ಕವಿತೆ

ಕವಿತೆ

ಕಾವ್ಯದ ಹೊಸ ಅಲೆ-8 : ಕೃಷಿ ಮಾಡುತ್ತಲೇ ಕಾವ್ಯ ಬಿತ್ತಿ ಬೆಳೆಯುವ ಕವಿ ಚಂಸುಪಾಟೀಲ್

ಕಾವ್ಯದ ಹೊಸ ಅಲೆ-8 : ಕೃಷಿ ಮಾಡುತ್ತಲೇ ಕಾವ್ಯ ಬಿತ್ತಿ ಬೆಳೆಯುವ ಕವಿ ಚಂಸುಪಾಟೀಲ್

ಸದ್ಯಕ್ಕೆ ಕವಿತೆ‌ ಕಟ್ಟುವ ಹೊಸ ತಲೆಮಾರಿನ ಕವಿಗಳ ಅನುಭವ ಲೋಕ ಬಹುಪಾಲು ಕೃಷಿಯೇತರ ನೌಕರಿಯದು, ಅಂತೆಯೇ ನಗರ ಜೀವನದಿಂದ ಹುಟ್ಟಿದ್ದು. ನಗರ ಬದುಕಿನಲ್ಲಿ ಕೃಷಿಯನ್ನೂ, ಗ್ರಾಮಜಗತ್ತನ್ನು‌ ನೆನಪಿಸಿಕೊಂಡು ಕಾವ್ಯ ಕಟ್ಟುತ್ತಾರೆ. ಆದರೆ ಹೊಸ ತಲೆಮಾರಿನಲ್ಲಿ  ಕೃಷಿ ಮಾಡುತ್ತಲೇ, ಕಾವ್ಯ ಕೃಷಿಯನ್ನೂ ಎಡಬಿಡದೆ‌ ಮಾಡುವ ಕವಿಗಳ ಸಂಖ್ಯೆ ವಿರಳ. ಅಂತಹ ವಿರಳ ಕವಿಗಳಲ್ಲಿ ಎದ್ದು ಕಾಣುವ ಹೆಸರು ಚಂಸು ಪಾಟೀಲ್ ಅವರದ್ದು. ಚಂಸು ಕೆಲಕಾಲ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಹಳ್ಳಿಗೆ ಮರಳಿದರು.‌ಈಗ ಪಕ್ಕ ಹಳ್ಳಿಗರಾಗಿ ನಯನಾಜೂಕಿನ ತೋರಿಕೆ […]

ಧ್ವಂಸಗೊಂಡವರ ನಡುವೆ ಪರಸ್ಪರ ಮಾತುಕತೆ

ಧ್ವಂಸಗೊಂಡವರ ನಡುವೆ ಪರಸ್ಪರ ಮಾತುಕತೆ

ನನ್ನ ಸೊಬಗಿನ ಮನೆಯ ಪೋರ್ಟಿಕೋದ ಮೂಲಕ ನೀನು ಉದ್ರಿಕ್ತನಾಗಿ ರೋಷಾವೇಷದಿಂದ ಹಣ್ಣಿನ ಹಾರಗಳನ್ನು, ಅಸಾಧಾರಣವಾದ ತಂತಿ ವಾದ್ಯಗಳನ್ನು, ನವಿಲುಗಳನ್ನು ನಾಶಪಡಿಸುತ್ತ ಸುಂಟರಾಗಳಿಯನ್ನು ಹಿಡಿದಿಟ್ಟುಕೊಂಡಂತಹ ಶಿಷ್ಟಾಚಾರದ ಜಾಲವನ್ನು ಕಿತ್ತು ಹಾಕುತ್ತ ದಾಳಿಯಿಟ್ಟಾಗ ಸಾಲಾಗಿದ್ದ ಶ್ರೀಮಂತ ಗೋಡೆಗಳು ಬಿದ್ದು ಹೋದವು ಭಯಹುಟ್ಟಿಸುವ ಧ್ವಂಸಗೊಂಡ ಛಾವಣಿಯ ಮೇಲೆ ಕಾಗೆಗಗಳು ಕರ್ಕಶವಾಗಿ ಕಿರುಚುತಿದ್ದವು ನಿನ್ನ ಬಿರುಗಾಳಿಯ ಕಣ್ಣುಗಳ ಮಬ್ಬಾದ ಬೆಳಕಿನಲ್ಲಿ ಎದೆಗುಂದಿಸುವ ಮಾಟಗಾತಿಯಂತೆ ಮಾಂತ್ರಿಕತೆಯು ಹಾರಿಹೋಯಿತು ನಿಜವಾದ ದಿನಗಳು ಮೂಡತೊಡಗಿದಾಗ ಕೋಟೆಮನೆಯನ್ನು ತೊರೆಯಬೇಕಾಯಿತು ಸೀಳಿದ ಕಂಬಗಳು ಆಶಾವಾದದ ಬಂಡೆಗಳ ಚೌಕಟ್ಟನ್ನು ನಿರ್ಮಿಸಿದವು ಸೂಟು […]

ತಥಾಗತ..

