುವಾಗಿದ್ದರು. ಕಾನೂನು, ಸಮಾಜ, ಸಾಹಿತ್ಯ, ಕೃಷಿ, ಆರ್ಥಿಕತೆ ಎಲ್ಲದರ ಬಗ್ಗೆ ಖಚಿತ ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದ ಎಂ.ಡಿ.ಎನ್ ಅವರ ಜೊತೆಗೆ ಲಂಕೇಶ್, ಅನಂತಮೂರ್ತಿ, ತೇಜಸ್ವಿಯವರಂಥ ಸಮಕಾಲೀನ ಲೇಖಕರಿದ್ದರು. ಕೆ.ರಾಮದಾಸ್, ಬಿ.ಎಂ.ನಾಗರಾಜ್, ಪ. ಮಲ್ಲೇಶರಂಥ ಕ್ರಿಯಾಶಾಲಿ ಹೋರಾಟಗಾರರಿದ್ದರು. ಅಗ್ರಹಾರ ಕೃಷ್ಣಮೂರ್ತಿ, ಕಿ.ರಂ. ನಾಗರಾಜ್, ರವಿವರ್ಮಕುಮಾರ್, ಶೂದ್ರ ಶ್ರೀನಿವಾಸ್, ಡಿ.ಆರ್.ನಾಗರಾಜ್ ಥರದ ಅವರ ಮುಂದಿನ ತಲೆಮಾರಿನ ಚಿಂತಕರಿದ್ದರು. ರಾ.ನ.ವೆಂಕಟಸ್ವಾಮಿ, ಲಕ್ಷ್ಮೀಪತಿಬಾಬು ಥರದ ವಿದ್ಯಾರ್ಥಿಗಳಿದ್ದರು. ಕರ್ನಾಟಕದಲ್ಲಿ ದಲಿತ […]

`ಮಾಣೂಸ್’ ಚಿತ್ರನಟಿಯ ಆತ್ಮಕತೆ

`ಮಾಣೂಸ್’ ಚಿತ್ರನಟಿಯ ಆತ್ಮಕತೆ

ಈಚೆಗೆ ಮರಾಠಿಯ ಸುಪ್ರಸಿದ್ಧ `ಮಾಣೂಸ್’ ಚಿತ್ರವನ್ನು ನೋಡಿದೆ. ಅದ್ಭುತವಾದ ಈ ಚಿತ್ರವನ್ನು ಮಾಡಿದವರು ಮೂಲತಃ ಬಿಜಾಪುರ ಸೀಮೆಯವರಾದ ವಿ. ಶಾಂತಾರಾಂ ಅವರು. ಇದು ನಾಯಕಿಯಾಗಿ ನಟಿಸಿ ಹಾಡಿದ ಕಲಾವಿದೆ ಶಾಂತಾ ಹುಬ್ಳೀಕರ್ ಕೂಡ ಕನ್ನಡತಿಯೇ. ಶಾಂತಾ ದೇಶದಾದ್ಯಂತ ಖ್ಯಾತಿ ಪಡೆದಿದ್ದು ಈ ಚಿತ್ರದಿಂದ. ಈ ಚಿತ್ರವನ್ನು ಸ್ವತಃ ಚಾರ್ಲಿಚಾಪ್ಲಿನ್ ನೋಡಿ ಮೆಚ್ಚಿದ್ದರು. ಈ ಚಿತ್ರವನ್ನು ನೋಡಿದ ಬಳಿಕ ಮತ್ತೊಮ್ಮೆ ಶಾಂತಾರ ಆತ್ಮಕತೆ `ಕಶಾಲ ಉದ್ಯಾಚಿ ಬಾತ’ದ ಅನುವಾದವನ್ನು ಓದಿದೆ. ಶಾಂತಾರ ಸಮಕಾಲೀನರಾದ ಅಮೀರ್‍ಬಾಯಿ ಕರ್ನಾಟಕಿ ಅವರ ಜೀವನ […]

ಬಂಡಾಯದ ಗೆಳೆಯರಾಗಿ ಬರಗೂರು ರಾಮಚಂದ್ರಪ್ಪ

ಬಂಡಾಯದ ಗೆಳೆಯರಾಗಿ ಬರಗೂರು ರಾಮಚಂದ್ರಪ್ಪ

(ಬಹು ಹಿಂದೆ ತನ್ನ ಆತ್ಮೀಯ ಗೆಳೆಯ ಬರಗೂರು ರಾಮಚಂದ್ರಪ್ಪನವರ ಕುರಿತು ಆರ್. ವಿ. ಭಂಡಾರಿಯವರು ಬರೆದ ಅಪ್ರಕಟಿತ ಲೇಖನ ಇದು. ಬರಗೂರು ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಈ ಹೊತ್ತಿನಲ್ಲಿ……… ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ಪ್ರೊ. ಚಂದ್ರಶೇಖರ ಪಾಟೀಲ ಈ ಇಬ್ಬರು ಬಂಡಾಯದ ಸಾಹಿತ್ಯ ಸಂಘಟನೆಯ ಮುಖ್ಯ ಚಲಕ ಶಕ್ತಿಗಳಾಗಿದ್ದರು. ಯಾವುದೇ ಬಂಡಾಯ ಸಾಹಿತ್ಯ ಸಮ್ಮೇಳನ ಅಥವಾ ವಿಚಾರ ಸಂಕೀರ್ಣದಲ್ಲಿ ಬರಗೂರು ಅವರು ಪ್ರಸ್ತಾವನೆ ಮಾಡುವವರು. ಚಂಪಾ ಇಡೀ ದಿನ, ಎರಡು ಮೂರು ದಿನವಾದರೆ ಎರಡು […]