ತಥಾಗತ..

ವೈಶಾಖ ಹುಣ್ಣಿಮೆಯ ಇರುಳು. ಪದಗಳು ಕೊಚ್ಚಿ ಹೋಗುತ್ತಿದ್ದವು ಕಣ್ಣ ದೋಣಿಯಲೆ ದಡಕೆ ತಂದ ಪದಗಳು ಮೌನದುಸುಬಿನಲಿ ಮುಳುಗುತಿದ್ದವು ಕಿರುಬೆರಳಲೆತ್ತಿ ಸಂತೈಸಿ ಎದೆಯೊಳಗೆ ಉಸಿರು ತುಂಬಿದ ಪದಗಳು ಭಾರವಾಗಿದ್ದವು ಕಾಲ ರೆಕ್ಕೆ ಕಟ್ಟಲಾಗಿತ್ತು ಗಂಟು ಸಡಿಲಿಸಿ ಬಿಚ್ಚಿದ ಪದಗಳು ತೋಯ್ದು ನೆನೆದಿದ್ದವು ಪತಪತ ನೀರಿಳಿವಷ್ಟು ಒದ್ದೆ ಗಾಳಿಗೆ ಹರಡಿ ವಿರಮಿಸಿದ ತಥಾಗತ, ಪದಗಳ ಮೇಲೂ ಪ್ರೇಮವೇ?! `ಚೆಲುವಾದ ಸತುವಾದ ಪದಗಳು ಎಲ್ಲಿ ಹೋದಾವು ಕಾಯವಿಲ್ಲದವು? ಆಡಲಿ ಯಾವ ನಾಲಿಗೆ ಮೇಲಾದರೂ’ ಅರೆ! ಹಕ್ಕಿ ಉಲಿ, ಚಿಗುರ ನಲಿವು, ಚಿಟ್ಟೆಯಳಲು […]

ಕಾಮನಿಗೆ ಭಯವಿಲ್ಲ

ಕಾಮನಿಗೆ ಭಯವಿಲ್ಲ

ಗಾಳಿಯಲ್ಲಿ  ಬೆರೆತ ಪರಿಮಳದಂತೆ ಇರುಳು ಹಡೆವ ಶಶಿಯಂತೆ ಈ ಅಂಗನ ಅಂಗದ ಕಳೆಯೊಳಗೆ ಹುದುಗಿಕೊಂಡ ಪ್ರೇಮ ನೀನು ಗೆಳತಿ ಕದಳಿಯ ಮೊಗ್ಗಂತೆ ! ಕಡು ಹಸಿರುಂಡ ಅವನಿಯಂತೆ ಎದೆ ಬನದೊಳಗೆ ಒಬ್ಬಳೇ ನಲಿವ ನೈದಿಲೆ ನೀನೇ ಕೆಳದಿ ಈ ಅಂಬುಧಿಯ ಅಪ್ಪಿ ಒಳ ಸೇರಿರುವ ನದಿಯೋರ್ವಳು ನೀನೆ ನೀ-ನಾನೆಂಬ ದ್ವಂದ್ವವೂ ಬೇಡ ನೀನೇ-ನಾನೆಂಬ ಐಕ್ಯ ಸೂಕ್ತಿ ಮಾತ್ರ ಇರಲಿ ಎನ್ನಾಳದ ಪ್ರೇಮ ರೂಪವನ್ನೆಲ್ಲಾ ನೀನೆ ಪಡೆದುಕೊ ನನ್ನಿರವನ್ನೇ ಮರೆಸುವ ಆ ನಿನ್ನ ಮರೆವಿನ ಬೆರಗನ್ನಷ್ಟೆ ನನಗೆ ನೀಡು, […]