ಗಾಂಧೀಜಿಯ ಪ್ರತಿಬಿಂಬಗಳು

ಗಾಂಧೀಜಿಯ ಪ್ರತಿಬಿಂಬಗಳು

(ಗಾಂಧಿ ತೀರಿಕೊಂಡ ನಂತರ 1949ರಲ್ಲಿ ಬರೆದ ಲೇಖನ) ದೋಷಿಯೆಂದು ತೀರ್ಮಾನವಾಗುವವರೆಗೂ ಪ್ರವಾದಿಗಳನ್ನು ಮುಗ್ಧರೆಂದೇ ಪರಿಗಣಿಸಲಾಗುತ್ತದೆ. ಆದರೆ ಇದಕ್ಕಾಗಿ ಸಾಮಾನ್ಯ ಜನರು ಒಳಪಡುವ ಅಗ್ನಿಪರೀಕ್ಷೆ ಈ ಪ್ರವಾದಿಗಳಿಗೂ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗಾಂಧಿಯ ವಿಷಯದಲ್ಲಿ ನನ್ನ ಕೆಲವು ಪ್ರಶ್ನೆಗಳು : ಆಧ್ಯಾತ್ಮದ ಚಿಂತನೆಗಳನ್ನು ಮೈಗೂಡಿಸಿಕೊಂಡು ತನ್ನನ್ನು ತಾನು ಬೆತ್ತಲೆ ಫಕೀರ ಹಾಗೂ ವಿನಯಶೀಲನೆಂದು ಅತ್ಯಂತ ಎಚ್ಚರಿಕೆಯ ಸ್ಥಿತಿಯಲ್ಲಿ ಕರೆದುಕೊಳ್ಳುತ್ತಲೇ ಒಂದು ದೊಡ್ಡ ಸಾಮ್ರಾಜ್ಯವನ್ನು ಅಲ್ಲಾಡಿಸಿದ ಗಾಂಧಿಯ ಈ ಕ್ರಾಂತಿಯಲ್ಲಿ ಒಣಹೆಮ್ಮೆಯ ಬಂಡಾಯದ ಪಾಲೆಷ್ಟು ? ಅಥವಾ ಇದೆಲ್ಲ ಮಾಯೆಯೇ […]

ಗಾಂಧೀಜಿಯ ಕನ್ನಡಕದೊಳಗಿಂದ

ಗಾಂಧೀಜಿಯ ಕನ್ನಡಕದೊಳಗಿಂದ

ಆಧುನಿಕ ಭಾರತದ ಇತಿಹಾಸವನ್ನು ಕೆದಕಿದಾಗ ಕಣ್ಣೆದುರು ನಿಲ್ಲುವುದು ಬರೇ ದ್ವಂದ್ವಗಳೇ. ಒಂದೆಡೆ ವಸಾಹತುಶಾಹಿಯನ್ನು ಸ್ವೀಕರಿಸಿ ತಮ್ಮ ಪಾಳಯಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡಿದ ರಾಜಮಹಾರಾಜರುಗಳ ಕಥೆಯಾದರೆ ಮತ್ತೊಂದೆಡೆ ಸ್ವದೇಶದ ವಿಮೋಚನೆಗಾಗಿ ಬಲಿದಾನ ಮಾಡಿದ ವೀರ ಯೋಧರ ಕಥನಗಳು ರಾರಾಜಿಸುತ್ತವೆ. ಮತ್ತೊಂದೆಡೆ ರಾಷ್ಟ್ರ ವಿಮೋಚನೆಯೊಂದಿಗೇ ದೇಶದ ಆಂತರ್ಯವನ್ನು ದಹಿಸುತ್ತಿದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಪಣ ತೊಟ್ಟ ನಿದರ್ಶನಗಳು ಅನಾವರಣಗೊಳ್ಳುತ್ತವೆ. ಫುಲೆ, ಅಂಬೇಡ್ಕರ್, ಮಹಾತ್ಮ ಗಾಂಧೀಜಿಯವರ ಸಂಕಥನಗಳು ನವ ಭಾರತದ ಇತಿಹಾಸವನ್ನು ಅಲಂಕರಿಸುತ್ತವೆ. ಗಾಂಧೀಜಿಯವರ ಶಾಂತಿ ಅಹಿಂಸೆಯ ಮಂತ್ರದೊಂದಿಗೇ ಭಗತ್ ಸಿಂಗ್ ಮತ್ತು […]

1 2 3 5