ಕಾವ್ಯದ ಹೊಸ ಅಲೆ-6: ರಾತ್ರಿ ಹೆಣಗಳ ಮುಂದೆ, ಹಗಲು ಗನಸುಗಳು ಗುಳೆ ಹೊರಟಿವೆ

ಕಾವ್ಯದ ಹೊಸ ಅಲೆ-6: ರಾತ್ರಿ ಹೆಣಗಳ ಮುಂದೆ, ಹಗಲು ಗನಸುಗಳು ಗುಳೆ ಹೊರಟಿವೆ

ತನ್ನ ಕಾಲದ ಚಲನೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಕವಿ ಮನಸ್ಸೊಂದು ಅದೇ ಕಾಲದ ವಸ್ತುಗಳನ್ನೇ ರೂಪಕಗಳನ್ನಾಗಿಸಿ ಪರಿಣಾಮಕಾರಿ ಕಾವ್ಯ ಕಟ್ಟಲು ಸಾಧ್ಯವಿದೆ. ಇಂತಹ ಹಲವು ಪ್ರಯೋಗಗಳನ್ನು ಹೊಸತಲೆಮಾರಿನ ಕವಿಗಳು ಮಾಡುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕನ್ನಡ ಕಾವ್ಯದಲ್ಲಿ ಹೊಸ ನುಡಿಗಟ್ಟುಗಳು ತಾಜಾತನವನ್ನು ಉಸಿರಾಡುತ್ತಿರುವುದು ಕಾಣುತ್ತದೆ. ಅಷ್ಟೇನು ಜನಪ್ರಿಯವಲ್ಲದ ತನ್ನ ಪಾಡಿಗೆ ತಾನಿರುವ, ಸದಾ ಮೌನಿಯಾಗಿಯೂ, ಧ್ಯಾನದಲ್ಲಿದ್ದಂತೆಯೂ ಕಾಣುವ ಮಹಂತೇಶ್ ಪಾಟೀಲ್ ಅವರ ಕವಿತೆಗಳು ನಮ್ಮ ಕಾಲವನ್ನು ಹೊಸಗಣ್ಣಿನಿಂದ ನೋಡುವಂತೆ ಮಾಡುತ್ತವೆ. ‘ನೇಣಿಗೇರಿದ ನೇಗಿಲ ಸಮಾಧಿಯ ಮೇಲೆ ತಲೆಯೆತ್ತಿದ ಕಾಂಕ್ರೇಟ್ […]

ಕಾವ್ಯದ ಹೊಸ ಅಲೆ-5 : ನಾನು ಹೆಣ್ಣೆಂದು ನೀನಾದರೂ ನೆನಪಿಸು…

ಕಾವ್ಯದ ಹೊಸ ಅಲೆ-5 : ನಾನು ಹೆಣ್ಣೆಂದು ನೀನಾದರೂ ನೆನಪಿಸು…

ಪೇಸ್ ಬುಕ್ ನ್ನು ಕವಿತೆ ಬರೆಯುವ ಮಾಧ್ಯಮವನ್ನಾಗಿಸಿಕೊಂಡು ಧ್ಯಾನಿಸಿ ಪದ್ಯ ಬರೆಯುವವರಲ್ಲಿ ವಿಜಯಶ್ರೀ ಹಾಲಾಡಿ ಅವರು ಒಬ್ಬರು. ಹೆಣ್ತನದ ಕಣ್ಣೋಟದ ಮೂಲಕ ನಿಸರ್ಗದ ಕುತೂಹಲ ಮತ್ತು ಅಚ್ಚರಿಗಳನ್ನು, ಮನುಷ್ಯ ಸಂಬಂಧಗಳ ಗಾಢತೆಯನ್ನು ಅರಸುವಂತಿರುವ ಇವರ ಕವಿತೆಯಳಲ್ಲಿ ಮನುಷ್ಯ ಪ್ರೀತಿಯ  ಆಪ್ತತೆಯ ಸಣ್ಣ ಝರಿಯೊಂದು ಸದ್ದಿಲ್ಲದೆ ಎಲ್ಲಾ ಕವಿತೆಗಳ ಆಳದಲ್ಲಿ ಹರಿದಂತೆ ಅನುಭವವಾಗುತ್ತದೆ. ತಾಜಾ ಅನ್ನಿಸುವ ಅನುಭವಗಳಿಗೆ ಹೊಸ ನುಡಿಗಟ್ಟಿನ ಉಡುಗೆ ತೊಡಿಸುವಂತಿರುವ ವಿಜಯಶ್ರೀ ಕವಿತೆಗಳು ತನ್ನದೇ ಕಿರುದಾರಿ ಮಾಡಿಕೊಂಡು ದಿಟ್ಟವಾಗಿ ನಡೆಯುತ್ತಿವೆ. ವಿಜಯಶ್ರೀಯವರು ರೇಖೆಗಳ ಮೂಲಕವೂ ತನ್ನ […]

ಮಸಣದ ಹೂವು

ಮಸಣದ ಹೂವು

ನಡೆಯುತ್ತಾ ನಡೆಯುತ್ತಾ ಕಡಲ ದಡದಲ್ಲಿಗೆ ಬಂದೆ ದಣಿದಿದ್ದ ನಾನು ಬಂಡೆಯೊಂದಕ್ಕೆ ಚಾಚಿ ಕುಳಿತೆ ಆ ದಟ್ಟ ಮೌನದಲ್ಲಿಯೂ ಅಲೆಗಳು ನನ್ನ ಪಾದ ಸ್ಪರ್ಷಿಸಿ ಹೋಗುತ್ತಿದ್ದವು ಆ ಏಕಾಂತದಲ್ಲಿ ಪ್ರೇಮಿಗಳಿಬ್ಬರ ನಗು ಕೇಳಿತು ನನ್ನ ದೃಷ್ಠಿ ಅವರತ್ತ ನೆಟ್ಟಿತು ಜೊತೆಗೆ ಮುಖದಲ್ಲಿ ಜಿಗುಪ್ಸೆಯ ನಗು ಮೂಡಿ.. ನನ್ನ ಜೀವನ ನೆನೆದು…. ನಾನೂ ಅದೆಷ್ಟೋ ಕನಸ್ಹೊತ್ತು ಆ ರಾತ್ರಿ ಗೂಡಿನಿಂದ ಹಾರಿದ್ದೆ ಇನ್ನೆಂದೂ ಮರಳಿ ಪಡೆಯಲಾರದ ಸಂಬಂದ ಭಾವನೆಗಳ ಮೇಲೆ ನಡೆದು.. ಆಗ ನನ್ನ ಕಣ್ಣಲ್ಲಿ ಪ್ರೀತಿಯ ಅಮಲಿತ್ತು.. ಈ […]

ಕಾವ್ಯದ ಹೊಸ ಅಲೆ-೪: ತಾಯ್ಗಂಡ ಸೂಳೇ ಮಕ್ಕಳು ಮಲಗಲೂ ಬಿಡೋಲ್ಲ

ಕಾವ್ಯದ ಹೊಸ ಅಲೆ-೪: ತಾಯ್ಗಂಡ ಸೂಳೇ ಮಕ್ಕಳು ಮಲಗಲೂ ಬಿಡೋಲ್ಲ

ನಮ್ಮ ಕಾಲದಲ್ಲಿ ಪ್ರಖರವಾಗಿಯೂ, ವಿಶಿಷ್ಟ ಸಂವೇದನೆಯೊಂದಿಗೆ ಕಾವ್ಯ ಕಟ್ಟುವ  ಯುವಕರಲ್ಲಿ ರಾಜಶೇಖರ ಚನ್ನೇಗೌಡರ ಗಮನಸೆಳೆಯುವಂತವರು. “ಬದುಕಲು ಬಾರದ ನಮಗೆ ನಿಮಗೆ ನಾಕೂ ಮೂಲೆ ಬಂದೀಖಾನೆ ತಪ್ಪಿಸಿಕೊಳ್ಳುವ ಅವಸರದಲ್ಲಿ ಸಿಕ್ಕಿಸಿಕೊಂಡೆವು ಬುರುಡೆಗಳನ್ನೇ” ಎಂದು ಬರೆದು ಬದುಕಿನ ತೀವ್ರತೆರನಾದ ಅನುಭವಗಳಿಗೆ ಒಡ್ಡಿಕೊಳ್ಳುವ ರಾಜಶೇಖರ್ ಗೆಳೆಯ ಗೆಳತಿಯರ ಪಾಲಿನ ಪ್ರೀತಿಗೆ ಕರಗುವ ‘ಬಂಡೆ’ ಎಂದೇ ಗುರುತಿಸಲ್ಪಡುತ್ತಾರೆ. ದಾರವಾಡದ ಮತ್ತೊಬ್ಬ ಯುವಕವಿ ರಾಜಕುಮಾರ ಮಡಿವಾಳರ ರಾಜಶೇಖರನ ಹುಟ್ಟುಹಬ್ಬಕ್ಕೆ ಶುಭಹಾರೈಸುವ ನೆಪದಲ್ಲಿ “ಶೇಖರಿಸಿಟ್ಟ ರಾಜ ಕವಿತೆಗಳ ಹೂ…ಹೂಂ…ನಾದದ ಚಂಡೆ…! ಪೋಣಿಸಕ್ಷರವ ಕಾವ್ಯ ಕಟ್ಟುವ ರಹದಾರಿ […]

ಮಳೆಯನ್ನು ಆಲಿಸುವ ತರಹ

ಮಳೆಯನ್ನು ಆಲಿಸುವ ತರಹ

( ಪಾಜ್‍ನ ಪ್ರಕಾರ “ಕಾವ್ಯವೆಂದರೆ ನೆನಪು ಪ್ರತಿಬಿಂಬವಾಗುತ್ತದೆ, ಪ್ರತಿಬಿಂಬ ಧ್ವನಿಯಾಗುತ್ತದೆ”) ಮಳೆಯನ್ನು ಆಲಿಸುವ ತರಹ ನನಗೆ ಕಿವಿಗೊಡು ಲಕ್ಷ್ಯಗೊಡುವನಾಗಿಯೂ ಅಲ್ಲ, ತಬ್ಬಿಬ್ಬುಗೊಂಡವನಾಗಿಯೂ ಅಲ್ಲ ಹಗುರವಾದ ಹೆಜ್ಜೆಗಳು, ತೆಳ್ಳನೆಯ ಜಿನುಗು ಮಳೆ ನೀರು ಅದು ಗಾಳಿ, ಗಾಳಿ ಅದು ಕಾಲ ಹಗಲು ಇನ್ನೂ ನಿರ್ಗಮಿಸುತ್ತಿದೆ ಇರುಳು ಇನ್ನೂ ಆಗಮಿಸಬೇಕಾಗಿದೆ ಮಂಜಿನ ಸ್ಥೂಲ ಚಿತ್ರವು ಆ ತುದಿಯ ತಿರುವಿನಲ್ಲಿ, ಕಾಲದ ಸ್ಥೂಲ ಚಿತ್ರವು ಈಗಿನ ಸ್ಥಗಿತತೆಯ ಆ ಹೊರಳಿನಲ್ಲಿ ಮಳೆಯನ್ನು ಆಲಿಸುವ ತರಹ ನನಗೆ ಕಿವಿಗೊಡು ಕಿವಿಗೊಡದೆಯೇ ನಾನು ಹೇಳುತ್ತಿರುವುದನ್ನು […]

ಅವಳು ಮತ್ತು ಬೆಕ್ಕು

ಅವಳು ಮತ್ತು ಬೆಕ್ಕು

ಬೆಕ್ಕುಗಳೆಂದರೆ ಅವಳಿಗೇನೋ ಆಕರ್ಷಣೆ ಅದಕೆಂದೇ ಕೆಂದು ಬಣ್ಣದ ಬೆಕ್ಕೊಂದಕ್ಕೆ ಹಾಲು ಅನ್ನ ಹಾಕಿ ಸಾಕಿಕೊಂಡಿದ್ದಳು ಬಂದವರೆದುರಲ್ಲಿ ಅದರದೇ ಗುಣಗಾನ ಅದರ ತೀಕ್ಷ್ಣ ಕಣ್ನುಗಳ ಬಗ್ಗೆ ನಿಮಿರುವ ಬಾಲದ ಬಗ್ಗೆ ತುಪ್ಪಳದಂತ ಅದರ ಕೂದಲ ಬಗ್ಗೆ ಸಪ್ಪಳವಾಗದಂತೆ ಬಂದು ಎದಮೇಲೆ ಮುಖವಿಟ್ಟು ತಬ್ಬಿ ಮಲಗುವ ಅದರ ರೀತಿಯನ್ನು ನೂರಾರು ಕತೆ ಕವಿತೆಯಾಗಿಸಿದ್ದಳು ಸಾಕಷ್ಟು ಚಪ್ಪಾಳೆಗಳನ್ನೂ ಪಡೆದಿದ್ದಳು!   ಅರಿತೊ ಅರಿಯದೆಯೊ ಒಂದು ದಿನ  ನೆಲದಮೇಲೆ ಮಲಗಿದ್ದ ಅದರಬಾಲ ತುಳಿದ ನೋವಿಗದು ಅವಳ ಪಾದಗಳ ಪರಚಿಬಿಟ್ಟಿತು. ಆಮೇಲವಳದಕ್ಕೆ ಅನ್ನಹಾಲು ಹಾಕದೆ […]